×
Ad

ಭಟ್ಕಳ: “ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್” ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟ

ಆಶಾ ಸಿರಿಲ್ ಡಿಸೊಜಾ ಪ್ರಥಮ, ವಿನಾಯಕ ನಾಯ್ಕ ದ್ವಿತೀಯಾ, ಸಂಕಲ್ಪ ಆರ್. ತೃತೀಯ

Update: 2025-09-18 21:54 IST

ಭಟ್ಕಳ: “ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್” ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರ ಹೆಸರುಗಳನ್ನು ಪ್ರಕಟಿಸಲಾಗಿದೆ. ಶುಕ್ರವಾರ ಸಂಜೆ 5ಗಂಟೆಗೆ ಭಟ್ಕಳದ ಆಮೀನಾ ಪ್ಯಾಲೇಸ್ ನಲ್ಲಿ ನಡೆಯುವ ಸಮಾರಂಭದಲ್ಲಿ ಬಹುಮಾನಗಳನ್ನು ಸ್ಪರ್ಧಾರ್ಥಿಗಳಿಗೆ ವಿತರಿಸಲಾಗುತ್ತಿದೆ ಎಂದು ಸೀರತ್ ಅಭಿಯಾನ್ ಸಂಚಾಲಕ ಎಂ.ಆರ್.ಮಾನ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಟ್ಕಳದ ಗುರುಸುಧೀಂದ್ರ ಪದವಿ ಮಹಾವಿದ್ಯಾಲಯದ ಉಪನ್ಯಾಸಕಿ ಆಶಾ ಸಿರಿಲ್ ಡಿಸೋಜಾ ಮೊದಲ ಬಹುಮಾನ (ರೂ.8,000 + ಪ್ರಶಸ್ತಿ ಪತ್ರ) ಪಡೆದುಕೊಂಡಿದ್ದಾರೆ. ಕುಮಟಾದ ಡಾ. ಎ.ಬಿ. ಬಾಳಿಗ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿನಾಯಕ ರಮೇಶ್ ನಾಯ್ಕ ದ್ವಿತೀಯ ಬಹುಮಾನ (ರೂ.6,000 + ಪ್ರಶಸ್ತಿ ಪತ್ರ) ಪಡೆದರೆ, ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಸಂಕಲ್ಪ ಆರ್. ತೃತೀಯ ಬಹುಮಾನ (ರೂ.4,000 + ಪ್ರಶಸ್ತಿ ಪತ್ರ) ಪಡೆದಿದ್ದಾರೆ.

ಸಮಾಧಾನಕರ ಬಹುಮಾನ (ರೂ1,000) – ಕೀರ್ತಿ ಸುನಿಲ್ ನಾಯ್ಕ (ನ್ಯೂ ಶಮ್ಸ್ ಸ್ಕೂಲ್, ಭಟ್ಕಳ), ಎಂ.ಎಸ್. ಹೆಗಡೆ (ಶಿಕ್ಷಕರು, ಸ್ಥಿತಿಗಾರ ಹೊನ್ನಾವರ), ಲತಾ ಜಿ. ದೇವಾಡಿಗ (ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯ, ಭಟ್ಕಳ) ಮತ್ತು ರಾಘವೇಂದ್ರ ಎಸ್. ಮಡಿವಾಳ (ಶಿಕ್ಷಕರು, ಹೊನ್ನೆಮಡಿ ಪ್ರಾಥಮಿಕ ಶಾಲೆ, ಭಟ್ಕಳ) ಇವರಿಗೆ ಲಭಿಸಿದೆ.

ಅದೇ ರೀತಿ ನಿರ್ಣಾಯಕರ ಮೆಚ್ಚುಗೆ ಪಡೆದ 20 ಪ್ರಬಂಧಗಳಿಗೆ ತಲಾ ರೂ.500 ನಂತೆ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುತ್ತಿದೆ.

ಆಯ್ಕೆಯಾದವರು: ಫುಕೈಹಾ ಕಾಡ್ಲಿ, ಸಿಮ್ರಾ ಮಹೆರಿನ್, ಝಾಹಿದಾ, ಫಾತಿಮಾ ಹಾಲಾ ಲೌನಾ, ಆಬಿದಾ ಸಫಾ ಶೇಖ್, ಮರಿಯಂ ಮದ್ದಾಸ್, ಅನುಷ್ ಫಾತಿಮಾ, ಫರ್ಹಾತುನ್ನಿಸಾ, ರಿಫಾ ಮಹೆಕ್ ಮನ್ನಾ, ಮಂಜುನಾಥ್ ಹೆಬ್ಬಾರ್, ಸುಮಲತಾ ಡಿ. ನಾಯ್ಕ, ನಿರ್ಮಲಾ ಲೂಪಿಸ್, ಅರುಣ ಮೇಸ್ತ ಎನ್., ಸಂಜನಾ ನಾಗಪ್ಪ ನಾಯ್ಕ, ಮೋನಿಕಾ ಜಯಕರ್ ನಾಯ್ಕ, ಕವನಾ ಕೆ. ಮೊಗೇರ್, ಮೇಘಾ ಎನ್. ನಾಯ್ಕ, ಭಾಗ್ಯಶ್ರೀ, ಲಲಿತಾ ವೆಂಕಟೇಶ್ ನಾಯ್ಕ ಹಾಗೂ ಪವಿತ್ರ ಜಯಕರ್.

ಈ ಬಹುಮಾನ ವಿತರಣೆ ಸೆ. 19ರಂದು ಸಂಜೆ 5 ಗಂಟೆಗೆ, ಆಮಿನಾ ಪ್ಯಾಲೇಸ್ (ಅನ್ಫಾಲ್ ಸೂಪರ್ ಮಾರ್ಕೆಟ್, ರಾ.ಹೆ.66, ಭಟ್ಕಳ) ನಲ್ಲಿ ನಡೆಯುವ ಸೀರತ್ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಜರುಗಲಿದೆ ಎಂದು ಅಭಿಯಾನದ ಸಂಚಾಲಕ ಎಂ.ಆರ್. ಮಾನ್ವಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News