×
Ad

ಭಟ್ಕಳ: ಹೊಸ ಹೈ-ಟೆಕ್‌ ಮೀನು ಮಾರುಕಟ್ಟೆಯಲ್ಲಿ ವ್ಯವಹರಿಸುವಂತೆ ಸಾರ್ವಜನಿಕರಲ್ಲಿ ಮನವಿ

Update: 2025-09-06 22:37 IST

ಭಟ್ಕಳ: ಹೊಸ ಹೈ-ಟೆಕ್‌ ಮೀನು ಮಾರುಕಟ್ಟೆಯ ಬಳಕೆಗೆ ಮುಂದಾಗುವಂತೆ ಭಟ್ಕಳ ಸಮುದಾಯ ಜೆದ್ದಾ ಸಂಸ್ಥೆಯ ಅಧ್ಯಕ್ಷ ಖಮರ್ ಸಾದಾ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಇತ್ತೀಚೆಗೆ ನಿರ್ಮಿಸಲಾದ ಹೊಸ ಮೀನು ಮಾರುಕಟ್ಟೆಯಲ್ಲಿ ಶುಚಿತ್ವ, ವಿಶಾಲತೆ ಮತ್ತು ಆಧುನಿಕ ಸೌಲಭ್ಯಗಳ ವ್ಯವಸ್ಥೆಯಿದೆ. ಹಳೆಯ ಮೀನು ಮಾರುಕಟ್ಟೆಯು ಅತ್ಯಂತ ಜನದಟ್ಟಣೆಯಿಂದ ಕೂಡಿದೆ, ರಚನೆಯಲ್ಲಿ ದುರ್ಬಲ ವಾಗಿದೆ, ನೈರ್ಮಲ್ಯವಿಲ್ಲದಂತಿದೆ ಮತ್ತು ಅದರ ಸುತ್ತಲಿನ ಕಿರಿದಾದ ರಸ್ತೆಯಿಂದಾಗಿ ಭಾರೀ ಸಂಚಾರ ಸಮಸ್ಯೆ ಗಳನ್ನು ಸೃಷ್ಟಿಸುತ್ತದೆ. ಇದನ್ನು ಬಳಸುವುದನ್ನು ಮುಂದುವರಿಸುವುದು ನಮ್ಮ ಬೆಳೆಯುತ್ತಿರುವ ಪಟ್ಟಣಕ್ಕೆ ಸುರಕ್ಷಿತವೂ ಅಲ್ಲ ಅಥವಾ ಸೂಕ್ತವೂ ಅಲ್ಲ.

ನಗರದ ಅಭಿವೃದ್ಧಿ ಮತ್ತು ಜನರ ಆರೋಗ್ಯಕರ ಅಭ್ಯಾಸಕ್ಕಾಗಿ ಹೊಸ ಮೀನು ಮಾರುಕಟ್ಟೆಯನ್ನು ಬಳಸುವುದು ಅಗತ್ಯ. ಇದು ಸುಗಮ ಟ್ರಾಫಿಕ್‌ಗೂ ಸಹಕಾರಿ ಎಂದು ಖಮರ್ ಸಾದಾ ತಿಳಿಸಿದ್ದಾರೆ.

ನಗರದ ಉತ್ತಮ ಭವಿಷ್ಯಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸಬೇಕೆಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News