ಭಟ್ಕಳ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ
ಭಟ್ಕಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಭಟ್ಕಳ ಶಾಖೆಯು 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ 90% ಅಂಕ ಗಳಿಸಿದ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಒಂದು ದಿನದ ಪ್ರೇರಣಾ ತರಬೇತಿ ಕಾರ್ಯಕ್ರಮವನ್ನು ಫೆ. 19ರಂದು ಆಯೋಜಿಸಿತ್ತು.
ಸಂಪನ್ಮೂಲ ವ್ಯಕ್ತಿ ಡಯಟ್ ನ ಪ್ರಾಂಶುಪಾಲ ಡಾ. ಅಶೋಕ ಕಾಮತ್, ವಿದ್ಯಾರ್ಥಿಗಳಿಗೆ ಉಪಯುಕ್ತ ಮಾರ್ಗ ದರ್ಶನ ನೀಡಿ. “ನೀವು ಈಗಾಗಲೇ 90% ಅಂಕಗಳನ್ನು ಪಡೆದು ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದೀರಿ. ಇದು ಅಂತಿಮ ಗುರಿಯಲ್ಲ, ಇನ್ನಷ್ಟು ಸಾಧನೆಗೆ ಮೊದಲ ಹೆಜ್ಜೆ,” ಎಂದು ಹೇಳಿದರು. ಪರೀಕ್ಷೆ ಭಯಪಡುವ ವಿಷಯವಲ್ಲ; ಅದು ನಿಮ್ಮ ಜ್ಞಾನವನ್ನು ತೋರಿಸುವ ಅವಕಾಶ. ಆತ್ಮವಿಶ್ವಾಸವೇ ನಿಮ್ಮ ದೊಡ್ಡ ಶಕ್ತಿ. ಓದಿದ್ದನ್ನು ನಂಬಿ, ಎಂದು ಅವರು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ್, ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ವೆಂಕಟೇಶ್ ನಾಯ್ಕ, ಯು.ಎ. ಲೋಹನಿ, ನಾಗರಾಜ ಗೌಡ (ಹಿರಿಯ ಉಪನ್ಯಾಸಕರು, ಕುಮಟ), ಪೂರ್ಣಿಮಾ ಮೊಗೇರ, ರಾಘವೇಂದ್ರ ನಾಯ್ಕ (ನಿರ್ದೇಶಕರು, ಅಕ್ಷರ ದಾಸೋಹ), ಅಶೋಕ ಆಚಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುರೇಶ್ ಮುರ್ಡೇಶ್ವರ ನಿರೂಪಿಸಿದರು.
ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಭಟ್ಕಳ ವಹಿಸಿಕೊಂಡಿತ್ತು.