ಭಟ್ಕಳದಲ್ಲಿ ಜಾನುವಾರುಗಳ ಮೂಳೆ ಪತ್ತೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
Update: 2025-09-18 17:57 IST
ಭಟ್ಕಳ : ನಗರದ ಮಖ್ದೂಮ್ ಕಾಲನಿಯ ಗುಡ್ಡದ ಅರಣ್ಯ ಭಾಗದಲ್ಲಿ ಜಾನುವಾರುಗಳ ಎಲುಬುಗಳನ್ನು ಎಸೆಯುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಬಂಧಿತರನ್ನು ಚೌತನಿ ಪ್ರದೇಶದ ನಿವಾಸಿ ರಯ್ಯಾನ್ ಅಲಿಯಾಸ್ ರಿಝ್ವಾನ್ ಮತ್ತು ಮಖ್ದೂಮ್ ಕಾಲನಿಯ ನಿವಾಸಿ ಸವ್ವಾನ್ ಎಂದು ಗುರುತಿಸಲಾಗಿದೆ.
ಕೆಲವು ದಿನಗಳ ಹಿಂದೆ ಮಖ್ದೂಮ್ ಕಾಲನಿಯ ಗುಡ್ಡದಲ್ಲಿರುವ ಟ್ಯಾಂಕ್ ಒಳಗೆ ಪಶುಗಳ ಎಲುಬುಗಳು ಪತ್ತೆಯಾಗಿದ್ದವು. ಈ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಪೊಲೀಸರಿಗೆ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆಗೆ ಎರಡು ತಂಡಗಳನ್ನು ರಚಿಸಲಾಗಿತ್ತು ಎಂದು ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ದಿವಾಕರ್ ಮಾಹಿತಿ ನೀಡಿದ್ದು, ತನಿಖೆಯ ನಂತರ ಕ್ರಮ ಕೈಗೊಂಡು ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.