×
Ad

ಗಂಗಾವಳಿ ಮುಹ್ಯುದ್ದೀನ್ ಜಾಮಿಯಾ ಮಸ್ಜಿದ್ ಜಮಾಅತ್ ವತಿಯಿಂದ ಕುಂಬೋಲ್ ತಂಙಳ್ ರಿಗೆ ಕಾರು ಉಡುಗೊರೆ

Update: 2025-01-27 11:50 IST

ಅಂಕೋಲಾ : ಸಯ್ಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಲ್ ಅವರಿಗೆ ಅಂಕೋಲಾದ ಗಂಗಾವಳಿಯ ಮುಹ್ಯುದ್ದೀನ್ ಜಾಮಿಯಾ ಮಸ್ಜಿದ್ ಇಲ್ಲಿನ ಜಮಾಅತ್ ನಿವಾಸಿಗಳು ಕಾರು ಉಡುಗೊರೆ ನೀಡಿದ್ದಾರೆ.

ಕರ್ನಾಟಕ ಹಾಗೂ ಕೇರಳದ ನೂರಾರು ಮಸೀದಿ ಕಮಿಟಿಗಳಿಗೆ ನೇತೃತ್ವ ನೀಡುತ್ತಿರುವ ಕುಂಬೋಲ್ ತಂಙಳ್ ಅವರು ಗಂಗಾವಳಿ ಮಸೀದಿಯ ಗೌರವಾಧ್ಯಕ್ಷರಾಗಿದ್ದಾರೆ. ಈ ಇಳಿ ವಯಸ್ಸಲ್ಲೂ  ಧಾರ್ಮಿಕ  ಸೇವೆ ಮಾಡುತ್ತಿರುವ ತಂಙಳ್ ಅವರಿಗೆ ಗಂಗಾವಳಿ ಯುವಕರು ಸಮಾರಂಭದಲ್ಲಿ ಸನ್ಮಾನಿಸಿ, ಟಾಟಾ ಕಂಪೆನಿಯ "ಪಂಚ್" ಮೋಡೆಲ್ ಹೊಸ ಕಾರನ್ನು ವಿಶೇಷ ಉಡುಗೊರೆಯಾಗಿ ನೀಡಿ ಗೌರವಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News