×
Ad

ಕಾರವಾರ: ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಮೀನುಗಾರಿಕಾ ಬೋಟ್ ಪತ್ತೆ; 27 ಮಂದಿಯ ರಕ್ಷಣೆ

Update: 2023-12-05 20:33 IST

ಕಾರವಾರ: ನಾಲ್ಕು ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಗೋವಾ ಮೂಲದ ಮೀನುಗಾರಿಕಾ ಬೋಟ್ ಅರಬ್ಬಿ ಸಮುದ್ರದ ಸುಮಾರು 30 ನಾಟಿಕಲ್ ಮೈಲ್ ದೂರಲ್ಲಿ ಪತ್ತೆಯಾಗಿದ್ದು, ಬೋಟ್ ನಲ್ಲಿದ್ದ 27 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ಅಂಕೋಲಾದ ಬೇಲಿಕೇರಿ ಬಂದರಿನಿಂದ ಸುಮಾರು 30 ನಾಟಿಕಲ್ ಮೈಲು ದೂರದಲ್ಲಿ ಬೋಟ್ ಪತ್ತೆಯಾಗಿದೆ. ಗೋವಾದ ಪಣಜಿ ಮೂಲದ ಮೀನುಗಾರಿಕಾ ಬೋಟ್ ಇದಾಗಿದೆ. ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರೀತ್ಯದಿಂದ ಎಂಜಿನ್‌ ನಲ್ಲಿ ಸಮಸ್ಯೆಯಾಗಿ ಸಮೀಪದ ಬಂದರಿಗೂ ಬರಲಾಗದೆ ನಾಪತ್ತೆಯಾಗಿತ್ತು. ಬೋಟ್ ನಲ್ಲಿದ್ದವರಿಗೆ ನೆಟ್‌ ವರ್ಕ್ ಸಂಪರ್ಕ ಸಹ ಸಿಗದೆ ಪತ್ತೆ ಮಾಡಲು ಸಮಸ್ಯೆ ಉಂಟಾಗಿತ್ತು.

ನಾಪತ್ತೆಯಾಗಿದ್ದ ಬೋಟಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದು, 30 ನಾಟಿಕಲ್ ಮೈಲ್ ದೂರದಲ್ಲಿ ಬೋಟ್ ಪತ್ತೆಯಾಗಿದೆ. ಪತ್ತೆಯಾಗಿರುವ ಬೋಟ್ ಹಾಗೂ 27 ಮಂದಿ ಮೀನುಗಾರರನ್ನು ಇದೀಗ ಕಾರವಾರ ಬಂದರಿಗೆ ಕರೆ ತರಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News