ಜು.24ರಂದು ರಾಬೀತಾ ಶೈಕ್ಷಣಿಕ ಗೌರವ ಪ್ರಶಸ್ತಿ-2025 ಸಮಾರಂಭ
ಭಟ್ಕಳ: ರಾಬೀತಾ ಸೊಸೈಟಿ ಭಟ್ಕಳವು ತನ್ನ 'ರಾಬೀತಾ ಶೈಕ್ಷಣಿಕ ಗೌರವ ಪ್ರಶಸ್ತಿ-2025' ಸಮಾರಂಭ ವನ್ನು ಜು. 24 ರಂದು ಆಯೋಜಿಸಿದೆ ಎಂದು ರಾಬಿತಾ ಸೂಸೈಟಿಯ ಪ್ರಧಾನ ಕಾರ್ಯದರ್ಶಿ ಅತಿಕುರ್ರಹ್ಮಾನ್ ಮುನೀರಿ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮವು ಭಟ್ಕಳ ಪುರಸಭೆ ಪಕ್ಕದ ಇಸ್ಲಾಮಿಯಾ ಆಂಗ್ಲೋ-ಉರ್ದು ಹೈ ಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ಶೈಕ್ಷಣಿಕ ಸಾಧನೆಗಳನ್ನು ಗುರುತಿಸಿ ಸನ್ಮಾನಿಸುವ ಉದ್ದೇಶದೊಂದಿಗೆ ಆಯೋಜಿಸಲಾದ ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯದ ಧರ್ಮಶಾಸ್ತ್ರ ವಿಭಾಗದ ಮಾಜಿ ಡೀನ್ ಹಾಗೂ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ಸದಸ್ಯ ಪ್ರೊ. ಡಾ. ಎಂ. ಸೌದ್ ಆಲಂ ಕಾಸ್ಮಿ, ಮತ್ತು ಉ.ಕ.ಜಿಲ್ಲಾ ಉಸ್ತುವಾರಿ ಹಾಗೂ ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ, ಪಾಲ್ಗೊಳ್ಳಲಿದ್ದಾರೆ.
ಸಮಾರಂಭವನ್ನು ಎರಡು ಸೆಷನ್‌ಗಳಲ್ಲಿ ನಡೆಸಲಾಗುತ್ತಿದ್ದು, ಬೆಳಿಗ್ಗೆ 10 ರಿಂದ ಮಧ್ಯಾಹ್ನ 12:30 ರವರೆಗೆ ಸಂಜೆ 4:45 ರಿಂದ ರಾತ್ರಿ 7:00 ರವರೆಗೆ ನಡೆಯಲಿದೆ. ರಾಬೀತಾ ಸೊಸೈಟಿಯ ಅಧ್ಯಕ್ಷ ಉಮರ್ ಫರೂಕ್ ಮುಸ್ಬಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ರಬೀತಾ ಶೈಕ್ಷಣಿಕ ಗೌರವ ಪ್ರಶಸ್ತಿ ಸಮಾರಂಭವನ್ನು ಪ್ರತಿವರ್ಷ ಹಮ್ಮಿಕೊಳ್ಳಲಾಗುತ್ತಿದ್ದು, ಭಟ್ಕಳ ಹಾಗೂ ಸುತ್ತಮುತ್ತಲ ಭಾಗಗಳಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಈ ಮೂಲಕ ಗೌರವಿಸಲಾಗುತ್ತದೆ.ಅಲ್ಲದೆ. ಉತ್ತಮ ಸಾಧನೆಗೈದ ಶಾಲೆಗಳನ್ನು ಗುರುತಿಸಿ ಬೆಸ್ಟ್ ಸ್ಕೂಲ್ ಪ್ರಶಸ್ತಿಯನ್ನು ನೀಡಲಾಗುತ್ತದೆ.