×
Ad

ಅಂತರಾಷ್ಟ್ರೀಯ ಖುರಾನ್ ಕಂಠಪಾಠ ಸ್ಪರ್ಧೆಯಲ್ಲಿ ಭಟ್ಕಳದ ವಿದ್ಯಾರ್ಥಿಗೆ ಎರಡನೇ ಸ್ಥಾನ

Update: 2023-09-09 22:10 IST

ಭಟ್ಕಳ: ಸೌದಿ ಸರಕಾರವು ಮಕ್ಕಾದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಖುರಾನ್ ಕಂಠಪಾಠ ಸ್ಪರ್ಧೆಯಲ್ಲಿ ಭಟ್ಕಳದ ಯುವ ಪ್ರತಿಭೆ ಇಬ್ರಾಹಿಂ ಬಿನ್ ಫಾಹಿಮ್ ಶಹಬಂದ್ರಿ (Ibrahim bin Fahim Shahbandri) ಭಾರತವನ್ನು ಪ್ರತಿನಿಧಿಸಿ ತನ್ನ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಈ ಸಾಧನೆಗಾಗಿ ಅವರಿಗೆ 60,000 ಸೌದಿ ರಿಯಾಲ್‌ಗಳನ್ನು ನೀಡಲಾಗಿದೆ.

ಈ ಜಾಗತಿಕ ಸ್ಪರ್ಧೆಯು ಐದು ವಿಭಿನ್ನ ವಿಭಾಗಗಳಲ್ಲಿ 117 ದೇಶಗಳಿಂದ 166 ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯು ಆ. 25 ರಂದು ಪ್ರಾರಂಭವಾಯಿತು ಮತ್ತು ಸೆ. 6 ರಂದು ಅಂತಿಮ ಅಧಿವೇಶನದೊಂದಿಗೆ ಮುಕ್ತಾಯವಾಯಿತು. ಈ ಅವಧಿಯಲ್ಲಿ ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ, ನಾಲ್ಕನೇ ಮತ್ತು ಐದನೇ ಸ್ಥಾನ ವಿಜೇತರಿಗೆ ಬಹುಮಾನ ನೀಡಲಾಯಿತು.

ಇಬ್ರಾಹಿಂ ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯು.ಎ.ಇ) ಶಾರ್ಜಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ ಭಟ್ಕಳದ ನಾಲೇಜ್ ಶಾಲೆಯಲ್ಲಿ ಪ್ರೌಢಶಿಕ್ಷಣ ಮತ್ತು ಕುರಾನ್ ಕಂಠಪಾಠವನ್ನು ಪೂರ್ಣಗೊಳಿಸಿದರು.

ಅವರು ವಿವಿಧ ಕುರಾನ್ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಪ್ರಸ್ತುತ, ಅವರು ಜಾಮಿಯಾ ಸಲಾಫಿಯಾ ಬನಾರಸ್‌ನಲ್ಲಿ ಗೌರವ ವಿದ್ಯಾರ್ಥಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News