×
Ad

ʼಮತಗಳ್ಳತನʼ ಚುನಾವಣಾ ಆಯೋಗ ತನಿಖೆ ನಡೆಸಲು ಮುಂದಾಗಲಿ : ಎಂ.ಬಿ.ಪಾಟೀಲ್‌

Update: 2025-09-20 21:20 IST

ವಿಜಯಪುರ : ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ಮಾಧ್ಯಮಗಳ ಮೂಲಕ ಪ್ರತಿಹೇಳಿಕೆ ನೀಡುವುದನ್ನು ಬಿಟ್ಟು ʼಮತಗಳ್ಳತನʼ ಕುರಿತು ಚುನಾವಣಾ ಆಯೋಗ ತನಿಖೆ ನಡೆಸಲು ಮುಂದಾಗಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಮತಗಳ್ಳತನ ಆರೋಪದಲ್ಲಿ ಸತ್ಯಾಂಶವಿದೆ, ರಾತ್ರಿ ವೇಳೆ ಮತದಾರರ ಹೆಸರು ಸೇರ್ಪಡೆ, ತೆಗೆದುಹಾಕುವ ಪ್ರಕ್ರಿಯೆ ನಡೆದಿದೆ. ಈ ಕುರಿತು ಚುನಾವಣಾ ಆಯೋಗ ತನಿಖೆ ಮಾಡುವುದನ್ನು ಬಿಟ್ಟು ಮಾಧ್ಯಮಗಳ ಮೂಲಕ ಪ್ರತಿ ಹೇಳಿಕೆ ಮಾತ್ರ ನೀಡುತ್ತಿದೆ ಎಂದರು.

ಹಿಂದಿನ ಚುನಾವಣಾಧಿಕಾರಿಗಳು ಸಲಹೆ-ಸೂಚನೆ ನೀಡಿದ್ದಾರೆ, ಅವರ ಸಲಹೆ ಸೂಚನೆಗಳ ಕುರಿತು ವಿಶ್ಲೇಷಿಸಬೇಕು. ಅದನ್ನು ಅದನ್ನು ಬಿಟ್ಟು ಅಫಿಡವಿಟ್ ಹಾಕಿ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ಸಂಸದರೂ ಹೌದು, ಸಂವಿಧಾನಬದ್ಧವಾಗಿ ಪ್ರಮಾಣ ವಚನ ಸ್ವೀಕರಿಸಿ ಲೋಕಸಭಾ ವಿರೋಧ ಪಕ್ಷದ ನಾಯಕರೂ ಆಗಿದ್ದಾರೆ, ಒಂದು ರೀತಿ ಶ್ಯಾಡೋ ಪಿ.ಎಂ.ಗೆ ಅಫಿಡೆವಿಟ್ ಹಾಕಿ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.

ಜಾತಿಜನಗಣತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,ಅನೇಕರು ಕ್ರಿಶ್ಚಿಯನ್ ಆಗಿಯೋ ಅಥವಾ ಮುಸ್ಲಿಂ ಆಗಿಯೋ ಮತಾಂತರವಾಗಿದ್ದಾರೆ. ಇದನ್ನು ಜನರು ಕಾಂತರಾಜು ವರದಿ ಮುಂದೆ ಹೇಳಿದ್ದಾರೆ, ಅದನ್ನೇ ಕಾಂತರಾಜು ವರದಿಯಲ್ಲಿ ದಾಖಲಾಗಿದೆ, ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News