ವಿಜಯಪುರ: ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟಕ್ಕೆ ಯಶವಂತರಾಯಗೌಡ ಬೆಂಬಲ
ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿ ಕಳೆದ 20 ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸರ್ಕಾರಿ ವೈದ್ಯಕೀಯ ಕಾಲೇಜ್ ನಿರ್ಮಾಣದ ಅವಶ್ಯಕತೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಈ ಹೋರಾಟಕ್ಕೆ ನಾನೊಬ್ಬ ಶಾಸಕರಾಗಿ ಬಂದಿಲ್ಲ. ಒಬ್ಬ ಜನ ಸಾಮಾನ್ಯನಾಗಿ ಬಂದಿದ್ದೇನೆ ಎಂದು ಹೇಳುತ್ತಾ ಸರಕಾರಿ ವೈದ್ಯಕಿಯ ಕಾಲೇಜು ಆಗಬೇಕು. ಜಿಲ್ಲೆಯ ಶೈಕ್ಷಣಿಕ ಪ್ರಗತಿ ಇದು ಸಹಾಯವಾಗುತ್ತದೆ. ಹೋರಾಟಕ್ಕೆ ಸ್ಪಂದಿಸುವುದು ಎಲ್ಲಾ ನಾಗರೀಕರ ಕರ್ತವ್ಯ. ಯಾರು ಅತ್ಯಂತ ಹಿಂದುಳಿದಿದ್ದಾರೆ ಅವರಿಗೂ ಕೂಡ ಅವಕಾಶಗಳನ್ನು ಕೊಡಬೇಕು. ನಮ್ಮ ಕ್ಷೇತ್ರದ ಜನತೆ ಸಂಪೂರ್ಣವಾಗಿ ಇದಕ್ಕೆ ಬೆಂಬಲಿಸುತ್ತಾರೆ. ಯಾರೆ ಜನಪರ ಕಾರ್ಯ ಮಾಡಲಿ ಅದರಲ್ಲಿ ಭಾಗವಹಿಸುವುದು ನಮ್ಮ ಕರ್ತವ್ಯ. ಪ್ರತಿಯೊಂದು ಹೋರಾಟಕ್ಕೂ ನಾವು ಬೆಂಬಲಿಸಬೇಕು, ಹೋರಾಟದ ವಿಷಯದಲ್ಲಿ ರಾಜಕಾರಣವನ್ನು ಬೆರೆಸಬೇಡಿ ಎಂದರು.
ವಿಜಯಪುರ ಜಿಲ್ಲೆಗೆ ಸರ್ಕಾರಿ ಜಿಲ್ಲೆ ಆಗಬೇಕು ಎನ್ನುವ ಆಶಯ ಇಟ್ಟುಕೊಂಡವರೇ ಮುಖ್ಯಮಂತ್ರಿಯವರು. ಬೆಳಗಾಂ ನಲ್ಲಿ ಇದರ ಕುರಿತು ಚರ್ಚೆ ಕೂಡ ಮಾಡಿದ್ದಾರೆ. ವಿಜಯಪುರ ಜಿಲ್ಲೆಗೆ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಎಲ್ಲರೂ ಪ್ರಯತ್ನ ಮಾಡೋಣ ಎಂದರು.
ನಾಗರಾಜ ಕಲಘಟಕರ ಮಾತನಾಡಿದರು. ಕೆಆರ್ಎಸ್ ರಾಜ್ಯ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ಅಶೋಕ ಜಾದವ, ಸೋಶು ನಿಂಬಾಣಿ, ಸೀನು ಹಿಪ್ಪರಗಿ, ಅಶೋಕ ಜಾದವ,, ಅನಿಲ ಹೊನಕಟ್ಟಿ, ಲಕ್ಷ್ಮಣ ಚಡಚಣ,ಗೋತಕನಾಥ , ಪಿ ಎಸ್ ಹನಕಟ್ಟಿ, ಮುತ್ತುರಾಜ ಹೊನಗೊಂಡ, ದೇಸು ಚೌಹಾಣ, ಅನೀಲ ಹೊಸಮನಿ, ಹಿರಿಯ ರೈತ ಮುಖಂಡ ಅರವಿಂದ ಕುಲಕರ್ಣಿ, ಮಲ್ಲಿಕಾರ್ಜುನ ಕೆಂಗನಾಳ, ಮಲ್ಲಿಕಾರ್ಜುನ ಎಚ್.ಟಿ., ಲಲಿತಾ ಬಿಜ್ಜರಗಿ, ವಿದ್ಯಾವತಿ ಅಂಕಲಗಿ, ಕೆ ಎಪ್ ಅಂಕಲಗಿ, ಸಿದ್ದಲಿಂಗ ಬಾಗೇವಾಡಿ, ಅಕ್ರಂ ಮಾಶ್ಯಾಳಕರ, ಶ್ರೀನಾಥ ಪೂಜಾರಿ, ಸುರೇಶ ಬಿಜಾಪುರ, ಸುರೇಶ ಜೀಬಿ, ಡಾ ಎಮ್ ಆರ್ ಗುರಿಕಾರ, ಗೀತಾ ಎಚ್., ನಿಂಗರಾಜ ಬಿದರಕುಂದಿ, ಲಗಮನಗೌಡ ಪಾಟೀಲ, ಕಲ್ಲಪ್ಪ ಬಬಲಾದ, ನೀಲಾಂಬಿಕಾ ಬಿರಾದಾರ, ಸುಶೀಲಾ ಮಿಣಜಗಿ, ಮಲ್ಲಪ್ಪ ಬಿರಾದಾರ (ಬಬಲಾದ), ಅಕ್ಷಯಕುಮಾರ ಅಜಮನಿ, ಸಿದ್ರಾಮಯ್ಯ ಹಿರೇಮಠ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.