×
Ad

ʼಧರ್ಮಸ್ಥಳ ದೂರುʼ: ಜೂನ್ 22 ರಿಂದ ಏನೆಲ್ಲ ನಡೆಯಿತು? ಎಲ್ಲಿಗೆ ತಲುಪಿತು ಪ್ರಕರಣ?

Update: 2025-07-19 23:03 IST

ʼಧರ್ಮಸ್ಥಳ ದೂರುʼ ಪ್ರಾರಂಭವಾಗಿ ಮೂರು ತಿಂಗಳಾಯಿತು. ಧರ್ಮಸ್ಥಳ ದೂರು ಪ್ರಕರಣ ಶುರುವಾದದ್ದು ಜೂನ್ 23, 2025 ರಂದು. ಧರ್ಮಸ್ಥಳದಲ್ಲಿ ನಡೆದಿರುವ ಹಲವಾರು ಹತ್ಯೆ ಮತ್ತು ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಮತ್ತು ಕೊಲೆಗಳನ್ನು ಮುಚ್ಚಿಹಾಕುವ ಸಲುವಾಗಿ ತನ್ನಿಂದ ನೂರಾರು ಶವಗಳನ್ನು ಹೂತುಹಾಕಿಸಲಾಗಿದೆ ಎಂದು ವ್ಯಕ್ತಿಯೊಬ್ಬ ಹೇಳಿರುವುದರ ಬಗ್ಗೆ ವಕೀಲರಾದ ಓಜಸ್ವಿ ಗೌಡ ಹಾಗೂ ಸಚಿನ್ ದೇಶಪಾಂಡೆ ಹೆಸರಲ್ಲಿ ಒಂದು ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ತಾನು ಹೂತು ಹಾಕಿರುವ ಮೃತದೇಹಗಳನ್ನು ಪೋಲೀಸರ ಸಮ್ಮುಖದಲ್ಲಿ ಹೊರತೆಗೆಯುವ ನಿರ್ಧಾರಕ್ಕೆ ಸಾಕ್ಷಿಯು ಬಂದಿರುವ ಬಗ್ಗೆಯೂ ಆ ಪತ್ರದಲ್ಲಿ ಹೇಳಲಾಗಿತ್ತು.

ಈ ಹಿನ್ನೆಲೆಯಲ್ಲಿ ಜೂನ್ 22ರಿಂದ ಈವರೆಗೆ (ಅಕ್ಟೋಬರ್ 27, 2025) ನಡೆದ ಬೆಳವಣಿಗೆಯ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಜೂನ್ 22, 2025 : ಧರ್ಮಸ್ಥಳದಲ್ಲಿ ನಡೆದಿರುವ ಹಲವಾರು ಹತ್ಯೆ ಮತ್ತು ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಮತ್ತು ಕೊಲೆಗಳನ್ನು ಮುಚ್ಚಿಹಾಕುವ ಸಲುವಾಗಿ ತನ್ನಿಂದ ನೂರಾರು ಶವಗಳನ್ನು ಹೂತುಹಾಕಿಸಲಾಗಿದೆ ಎಂದು ವ್ಯಕ್ತಿಯೊಬ್ಬನ ಹೇಳಿಕೆಯ ಪತ್ರ ಓಜಸ್ವಿ ಗೌಡ ಮತ್ತು ಮತ್ತು ಸಚಿನ್ ಎಸ್ ದೇಶಪಾಂಡೆ ಎಂಬ ವಕೀಲರ ಹೆಸರಿನಲ್ಲಿ ವೈರಲ್.

ಜೂನ್ 23, 2025 : ಧರ್ಮಸ್ಥಳದಲ್ಲಿ ನಡೆದಿರುವ ಅಪರಾಧಗಳ ಬಗ್ಗೆ ತನಗೆ ಮಾಹಿತಿ ಇದೆ ಎಂದ ವ್ಯಕ್ತಿ ಹಾಜರಾಗಿ ಮಾಹಿತಿ ನೀಡಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೋಳ್ಳಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್‌ ಹೇಳಿಕೆ.

ಜೂನ್ 27, 2025: ವಕೀಲರ ತಂಡದಿಂದ ಎಸ್ಪಿ ಕಚೇರಿಗೆ ಭೇಟಿ. ಎಸ್ಪಿ ಅವರು ಕಚೇರಿಯಲ್ಲಿ ಇರದೇ ಇದ್ದುದರಿಂದ ನಿಯೋಗ ವಾಪಸ್. ವೈರಲ್ ಪತ್ರ ನಮ್ಮದೇ, ಆ ಬಗ್ಗೆ ಎಸ್ಪಿ ಜೊತೆ ಚರ್ಚಿಸುತ್ತೇವೆ ಎಂದು ಹೇಳಿಕೆ ನೀಡಿದ ವಕೀಲ ಓಜಸ್ವಿ ಗೌಡ.

 

ಜುಲೈ 3, 2025: ಧರ್ಮಸ್ಥಳ ಗ್ರಾಮದ ಅಪರಾಧ ಕೃತ್ಯಗಳ ಮಾಹಿತಿಯಿದೆ ಎಂದ ವ್ಯಕ್ತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ದೂರು ಸಲ್ಲಿಕೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದ ದ.ಕ. ಜಿಲ್ಲಾ ಎಸ್ಪಿ.

ಜುಲೈ 3, 2025: ದೂರುದಾರನಿಂದ ....ಗೆ ವಕೀಲರ ಮೂಲಕ ದೂರು ಸಲ್ಲಿಕೆ. ಧರ್ಮಸ್ಥಳದಲ್ಲಿ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡಿದ್ದೆ ಎಂದು ʼಧರ್ಮಸ್ಥಳ ದೂರಿʼನಲ್ಲಿ ದೂರುದಾರನಿಂದ ಪ್ರಸ್ತಾಪ. ಪಾಪಪ್ರಜ್ಞೆ ಕಾಡುತ್ತಿದೆ, ನನ್ನ ಕುಟುಂಬಕ್ಕೆ ರಕ್ಷಣೆ ನೀಡಿ. ನೂರಾರು ಮೃತದೇಹಗಳ ವಿಲೇವಾರಿ ಮಾಡಿದ್ದೇನೆ. ಧರ್ಮಸ್ಥಳಕ್ಕೆ ಹೋಗಿ ಕಳೇಬರ ಹೊರತೆಗೆದಿದ್ದೇನೆ, ಪುರಾವೆಯಿದೆ ಎಂದ ದೂರುದಾರ.

ಜುಲೈ 4, 2025: ಧರ್ಮಸ್ಥಳ ದೂರಿಗೆ ಸಂಬಂಧಿಸಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ:39/2025,ಕಲಂ:211 ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ದ.ಕ. ಜಿಲ್ಲಾ ಎಸ್ಪಿ ಡಾ. ಅರುಣ್ ಕುಮಾರ್ ಹೇಳಿಕೆ.

ಜುಲೈ 5, 2025: ಧರ್ಮಸ್ಥಳದಲ್ಲಿ ಹೂತು ಹಾಕಲಾದ ಯಾವುದೇ ಕಳೇಬರವನ್ನು ದೂರುದಾರ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿಲ್ಲ‌. ಕಳೇಬರದ ಫೊಟೋಗಳನ್ನು ಮಾತ್ರ ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದ ದ.ಕ. ಜಿಲ್ಲಾ ಎಸ್ಪಿ.

ಜುಲೈ 10, 2025: ʼಧರ್ಮಸ್ಥಳʼ ಅಪರಾಧ ಕೃತ್ಯಗಳ ಬಗ್ಗೆ ವಿಸ್ತೃತ ತನಿಖೆ ನಡೆಸಿ ಎಂದು ಕರ್ನಾಟಕ ಸರಕಾರಕ್ಕೆ ಆಗ್ರಹಿಸಿದ ಕೇಂದ್ರ ಸಚಿವೆ ಅನ್ನಪೂರ್ಣ ದೇವಿ. ಧರ್ಮಸ್ಥಳದಲ್ಲಿ 1995 ರಿಂದ 2014 ರವರೆಗೆ ಈ ರೀತಿಯ ಘಟನೆಗಳು ದೀರ್ಘಕಾಲದವರೆಗೆ ನಡೆದಿರುವುದು ಅಚ್ಚರಿ ತಂದಿದೆ. ಇದುವರೆಗೆ ಯಾರಿಗೂ ಈ ಬಗ್ಗೆ ತಿಳಿಯದಿರುವುದು ನಿಜಕ್ಕೂ ಗಂಭೀರ ಎಂದ ಸಚಿವೆ.

ಜುಲೈ 11, 2025: ಧರ್ಮಸ್ಥಳದಲ್ಲಿ ಮೃತದೇಹ ಹೂತು ಹಾಕಿದ್ದೇನೆ ಎಂದ ದೂರುದಾರ ಮುಸುಕುಧಾರಿಯಾಗಿ ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶರ ಮುಂದೆ ಹಾಜರು.

ಜುಲೈ 11, 2025: ವಕೀಲರ ಉಪಸ್ಥಿತಿಯಲ್ಲಿ ಹೇಳಿಕೆ ದಾಖಲಿಸಲು ನ್ಯಾಯಾಲಯ ನಿರಾಕರಿಸಿದೆ ಎಂದ ದೂರುದಾರರ ಪರ ವಕೀಲರು.

ಜುಲೈ 11, 2025: ಬೆಳ್ತಂಗಡಿ ಪ್ರಧಾನ ಸಿವಿಲ್ ನ್ಯಾಯಾಧೀಶರ ಮುಂದೆ ಸುಮಾರು 1 ಗಂಟೆ 20 ನಿಮಿಷ ಹೇಳಿಕೆ ನೀಡಿದ ದೂರುದಾರ.

ಜುಲೈ 11, 2025: ನ್ಯಾಯಾಲಯದಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರುದಾರನ್ನು ಕರೆತಂದ ಪೊಲೀಸರು. ಠಾಣೆಗೆ ಆಗಮಿಸಿದ ವಿಧಿವಿಜ್ಞಾನ ತಂಡ. ಪುರಾವೆಯನ್ನು ಹಸ್ತಾಂತರಿಸಿ ಹೇಳಿಕೆ ನೀಡಿದ ದೂರುದಾರ.

ಜುಲೈ 11, 2025: ದೂರುದಾರರಿಗೆ witness protection scheme 2018 ರ ಅಡಿಯಲ್ಲಿ ಪೊಲೀಸರು ಸೂಕ್ತ ರಕ್ಷಣೆ ನೀಡಲು ಒಪ್ಪಿದ್ದಾರೆ ಎಂದು ಪ್ರಕಟನೆ ನೀಡಿದ ದೂರುರಾರರ ಪರ ವಕೀಲ ಓಜಸ್ವಿ ಗೌಡ ಹಾಗು ಸಚಿನ್ ದೇಶಪಾಂಡೆ.

ಜುಲೈ 11, 2025: ಅಸ್ಥಿಪಂಜರ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ ಎಂದು ʼಧರ್ಮಸ್ಥಳ ದೂರುದಾರʼನ ಪರ ವಕೀಲರ ಹೇಳಿಕೆ. “ದೂರುದಾರನನ್ನು ಪೊಲೀಸ್ ಕಸ್ಟಡಿಗೆ ನೀಡಿಲ್ಲ” ಎಂದು ಸ್ಪಷ್ಟನೆ.

ಜುಲೈ 11, 2025: ʼಧರ್ಮಸ್ಥಳ ದೂರಿʼನ ಕುರಿತು ಕಾನೂನು ಕ್ರಮ ಎಂದು ದ.ಕ. ಜಿಲ್ಲಾ ಎಸ್ಪಿ ಡಾ.ಅರುಣ್ ಕೆ. ಹೇಳಿಕೆ. “ದೂರುದಾರನ ಮಾಹಿತಿ ಬಹಿರಂಗ ಪಡಿಸಿದವರ ವಿರುದ್ಧ ಡಿಎಸ್ಪಿ ನೇತೃತ್ವದಲ್ಲಿ ಪ್ರತ್ಯೇಕ ತನಿಖೆ” ನಡೆಸಲಾಗುವುದು ಎಂದ ಎಸ್ಪಿ.

ಜುಲೈ 12, 2025: ಧರ್ಮಸ್ಥಳ ದೂರಿನ ಬಗ್ಗೆ ಯೂಟ್ಯೂಬರ್‌ ಸಮೀರ್‌ ಎಂ.ಡಿ.ಯಿಂದ AI ಗ್ರಾಫಿಕ್ಸ್ ಗಳ ವೀಡಿಯೋ ಬಿಡುಗಡೆ.

ಜುಲೈ 12, 2025: ಯುಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಪ್ರಕರಣ ದಾಖಲು. ಕಾಲ್ಪನಿಕವಾಗಿ ಎ.ಐ ಮೂಲಕ ಸೃಷ್ಟಿಸಲಾದ ಸುಳ್ಳು ಮಾಹಿತಿಗಳನ್ನು ಒಳಗೊಂಡಿರುವ ವೀಡಿಯೋ ಎಂದು ಆರೋಪ.

ಜುಲೈ 13, 2025: ಧರ್ಮಸ್ಥಳ ದೂರಿನ ಸಾಕ್ಷಿ ದೂರುದಾರನ ಗುರುತು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದವರ ಬಗ್ಗೆ ಪೊಲೀಸರಿಂದ ತನಿಖೆ ಆರಂಭ ಎಂದು ಎಸ್ಪಿ ಡಾ.ಅರುಣ್‌ ಕೆ. ಹೇಳಿಕೆ.

ಜುಲೈ 14, 2025: ʼಧರ್ಮಸ್ಥಳʼ ಸಾವಿನ ಪ್ರಕರಣಗಳ ಬಗ್ಗೆ ವಿಸ್ತೃತ ತನಿಖೆಗೆ ರಾಜ್ಯ ಮಹಿಳಾ ಆಯೋಗ ಆಗ್ರಹ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ.

ಜುಲೈ 15, 2025: ಅನನ್ಯ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಗೆ ವಕೀಲ ಮಂಜುನಾಥ್‌ ಎನ್‌ ಅವರ ಮೂಲಕ ದೂರು ನೀಡಿದ ತಾಯಿ ಸುಜಾತ ಭಟ್. ಮಗಳ ಅಸ್ಥಿಪಂಜರದ ಕಳೇಬರಹ ಹುಡುಕಿಕೊಡಬೇಕು. ಡಿಎನ್ಎ ಮಾಡಿ ಕಳೇಬರವನ್ನು ನನಗೆ ನೀಡಬೇಕು. ಬಳಿಕ ಹಿಂದೂ ಸಂಪ್ರದಾಯದಂತೆ ಕಾರ್ಯ ಮಾಡಿ ಮುಕ್ತಿ ಸಿಗವಂತಾಗಬೇಕು ಎಂದು ಆಗ್ರಹಿಸಿದ ಸುಜಾತ ಭಟ್.

ಜುಲೈ 15, 2025: ಧರ್ಮಸ್ಥಳ ಸರಣಿ ಹತ್ಯೆ ಆರೋಪದ ಕುರಿತು 'ತನಿಖೆಗೆ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ಎಸ್ಐಟಿ ರಚನೆಯಾಗಲಿ' ಎಂದು ದೂರುದಾರನ ವಕೀಲರ ಆಗ್ರಹ.

ಜುಲೈ 15, 2025: ಇಪ್ಪತ್ತೆರಡು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಅನನ್ಯ ಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾದ, ಆಕೆಯ ತಾಯಿ ಸುಜಾತ ಭಟ್.

ಜುಲೈ 15, 2025: ಅನನ್ಯ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ ತಾಯಿ ಸುಜಾತ ಭಟ್.ಮಗಳ ಅಸ್ಥಿಪಂಜರದ ಕಳೇಬರಹ ಹುಡುಕಿಕೊಡಬೇಕು. ಡಿಎನ್ಎ ಮಾಡಿ ಕಳೇಬರವನ್ನು ನನಗೆ ನೀಡಬೇಕು. ಬಳಿಕ ಹಿಂದೂ ಸಂಪ್ರದಾಯದಂತೆ ಕಾರ್ಯ ಮಾಡಿ ಮುಕ್ತಿ ಸಿಗವಂತಾಗಬೇಕು ಎಂದು ಆಗ್ರಹಿಸಿದ ಸುಜಾತ ಭಟ್.

ಜುಲೈ 16, 2025: ʼಧರ್ಮಸ್ಥಳ ಪ್ರಕರಣʼದ ಕುರಿತು ಸಿಎಂರನ್ನು ಭೇಟಿಯಾದ ಬಾಲನ್, ಸಿ.ಎಸ್.ದ್ವಾರಕನಾಥ್ ನೇತೃತ್ವದ ವಕೀಲರ ನಿಯೋಗ. ಎಸ್ ಐ ಟಿ ರಚಿಸುವಂತೆ ಒತ್ತಾಯ.

ಜುಲೈ 16, 2025: ತಾನು ಹೂತು ಹಾಕಿದ್ದ ಮೃತದೇಹಗಳ ಬಗ್ಗೆ ಮಾಹಿತಿ ನೀಡಲು ತನ್ನ ವಕೀಲರೊಂದಿಗೆ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸಮೀಪ ಬಂದು ಪೊಲೀಸರಿಗಾಗಿ ಕಾದ ದೂರುದಾರ. ಆದರೆ ಸ್ಥಳಕ್ಕೆ ಆಗಮಿಸದ ಪೊಲೀಸರು.

ಜುಲೈ 16, 2025: ಹೂತು ಹಾಕಿರುವ ಹೆಣಗಳನ್ನು ತೆಗೆಯುವ ಬಗ್ಗೆ ಪೊಲೀಸ್ ಇಲಾಖೆಯಿಂದ ಯಾವುದೇ ಅಧಿಕೃತ ಪ್ರಕ್ರಿಯೆಗಳು ಆ ದಿನ ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ.ಅರುಣ್‌ ಕೆ.

ಜುಲೈ 16, 2025: ʼಧರ್ಮಸ್ಥಳʼ ದೂರುದಾರ ತಲೆಮರೆಸಿಕೊಳ್ಳುವ ಸಾಧ್ಯತೆಯಿದೆ ಎಂದು ಗುಪ್ತ ಮಾಹಿತಿ ಇದೆ ಎಂದು ಹೇಳಿಕೆ ನೀಡಿದ ದ.ಕ. ಜಿಲ್ಲಾ ಎಸ್ಪಿ. ಸಾಕ್ಷಿ ಸಮ್ಮತಿಸಿದಲ್ಲಿ ಮಂಪರು ಪರೀಕ್ಷೆ ನಡೆಸಲಾಗುವುದು ಎಂದು ತನಿಖಾಧಿಕಾರಿಗಳಿಂದ ನ್ಯಾಯಾಲಯಕ್ಕೆ ವರದಿ. ತನಿಖಾಧಿಕಾರಿ ತನಿಖೆಯ ಯಾವ ಹಂತದಲ್ಲಿ ಸಮಾಧಿ ಅಗೆಯುವ ಪ್ರಕ್ರಿಯೆ ಸೂಕ್ತವೆಂದು ನಿರ್ಧರಿಸುತ್ತಾರೋ ಆಗ ಸೂಕ್ತ ಕಾನೂನು ಪ್ರಕ್ರಿಯೆ ಎಂದು ಎಸ್ಪಿ ಹೇಳಿಕೆ.

ಜುಲೈ 16, 2025: ʼಧರ್ಮಸ್ಥಳ ದೂರಿʼನ ಅಸ್ಥಿ ಪಂಜರ ಸಿಕ್ಕಿದ ಸ್ಥಳದ ಮಹಜರು ಯಾಕೆ ಮಾಡುತ್ತಿಲ್ಲ ಎಂದು ಕೇಳಿದ ದೂರುದಾರನ ವಕೀಲರು.ತನಿಖೆಯಲ್ಲಿ ಪೊಲೀಸರಿಂದ ಆಘಾತಕಾರಿ ವಿಳಂಬವಾಗುತ್ತಿದೆ. ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದ ದೂರುದಾರನ ವಕೀಲರು.

ಜುಲೈ 16, 2025: ಜುಲೈ 14 ರಂದು ಪೊಲೀಸರು ನಾಲ್ಕು ಗಂಟೆಗೂ ಹೆಚ್ಚು ಕಾಲ ಒಂದು ನಿರ್ದಿಷ್ಟ ಸ್ಥಳದಲ್ಲಿ ದೂರುದಾರನ ಹೇಳಿಕೆ ದಾಖಲಿಸಿದ್ದಾರೆ ಎಂದ ದೂರುದಾರನ ಪರ ವಕೀಲರಾದ ಧೀರಜ್ ಎಸ್ ಜೆ ಮತ್ತು ಅನನ್ಯ ಗೌಡ. ಜುಲೈ 13 ಕ್ಕೆ ದೂರುದಾರನ ಹಾಲಿ ವಿಳಾಸವನ್ನು ಪೊಲೀಸರಿಗೆ ನೀಡಲಾಗಿದೆ. ಹೀಗಿರುವಾಗ ದೂರುದಾರ ಎಲ್ಲಿದ್ದಾರೆ ಎಂದು ಗೊತ್ತಿಲ್ಲ ಎಂದು ಪೊಲೀಸರು ಹೇಳುವುದು ಸರಿಯಲ್ಲ ಎಂದ ವಕೀಲರು.

ಜುಲೈ 17, 2025: ಧರ್ಮಸ್ಥಳ ಸರಣಿ ಹತ್ಯೆ ಪ್ರಕರಣದ ಕುರಿತು ಕೇರಳ ಸರ್ಕಾರದ ಮಧ್ಯಪ್ರವೇಶಕ್ಕೆ ಸುಪ್ರೀಂ ಕೋರ್ಟ್ ವಕೀಲರ ಆಗ್ರಹ. ಪ್ರಕರಣದ ತನಿಖೆ ಸಂಬಂಧ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸುವಂತೆ ಸುಪ್ರಿಂ ಕೋರ್ಟ್ ವಕೀಲರಾದ ಕೆ ವಿ ಧನಂಜಯ ಅವರಿಂದ ಆಗ್ರಹ.

ಜುಲೈ 17, 2025: ಧರ್ಮಸ್ಥಳ ಸರಣಿ ಹತ್ಯೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಯ ಮೇಲ್ವಿಚಾರಣೆಯ ಎಸ್ಐಟಿ ರಚನೆಗೆ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರಿಂದ ಒತ್ತಾಯ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ನಂತರವೂ, ತನಿಖೆ ಸರಿಯಾಗಿ ಆಗುತ್ತಿಲ್ಲ ಎಂದು ಆರೋಪ.

ಜುಲೈ 17, 2025: ಧರ್ಮಸ್ಥಳ ಸರಣಿ ಹತ್ಯೆ ಆರೋಪ ಪ್ರಕರಣದಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದ ಸಚಿವ ದಿನೇಶ್ ಗುಂಡೂರಾವ್. ಸರಣಿ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಅಗತ್ಯ ಸಾಕ್ಷಾಧ್ಯಾರಗಳು ಸಿಕ್ಕರೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಆರೋಗ್ಯ ಸಚಿವ.

ಜುಲೈ 17, 2025: ಧರ್ಮಸ್ಥಳ ದೂರಿನ ಸಾಕ್ಷಿದಾರನ ಇರುವಿಕೆಯ ಬಗ್ಗೆ ಮಾಹಿತಿ ಲಭ್ಯವಿಲ್ಲದಾಗ ಸಾಕ್ಷ್ಯ ರಕ್ಷಣೆ ಅಸಾಧ್ಯ ಎಂದ ಪೊಲೀಸರು. ಈ ಕುರಿತು ಸಕ್ಷಮ ಪ್ರಾಧಿಕಾರಕ್ಕೆ ಜಿಲ್ಲಾ ಪೊಲೀಸರಿಂದ ವರದಿ ಸಲ್ಲಿಕೆಯಾಗಿದೆ ಎಂದು ಹೇಳಿಕೆ ನೀಡಿದ ದ.ಕ.ಜಿಲ್ಲಾ ಎಸ್ಪಿ ಡಾ.ಅರುಣ್‌ ಕೆ.

ಜುಲೈ 18, 2025: ಧರ್ಮಸ್ಥಳ ದೂರಿಗೆ ಸಂಬಂಧಿಸಿದಂತೆ ನಾವು ಕಾನೂನು ರೀತಿಯಲ್ಲಿ ಕೆಲಸ ಮಾಡಬೇಕು, ಕಾನೂನು ಬಿಟ್ಟು ಕೆಲಸ ಮಾಡಲು ಸಾಧ್ಯವಿಲ್ಲ ಎಂದ ಸಿಎಂ ಸಿದ್ದರಾಮಯ್ಯ. ಪೊಲೀಸರು ತನಿಖೆ ನಡೆಸುತ್ತಿದ್ದು, ವರದಿ ಬಂದ ನಂತರ ಏನು ಮಾಡಬೇಕೋ ನೋಡುತ್ತೇವೆ. ಅಗತ್ಯ ಬಿದ್ದರೆ ಎಸ್.ಐ.ಟಿ ರಚನೆ ಮಾಡಲು ಸಿದ್ಧ ಎಂದ ಸಿಎಂ.

ಜುಲೈ 18, 2025: ದೂರಿನ ಬಗ್ಗೆ ಪಿಎಸೈಯಿಂದ ದುರ್ವರ್ತನೆ,ಗೌಪ್ಯತೆಯ ಉಲ್ಲಂಘನೆ ಮಾಡಲಾಗಿದೆ ಎಂದು ಅನನ್ಯಾ ಭಟ್‌ ತಾಯಿ ಸುಜಾತಾ ಭಟ್ ಆರೋಪ. ಸುಪ್ರೀಂ ಕೋರ್ಟ್‌ ನ ಮುಖ್ಯ ನ್ಯಾಯಮೂರ್ತಿ,ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ, ಸಿಎಂ, ಗೃಹ ಸಚಿವರು ಸೇರಿದಂತೆ ಹಲವರಿಗೆ ದೂರು.

ಜುಲೈ 18, 2025: ʼಧರ್ಮಸ್ಥಳ ದೂರಿʼನ ತನಿಖಾಧಿಕಾರಿ ಭೇದಿಸಿರುವ ಈ ರೀತಿಯ ಪ್ರಕರಣಗಳೆಷ್ಟು? ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್ ವಕೀಲ ಕೆ ವಿ ಧನಂಜಯ್. ಧರ್ಮಸ್ಥಳ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಿಸಲಾದ ತನಿಖಾಧಿಕಾರಿಯ ಬಗ್ಗೆ ಸರ್ಕಾರವು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹ.

ಜುಲೈ 18, 2025: ಧರ್ಮಸ್ಥಳ ಸಾಮೂಹಿಕ ಸಮಾಧಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚನೆ ಮಾಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಲು ರಾಹುಲ್ ಗಾಂಧಿಗೆ ಪತ್ರ. ವಿಶೇಷ ತನಿಖಾ ತಂಡವನ್ನು ರಚನೆ ಮಾಡಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಪತ್ರ ಬರೆದ ಸಾಮಾಜಿಕ ಕಾರ್ಯಕರ್ತೆ ಎಂ. ನಾಗಮಣಿ.

ಜುಲೈ 19, 2025: ʼಧರ್ಮಸ್ಥಳ ದೂರಿʼನ ಸಾಕ್ಷ್ಯಾಧಾರಗಳು ನಾಶವಾಗದಂತೆ ತುರ್ತು ಕ್ರಮ ತೆಗೆದುಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯರನ್ನು ಆಗ್ರಹಿಸಿದ ನಟ ಪ್ರಕಾಶ್‌ ರಾಜ್‌. ಈವರೆಗೆ ದಾರಿ ತಪ್ಪಿಸಿದ ಅಧಿಕಾರಿಗಳ ಮೇಲೆ ತೀವ್ರ ಕ್ರಮ ಕೈಗೊಳ್ಳಿ ಎಂದು ಸಿಎಂಗೆ ಮನವಿ.

ಜುಲೈ 19, 2025: ʼಅಗತ್ಯ ಬಿದ್ದರೆ ಉನ್ನತ ತನಿಖೆ ನಡೆಸಲಾಗುವುದುʼ ಎಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಅಗತ್ಯ ಬಿದ್ದರೆ ತೀರ್ಮಾನ ಕೈಗೊಳ್ಳುತ್ತೇವೆ. ಪ್ರಾಥಮಿಕ ತನಿಖೆ ನಡೆಯುತ್ತಿರುವ ಮಧ್ಯೆಯೇ ಎಸ್‌ಐಟಿ ತನಿಖೆಗೆ ಒತ್ತಾಯಿಸಿದರೆ, ಪೊಲೀಸ್‌ ಇಲಾಖೆ ಇರುವುದೇಕೆ ಎಂದ ಗೃಹ ಸಚಿವ.

ಜುಲೈ 19, 2025: ʼಧರ್ಮಸ್ಥಳ ದೂರಿʼನ ಕುರಿತು ಗೃಹ ಸಚಿವ ಅಮಿತ್ ಶಾ ಗೆ ಪತ್ರ ಬರೆದ ರಾಜ್ಯಸಭೆಯ ಸಿಪಿಐ ನಾಯಕ ಸಂತೋಶ್‌ ಕುಮಾರ್ ಪಿ. ಎನ್‌ ಐ ಎ ತನಿಖೆಗೆ ಆಗ್ರಹ.

ಜು.20, 2025: ಧರ್ಮಸ್ಥಳ ದೂರು ಪ್ರಕರಣದ ತನಿಖೆಗೆ ರಾಜ್ಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕ ಡಾ.ಪ್ರಣವ ಮೊಹಾಂತಿ ನೇತೃತ್ವದಲ್ಲಿ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ(ಎಸ್.ಐ.ಟಿ) ರಚಿಸಿ ಜು.19ರಂದು ಸರಕಾರ ಆದೇಶ. 

ಜು.20, 2025:   ಧರ್ಮಸ್ಥಳ ದೂರಿನ ಕುರಿತು ನ್ಯಾಯಯುತ ತನಿಖೆಗೆ ನಟಿ ರಮ್ಯಾ ಆಗ್ರಹ. ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ನಟಿ ರಮ್ಯಾ, ಧರ್ಮಸ್ಥಳದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ಮತ್ತು ಮಹಿಳೆಯರ ನಾಪತ್ತೆ ಘಟನೆಗಳ ಬಗ್ಗೆ ತಿಳಿದು ನನಗೆ ಆಘಾತವಾಗಿದೆ. ನಾವು ಸತ್ಯವನ್ನು ತಿಳಿದುಕೊಳ್ಳಬೇಕು ಎಂದು ಆಗ್ರಹಿಸಿದರು.

ಜು.20, 2025: ಧರ್ಮಸ್ಥಳ ದೂರು ಪ್ರಕರಣವು ಕರ್ನಾಟಕದ ಇತಿಹಾಸದ ಮೇಲಿನ ಒಂದು ದೊಡ್ಡ ಗಾಯ ಎಂದು ನಟ ರಾಕೇಶ್ ಅಡಿಗ ಹೇಳಿದರು. ಈ ಕುರಿತು ಎಕ್ಸ್‌ ಪೋಸ್ಟ್‌ ಮಾಡಿರುವ ಅವರು ಸತ್ಯವನ್ನು ಹೊರಹಾಕುವುದು ಮತ್ತು ನ್ಯಾಯವನ್ನು ಖಚಿತಪಡಿಸುವುದು ನಿಮ್ಮ ಪವಿತ್ರ ಕರ್ತವ್ಯ ಎಂದು ಸರಕಾರವನ್ನು ಆಗ್ರಹಿಸಿದರು.

ಜು.21, 2025:  ಜಾಗದ ವಿವಾದದ ಹಿನ್ನೆಲೆಯಲ್ಲಿ ತನ್ನ ತಂದೆಯನ್ನು ವಾಹನ ಅಪಘಾತದ ಮೂಲಕ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಈ ಹಿಂದೆ ಧರ್ಮಸ್ಥಳ ಸಹಿತ ಬೆಳ್ತಂಗಡಿ ತಾಲೂಕಿನ‌ ವಿವಿಧೆಡೆ ವಾಸವಿದ್ದ, ಪ್ರಸಕ್ತ ಕೇರಳದಲ್ಲಿ ವಾಸವಾಗಿರುವ ಅನೀಶ್ ಜೋಯಿ ಎಂಬವರು ಕೇರಳದ ತಳಿಪರಂಬ ಠಾಣೆಯಲ್ಲಿ ದೂರು ದಾಖಲು.

ಜು.21, 2025: ʼಧರ್ಮಸ್ಥಳ ಸರಣಿ ಹತ್ಯೆ ಆರೋಪʼ ಪ್ರಕರಣದ ತನಿಖೆಯು ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಯಲಿ ಎಂದು ವಕೀಲರಾದ ಶ್ರೀರಾಮ್ ಟಿ.ನಾಯಕ್ ನೇತೃ್ತ್ವದಲ್ಲಿ ಕರ್ನಾಟಕ ಹೈಕೋರ್ಟ್‌ ಗೆ ಜು.21ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ.

ಜು.21, 2025: ಧರ್ಮಸ್ಥಳ ದೂರು ಪ್ರಕರಣದ ತನಿಖೆಯನ್ನು ಎಸ್ ಐಟಿ ನಡೆಸಲಿದೆ, ತಾಳ್ಮೆ ಕಳೆದುಕೊಳ್ಳಬೇಡಿ ಎಂದ ಸ್ಪೀಕರ್‌ ಯು.ಟಿ.ಖಾದರ್. ತನಿಖೆಯ ಬಳಿಕ ಸತ್ಯಾಸತ್ಯತೆ ಬಹಿರಂಗಗೊಳ್ಳಬಹುದು. ಕಾನೂನು ಪ್ರಕಾರ ಮುಂದಿನ ಕ್ರಮ ನಡೆಯುತ್ತದೆ. ಅದಕ್ಕಿಂತ ಮೊದಲೇ ಪೂರ್ವಗ್ರಹ ಪೀಡಿತರಾಗಿ ಹೇಳಿಕೆ ನೀಡುವುದರ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿಕೆ ನೀಡಿದ ಸ್ಪೀಕರ್‌.

ಜು.21, 2025: ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯದ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದ ವಿಪಕ್ಷ ನಾಯಕ ಆರ್‌.ಅಶೋಕ್‌. ಅನಾಮಧೇಯ ವ್ಯಕ್ತಿ ಹೇಳಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಎಸ್‌ಐಟಿ ರಚಿಸಿದೆ. ಈ ಪ್ರಕರಣಗಳಲ್ಲಿ ನಿಷ್ಪಕ್ಷಪಾತವಾದ ತನಿಖೆಯಾಗಲಿ. ಯಾರನ್ನೂ ಸಿಕ್ಕಿಹಾಕಿಸುವ ಉದ್ದೇಶದಿಂದ ತನಿಖೆ ನಡೆಯಬಾರದು ಎಂದು ಆಗ್ರಹಿಸಿದ ಆರ್‌. ಅಶೋಕ್‌

ಜು.21, 2025: ‘ಧರ್ಮಸ್ಥಳ’ ಎಸ್‍ಐಟಿ ತನಿಖೆ ಕಾಲಮಿತಿಯಲ್ಲಿ ನಡೆಯಲಿ ಎಂದ ಸಂಸದ ಬಸವರಾಜ ಬೊಮ್ಮಾಯಿ.  ಕಾನೂಬದ್ದವಾಗಿ ಎಸ್‍ಐಟಿ ತನಿಖೆಯಾಗಬೇಕು. ಯಾರನ್ನೋ ಗುರಿಯಾಗಿಸಿಕೊಂಡು ತನಿಖೆ ನಡೆಯಬಾರದು ಎಂದ ಆಗ್ರಹಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

ಜು.21, 2025: ಧರ್ಮಸ್ಥಳದಲ್ಲಿ ಸರಣಿ ಹತ್ಯೆ ಆರೋಪ ಪ್ರಕರಣ ಕುರಿತು ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲು ‘ಸಮಾನ ಮನಸ್ಕರ’ರಿಂದ ಆಗ್ರಹ. ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ದಿಂದ ಧರ್ಮಸ್ಥಳ ಸರಣಿ ಹತ್ಯೆ ಆರೋಪದ ಕುರಿತು ನ್ಯಾಯ ಸಿಗುವ ಯಾವುದೇ ನಂಬಿಕೆಯಿಲ್ಲ. ಆದ್ದರಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಬೇಕು ಎಂದು ಸಭೆಯಲ್ಲಿ ಆಗ್ರಹ.

ಜು.22, 2025: ಸದ್ಯದಲ್ಲೇ ಧರ್ಮಸ್ಥಳಕ್ಕೆ ಎಸ್​ಐಟಿ ಭೇಟಿ ಎಂದ ಗೃಹ ಸಚಿವ ಜಿ.ಪರಮೇಶ್ವರ್‌. ಎಸ್‍ಐಟಿ ಧರ್ಮಸ್ಥಳಕ್ಕೆ ತೆರಳಿ ಸಮಗ್ರವಾದ ತನಿಖೆಯನ್ನು ಆರಂಭಿಸಲಿದೆ. ಈ ಬಗ್ಗೆ ಅಲ್ಲಿನ ಸ್ಥಳೀಯ ಪೊಲೀಸರಿಗೂ ಸೂಚನೆ ನೀಡಿದ್ದೇವೆ ಎಂದ ಗೃಹ ಸಚಿವ.

ಜು.22, 2025: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುಗಳನ್ನು ದಾಖಲಿಸಲು ಸಹಾಯವಾಣಿ ರಚಿಸುವಂತೆ ಅನನ್ಯ ಭಟ್ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಎನ್. ಸರಕಾರಕ್ಕೆ  ಒತ್ತಾಯ.

ಜು.22, 2025: ಸೌಜನ್ಯಗೆ ನ್ಯಾಯಕ್ಕಾಗಿ ಬಂದ ಪಾದಯಾತ್ರಿಗಳನ್ನು ತಡೆದ ಗುಂಪು. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಸೌಜನ್ಯಳಿಗೆ ನ್ಯಾಯಕೊಡಿಸಬೇಕು ಎಂದು ಒತ್ತಾಯಿಸಿ ಪಾದಯಾತ್ರೆ ಮಾಡಿ ಬಂದಿದ್ದ ಬೆಂಗಳೂರು ಯಲಹಂಕದ ಶರಣಬಸಪ್ಪ ಕಬ್ಜ ಮತ್ತು ತಂಡದವರನ್ನು ಗುಂಪು ಧರ್ಮಸ್ಥಳದ ಮಹಾದ್ವಾರದ ಬಳಿ ತಡೆಯಿತು.

ಜು.22, 2025: ಧರ್ಮಸ್ಥಳ ಸರಣಿ ಹತ್ಯೆ ಆರೋಪ ಪ್ರಕರಣದ ಕುರಿತು ಎಸ್‌ಐಟಿ ನಿಷ್ಪಕ್ಷ ತನಿಖೆ ನಡೆಸಲಿ ಎಂದು ಆಗ್ರಹಿಸಿದ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ ಒಕ್ಕೂಟ. ಹೆಣಗಳನ್ನು ಹೂತು ಹಾಕಲಾಗಿರುವ ಸ್ಥಳಗಳಿಗೆ ಪೊಲೀಸರು ಕಾವಲು ನೀಡಿ, ಹೆಣಗಳನ್ನು ಹೊರತೆಗೆಯಬೇಕು ಎಂದು ಆಹ್ರಹ.

ಜು.22, 2025: ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂತಿರುವ ಆರೋಪ ಸಂಬಂಧಿಸಿದ ಮಾಧ್ಯಮ ವರದಿಗಳ ಮೇಲೆ ಹೇರಲಾದ ನ್ಯಾಯಾಲಯದ ನಿರ್ಬಂಧವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 'ಥರ್ಡ್ ಐ' ಎಂಬ ಯೂಟ್ಯೂಬ್ ವಾಹಿನಿ.

ಜು.22, 2025: ಧರ್ಮಸ್ಥಳ ದೂರು ಕುರಿತಂತೆ ರಚಿಸಿರುವ ಎಸ್‍ಐಟಿ ತನಿಖೆ ರಾಜಕೀಯ ಪ್ರೇರಿತ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮುಖಂಡರು ಹೇಳಲಿ ಎಂದ ದಿನೇಶ್ ಗುಂಡೂರಾವ್.  ಬಿಜೆಪಿ ನಾಯಕರು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್. ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಒತ್ತಡ ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ಎಸ್‍ಐಟಿ ರಚನೆ ಮಾಡಿ ತನಿಖೆಗೆ ಮುಂದಾಗಿದೆ ಎಂದು ಹೇಳಿದ ಸಚಿವರು.

ಜು.23, 2025: ಧರ್ಮಸ್ಥಳ ದೂರು ಪ್ರಕರಣಗಳ ತನಿಖೆಗೆ  ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ)ಕ್ಕೆ ಎಸ್ಪಿ, ಡಿಎಸ್ಪಿಯಿಂದ ಆರಂಭಿಸಿ ಕಾನ್ ಸ್ಟೇಬಲ್ ವರೆಗೆ 20 ಅಧಿಕಾರಿ, ಸಿಬ್ಬಂದಿಯನ್ನು ನೇಮಕ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಆದೇಶ.

ಜು.23, 2025: ಧರ್ಮಸ್ಥಳ ದೂರಿಗೆ ಸಂಬಂಧಿಸಿದಂತೆ ಮಾಧ್ಯಮ ನಿರ್ಬಂಧ ಪ್ರಶ್ನಿಸಿದ್ದ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಣೆ. ಬೆಂಗಳೂರು ನಗರ ಸೆಷನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ಯೂಟ್ಯೂಬ್ ಚಾನೆಲ್ ‘ಥರ್ಡ್ ಐ’ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ ಕೋರ್ಟ್. “ನೀವು ಮೊದಲು ಹೈಕೋರ್ಟ್‌ ಗೆ ಹೋಗಬೇಕಾಗಿತ್ತು,” ಎಂದು ಅರ್ಜಿದಾರರಿಗೆ ಸೂಚಿಸಿದ ಪೀಠ.

ಜು.23, 2025: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಧಿ ತನಿಖೆಗೆ ತಾಂತ್ರಿಕ ನೆರವು ನೀಡಲು ದೇಶ ವಿದೇಶಗಳ ತಜ್ಞರು ಸಂಪರ್ಕ ಮಾಡಿದ್ದಾರೆ ಎಂದ ಸುಜಾತಾ ಭಟ್ ವಕೀಲರು. ಈ ತಂತ್ರಜ್ಞರು ಸಮಾಧಿ ತೆಗೆಯುವ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ಹೊಸ ತಂತ್ರಜ್ಞಾನ ಮತ್ತು ವಿಧಾನಗಳನ್ನು ಉಲ್ಲೇಖಿಸಿದ್ದಾರೆ. ಸತ್ಯವನ್ನು ಬಯಲಿಗೆ ತರಲು ಇದು ಮಹತ್ವದ ಪಾತ್ರ ವಹಿಸುತ್ತದೆ ಎಂದ ವಕೀಲ ಮಂಜುನಾಥ್‌ ಎನ್‌.

ಜು.25, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಮಂಗಳೂರಿಗೆ ಆಗಮಿಸಿದ ಎಸ್‌ಐಟಿ ತಂಡ.  ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಎಸ್‌ ಐ ಟಿ. 

ಜು.25, 2025: ಧರ್ಮಸ್ಥಳ ದೂರು ಪ್ರಕರಣದ ತನಿಖೆಗೆ ಧರ್ಮಸ್ಥಳ ಠಾಣೆಗೆ ಆಗಮಿಸಿದ ಎಸ್‌ಐಟಿ ತಂಡ. ಧರ್ಮಸ್ಥಳ ಠಾಣೆಗೆ ಆಗಮಿಸಿ ದಾಖಲೆಗಳನ್ನು ಪಡೆದುಕೊಂಡ ಎಸ್‌ ಐ ಟಿ. ಠಾಣೆಗೆ ಆಗಮಿಸಿದ ತಂಡದಲ್ಲಿದ್ದ ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ ಹಾಗೂ ಇತರ ಅಧಿಕಾರಿಗಳು.  ಧರ್ಮಸ್ಥಳ ಠಾಣೆಯ ಪಿ.ಎಸ್.ಐ ಸಮರ್ಥ್ ಅವರಿಂದ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡ ಎಸ್‌ ಐ ಟಿ.

ಜು.25, 2025: ʼಧರ್ಮಸ್ಥಳ ದೂರುʼದಾರನಿಗೆ ಪವರ್ ಟಿವಿಯಿಂದ ನಿಂದನೆಯ ಕುರಿತು ದೂರು ದಾಖಲು. ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ಹೂತು ಹಾಕಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿರುವ ಸಾಕ್ಷಿಗೆ ಪವರ್ ಟಿವಿ ಮತ್ತು ಅದರ ಮುಖ್ಯಸ್ಥ ರಾಕೇಶ್ ಶೆಟ್ಟಿ, ಬಹಿರಂಗವಾಗಿ "ನೀಚರಲ್ಲೇ ನೀಚ" ಎಂದು ನಿಂದಿಸುತ್ತಿರುವುದಾಗಿ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ ಪರಮೇಶ್ ವಿ. ಬೆಳತ್ತೂರು. 

ಜು.26, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯಿಂದ ಮಂಗಳೂರಿನಲ್ಲಿ ಸಭೆ. ಕದ್ರಿಯಲ್ಲಿರುವ ಐಬಿ ಕಚೇರಿಯಲ್ಲಿ ಸಭೆ ನಡೆಸಿದ ಡಿಐಜಿ ಎಂ.ಎನ್.ಅನುಚೇತ್, ತನಿಖಾಧಿಕಾರಿ ಜಿತೇಂದ್ರ ದಯಾಮ್ ಹಾಗೂ ದ.ಕ, ಉಡುಪಿ, ಉ.ಕ ಜಿಲ್ಲೆಗಳಿಂದ ನೇಮಿಸಲ್ಪಟ್ಟ ತನಿಖಾ ತಂಡದ ಅಧಿಕಾರಿಗಳು.

ಜು.26, 2025: ಧರ್ಮಸ್ಥಳ ಪ್ರಕರಣದ ಕುರಿತು ಎಸ್ಐಟಿ ಎದುರು ಹಾಜರಾದ ದೂರುದಾರ. ಕದ್ರಿಯಲ್ಲಿರುವ ಐಬಿ ಕಚೇರಿಯಲ್ಲಿ ತೆರೆದಿರುವ ಎಸ್ಐಟಿ ಕಚೇರಿಗೆ ತನ್ನ ವಕೀಲರ ಜೊತೆ ಆಗಮಿಸಿದ ದೂರುದಾರ. 

ಜು.26, 2025: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ 8 ಗಂಟೆಗಳ ಕಾಲ ಸಾಕ್ಷಿಯನ್ನು ಸುದೀರ್ಘ ವಿಚಾರಣೆ ನಡೆಸಿದ ಎಸ್‌ಐಟಿ ತಂಡ. ಎಸ್‌ಐಟಿ ತಂಡದ ಡಿಐಜಿ ಎಂ.ಎನ್. ಅನುಚೇತ್ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರು ದೂರುದಾರನನ್ನು ವಿಚಾರಣೆಗೊಳಪಡಿಸಿದರು.ಬೆಳಗ್ಗೆ 10:50ಕ್ಕೆ ವಿಚಾರಣೆ ಆರಂಭಿಸಿದ ತಂಡವು ರಾತ್ರಿ 7:20ರವರೆಗೆ ವಿಚಾರಣೆ ನಡೆಸಿತು. 

ಜು.27, 2025: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಎಸ್.ಐ.ಟಿ ಕಚೇರಿಗೆ ಆಗಮಿಸಿದ ತನಿಖಾ ತಂಡದಿಂದ ಎರಡನೇ ದಿನವೂ ದೂರುದಾರನ ವಿಚಾರಣೆ. ತನ್ನ ವಕೀಲರ ಜೊತೆ  ಎಸ್.ಐ.ಟಿ ಕಚೇರಿಗೆ ಆಗಮಿಸಿದ ದೂರುದಾರ. 

ಜು.27, 2025:  ಎಸ್‌ಐಟಿ ತಂಡದ ಮುಖ್ಯಸ್ಥ ಪ್ರಣಬ್ ಮೊಹಾಂತಿ ಅವರ ನೇತೃತ್ವದಲ್ಲಿ ಮಂಗಳೂರಿನ ಎಸ್‌ ಐ ಟಿ ಕಚೇರಿಯಲ್ಲಿ ದೂರುದಾರನ ವಿಚಾರಣೆ. 

ಜು.27, 2025: ಧರ್ಮಸ್ಥಳ ದೂರಿನ ಕುರಿತ ಎಸ್ಐಟಿ ತನಿಖೆ ಆರಂಭವಾಗಿದೆ, ವರದಿ ಬರುವವರೆಗೆ ನಾವು ಏನೂ ಮಾಹಿತಿ ನೀಡುವಂತಿಲ್ಲ ಎಂದ ಗೃಹ ಸಚಿವ ಜಿ.ಪರಮೇಶ್ವರ್. 

ಜು.27, 2025:  ಬೆಳ್ತಂಗಡಿಗೆ ಆಗಮಿಸಿದ ಎಸ್.ಐ.ಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ. ಬೆಳ್ತಂಗಡಿಯ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಹೊಸ ಕಟ್ಟಡದಲ್ಲಿ ಪ್ರಾರಂಭಿಸಿರುವ ಎಸ್.ಐ.ಟಿ ಕಚೇರಿಯನ್ನು ಪರಿಶೀಲಿಸಿದ ಎಸ್.ಐ.ಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ

ಜು.28, 2025: ಬೆಳ್ತಂಗಡಿಗೆ ಆಗಮಿಸಿದ ಎಸ್ಐಟಿ ತಂಡ. ಧರ್ಮಸ್ಥಳ ದೂರು ಪ್ರಕರಣದ ತನಿಖೆ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಬುರುಡೆ ತೆಗೆದ ಜಾಗದಲ್ಲಿ ಎಸ್.ಐ.ಟಿ ಅಧಿಕಾರಿಗಳು ದೂರುದಾರನ ಜೊತೆ ಸ್ಥಳ ಮಹಜರು ಪ್ರಕ್ರಿಯೆ. ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಸಾಥ್.

ಜು.28, 2025: ಧರ್ಮಸ್ಥಳ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ ಐ ಟಿ ತಂಡದ ಮುಖ್ಯಸ್ಥರಾದ ಪ್ರಣವ್ ಮೊಹಾಂತಿಯವರ ನೇಮಕವನ್ನು ಸರಕಾರ ರದ್ದುಗೊಳಿಸುವಂತೆ ಆಗ್ರಹಿಸಿದ ಮಾಜಿ ಡಿಎಎಸ್ಪಿ ಅನುಪಮಾ ಶೆಣೈ. ಡಾ. ಕೆ ರಾಮಚಂದ್ರರಾವ್ ಅಥವಾ ಬಿ ದಯಾನಂದ್ ಅವರಿಗೆ ಮುಖ್ಯಸ್ಥರ ಹುದ್ದೆ ನೀಡುವಂತೆ ಆಗ್ರಹ.

ಜು.28, 2025: ಧರ್ಮಸ್ಥಳ ದೂರಿಗೆ ಸಂಬಂಧಿಸಿದಂತೆ ನೇತ್ರಾವತಿ ಸ್ನಾನಘಟ್ಟದಲ್ಲಿ ಮಹಜರು ಪ್ರಕ್ರಿಯೆ ಆರಂಭ. ಮಧ್ಯಾಹ್ನ 1 ಗಂಟೆಗೆ ಮಹಜರು ಆರಂಭಿಸಿದ ಎಸ್ ಐ ಟಿ. ನೇತ್ರಾವತಿ ಸ್ನಾನಘಟ್ಟದ ಸಮೀಪವೇ ಮೊದಲ ಸ್ಥಳವನ್ನು ಗುರುತಿಸಿದ ದೂರದಾರ.

ಜು.28, 2025: ಧರ್ಮಸ್ಥಳದ ದಟ್ಟ ಕಾಡಿನೊಳಗೆ ಸ್ಥಳ ಪರಿಶೀಲನೆ. ದೂರುದಾರ ನೀಡಿದ ಮಾಹಿತಿಯಂತೆ ಕಾಡಿನೊಳಗೂ ಸ್ಥಳ ಪರಿಶೀಲನೆ ಮಾಡಿದ ಅಧಿಕಾರಿಗಳು.

ಜು.28, 2025: ಧರ್ಮಸ್ಥಳ ದೂರಿಗೆ ಸಂಬಂಧಿಸಿದಂತೆ ಒಟ್ಟು 13 ಸ್ಥಳಗಳನ್ನು ಗುರುತಿಸಿದ ದೂರುದಾರ.

ಜು.28, 2025: ಸಂಜೆ 6 ಗಂಟೆಯ ವರೆಗೆ ನಡೆದ ಸ್ಥಳ ಗುರುತಿಸುವಿಕೆ ಪ್ರಕ್ರಿಯೆ. ಎಸ್ ಐ ಟಿ, ಅರಣ್ಯ, ಕಂದಾಯ ಅಧಿಕಾರಿಗಳು ಭಾಗಿ.

ಜು.28, 2025: ಧರ್ಮಸ್ಥಳದ ದೂರದಾರ ಅನಾಮಧೇಯ ವ್ಯಕ್ತಿಯ ಹಿಂದೆ ಕೇರಳ ಸರಕಾರ ಇದೆ ಎಂದು ಆರೋಪಿಸಿದ ವಿಪಕ್ಷ ನಾಯಕ ಆರ್.ಅಶೋಕ್. ಪ್ರಕರಣದ ಆರೋಪ ಮಾಡುತ್ತಿರುವ ಯಾರೋ ಒಬ್ಬ ಮುಸ್ಲಿಂ ವ್ಯಕ್ತಿ ಎಂದು ಮೈಸೂರಿನಲ್ಲಿ ಹೇಳಿಕೆ ನೀಡಿದ ಆರ್ ಅಶೋಕ್.

ಜು.28, 2025: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರ ಬಂಧನಕ್ಕೆ ಆಗ್ರಹಿಸಿದ ಸುಜಾತಾ ಭಟ್ ಪರ ವಕೀಲರಾದ ಮಂಜುನಾಥ್. ಎಲ್ಲಾ ಶವಗಳನ್ನು ಸೂಕ್ತ ದಾಖಲೆಗಳೊಂದಿಗೆ ಹೂಳಲಾಗಿತ್ತು ಎಂದು ಹೇಳಿಕೆ ನೀಡಿದ್ದ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್. ದೂರಿದಾರ ಸಾಕ್ಷಿಯು ಗುರುತಿಸಿದ ಸ್ಥಳಗಳು ದುರ್ಗಮ ಪ್ರದೇಶದಲ್ಲಿದೆ. ಯಾರೂ ಈ ರೀತಿಯ ಜಾಗದಲ್ಲಿ ಶವಸಂಸ್ಕಾರ ಮಾಡುವುದಿಲ್ಲ. ದಾರಿ ತಪ್ಪಿಸುವ ಹೇಳಿಕೆ ನೀಡಿರುವ ಗ್ರಾಮ ಪಂಚಾಯತ್ ಉಪಾಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವರನ್ನು ಬಂಧಿಸುವಂತೆ ಆಗ್ರಹಿಸಿದ ವಕೀಲರು.

ಜು.28, 2025: ದೂರುದಾರ ಗುರುತಿಸಿದ 13 ಸ್ಥಳಗಳಲ್ಲಿ ಪೊಲೀಸ್ ಗಸ್ತು. ಸ್ಥಳಗಳ ಸುತ್ತ ಟೇಪ್ ಕಟ್ಟಿ ರಾತ್ರಿ ಪೊಲೀಸರಿಂದ ಕಾವಲು.

ಜು.29, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಗುರುತಿಸಿದ ಸ್ಥಳದಲ್ಲಿ ಅಗೆಯುವ ಪ್ರಕ್ರಿಯೆ ಆರಂಭ. ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್. ದೂರುದಾರನನ್ನೂ ಸ್ಥಳಕ್ಕೆ ಕರೆತಂದ ಎಸ್ಐಟಿ. 

ಜು.29, 2025: ದೂರುದಾರ ಗುರುತಿಸಿದ ಸ್ಥಳದಲ್ಲಿ ಅಗೆಯುವಿಕೆಗೆ ಅಡಚಣೆ. ಜೆಸಿಬಿ ಬಳಸಿ ಕಾರ್ಯಾಚರಣೆ ಮುಂದುವರಿಕೆಗೆ ವ್ಯವಸ್ಥೆ. 

ಜು.30, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ದಿನದ ಕಾರ್ಯಾಚರಣೆ ಆರಂಭ. 11ಗ‌ಂಟೆಯ ಸುಮಾರಿಗೆ ಸಾಕ್ಷಿ ದೂರುದಾರನೊಂದಿಗೆ ನೇತ್ರಾವತಿ ಸ್ನಾನಘಟ್ಟಕ್ಕೆ ಆಗಮಿಸಿದ ಎಸ್‌.ಐ.ಟಿ ತಂಡ.

ಜು.30, 2025: ಹಿಟಾಚಿ ಬಳಕೆಗೆ ಅನುಮತಿ ನೀಡದ ಅರಣ್ಯ ಇಲಾಖೆ. ಅರಣ್ಯ ಕಾನೂನುಗಳು ಹಿಟಾಚಿ ಬಳಕೆಗೆ ವಿರುದ್ದವಾಗಿದ್ದು ಈ ಕಾರಣದಿಂದಾಗಿ ಕಾರ್ಮಿಕರನ್ನು ಉಪಯೋಗಿಸಿ ಅಗೆಯುವ ಕಾರ್ಯ. 

ಜು.30, 2025:  ಎರಡನೇ ಗುರುತು ಮಾಡಿದ ಸ್ಥಳದಲ್ಲಿ ಸಿಗದ ಕಳೇಬರ. ಮೂರನೇ ಗುರುತು ಮಾಡಿದ ಸ್ಥಳದಲ್ಲಿ ಕಾರ್ಯಾಚರಣೆ ಆರಂಭ. ಎರಡನೇ ಗುರುತು ಮಾಡಿದ ಸ್ಥಳದಲ್ಲಿ 11:30 ರಿಂದ 2:30 ಯವರೆಗೆ ನಡೆದ ಸ್ಥಳ ಅಗೆಯುವಿಕೆ ವೇಳೆ ಎಸ್‌ಐಟಿ ಅಧಿಕಾರಿಗಳಿಗೆ ಸಿಗದ ಕುರುಹು.

ಜು.30, 2025: 3ನೇ ಗುರುತು ಮಾಡಿದ ಸ್ಥಳದಲ್ಲೂ ಸಿಗದ ಕಳೇಬರ. 4ನೇ ಗುರುತು ಮಾಡಿದ ಸ್ಥಳದಲ್ಲಿ ಕಾರ್ಯಾಚರಣೆ ಆರಂಭಿಸಿದ ಎಸ್‌ಐಟಿ.

ಜು.30, 2025: ಧರ್ಮಸ್ಥಳ ದೂರುದಾರ ಗುರುತಿಸಿದ ಸ್ಥಳದಲ್ಲಿ ಹರಿದ ಕೆಂಪು ಬ್ಲೌಸ್, ಪಾನ್ ಕಾರ್ಡ್, ಎಟಿಎಂ ಕಾರ್ಡ್ ಪತ್ತೆಯಾಗಿದೆ ಎಂದ ಸುಜಾತಾ ಭಟ್ ಪರ ವಕೀಲರು. ಎಸ್ಐಟಿಯಿಂದ  ಕಾರ್ಯಾಚರಣೆ ಶ್ಲಾಘನೀಯ ಎಂದು ಪ್ರಶಂಸೆ. 

ಜು.30, 2025: ನೇತ್ರಾವತಿ ಕಾರ್ಯಾಚರಣೆ ಸ್ಥಳಕ್ಕೆ ಎಸ್.ಐ.ಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಭೇಟಿ.  ತಂಡದ ಸದಸ್ಯರಾದ ಅನುಚೇತ್, ಎಸ್ಪಿ ಸಿ.ಎ. ಸೈಮನ್ ಉಪಸ್ಥಿತಿ. 

ಜು.30, 2025: ಧರ್ಮಸ್ಥಳ ದೂರು ಪ್ರಕರಣದ ಸಾಕ್ಷಿಯು ಗುರುತಿಸಿದ ಮೊದಲ ಸ್ಥಳದಲ್ಲಿ ಮಣ್ಣಿನ ಅಭಿವೃದ್ಧಿ ಕೆಲಸ ನಡೆದಿದೆ ಎಂದು ಹೇಳಿಕೆ ನೀಡಿದ ಸುಜಾತಾ ಭಟ್ ಪರ ವಕೀಲರು.

ಜು.30, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ SIT ಕಚೇರಿಯಲ್ಲಿ ಸಹಾಯವಾಣಿ ಪ್ರಾರಂಭ. ದೂರು ನೀಡಲು ವಾಟ್ಸಾಪ್‌, ದೂರವಾಣಿ, ಈ ಮೇಲ್‌ ಹಂಚಿಕೊಂಡ ಎಸ್‌ ಐ ಟಿ.

ಜು.30, 2025: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುತು ಮಾಡಿರುವ ವಿವಿಧ ಸ್ಥಳಗಳಲ್ಲಿದೆ ಎನ್ನಲಾದ ಮೃತದೇಹಗಳ ಬಗ್ಗೆ ಮಾಹಿತಿ ಹಂಚಿಕೊಂಡ ಸುಜಾತಾ ಭಟ್ ಪರ ವಕೀಲರು. ಅತ್ಯಧಿಕ ಸಂಖ್ಯೆಯ ಶವಗಳನ್ನು ಹೊಂದಿರುವ ಸ್ಥಳವು ಸಾಕ್ಷಿದಾರ ದೂರುದಾರನ ಪ್ರಕಾರ, ಈಗ ಗುರುತು ಮಾಡಿರುವ 13 ಸ್ಥಳದಲ್ಲಿಲ್ಲ ಎಂದು ಹೇಳಿಕೆ.

ಜು.30, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಪ್ರಗತಿಯಲ್ಲಿದೆ ಎಂದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ. ಮಂತ್ರಾಲಯಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ನಾಗಲಕ್ಷ್ಮೀ ಚೌದರಿ.

ಜು.30, 2025: ಕೇಂದ್ರ ಸೇವೆಗೆ ಅರ್ಹತಾ ಪಟ್ಟಿಯಲ್ಲಿ ಎಸ್‌ ಐ ಟಿ ಮುಖ್ಯಸ್ಥ ಪ್ರಣ‌ವ್‌ ಮೊಹಾಂತಿ. ಇತ್ತೀಚೆಗೆ ಸಭೆ ನಡೆಸಿದ ಕೇಂದ್ರ ಸರ್ಕಾರದ ನೇಮಕಾತಿಗಳ ಸಂಪುಟ ಸಮಿತಿಯು, ವಿವಿಧ ರಾಜ್ಯಗಳಲ್ಲಿ ಕರ್ತವ್ಯದಲ್ಲಿರುವ ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಯ ಅರ್ಹರ ಪಟ್ಟಿಗೆ ಆಯ್ಕೆ ಮಾಡಿದೆ. ಅದರಲ್ಲಿ ಮೊಹಾಂತಿಯವರ ಹೆಸರಿದೆ.

ಜು.30, 2025: ಮೊಹಾಂತಿ ಕೇಂದ್ರ ಸೇವೆಗೆ ಹೋದರೆ ಎಸ್ಐಟಿ ಗೆ ಬೇರೆ ಅಧಿಕಾರಿಯ ನೇಮಕ ಕುರಿತು ಚರ್ಚೆ ನಡೆಸಲಾಗುವುದು ಎಂದ ಗೃಹ ಸಚಿವ ಡಾ. ಜಿ ಪರಮೇಶ್ವರ್‌

ಜು.31, 2025: ಧರ್ಮಸ್ಥಳ ಪ್ರಕರಣ. 3ನೇ ದಿನದ ಶೋಧ ಕಾರ್ಯಾಚರಣೆ ಆರಂಭ. ಬೆಳಿಗ್ಗೆ 11:30ರ ಸುಮಾರಿಗೆ ನೇತ್ರಾವತಿ ಸ್ನಾನಘಟ್ಟದಲ್ಲಿ 3ನೇ ದಿನದ ಕಾರ್ಯಾಚರಣೆಯನ್ನು ಆರಂಭ. ದೂರುದಾರನನ್ನು ಕರೆದೊಯ್ದಿದ ಅಧಿಕಾರಿಗಳಿಂದ ನೇತ್ರಾವತಿ ನದಿಯ ಬದಿಯಲ್ಲೇ ಇರುವ 6ನೇ ಜಾಗದ ಅಗೆಯುವಿಕೆ ಆರಂಭ. ಎಸ್ಐಟಿ ಅಧಿಕಾರಿಗಳ ಜೊತೆಗೆ ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಮಂಗಳೂರಿನ ಕೆಎಂಸಿ ವೈದ್ಯರ ತಂಡ, ಎಫ್.ಎಸ್.ಎಲ್. ತಂಡ, ಐ.ಎಸ್.ಡಿ. ಹಾಗೂ ಇತರ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿ. 

ಜು.31, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ 6ನೇ ಸ್ಥಳದಲ್ಲಿ ಕಳೇಬರದ ಅವಶೇಷ ಪತ್ತೆ. ದೂರುದಾರ ಗುರುತಿಸಿರುವ ನೇತ್ರಾವತಿ ಸ್ನಾನ ಘಟ್ಟದ ಸಮೀಪವಿರುವ ಆರನೇ ಸ್ಥಳದಲ್ಲಿ ಅಗೆಯುವ ವೇಳೆ ಕೆಲವು ಎಲುಬಿನ ಚೂರುಗಳು ಪತ್ತೆ. 

ಜು.31, 2025: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಕ್ಕೇ ಜಯ ಎಂದ ಸುಜಾತ ಭಟ್ ಪರ ವಕೀಲರು. 

ಜು.31, 2025: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಗುರುತಿಸಿದ ಮೊದಲ ಸ್ಥಳದಲ್ಲಿ ಪತ್ತೆಯಾಗಿದ್ದ ಪಾನ್ ಕಾರ್ಡ್ ಮೂಲ ಪತ್ತೆ. ಇದೇ ವರ್ಷ, 2025ರಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರಿಗೆ ಸೇರಿದ್ದು ಎನ್ನಲಾಗಿದೆ. ಆತ ತನ್ನ ಹಳ್ಳಿಯ ಮನೆಯಲ್ಲಿ ಜಾಂಡೀಸ್ ನಿಂದ ಮೃತಪಟ್ಟಿದ್ದಾನೆ ಎಂದ ಮೃತರ ತಂದೆ.  ಎಸ್. ಐ. ಟಿ ಉನ್ನತ ಮೂಲಗಳಿಂದ ಬಹಿರಂಗ.

ಜು.31, 2025: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾ.ಪಂ.ಉಪಾಧ್ಯಕ್ಷ ಶ್ರೀನಿವಾಸ್ ರಾವ್‌ರನ್ನು ತಕ್ಷಣ ಬಂಧಿಸುವಂತೆ ಎಸ್‌ಐಟಿ ಅಧಿಕಾರಿಗಳಿಂದ ಸುಜಾತ ಭಟ್ ಪರ ವಕೀಲರ ಆಗ್ರಹ. ತನಿಖೆಯ ದಿಕ್ಕು ತಪ್ಪಿಸಲು ಸಾರ್ವಜನಿಕವಾಗಿ ಸುಳ್ಳು ಮಾಹಿತಿಯನ್ನು ಹರಡಿದ್ದ ಆರೋಪ.

ಜು.31, 2025: ಎಸ್‌ ಐ ಟಿ ಮುಖ್ಯಸ್ಥ ಪ್ರಣವ್ ಮೊಹಾಂತಿಯವರನ್ನು ಕೇಂದ್ರದ ಸೇವೆಗೆ ಕಳುಹಿಸುವ ತೀರ್ಮಾನ ತೆಗೆದುಕೊಂಡಿಲ್ಲ ಎಂದ ಗೃಹ ಸಚಿವ ಪರಮೇಶ್ವರ್. ಧರ್ಮಸ್ಥಳ ಪ್ರಕರಣದಲ್ಲಿ ಸತ್ಯಾಂಶ ಹೊರಬರುವುದಷ್ಟೇ ಮುಖ್ಯ ಎಂದು ಹೇಳಿಕೆ.

ಆ.1, 2025: ಐದನೇ ದಿನದ ಕಾರ್ಯಾಚರಣೆಗೆ ಬಂದ ಎಸ್.ಐ.ಟಿ ತಂಡ. ಪೌರಕಾರ್ಮಿಕರಿಂದ ಮತ್ತು ಮಿನಿ ಜೆಸಿಬಿಯಿಂದ 7 ನೇ ಗುರುತು ಮಾಡಿದ ಜಾಗದಲ್ಲಿ ಕಾರ್ಯಾಚರಣೆ.

ಆ.1, 2025:  ಏಳನೇ ಸ್ಥಳದಲ್ಲಿ ಲಭಿಸದ ಕಳೇಬರ. ಎಂಟನೇ ಸ್ಥಳದ ಅಗೆತಕ್ಕೆ ಸಿದ್ಧತೆ.

ಆ.1, 2025:  ಧರ್ಮಸ್ಥಳ ಗ್ರಾಮ ಪಂಚಾಯತ್‌ ನಿಂದ ದಾಖಲೆ ಪಡೆದ SIT. ಎಸ್.ಐ.ಟಿ ತಂಡದ ಅಧಿಕಾರಿಗಳು ಧರ್ಮಸ್ಥಳ ಗ್ರಾಮ ಪಂಚಾಯತ್ ಗೆ ಆಗಮಿಸಿ 1995 ರಿಂದ 2014ರ ವರೆಗಿನ ಯುಡಿಆರ್ (ಅಸಹಜ ಸಾವು) ದಾಖಲೆಗಳನ್ನು ಪಡೆದುಕೊಂಡರು.

ಆ.1, 2025: ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದ ಗೃಹ ಸಚಿವ ಜಿ.ಪರಮೇಶ್ವರ್. ಎಲ್ಲ ಸಾಮಾಜಿಕ ಜಾಲತಾಣಗಳ ಮೇಲೂ ಪೊಲೀಸರು ನಿಗಾ ಇರಿಸಿದ್ದಾರೆ ಎಂದ ಗೃಹ ಸಚಿವ. 

ಆ.1, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಡ್ಲ ರ‍್ಯಾಂಪೇಜ್ ಯೂಟ್ಯೂಬ್‌ ಚಾನೆಲ್‌ ವಿರುದ್ಧದ ಪ್ರತಿಬಂಧಕಾದೇಶ ರದ್ದುಪಡಿಸಿದ ಹೈಕೋರ್ಟ್. ʼಧರ್ಮಸ್ಥಳʼದ ಕುರಿತು ಸುದ್ದಿ ಮಾಡದಂತೆ ಕುಡ್ಲ ರ‍್ಯಾಂಪೇಜ್ ಡಿಜಿಟಲ್ ಮಾಧ್ಯಮದ ವಿರುದ್ಧ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಏಕಪಕ್ಷೀಯ ಪ್ರತಿಬಂಧಕಾದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಆ.2, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ದಿನದ ಶೋಧ ಕಾರ್ಯಾಚರಣೆ. ದೂರುದಾರ ಗುರುತಿಸಿದ 9ನೇ ಸ್ಥಳದಲ್ಲಿ ಉತ್ಖನನ.

ಆ.2, 2025: 9ನೇ ಸ್ಥಳದಲ್ಲಿ ಯಾವುದೇ ಅವಶೇಷ ಲಭ್ಯವಾಗಿಲ್ಲ.

ಆ.2, 2025:  ಧರ್ಮಸ್ಥಳ ದೂರುದಾರನ್ನು ಎಸ್ ಐ ಟಿ ಅಧಿಕಾರಿಯೊಬ್ಬರು ಬೆದರಿಸಿದ ಆರೋಪ. ದೂರು ವಾಪಸ್ ಪಡೆಯುವಂತೆ ಒತ್ತಡ ಹೇರಿದ್ದಾರೆ ಎಂದು ವರದಿ.

ಆ.2, 2025:  ಧರ್ಮಸ್ಥಳ ದೂರುದಾರನನ್ನು ಬೆದರಿಸಿದ ತನಿಖಾಧಿಕಾರಿಯನ್ನು ಎಸ್ಐಟಿ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಎನ್.

ಆ.2, 2025: ಸಂಜೆಯ ವೇಳೆಗೆ ಎಸ್‌ಐಟಿ ಮುಂದೆ ಹಾಜರಾದ ಮತ್ತೋರ್ವ ದೂರುದಾರ. ಬೆಳ್ತಂಗಡಿಯ ಎಸ್ ಐ ಟಿ ಕಚೇರಿಗೆ ಆಗಮಿಸಿದ ಎರಡನೇ ದೂರುದಾರ. 

ಆ.2, 2025: 15 ವರ್ಷಗಳ ಹಿಂದೆ ಬಾಲಕಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಲು ಬಂದ ಎರಡನೇ ದೂರುದಾರ ಜಯಂತ್ ಟಿ. ಇನ್ನೂ ನಾಲ್ಕೈದು ಜನರು ದೂರು ನೀಡಲು ಸಿದ್ದರಾಗಿದ್ದಾರೆ ಎಂದು ಸ್ಪೋಟಕ ಹೇಳಿಕೆ.

ಆ.3, 2025: ಧರ್ಮಸ್ಥಳ ಪ್ರಕರಣ. ಮೃತದೇಹಗಳ ಪತ್ತೆ ಕಾರ್ಯಾಚರಣೆಗೆ ಜಿಪಿಆರ್ ಬಳಸಲು ಸುಜಾತಾ ಭಟ್ ಪರ ವಕೀಲ ಆಗ್ರಹ. ಭಾರತದಲ್ಲಿ ಬಳಕೆಯಲ್ಲಿರುವ ಅತ್ಯಾಧುನಿಕ GROUND PENETRATING RADAR ಅನ್ನು ಬಳಸಿ ಕಳೇಬರಗಳ ಪತ್ತೆ ಕಾರ್ಯಾಚರಣೆ ನಡೆಸುವಂತೆ ವಿಶೇಷ ತನಿಖಾ ತಂಡಕ್ಕೆ ಮನವಿ. 

ಆ.4, 2025: 11 ನೇ ಗುರುತು ಮಾಡಿದ ಸ್ಥಳಕ್ಕೆ ಕಾರ್ಯಾಚರಣೆ ಆಗಮಿಸಿದ ಎಸ್.ಐ.ಟಿ ತಂಡ. 11:30 ರ ವೇಳೆಗೆ ದೂರುದಾರನ ಜೊತೆ ಎಸ್.ಐ.ಟಿ ಅಧಿಕಾರಿಗಳು.

ಆ.4, 2025: 11 ನೇ ಜಾಗದಿಂದ ಎಸ್‌ಐಟಿ ತಂಡವನ್ನು ಕಾಡಿನ ಪ್ರದೇಶಕ್ಕೆ ಕರೆದೊಯ್ದ ದೂರುದಾರ.  1 ನೇ ಸ್ಥಳದಲ್ಲಿ ಅಗೆಯುವ ಕಾರ್ಯ ಆರಂಭವಾಗುವ ಸಂದರ್ಭದಲ್ಲಿ ದೂರುದಾರ ಅನಾಮಿಕ ವ್ಯಕ್ತಿ ಕಾರ್ಯಾಚರಣೆ ನಡೆಸುತ್ತಿರುವ ತಂಡವನ್ನು ಗುರುತಿಸಿದ ಸ್ಥಾನದಿಂದ ಮೇಲ್ಭಾಗಕ್ಕೆ ಕರೆದೊಯ್ದಿದ್ದರು.

ಆ.4, 2025: ಧರ್ಮಸ್ಥಳ ದೂರಿಗೆ ಸಂಬಂಧಿಸಿದಂತೆ ಎರಡನೇ ದೂರುದಾರ ಜಯಂತ್ ಎಸ್ಐಟಿ ಕಚೇರಿಗೆ ಆಗಮನ

ಆ.4, 2025:  ಮೂರು ಬಕೆಟ್ ಗಳನ್ನು ಸೀಲ್ ಮಾಡಿ ಹೊರತಂದ ಎಸ್‌ ಐ ಟಿ. ಕುತೂಹಲ ಮೂಡಿಸಿದ ಕಾರ್ಯಾಚರಣೆ. 6 ನೇ ದಿನದ ಕಾರ್ಯಾಚರಣೆ ಅಂತ್ಯ.

ಆ.4, 2025: ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ ಎರಡನೇ ದೂರುದಾರ ಜಯಂತ್ ಟಿ. ಧರ್ಮಸ್ಥಳ ಠಾಣೆಯಲ್ಲಿ 200/DPS/2025 ರಂತೆ ದೂರು ಸ್ವೀಕರಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರಿಂದ ಮಾಹಿತಿ.

ಆ.4, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಣ್ಣಪುಟ್ಟ ಲೋಪದೋಷಗಳಿಂದ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ಬರಲ್ಲ ಎಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು.

ಆ.5, 2025: ದೂರುದಾರ ಸಾಕ್ಷಿಯು 6ನೇ ಗುರುತಿಸಿದ ಸ್ಥಳದಲ್ಲಿ ಪತ್ತೆಯಾದ ಅಸ್ತಿಪಂಜರ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು. ಎಸ್.ಐ.ಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಸ್ಟ್ 1ರಂದು ದೂರು ನೀಡಿದ್ದು, ಅದರಂತೆ ಯುಡಿಆರ್ ಪ್ರಕರಣ ದಾಖಲಾಗಿದೆ.

ಆ.5, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಗುರುತಿಸಿದ 11ನೇ ಸ್ಥಳದಲ್ಲಿ ಅಗೆಯುವಿಕೆ ಆರಂಭ. ಎಸ್ಐಟಿಯಿಂದ ಶೋಧ ಕಾರ್ಯ.

ಆ.5, 2025: 11ನೇ ಗುರುತು ಮಾಡಿದ ಸ್ಥಳದಲ್ಲಿ ಸಿಗದ ಕಳೇಬರ. 11 ನೇ ಗುರುತು ಮಾಡಿದ ಸ್ಥಳದಲ್ಲಿ 11:30 ರಿಂದ 1:55 ರವರೆಗೆ ದೂರುದಾರನ ಜೊತೆ ಎಸ್.ಐ.ಟಿ ಅಧಿಕಾರಿಗಳು ಹಾಗೂ ಇತರ ಇಲಾಖೆಯ ಅಧಿಕಾರಿಗಳ ಜೊತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಆ.5, 2025:  ಸೋಮವಾರದ ಕಾರ್ಯಾಚರಣೆಯಲ್ಲಿ ಮೂರು ಕಳೇಬರ ಪತ್ತೆಯಾಗಿದೆ ಎಂದು ಸುಜಾತಾ ಭಟ್ ಪರ ವಕೀಲರ ಹೇಳಿಕೆ. ಅದರಲ್ಲಿನ ಒಂದು ಕಳೇಬರವು ಮಹಿಳೆಯದ್ದು. ಸ್ಥಳದಲ್ಲಿಯೇ ಮಹಿಳೆಯ ಸೀರೆಯೂ ಪತ್ತೆಯಾಗಿದೆ ಎಂದು ಹೇಳಿದ ವಕೀಲ ಮಂಜುನಾಥ್‌ ಎನ್‌.

ಆ.5, 2025: ಧರ್ಮಸ್ಥಳ ದೂರಿಗೆ ಸಂಬಂಧಿಸಿದಂತೆ ಎರಡನೇ ದೂರುದಾರ ಜಯಂತ್‌ ಟಿ ಅವರ ದೂರೂ ಎಸ್ ಐ ಟಿ ಗೆ ಹಸ್ತಾಂತರ ಮಾಡಲಾಗಿದೆ ಎಂದು ದ.ಕ. ಎಸ್ಪಿ ಡಾ. ಅರುಣ್ ಕೆ. ಅವರಿಂದ ಹೇಳಿಕೆ. ಈ ಪ್ರಕರಣಕ್ಕೆ ಸಂಬಂಧಿಸಿದ ದೂರನ್ನು ಎಸ್ ಐ ಟಿ ಗೆ ಹಸ್ತಾಂತರಿಸುವಂತೆ ರಾಜ್ಯ ಪೊಲೀಸ್ DGP & IGP ಅವರು ಆದೇಶ ನೀಡಿರುವುದರಿಂದ, ಮುಂದಿನ ವಿಚಾರಣೆಗಾಗಿ ಎಸ್.ಐ.ಟಿ ತಂಡಕ್ಕೆ ಹಸ್ತಾಂತರಿಸಲಾಗಿದೆ ಎಂದ ಎಸ್ಪಿ.

ಆ.5, 2025: ಧರ್ಮಸ್ಥಳ ಪ್ರಕರಣದಲ್ಲಿ ಸಂಪೂರ್ಣ ತನಿಖೆಯನ್ನು ಎಸ್‍ಐಟಿ ಅಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದೇವೆ ಎಂದ ಗೃಹ ಸಚಿವ ಡಾ.ಜಿ. ಪರಮೇಶ್ವರ್. ಇದು ಗಂಭೀರವಾದ ಪ್ರಕರಣವಾದ್ದರಿಂದ ಎಚ್ಚರಿಕೆಯಿಂದ ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ ಎಂದ ಗೃಹ ಸಚಿವರು.

ಆ.5, 2025: ಕೇಂದ್ರ ಸೇವೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಭೇಟಿಯಾದ  ಎಸ್‍ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ.

ಆ.5, 2025: ಧರ್ಮಸ್ಥಳ ದೂರಿಗೆ ಸಂಬಂಧಪಟ್ಟಂತೆ ಎಸ್‌ ಐ ಟಿ ನಡೆಸುತ್ತಿರುವ ತನಿಖೆಗೆ, ಜಿಪಿಆರ್ ಸಲಕರಣೆಗಳ ಕೃತಕ ಅಭಾವ ಸೃಷ್ಟಿಯಾಗಿದೆ ಎಂದು ಸುಜಾತಾ ಭಟ್ ಪರ ವಕೀಲರಾದ ಮಂಜುನಾಥ್‌ ಎನ್‌ ಗಂಭೀರ ಕಳವಳ. ಲಭ್ಯವಿರುವ ಜಿಪಿಆರ್ ಸಲಕರಣೆಗಳನ್ನು ಅಜ್ಞಾತ ಹಾಗೂ ಸ್ಥಾಪಿತ ಹಿತಾಸಕ್ತಿಗಳು ಈಗಾಗಲೇ ಖರೀದಿಸಿವೆ. ಪೂರೈಕೆಯಲ್ಲಿ ಕೃತಕ ಅಭಾವ ಸೃಷ್ಟಿ ಎಂದು ಆರೋಪ.

ಆ.6, 2025: ಎಸ್ಐಟಿ ತಂಡವನ್ನು ಮತ್ತೆ ಅರಣ್ಯದೊಳಕ್ಕೆ ಕರೆದೊಯ್ದ ದೂರುದಾರ. ಎಸ್.ಐ.ಟಿ. ತಂಡವನ್ನು ಹೊಸ ಸ್ಥಳದತ್ತ ಕರೆದೊಯ್ದ ದೂರದಾರ. ಅರಣ್ಯದಲ್ಲಿ ಇನ್ನೂ ಹಲವಾರು ಸ್ಥಳಗಳಿವೆ ಎಂದ ಸಾಕ್ಷಿ ದೂರುದಾರ.

ಆ.6, 2025: ಧರ್ಮಸ್ಥಳದ ಗ್ರಾಮ ಪಂಚಾಯತ್‌ನಿಂದ ದಾಖಲೆಗಳನ್ನು ಪಡೆದುಕೊಂಡ ಎಸ್‌ಐಟಿ ತಂಡ. 1995 ರಿಂದ 2014 ರವರೆಗೆ ಕರ್ತವ್ಯ ಮಾಡಿದ ಪಿಡಿಒ ಗಳು, ಇತರ ಅಧಿಕಾರಿಗಳು, ವಿ.ಎ ಗಳ ಬಗೆಗಿನ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡ ಎಸ್‌ ಐ ಟಿ

ಆ.6, 2025: ಧರ್ಮಸ್ಥಳ: ಕಾರ್ಯಾಚರಣೆ ಸ್ಥಗಿತಗೊಳಿಸಿ ಹಿಂತಿರುಗಿದ ಎಸ್.ಐ.ಟಿ ತಂಡ. ಸ್ಥಳದಲ್ಲಿ ಪತ್ತೆಯಾಗದ ಕಳೇಬರ.

ಆ.6, 2025: ಧರ್ಮಸ್ಥಳದಲ್ಲಿ ವರದಿ ಮಾಡುತ್ತಿದ್ದ ನಾಲ್ಕು ಮಂದಿ ಯ್ಯೂಟ್ಯೂಬರ್ ಗಳ ಮೇಲೆ ಅಪರಿಚಿತರಿಂದ ಮಾರಣಾಂತಿಕ ಹಲ್ಲೆ. ಅಜಯ್‌ ಅಂಚನ್‌, ಅಭಿಷೇಕ್‌, ವಿಜಯ್‌ ಮತ್ತು ಇನ್ನೋರ್ವ ಹಲ್ಲೆಗೆ ಒಳಗಾದ ಯ್ಯೂಟ್ಯೂಬರ್ ಗಳು. ಹಲ್ಲೆ ನಡೆಸಿದವರು ಪರಾರಿ. ಹಲ್ಲೆಗೊಳಗಾದ ಯೂಟ್ಯೂಬರ್ ಗಳು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲು.

ಆ.6, 2025:ಯೂಟ್ಯೂಬರ್‌ ಗಳ ಮೇಲೆ ಧರ್ಮಸ್ಥಳದಲ್ಲಿ ಹಲ್ಲೆಯ ಬೆನ್ನಲ್ಲೇ  ಎರಡು ಗುಂಪುಗಳ ನಡುವೆ ಘರ್ಷಣೆ. ಬಿಗುವಿನ ವಾತಾವರಣ.

ಆ.6, 2025: ಧರ್ಮಸ್ಥಳದಲ್ಲಿ ಪರಿಸ್ಥಿತಿ ಶಾಂತ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರತ್ಯೇಕ ದೂರು ದಾಖಲು ಎಂದ ಎಸ್ಪಿ ಡಾ.ಅರುಣ್ ಕೆ. ಪಾಂಗಳ, ಪೊಲೀಸ್ ಠಾಣೆ, ಆಸ್ಪತ್ರೆಯ ಮುಂದೆ ಸೇರಿದವರ ಮೇಲೂ ಪ್ರಕರಣ ದಾಖಲಿಸಲಾಗುವುದು ಎಂದ ಎಸ್ಪಿ.

ಆ.6, 2025: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಮುಂದೆ ಬಂದ ಮೂರನೇ ದೂರುದಾರ. ಮೊದಲನೇ ದೂರುದಾರನು ರಹಸ್ಯವಾಗಿ ಹೂತುಹಾಕುತ್ತಿದ್ದ ಸ್ಥಳಗಳನ್ನು ನೋಡಿದ್ದೇನೆ. ಮೃತದೇಹಗಳ ಕಳೇಬರಗಳನ್ನು ಹೊರತೆಗೆಯುವ ಕಾರ್ಯಾಚರಣೆಯಲ್ಲಿ ನನ್ನನ್ನೂ ಸೇರಿಸಿ. ಎಸ್‌ಐಟಿ ರಚನೆಯಾದ ಬಳಿಕ ಭಯಹೋಗಿದೆ. ತನಿಖೆಗೆ ನೆರವು ನೀಡಲು ಸಿದ್ಧ ಎಂದು ಮೂರನೇ ದೂರುದಾರ.

ಆ.6, 2025: ಧರ್ಮಸ್ಥಳ ಪ್ರಕರಣ ಕುರಿತು ಹೈಕೋರ್ಟ್ ಮೆಟ್ಟಿಲೇರಿದ 'ದಿ ನ್ಯೂಸ್ ಮಿನಿಟ್' ವೆಬ್ ಪೋರ್ಟಲ್. ಪ್ರತ್ಯೇಕ ಎರಡು ಮಾಧ್ಯಮಗಳ ನಿರ್ಬಂಧ ಆದೇಶಗಳನ್ನು ಆಧರಿಸಿ 'ದಿ ನ್ಯೂಸ್ ಮಿನಿಟ್' ವೆಬ್‌ಪೋರ್ಟಲ್‌ನ ವರದಿಗಾರಿಕೆಗೆ ಅಡ್ಡಿಪಡಿಸುತ್ತಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ. 

ಆ.7, 2025: ಧರ್ಮಸ್ಥಳ ಘರ್ಷಣೆಗೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡಲು ಸೂಚನೆ ಎಂದ ಗೃಹ ಸಚಿವ ಜಿ.ಪರಮೇಶ್ವರ್‌. ಧರ್ಮಸ್ಥಳದಲ್ಲಿ ನಿನ್ನೆ ಎರಡು ಗುಂಪುಗಳ ಮಧ್ಯೆ ಗುಂಪು ಘರ್ಷಣೆ ಯಾಕಾಗಿದೆ, ಯಾರು ಕಾರಣಕರ್ತರು, ಎರಡು ಗುಂಪಿನ ಉದ್ದೇಶ ಏನಿದೆ ಎಂಬುದರ ಕುರಿತು ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದೇನೆ ಎಂದ ಗೃಹ ಸಚಿವ.

ಆ.7, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಗಳ ಪ್ರತಿಬಂಧಕಾದೇಶ ವಿಸ್ತರಣೆಗೆ ಕೋರ್ಟ್ ನಕಾರ. ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವ ಪ್ರಕರಣದ ಪ್ರಸಾರ/ಪ್ರಕಟಣೆಗೆ ಮಾಧ್ಯಮಗಳನ್ನು ‌ನಿರ್ಬಂಧಿಸಿ ಹೊರಡಿಸಲಾಗಿದ್ದ ಏಕಪಕ್ಷೀಯ ಪ್ರತಿಬಂಧಕಾದೇಶ ವಿಸ್ತರಣೆಗೆ ಕೋರಿ ಧರ್ಮಸ್ಥಳ ಮಂಜುನಾಥ ದೇವಸ್ಥಾನದ ಆಡಳಿತ ಮಂಡಳಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಿದ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯ. 

ಆ.7, 2025: ಧರ್ಮಸ್ಥಳ ಘರ್ಷಣೆಗೆ ಸಂಬಂಧಿಸಿ ಬೆಳ್ತಂಗಡಿ, ಧರ್ಮಸ್ಥಳ ಠಾಣೆಗಳಲ್ಲಿ ಪ್ರಕರಣಗಳು ದಾಖಲು. ಸುವರ್ಣ ನ್ಯೂಸ್‌ ಚಾನೆಲ್‌, ವರದಿಗಾರನ ವಿರುದ್ಧವೂ ಪ್ರಕರಣ ದಾಖಲು.

ಆ.7, 2025: ಸುವರ್ಣ ಸುದ್ದಿ ವಾಹಿನಿಯ ವರದಿಗಾರನ ಮೇಲೆ ಹಲ್ಲೆ ಆರೋಪದಲ್ಲಿ ತಿಮರೋಡಿ, ಸಮೀರ್, ಗಿರೀಶ್ ಮಟ್ಟಣ್ಣನವರ್ ಸಹಿತ ಹಲವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಉಜಿರೆಯ ಖಾಸಗಿ ಆಸ್ಪತ್ರೆಗೆ ವರದಿ ಮಾಡಲೆಂದು ತೆರಳಿದ ವೇಳೆ ಚಾನೆಲ್ ನ ಲೋಗೋ ನೋಡಿ ತಡೆದ ತಂಡ ತನ್ನ ಮೇಲೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ ವರದಿಗಾರ ಹರೀಶ್‌.

ಆ.7, 2025: ಧರ್ಮಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ. ಧರ್ಮಸ್ಥಳದಲ್ಲಿ ಚಿತ್ರೀಕರಣ ಮಾಡುತ್ತಿದ್ದವರ ವಿರುದ್ಧ ಅಪರಿಚಿತರಿಂದ ಹಲ್ಲೆಯಾಗಿದ್ದು, ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದ ಸಿಎಂ.

 ಆ.7, 2025:   ನಾಲ್ಕು ಮಂದಿ ಯೂಟ್ಯೂಬರ್ ಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿ ಸೆರೆ. ಕನ್ಯಾಡಿ ನಿವಾಸಿ, ಜೀಪು ಚಾಲಕ ಸೋಮನಾಥ ಸಫಲ್ಯ ಬಂಧಿತ ಆರೋಪಿ. 

ಆ.7, 2025:  ಧರ್ಮಸ್ಥಳ ದೂರಿಗೆ ಸಂಬಂಧಿಸಿದಂತೆ ರಚನೆ ಮಾಡಿರುವ ಎಸ್ ಐ ಟಿ ಯಿಂದ ಐಪಿಎಸ್‌ ಅಧಿಕಾರಿ ದಯಾಮ ಅವರನ್ನು ಕೈಬಿಡುವಂತೆ ಡಿಜಿ, ಐಜಿಪಿಗೆ ಪತ್ರ ಬರೆದ ವಕೀಲ ಸೂರ್ಯ ಮುಕುಂದರಾಜ್. ಜಿತೇಂದ್ರ ಕುಮಾರ್ ದಯಾಮಾ ಅವರು ಪ್ರೊಬೆಷನರಿ ಅಧಿಕಾರಿಯಾಗಿದ್ದಾಗ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ವ್ಯಕ್ತಿಯೊಬ್ಬರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಎರಡು ವರ್ಷ ಶಿಕ್ಷೆಗೆ ಕಾರಣವಾಗಿದ್ದರು. ಅವರ ವಿರುದ್ಧ ಇಲಾಖಾ ವಿಚಾರಣೆಗೆ ನ್ಯಾಯಾಲಯ ಆದೇಶಿಸಿತ್ತು ಎಂದ ವಕೀಲ ಸೂರ್ಯ ಮುಕುಂದರಾಜ್‌.

ಆ.7, 2025:  ಎಸ್‍ಐಟಿಗೆ ಹೆಚ್ಚಿನ ಮಾಹಿತಿ ಲಭ್ಯವಾದರೆ, ಪರಿಶೀಲನೆ ಎಂದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್. ಎಸ್‌ ಐ ಟಿ ಯಿಂದ ಪಾರದರ್ಶಕ ತನಿಖೆ ನಡೆಯುತ್ತಿದೆ ಎಂದ ಸಚಿವರು.

ಆ.7, 2025: ಸೌಜನ್ಯ, ಧರ್ಮಸ್ಥಳ ಪ್ರಕರಣದ ಪ್ರಮುಖ ಆರೋಪಿ ಯಾರೆಂದು ತಿಳಿಸಬೇಕು ಎಂದು ಆಗ್ರಹಸಿದ ಹಿರಿಯ ವಕೀಲ ಎಸ್‌.ಬಾಲನ್. ಧರ್ಮಸ್ಥಳದಲ್ಲಿ ನಡೆದ ಯೂಟ್ಯೂಬರ್ ಹಾಗೂ ಪತ್ರಕರ್ತರ ಮೇಲಿನ ಹಲ್ಲೆಯನ್ನು ಖಂಡಿಸಿ ಬೆಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ‘ಖಂಡನಾ ಸಭೆ’ಯಲ್ಲಿ ಮಾತನಾಡಿದ ಬಾಲನ್‌. 

ಆ.7, 2025: ಧರ್ಮಸ್ಥಳದಲ್ಲಿ ಯೂಟ್ಯೂಬರ್‌ ಗಳ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದಾಕ್ಷಣ್ಯ  ಕ್ರಮಕ್ಕಾಗಿ ಡಿಜಿ-ಐಜಿಪಿಗೆ ವಕೀಲರಿಂದ ದೂರು. ವಕೀಲರಾದ ಎ.ಪಿ.ರಂಗನಾಥ್ ಹಾಗೂ ಎಸ್.ಬಾಲನ್ ಅವರಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರಿಗೆ ದೂರು. ಮುಖ್ಯ ವಾಹಿನಿಗಳು ವರದಿ ಮಾಡದ್ದನ್ನು ಯೂಟ್ಯೂಬರ್‌ ಗಳು ಮಾಡುತ್ತಿದ್ದಾರೆ. ಯಾವುದೇ ಭಯವಿಲ್ಲದೇ ತನಿಖಾ ಪತ್ರಿಕೋದ್ಯಮ ನಡೆಸುವ ಅವಶ್ಯಕತೆ ಇದೆ. ಅದನ್ನು ಯೂಟ್ಯೂಬರ್ ಗಳು ಧೈರ್ಯವಾಗಿ ಮಾಡುತ್ತಿದ್ದಾರೆ. ಈ ಕೃತ್ಯ ಅವರ ದ್ವನಿ ಅಡಗಿಸುವ ತಂತ್ರವಲ್ಲದೆ ಬೇರೇನು ಅಲ್ಲ ಎಂದು ಆಕ್ರೋಶ.

ಆ.7, 2025: ಧರ್ಮಸ್ಥಳ ದೂರಿಗೆ ಸಂಬಂಧಿಸಿದಂತೆ SIT ಕಚೇರಿಗೆ ಪೋಲೀಸ್ ಠಾಣೆ ಮಾನ್ಯತೆ ನೀಡಲು ವಿಳಂಬವಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಎನ್‌. 

ಆ.7, 2025: ಧರ್ಮಸ್ಥಳದಲ್ಲಿ ಯೂಟ್ಯೂಬರ್‌ಗಳ ಮೇಲೆ ಹಲ್ಲೆ ಖಂಡನೀಯ ಎಂದ ಭಾರತ ಕಮ್ಯುನಿಷ್ಟ್ ಪಕ್ಷ(ಸಿಪಿಐ)ದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್. ಎಸ್‌ಐಟಿ ತನಿಖೆ ಮುಕ್ತಾಯವಾಗಿ ಆಪಾದಿತರನ್ನು ಬಂಧಿಸುವವರೆಗೂ ಹಲ್ಲೆಕೋರರನ್ನು ಬಂಧನದಲ್ಲೇ ಇಡುವ ಅಥವಾ ಜಿಲ್ಲೆಯಿಂದ ಗಡೀಪಾರು ಮಾಡುವ ಕ್ರಮಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ.

 ಆ.8, 2025: ಹೊಸ ಸ್ಥಳದಲ್ಲಿ ಪರಿಶೀಲನೆ ಆರಂಭಿಸಿದ ಎಸ್ಐಟಿ ತಂಡ. ಧರ್ಮಸ್ಥಳ ಗ್ರಾಮದ ಬೊಳಿಯಾರ್ ಗೋಂಕ್ರತಾರ್ ಸಮೀಪಕ್ಕೆ  ಸಾಕ್ಷಿ ದೂರುದಾರನೊಂದಿಗೆ ಆಗಮಿಸಿದ ಎಸ್.ಐ.ಟಿ ತಂಡ.

ಆ.8, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕನ ಮಂಪರು ಪರೀಕ್ಷೆ ಮಾಡಿಸಿ ಎಂದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ. ದೂರುದಾರನ ಆರೋಪದಲ್ಲಿ ಹುರುಳು ಇದ್ದಂತೆ ಕಾಣುತ್ತಿಲ್ಲ. ಆತ ಯಾವ ಆಧಾರದಲ್ಲಿ ಆರೋಪ ಮಾಡುತ್ತಿದ್ದಾನೆ ಎಂಬುದು ಸ್ಪಷ್ಟವಾಗಲು ಮಂಪರು ಪರೀಕ್ಷೆ ನಡೆಸಲು ಆಗ್ರಹಿಸಿದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ.

ಆ.8, 2025: ಬೋಳಿಯಾರು ಅರಣ್ಯದಲ್ಲಿ ಪತ್ತೆಯಾಗದ ಕಳೇಬರ. ಎಸ್‌ ಐಟಿ ಕಾರ್ಯಾಚರಣೆ ಸ್ಥಗಿತ. 

ಆ.8, 2025: ಧರ್ಮಸ್ಥಳದಲ್ಲಿ ಯೂಟ್ಯೂಬರ್ ಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಎಸ್‌ಡಿಪಿಐ ನಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ. ಹಲ್ಲೆ ಪೂರ್ವಯೋಜಿತ ಮತ್ತು ಸಾಕ್ಷಿ ದೂರುದಾರನ ಪ್ರಕರಣದ ದಿಕ್ಕು ತಪ್ಪಿಸಲು ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಭಾಗ ಎಂದು ಆರೋಪ.

ಆ.8, 2025: ಧರ್ಮಸ್ಥಳ ದೂರಿಗೆ ಸಂಬಂಧಿಸಿದಂತೆ ಮಾಧ್ಯಮ ವರದಿಗಾರಿಕೆಗೆ ನಿರ್ಬಂಧ ವಿಧಿಸಲು ಸುಪ್ರೀಂ ಕೋರ್ಟ್ ನಕಾರ. ವಿಚಾರಣಾ ನ್ಯಾಯಾಲಯಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಲು ನಿರ್ದೇಶನ. ಪ್ರಕರಣದ ತನಿಖೆಯ ಬಗ್ಗೆ ವರದಿ ಮಾಡದಂತೆ ಮಾಧ್ಯಮಗಳನ್ನು ನಿರ್ಬಂಧಿಸಬೇಕು ಎಂದು ಹರ್ಷೇಂದ್ರ ಕುಮಾರ್ ಸಲ್ಲಿಸಿದ್ದ ಅರ್ಜಿ. ವಿಚಾರಣೆಯನ್ನು ಹೊಸದಾಗಿ ನಡೆಸುವಂತೆ ಕರ್ನಾಟಕದ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದ ಸುಪ್ರೀಂ ಕೋರ್ಟ್‌. 

ಆ.8, 2025: ಧರ್ಮಸ್ಥಳ ದೂರಿಗೆ ಸಂಬಂಧಿಸಿದಂತೆ ಎಸ್‍ಐಟಿಗೆ ಪೊಲೀಸ್ ಠಾಣಾ ಅಧಿಕಾರ ನೀಡಿ ರಾಜ್ಯ ಸರಕಾರ ಆದೇಶ. ಎಸ್‍ಐಟಿಗೆ ಪೊಲೀಸ್ ಠಾಣಾ ಅಧಿಕಾರ ನೀಡಿರುವುದರಿಂದ ಸ್ವತಂತ್ರವಾಗಿ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಬಹುದು. ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ನಿಗೂಢ ಕೊಲೆ, ಆತ್ಮಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಹಿಂದಿನ ಪ್ರಕರಣಗಳನ್ನು ಮರುತನಿಖೆ ಮಾಡಬಹುದು ಎಂದು ಆದೇಶದಲ್ಲಿ ಉಲ್ಲೇಖ.

ಆ.9, 2025: ಎಸ್ಐಟಿ ಕಚೇರಿಗೆ ಆಗಮಿಸಿದ ಎರಡನೇ ದೂರುದಾರ ಜಯಂತ್ ಟಿ. ಮಾಹಿತಿ ಕಲೆ ಹಾಕಿದ ಎಸ್ಐಟಿ ತಂಡ.

ಆ.9, 2025: ರಾಜ್ಯ ಸರ್ಕಾರ ಕೂಡಲೇ ಅನಾಮಿಕ ವ್ಯಕ್ತಿಯನ್ನು ಬಂಧಿಸಬೇಕು ಎಂದ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ. ಧರ್ಮಸ್ಥಳ ವಿಚಾರವನ್ನು ಹಿಡಿದುಕೊಂಡು ಧರ್ಮಸ್ಥಳದ ಹೆಸರನ್ನು ಹಾಗೂ ಹೆಗ್ಗಡೆಯವರ ಹೆಸರನ್ನು ಹಾಳು ಮಾಡುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪ.

ಆ.9, 2025: ಧರ್ಮಸ್ಥಳ ದೂರಿಗೆ ಸಂಬಂಧಿಸಿದಂತೆ ದೂರುದಾರ ಸಾಕ್ಷಿಯೊಂದಿಗೆ ಹೊಸ ಸ್ಥಳದಲ್ಲಿ ಎಸ್.ಐ.ಟಿ. ತಂಡದಿಂದ ಪರಿಶೀಲನೆ. ಬೆಳಗ್ಗೆ 10:15 ಗಂಟೆ ಸುಮಾರಿಗೆ ಪೊಲೀಸ್ ಬಂದೋಬಸ್ತ್ ನಲ್ಲಿ ಬೆಳ್ತಂಗಡಿ ಎಸ್.ಐ.ಟಿ. ಕಚೇರಿಗೆ ಆಗಮಿಸಿದ ದೂರುದಾರ. ಅಲ್ಲಿಂದ 12:05ಕ್ಕೆ ಬೆಳ್ತಂಗಡಿಯಿಂದ ಹೊರಟು 12.45 ಸುಮಾರಿಗೆ ಧರ್ಮಸ್ಥಳ ಗ್ರಾಮಕ್ಕೆ ಆಗಮನ.

ಆ.9, 2025: ಧರ್ಮಸ್ಥಳ ದೂರಿಗೆ ಸಂಬಂಧಿಸಿದಂತೆ ಬಾಹುಬಲಿ ಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶದಲ್ಲಿ ಸಾಕ್ಷ್ಯ ನಾಶ ಯತ್ನ ನಡೆದಿದೆ ಎಂದು ಸುಜಾತಾ ಭಟ್ ಪರ ವಕೀಲರಿಂದ ಗಂಭೀರ ಆರೋಪ. ಫೋಟೋ ಸಹಿತ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿದ ವಕೀಲ ಮಂಜುನಾಥ್ ಎನ್. ಸುಮಾರು 10 ಅಡಿ ಎತ್ತರದ ಹೊಸಮಣ್ಣು ಮತ್ತು ತ್ಯಾಜ್ಯ ಸುರಿದಿರುವಂತೆ ಕಾಣುತ್ತದೆ ಎಂದು ಆರೋಪ.

ಆ.9, 2025: ಧರ್ಮಸ್ಥಳದ ಬಾಹುಬಲಿ ಬೆಟ್ಟದಲ್ಲಿ ಕಾರ್ಯಾಚರಣೆ ಅಂತ್ಯ. ಬಾಹುಬಲಿ ಬೆಟ್ಟದಲ್ಲಿ ದಿನವಿಡಿ ನಡೆದ ಕಾರ್ಯಾಚರಣೆ. ಸ್ಥಳದಲ್ಲಿ ಯಾವುದೇ ಕುರುಹುಗಳು ಲಭ್ಯವಾಗಿಲ್ಲ. ಮಧ್ಯಾಹ್ನದಿಂದ ಬಾಹುಬಲಿ ಬೆಟ್ಟದ ರಸ್ತೆಯ ಬದಿಯಲ್ಲಿ ಕಾರ್ಯಾಚರಣೆ ಆರಂಭಿಸಲಾಯಿತು. 16ನೆಯ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ್ದು, ಅದು ಮುಗಿದ ಬಳಿಕ ಅದರ ಸಮೀಪವೇ ಮತ್ತೊಂದು ಸ್ಥಳದಲ್ಲಿಯೂ ಅಗೆಯುವ ಕಾರ್ಯ ನಡೆಯಿತು. ಆದರೆ ಅಲ್ಲಿಯೂ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ.

ಆ.9, 2025: ಧರ್ಮಸ್ಥಳದಲ್ಲಿ ಯೂಟ್ಯೂಬರ್‌ ಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳ ಬಂಧನ. ಧರ್ಮಸ್ಥಳ ನಿವಾಸಿಗಳಾದ ಪದ್ಮಪ್ರಸಾದ್, ಸುಹಾಸ್, ಗುರುಪ್ರಸಾದ್, ಶಶಿಕುಮಾರ್, ಕಲಂದರ್, ಚೇತನ್ ಬಂಧಿತರು.

ಆ.10, 2025: ಧರ್ಮಸ್ಥಳ ದೂರು ಸಂಬಂಧಿತ ಎಸ್‌ಐಟಿ ಕಾರ್ಯಾಚರಣೆಯ ಕಳೇಬರ ಶೋಧಕ್ಕೆ GPR ಬಳಸಿ ಎಂದು ಮತ್ತೆ ಒತ್ತಾಯಿಸಿದ ಸುಜಾತ ಭಟ್ ಪರ ವಕೀಲ ಮಂಜುನಾಥ್ ಎನ್. ಅಗೆತ ನಡೆಸಿದ ಸ್ಥಳದಿಂದ ಕೇವಲ ಒಂದು ಅಡಿ ದೂರ ಅಥವಾ ಆಳದಲ್ಲಿ ಕಳೇಬರಗಳಿಲ್ಲವೆಂದು ಖಚಿತಪಡಿಸಲು ಯಾರಿಗೂ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ತಕ್ಷಣವೇ ಗ್ರೌಂಡ್ ಪೆನೆಟ್ರೇಟಿಂಗ್ ರೇಡಾರ್ (GPR) ಉಪಕರಣದ ಬಳಕೆಯನ್ನು ಆರಂಭಿಸುವ ಅಗತ್ಯವಿದೆ ಎಂದ ವಕೀಲರು.

ಆ.11, 2025: ಪದ್ಮಲತಾ ಅತ್ಯಾಚಾರ ಹತ್ಯೆ ಪ್ರಕರಣ ಕುರಿತಂತೆ ಎಸ್ಐಟಿಗೆ ದೂರು ನೀಡಲು ಆಗಮಿಸಿದ ಮೃತಳ ಸಹೋದರಿ. 39 ವರ್ಷಗಳ ಹಿಂದಿನ ಪ್ರಕರಣದ ಮರುತನಿಖೆಗೆ ಆಗ್ರಹ. ಪದ್ಮಲತಾ ಅವರ ಸಹೋದರಿ ಇಂದ್ರಾವತಿ ಅವರು ಸಿಪಿಎಂ ಪಕ್ಷದ ಮುಖಂಡ ಬಿ.ಎಂ.ಭಟ್ ಹಾಗೂ ಇತರರೊಂದಿಗೆ ಎಸ್ಐಟಿ ಕಚೇರಿಗೆ ಆಗಮಿಸಿದರು.1986ರಲ್ಲಿ ಬೋಳಿಯಾರು ನಿವಾಸಿ ಪದ್ಮಲತಾ ಅವರನ್ನು ಅತ್ಯಾಚಾರಗೈದು ಕೊಲೆಗೈಯಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.

ಆ.11, 2025: ಪದ್ಮಲತಾ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆದರೆ ಸತ್ಯ ಹೊರಬರುವ ವಿಶ್ವಾಸವಿದೆ ಎಂದ ಪದ್ಮಲತಾ ಅವರ ಸಹೋದರಿ ಇಂದ್ರಾವತಿ. ಹಲವು ಹಂತದ ತನಿಖೆಗಳು ನಡೆದಿದ್ದರೂ ನಮಗೆ ನ್ಯಾಯ ಸಿಕ್ಕಿಲ್ಲ. ಸಿಒಡಿ ತನಿಖೆ ನಡೆಸಿ 'ಪತ್ತೆಯಾಗದ ಪ್ರಕರಣ' ಎಂದು ವರದಿ ನೀಡಿದ್ದಾರೆ. ಪದ್ಮಲತಾಳ ಹತ್ಯೆಯಾಗಿ 39 ವರ್ಷಗಳು ಕಳೆದಿವೆ. ಈ ಬಗ್ಗೆ ತನಿಖೆ ಮಾಡಿದರೆ ಈಗಲೂ ಸತ್ಯ ಹೊರಬರುವ ನಿರೀಕ್ಷೆಯಿದೆ ಎಂದ ಇಂದ್ರಾವತಿ.

ಆ.11, 2025: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ ಐ ಟಿ ಕಾರ್ಯಾಚರಣೆಗೆ ಜಿ.ಪಿ.ಆ‌ರ್ ಯಂತ್ರ ಬಳಸಲು ಮುಂದಾದ ಎಸ್‌ಐಟಿ. ಜಿ.ಪಿ.ಆರ್ ತಜ್ಞರ ತಂಡ ಸಾಕ್ಷಿ ದೂರುದಾರ ಗುರುತಿಸಿದ 13ನೆಯ ಸ್ಥಳದಲ್ಲಿ ಕಾರ್ಯಾಚರಣೆ ಆರಂಭಿಸಿತು.

ಆ.11, 2025: ಧರ್ಮಸ್ಥಳ ದೂರು ಪ್ರಕರಣದಲ್ಲಿ ಶವ ಸಿಗಲಿಲ್ಲವಾದರೆ ಅನಾಮಿಕ ವ್ಯಕ್ತಿಯನ್ನು ನೇಣಿಗೆ ಹಾಕಬೇಕು ಎಂದು ಆಗ್ರಹಿಸಿದ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸದ್ಯ ತನಿಖೆ ನಡೆಯುತ್ತಿದ್ದು, ಎಲ್ಲೂ ಶವಗಳು ಸಿಗಲಿಲ್ಲ ಅಂದಾಗ ಅನಾಮಿಕನನ್ನು ಬಿಡಲು ಸಾಧ್ಯವಿಲ್ಲ. ಅವನನ್ನು ನೇಣಿಗೆ  ಹಾಕಬೇಕು ಎಂದು ಆಗ್ರಹಿಸಿದರು.

ಆ.11, 2025: ಅಧಿವೇಶನದಲ್ಲಿ ಮೇಲ್ಮನೆಯಲ್ಲಿ ಚರ್ಚೆಗೆ ಬಂದ ಧರ್ಮಸ್ಥಳ ಪ್ರಕರಣ. ತನಿಖಾ ಪ್ರಗತಿಯ ವರದಿ ಬಹಿರಂಗಪಡಿಸಲು ಬಿಜೆಪಿಯಿಂದ ಒತ್ತಾಯ.

ಆ.11, 2025: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಜಯಂತ್‌ ಟಿ.ಗೆ ಬೆದರಿಕೆ ಆರೋಪ.  17 ಮಂದಿಯ ವಿರುದ್ಧ ದೂರು ನೀಡಿದ ಜಯಂತ್ ಟಿ. ವಸಂತ್ ಗಿಳಿಯಾರು, ಕಿರಿಕ್ ಕೀರ್ತಿ, ವಿಕಾಸ್ ಶಾಸ್ತ್ರಿ, ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಎಂಬವರನ್ನು ದೂರಿನಲ್ಲಿ ಉಲ್ಲೇಖಿಸಿದ ದೂರುದಾರ್‌ ಜಯಂತ್‌.

ಆ.11, 2025:  ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ʼದಿ ನ್ಯೂಸ್ ಮಿನಿಟ್ʼ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್. ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಏಕಪಕ್ಷೀಯ ಪ್ರತಿಬಂಧಕಾದೇಶವನ್ನು 'ಕುಡ್ಲ ರ‍್ಯಾಂಪೇಜ್‌' ಯೂಟ್ಯೂಬ್ ಚಾನೆಲ್‌ಗೆ ಸೀಮಿತವಾಗಿ ರದ್ದುಪಡಿಸಿರುವುದನ್ನು ತಮಗೂ ವಿಸ್ತರಿಸುವಂತೆ ಕೋರಿ 'ದಿ ನ್ಯೂಸ್‌ ಮಿನಿಟ್‌' ವೆಬ್‌ ಪೋರ್ಟಲ್‌ನ ಮಾತೃ ಸಂಸ್ಥೆ ಸ್ಪಂಕ್‌ಲೇನ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿತು.

ಆ.11, 2025:ಸೌಜನ್ಯಾ ಕೊಲೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ವರದಿಗಾರಿಕೆಗೆ ಅಡ್ಡಿ ಮಾಡುತ್ತಿರುವುದನ್ನು ಪ್ರಶ್ನಿಸಿ 'ದಿ ನ್ಯೂಸ್‌ ಮಿನಿಟ್‌' ಪ್ರತ್ಯೇಕವಾಗಿ ಸಲ್ಲಿಸಿರುವ ಮತ್ತೊಂದು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಆಗಸ್ಟ್‌ 18ಕ್ಕೆ ಮುಂದೂಡಿತು.

ಆ.11, 2025: ಧರ್ಮಸ್ಥಳ ದೂರಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ಸುಮೋಟೋ ಪ್ರಕರಣ ದಾಖಲು. ಧರ್ಮಸ್ಥಳಕ್ಕೆ ಭೇಟಿ, ದಾಖಲೆ ಪರಿಶೀಲನೆ. ನಾಲ್ವರು ಸದಸ್ಯರ ತಂಡವು  ಧರ್ಮಸ್ಥಳಕ್ಕೆ ಭೇಟಿ ನೀಡಿ, ವಿವಿಧ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿತು.

ಆ.12, 2025:ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ 13ನೇ ಗುರುತಿಸಿದ ಸ್ಥಳದಲ್ಲಿ GPR ಬಳಸಿ ಶೋಧ. 

ಆ.12, 2025: ವಿಧಾನಸಭೆಯಲ್ಲಿ ಧರ್ಮಸ್ಥಳ ಪ್ರಕರಣ ಪ್ರಸ್ತಾಪ. ತನಿಖಾ ವರದಿ ಬಿಡುಗಡೆಗೊಳಿಸಲು ಬಿಜೆಪಿಯಿಂದ ಒತ್ತಾಯ. ಎಸ್ಐಟಿ ತನಿಖೆಯ ಮಾಹಿತಿ ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್.

ಆ.12, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಮೊದಲ ಹಂತದ ಜಿಪಿಆರ್ ಶೋಧ ಕಾರ್ಯಾಚರಣೆ ಪೂರ್ಣ. ಎಸ್ಐಟಿ ಮುಖ್ಯಸ್ಥ ಡಾ.ಪ್ರಣವ್ ಮೊಂಹಾತಿ ಸ್ಥಳಕ್ಕೆ ಆಗಮನ. ಸಾಕ್ಷಿ ದೂರುದಾರ ಗುರುತಿಸಿದ 13ನೇ ಸ್ಥಳದ ಸುತ್ತ ಮಾತ್ರವಲ್ಲದೇ, ನೇತ್ರಾವತಿ ಅಜಿಕುರಿ ರಸ್ತೆಯ ಸುಮಾರು ನೂರು ಮೀಟರ್ ಗೂ ಅಧಿಕ ದೂರದ ವರೆಗೂ ರಸ್ತೆ ಬದಿಯಲ್ಲಿ ಜಿಪಿಆರ್ ಸ್ಕ್ಯಾನಿಂಗ್ ಕಾರ್ಯ.

ಆ.12, 2025: 13ನೇ ಸ್ಥಳದಲ್ಲಿ ಜಿಪಿಆರ್ ಶೋಧದ ಬಳಿಕ ಉತ್ಖನನ ಕಾರ್ಯ. ಜಿಪಿಆರ್ ಮೂಲಕ ನಡೆಸಿದ ಸ್ಥಳದಲ್ಲಿ ಹಿಟಾಚಿ ಬಳಸಿ ಉತ್ಖನನ ಕಾರ್ಯ.

ಆ.13, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಕಚೇರಿಗೆ ಆಗಮಿಸಿದ ಇಬ್ಬರು ಹೊಸ ದೂರುದಾರರು. ಈ ಹಿಂದೆಯೇ ದೂರು ನೀಡಿದ್ದ ಧರ್ಮಸ್ಥಳ ಗ್ರಾಮದ ನಿವಾಸಿಗಳಾದ ಪುರಂದರ ಗೌಡ ಹಾಗೂ ತುಕಾರಾಮ ಗೌಡ ಅವರು  ತ್ತೆ ಎಸ್.ಐ.ಟಿ ಕಚೇರಿಗೆ ಆಗಮಿಸಿದರು. 

ಆ.13, 2025: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಯಿಂಟ್ 13ನೇ ಪಾಯಿಂಟ್‌ ನ ಪಕ್ಕದಲ್ಲಿ ಮುಂದುವರಿದ ಕಾರ್ಯಾಚರಣೆ. 

ಆ.13, 2025: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ಕಲಬುರಗಿಯಲ್ಲಿ ಪ್ರತಿಭಟನೆ. ಕಲಬುರಗಿಯ ಶ್ರೀ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯಿಂದ ನಡೆದ ಪ್ರತಿಭಟನೆ. 

ಆ.13, 2025: ಧರ್ಮಸ್ಥಳ ದೂರಿಗೆ ಸಂಬಂಧಿಸಿದಂತೆ ಅನಿಯಂತ್ರಿತ ಅಗೆಯುವಿಕೆಯಿಂದ ಸಾಮೂಹಿಕ ಅಂತ್ಯಕ್ರಿಯೆಯ ಸಾಕ್ಷ್ಯ ನಾಶವಾಗಬಹುದು ಎಂದು ಎಸ್‌ಐಟಿಗೆ ಮಣ್ಣಿನ ವಿಜ್ಞಾನಿಗಳಿಂದ ಎಚ್ಚರಿಕೆ. ಧರ್ಮಸ್ಥಳದಲ್ಲಿ ಹುಡುಕಬೇಕಾಗಿರುವುದು ಮೂಳೆಯ ಅವಶೇಷಗಳಿರುವ ರಾಸಾಯನಿಕ ಮಣ್ಣು. ಅಸ್ತಿಪಂಜರ, ಕಳೇಬರವಲ್ಲ ಎಂದು ಎಸ್‌ ಐ ಟಿ ಗೆ ಮನವಿ.

ಆ.13, 2025: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ತುಮಕೂರಿನಲ್ಲಿ ಪ್ರತಿಭಟನೆ. ಶ್ರೀಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ಯತ್ನಿಸಿ, ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವವರನ್ನು ಕೂಡಲೇ ಬಂಧಿಸಬೇಕು. ತನಿಖೆಗೆ ಒಳಸಪಡಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ

ಆ.13, 2025: ಧರ್ಮಸ್ಥಳ ವಿಚಾರದಲ್ಲಿ ಸೂಕ್ಷ್ಮವಾಗಿ ವರ್ತಿಸಬೇಕಿದ್ದ ರಾಜ್ಯ ಸರಕಾರ ಅತ್ಯಂತ ಬೇಜವಾಬ್ದಾರಿತನದಿಂದ ನಡೆದುಕೊಂಡಿದೆ ಎಂದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ. ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಿದ ಸಿಎಂ ಈಗ ಸರಕಾರದ ಪಾತ್ರವಿಲ್ಲವೆಂದು ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಆರೋಪ.

ಆ.13, 2025:  ಧರ್ಮಸ್ಥಳ ವಿರುದ್ಧ ಸುಳ್ಳು ಅರೋಪ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೊಪ್ಪಳದಲ್ಲಿ ಧರಣಿ. ಕೊಪ್ಪಳ ಜೈನ ದಿಗಂಬರ ಸಮಾಜ ಸಂಘದ ವತಿಯಿಂದ ಪ್ರತಿಭಟನೆ.

ಆ.13, 2025:  ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ.ಪರಮೇಶ್ವರ್ ಭೇಟಿಯಾದ ಎಸ್‍ಐಟಿ ಅಧಿಕಾರಿಗಳು. ಎಸ್‍ಐಟಿ ಅಧಿಕಾರಿಗಳಾದ ಪ್ರಣವ್ ಮೊಹಂತಿ, ಅನುಚೇತ್ ಅವರು ಬುಧವಾರ ವಿಧಾನಸೌಧದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. 

 ಆ.13, 2025: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಧರ್ಮಸ್ಥಳ ಪ್ರಕರಣದ ಕುರಿಂತಂತೆ ಚರ್ಚೆ. ಈ ಪ್ರಕರಣದಲ್ಲಿ ಯಾರೂ ಭಾವನಾತ್ಮಕವಾಗಿ ಹೇಳಿಕೆ ನೀಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ. 

ಆ.13, 2025: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ಯಾದಗಿರಿಯಲ್ಲಿ ಪ್ರತಿಭಟನೆ. 

ಆ.14, 2025: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರನ್ನು ಗುಂಡಿಕ್ಕಿ ಕೊಲ್ಲಿ ಎಂದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ. ಹೊನ್ನಾಳಿಯಲ್ಲಿ ಧರ್ಮಸ್ಥಳ ಭಕ್ತರ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಹೇಳಿಕೆ ನೀಡಿದ ರೇಣುಕಾಚಾರ್ಯ. 

ಆ.14, 2025: ಧರ್ಮಸ್ಥಳ ಪ್ರಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ತೋರಿಸಿದ ಹೊಸ ಸ್ಥಳದಲ್ಲಿ ಎಸ್ಐಟಿ ಶೋಧ ಕಾರ್ಯ. ನೇತ್ರಾವತಿ ನದಿ ಬದಿಯಲ್ಲಿಯೇ ಇರುವ ಖಾಸಗಿ ಸ್ಥಳದಲ್ಲಿ ಕಾರ್ಯಾಚರಣೆ.

ಆ.14, 2025: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ India Today ಯೊಂದಿಗೆ ಮಾತನಾಡಿದ ದೂರುದಾರ ಸಾಕ್ಷಿ. ದೇವಾಲಯದ ಮಾಹಿತಿ ಕೇಂದ್ರದ ಸೂಚನೆಯ ಮೇರೆಗೆ ನೂರಕ್ಕೂ ಹೆಚ್ಚು ಶವಗಳನ್ನು ಹೂತಿದ್ದೇನೆ ಎಂದು ʼಇಂಡಿಯಾ ಟುಡೇʼ ಸಂದರ್ಶನದಲ್ಲಿ ದೂರದಾರ ಹೇಳಿಕೆ.  2012 ರಲ್ಲಿ ಸೌಜನ್ಯ ಕೊಲೆ ನಡೆದಾಗಲೂ ನನಗೆ ಕರೆ ಬಂದಿತ್ತು ಎಂದು ಹೇಳಿದ ದೂರುದಾರ ಸಾಕ್ಷಿ. 

ಆ.14, 2025:  ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್. ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ, ಅವರ ಪರಂಪರೆ, ಧಾರ್ಮಿಕ ಸೇವೆ ಬಗ್ಗೆ ಬಿಜೆಪಿಗಿಂತ ಹೆಚ್ಚು ಕಾಳಜಿ ನಮಗಿದೆ ಎಂದು ಅಧಿವೇಶದನದಲ್ಲಿ ಹೇಳಿಕೆ ನೀಡಿದ ಡಿಸಿಎಂ.

ಆ.14, 2025:  ಧರ್ಮಸ್ಥಳದ ಮುಸುಕುಧಾರಿಯ ಹೆಸರು ಬಹಿರಂಗಪಡಿಸಿ ಎಂದು ಆಗ್ರಹಿಸಿದ ವಿಪಕ್ಷ ನಾಯಕ ಆರ್‌.ಅಶೋಕ್‌. ಷಡ್ಯಂತ್ರ ಮಾಡುತ್ತಿರುವವರನ್ನು ಪತ್ತೆ ಮಾಡಲು ಎನ್‌ಐಎ ತನಿಖೆಗೆ ವಹಿಸಿ ಎಂದು ಆಗ್ರಹ. 

ಆ.14, 2025: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಧರ್ಮಸ್ಥಳ ಪ್ರಕರಣ. ಧರ್ಮ-ರಾಜಕೀಯ ಬೇಡ, ಸತ್ಯ ಹೊರ ಬರಲಿ ಎಂದ ಗೃಹ ಸಚಿವ ಜಿ.ಪರಮೇಶ್ವರ್.

ಆ.15, 2025:ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮಕ್ಕೆ ಸರಕಾರದಿಂದ ಚಿಂತನೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್. ಪ್ರಕರಣದ ಸತ್ಯಾಂಶವನ್ನು ಗೃಹ ಸಚಿವರು ಸದನದಲ್ಲೇ ವಿವರಿಸುತ್ತಾರೆ ಎಂದು ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಡಿ ಕೆ ಶಿವಕುಮಾರ್.

ಆ.15, 2025:ಧರ್ಮಸ್ಥಳ ಗ್ರಾಮದಲ್ಲಿ ಎಸ್‌ಐಟಿ ತನಿಖೆ ವಿಚಾರವಾಗಿ ಸೋಮವಾರ ಗೃಹ ಸಚಿವರಿಂದ ಸದನದಲ್ಲಿ ಉತ್ತರ ಎಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್. ಎಸ್‌ಐಟಿ ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ನಿಜಾಂಶವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ತನಿಖೆಯ ಕುರಿತಂತೆ ಸೋಮವಾರ ಗೃಹ ಸಚಿವರು ಸದನದಲ್ಲಿ ಉತ್ತರ ನೀಡಲಿದ್ದಾರೆ. ಆ ಸಂದರ್ಭ ಎಲ್ಲಾ ವಿಚಾರ ಹೊರಬರಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ.

ಆ.15, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಿಕ ವ್ಯಕ್ತಿಯ ಕುರಿತು ತನಿಖೆ ಆಗಬೇಕು ಎಂದ ಬಿಜೆಪಿ ಡಾ.ಅಶ್ವತ್ಥನಾರಾಯಣ್. ನಿಜಕ್ಕೂ ಮಂಜುನಾಥೇಶ್ವರನನ್ನು ನಂಬಿದ್ದರೆ, ಶ್ರೀಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ಹಿಂದೆ ನಿಂತಿರುವ ವ್ಯಕ್ತಿಗಳ ತನಿಖೆ ಮಾಡಿ ಬಯಲಿಗೆಳೆಯಬೇಕು ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್.

ಆ.15, 2025: ಧರ್ಮಸ್ಥಳದ ವಿರುದ್ಧದ ಅಪಪ್ರಚಾರಕ್ಕೆ ಪೂರ್ಣವಿರಾಮ ಬೀಳಲೇಬೇಕು ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್. ನಾನು ಡಿಸಿಎಂ ನೀಡಿದ ಹೇಳಿಕೆಗೆ ದನಿಗೂಡಿಸುತ್ತೇನೆ ಎಂದ ಸಚಿವೆ.

ಆ.16, 2025: ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ತಡೆಯಲು ಪಿಐಎಲ್ ಸಲ್ಲಿಸಲಾಗುವುದು ಎಂದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ. 

ಆ.16, 2025: ಬಿಜೆಪಿಯವರಿಗೆ ರಾಜಕಾರಣಕ್ಕಾಗಿ ʼಧರ್ಮಸ್ಥಳʼ ಬೇಕಾಗಿದೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್. ಮುಸುಕುಧಾರಿ ಕೋರ್ಟ್‌ ನಲ್ಲಿ ದೂರು ಕೊಟ್ಟಾಗ, ಎಸ್ಐಟಿ ರಚನೆಯಾದಾಗ ಬಿಜೆಪಿಗರು ಯಾಕೆ ಮಾತನಾಡಲಿಲ್ಲ? ಎಂದು ಪ್ರಶ್ನೆ. ಬಿಜೆಪಿಯವರಿಗೆ ಧರ್ಮಸ್ಥಳದ ಮೇಲೆ ಪ್ರೀತಿ ಇಲ್ಲ, ಅವರಿಗೆ ಬರೀ ರಾಜಕೀಯಕ್ಕಾಗಿ ಧರ್ಮಸ್ಥಳ ಬೇಕಾಗಿದೆ ಎಂದ ಡಿಸಿಎಂ.

ಆ.16, 2025: ಅಪಪ್ರಚಾರ ಖಂಡಿಸಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ʼಧರ್ಮಸ್ಥಳ ಚಲೋʼ. 

ಆ.16, 2025: ಧರ್ಮಸ್ಥಳ ವಿಚಾರ ರಾಜಕೀಯ ವಸ್ತುವಲ್ಲ ಎಂದ ಡಿ.ಕೆ.ಸುರೇಶ್.  ಸರಕಾರ ಶೀಘ್ರದಲ್ಲೇ ತನಿಖೆಯ ಸತ್ಯಾಂಶವನ್ನು ರಾಜ್ಯದ ಜನರ ಮುಂದಿಡಲಿದೆ ಎಂದ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್.

ಆ.16, 2025:  ಧರ್ಮಸ್ಥಳದ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನರ ಕ್ಷಮೆ ಕೇಳಿ, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ. ಕಾಂಗ್ರೆಸ್ ಸಂಪೂರ್ಣ ಕಮ್ಯುನಿಸ್ಟರ ಪಕ್ಷವಾಗಿದೆ ಎಂದು ಆರೋಪ.

ಆ.16, 2025:ಧರ್ಮಸ್ಥಳ ಲಾಡ್ಜ್‌ ನಲ್ಲಿ ಪತ್ತೆಯಾದ ಮಹಿಳೆಯ ಮೃತದೇಹವನ್ನು ಪೊಲೀಸರು ಕಾನೂನಾತ್ಮಕ ಮಹಜರು ನಡೆಸಿಲ್ಲ ಎಂದು ಆರೋಪಿಸಿದ ದೂರುದಾರ ಜಯಂತ್ ಟಿ. ಬೆಳ್ತಂಗಡಿ ಎಸ್ ಐ ಟಿ ಠಾಣೆಗೆ ಶನಿವಾರ ದೂರು ನೀಡಲು ಬಂದಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು 2010ರ ಎ.6ರಂದು ಧರ್ಮಸ್ಥಳ ವಸತಿ ಗೃಹದಲ್ಲಿ ಪತ್ತೆಯಾದ ಸಂಶಯಾಸ್ಪದ ಮೃತದೇಹದ ವಿಚಾರದಲ್ಲಿ ದಫನಪೂರ್ವ ಮಹಜರು ಮತ್ತಿತರ ಕಾನೂನು ಪ್ರಕ್ರಿಯೆಗಳನ್ನು ಸಮರ್ಪಕವಾಗಿ ನಡೆಸದಿರುವುದು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಪಡೆದುಕೊಂಡಿರುವ ದಾಖಲೆಗಳಿಂದ ಬಹಿರಂಗಗೊಂಡಿದೆ ಎಂದರು.

ಆ.17, 2025: ಧರ್ಮಸ್ಥಳ ಪ್ರಕರಣದಲ್ಲಿ ರಾಜಕಾರಣ ಮಾಡಿದ್ದು ಕಾಂಗ್ರೆಸ್ ಎಂದು ಆರೋಪಿಸಿದ ವಿಪಕ್ಷ ನಾಯಕ  ಆರ್.‌ ಅಶೋಕ್‌.

ಆ.17, 2025:  ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ʼಡಿಸಿಎಂ, ಸಚಿವರು ಸೇರಿದಂತೆ ವಿಪಕ್ಷ ಸದಸ್ಯರ ಹೇಳಿಕೆಗಳು ಕಾನೂನು ವಿರೋಧಿʼ ಎಂದ ಜಾಗೃತ ನಾಗರಿಕರು ಕರ್ನಾಟಕ. ‘ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಪ್ರಕರಣವನ್ನು ತನಿಖೆ ಮಾಡಲು ಸರಕಾರವು ವಿಶೇಷ ತನಿಖಾ ದಳವನ್ನು(ಎಸ್‍ಐಟಿ) ರಚನೆ ಮಾಡಿರುವುದು ಸ್ವಾಗತಾರ್ಹ. ಆದರೆ ಉಪಮುಖ್ಯಮಂತ್ರಿ, ಸಚಿವರು ಹಾಗೂ ವಿಪಕ್ಷ ಸದಸ್ಯರು ಕಾನೂನು ವಿರೋಧಿ ಹೇಳಿಕೆಗಳು ಆಕ್ಷೇಪಾರ್ಹ’ ಎಂದು ಸಾಹಿತಿ, ಕಲಾವಿದರು, ಪ್ರಗತಿಪರರು ಸೇರಿ ಹಲವು ಗಣ್ಯರಿಂದ  ಖಂಡನೆ.

ಆ.17, 2025: ಆ. 18ರಂದು  ಸದನದಲ್ಲಿ ಧರ್ಮಸ್ಥಳ ಪ್ರಕರಣದ ಸಂಪೂರ್ಣ ವರದಿ ಮಂಡನೆ ಎಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್. ಗುಂಡ್ಲುಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಕಳೇಬರ ಶೋಧ ಪ್ರಕರಣ ಕೊನೆಯ ಹಂತಕ್ಕೆ ಬಂದಿದೆ. ಶನಿವಾರ ಕಳೇಬರ ಶೋಧ ನಿಲ್ಲಿಸಿರುವ ಎಸ್ಐಟಿ, ಠಾಣೆಗೆ ದೂರುದಾರನ್ನು ಕರೆಸಿಕೊಂಡು ಕೋರ್ಟ್‌ಗೆ ತಂದಿದ್ದ ತಲೆ ಬುರುಡೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ ಎಂದರು.

ಆ.17, 2025: ಧರ್ಮಸ್ಥಳ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಎರಡು ದೋಣಿ ಮೇಲೆ ಕಾಲಿಟ್ಟು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ ಎಂದ ಪ್ರಹ್ಲಾದ್‌ ಜೋಶಿ.

ಆ.18, 2025: ಧರ್ಮಸ್ಥಳದಲ್ಲಿ 13 ವರ್ಷಗಳ ಹಿಂದೆ ನಡೆದ ಆನೆ ಮಾವುತ ಮತ್ತು ಸಹೋದರಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಒತ್ತಾಯಿಸಿ ಎಸ್ಐಟಿಗೆ ದೂರು ಸಲ್ಲಿಸಲಾಗಿದೆ.  ಧರ್ಮಸ್ಥಳ ಗ್ರಾಮದ ಬೂರ್ಜೆ ಎಂಬಲ್ಲಿ 2012ರಲ್ಲಿ ನಡೆದ ಆನೆ ಮಾವುತ ನಾರಾಯಣ ಸಫಲ್ಯ ಮತ್ತು ಅವರ ಸಹೋದರಿ ಯುಮುನಾ ಎಂಬವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು.

ಆ.18, 2025:  ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ, ಕೊಲೆ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ ಎಂದು ಅಗ್ರಹಿಸಿದ ಕೆ.ನೀಲಾ. 

ಆ.18, 2025:  ಎಫ್‌ಎಸ್ಎಲ್ ವರದಿ ಬರುವವರೆಗೆ ಶೋಧಕಾರ್ಯ ಸ್ಥಗಿತ. ಧರ್ಮಸ್ಥಳ ಪ್ರಕರಣ ಕುರಿತು ಗೃಹಸಚಿವ ಪರಮೇಶ್ವರ್ ಮಾಹಿತಿ. ವಿಪಕ್ಷಗಳ ಆರೋಪ ಸಂಬಂಧ  ಸದನದಲ್ಲಿ ಪ್ರತಿಕ್ರಿಯಿಸಿರುವ ಗೃಹಸಚಿವ ಡಾ.ಜಿ. ಪರಮೇಶ್ವರ್, ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ಇದುವರೆಗೆ ಒಂದು ಅಸ್ಥಿಪಂಜರ, ಮತ್ತೊಂದು ಕಡೆ ಮೂಳೆಗಳು ಸಿಕ್ಕಿವೆ. ಇದರ ಎಫ್‌ಎಸ್ಎಲ್ ವರದಿ ಇನ್ನೂ ಬಂದಿಲ್ಲ. ಆದ್ದರಿಂದ ವರದಿ ಲಭ್ಯವಾಗುವವರೆಗೆ ಉತ್ಖನನ ಕಾರ್ಯ ಸ್ಥಗಿತಗೊಳಿಸಲಾಗುತ್ತದೆ ಎಂದರು.

ಆ.18, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಅನಾಮಿಕ ದೂರುದಾರನ ಮಂಪರು ಪರೀಕ್ಷೆಗೆ ಒತ್ತಾಯಿಸಿದ ಬಿಜೆಪಿ. ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ನೂರಾರು ಶವ ಹೂತಿದ್ದೇನೆಂದು ಹೇಳಿಕೆ ನೀಡಿರುವ ದೂರುದಾರನಿಗೆ ಮಂಪರು ಪರೀಕ್ಷೆ ಮಾಡಲು ಗೃಹ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ.

ಆ.18, 2025:  ಯಾರ ಒತ್ತಡಕ್ಕೂ ಸರಕಾರ ಮಣಿಯುವುದಿಲ್ಲ. ಧರ್ಮಸ್ಥಳ ಪ್ರಕರಣ ಕುರಿತು ಡಾ.ಜಿ.ಪರಮೇಶ್ವರ್ ಹೇಳಿಕೆ. ಸರಕಾರಕ್ಕೆ ಮಧ್ಯಂತರ ವರದಿ ಬಂದಿಲ್ಲ ಎಂದ ಗೃಹ ಸಚಿವರು.

ಆ.19, 2025:    ಧರ್ಮಸ್ಥಳದ ಹೆಸರಿಗೆ ಕಳಂಕ ಬರಬಾರದು ಎಂಬ ಕಾರಣಕ್ಕೆ ಸರಕಾರ ಎಸ್‌ಐಟಿ ರಚನೆ ಮಾಡಿದೆ. ಈ ಕುರಿತು ಶೀಘ್ರವೇ ಸತ್ಯಾಸತ್ಯತೆ ತಿಳಿಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.

ಆ.19, 2025: ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ಮೃತದೇಹಗಳು ಹೂತು ಹಾಕಿರುವ ಆರೋಪಗಳ ಕುರಿತು ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸಂಸದ ವೀರೇಂದ್ರ ಹೆಗ್ಗಡೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಈ ಆರೋಪಗಳು ಆಧಾರರಹಿತ ಮತ್ತು ಸುಳ್ಳು ಎಂದು ಹೇಳಿದ್ದಾರೆ.

ಈ ಕುರಿತು ತನಿಖೆಗೆ ಕರ್ನಾಟಕ ಸರಕಾರ ವಿಶೇಷ ತನಿಖಾ ತಂಡ(ಎಸ್ಐಟಿ)ವನ್ನು ರಚಿಸಿರುವುದನ್ನು ಸ್ವಾಗತಿಸಿದ ಹೆಗ್ಗಡೆ, ಎಸ್ಐಟಿ ರಚಿಸಿರುವುದು ಒಳ್ಳೆಯದಾಗಿದೆ ಎಂದು ಹೇಳಿದ್ದಾರೆ.

ಆ.19, 2025: ‘ಧರ್ಮಸ್ಥಳ ಪ್ರಕರಣ’ ಒಂದು ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಇದರ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಹಾಗೂ ತಮಿಳುನಾಡಿನ ಹಾಲಿ ಸಂಸದ ಸಸಿಕಾಂತ್ ಸೆಂಥಿಲ್ ಅವರ ಕೈವಾಡವಿದೆ ಎಂದು ಜನಾರ್ದನ ರೆಡ್ಡಿ ಆರೋಪ ಮಾಡಿದ್ದಾರೆ.

ಆ.19, 2025: ಧರ್ಮಸ್ಥಳ ದೇವಸ್ಥಾನದ ಮೇಲೆ ಕೆಲವು ಮಂದಿ ಯೂಟ್ಯೂಬರ್‌ಗಳ ಅಪಪ್ರಚಾರದಿಂದ ಹಿಂದೂ ಧಾರ್ಮಿಕ ಕೇಂದ್ರದ ಮೇಲಿರುವ ಪವಿತ್ರತೆಗೆ ಧಕ್ಕೆಯಾಗುತ್ತಿದ್ದು, ಇದರ ಹಿಂದೆ ವಿದೇಶಿ ಹಣ ಹರಿದು ಬಂದ ಗುಮಾನಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಡಿ ಮೂಲಕ ತನಿಖೆ ನಡೆಸಬೇಂದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.

ಆ.20, 2025: ಧರ್ಮಸ್ಥಳ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಆರೋಪದಲ್ಲಿ ಹುರುಳಿಲ್ಲ ಎಂದ ಸಂಸದ ಸಸಿಕಾಂತ್ ಸೆಂಥಿಲ್. ''ಇದು ʻಮತಗಳ್ಳತನʼ ಪ್ರಕರಣದಿಂದ ಗಮನ ಬೇರೆಡೆ ಸೆಳೆಯುವ ತಂತ್ರ'' ಎಂದು ಪ್ರತಿಕ್ರಿಯೆ.

ಆ.20, 2025: ಧರ್ಮಸ್ಥಳ ದೂರು ಪ್ರಕರಣಗಳ ಸಮಗ್ರ ತನಿಖೆಗೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳಿಂದ ದುಂಡು ಮೇಜಿನ ಸಭೆ. ಮಂಗಳೂರಿನ ಬೋಳಾರದಲ್ಲಿರುವ ಎಕೆಜಿ ಭವನದಲ್ಲಿ ದುಂಡು ಮೇಜಿನ ಸಭೆಯಲ್ಲಿ ನಿರ್ಣಯ ಅಂಗೀಕಾರ.

ಆ.20, 2025: ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯದಲ್ಲಿ ಶವ ಹೂತಿದ್ದರೆ ಅರಣ್ಯ ಸಂರಕ್ಷಣಾ ಕಾಯಿದೆಯ ಅನ್ವಯ ಕ್ರಮ ಎಂದ ಸಚಿವ ಈಶ್ವರ ಖಂಡ್ರೆ. ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡಿ, ಶವಗಳನ್ನು ಹೂತಿರುವುದು ಎಸ್‍ಐಟಿ ತನಿಖೆಯಿಂದ ಸಾಬೀತಾದರೆ, ಅರಣ್ಯ ಸಂರಕ್ಷಣಾ ಕಾಯಿದೆಯ ಅನ್ವಯ ಕ್ರಮ ಜರುಗಿಸಲಾಗುವುದು ಎಂದ ಸಚಿವ ಖಂಡ್ರೆ.

ಆ.20, 2025: ಧರ್ಮಸ್ಥಳ ಉಳಿಸಿ ಅಭಿಯಾನಕ್ಕೆ ಬಿಜೆಪಿ ಬೆಂಬಲ ಎಂದ ಬಿಜೆಪಿ ಉಡುಪಿ ಜಿಲ್ಲಾ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ. ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಿರಂತರ ನಡೆಯುತ್ತಿರುವ ಅಪಪ್ರಚಾರಗಳು ವ್ಯವಸ್ಥಿತ ಷಡ್ಯಂತ್ರ ಎಂದ ಬಿಜೆಪಿ ಮುಖಂಡ.

ಆ.20, 2025: ಧರ್ಮಸ್ಥಳ ದೂರಿಗೆ ಸಂಬಂಧಿಸಿದಂತೆ ಅನನ್ಯಾ ಭಟ್ ನಾಪತ್ತೆ ಪ್ರಕರಣವನ್ನು SIT ಗೆ ವಹಿಸಲಾಗುವುದು ಎಂದ ದಕ್ಷಿಣ ಕನ್ನಡ ಎಸ್ಪಿ ಡಾ. ಅರುಣ್ ಕೆ.

ಆ.21, 2025:ಧರ್ಮಸ್ಥಳ ದೂರು ಪ್ರಕರಣದಲ್ಲಿ ಒಂದು ಕಡೆ ಚಿವುಟಿ ಮತ್ತೊಂದು ಕಡೆ ತೂಗುವ ಕೆಲಸವನ್ನು ಪ್ರಭಾಕರ ಭಟ್ ಮಾಡುತ್ತಿದ್ದಾರೆ‌ ಎಂದು ಆರೋಪಿಸಿದ ವಿನಯ್ ಕುಮಾರ್ ಸೊರಕೆ.

ಆ.21, 2025: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ ಮುಂತಾದ ಅಪಹರಣ, ಅತ್ಯಾಚಾರ, ಕೊಲೆ ಮತ್ತು ಅಸಹಜ ಸಾವುಗಳ ಕುರಿತು ಸಮಗ್ರ ತನಿಖೆ ಮಾಡಬೇಕು ಎಂದು ಎಡಪಕ್ಷಗಳಿಂದ ಆಗ್ರಹ .

ಆ.22, 2025: ಧರ್ಮಸ್ಥಳ ಕ್ಷೇತ್ರ, ಧರ್ಮಾಧಿಕಾರಿಯ ಮೇಲಿನ ಅಪಪ್ರಚಾರ ತಡೆಗೆ ಶಾಶ್ವತ ಕ್ರಮಕ್ಕೆ ಸಿಎಂ ಗೆ ಮನವಿ ನೀಡಲು ಧರ್ಮ ಜಾಗೃತಿ ಸಭೆ ನಿರ್ಣಯ

ಆ.22, 2025:ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಳೆ ದೊರೆತಿರುವುದು ಗೊತ್ತಾದ ಬಳಿಕ ಬಿಜೆಪಿಯವರು ಮಾತನಾಡಲು ಶುರು ಮಾಡಿದರು ಎಂದ ಸಿಎಂ ಸಿದ್ದರಾಮಯ್ಯ."ವಿರೇಂದ್ರ ಹೆಗ್ಗಡೆಯವರೇ ಎಸ್‍ಐಟಿ ತನಿಖೆ ಸ್ವಾಗತಿಸಿದ್ದಾರೆ"  ಎಂದ ಸಿಎಂ.

ಆ.22, 2025:ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ  ಅನನ್ಯಾ ಭಟ್ ನಾಪತ್ತೆ ಕಥೆ ಫೇಕ್ ಎಂದು ತಪ್ಪೊಪ್ಪಿಕೊಂಡು ಕ್ಷಮೆ ಕೇಳಿದ ಸುಜಾತ ಭಟ್. ಖಾಸಗಿ ಯೂಟ್ಯೂಬ್ ಚಾನೆಲ್ ಗೆ ಹೇಳಿಕೆ ನೀಡಿದ ಸುಜಾತಾ ಭಟ್.

ಆ.22, 2025:ಅನನ್ಯಾ ಭಟ್ ನನ್ನ ಮಗಳೇ; ನಾನು ಅದನ್ನು SIT ಮುಂದೆ ಪ್ರೂವ್ ಮಾಡುತ್ತೇನೆ ಎಂದು ಮತ್ತೆ ಉಲ್ಟಾ ಹೊಡೆದ ಸುಜಾತಾ ಭಟ್. "ಯೂಟ್ಯೂಬ್ ಚಾನೆಲ್ ನವರು ನನ್ನನ್ನು ಬೆದರಿಸಿ ಹೇಳಿಕೆ ಪಡೆದುಕೊಂಡರು" ಎಂದ ಸುಜಾತಾ ಭಟ್.

ಆ.23, 2025:ಧರ್ಮಸ್ಥಳ ಪ್ರಕರಣದ  ಅನಾಮಿಕ ದೂರುದಾರನನ್ನು ಬಂಧಿಸಿದ ಎಸ್.ಐ.ಟಿ

ಆ.23, 2025:ಧರ್ಮಸ್ಥಳ ಪ್ರಕರಣದ ಅನಾಮಿಕ ದೂರುದಾರನ ಬಂಧನ ಖಚಿತಪಡಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್. ಮುಂದಿನ ದಿನ ಕ್ರಮ ಎಸ್‌ಐಟಿ ನಿರ್ಧರಿಸಲಿದೆ ಎಂದ ಗೃಹ ಸಚಿವರು.

ಆ.23, 2025:ಧರ್ಮಸ್ಥಳ ಪ್ರಕರಣದ ದೂರುದಾರ 10 ದಿನಗಳ ಕಾಲ ಸಾಕ್ಷಿ ದೂರುದಾರ ಎಸ್‌ಐಟಿ ಕಸ್ಟಡಿಗೆ.

ಆ.23, 2025:ಧರ್ಮಸ್ಥಳ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಶಿಕ್ಷಿಸುವ ಕೆಲಸವನ್ನು ಸರಕಾರ ಮಾಡಲಿದೆ ಎಂದ ಸಿಎಂ ಕಾನೂನು ಎ.ಎಸ್.ಪೊನ್ನಣ್ಣ.

ಆ.23, 2025:ಧರ್ಮಸ್ಥಳ ಪ್ರಕರಣವು ಎರಡು ಹಿಂದುತ್ವ ಗುಂಪುಗಳ ನಡುವಿನ ಸಂಘರ್ಷ ಎಂದ ಬಿ.ಕೆ.ಹರಿಪ್ರಸಾದ್. 

ಆ.23, 2025:ಧರ್ಮಸ್ಥಳ ಪ್ರಕರಣವನ್ನು  ಎನ್‍ಐಎ ತನಿಖೆಗೆ ವಹಿಸುವಂತೆ ಬೊಮ್ಮಾಯಿ ಆಗ್ರಹ

ಆ.24, 2025: ಧರ್ಮಸ್ಥಳ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಖಚಿತ ಎಂದ ಸಚಿವ ಬೋಸರಾಜು

ಆ.24, 2025: ʼಧರ್ಮಸ್ಥಳ ಪ್ರಕರಣʼ ಎನ್‍ಐಎ ತನಿಖೆಗೆ ಒಪ್ಪಿಸಿ ಎಂದು ಆಗ್ರಹಿಸಿ ಬಿಜೆಪಿ ಶಾಸಕ ಡಾ. ಅಶ್ವತ್ಥ ನಾರಾಯಣ್

ಆ.24, 2025: ʼಧರ್ಮಸ್ಥಳʼದ ಅನಾಮಿಕ ವ್ಯಕ್ತಿ ಹಿಂದೆ ಯಾರಿದ್ದಾರೆ ಎಂಬುವುದು ಎಸ್‍ಐಟಿ ತನಿಖೆಯಿಂದ ಹೊರಬರುತ್ತದೆ ಎಂದ ಸಚಿವ ರಾಮಲಿಂಗಾರೆಡ್ಡಿ

ಆ.24, 2025: ಧರ್ಮಸ್ಥಳ ಪ್ರಕರಣದಲ್ಲಿ ಕಾಂಗ್ರೆಸ್ ಸರಕಾರ ಏಕೆ ಮೌನವಹಿಸಿದೆ? ಎಂದು ಪ್ರಶ್ನಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಆ.24, 2025: ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾದ ಯೂಟ್ಯೂಬರ್ ಸಮೀರ್ ಎಂ ಡಿ.

ಆ.25, 2025: ʼಧರ್ಮಸ್ಥಳ ಪ್ರಕರಣʼ ತನಿಖೆಯನ್ನು ಎನ್.ಐ.ಎಗೆ ವಹಿಸುವ ಅಗತ್ಯವಿಲ್ಲ ಎಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್.

ಆ.25, 2025: ಕಲಬುರಗಿಯಲ್ಲಿ ಧರ್ಮಸ್ಥಳದ ಉಳಿವಿಗಾಗಿ ಬಿಜೆಪಿಯಿಂದ ಪ್ರತಿಭಟನೆ.

ಆ.25, 2025: ಬೆಳ್ತಂಗಡಿ ಪೊಲೀಸ್ ಠಾಣೆಗೆ ಎರಡನೇ ದಿನ ವಿಚಾರಣೆಗೆ ಹಾಜರಾದ ಯೂಟ್ಯೂಬರ್ ಸಮೀರ್ ಎಮ್.ಡಿ.

ಆ.26,2025: ಧರ್ಮಸ್ಥಳ ಪ್ರಕರಣದ ಸಾಕ್ಷಿ ದೂರುದಾರನನ್ನು ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಕರೆದೊಯ್ದ ಎಸ್ಐಟಿ

ಆ.26,2025: ಸೌಜನ್ಯಾ ಪ್ರಕರಣ, ಇತರ ದೌರ್ಜನ್ಯ ಆರೋಪಗಳ ತನಿಖೆಯಾಗಬೇಕು ಎಂದು ಆಗ್ರಹಿಸಿದ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ಆ.26,2025: ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಮುಂದುವರಿದ ಮಹಜರು. ಮೊಬೈಲ್ ಸಹಿತ ದೂರುದಾರನ ವಸ್ತುಗಳು ಎಸ್ಐಟಿ ವಶಕ್ಕೆ.

ಆ.26,2025: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ರಾಯಚೂರಿನಲ್ಲಿ ಪ್ರತಿಭಟನೆ

ಆ.26,2025: ಬಿಜೆಪಿಯ ಒಂದು ಗುಂಪಿನಿಂದ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಎಂದ ಸಚಿವ ಸತೀಶ್ ಜಾರಕಿಹೊಳಿ

ಆ.26,2025: ಧರ್ಮಸ್ಥಳ ದೂರಿನ ತನಿಖೆಗೆ ಅಗತ್ಯಬಿದ್ದರೆ ಎಸ್‌ಐಟಿ ದಾಳಿ ನಡೆಸಲಿ ಎಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್

ಆ.27,2025: ಧರ್ಮಸ್ಥಳ ಪ್ರಕರಣದ ದೂರುದಾರನ ವೈದ್ಯಕೀಯ ಪರೀಕ್ಷೆ ಮಾಡಿಸಿದ ಎಸ್.ಐ.ಟಿ. 

ಆ.27,2025: ಸುಜಾತಾ ಭಟ್‌ರನ್ನು ವಿಚಾರಣೆ ನಡೆಸಿದ ಎಸ್‌ಐಟಿ

ಆ.27,2025: ಯೂಟ್ಯೂಬ್ ನಲ್ಲಿ ಧರ್ಮಗಳ ವಿರುದ್ಧ ಪ್ರಚೋದನಕಾರಿ ಮಾತನಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಶೇಖರ್ ಲಾಯಿಲ ನೀಡಿದ ದೂರಿನಂತೆ, ವಸಂತ ಗಿಳಿಯಾರ್ ವಿರುದ್ಧ ಎಫ್ ಐ ಆರ್ ದಾಖಲು. 

ಆ.28,2025:  ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರ ಚಿನ್ನಯ್ಯನೇ ಮೊದಲ ಆರೋಪಿ

ಆ.28,2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದ ಸಚಿವ ಎಂ.ಬಿ.ಪಾಟೀಲ್

ಆ.28,2025: ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿ ಸುಜಾತ ಭಟ್ ಮೂರನೇ ದಿನದ ವಿಚಾರಣೆಗೆ ಹಾಜರು

ಆ.28,2025: ಸುಜಾತಾ ಭಟ್‍ ಗೆ ರಕ್ಷಣೆ ಕೋರಿ ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‍ಐಟಿಗೆ ಪತ್ರದ ಬರೆದ ರಾಜ್ಯ ಮಹಿಳಾ ಆಯೋಗ

ಆ.28,2025:  ಧರ್ಮಸ್ಥಳದಲ್ಲಿ ಸಮಾವೇಶ ನಡೆಸುವ ಕುರಿತು ಉಡುಪಿಯಲ್ಲಿ ಸಮಾಲೋಚನಾ ಸಭೆ

ಆ.28,2025: ಬೆಳ್ತಂಗಡಿಯ ಎಸ್.ಐ.ಟಿ ಕಚೇರಿಗೆ ಬಂದು ದೂರು ನೀಡಿದ ಸೌಜನ್ಯ ತಾಯಿ ಕುಸುಮಾವತಿ. ಧರ್ಮಸ್ಥಳ ದೂರು ಪ್ರಕರಣದ ಸಾಕ್ಷಿ ದೂರುದಾರ ಚೆನ್ನಯ್ಯನಿಗೆ ಮಂಪರು ಪರೀಕ್ಷೆಗೆ ಆಗ್ರಹ

ಆ.29, 2025: ಧರ್ಮಸ್ಥಳ ಪ್ರಕರಣದ ತನಿಖೆ ವಿಸ್ತರಿಸಲು ಎಸ್ಐಟಿ ಸಿದ್ಧತೆ

ಆ.29, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಎಸ್‍ಐಟಿ’ ಬಗ್ಗೆ ಆಕ್ಷೇಪ ಇದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಿತ್ತು ಎಂದ ಸಚಿವ ಸತೀಶ್ ಜಾರಕಿಹೊಳಿ

ಆ.29, 2025: ಧರ್ಮಸ್ಥಳ ಪ್ರಕರಣದ ಎಸ್‍ಐಟಿ ವರದಿ ಮುನ್ನವೇ ನ್ಯಾಯಾಧೀಶರಾಗುವುದು ಬೇಡ ಎಂದ ಸ್ಪೀಕರ್ ಯು.ಟಿ.ಖಾದರ್

ಆ.29, 2025: ಅವಹೇಳನಕಾರಿ ಹೇಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾದ ಲಾಯರ್ ಜಗದೀಶ್

ಆ.29, 2025: ವಿಚಾರಣೆಗಾಗಿ ಎಸ್.ಐ.ಟಿ ಕಚೇರಿಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ

ಆ.29, 2025: ಬ್ರಹ್ಮಾವರ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ. ವಿಚಾರಣೆಗಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ

ಆ.30, 2025: ಧರ್ಮಸ್ಥಳ ಪ್ರಕರಣದ ದೂರುದಾರ ಚಿನ್ನಯ್ಯನನ್ನು ಮಹಜರು ನಡೆಸಲು ಕರೆದುಕೊಂಡು ಹೋದ ಎಸ್.ಐ.ಟಿ

ಆ.30, 2025: ʼಧರ್ಮಸ್ಥಳ ಪ್ರಕರಣʼದ ಬಗ್ಗೆ ಸಮಗ್ರ ತನಿಖೆ ನಡೆಸಲು ಸಂಘಟನೆಗಳ ಒತ್ತಾಯ

ಆ.30, 2025: ‘ಧರ್ಮಸ್ಥಳ ಪ್ರಕರಣ’ ತಾರ್ಕಿಕ ಅಂತ್ಯದವರೆಗೂ ತನಿಖೆ ಮುಂದುವರಿಕೆ ಎಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್

ಆ.30, 2025: ಧರ್ಮಸ್ಥಳ ಪ್ರಕರಣದ ದೂರುದಾರ ಚಿನ್ನಯ್ಯನೊಂದಿಗೆ ಬೆಂಗಳೂರಿನ ವಿವಿಧೆಡೆ ಮಹಜರು ನಡೆಸಿದ ಎಸ್‍ಐಟಿ

ಆ.30, 2025: ಬೆಳ್ತಂಗಡಿ ಠಾಣೆಗೆ ವಿಚಾರಣೆಗೆ ಹಾಜರಾದ ಯೂಟ್ಯೂಬರ್ ಸಮೀರ್ ಎಂ.ಡಿ.

ಆ.31, 2025: ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯದ ಜನರಿಗೆ ಎಸ್‌ಐಟಿ ತನಿಖೆ ಮೇಲೆ ನಿರೀಕ್ಷೆಗಳಿಲ್ಲ, ಎನ್‌ಐಎ ತನಿಖೆ ನಡೆಸಿ ಎಂದು ಆಗ್ರಹಿಸಿದ ನಿಖಿಲ್ ಕುಮಾರಸ್ವಾಮಿ

ಆ.31, 2025: ಧರ್ಮಸ್ಥಳ ಪ್ರಕರಣದ ಸತ್ಯ ಹೊರ ಬರಬೇಕೆಂಬ ಕಾರಣಕ್ಕೆ ಎಸ್ಐಟಿ ರಚನೆ, ಬೇರೆ ತನಿಖೆ ಅಗತ್ಯವಿಲ್ಲ ಎಂದ ಸಿಎಂ ಸಿದ್ದರಾಮಯ್ಯ

ಆ.31, 2025: ಶ್ರೀಕ್ಷೇತ್ರ ಧರ್ಮಸ್ಥಳದ ರಕ್ಷಣೆಗೆ ರಾಜ್ಯ ಸರಕಾರ ಇದೆ ಎಂದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಆ.31, 2025: ಸುರತ್ಕಲ್ ನಲ್ಲಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಖಂಡಿಸಿ ಜನಾಗ್ರ ಹ ಸಭೆ

ಆ.31,2025: ಧರ್ಮಸ್ಥಳ ಚಲೊ ಪಕ್ಷಾತೀತ ಎಂದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಸೆ.1, 2025: ಬೆಂಗಳೂರಿನಲ್ಲಿ ಶಾಸಕ ಕೆ.ಗೋಪಾಲಯ್ಯ ನೇತೃತ್ವದಲ್ಲಿ 'ಧರ್ಮಸ್ಥಳ ಚಲೋ'ಗೆ ಚಾಲನೆ

ಸೆ.1, 2025: ಧರ್ಮಸ್ಥಳ ಪ್ರಕರಣದಲ್ಲಿ ನಡೆಯುತ್ತಿರುವುದು ಆರೆಸ್ಸೆಸ್‌ vs ಆರೆಸ್ಸೆಸ್‌ ಕಿತ್ತಾಟ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಸೆ.1, 2025: ಧರ್ಮಸ್ಥಳಕ್ಕೆ ಬಿಜೆಪಿ ಯಾತ್ರೆಯಿಂದ ರಾಜಕೀಯ ಲಾಭ ಸಿಗುವುದಿಲ್ಲ ಎಂದ ಸಿಎಂ ಸಿದ್ದರಾಮಯ್ಯ

ಸೆ.1, 2025: 'ಧರ್ಮಸ್ಥಳ ಚಲೋ' ಸಮಾವೇಶಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ

ಸೆ.1, 2025: ಧರ್ಮಸ್ಥಳದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಭೇಟಿ ಮಾಡಿ ಮಾತುಕತೆ

ಸೆ.1, 2025: ʼಧರ್ಮಸ್ಥಳ ಪ್ರಕರಣʼದಲ್ಲಿ ಬಿಜೆಪಿಯದ್ದೇ ಷಡ್ಯಂತ್ರ ಎಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಸೆ.1, 2025: ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ಸೆ.2, 2025: ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿಯ ದ್ವಿಪಾತ್ರಾಭಿನಯಕ್ಕೆ ʼಆಸ್ಕರ್ʼ ಕೊಟ್ಟರೂ ಕಡಿಮೆಯೇ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಸೆ.2, 2025: ಧರ್ಮಸ್ಥಳ ಪ್ರಕರಣಕ್ಕೆ ಈಡಿ ಪ್ರವೇಶ. ವಿದೇಶಿ ದೇಣಿಗೆಯ ಆಯಾಮದಲ್ಲಿ ತನಿಖೆ

ಸೆ.2, 2025: ‘ಧರ್ಮಸ್ಥಳ ಪ್ರಕರಣ’ವು ಬಿಜೆಪಿಯವರದ್ದೇ ಷಡ್ಯಂತ್ರ ಎಂದ ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ

ಸೆ.2, 2025: ಧರ್ಮಸ್ಥಳ ಪ್ರಕರಣದಲ್ಲಿ ಎಸ್‍ಐಟಿ ತನಿಖೆಗೆ ತೊಂದರೆ ಮಾಡುವ ಉದ್ದೇಶ ಬಿಜೆಪಿಗಿದೆ ಎಂದ ಗೃಹ ಸಚಿವ ಜಿ.ಪರಮೇಶ್ವರ್

ಸೆ.2, 2025: ಧರ್ಮಸ್ಥಳದಲ್ಲಿ ಮಾಜಿ ಡಿಸಿಎಂ ಈಶ್ವರಪ್ಪ ನೇತೃತ್ವದಲ್ಲಿ ಜಾಥಾ

ಸೆ.3,2025: ಧರ್ಮಸ್ಥಳ ಪ್ರಕರಣದ ದೂರುದಾರ ಚಿನ್ನಯ್ಯನ ಎಸ್ಐಟಿ ಕಸ್ಟಡಿ ಅವಧಿ ಮುಕ್ತಾಯ; ನ್ಯಾಯಾಲಯಕ್ಕೆ ಹಾಜರು

ಸೆ.3,2025:  ಧರ್ಮಸ್ಥಳ ಚಲೋ ಬಳಿಕ "ಸೌಜನ್ಯ ತಾಯಿ ತಮ್ಮೆದುರು ಹೇಳಿದ ನೈಜ ಸಂಗತಿಯನ್ನು ಜಗತ್ತಿಗೆ ತಿಳಿಸುವ ಧೈರ್ಯವಿದೆಯೇ" ಎಂದು ಬಿಜೆಪಿಗೆ ಪ್ರಿಯಾಂಕ್‌ ಖರ್ಗೆ ಪ್ರಶ್ನೆ

ಸೆ.3,2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಕಚೇರಿಗೆ ಉದಯ್ ಜೈನ್ ಹಾಜರು

ಸೆ.3,2025: ಧರ್ಮಸ್ಥಳ ಪ್ರಕರಣದಲ್ಲಿ ಚಿನ್ನಯ್ಯನ ಬಂಧನ ಹಿನ್ನೆಲೆಯಲ್ಲಿ ವಕಾಲತ್ತು ಮಾಡಲು ಮಂಗಳೂರಿನಿಂದ ಆಗಮಿಸಿದ ವಕೀಲರು

ಸೆ.3,2025: ಧರ್ಮಸ್ಥಳ ಪ್ರಕರಣದಲ್ಲಿ ನ್ಯಾಯವಾದಿ ಧನಂಜಯ ಕೆ.ವಿ. ವಿರುದ್ಧ ಎಸ್.ಐ.ಟಿ.ಗೆ ದೂರು.  ಅವರೊಂದಿಗಿದ್ದ ನ್ಯಾಯವಾದಿಗಳಾದ ಓಜಸ್ವಿ ಗೌಡ, ಸಚಿನ್ ದೇಶಪಾಂಡೆ, ದಿವಿನ್ ಧೀರಜ್, ಮಂಜುನಾಥ್ ಎಂಬವರ ವಿರುದ್ಧವೂ ದೂರು ನೀಡಲಾಗಿದೆ.

ಸೆ.4,2025: ಸಂತರ ಮೇಲಿನ ದೌರ್ಜನ್ಯ ತಡೆಗೆ ಕಾನೂನು ರಚಿಸಿ ಎಂದು ಅಮಿತ್ ಶಾಗೆ ಸ್ವಾಮೀಜಿಗಳ ನಿಯೋಗ ಮನವಿ. "ಧರ್ಮಸ್ಥಳದ ಧರ್ಮಾಧಿಕಾರಿಯವರ ಕುಟುಂಬದ ವಿರುದ್ಧದ ಬೆಳವಣಿಗೆಗಳು ಅತ್ಯಂತ ನೋವಿನ ಸಂಗತಿ" ಎಂದ ವಿವಿಧ ಮಠಗಳ ಸ್ವಾಮೀಜಿಗಳು.

ಸೆ.4,2025: ಧರ್ಮಸ್ಥಳದಲ್ಲಿ ವಿಜಯೇಂದ್ರಗೆ ಏನು ಕೆಲಸ ಎಂದು ಪ್ರಶ್ನಿಸಿದ ಶಾಸಕ ಯತ್ನಾಳ್

ಸೆ.4,2025: ಧರ್ಮಸ್ಥಳ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರು ತನಿಖೆಗೆ ಧಕ್ಕೆಯುಂಟಾಗುವ ಹೇಳಿಕೆ ನೀಡದಂತೆ ನಿರ್ದೇಶನ ನೀಡಲು ಸೋನಿಯಾ ಗಾಂಧಿಗೆ ಕೊಂದವರು ಯಾರು ಸಂಘಟನೆಯಿಂದ ಪತ್ರ

ಸೆ.4,2025: ಬೆಳ್ತಂಗಡಿ ಎಸ್.ಐ.ಟಿ ಠಾಣೆಗೆ ಹಾಜರಾದ ಜಯಂತ್ ಟಿ.

ಸೆ.4,2025: ಬೆಂಗಳೂರಿನಲ್ಲಿರುವ ಯೂಟ್ಯೂಬರ್ ಸಮೀರ್.ಎಂ.ಡಿ ಮನೆಯಲ್ಲಿ ಬೆಳ್ತಂಗಡಿ ಪೊಲೀಸರಿಂದ ಮಹಜರು

ಸೆ.5, 2025: ಧರ್ಮಸ್ಥಳ ಪ್ರಕರಣದ ಬಗ್ಗೆ ವರದಿ ಮಾಡಿದ್ದ ಕೇರಳದ ಯೂಟ್ಯೂಬರ್ ಮನಾಫ್ ಗೆ ಎಸ್ಐಟಿ ನೋಟಿಸ್

ಸೆ.5, 2025: ಧರ್ಮಸ್ಥಳ ಎಸ್‌ಐಟಿ ತನಿಖೆಗೆ ಅಡ್ಡಿಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ದೂರು

ಸೆ.5, 2025: ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಆರೋಪ. 13 ಖಾತೆಗಳ ವಿರುದ್ಧ ದೂರು ಸಲ್ಲಿಸಿದ ಸೌಜನ್ಯ ತಾಯಿ ಕುಸುಮಾವತಿ. ಪ್ರಕರಣ ದಾಖಲು

ಸೆ.5, 2025: ಎಸ್ಐಟಿ ಕಚೇರಿಗೆ ಆಗಮಿಸಿದ ಪ್ರಣವ್ ಮೊಹಾಂತಿ

ಸೆ.6, 2025: ಧರ್ಮಸ್ಥಳ ಪ್ರಕರಣ. ಜನಾರ್ದನ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸಂಸದ ಸಸಿಕಾಂತ್ ಸೆಂಥಿಲ್

ಸೆ.6, 2025: ಧರ್ಮಸ್ಥಳ ಪ್ರಕರಣದ ಆರೋಪಿ ಚಿನ್ನಯ್ಯಗೆ 14 ದಿನಗಳ ನ್ಯಾಯಾಂಗ ಬಂಧನ

ಸೆ.6, 2025: ಧರ್ಮಸ್ಥಳ ಪ್ರಕರಣದಲ್ಲಿ ಸೌಜನ್ಯ ಮಾವ ವಿಠಲ್ ಗೌಡ ಜೊತೆಗೆ ನೇತ್ರಾವತಿ ಸ್ನಾನಘಟ್ಟದಲ್ಲಿ ಸ್ಥಳ ಮಹಜರು ನಡೆಸಿದ SIT

ಸೆ.7, 2025: ಧರ್ಮಸ್ಥಳದ ವಿಚಾರದಲ್ಲಿ ಷಡ್ಯಂತ್ರ ಮಾಡುತ್ತಿರುವವರು ಬಿಜೆಪಿಯವರು ಎಂದ ಡಿಸಿಎಂ ಡಿ ಕೆ ಶಿವಕುಮಾರ್

ಸೆ.8, 2025: ಧರ್ಮಸ್ಥಳ ಪ್ರಕರಣದ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದ ಬಿಜೆಪಿ ನಿಯೋಗ 

ಸೆ.8, 2025: ವಿಚಾರಣೆಗಾಗಿ ಎಸ್.ಐ.ಟಿ ಕಚೇರಿಗೆ ಹಾಜರಾದ ಕೇರಳದ ಯೂಟ್ಯೂಬರ್ ಮನಾಫ್

ಸೆ.9, 2025: ಧರ್ಮಸ್ಥಳ ಪ್ರಕರಣ ಕುರಿತಂತೆ ಎಸ್ಐಟಿ ವಿಚಾರಣೆಗೆ ಆರು ಮಂದಿ ಹಾಜರು. ತಲೆಬುರುಡೆ ಪ್ರಕರಣದ ತನಿಖೆಗಾಗಿ ಯೂಟ್ಯೂಬರ್ ಗಳಾದ ಕೇರಳದ ಮನಾಫ್, ಅಭಿಷೇಕ್ ಮತ್ತು ಜಯಂತ್ ಟಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ ಹಾಗೂ ಪ್ರದೀಪ್ ಎಸ್ ಐ ಟಿ ಮುಂದೆ ಹಾಜರಾದರು.

ಸೆ.9, 2025: ಧರ್ಮಸ್ಥಳ ಪ್ರಕರಣದಲ್ಲಿ ವಕೀಲ ಮಂಜುನಾಥ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ. ಎಸ್‌ಐಟಿ ತನಿಖೆ ವಿಚಾರವಾಗಿ ಸುಳ್ಳು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಆರೋಪ.

ಸೆ.10, 2025: ನಾಲ್ಕು ಮಂದಿ ಎಸ್.ಐ‌.ಟಿ ವಿಚಾರಣೆಗೆ ಹಾಜರು. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ. ವಿಚಾರಣೆಗಾಗಿ ಗಿರೀಶ್ ಮಟ್ಟಣ್ಣವರ್, ಜಯಂತ್.ಟಿ, ಯೂಟ್ಯೂಬರ್ ಅಭಿಷೇಕ್ ಮತ್ತು ಕೇರಳದ ಮನಾಫ್ ಎಸ್.ಐ.ಟಿ ಕಚೇರಿಗೆ ಹಾಜರಾದರು.

ಸೆ.11,2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಟ್ಯೂಬರ್‌ಗಳ ವಿಚಾರಣೆ ಮುಗಿಸಿದ ಎಸ್‌ ಐ ಟಿ

ಸೆ.11,2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಠಲ್ ಗೌಡ, ಪ್ರದೀಪ್, ಗಿರೀಶ್ ಮಟ್ಟಣ್ಣನವರ್, ಜಯಂತ್.ಟಿ ಅವರು ಎಸ್ಐಟಿ ಕಚೇರಿಗೆ ಹಾಜರಾದರು.

ಸೆ.12, 2025: ಧರ್ಮಸ್ಥಳ ಪ್ರಕರಣದಲ್ಲಿ ಬಂಟ್ವಾಳದ ಪ್ರದೀಪ್ ನನ್ನು ಕೋರ್ಟ್‌ಗೆ ಹಾಜರುಪಡಿಸಿದ ಎಸ್.ಐ.ಟಿ

ಸೆ.12, 2025: ಚಿನ್ನಯ್ಯನ ಜಾಮೀನು ಅರ್ಜಿ ವಿಚಾರಣೆ. ಸೆ.16ಕ್ಕೆ ಅದೇಶ ಕಾಯ್ದಿರಿಸಿದ ಬೆಳ್ತಂಗಡಿ ಕೋರ್ಟ್

ಸೆ.13, 2025: ʼಧರ್ಮಸ್ಥಳ ಪ್ರಕರಣʼದ ತನಿಖೆ ವಿಳಂಬವಾಗುತ್ತಿಲ್ಲ ಎಂದ ಸಿಎಂ ಸಿದ್ದರಾಮಯ್ಯ 

ಸೆ.13, 2025: ಸ್ನೇಹಮಯಿ ಕೃಷ್ಣ ವಿರುದ್ಧ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ದೂರು

ಸೆ.14, 2025: ಧರ್ಮಸ್ಥಳ ಪ್ರಕರಣದಲ್ಲಿ ನಿರೀಕ್ಷೆಗೆ ತಕ್ಕಂತೆ ಎಸ್ಐಟಿ ತನಿಖೆ ನಡೆಯುತ್ತಿಲ್ಲ ಎಂದ ಬಸವರಾಜ ಬೊಮ್ಮಾಯಿ

ಸೆ.15, 2025: ಧರ್ಮಸ್ಥಳ ಪ್ರಕರಣದಲ್ಲಿ ಸ್ಥಳೀಯರಿಬ್ಬರು ಗುರುತಿಸಿರುವ ಸ್ಥಳಗಳಲ್ಲಿ ಉತ್ಖನನಕ್ಕೆ ಕೋರಿದ ಅರ್ಜಿ ಸಂಬಂಧ ಎಸ್‌ಐಟಿಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್ 

ಸೆ.16,2025: ಧರ್ಮಸ್ಥಳ ಪ್ರಕರಣದಲ್ಲಿ ಎಸ್‍ಐಟಿಗೆ ನಿಷ್ಪಕ್ಷವಾಗಿ ಕಾರ್ಯನಿರ್ವಹಿಸಲು ಅಧಿಕಾರ ನೀಡಬೇಕೆಂದು ಒತ್ತಾಯಿಸಿದ ಕೊಂದವರು ಯಾರು ಸಂಘಟನೆ. 

ಸೆ.17, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ಬಂಗ್ಲೆಗುಡ್ಡೆ ಅರಣ್ಯದಲ್ಲಿ ಶೋಧ ಕಾರ್ಯ ಆರಂಭಿಸಿದ ಎಸ್ಐಟಿ

ಸೆ.17, 2025: ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಎಸ್ಐಟಿ ಶೋಧದ ವೇಳೆ ಅಸ್ಥಿಪಂಜರಗಳು ಪತ್ತೆ

ಸೆ.17, 2025: ಬಂಗ್ಲೆಗುಡ್ಡೆಯ ಒಂಭತ್ತು ಸ್ಥಳಗಳಲ್ಲಿ ಮಾನವ ಅವಶೇಷಗಳು ಪತ್ತೆ

ಸೆ.17, 2025: ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ವತಿಯಿಂದ ಸೆ.25ಕ್ಕೆ ಬೆಂಗಳೂರಿನಲ್ಲಿ ‘ಬೃಹತ್ ನ್ಯಾಯ ಸ ಮಾವೇಶ’ 

ಸೆ. 18, 2025: ಧರ್ಮಸ್ಥಳ ಪ್ರಕರಣ; ಪುರಂದರ ಗೌಡ ಹಾಗೂ ತುಕಾರಾಂ ಗೌಡ ಪರ ವಕೀಲರಿಂದ ದಾಖಲೆ ಕೇಳಿದ ಹೈಕೋರ್ಟ್

ಸೆ. 18, 2025: ಧರ್ಮಸ್ಥಳ ಪ್ರಕರಣವು ತಾರ್ಕಿಕ ಅಂತ್ಯ ಕಾಣುವುದರಲ್ಲಿ ಅನುಮಾನ ಬೇಡ ಎಂದ ಎ.ಎಸ್.ಪೊನ್ನಣ್ಣ

ಸೆ.19, 2025: ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್, ಮಾಜಿ ಅಧ್ಯಕ್ಷ ಕೇಶವ ಗೌಡರನ್ನು ವಿಚಾರಣೆ ನಡೆಸಿದ ಎಸ್.ಐ.ಟಿ

ಸೆ.20,2025: ಸೌಜನ್ಯ ತಾಯಿ ಕುಸುಮಾವತಿ ವಿರುದ್ಧ ಎಸ್ ಐ ಟಿ ಗೆ ದೂರು

ಸೆ.21,2025: ಸೌಜನ್ಯ ಪ್ರಕರಣದಲ್ಲಿ ಅಪಹರಣದ ಸಂದರ್ಭ ಸಾಕ್ಷಿ ಎನ್ನಲಾದ ಮಹಿಳೆ ಎಸ್ ಐ ಟಿ ಮುಂದೆ ಹಾಜರಾಗಿ ಹೇಳಿಕೆ ದಾಖಲು.

ಸೆ.21,2025: ಮಹೇಶ್ ಶೆಟ್ಟಿ ತಿಮರೋಡಿ ಮನೆ ಮುಂದೆ  ವಿಚಾರಣೆಗೆ ಹಾಜರಾಗುವಂತೆ ಎರಡನೇ ಬಾರಿ ನೋಟಿಸ್ ಅಂಟಿಸಿದ ಪೊಲೀಸರು.

ಸೆ.22, 2025: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ದೂರು ನೀಡಲು ಬಂದ ಮಹಿಳೆಗೆ ಎಸ್.ಐ.ಟಿ ಕಚೇರಿಯಲ್ಲಿ ಬೆದರಿಕೆ ಎಂದು ಒಡನಾಡಿ ಸಂಸ್ಥೆಯ ಸ್ಟಾನ್ಲಿ ಆರೋಪ.

ಸೆ.23, 2025: ಧರ್ಮಸ್ಥಳ ಪ್ರಕರಣವನ್ನು ಸಿಬಿಐಗೆ ಕೊಡುವ ಬಗ್ಗೆ ಚರ್ಚೆ ನಡೆದಿಲ್ಲ. ಆದಷ್ಟು ಬೇಗ ತನಿಖೆ ಮುಗಿಸುವಂತೆ ಸೂಚಿಸಿದ್ದೇವೆ ಎಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್

ಸೆ.23, 2025: ಧರ್ಮಸ್ಥಳ ಪ್ರಕರಣದ ದೂರುದಾರ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು.

ಸೆ.23, 2025: ಧರ್ಮಸ್ಥಳ ಪ್ರಕರಣದ ಕುರಿತು ಬೆಳ್ತಂಗಡಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಆರೋಪಿ ಚಿನ್ನಯ್ಯ.

ಸೆ.24, 2025: ಧರ್ಮಸ್ಥಳ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ವಿಚಾರದಲ್ಲಿ ಕಾಂಗ್ರೆಸ್ ಸತ್ಯದ ಪರ ಎಂದ ಸಚಿವ ಪ್ರಿಯಾಂಕ್ ಖರ್ಗೆ.

ಸೆ.25, 2025: ಧರ್ಮಸ್ಥಳ ಪ್ರಕರಣ ಸಂಬಂಧ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾದ ಚಿನ್ನಯ್ಯ

ಸೆ.25, 2025: ಧರ್ಮಸ್ಥಳ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೂ ಹೋರಾಟ ಎಂದ ಡಾ.ಮೂಡ್ನಾಕೂಡು ಚಿನ್ನಸ್ವಾಮಿ.

ಸೆ.25, 2025: ಧರ್ಮಸ್ಥಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ತಪ್ಪು ನಿರೂಪಣೆ. ಕನ್ನಡ ಸುದ್ದಿ ವಾಹಿನಿಗಳ ವಿರುದ್ಧ ಕ್ರಮಕ್ಕೆ ಸಿಜೆಐಗೆ ವಕೀಲರಿಂದ ಪತ್ರ.

ಸೆ.25,2025: ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ಏಳು ಅಸ್ತಿ ಪಂಜರದ ಪೈಕಿ ಮತ್ತೊಂದರ ಗುರುತು ಪತ್ತೆ ಹಚ್ಚಿದ ಎಸ್ ಐ ಟಿ

ಸೆ.26, 2025: ‘ಧರ್ಮಸ್ಥಳ ಪ್ರಕರಣ’ ದ ಕುರಿತು ಎಸ್‍ಐಟಿ ಪ್ರಾಮಾಣಿಕವಾಗಿ ತನಿಖೆ ಮಾಡುತ್ತಿದೆ ಎಂದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ 

ಸೆ.27, 2025: ʼಧರ್ಮಸ್ಥಳ ಪ್ರಕರಣʼದಲ್ಲಿ ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರಕಾರದ ಉದ್ದೇಶ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್

ಸೆ.29, 2025: ಧರ್ಮಸ್ಥಳ ಅಸಹಜ ಸಾವುಗಳ ಪ್ರಕರಣದ ಮುಖ್ಯ ಆರೋಪಿಗಳ ವಿರುದ್ಧ ಯಾಕೆ ವಿಚಾರಣೆ ಇಲ್ಲ ಎಂದು ಪ್ರಶ್ನಿಸಿದ ನವೀನ್ ಸೂರಿಂಜೆ.

ಸೆ.29, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯಿಂದ ಗ್ರಾಮ ಪಂಚಾಯತ್‌ ನ ನಾಲ್ವರು ಮಾಜಿ ಅಧ್ಯಕ್ಷರ ವಿಚಾರಣೆ

ಸೆ.30, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಅಧಿಕಾರಿಗಳಿಂದ ಬಂಗ್ಲೆಗುಡ್ಡೆಯಲ್ಲಿ ಮತ್ತೆ ಪರಿಶೀಲನೆ.

ಅ.01, 2025: ಧರ್ಮಸ್ಥಳದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್ ವರದಿ ಸಲ್ಲಿಕೆ. ಎಸ್ ಐ ಟಿ ಕೈ ಸೇರಿದ ವರದಿ.

ಅ.03, 2025: ಧರ್ಮಸ್ಥಳದ ಮೇಲೆ ವೈಚಾರಿಕ ಆಕ್ರಮಣ ನಡೆಯುತ್ತಿದೆ ಎಂದು ಆರೋಪಿಸಿದ ಬಿ.ಎಲ್.ಸಂತೋಷ್

ಅ.03, 2025: ಧರ್ಮಸ್ಥಳ ಪ್ರಕರಣದ ಎಸ್‌ಐಟಿ ತನಿಖೆ ಮಧ್ಯಂತರ ವರದಿ ರಾಜ್ಯದ ಜನತೆ ಮುಂದಿಡಿ ಎಂದು ಆಗ್ರಹಿಸಿದ ಬಿಜೆಪಿ ಶಾಸಕ ಸುನೀಲ್ ಕುಮಾರ್.

ಅ.06, 2025: ಧರ್ಮಸ್ಥಳ ಪ್ರಕರಣದಲ್ಲಿ ನಿಗದಿತ ಕಾಲಮಿತಿಯಲ್ಲೇ ತನಿಖೆ ಪೂರ್ಣಗೊಳಿಸಬೇಕೆಂದು ಒತ್ತಡ ಹೇರುವುದು ಸರಿಯಲ್ಲ ಎಂದ ಗೃಹ ಸಚಿವ ಡಾ.ಜಿ. ಪರಮೇಶ್ವರ್

ಅ.08, 2025: ಅ.9 ರಂದು ರಾಜ್ಯದ 60 ಕಡೆಗಳಲ್ಲಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯಿಂದ ನ್ಯಾಯಕ್ಕಾಗಿ ಜನಾಗ್ರಹ

ಅ.09,2025: ರಾಜ್ಯದ ವಿವಿಧೆಡೆ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯಿಂದ 'ನ್ಯಾಯಕ್ಕಾಗಿ ಜನಾಗ್ರಹ' ದಿನಾಚರಣೆ, ಸೌಜನ್ಯ ದಿನ

ಅ.09,2025: ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ. ಹೈಕೋರ್ಟ್ ನಿಂದ SIT, ED ಸೇರಿದಂತೆ 7 ಪ್ರತಿವಾದಿಗಳಿಗೆ ತನಿಖಾ ವರದಿ ಸಲ್ಲಿಸುವಂತೆ ನೋಟೀಸ್ ಜಾರಿ

ಅ.11, 2025: ದಶಕಗಳಿಂದ ಧರ್ಮಸ್ಥಳದಲ್ಲಿ ನಡೆದ ಕೊಲೆ ಪ್ರಕರಣಗಳ ತನಿಖೆ ನಡೆಸುವಂತೆ ಎಸ್ಐಟಿಗೆ ದೂರು ನೀಡಿರುವುದಾಗಿ ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಹೇಳಿಕೆ.

ಅ.13,2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯನ ಪತ್ನಿ, ಸಹೋದರಿ ಎಸ್ಐಟಿ ಕಚೇರಿಗೆ ಹಾಜರಾದರು.

ಅ.15, 2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಚಿನ್ನಯ್ಯನ ಹೇಳಿಕೆ ಪಡೆಯಲು ಎಸ್ಐಟಿ ಸಿದ್ಧತೆ 

ಅ.17, 2025: ಧರ್ಮಸ್ಥಳ ಪ್ರಕರಣವನ್ನು ಅಸ್ಥಿಪಂಜರಕ್ಕೆ ಸೀಮಿತಗೊಳಿಸದೆ ದೌರ್ಜನ್ಯದ ದೃಷ್ಠಿಯಲ್ಲಿ ನೋಡಬೇಕಾಗಿದೆ ಎಂದ ಪತ್ರಕರ್ತ ನವೀನ್ ಸೂರಿಂಜೆ.

ಅ.17, 2025:ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯಿಂದ ಮತ್ತೆ ಚಿನ್ನಯ್ಯನ ವಿಚಾರಣೆ.

ಅ.21,2025: ಧರ್ಮಸ್ಥಳ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣುವವರೆಗೂ ಎಸ್‍ಐಟಿ ತನಿಖೆ ಮುಂದುವರೆಸಲು ಸಿಎಂಗೆ ಮನವಿ

ಅ.24,2025: '2000ನೇ ಇಸವಿಯಿಂದ ಅನಾಥ ಮೃತದೇಹಗಳನ್ನು ಶವಾಗಾರದಲ್ಲಿರಿಸಲು ಆಸ್ಪತ್ರೆಗೆ ಹಣ ಪಾವತಿಸಿರುವ ಬಗ್ಗೆ ಧರ್ಮಸ್ಥಳ ಗ್ರಾಪಂನಲ್ಲಿ ದಾಖಲೆಗಳಿಲ್ಲ' ಎಂದು ಬಹಿರಂಗಪಡಿಸಿದ ಆರ್‌ ಟಿ ಐ ಅರ್ಜಿ

ಅ.25,2025: ಅ.27 ರಂದು ಎಸ್‌ಐಟಿ ವಿಚಾರಣೆಗೆ ಹಾಜರಾಗಲು ತಿಮರೋಡಿ, ಮಟ್ಟಣ್ಣನವರ್ ಸಹಿತ ನಾಲ್ವರಿಗೆ ನೋಟಿಸ್

ಅ.27,2025: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿಕೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News