ಯಾದಗಿರಿ | ಜಿಲ್ಲೆಯಲ್ಲಿ ಅಕ್ರಮ ಹೆಂಡದ ಹಾವಳಿ ಹೆಚ್ಚಳ : ಕ್ರಮಕ್ಕೆ ಕರವೇ ಅಧ್ಯಕ್ಷ ನಾಗಪ್ಪ ಬಿ. ಒತ್ತಾಯ
ಯಾದಗಿರಿ: ತಾಲ್ಲೂಕು ಹಾಗೂ ಜಿಲ್ಲೆಯಾದ್ಯಂತ ಅಕ್ರಮ ಹೆಂಡ ಮತ್ತು ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾದ್ಯಕ್ಷ ನಾಗಪ್ಪ ಬಿ. ಹೊನಗೇರಾ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ನೆರೆಯ ತೆಲಂಗಾಣ ರಾಜ್ಯದಿಂದ ರಾಜಾರೋಷವಾಗಿ ಜಿಲ್ಲೆಯೊಳge ಸರಬರಾಜಾಗುತ್ತಿರುವ ಕೈ ಹೆಂಡದ ಹೆಸರಿನಲ್ಲಿ ಸಿಎಚ್‌ಪೌಡರ್ ನಿಂದ ತಯಾರಿಸಿದ ರಾಸಾಯನಿಕ ಯುಕ್ತ ಹೆಂಡವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇಂತಹ ಅಪಾಯಕಾರಿ ಪುಡಿಯ ಹೆಂಡ ಕುಡಿದು ಅನೇಕ ಗ್ರಾಮೀಣ ರೈತ ಕೂಲಿ ಕಾರ್ಮಿಕರು ಅಪಾರ ನಷ್ಟ ಕಷ್ಟ ಅನುಭವಿಸುತ್ತಿದ್ದಾರೆ.ಗುರುಮಠಕಲ್ ತಾಲ್ಲೂಕಿನ ಜಿಲಾಲಪುರ ಗೇಟ್, ಕಡೇಚೂರು ಚೆಕ್ ಪೋಸ್ಟ್ ಸೇರಿದಂತೆ ನೆರೆಯು ಕೃಷ್ಣಾ ಸ್ಟೇಷನ್ ನಿಂದ ಜಿಲ್ಲೆಗೆ ಅಕ್ರಮ ಹೆಂಡವನ್ನು ತರುತ್ತಿದ್ದಾರೆ ಎಂದು ಹೇಳಿದ್ದಾರೆ.
ಚೆಕ್ ಪೋಸ್ಟ್ ಗಳಲ್ಲಿ ಚೆಕ್ ಮಾಡುವುದನ್ನೇ ಮರೆತಿರುವ ಅಧಿಕಾರಿಗಳಿಂದಾಗಿ ರಾಜಾರೋಷವಾಗಿ ಹೆಂಡ ಜಿಲ್ಲೆಯಲ್ಲಿ ಹರಿದಾಡುತ್ತಿದೆ. ಎಲ್ಲೆಂದರಲ್ಲಿ ಗಂಡು ಹೆಣ್ಣೆಂಬ ಬೇದವಿಲ್ಲದೆ ಕುಡಿದು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಘಟನೆಗಳು ಕಂಡುಬರುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಈಗಾಗಲೇ ಡಿಸಿ ಅವರಿಗೆ ಲಿಖಿತ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಅಕ್ರಮ ಮದ್ಯವೂ ಸಹ ಗ್ರಾಮೀಣ ಗೂಡಂಗಡಿ ಡಬ್ಬಾಗಳಲ್ಲಿಯೂ ಸಿಗುತ್ತಿದೆ. ಕೂಡಲೇ ಕ್ರಮ ಕೈಗೊಂಡು ಅಕ್ರಮ ಸಾಗಾಟ ತಡೆಯಬೇಕು ಬಡ ಕೃಷಿ ಕೂಲಿಕಾರರ ಬಾಳು ಹಾಳಾಗುವುದನ್ನು ತಡೆಯಬೇ., ಇಲ್ಲವಾದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.