Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಸಾಮಾಜಿಕ, ರಾಜಕೀಯ ಪಲ್ಲಟಗಳ ಪ್ರತಿಕ್ರಿಯೆ...

ಸಾಮಾಜಿಕ, ರಾಜಕೀಯ ಪಲ್ಲಟಗಳ ಪ್ರತಿಕ್ರಿಯೆ ‘ಲೋಕದ ಒಳಹೊರಗೆ’

ಗಣೇಶ ಅಮೀನಗಡಗಣೇಶ ಅಮೀನಗಡ1 Sept 2023 10:52 AM IST
share
ಸಾಮಾಜಿಕ, ರಾಜಕೀಯ ಪಲ್ಲಟಗಳ ಪ್ರತಿಕ್ರಿಯೆ ‘ಲೋಕದ ಒಳಹೊರಗೆ’

‘‘ಮೊದಲಿಗೆ ಕೇಳಿಸಿಕೊಳ್ಳುವುದಿಲ್ಲ’’

‘‘ಅಧ್ಯಯನ ಮಾಡುವುದಿಲ್ಲ’’

‘‘ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ’’

‘‘ಒಂದನ್ನು ಕೇಳಿದರೆ ಮತ್ತೊಂದು ವಿಷಯಕ್ಕೆ ಹಾರುತ್ತೀರಿ’’

ಹೀಗೆ ಸಿದ್ಧಾರ್ಥ ಠಾಕೂರ್ ತನ್ನ ಬಾಲ್ಯದ ಗೆಳೆಯ ಮತ್ತು ಹೋರಾಟಗಾರ ಇಂದ್ರಜಿತ್ಗೆ ಕೇಳುವ ಪ್ರಶ್ನೆಗಳು ಮೇಲಿನವು. ಈ ಮೂಲಕ ಪ್ರಸಕ್ತ ಸಮಾಜದ, ರಾಜಕೀಯ ಹಾಗೂ ದೇಶದ ಪರಿಸ್ಥಿತಿಗೆ ಕನ್ನಡಿ ಹಿಡಿಯುವ ಜೊತೆಗೆ ಹೋರಾಟಗಾರರ ಮನಸ್ಥಿತಿಯನ್ನು ಅನಾವರಣಗೊಳಿಸುವ ಸಂಭಾಷಣೆ ಇದು.

107 ವರ್ಷಗಳ ಹಿಂದೆ (1916) ರವೀಂದ್ರನಾಥ ಟಾಗೋರ್ ಅವರು ಪತ್ರಿಕೆಯೊಂದಕ್ಕೆ ಧಾರಾವಾಹಿಯಾಗಿ ಪ್ರಕಟಿಸಿದ ‘ಘರೇ ಬೈರೇ’ ಕಾದಂಬರಿಯು 1905ರಲ್ಲಿ ಬಂಗಾಲವನ್ನು ವಿಭಜಿತವಾದ ಪರಿಣಾಮ ಕುರಿತು ಬರೆದುದು. ವಿಭಜಿತಗೊಂಡ ಹತ್ತು ವರ್ಷಗಳ ನಂತರ ಬರೆದಾಗ ಅವರು ವಿಭಜನೆ ಹಾಗೂ ಸ್ವದೇಶಿ ಚಳವಳಿಯು ಹಿಂಸೆಗೆ ತಿರುಗಿದ್ದನ್ನು ಟಾಗೋರರು ತಮ್ಮ ಕಾದಂಬರಿಯಲ್ಲಿ ದಾಖಲಿಸುತ್ತಾರೆ. ಸ್ವದೇಶಿ ಆಂದೋಲನ ಕುರಿತು 1908ರಲ್ಲಿ ಅವರು ಬರೆದ ಟಿಪ್ಪಣಿ ಹೀಗಿದೆ- ‘‘ನಮಗೆ ಗೊತ್ತಿರಬೇಕು. ಈ ವಿದೇಶಿ ಅರಸರು ನಮ್ಮ ನೆಲ ಬಿಟ್ಟು ಹೋದ ಕೂಡಲೇ ಇದು ನಮ್ಮ ತಾಯಿನೆಲ ಆಗುವುದಿಲ್ಲ. ನಮ್ಮ ತಾಯಿ ನೆಲದ ಪ್ರೀತಿಯನ್ನು ನಾವು ಈ ನೆಲದ ಜನಕ್ಕೆ ತೋರುವ ಪ್ರೀತಿಯಿಂದ ಸಂಪಾದಿಸಬೇಕಿದೆ. ಈ ನೆಲದ ಎಲ್ಲಾ ಜನರಿಗೆ ಯಾವುದೇ ಪೂರ್ವಗ್ರಹ, ಭೇದವಿಲ್ಲದೆ ಅನ್ನ, ಆಸರೆ, ಆನಂದ, ನೆಮ್ಮದಿ ಹಾಗೂ ಬದುಕುವ ಅವಕಾಶವನ್ನು ನೀಡುವ ವ್ಯವಸ್ಥೆ ಮಾಡದ ಹೊರತು ಯಾವ ನೆಲವೂ ಯಾರ ಸ್ವಂತದ್ದೂ ಆಗುವುದಿಲ್ಲ. ಈ ವಿವರವನ್ನು ನಮ್ಮ ಮನಸ್ಸಿನೊಳಗೆ ಇಳಿಸಿಕೊಂಡು ಕಾರ್ಯರೂಪಕ್ಕೆ ತಂದಾಗ ‘ದೇಶ’ ಎಂಬ ಪದಕ್ಕೆ ನಿಜವಾದ ಅರ್ಥ ತನ್ನಿಂದ ತಾನೇ ಅರಿವಾಗುತ್ತದೆ’’ ಎನ್ನುತ್ತಾರೆ. ಈ ಹಿನ್ನೆಲೆಯಲ್ಲಿ ಈ ನಾಟಕ ನೋಡಬೇಕು.

ಸಿದ್ಧಾರ್ಥ ಠಾಕೂರ್ ಎಂಬ ಜಮೀನ್ದಾರನಿಗೆ ಶಾರದೆ ಎಂಬ ಪತ್ನಿ ಹಾಗೂ ಸಿದ್ಧಾರ್ಥನ ಬಾಲ್ಯದ ಗೆಳೆಯ ಹಾಗೂ ಸ್ವದೇಶಿ ಚಳವಳಿಗಾರ ಇಂದ್ರಜಿತ್ ನಡುವೆ ನಡೆಯುವ ಕಥಾನಕ ಒಳಗೊಂಡ ನಾಟಕವಿದು. ‘‘ನಿಜವಾಗ್ಲೂ ಹೇಳ್ತೀನಿ’’ ಎಂದೇ ಮಾತು ಶುರು ಮಾಡುವ ಇಂದ್ರಜಿತ್, ಆನಂದ ಸಾಗರದ ಸಂಸಾರದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡುತ್ತಾನೆ. ಮಹಾತ್ಮಾ ಗಾಂಧೀಜಿ ಸಮಕಾಲೀನರಾಗಿದ್ದ, ವಿಲಾಯಿತಿನಲ್ಲಿ ಓದಿದ ಪರಿಣಾಮ ಸಿದ್ಧಾರ್ಥ, ಬರ್ಟಂಡ್ ರಸಲ್ನ ಮುಕ್ತವಾದ ಆಲೋಚನೆ (ಫ್ರೀ ಥಿಂಕಿಂಗ್) ಹಾಗೂ ಎಲ್ಲರನ್ನೂ ಒಳಗೊಳ್ಳುವ ಮನಸ್ಥಿತಿ (ಲಿಬರಲಿಸಂ)ಯುಳ್ಳವನು. ತನ್ನ ಹೆಂಡತಿ ಶಾರದೆಯು ಇಂದ್ರಜಿತ್ ಮಾತಿಗೆ ಮರುಳಾಗುವುದನ್ನು ಕಂಡೂ ‘‘ಬಿಡುಗಡೆ ಕೊಡಲೇ?’’ ಎಂದು ಕೇಳುತ್ತಾನೆ. ‘‘ಬಿಡುಗಡೆ ಎಂದರೆ ಏನರ್ಥ? ಇಷ್ಟು ವರ್ಷ ಪಂಜರದಲ್ಲಿದ್ದೆ. ಕಟ್ಟಿದ್ದು ತಾಳಿನಾ? ಕೋಳನಾ? ನನ್ನನ್ನೇ ನಾನು ಬಿಡುಗಡೆ ಮಾಡಿಕೊಳ್ತೀನಿ’’ ಎಂದುಕೊಳ್ಳುತ್ತಾಳೆ. ಇದಕ್ಕಾಗಿ ತನ್ನ ತವರುಮನೆಯವರು ಕೊಟ್ಟಿದ್ದ ಚಿನ್ನಾಭರಣಗಳನ್ನು ಮುನ್ನಾನ ಮೂಲಕ ಪೇಟೆಯಲ್ಲಿ ಮಾರಲು ಯತ್ನಿಸುತ್ತಾಳೆ. ಇದರೊಂದಿಗೆ ಸ್ವದೇಶಿ ಆಂದೋಲನಕ್ಕಾಗಿ ಹೋರಾಡುತ್ತಿರುವ ಇಂದಜಿತ್ ಮಾತಿನ ಮರ್ಮ ಹಾಗೂ ಒಳಗೊಂದು, ಹೊರಗೊಂದು ಇರುವ ಆತನ ಮನಸ್ಥಿತಿಯನ್ನು ಕಂಡು ಬೇಸರಿಸಿಕೊಳ್ಳುತ್ತಾಳೆ. ಜೊತೆಗೆ ಚಳವಳಿಯನ್ನು ವಿಸ್ತರಿಸುವ ಸಲುವಾಗಿ ಸಹಕಾರಿ ಬ್ಯಾಂಕನ್ನು ಲೂಟಿ ಮಾಡುವುದನ್ನು ತನ್ನ ಸಹಚರರಿಗೆ ಹೇಳಿಕೊಡುತ್ತಾನೆ. ಹಾಗೆಯೇ ಕಡಿಮೆ ಸಂಖ್ಯೆಯಿದ್ದ ಶಾಲೆಗೆ ಚಕ್ಕರ್ ಹಾಕಿ ಇಂದ್ರಜಿತ್ ಜೊತೆಗಾರರಾಗುವ ಹುಡುಗರನ್ನು ಕಂಡು ಹೌಹಾರುತ್ತಾರೆ ಅವರಿಗೆ ಕಲಿಸುತ್ತಿದ್ದ ಪಂಡಿತರು. ಆದರೆ ಹೆಚ್ಚು ಓದಿರುವ, ನಿಜವಾದ ಸ್ವದೇಶಿಯಾಗುವನು ಸಿದ್ದಾರ್ಥ. ಆದರೆ ಅಶಿಕ್ಷಿತ ಹಾಗೂ ದಡ್ಡನಾದ ಇಂದ್ರಜಿತ್ ಹೋರಾಟದ ಹೆಸರಲ್ಲಿ ಲೂಟಿ ಮಾಡುವುದನ್ನು ಕಂಡಾಗ ಸಿದ್ಧಾರ್ಥ ಎಚ್ಚರಿಕೆ ಕೊಡುತ್ತಾನೆ. ಕೊನೆಗೆ ಸಿದ್ಧಾರ್ಥನನ್ನು ಕೊಂದಾಗ ಶಾರದೆಗೆ ಬಿಳಿಬಟ್ಟೆ ಹೊದಿಸುತ್ತಾರೆ. ಆ ಬಿಳಿಬಟ್ಟೆ ಸರಿಸುವ ಆಕೆ ‘‘ಎಲ್ಲರನ್ನೂ ಒಳಗೊಳ್ಳುವ ಮನಸ್ಥಿತಿ ಬರಬೇಕು ಮತ್ತೆ ಅಗತ್ಯ ಬಿದ್ದಾಗ ಈ ಲೋಕದ ಎಲ್ಲಾ ಶಾರದೆಯರು ಕಾಳಿಯಾಗಲು ಸಿದ್ಧರಾಗಬೇಕು’’ ಎನ್ನುವ ಕರೆ ಕೊಡುತ್ತಾಳೆ. ಹೀಗೆ ಅಂತ್ಯವಾಗುವ ಈ ನಾಟಕ ಶಾರದೆಯನ್ನು ವಿಧವೆ ಮಾಡುವ ಮೂಲಕ ಆರಂಭವಾಗುತ್ತದೆ. ನಂತರ ಫ್ಲ್ಯಾಶ್ಬ್ಯಾಕ್ ಮೂಲಕ ನಾಟಕ ತೆರೆದುಕೊಳ್ಳುತ್ತದೆ. ಇದಷ್ಟನ್ನೇ ನಾಟಕ ಹೇಳುವುದಿಲ್ಲ. ನಿಮಗೆ ಕಂಡಷ್ಟು; ನೀವು ಕಾಣುವಷ್ಟು. ದೇಶಭಕ್ತಿ ಎಂಬುದು ಏನೆಲ್ಲ ಸ್ವರೂಪ ಪಡೆದುಕೊಳ್ಳುತ್ತಿರುವ ಹೊತ್ತಲ್ಲಿ ಇಂದ್ರಜಿತ್ ಎಂಬ ಹುಸಿ ಚಳವಳಿಗಾರನ ಅಸಲಿಯತ್ತು ಅನಾವರಣಗೊಳಿಸುತ್ತದೆ. ರಾಜಕೀಯ ಪಲ್ಲಟಗಳನ್ನು, ಮನೆಯ ಒಳಗಿನ ಕಿಚ್ಚು ಹೊರಗಣವನ್ನು ಹೇಗೆ ಸುಡುತ್ತದೆ ಎಂಬುದನ್ನು ಸೂಕ್ಷ್ಮವಾಗಿ ನಾಟಕ ಅನಾವರಣಗೊಳಿಸುತ್ತದೆ. ದ್ವೇಷವನ್ನು ಅಳಿಸೋಣ, ಪ್ರೀತಿಯನ್ನು ಬಿತ್ತೋಣ ಎನ್ನುವ ಸಂದೇಶವನ್ನೂ ನಾಟಕ ಸಾರುತ್ತದೆ. ಇದಕ್ಕೆ ಪೂರಕವಾಗಿ ಟಾಗೋರರ ಪ್ರಾರ್ಥನೆ ಪದ್ಯ, ಆಲಾಪಗಳೂ ಹಿಡಿದಿಡುತ್ತವೆ.

ಗಮನಾರ್ಹ ಸಂಗತಿ ಎಂದರೆ, ಈ ನಾಟಕದ ರಂಗಸಜ್ಜಿಕೆ. ಜಮೀನ್ದಾರನ ಮನೆಯೊಳಗಿದ್ದ ಹಾಗೆ ಸೋಫಾ, ಕುರ್ಚಿ, ಮಂಚವನ್ನು ಆ ಕಾಲದ ಹಾಗೆ ಹಿಡಿದಿಡಲಾಗಿದೆ. ಹಾಗೆಯೇ ಕತ್ತರಿಸಿದ ವಾಟರ್ ಕ್ಯಾನುಗಳು ಉರಿಯುವ ದೀಪಗಳಾಗಿವೆ. ಫ್ಯಾನಿನ ಮೂಲಕ ಕೆಂಪು ಬಣ್ಣದ ಹಾಳೆಗಳನ್ನು ಅಲುಗಾಡಿಸುವ ಮೂಲಕ ಉರಿಯನ್ನು ಸೃಷ್ಟಿಸಲಾಗಿದೆ. ಇಂಥ ಸಣ್ಣ ಸಣ್ಣ ಸಂಗತಿಗಳಿಗೂ ಗಮನ ಕೊಡಲಾಗಿದೆ. ಇನ್ನು ಸಿದ್ಧಾರ್ಥನಾಗಿ ಅನೂಪ್ ರಾಮಮೂರ್ತಿ ಪಾತ್ರವೇ ಆಗಿದ್ದಾರೆ. ಅನೂಪ್ ಅವರು ರಂಗ ಸಂಪದ ತಂಡದ ಕಲಾವಿದರಾಗಿದ್ದ ಬಿ.ಎಸ್.ರಾಮಮೂರ್ತಿಯವರ ಪುತ್ರ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಅವರು ರಂಗಭೂಮಿಯತ್ತ ವಾಲಿರುವುದು ಅಭಿನಂದನಾರ್ಹ. ಶಾರದೆಯಾಗಿ ರಚನಾ ಅವರು ಇನ್ನಷ್ಟು ತಾಳ್ಮೆಯಿಂದ ನಟಿಸಬೇಕಿತ್ತು. ಅಂದರೆ ಆಂಗಿಕ ಅಭಿನಯ ಚೆನ್ನಾಗಿತ್ತು. ಆದರೆ ಗಡಿಬಿಡಿಯಲ್ಲಿ ಸಂಭಾಷಣೆ ಒಪ್ಪಿಸದೆ ಕೊಂಚ ತಾಳ್ಮೆಯಿಂದ ಮಾತು ಆಡಬೇಕಿತ್ತು. ಅನೂಪ್ ಹಾಗೂ ರಚನಾ ನಿಜಜೀವನದಲ್ಲೂ ದಂಪತಿ. ಈ ಮೂಲಕ ರಂಗಪರಂಪರೆ ಬೆಳೆದ ಹಾಗಾಯಿತು.

ಇನ್ನು ಇಂದ್ರಜಿತ್ ಪಾತ್ರಧಾರಿ ಧನುಷ್ ನಾಗ್ ತಮ್ಮ ಅಭಿನಯದ ಮೂಲಕ ರಂಗವನ್ನು ಆವರಿಸಿಕೊಳ್ಳುತ್ತಾರೆ. ಮುನ್ನನಾಗಿ ಪ್ರವೀಣ್ ರಾಜ್, ಪಂಡಿತರಾಗಿ ನಿರಂಜನ್ ಖಾಲಿಕೊಡ, ಕುಲಕರ್ಣಿಯಾಗಿ ಸುಮುಖ, ಮೇಳದಲ್ಲಿ ಅವನಿ, ಅನಘಾ, ಯೋಗೀಶ ಹಾಗೂ ದಿಲೀಪಕುಮಾರ್, ಬೆಳಕಿನ ವಿನ್ಯಾಸಗೊಳಿಸಿ, ಸಹಾಯಕ ನಿರ್ದೇಶಕರಾದ ಅಕ್ಷರ ವೇಣುಗೋಪಾಲ್ ಅವರ ಶ್ರಮ ನಾಟಕದ ಯಶಸ್ಸಿಗೆ ಕಾರಣವಾಗುತ್ತದೆ. ಹೀಗೆ ಯಶಗೊಂಡ ನಾಟಕಕ್ಕೆ ದುಡಿದವರು ರಂಗ ಸಂಪದದ ಅಧ್ಯಕ್ಷರಾದ ಜೆ.ಲೋಕೇಶ್ ಹಾಗೂ ಅವರ ತಂಡ.

ಟಾಗೋರರ ಈ ಕಾದಂಬರಿಯನ್ನು ಅದೇ ಹೆಸರಿನಲ್ಲಿ 1985ರಲ್ಲಿ ಸತ್ಯಜಿತ್ ರೇ ಅವರು ನಿರ್ದೇಶಿಸಿದ್ದರು.

ಅಂದ ಹಾಗೆ ಇದು ಬಿ. ಸುರೇಶ ರಚನೆಯ 25ನೇ ನಾಟಕ. ಅವರ ನಿರ್ದೇಶನದ 50ನೇ ನಾಟಕ. ರಂಗ ಸಂಪದದ 50ನೇ ವರ್ಷದ ನಾಟಕವಿದು. ಇದರೊಂದಿಗೆ ಆಗಸ್ಟ್ 27ರಂದು ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಪ್ರದರ್ಶನ ಕಂಡ ನಾಟಕದ ನಂತರ (ಆಗಸ್ಟ್ 26ರಂದು ಮೊದಲ ಪ್ರದರ್ಶನ ಕಂಡಿತ್ತು) ಬಿ. ಸುರೇಶ ಅವರ 61ನೇ ಜನ್ಮದಿವನ್ನು ಮುನ್ನಾದಿನವೇ ರಂಗದ ಮೇಲೆ ಆಚರಿಸಲಾಯಿತು. ಅವರ ತಾಯಿ ವಿಜಯಮ್ಮ ಅವರು ರಂಗದ ಮೇಲೆ ಬಂದು ಸುರೇಶ ಅವರಿಗೆ ಶಾಲು ಹೊದಿಸಿದಾಗ ನೆರೆದಿದ್ದ ಪ್ರೇಕ್ಷಕರು ಜೋರಾದ ಚಪ್ಪಾಳೆ ತಟ್ಟಿ ಶುಭ ಹಾರೈಸಿದರು.

ನಾಟಕ: ಲೋಕದ ಒಳಹೊರಗೆ

ಮೂಲ: ರವೀಂದ್ರನಾಥ ಟಾಗೋರ್ ಅವರ ‘ಘರೇ ಬೈರೇ’ ಕಾದಂಬರಿ

ರಂಗರೂಪ/ನಿರ್ದೇಶನ: ಬಿ.ಸುರೇಶ

ತಂಡ: ರಂಗ ಸಂಪದ

ಸಂಗೀತ: ಅನೂಪ್ ಶೆಟ್ಟಿ, ಮುನ್ನ

ಪ್ರಸಾಧನ: ಎನ್.ಕೆ.ರಾಮಕೃಷ್ಣ

ರಂಗವಿನ್ಯಾಸ: ಶಿವಲಿಂಗಪ್ರಸಾದ್/ಪ್ರಜ್ವಲ್ ಮಸ್ಕಿ

ಪರಿಕರಗಳು: ವಿನೋದ್ ಪುತ್ತೂರು

ವಸ್ತ್ರವಿನ್ಯಾಸ: ವೈಜಯಂತಿ/ಅನನ್ಯ

ಬೆಳಕು ವಿನ್ಯಾಸ/ಸಹಾಯ ನಿರ್ದೇಶನ: ಅಕ್ಷರ ವೇಣುಗೋಪಾಲ್

ನಿರ್ವಹಣೆ: ಚಡ್ಡಿ ನಾಗೇಶ್

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X