Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಅಂಬೇಡ್ಕರ್ ದ್ವೇಷಿ, ಸಂವಿಧಾನ ದ್ರೋಹಿಗಳ...

ಅಂಬೇಡ್ಕರ್ ದ್ವೇಷಿ, ಸಂವಿಧಾನ ದ್ರೋಹಿಗಳ ‘ಸಂವಿಧಾನ ಸನ್ಮಾನ ಅಭಿಯಾನ’

-ಶಿವ ಸುಂದರ್-ಶಿವ ಸುಂದರ್8 Dec 2024 10:41 AM IST
share
ಅಂಬೇಡ್ಕರ್ ದ್ವೇಷಿ, ಸಂವಿಧಾನ ದ್ರೋಹಿಗಳ ‘ಸಂವಿಧಾನ ಸನ್ಮಾನ ಅಭಿಯಾನ’

ಸಂಘಪರಿವಾರದ ಅಂಗಸಂಸ್ಥೆಗಳು ಈಗ ನಡೆಸುತ್ತಿರುವ ‘ಸಂವಿಧಾನ ಸನ್ಮಾನ ಅಭಿಯಾನ’ದಲ್ಲಿ ಸಂವಿಧಾನದ ಹಾಗೂ ಅಂಬೇಡ್ಕರ್‌ರ ನಿಜವಾದ ಅನುಯಾಯಿಗಳು ತಾವೇ ಹೊರತು ಕಾಂಗ್ರೆಸ್ ಅಥವಾ ಇತರ ಪಕ್ಷಗಳಲ್ಲ ಎಂದು ನಂಬಿಸಲು ಹಲವಾರು ಸುಳ್ಳುಗಳನ್ನು, ಐತಿಹಾಸಿಕ ಅರ್ಧ ಸತ್ಯಗಳನ್ನು, ಪ್ರಚಾರ ಮಾಡುತ್ತಿದೆ. ಆ ಮೂಲಕ ತನ್ನ ನಿಜ ಸ್ವರೂಪವಾದ ಅಂಬೇಡ್ಕರ್ ದ್ವೇಷ ಹಾಗೂ ಸಂವಿಧಾನ ದ್ರೋಹವನ್ನು ಮರೆಮಾಚುವ ಕುತಂತ್ರ ನಡೆಸಿದೆ..

ಈ ಸರಣಿ ಲೇಖನವು ಸಂಘಿ ಅಭಿಯಾನದ ಸುಳ್ಳುಗಳನ್ನು, ಬಯಲಿಗೆಳೆಯಲಿದೆ ಮತ್ತು ಸಂಘಿಗಳ ಅಸಲಿ ಪಾತ್ರವನ್ನು ಮತ್ತು ಹಾಲಿ ದುರುದ್ದೇಶಗಳನ್ನು ಅನಾವರಣ ಮಾಡಲಿದೆ.. ಕರ್ನಾಟಕದ ರಾಜಕೀಯ ಆರೋಗ್ಯದ ಹಿತದೃಷ್ಟಿಯಿಂದ ಈ ಸರಣಿಯನ್ನು ಪ್ರಕಟಿಸಲಾಗುತ್ತಿದೆ.

ದಲಿತರ ಅಸ್ಮಿತೆ ಮತ್ತೊಮ್ಮೆ ಹಿಂದೂ ಅಸ್ಮಿತೆಗೆ ಅಧೀನವಾಯಿತು. ದಲಿತರಿಗೆ ಹೆಚ್ಚು ಸೀಟುಗಳು ಸಿಕ್ಕರೂ ಅಂತಿಮವಾಗಿ ಜಂಟಿ ಮತದಾನದ ಮೂಲಕವೇ ದಲಿತ ಪ್ರತಿನಿಧಿ ಆಯ್ಕೆಯಾಗಬೇಕಿತ್ತು. ಇದರಿಂದ ದಲಿತರು ಮಾತ್ರ ಆಯ್ಕೆ ಮಾಡುತ್ತಿದ್ದ ಮೊದಲ ಸುತ್ತಿನಲ್ಲಿ ಆಯ್ಕೆಯಾದ ನೈಜ ದಲಿತ ಪ್ರತಿನಿಧಿಗಳು ಅಂತಿಮ ಸುತ್ತಿನಲ್ಲಿ ಆಯ್ಕೆಯಾಗುತ್ತಿರಲಿಲ್ಲ. ಏಕೆಂದರೆ ಅಂತಿಮವಾಗಿ ಜಂಟಿ ಮತದಾನವಾದಾಗ ಬಹುಸಂಖ್ಯಾತ ಸವರ್ಣೀಯ ಯಾವ ದಲಿತ ಪ್ರತಿನಿಧಿ ಹಿಂದೂ ಮತದಾರರ ಅಧೀನತೆಗೆ ಒಳಪಡುತ್ತಿದ್ದರೋ ಅಂತಹ ದಲಿತ ಪ್ರತಿನಿಧಿಗಳು ಮಾತ್ರ ಆಯ್ಕೆಯಾಗುತ್ತಿದ್ದರು. ನೈಜ ದಲಿತ ಪ್ರತಿನಿಧಿಗಳು ಆಯ್ಕೆಯಾಗುತ್ತಲೇ ಇರಲಿಲ್ಲ.

ಅಂಬೇಡ್ಕರ್ ಅವರು ಪೂನಾ ಒಪ್ಪಂದದಿಂದ ಆದ ಈ ದ್ರೋಹವನ್ನು 1937ರಲ್ಲಿ ನಡೆದ ಚುನಾವಣೆಯ ಫಲಿತಾಂಶಗಳ ವಿಶ್ಲೇಷಣೆಯಲ್ಲಿ ಸ್ಪಷ್ಟವಾಗಿ ತೋರಿಸಿದರು. ಅದೇ ಪರಿಸ್ಥಿತಿಯೇ ಈಗಲೂ ಮುಂದುವರಿದಿದೆ.

ಕಾಂಗ್ರೆಸ್ ಮತ್ತು ಹಿಂದೂ ಮಹಾಸಭಾಗಳ ಕುಮ್ಮಕ್ಕಿನೊಂದಿಗೆ ಭಯೋತ್ಪಾದನೆಯ ಮೂಲಕ ಜಾರಿಯಾದ ಈ ಚುನಾವಣಾ ವ್ಯವಸ್ಥೆಯೇ 1946ರ ಪ್ರಾಂತೀಯ ಸಭಾ ಚುನಾವಣೆಯಲ್ಲಿ ಮತ್ತು ಆನಂತರ ಸಂವಿಧಾನ ಸಭೆಗೆ ಅಂಬೇಡ್ಕರ್ ಆಯ್ಕೆಯಾಗದಂತಹ ಪರಿಸ್ಥಿತಿಯನ್ನು ಸೃಷ್ಟಿಸಿತು. ಇದರ ಜೊತೆಗೆ ಕಾಂಗ್ರೆಸ್ ರಾಜಕಾರಣದಾಚೆಗೆೆ ಮತ್ತು ಹಿಂದೂ ಧಾರ್ಮಿಕ ಚೌಕಟ್ಟಿನಾಚೆಗೆ ಸ್ವಾಯತ್ತ ಸ್ವಾಭಿಮಾನಿ ದಲಿತ ರಾಜಕಾರಣದ ನಾಯಕರಾಗಿದ್ದ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಮತ್ತು ಹಿಂದೂ ಮಹಾಸಭಾ ಇಬ್ಬರು ದ್ವೇಷಿಸುತ್ತಿದ್ದದ್ದು ಕೂಡ ಅಂಬೇಡ್ಕರ್ ಹಾದಿಯನ್ನು ದುರ್ಗಮಗೊಳಿಸಿತ್ತು.

1946 ರ ಪ್ರಾಂತೀಯ ಚುನಾವಣೆ ಮತ್ತು ದಲಿತ ಅಸ್ಮಿತೆಯನ್ನು ನುಂಗಿದ ಕೋಮುವಾದ

ಭಾರತಕ್ಕೆ ಅಧಿಕಾರ ಹಸ್ತಾಂತರ ಮಾಡುವ ಪ್ರಕ್ರಿಯೆಗಳನ್ನು ನಿಗದಿ ಮಾಡಲು 1945ರಲ್ಲಿ ಭಾರತಕ್ಕೆ ಬಂದ ಬ್ರಿಟನ್‌ನ ಕ್ಯಾಬಿನೆಟ್ ಮಿಶನ್ ಸ್ವತಂತ್ರ ಭಾರತದ ಸಂವಿಧಾನ ರಚನೆಗಾಗಿ ಸಂವಿಧಾನ ಸಭೆಯನ್ನು ರಚಿಸಲು ಒಪ್ಪಿಕೊಂಡಿತು ಮತ್ತು ಅದರ ಸದಸ್ಯರನ್ನು ಪ್ರಾಂತೀಯ ಶಾಸನ ಸಭೆಗಳು ಆಯ್ಕೆ ಮಾಡಬೇಕೆಂದು ನಿಗದಿ ಪಡಿಸಿತು. ಅದರ ಭಾಗವಾಗಿ 1946ರಲ್ಲಿ ಪ್ರಾಂತೀಯ ಶಾಸನಾ ಸಭೆಗಳಿಗೆ ಚುನಾವಣೆ ನಡೆಸಲಾಯಿತು.

ಆದರೆ ಈ ಪ್ರಾಂತೀಯ ಶಾಸನ ಸಭಾ ಚುನಾವಣೆಗಳಿಂದಲೇ ಸಂವಿಧಾನ ಸಭೆಯ ಸದಸ್ಯರೂ ಅಯ್ಕೆಯಾಗಬೇಕಿದ್ದರಿಂದ ಅಂಬೇಡ್ಕರ್ ಅವರನ್ನು ಹೇಗಾದರೂ ಸೋಲಿಸಲೇಬೇಕೆಂದು ಪಣತೊಟ್ಟಿದ್ದು ಕಾಂಗ್ರೆಸ್ ಮಾತ್ರವಲ್ಲ ಹಿಂದೂ ಮಹಾಸಭಾ ಕೂಡ. ಅದು ಹೇಗೆಂದು ಮುಂದೆ ನೋಡೋಣ.

ಆ ವೇಳೆಗಾಗಲೇ ಸಂಘಿಗಳ ಪಿತಾಮಹ ಸಾವರ್ಕರ್ ಪ್ರತಿಪಾದಿಸುತ್ತಾ ಬಂದಿದ್ದ ದ್ವಿರಾಷ್ಟ್ರ ಸಿದ್ಧಾಂತ ಭಾರತದ ಭಾವೈಕ್ಯವನ್ನು ಭಗ್ನಗೊಳಿಸಿ ಭಾರತವನ್ನು ಎರಡು ರಾಷ್ಟ್ರವಾಗಿ ಧ್ರುವೀಕರಿಸಲು ಪ್ರಾರಂಭಿಸಿತ್ತು. ವಿಭಜನೆಯತ್ತ ವೇಗವಾಗಿ ದೂಡುತ್ತಿತ್ತು.

ಇದರೊಂದಿಗೆ ಸವರ್ಣೀಯ ಹಿಂದೂ ಪ್ರಾತಿನಿಧ್ಯದ ಆಧಿಪತ್ಯವನ್ನು ಸಾಬೀತು ಪಡಿಸಿದ್ದ 1937ರ ಚುನಾವಣಾ ಫಲಿತಾಂಶಗಳು ಮುಸ್ಲಿಮರಲ್ಲಿ ಮತ್ತು ಸ್ವಾಭಿಮಾನಿ ದಲಿತರಲ್ಲಿ ಹಿಂದೂ ಮೇಲಾಧಿಪತ್ಯದ ಬಗ್ಗೆ ಆತಂಕ ಹಾಗೂ ಅಸಮಾಧಾನ ಮೂಡಿಸಿತ್ತು.

ಹೀಗಾಗಿ ಮುಸ್ಲಿಮ್ ಲೀಗಿನ ಜಿನ್ನಾರವರು ಪ್ರತಿಪಾದಿಸಿದ ಅವಿಭಜಿತ ಭಾರತದೊಳಗೆ ಸ್ವಾಯತ್ತ ಮುಸ್ಲಿಮ್ ಪ್ರಾಂತಗಳು ಅಥವಾ ದೇಶ ವಿಭಜನೆ ಎಂಬ ಪ್ರಸ್ತಾಪವು ತೀವ್ರವಾಗಿ ಪರಿಗಣಿಸಲ್ಪಡುತ್ತಿತ್ತು. ಮತ್ತೊಂದು ಕಡೆ ಮುಸ್ಲಿಮ್ ಬಹುಸಂಖ್ಯಾತ ಪ್ರದೇಶಗಳಿಗೆ ವಿಶೇಷ ಸ್ವಾಯತ್ತತೆ ಕೊಡುವುದನ್ನು ಖಡಾಖಂಡಿತವಾಗಿ ನಿರಾಕರಿಸಿದ ಪಟೇಲ್-ನೆಹರೂ ನೇತೃತ್ವದ ಕಾಂಗ್ರೆಸ್ ಕೂಡ ದೇಶ ವಿಭಜನೆಯನ್ನು ಅನಿವಾರ್ಯ ಆಯ್ಕೆಯಾಗುವತ್ತ ತಳ್ಳುತ್ತಿತ್ತು.

ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್ ಈ ರಾಜಕೀಯ ಸಂದರ್ಭವನ್ನು ಅತ್ಯಂತ ಅಮಾನುಷವಾಗಿ ಬಳಸಿಕೊಂಡಿತು. ಮುಸ್ಲಿಮ್ ಬಹುಸಂಖ್ಯಾತ ಪ್ರದೇಶದಲ್ಲಿ ಹಿಂದೂಗಳ ಆತಂಕವನ್ನು ದುರ್ಬಳಕೆ ಮಾಡಿಕೊಂಡು ಮುಸ್ಲಿಮ್ ವಿರೋಧಿ ದಂಗೆಗಳನ್ನು ಹುಟ್ಟುಹಾಕಿತು ಮತ್ತು ಆರೆಸ್ಸೆಸ್ ಕೂಡ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಹಿಂಸಾಚಾರದಲ್ಲಿ ತೊಡಗಿಕೊಂಡಿತು.

ಬಂಗಾಳ ಪ್ರಾಂತದಲ್ಲಂತೂ ದೇಶ ವಿಭಜನೆಯ ವಿರುದ್ಧ ಧ್ವನಿ ಎತ್ತುತ್ತಿದ್ದ ಹಿಂದೂಗಳ ಮೇಲೆ ಅಪಪ್ರಚಾರ ಮಾಡಲು ಪ್ರಾರಂಭಿಸಿತು. ಆ ಅಪಪ್ರಚಾರಕ್ಕೆ ಬಲಿಯಾದವರಲ್ಲಿ ಅಂಬೇಡ್ಕರ್‌ವಾದಿ ಜೋಗೇಂದ್ರನಾಥ್ ಮಂಡಲ್ ಕೂಡ ಒಬ್ಬರು.

ಈ ಆತಂಕ ಮತ್ತು ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಸಂವಿಧಾನ ಸಭೆಯ ಸದಸ್ಯರನ್ನು ಆಯ್ಕೆ ಮಾಡಬೇಕಾದ ಪ್ರಾಂತೀಯ ಶಾಸನಸಭೆಗಳಿಗೆ ಚುನಾವಣೆಗಳು ನಡೆದವು.

ಅಂಬೇಡ್ಕರ್ ದ್ವೇಷಿ ಸರ್ದಾರ್ ಪಟೇಲ್

1946 ರ ಪ್ರಾಂತೀಯ ಶಾಸನ ಸಭಾ ಚುನಾವಣೆಗಳಿಗೆ ಅಂಬೇಡ್ಕರ್ ಅವರು ತಮ್ಮ ಆಲ್ ಇಂಡಿಯಾ ಶೆಡ್ಯೂಲ್ ಕಾಸ್ಟ್ ಫೆಡರೇಶನ್ ಪ್ರತಿನಿಧಿಯಾಗಿ ಮುಂಬೈ ಪ್ರಾಂತ್ರದಿಂದ ಸ್ಪರ್ಧಿಸಿದ್ದರು. ವಿವಿಧ ಪ್ರಾಂತೀಯ ಶಾಸನಸಭೆಗಲ್ಲಿ ಒಟ್ಟಾರೆ 151 ಮೀಸಲು ಕ್ಷೇತ್ರಗಳು ಪರಿಶಿಷ್ಟರಿಗೆ ನಿಗದಿಯಾಗಿದ್ದವು. ಆದರೆ ಮೇಲೆ ವಿವರಿಸಿದ ಕಾರಣಗಳಿಂದಾಗಿ ಅಂಬೇಡ್ಕರ್ ಅವರನ್ನು ಮತ್ತು ಅವರ ಶೆಡ್ಯೂಲ್ಡ್ ಕಾಸ್ಟ್ ಫೆಡರೇಶನ್ ಅನ್ನು ಯಾವ ಕಾರಣಕ್ಕೂ ಗೆಲ್ಲಲು ಬಿಡಬಾರದೆಂಬುದು ಕಾಂಗ್ರೆಸ್‌ನ ಅಧಿಕೃತ ನಿಲುವಾಗಿತ್ತು. ಅದಕ್ಕೆ ಪ್ರತಿಯಾಗಿ ತನ್ನದೇ ಆದ ಕಾರಣಗಳಿಗಾಗಿ ಅಂಬೇಡ್ಕರ್ ಮತ್ತು ಫೆಡರೇಶನ್‌ಗೆ ನೈತಿಕ ಬೆಂಬಲ ತೋರಿದ್ದು ಮುಸ್ಲಿಮ್ ಲೀಗ್ ಮಾತ್ರ. ಇದು ವಾಸ್ತವ.

ಆದರೆ ಇದರಲ್ಲಿ ಸಂಘಿಗಳು ಮುಚ್ಚಿಡುತ್ತಿರುವ ಸತ್ಯವೇನೆಂದರೆ ಕಾಂಗ್ರೆಸ್ ಕಡೆಯಿಂದ ಯಾವ ಕಾರಣಕ್ಕೂ ಅಂಬೇಡ್ಕರ್ ಗೆಲ್ಲಬಾರದೆಂದು ಹಠ ತೊಟ್ಟು ನಿಂತಿದ್ದು ಸಂಘಿಗಳು ಆರಾಧಿಸುವ ಕಾಂಗ್ರೆಸ್ ನಾಯಕ ಸರ್ದಾರ್ ಪಟೇಲ್ ಅವರು.

ವಾಸ್ತವದಲ್ಲಿ ಪಟೇಲರು ‘‘ಅಂಬೇಡ್ಕರ್‌ಗೆ ಸಂವಿಧಾನ ಸಭೆಯ ಬಾಗಿಲಿರಲಿ ಕಿಟಿಕಿಯನ್ನು ತೆಗೆಯಗೊಡುವುದಿಲ್ಲ’’ ಎಂದು ಘೋಷಿಸಿದ್ದರು.

(https://frontierweekly.com/articles/vol-49/49-40/49-40-From Chandals to Namasudras.html)

ಅಷ್ಟು ಮಾತ್ರವಲ್ಲ. ಸ್ವಾತಂತ್ರ್ಯ ಮತ್ತು ದೇಶ ವಿಭಜನೆಗಳು ಹುಟ್ಟು ಹಾಕಿದ ಅನಿವಾರ್ಯ ಸಂದರ್ಭದಲ್ಲಿ ಇದೇ ಕಾಂಗ್ರೆಸ್ ಅಂಬೇಡ್ಕರ್‌ರನ್ನು ಸಂವಿಧಾನ ಸಭೆಗೆ ಆಯ್ಕೆ ಮಾಡಿದ್ದಲ್ಲದೆ, ಅಂಬೇಡ್ಕರ್‌ರ ಅಪಾರ ಪ್ರತಿಭೆ ಮತ್ತು ವಿದ್ವತ್ತಿನ ಕಾರಣಕ್ಕೆ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಕೂಡ ಮಾಡಬೇಕಾಯಿತು.

ಆದರೆ ಇದು ಪಟೇಲರಿಗೆ ಅಂಬೇಡ್ಕರ್ ಬಗ್ಗೆ ಇದ್ದ ಅಸಹನೆಯನ್ನೇನೂ ಕಡಿಮೆ ಮಾಡಲಿಲ್ಲ.

ಉದಾಹರಣೆಗೆ ಅಲ್ಪಸಂಖ್ಯಾತರ ಹಕ್ಕುಗಳ ಬಗೆಗಿನ ಉಪಸಮಿತಿಯಲ್ಲಿ ಅಂಬೇಡ್ಕರ್ ಮತ್ತು ಅಂಬೇಡ್ಕರ್ ವಾದಿ ನಾಗಪ್ಪರಂತಹ ಸದಸ್ಯರು ಚುನಾವಣೆಗಳಲ್ಲಿ ಪರಿಶಿಷ್ಟೇತರ ಸದಸ್ಯರ ಆಯ್ಕೆಯನ್ನು ಘೋಷಿಸುವ ಮುಂಚೆ ಆ ಅಭ್ಯರ್ಥಿ ಪರಿಶಿಷ್ಟರನ್ನು ಒಳಗೊಂಡು ಅಲ್ಪಸಂಖ್ಯಾತ ಸಮುದಾಯದ ನಿರ್ದಿಷ್ಟ ಪ್ರಮಾಣದ ಮತಗಳನ್ನು ಗಳಿಸುವುದು ಕಡ್ಡಾ ಮಾಡಬೇಕೆಂದು ಪ್ರಸ್ತಾವಿಸುತ್ತಾರೆ. ಆ ಪ್ರಸ್ತಾವವನ್ನು ಪಟೇಲರು ಸಾರಾಸಗಟಾಗಿ ಖಂಡಿಸಿ 28-3 ಅಂತರದಲ್ಲಿ ಸೋಲುವಂತೆ ಮಾಡುತ್ತಾರೆ. ಹಾಗೆಯೆ ಕನಿಷ್ಠ ಪಕ್ಷ ಮೀಸಲು ಕ್ಷೇತ್ರಗಳಲ್ಲಿ ಆಯ್ಕೆಯಾಗಲು ಕನಿಷ್ಠ ಶೇ. 50 ರಷ್ಟು ಪರಿಶಿಷ್ಟರ ಮತಗಳನ್ನು ಪಡೆಯುವುದು ಕಡ್ಡಾಯವಾಗಬೇಕೆಂಬ ಪ್ರಸ್ತಾಪವನ್ನು ಅಂಬೇಡ್ಕರ್‌ವಾದಿ ನಾಗಪ್ಪ ಮುಂದಿಡುತ್ತಾರೆ. ಇದನ್ನು ಪಟೇಲರು ಮತಕ್ಕೆ ಕೂಡ ಹಾಕದೆ ತಿರಸ್ಕರಿಸುವಂತೆ ಮಾಡುತ್ತಾರೆ. ಆ ನಂತರ ಪರಿಶಿಷ್ಟರನ್ನು ಉದ್ದೇಶಿಸಿ ಈ ಬೆದರಿಕೆಯ ಮಾತುಗಳನಾಡುತ್ತಾರೆ:

‘‘ಪರಿಶಿಷ್ಟ ಬಂಧುಗಳೇ, ಅಂಬೇಡ್ಕರ್ ಮತ್ತವರ ಗುಂಪು ಈ ಹಿಂದೆ ಮಾಡಿದ ಅನಾಹುತವನ್ನು ನೆನಪಿನಲ್ಲಿಡೋಣ. ಮತ್ತು ಅದು ಮರುಕಳಿಸದಂತೆ ತಡೆಯಬೇಕಿರುವುದರಿಂದ ಅಂತಹ ಆಗ್ರಹಗಳನ್ನು ಮರೆತುಬಿಡೋಣ. ಅಂಬೇಡ್ಕರ್ ಮತ್ತವರ ಅನುಯಾಯಿಗಳ ದೆಸೆಯಿಂದ ಭಾರತ ಮತ್ತೊಂದು ವಿಭಜನೆಯಾಗುವುದರಲ್ಲಿತ್ತು. ಅದು ಸ್ವಲ್ಪದರಲ್ಲಿ ತಪ್ಪಿದೆ. ಈ ವಿಭಜನೆಯ ವಿಷ ಬೀಜವು ನಿಮ್ಮ ಸಮುದಾಯದ ಮಹಾ ರಕ್ಷಕರಾಗಿದ್ದ ಗಾಂಧಿಯನ್ನು ಬಲಿ ತೆಗೆದುಕೊಂಡಿದೆ. ವಿಶಾಲ ಹಿಂದೂ ಸಮಾಜ ನಿಮ್ಮ ಒಳಿತನ್ನು ಕೋರುತ್ತದೆ. ಅವರಿಲ್ಲದೆ ನೀವು ಉಳಿಯಲು ಸಾಧ್ಯವೇ? ಆದ್ದರಿಂದ ಇವೆಲ್ಲವನ್ನೂ ಬಿಟ್ಟು ವಿಶಾಲ ಹಿಂದೂ ಸಮಾಜದ ವಿಶ್ವಾಸವನ್ನು ಗೆದ್ದುಕೊಳ್ಳಿ’’

(ಪುಟ 252, Politics and Ethics Of Indian Constitution ಸಂಪಾದಿತ ಬರಹಗಳ ಪುಸ್ತಕದಲ್ಲಿ ಕ್ರಿಸ್ತೋೋ ಜಾರ್ಲೆ ಅವರ containing the lower castes: The constituent assembly and the reservation ಲೇಖನದಿಂದ)

ಹೀಗಾಗಿ ಅಂಬೇಡ್ಕರ್ ಮೇಲೆ ಮತ್ತು ಸ್ವಾಯತ್ತ ದಲಿತ ಅಸ್ಮಿತೆಯ ಮೇಲೆ ಕಾಂಗ್ರೆಸ್ ನಡೆಸಿದ ದಾಳಿಯ ಮಹಾದಂಡನಾಯಕ ಸಂಘಿಗಳು ಆರಾಧಿಸುವ ಸರ್ದಾರ್ ಪಟೇಲರೇ ಆಗಿದ್ದರೆಂಬುದನ್ನು ಸಂಘಿಗಳು ಏಕೆ ಅಭಿಯಾನದಲ್ಲಿ ಮರೆಮಾಚುತ್ತಿದ್ದಾರೆ? ಅಂಬೇಡ್ಕರ್ ಬಗ್ಗೆ ಪಟೇಲರ ನಿಲುವನ್ನು ಸಂಘಿಗಳು ಈಗ ಖಂಡಿಸಲು ಸಿದ್ಧರಿದ್ದಾರೆಯೇ?

share
-ಶಿವ ಸುಂದರ್
-ಶಿವ ಸುಂದರ್
Next Story
X