Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ನಾಡಗೀತೆಯಲ್ಲಿ ‘ಬೌದ್ಧರುದ್ಯಾನ’

ನಾಡಗೀತೆಯಲ್ಲಿ ‘ಬೌದ್ಧರುದ್ಯಾನ’

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್19 July 2026 9:50 AM IST
share
ನಾಡಗೀತೆಯಲ್ಲಿ ‘ಬೌದ್ಧರುದ್ಯಾನ’

‘ಬೌದ್ಧರುದ್ಯಾನ’ ಸೇರಿಸುವಾಗ ಕರ್ನಾಟಕದ ಮೊದಲ ಧರ್ಮ ಬುದ್ದಧರ್ಮ ಎಂಬುದನ್ನು ಸಾಬೀತುಪಡಿಸಲು ಅನೇಕ ಪೂರಕ ದಾಖಲೆಗಳನ್ನು ಪರಿಶೀಲಿಸಲಾಗಿದೆ ‘ಕರ್ನಾಟಕದ ಮೊದಲ ಧರ್ಮ- ಬೌದ್ಧರ್ಮ’ ಎಂಬ ಹರ್ಷಕುಮಾರ್ ಕುಗ್ವೆಯವರ ಸುದೀರ್ಘ ಸಂಶೋಧನಾ ಲೇಖನದಲ್ಲಿ ಸಾಕಷ್ಟು ಪುರಾವೆಗಳನ್ನು ದಾಖಲಿಸಲಾಗಿದೆ. ಇಂತಹ ಸಾಕಷ್ಟು ಪೂರಕ ದಾಖಲೆಗಳನ್ನು ಇಟ್ಟುಕೊಂಡು ನಾಡಗೀತೆಗೆ ‘ಬೌದ್ಧರುದ್ಯಾನ’ ಸೇರಿಸಿದ್ದು ಎಲ್ಲಾ ರೀತಿಯಿಂದಲೂ ಸಮರ್ಥನೀಯ ಮತ್ತು ಅವಶ್ಯಕ ಎನಿಸುತ್ತದೆ.

ರಾಷ್ಟ್ರಕವಿ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ ಯನ್ನು ನಾಡಗೀತೆಯಾಗಿ ಸ್ವೀಕರಿಸಿದ ಸಂದರ್ಭದಿಂದ ಈವರೆಗೂ ಅನೇಕ ಸಲ ಈ ನಾಡಗೀತೆಯ ಪಠ್ಯ ಚರ್ಚೆಗೆ ಗ್ರಾಸವಾಗುತ್ತಿದೆ. ಕುವೆಂಪುರವರೇ ಹೇಳುವಂತೆ ಈ ಗೀತೆಯನ್ನು ಸ್ವತಹ ತಾವೇ ಹಲವು ಸಲ ಪರಿಷ್ಕರಿಸಿದ್ದಾರೆ. ಈ ಗೀತೆಯನ್ನು ಅಧಿಕೃತವಾಗಿ ನಾಡಗೀತೆಯಾಗಿ ಸರಕಾರ ಸ್ವೀಕರಿಸಿದ ನಂತರ ಮತ್ತು ಕುವೆಂಪುರವರು ಕಾಲವಾದ ನಂತರ ಈ ನಾಡಗೀತೆಯಲ್ಲಿ ಮತ್ತಷ್ಟು ಪರಿಷ್ಕರಣೆಗಳು ನಡೆದದ್ದು ನಮ್ಮ ಕಣ್ಣಮುಂದಿದೆ. ಇದೀಗ ಮತ್ತೊಂದು ಪರಿಷ್ಕರಣೆಗೆ ನಾಡಗೀತೆ ಮತ್ತೊಮ್ಮೆ ಗ್ರಾಸವಾಗಿದೆ.

ನಾಡಗೀತೆಯಲ್ಲಿ ‘ಬೌದ್ಧರುದ್ಯಾನ’ ಪದವನ್ನು ಸೇರಿಸುವ ಕುರಿತು ಈಗ ಚರ್ಚೆ ಆರಂಭವಾಗಿದೆ. ಕಳೆದ ವರ್ಷ ಕನ್ನಡದ ಕೆಲ ಸಾಹಿತಿಗಳು ಮತ್ತು ಭಗವಾನ್ ಬುದ್ಧರ ಅನುಯಾಯಿಗಳು, ಆಗಿನ ಸಮಾಜ ಕಲ್ಯಾಣ ಸಚಿವರಾಗಿದ್ದ ಡಾ. ಎಚ್.ಸಿ. ಮಹದೇವಪ್ಪನವರನ್ನು ಬೆಟ್ಟಿ ಮಾಡಿ ನಾಡಗೀತೆಯಲ್ಲಿ ‘ಬೌದ್ಧರುದ್ಯಾನ’ ಪದವನ್ನು ಸೇರ್ಪಡೆ ಮಾಡಬೇಕೆಂದು ಅಹವಾಲು ನೀಡುತ್ತಾರೆ. ಸ್ವತಹ ತಾವೇ ಬುದ್ಧಾನುಯಾಯಿ ಆಗಿದ್ದ ಡಾ.ಮಹದೇವಪ್ಪನವರು ದಿನಾಂಕ 10ನೇ ನವೆಂಬರ್ 2025ರಂದು ಮುಖ್ಯಮಂತ್ರಿಗಳಿಗೆ ಪತ್ರವೊಂದನ್ನು ಬರೆದು ನಡವಳಿ ಮಂಡಿಸುತ್ತಾರೆ. ಈ ಪತ್ರದಲ್ಲಿರುವ ಕೆಲ ಅಂಶಗಳು ಇಂತಿವೆ...

‘‘ಪ್ರತಿನಿತ್ಯ ನಾವು ಎದೆತುಂಬಿ ಹಾಡುವ ‘ಜಯಹೇ ಕರ್ನಾಟಕ ಮಾತೆ’ ಕನ್ನಡಿಗರ ಹೆಮ್ಮೆಯ ನಾಡಗೀತೆಯಾಗಿದೆ. ಇದು ನಮ್ಮ ಕನ್ನಡ ನಾಡಿನ ಸಾಂಸ್ಕೃತಿಕ ಚರಿತ್ರೆ, ಭೌಗೋಳಿಕ ಸಂಪನ್ನತೆ ಹಾಗೂ ಸರ್ವಧರ್ಮ ಸಮನ್ವಯ ತತ್ವವನ್ನು ಸಾಕ್ಷೀಕರಿಸಿ ತೋರುವ ಕನ್ನಡಿಯಂತಿದೆ. ಇದರ ಕರ್ತೃ ಕನ್ನಡ ಸಾಂಸ್ಕೃತಿಕ ಲೋಕದ ಮಹತ್ವದ ಕವಿ ಕುವೆಂಪು ಅವರು ತಮ್ಮ ಆತ್ಮಕಥನ ‘ನೆನಪಿನ ದೋಣಿಯಲ್ಲಿ’ ದಾಖಲಿಸಿರುವಂತೆ ಇದರ ರಚನೆ 1924-25 ಸುಮಾರಿನಲ್ಲಿ ಆಗಿದೆ. ನಾಡಗೀತೆಯಲ್ಲಿ ‘ಬೌದ್ಧರುದ್ಯಾನ’ ಪದಸಮುಚ್ಚಯವು ಸೇರಬೇಕೆನ್ನುವ ಅಭಿಪ್ರಾಯ ಕೆಲವರಿಂದ ಅಹವಾಲಿನ ರೂಪದಲ್ಲಿ ಕೇಳಿಬರುತ್ತಿದೆ.’’

‘‘ಇದರ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ 1924-25ರಲ್ಲಿ ಕವಿ ಕುವೆಂಪು ಅವರಿಂದಲೇ ಈ ಗೀತೆ ಹಲವು ಬಾರಿ ಪರಿಷ್ಕರಣೆಗೊಂಡು ಈಗಿನ ರೂಪದಲ್ಲಿ ಚಲಾವಣೆಯಲ್ಲಿದೆ. ಈ ಹಾಡಿನ ಆರಂಭಿಕ ರಚನೆಯ ಮೂಲರೂಪದಲ್ಲಿ ಕುವೆಂಪು ಅವರು ‘ಬೌದ್ಧರುದ್ಯಾನ’ ಎಂಬ ಪದವನ್ನು ಸೇರಿಸಿರುವುದು ಉಲ್ಲೇಖಿತ ದಾಖಲೆಗಳಿಂದ ತಿಳಿದು ಬರುತ್ತದೆ.(ಪುಟ 547, ನೆನಪಿನ ದೋಣಿಯಲ್ಲಿ, ಉದಯರವಿ ಪ್ರಕಾಶನ, ಮೈಸೂರು, 5ನೆಯ ಮುದ್ರಣ 2005) ಆದರೆ ಆನಂತರದ ಪರಿಷ್ಕರಣೆಗೊಂಡ ಆವೃತ್ತಿಗಳಲ್ಲಿ ‘ಬೌದ್ಧರುದ್ಯಾನ’ ಬಿಟ್ಟುಹೋಗಿರುತ್ತದೆ.’’

‘‘ತಾತ್ವಿಕವಾಗಿ ಬೌದ್ಧ ಧರ್ಮವು ಭಾರತ ಮತ್ತು ಕರ್ನಾಟಕದ ಸಾಹಿತ್ಯ, ಸಂಸ್ಕೃತಿಯ ಮೂಲ ಬೇರುಗಳಲ್ಲಿ ಬೆರೆತಿದೆ ಎಂಬುದು ಚರಿತ್ರೆಯ ಅಧ್ಯಯನದಿಂದ ತಿಳಿದುಬರುತ್ತದೆ. ಪ್ರೊ. ವೆಂಕಣ್ಣಯ್ಯನವರಂತಹ ವಿದ್ವಾಂಸರು ಹೇಳುವಂತೆ ‘ಬೌದ್ಧರೇ ಕನ್ನಡ ಭಾಷೆಗೆ ಆದಿ ಕವಿಗಳು, ಕ್ರಿಸ್ತಶಕದ ಆದಿಭಾಗದಿಂದಲೂ ಕನ್ನಡ ಬಾಷೆಯಲ್ಲಿ ಗ್ರಂಥಗಳ ರಚನೆಯಾಗುತ್ತಿರಬೇಕು’ ಎಂಬ ವಾದವನ್ನು ಕನ್ನಡ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದಂತೆ ಮಂಡಿಸಿದ್ದಾರೆ. ಅದಲ್ಲದೆ ಬೌದ್ಧ ಧರ್ಮವು ಮಾನವೀಯತೆಯ ಉದಾತ್ತ ಮೌಲ್ಯಗಳಾದ ಮೈತ್ರಿ, ಕರುಣೆ, ಸಮತೆಯನ್ನು ಸಾರುತ್ತದೆ. ಗಾಂಧೀಜಿ, ಅಂಬೇಡ್ಕರ್‌ರಂತಹ ಮಹನೀಯರು ಪ್ರತಿಪಾದಿಸಿದ ಅಹಿಂಸೆ, ಜೀವಪ್ರೇಮ, ಸಂಘಟನೆಯ ತತ್ವವನ್ನು ಪ್ರತಿನಿಧಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಹೊತ್ತಿನ ಭಾರತಕ್ಕೆ ಇವು ತೀರಾ ಅತ್ಯವಶ್ಯಕವಾದ ಜೀವಮೌಲ್ಯಗಳಾಗಿವೆ’’ ಎಂದು ಮುಂದುವರಿಯುವ ಈ ಪತ್ರ ಈ ಹಿಂದೆ ನಾಡಗೀತೆಯಲ್ಲಿ ‘ಮಧ್ವ’ ಪದವನ್ನು ಸೇರಿಸಿದ ಕುರಿತು ಸ್ಮರಿಸುತ್ತಾ ಬೌದ್ಧರುದ್ಯಾನ ಪದಸಮುಚ್ಚಯವನ್ನು ಸೇರಿಸುವ ದಿಸೆಯಲ್ಲಿ ತಜ್ಞರ, ಸಾಹಿತಿಗಳ, ಸಂಶೋಧಕರ ಉನ್ನತ ಮಟ್ಟದ ಸಮಿತಿಯನ್ನು ರಚಿಸುವಂತೆ ಮನವಿ ಮಾಡುತ್ತದೆ.

ಈ ಮನವಿಯ ಆಧಾರದ ಮೇಲೆ ಸರಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆಯವರ ಅಧ್ಯಕ್ಷತೆಯಲ್ಲಿ ಒಂದು ತಜ್ಞರ ಸಮಿತಿ ರಚಿಸಿ ನಾಡಗೀತೆಗೆ ‘ಬೌದ್ಧರುದ್ಯಾನ’ ಸೇರ್ಪಡೆಗೊಳಿಸುವ ಕುರಿತು ವರದಿ ನೀಡಲು ಕೋರಿತು. ಈ ತಜ್ಞರ ಸಮಿತಿಯಲ್ಲಿ ನಿವೃತ್ತ ಕುಲಪತಿಗಳಾದ ಡಾ. ಚಿದಾನಂದಗೌಡ, ಡಾ. ಹಂಪನಾ, ಬರಗೂರು ರಾಮಚಂದ್ರಪ್ಪ, ಡಾ. ಕಾಳೇಗೌಡ ನಾಗವಾರ, ಡಾ.ಎಸ್.ಜಿ. ಸಿದ್ದರಾಮಯ್ಯ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಡಾ. ಸಿ.ಎಸ್. ದ್ವಾರಕಾನಾಥ್, ಡಾ.ಮೀನಾಕ್ಷಿ ಬಾಳಿ ಮತ್ತು ಡಾ.ಎಂ.ಎಸ್. ಆಶಾದೇವಿಯವರನ್ನು ಒಳಗೊಂಡಿತ್ತು.

ದಿನಾಂಕ 13ನೇ ಜುಲೈ 2026ರಂದು ನಡೆದ ತಜ್ಞರ ಸಭೆಯಲ್ಲಿ ಬರಗೂರು ರಾಮಚಂದ್ರಪ್ಪ ಮತ್ತು ಮೀನಾಕ್ಷಿ ಬಾಳಿಯವರು ಗೈರು ಹಾಜರಿಯಾಗಿದ್ದು ಮಿಕ್ಕವರು ಸದರಿ ವಿಷಯದ ಕುರಿತು ಸುದೀರ್ಘ ಚರ್ಚೆ ನಡೆಸಿ ನಾಡಗೀತೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿಕ ಜೈನರುದ್ಯಾನ ಎಂಬ ಪದಪುಂಜವನ್ನು ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನ ಬೌದ್ಧರುದ್ಯಾನ ಎಂದು ‘ಬೌದ್ಧರುದ್ಯಾನ’ ಸೇರಿಸಿ ಸರಕಾರಕ್ಕೆ ಕಳುಹಿಸಲಾಯಿತು. ಆದರೆ ಈ ನಡುವೆ ತಜ್ಞರ ಸಮಿತಿಯಲ್ಲಿ ಮತ್ತು ಈ ಹಿಂದೆ, ಹೊರಗೆ ನಡೆದ ಚರ್ಚೆಗಳು ಇಲ್ಲಿ ಬಹಳ ಮುಖ್ಯ ಎನಿಸುತ್ತಿದೆ.

ಈ ಹಿಂದೆ 24ನೇ ಮಾರ್ಚ್ 2014ರಂದು ಆಗಿನ ಸರಕಾರ ನಾಡೋಜ ಡಾ. ಚೆನ್ನವೀರ ಕಣವಿಯವರ ಅಧ್ಯಕ್ಷತೆಯಲ್ಲಿ ನಾಡಗೀತೆಗೆ ನಿರ್ದಿಷ್ಟ ಧಾಟಿ ರೂಪಿಸುವ ಕುರಿತು ಒಂದು ತಜ್ಞರ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯಲ್ಲಿ ದಿವಂಗತ ಡಾ. ಸಿದ್ದಲಿಂಗಯ್ಯನವರೂ ಸದಸ್ಯರಾಗಿದ್ದರು. ಈ ಸಮಿತಿಯ ಸಭೆಯಲ್ಲಿ ಕುವೆಂಪು ಅವರ ‘ಕೊಳಲು’ ಸಂಕಲನದಲ್ಲಿ ಪ್ರಕಟವಾಗಿರುವ ಮೂಲ ಪಠ್ಯಕ್ರಮವನ್ನು ಹಾಗೂ 2004ರಲ್ಲಿ ಕರ್ನಾಟಕ ಸರಕಾರವು ಪರಿಷ್ಕರಿಸಿ ಅಧಿಕೃತವಾಗಿ ಅಂಗೀಕರಿಸಿದ್ದ ಪಠ್ಯಕ್ರಮವನ್ನು ಪರಿಶೀಲಿಸಿದ ಸಭೆಯು ಈ ಪಠ್ಯವನ್ನು ಸಂಕ್ಷಿಪ್ತಗೊಳಿಸಿ ಧಾಟಿಯನ್ನು ನಿಗದಿಗೊಳಿಸಿ ಸರಕಾರಕ್ಕೆ ಸಲ್ಲಿಸಲಾಯಿತು. ಅಂತೆಯೇ ಪಠ್ಯದ ಮೊದಲ ಚರಣದಿಂದ ಹಿಡಿದು ಎರಡು ಮತ್ತು ಮೂರನೇ ಚರಣಗಳಲ್ಲಿ ಕೆಲವು ಸಾಲುಗಳು ಪುನರಾವರ್ತನೆ ಆಗಿವೆಯೆಂಬ, ಆಗಿನ ಕೇವಲ ಒಂಭತ್ತು ಜಿಲ್ಲೆಗಳ ಮಿತಿಗಳನ್ನು ಗಮನಿಸದಂತೆ ಮತ್ತಿತರ ಕಾರಣಗಳನ್ನು ನೀಡಿ ಮೂರೂ ಚರಣಗಳನ್ನು ಕೈಬಿಟ್ಟು ಮಿಕ್ಕಂತೆ ನಾಲ್ಕು ಚರಣಗಳನ್ನು ಉಳಿಸಿಕೊಳ್ಳಲಾಯಿತು.

ಈಗ ಚರ್ಚೆಯಲ್ಲಿರುವುದು ನದಿಗಳು, ನಿಸರ್ಗ, ಪರಿಸರಗಳನ್ನು ಬಿಟ್ಟು ಹೆಸರುಗಳ ಕುರಿತಂತೆ ಇರುವ ಗೊಂದಲವನ್ನು ಗಮನಿಸಬೇಕು. ಶಂಕರ, ರಾಮಾನುಜ, ವಿದ್ಯಾರಣ್ಯ, ಬಸವೇಶ್ವರ, ಮಧ್ವ, ರನ್ನ, ಹೊನ್ನ, ಪಂಪ, ಲಕುಮಪತಿ, ಜನ್ನ, ಕುಮಾರವ್ಯಾಸ, ಕಬೀರ, ಪರಮಹಂಸ, ವಿವೇಕರೇ ಮುಂತಾದ ಹೆಸರುಗಳಿವೆ. ಆದರೆ ಇಲ್ಲಿ ಒಬ್ಬೇ ಒಬ್ಬ ಮಹಿಳೆಯರ ಹೆಸರೂ ಇಲ್ಲದಿರುವುದು ಗಮನಾರ್ಹ! ಈ ಸಂದರ್ಭದಲ್ಲಿ ಕೆಲವರು ಅಕ್ಕಮಹಾದೇವಿ, ಕಿತ್ತೂರು ರಾಣಿ ಚೆನ್ನಮ್ಮನವರ ಹೆಸರು ಸೇರಿಸಲು ಪ್ರಸ್ತಾಪಿಸುತ್ತಾರೆ. ಮತ್ತೆ ಕೆಲವರು ಟಿಪ್ಪು, ನಾಲ್ವಡಿ ಹೆಸರುಗಳು ಬರಬೇಕಿತ್ತೆಂದು ಮಂಡಿಸಿದರು. ಮೂಲ ಪಠ್ಯದಲ್ಲಿ ಹೈದರ್, ಟಿಪ್ಪು, ಶಿವಾಜಿ, ತುಕಾರಾಮ, ಪಂಪ, ಪುಲಕೇಶಿ, ಕೆಂಪೇಗೌಡರ ಹೆಸರುಗಳೂ ಇರುವ ಬಗ್ಗೆ ವಾದವಿವಾದವಾಗತೊಡಗಿತು. ಕಡೆಗೆ ಸದರಿ ತಜ್ಞರ ಸಮಿತಿ ‘ಬೌದ್ಧರುದ್ಯಾನ’ ಸೇರಿಸುವುದರೊಂದಿಗೆ ಸರಕಾರಕ್ಕೆ ಒಂದಷ್ಟು ಸಲಹೆ ನೀಡುತ್ತಾ ಚೆನ್ನವೀರ ಕಣವಿಯವರ ಶಿಫಾರಸಿನಲ್ಲಿ ಇದ್ದ ಶಂಕರ ರಾಮಾನುಜ ವಿದ್ಯಾರಣ್ಯ, ರನ್ನ ಷಡಕ್ಷರಿ ಪೊನ್ನ, ಪಂಪ ಲಕುಮಿಪತಿ ಜನ್ನ, ಕುಮಾರವ್ಯಾಸರ ಮಂಗಳಧಾಮ, ಕವಿಕೋಗಿಲೆಗಳ ಪುಣ್ಯಾರಾಮ.. ಎಂಬ ಚರಣವನ್ನು ತೆಗೆದುಹಾಕಿದರೆ ಯಾವುದೇ ಹೊಸ ಹೆಸರುಗಳನ್ನು ಮತ್ತೆ ಮತ್ತೆ ಸೇರಿಸುವ ಗೊಂದಲವಿರಲ್ಲ ಎಂದು ಅಭಿಪ್ರಾಯಪಟ್ಟಿದೆ.

ಇನ್ನು ‘ಬೌದ್ಧರುದ್ಯಾನ’ ಸೇರಿಸುವಾಗ ಕರ್ನಾಟಕದ ಮೊದಲ ಧರ್ಮ ಬುದ್ದಧರ್ಮ ಎಂಬುದನ್ನು ಸಾಬೀತುಪಡಿಸಲು ಅನೇಕ ಪೂರಕ ದಾಖಲೆಗಳನ್ನು ಪರಿಶೀಲಿಸಲಾಗಿದೆ. ‘ಕರ್ನಾಟಕದ ಮೊದಲ ಧರ್ಮ- ಬೌದ್ಧರ್ಮ’ ಎಂಬ ಹರ್ಷಕುಮಾರ್ ಕುಗ್ವೆಯವರ ಸುದೀರ್ಘ ಸಂಶೋಧನಾ ಲೇಖನದಲ್ಲಿ ಸಾಕಷ್ಟು ಪುರಾವೆಗಳನ್ನು ದಾಖಲಿಸಲಾಗಿದೆ. ಇಂತಹ ಸಾಕಷ್ಟು ಪೂರಕ ದಾಖಲೆಗಳನ್ನು ಇಟ್ಟುಕೊಂಡು ನಾಡಗೀತೆಗೆ ‘ಬೌದ್ಧರುದ್ಯಾನ’ ಸೇರಿಸಿದ್ದು ಎಲ್ಲಾ ರೀತಿಯಿಂದಲೂ ಸಮರ್ಥನೀಯ ಮತ್ತು ಅವಶ್ಯಕ ಎನಿಸುತ್ತದೆ.

ತಮ್ಮ ಪಠ್ಯ ಬೆಳೆಯುತ್ತಾ ಹೋದ ಬಗ್ಗೆ ಇಂದಿನ ಚರ್ಚೆಗೆ ಪೂರಕ ಎಂಬಂತೆ 28-4-1925ರಲ್ಲಿ ಕುವೆಂಪು ಅವರು ಮಾಡಿರುವ ಟಿಪ್ಪಣಿಯೊಂದರ ಭಾಗ ಹೀಗಿದೆ.. ‘‘ಇದೊಂದು ಸ್ವಾರಸ್ಯದ ವಿಷಯ. 1924-25ರ ನನ್ನೊಂದು ಹಸ್ತಪ್ರತಿಯಲ್ಲಿ ‘ಕರ್ನಾಟಕ ರಾಷ್ಟ್ರಗೀತೆ’ ಎಂಬ ಕವನವಿದೆ. ಅದು ನನ್ನ ‘ಜಯ ಹೇ ಕರ್ನಾಟಕ ಮಾತೆ’ ಎಂಬ ನಾಡಗೀತೆಯ ಪ್ರಪಿತಾಮಹನೋ ಆಗಿರಬೇಕು. ಠಾಕೂರರ ‘ಜನಗಣಮನ’ದಂತೆ ನಮ್ಮ ಕನ್ನಡ ನಾಡಿಗೂ ಒಂದು ರಾಷ್ಟ್ರಗೀತೆಯನ್ನು ನೀಡುವ ಪ್ರಯತ್ನದ ಭ್ರೂಣಸ್ಥಿತಿ ಅದು. ಅದರ ರಚನೆಯ ರೂಪಾಂಶ ನಾನು ಬೆಳೆದಂತೆಲ್ಲ ಬದಲಾವಣೆ ಹೊಂದುತ್ತಾ (ಭಾವ ಮತ್ತು ಭಾಷೆ ಎರಡರಲ್ಲಿಯೂ). ಕಡೆಗೆ ‘ಕೊಳಲು’ ಕವನ ಸಂಗ್ರಹ ಅಚ್ಚಾದಾಗ ಒಂದು ಸ್ತಿಮಿತಕ್ಕೆ ನಿಂತಿತು. ಮತ್ತೆ 1970-71ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅದನ್ನು ನಾಡಗೀತೆಯನ್ನಾಗಿ ಅಧಿಕೃತವಾಗಿ ಸ್ವೀಕರಿಸಿದಾಗ ಮೂರು ನಿಮಿಷಗಳಲ್ಲಿ ಅದನ್ನು ಹಾಡಿ ಮುಗಿಸುವಂತೆ ಸಂಗ್ರಹಿಸಿಕೊಳ್ಳಲಾಯಿತು. 47 ವರ್ಷಗಳ ಅನಂತರ 1972ನೆಯ ಜುಲೈ ತಿಂಗಳಲ್ಲಿ ಇಂದು(ನಾನೀಗ ಇದನ್ನು ಬರೆಯುತ್ತಿರುವ 27-7-1972) ನಾಡಿಗೆ ‘ಕರ್ನಾಟಕ’ ಎಂಬ ಹೆಸರಿಡುವ ನಿರ್ಣಯವನ್ನು ವಿಧಾನಸಭೆ ಅಂಗೀಕರಿಸಿದೆ. ಬಹುಶಃ ಪರಿಷತ್ತು ಅಂಗೀಕರಿಸಿರುವ ನಾಡಗೀತೆಯನ್ನು ಸರಕಾರವೂ ಒಪ್ಪುತ್ತದೆಂದು ಹಾರೈಸುತ್ತೇನೆ. ಭಾವ ಮತ್ತು ಭಾಷೆ ಎರಡರ ದೃಷ್ಟಿಯಿಂದಲೂ ಕವಿಯ ವಿಕಾಸವನ್ನು ಗುರುತಿಸಲು ನೆರವಾಗುತ್ತದೆಂದು ಅದರ ಪೂರ್ತಿ ಪಾಠವನ್ನು, ಯಾವುದನ್ನೂ ತಿದ್ದಲು ಹೋಗದೆ ಅದರ ಎಲ್ಲ ನ್ಯೂನತೆ ದೋಷಗಳೊಡನೆ ಇಲ್ಲಿ ಕೊಡುತ್ತೇನೆ. ಹೈದರ, ಟೀಪು, ಶಿವಾಜಿ, ತುಕಾರಾಮ, ಪಂಪ, ಪುಲಿಕೇಶಿ, ಕೆಂಪೇಗೌಡ ಅರ್ಥವಾಗದ ‘ಮಾ ರಾಮ’ - ಈ ಎಲ್ಲ ಹೆಸರುಗಳ ಕಲಬೆರಕೆಯ ವಿಚಿತ್ರಪಾಕವಿರುವುದನ್ನು ಓದುಗರು ದರಸ್ಮಿತರಾಗಿ ಮನಿಸಬಹುದು!..’’ ಎಂಬುದಾಗಿ ನೀಡಿರುವ ಕುವೆಂಪು ಅವರ ಈ ಟಿಪ್ಪಣಿ ಇಂದಿನ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದಂತಿದೆ.

Tags

Buddhist Garden
share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X