Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವೇಷಗಾರರು, ಬಹುರೂಪಿಗಳು, ಜಾತಿಗಾರರು

ವೇಷಗಾರರು, ಬಹುರೂಪಿಗಳು, ಜಾತಿಗಾರರು

ಡಾ. ಸಿ.ಎಸ್. ದ್ವಾರಕಾನಾಥ್ಡಾ. ಸಿ.ಎಸ್. ದ್ವಾರಕಾನಾಥ್9 Sept 2026 10:20 AM IST
share
ವೇಷಗಾರರು, ಬಹುರೂಪಿಗಳು, ಜಾತಿಗಾರರು

ಶಿವಾಜಿಯು ರಾಜಕೀಯ ಪ್ರಚಾರಕ್ಕೆ ಈ ಕಲಾವಿದರನ್ನು ಬಳಸಿಕೊಂಡರೆ, ಬಸವಣ್ಣನವರು ಅವರವರ ಸಾಹಿತ್ಯ, ಕಲೆ, ಸಂಗೀತಗಳಿಗೆ ಕಾಯಕದ ತಿರುವು ಕೊಟ್ಟು, ಅಪ್ರತ್ಯಕ್ಷವಾಗಿ ಜಾನಪದವನ್ನೇ, ಜಾನಪದ ಕಲೆಯನ್ನೇ ಪುನರುಜ್ಜೀವನಗೊಳಿಸಿದರು. ಆ ಕಾಲದ ಶರಣ ಸಮೂಹದ ಜಾನಪದ ಕಲಾವಿದರಲ್ಲಿ ಬಹುರೂಪಿ ಚೌಡಯ್ಯನೂ ಒಬ್ಬ. ಆದರೆ ಶರಣ ಬಹುರೂಪಿ ಚೌಡಯ್ಯನೊಂದಿಗೆ ಇಂದಿನ ಬಹುರೂಪಿಗಳ ಜನಾಂಗಿಕ ಸಂಬಂಧ ಕಲ್ಪಿಸುವುದು ಕಷ್ಟ.

ಡಾ.ಎಂ.ಎಂ. ಕಲಬುರ್ಗಿಯವರು ತಮ್ಮ ‘ಮಾರ್ಗ’ ಎರಡನೇ ಸಂಪುಟ (ಸಂಶೋಧನಾ ಪ್ರಬಂಧಗಳ ಸಂಕಲನ)ದಲ್ಲಿ ವೇಷಗಾರರ ಬಗ್ಗೆ ವಿಸ್ತೃತವಾಗಿ ಬರೆದಿದ್ದಾರೆ. ‘ಆನುವಂಷಿಕವಾಗಿ ಕೃಷಿ, ಕೂಲಿ, ವಾದ್ಯರಿಪೇರಿ ಮಾಡುತ್ತಲಿದ್ದರೂ ಮುಖ್ಯವಾಗಿ ವೇಷಗಾರಿಕೆಯನ್ನೇ ಜೀವನವೃತ್ತಿ ಮಾಡಿಕೊಂಡಿರುವುದರಿಂದ, ವೇಷಗಾರರು ಇಂದು ವೃತ್ತಿ ಕಲಾವಿದರ ವರ್ಗಕ್ಕೆ ಸೇರುತ್ತಾರೆ.’

ಇವರಿಗೆ ಬಹುರೂಪಿ, ವೇಷಧಾರಿ, ಜಾತಿಗಾರ ಎಂಬ ಪರ್ಯಾಯ ನಾಮಗಳು. ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರವು ಬಹುರೂಪಿ ಚೌಡಯ್ಯನಿಗೆ ಜಾತಿಗಾರ ಎಂದು ಕರೆದು, ಅವನು ‘ಹದಿನೆಂಟು ಜಾತಿಯ, ನೂರೆಂಟು ಕುಲದ ವೇಷವಂ ತೊಟ್ಟು’ ನಟಿಸುತ್ತಿದ್ದನೆಂದು ಹೇಳುತ್ತದೆ. ಹೀಗೆ ಅನೇಕ ಜಾತಿಯವರನ್ನು ಅಭಿನಯಿಸಿ ತೋರುತ್ತಲಿದ್ದ ಕಾರಣ, ಇವರಿಗೆ ‘ಜಾತಿಗಾರ’ ಎಂಬ ಹೆಸರೂ ರೂಢವಾಗಿರಬೇಕು. ‘ಜಾತಿಗಾರ’ ಎಂಬುದರ ಪ್ರಾಚೀನ ಸಂವಾದಿಪದ ‘ಜಾತಿಡಂಬ’. ದಂಭ=ಡಂಬ ಅಂದರೆ ನಟನೆ. ಇದನ್ನು ಗಮನಿಸಿದರೆ ‘‘ಮಾತಿನಂತೆ ಮನವಿಲ್ಲದ ಜಾತಿಡೊಂಬರ ಮೆಚ್ಚ ನಮ್ಮ ಕೂಡಲಸಂಗಮದೇವ’’ ಎಂಬಲ್ಲಿಯ ಜಾತಿಡೊಂಬರ ಪಾಠವನ್ನು ‘ಜಾತಿಡಂಬರ’ ಎಂದು ತಿದ್ದಿಕೊಳ್ಳಬೇಕೆಂದೂ, 12ನೆಯ ಶತಮಾನದಲ್ಲಿ ಇವರಿಗೆ ‘ಜಾತಿಡಂಬರು’ ಎಂದು ಕರೆಯುತ್ತಿದ್ದರೆಂದೂ ಹೇಳಬೇಕಾಗುತ್ತದೆ. ಕೆಲವರು ಪದಸಾಮ್ಯದಿಂದಾಗಿ ಈ ಡಂಬರು ಮತ್ತು ಡೊಂಬರು ಪದಗಳಲ್ಲಿ ಗೊಂದಲ ಹುಟ್ಟಿಸಿ

ಕೊಂಡು ಅಂಗಸಾಧನೆಯ ಡೊಂಬರೂ ವೇಷ ಹಾಕುತ್ತಾರೆ ಎಂದು ತಪ್ಪು ಭಾವಿಸಿದ್ದಾರೆ.

ಆದರೆ ವೇಷಗಾರಿಕೆಯ ಡಂಬರೇ ಬೇರೆ, ಅಂಗಸಾಧನೆಯ ಡೊಂಬರೇ ಬೇರೆ. ಎಂದು

ಪ್ರೊ.ಕಲಬುರ್ಗಿಯವರು ಅಭಿಪ್ರಾಯ ಪಡುತ್ತಾರೆ.

ವೇಷಗಾರರು ಮೂಲತಃ ಆಂಧ್ರಪ್ರದೇಶದಿಂದ ಯಾವುದೋ ಕಾಲದಲ್ಲಿ ವಲಸೆ ಬಂದವರು, ಇವರು ನಮ್ಮ ರಾಜ್ಯದ ಯಾವುದೇ ಭಾಗದಲ್ಲಿ ನೆಲೆಸಿದ್ದರೂ ಇವರ ಮನೆಭಾಷೆ ಮಾತ್ರ ತೆಲುಗು. ಈ ಜನಾಂಗವು ವೇಷಗಾರಿಕೆಯನ್ನು ಯಾವ ಉದ್ದೇಶಕ್ಕೋಸ್ಕರ, ಯಾವ ಕಾಲದಲ್ಲಿ ಆರಂಭಿಸಿತೋ ಗೊತ್ತಿಲ್ಲ? ಈ ಕುರಿತು ವೇಷಗಾರರನ್ನೇ ಕೇಳಿದರೆ ತಾವು ಆಂಧ್ರಮೂಲದವರೆಂಬುದನ್ನೇ ಮರೆತು, ಶಿವಾಜಿ ಮಹಾರಾಜನ ಕಾಲದಲ್ಲಿ ತಮ್ಮ ವೇಷಗಾರಿಕೆ ಪ್ರಾರಂಭವಾಯಿತೆಂದು ಹೇಳುತ್ತಾರೆ. ಆಂಧ್ರಮೂಲದ ಕಿಳ್ಳಿಕ್ಯಾತರಂತೆ, ಕರ್ನಾಟಕ ಮೂಲದ ಗೊಂದಲಿಗರಂತೆ ಬಹುಶಃ ಶಿವಾಜಿಯು ಗುಪ್ತವೇಷ ಮೊದಲಾದ ರೋಚಕ ಘಟನೆಗಳಿಗೆ ಹೆಸರಾಗಿರುವುದನ್ನು ಗಮನಿಸಿಯೋ, ಈ ವೇಷಗಾರ ಕಲಾವಿದರನ್ನು ಶಿವಾಜಿಯು ರಾಜಕೀಯ ಗುಪ್ತ ಚಲವಲನಗಳಿಗೆ ಬಳಸುತ್ತಿದ್ದುದರಿಂದಲೋ ಈ ಕಲಾವಿದರು ತಮ್ಮ ಪ್ರಾಚೀನತೆಯನ್ನು ಇಲ್ಲಿಂದಲೇ ತಪ್ಪಾಗಿ ಹೇಳುತ್ತಿರಬೇಕು.

ಶಿವಾಜಿಯು ರಾಜಕೀಯ ಪ್ರಚಾರಕ್ಕೆ ಈ ಕಲಾವಿದರನ್ನು ಬಳಸಿಕೊಂಡರೆ, ಬಸವಣ್ಣನವರು ಅವರವರ ಸಾಹಿತ್ಯ, ಕಲೆ, ಸಂಗೀತಗಳಿಗೆ ಕಾಯಕದ ತಿರುವು ಕೊಟ್ಟು, ಅಪ್ರತ್ಯಕ್ಷವಾಗಿ ಜಾನಪದವನ್ನೇ, ಜಾನಪದ ಕಲೆಯನ್ನೇ ಪುನರುಜ್ಜೀವನಗೊಳಿಸಿದರು. ಆ ಕಾಲದ ಶರಣ ಸಮೂಹದ ಜಾನಪದ ಕಲಾವಿದರಲ್ಲಿ ಬಹುರೂಪಿ ಚೌಡಯ್ಯನೂ ಒಬ್ಬ. ಆದರೆ ಶರಣ ಬಹುರೂಪಿ ಚೌಡಯ್ಯನೊಂದಿಗೆ ಇಂದಿನ ಬಹುರೂಪಿಗಳ ಜನಾಂಗಿಕ ಸಂಬಂಧ ಕಲ್ಪಿಸುವುದು ಕಷ್ಟ. ಏಕೆಂದರೆ ಆ ಕಾಲದಲ್ಲಿ ಶಿವನ ಪಂಚವಿಂಶತಿ ಲೀಲೆಗಳ ಪ್ರಚಾರಕ್ಕೋಸ್ಕರ ಶೈವರು, ವಿಷ್ಣುವಿನ ದಶಾವತಾರ ಪ್ರಚಾರಕ್ಕೋಸುಗ ವೈಷ್ಣವರು ಶಿವ, ವಿಷ್ಣು ಆ ವೇಷ ಹಾಕುತ್ತಿರಬಹುದು. ಜನಮನರಂಜನೆ, ದ್ರವ್ಯಸಂಪಾದನೆಗಳಿಗಾಗಿಯೂ ಕೆಲವರು ವೇಷಹಾಕುತ್ತಿದ್ದ ಸಂಭವವಿದೆ. ಹೀಗಾಗಿ ಇಂದಿನ ವೇಷಗಾರ ಜನಾಂಗವನ್ನು ಇವರಲ್ಲಿ ಯಾವುದೇ ಒಂದು ಮೂಲಕ್ಕೆ ಮುಟ್ಟಿಸುವುದು ಅಸಾಧ್ಯವಾಗಿದ್ದರೂ ದ್ರಾವಿಡರಾದ ಇವರನ್ನು ಶೈವ ಮೂಲಕ್ಕೆ ಮುಟ್ಟಿಸಬಹುದಾಗಿದೆ.

ಇವರನ್ನು ಬೀದಿ ವೇಷಗಾರರು; ವೇದಿಕೆ ವೇಷಗಾರರು ಅಥವಾ ಬೀದಿ ಆಟಗಾರರು, ಅಟ್ಟದ ಆಟಗಾರರು ಎಂದೂ ಕರೆಯುತ್ತಾರೆ.

ಎಡ್ಗರ್ ಥರ್ಸ್ಟನ್ ಅವರ ‘Castes and tribes of South India’ ಸಂಪುಟಗಳಲ್ಲಾಗಲೀ, ಎಚ್.ವಿ.ನಂಜುಂಡಯ್ಯ ಮತ್ತು ಎಲ್.ಕೆ. ಅನಂತಕೃಷ್ಣ ಅಯ್ಯರ್ ಅವರ ‘The Mysore tribes and Castes’ ಎಂಬ ಸಂಪುಟಗಳಲ್ಲಾಗಲೀ ಈ ವೇಷಗಾರರ ಬಗ್ಗೆ ಉಲ್ಲೇಖವಿಲ್ಲ. ಎಲ್.ಜಿ. ಹಾವನೂರ ಅವರ ವರದಿಯಲ್ಲಿ ಮಾತ್ರBackward Caste ಪಟ್ಟಿಯ 128 ಜಾತಿಗಳಲ್ಲಿ ಬಹುರೂಪಿಗಳನ್ನು ಗುರುತಿಸಲಾಗಿದೆ.

ವೇಷಗಾರರೂ ತಮ್ಮದು ಕ್ಷತ್ರಿಯವಂಶವೆಂದು ಹೇಳಿಕೊಳ್ಳುತ್ತಾರೆ. ಇವರಲ್ಲಿ ವೇಷಗಾರರು, ರಾಮಕೊಂಡರು, ಸುಡಗಾಡ ಸಿದ್ಧರು ಒಂದೇ ಮೂಲದವರಾಗಿದ್ದು, ವೃತ್ತಿ ಕಾರಣವಾಗಿ ಭಿನ್ನರೆನ್ನಿಸಿದ್ದಾರೆ. ವೇಷಗಾರರಲ್ಲಿ ವಿಭೂತಿ, ರುದ್ರಾಕ್ಷಿ, ಗಂಟೆ, ಶಂಖಗಳನ್ನು ಅನುಭವಿಸಿ ಈಬತೋಳು, ರುದ್ರಾಕ್ಷೋಳು, ಗಂಟ್ಯೋಳು, ಸಂಕಲೋಳು, ಪಸ್ತಲೋಳು ಎಂದು ಐದು ಬೆಡಗುಗಳಿವೆ. ಈ ಬೆಡಗುಗಳು ಅಡ್ಡ ಹೆಸರುಗಳಾಗಿಯೂ ಬಳಕೆಯಾಗುತ್ತಿದ್ದು, ಕೊಂಡುರೋಳು, ಇಷ್ಟೋಳು ಮೊದಲಾದ ಬೇರೆ ಅಡ್ಡ ಹೆಸರುಗಳೂ ಇವೆ.

ವೇಷಗಾರರು ಇಂದಿಗೂ ಬೀದಿಯಾಟ ಪ್ರದರ್ಶನ ಮಾಡುತ್ತಾ ಊರೂರು ಅಲೆಯುತ್ತಾರೆ. ಎತ್ತು, ಕುದುರೆಗಳನ್ನು ವಾಹನಗಳಂತೆ ಉಪಯೋಗಿಸಿಕೊಂಡು ಹೋಗಿ ಊರಚಾವಡಿ, ಹಾಳುಗುಡಿ ಇಲ್ಲವೇ ತಮ್ಮದೇ ಆದ ಡೇರೆಗಳಲ್ಲಿ ಇವರು ವಾಸಮಾಡುತ್ತಾರೆ. ಒಮ್ಮೆ ಡೇರೆ ಹೊಡೆದರೆ ಮೂರು ತಿಂಗಳ ವಾಸ - ಮೂವತ್ತೂರು ವೇಷ - ಇವರ ಪದ್ಧತಿಯಾಗಿತ್ತು. ಈಗ ಆಯಾ ಗ್ರಾಮಗಳ ಜನತೆ ತೋರುವ ಆಸಕ್ತಿಗನುಗುಣವಾಗಿ ವೇಷ-ವಾಸಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಶಿವಲೀಲೆ, ರಾಮಾಯಣ, ಮಹಾಭಾರತಗಳಿಗೆ ಸಂಬಂಧಿಸಿದ ಅನೇಕ ಪೌರಾಣಿಕ ಸಂದರ್ಭಗಳನ್ನೂ ಬಸವಣ್ಣ, ಕಬೀರದಾಸ, ಪುರಂದರದಾಸ ಮೊದಲಾದವರಿಗೆ ಸಂಬಂಧಿಸಿದ ಐತಿಹಾಸಿಕ ಸಂದರ್ಭಗಳನ್ನೂ ಇವರು ಪ್ರದರ್ಶಿಸುತಿದ್ದರು.

ಡಾ.ಎಂ.ಎಂ. ಕಲಬುರ್ಗಿಯವರು ಒಂದು ಘಟನೆಯನ್ನು ಸ್ಮರಿಸುತ್ತಾರೆ. ಒಮ್ಮೆ ಮೈಸೂರು ಅರಸ ಮುಮ್ಮಡಿ ಕೃಷ್ಣರಾಜರು ಆಳುತ್ತಿದ್ದ ಕಾಲ. ಒಮ್ಮೆ ಮಹಾರಾಜರ ಅರಮನೆಗೆ ಅನಿರೀಕ್ಷಿತವಾಗಿ ಒಬ್ಬ ಸನ್ಯಾಸಿ ಆಗಮಿಸಿದ. ಮಹಾರಾಜರು ಭಕ್ತಿಯಿಂದ ಬರಮಾಡಿಕೊಂಡು ಉಚಿತ ಗೌರವ ಸಲ್ಲಿಸಿ, ಬೊಗಸೆ ತುಂಬ ದಕ್ಷಿಣೆಯನ್ನು ಕಾಣಿಕೆಯಾಗಿ ಅರ್ಪಿಸಿದರು. ಸನ್ಯಾಸಿಯು ಸ್ವೀಕರಿಸದೆ ನಿರ್ಲಿಪ್ತ ಭಾವದಿಂದ ಹಾಗೆಯೇ ಎದ್ದು ಹೋದ. ಮರುದಿನ ಭಿಕ್ಷುಕ ಆಗಮಿಸಿದ. ಮಹಾರಾಜರು ಒಂದು ಚೂರು ನಾಣ್ಯ ಹಾಕಲು ಹೇಳಿದರು. ಭಿಕ್ಷುಕ ತಡೆದು, ‘‘ಮಹಾರಾಜ, ನಿನ್ನೆ ನನಗೆ ಬೊಗಸೆ ತುಂಬ ದಕ್ಷಿಣೆ ಕಾಣಿಕೆ ಕೊಡಲು ಮುಂದಾದವರು ಇಂದು ಒಂದು ಚೂರು ನಾಣ್ಯ ನೀಡುವುದು ನ್ಯಾಯವೆ?’’ ಎಂದು ಪ್ರಶ್ನಿಸಿದ. ಅರಸರು ಅವಾಕ್ಕಾದರು. ‘‘ನಿನ್ನೆ ಸನ್ಯಾಸಿರೂಪದಲ್ಲಿ ಬಂದವನು ನೀನೇ?’’ ಎಂದು ಕೇಳಿದರು. ‘‘ಹೌದು ಸ್ವಾಮಿ, ನಾನೊಬ್ಬ ವೇಷಗಾರ, ದಿನಕ್ಕೊಂದು ವೇಷ ಹಾಕಿ ಹೊಟ್ಟೆ ತುಂಬಿಕೊಳ್ಳುತ್ತೇನೆ’’. ‘‘ನಿನ್ನೆ ಬೊಗಸೆ ತುಂಬ ದಕ್ಷಿಣೆಯನ್ನು ನಿರಾಕರಿಸಿದವ, ಇಂದು ಏಕೆ ಹೆಚ್ಚು ಆಸೆ ಮಾಡುವೆ?’’ ‘‘ನಿನ್ನೆ ಸ್ವೀಕರಿಸಿದ್ದರೆ ಸನ್ಯಾಸಿ ವೇಷಕ್ಕೆ ಅನ್ಯಾಯ ಮಾಡಿದಂತಾಗುತ್ತಿತ್ತು. ಇಂದು ಭಿಕ್ಷುಕನಾಗಿ ಬೇಡಬೇಕಾದುದು, ಕಾಡ ಬೇಕಾದುದು ನನ್ನ ಧರ್ಮ’’ ಎಂದು ಉತ್ತರಿಸಿದ. ಸಂತುಷ್ಟರಾದ ಅರಸರು ‘‘ನಿನ್ನೆ ನೀನು ನಟಿಸಿದ ನಿರ್ಲಿಪ್ತಭಾವದ ಯೋಗಿಗಳು ನಿಜಜೀವನದಲ್ಲಿ ಇರುವುದನ್ನು ಊರೂರು ಅಲೆಯುವ ನೀನು ಎಲ್ಲಿಯಾದರೂ ಕಂಡಿರುವೆಯಾ?’’ ‘‘ಕಂಡಿದ್ದೇನೆ, ಮುಳಗುಂದದಲ್ಲಿ ಬಾಲಲೀಲಾ ಮಹಾಂತಶಿವಯೋಗಿ ಎಂಬವರಿದ್ದಾರೆ’’ ಎಂದು ಹೇಳಿದ. ಮಹಾರಾಜರು ಆತನ ವೇಷಗಾರಿಕೆಗೆ ಮೆಚ್ಚಿ ದೊಡ್ಡ ಭಿಕ್ಷೆ ನೀಡಿ ಅತ್ತ ಕಳಿಸಿದರು. ಇತ್ತ ತಮ್ಮ ರಾಯಭಾರಿಯನ್ನು ಮುಳಗುಂದಕ್ಕೆ ಕಳಿಸಿ ಮಹಾಂತ ಶಿವಯೋಗಿಗಳನ್ನು ಭಕ್ತಿಯಿಂದ ಬರಮಾಡಿಕೊಂಡರು. ಈ ಘಟನೆ ವೇಷಗಾರರ ನಟನಾಚಾತುರ್ಯಕ್ಕೆ ಉದಾಹರಣೆ.

ಹೀಗೆ ವೇಷಗಾರರ, ಬಹುರೂಪಿಗಳ ಕಥನಗಳನ್ನು ಹೇಳುತ್ತಾ ಹೋದರೆ ಕೊನೆಮೊದಲಿಲ್ಲ. ಒಂದು ಕಾಲಘಟ್ಟದಲ್ಲಿ ಬಸವಣ್ಣನವರನ್ನು, ಸರ್ವಜ್ಞರನ್ನು ಜೀವಂತವಾಗಿ ಇಟ್ಟವರೇ ಈ ಬಹುರೂಪಿ ವೇಷಗಾರರು. ಕರ್ನಾಟಕದ ಸಂಸ್ಕೃತಿ ಪೋಷಕರಲ್ಲಿ ಈ ವೇಷಗಾರ ಬಹುರೂಪಿಗಳದು ಗಣನೀಯ ಸೇವೆ. ಆದರೆ ಇಂದು ಅವರ ಬದುಕು ಹೀನಾಯವಾಗಿದೆ, ಬರ್ಬರವಾಗಿದೆ. ಇಡೀ ಕರ್ನಾಟಕಕ್ಕೇ ಕಂಡ ಈ ಬಹುರೂಪಿ ವೇಷಗಾರರು ಸರಕಾರದ ಆಳುವವರ ಕಣ್ಣಿಗೆ ಬೀಳದಿರುವುದು ಆಶ್ಚರ್ಯ!

Tags

Costumed performersimpersonators
share
ಡಾ. ಸಿ.ಎಸ್. ದ್ವಾರಕಾನಾಥ್
ಡಾ. ಸಿ.ಎಸ್. ದ್ವಾರಕಾನಾಥ್
Next Story
X