Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ದೇಶದ ಆರ್ಥಿಕತೆಯಲ್ಲಿ ಎಮ್ಮೆಗಳ...

ದೇಶದ ಆರ್ಥಿಕತೆಯಲ್ಲಿ ಎಮ್ಮೆಗಳ ಪಾಲೆಷ್ಟು?!

ಹರೀಶ್ ಎಚ್.ಕೆ.ಹರೀಶ್ ಎಚ್.ಕೆ.21 Aug 2026 10:37 AM IST
share
ದೇಶದ ಆರ್ಥಿಕತೆಯಲ್ಲಿ ಎಮ್ಮೆಗಳ ಪಾಲೆಷ್ಟು?!

ಕಾಗದದ ಮೇಲಿನ ಸಿದ್ಧಾಂತಗಳು, ಭಾಷಣದ ಮೇಜವಾನಿಗಳು ಮತ್ತು ದ್ವೇಷದ ರಾಜಕಾರಣವು ಹಸಿದ ಹೊಟ್ಟೆಗೆ ಊಟ ಹಾಕುವುದಿಲ್ಲ.

ಭಾವನಾತ್ಮಕ ರಾಜಕೀಯದಿಂದ ಹಸುವನ್ನು ಆರ್ಥಿಕ ಹೊರೆಯನ್ನಾಗಿಸಿದ ವ್ಯವಸ್ಥೆಯಲ್ಲಿ, ಯಾವುದೇ ರಕ್ಷಣೆ ಇಲ್ಲದ ಕಪ್ಪು ಎಮ್ಮೆಯು ರೈತನ ಸಂಸಾರವನ್ನು ಹಾಗೂ ದೇಶದ ರಫ್ತು ಆರ್ಥಿಕತೆಯನ್ನು ಎತ್ತಿಹಿಡಿದಿದೆ.

ಸರಕಾರಗಳು ಇನ್ನು ಮುಂದಾದರೂ ಆಧಾರರಹಿತ ರಾಜಕೀಯ ಹಠಮಾರಿತನವನ್ನು ಬಿಟ್ಟು, ವಾಸ್ತವ ಆರ್ಥಿಕತೆಯನ್ನು ಒಪ್ಪಿಕೊಂಡು ಇಂತಹ ಯಶಸ್ವಿ ರಫ್ತು ಮಾದರಿಗಳನ್ನು ಇತರ ಕೃಷಿ ಕ್ಷೇತ್ರಗಳಿಗೂ ವಿಸ್ತರಿಸುವ ಕೆಲಸ ಮಾಡಬೇಕಿದೆ.

ಭಾರತದಲ್ಲಿ ರಾಜಕೀಯ ಭಾಷಣಗಳಿಗೂ ದೇಶದ ನೈಜ ಆರ್ಥಿಕತೆಗೂ ಇರುವ ಅಂತರ ಎಷ್ಟು ದೊಡ್ಡದು ಎನ್ನುವುದಕ್ಕೆ ನಮ್ಮ ಕೃಷಿ ರಫ್ತು ವಲಯಕ್ಕಿಂತ ಉತ್ತಮ ಉದಾಹರಣೆ ಬೇರೊಂದಿಲ್ಲ.

ಚುನಾವಣೆಗಳು ಬಂದಾಗ ಟಿ.ವಿ. ಸ್ಟುಡಿಯೊಗಳಲ್ಲಿ, ರ್ಯಾಲಿಗಳಲ್ಲಿ ಹಸುವಿನ ಹೆಸರಿನಲ್ಲಿ ಧ್ರುವೀಕರಣದ ಅಬ್ಬರ, ದ್ವೇಷದ ಕಿಡಿಗಳು ಹಾರಾಡುವುದು ನಮಗೆ ಹೊಸತಲ್ಲ.

ಆದರೆ, ರಾಜಕಾರಣಿಗಳು ಕ್ಯಾಮರಾ ಮುಂದೆ ಭಾವನಾತ್ಮಕ ಭಾಷಣ ಬಿಗಿಯುತ್ತಿರುವಾಗಲೇ, ಭಾರತದ ಕೃಷಿ ರಂಗದ ಅತ್ಯಂತ ದೊಡ್ಡ ರಫ್ತು ಕ್ರಾಂತಿಯನ್ನು ಯಾವುದೇ ರಾಜಕೀಯ ರಕ್ಷಣೆ ಇಲ್ಲದ ಸಾಧಾರಣ ಎಮ್ಮೆ ಸದ್ದಿಲ್ಲದೆ ಮುನ್ನಡೆಸುತ್ತಿದೆ.

೨೦೨೫-೨೬ರ ಆರ್ಥಿಕ ವರ್ಷದಲ್ಲಿ ಭಾರತದ ಎಮ್ಮೆ ಮಾಂಸ ಅಥವಾ ಕ್ಯಾರಾಬೀಫ್ ರಫ್ತು ಬರೋಬ್ಬರಿ ೫.೧ ಬಿಲಿಯನ್ ಡಾಲರ್ ಅಂದರೆ ಸುಮಾರು ೪೨,೦೦೦ ಕೋಟಿ ರೂ.ಗಳ ಗಡಿ ದಾಟಿ ಇತಿಹಾಸ ನಿರ್ಮಿಸಿದೆ. ಬರೀ ಮೂರೇ ತಿಂಗಳಲ್ಲಿ ಶೇ. ೬೬.೬ರಷ್ಟು ಜಿಗಿತ ಕಂಡಿರುವ ಈ ವ್ಯಾಪಾರ, ಪ್ರಸಕ್ತ ವರ್ಷದಲ್ಲಿ ೬ ಬಿಲಿಯನ್ ಡಾಲರ್ ದಾಟುವ ಗುರಿ ಹೊಂದಿದೆ.

ಇಲ್ಲಿರುವ ಅತಿ ದೊಡ್ಡ ರಾಜಕೀಯ ವ್ಯಂಗ್ಯವನ್ನು ನೆನಪಿಸಿಕೊಳ್ಳಲೇಬೇಕು. ೨೦೧೨ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಅಂದಿನ ಕೇಂದ್ರ ಸರಕಾರದ ವಿರುದ್ಧ ಗುಡುಗುತ್ತಾ, ‘‘ಹಾಲಿನ ಶ್ವೇತಕ್ರಾಂತಿಯನ್ನು ಬಿಟ್ಟು ಸರಕಾರ ಪ್ರಾಣಿಗಳನ್ನು ಕೊಲ್ಲುವ ಗುಲಾಬಿ ಕ್ರಾಂತಿ (pink revolution) ಮಾಡುತ್ತಿದೆ’’ ಎಂದು ವ್ಯಂಗ್ಯವಾಡಿದ್ದರು.

ಆದರೆ ಅದೇ ಮೋದಿಯವರ ಡಬಲ್ ಇಂಜಿನ್ ಆಡಳಿತದಲ್ಲಿ ಭಾರತದ ಮಾಂಸ ರಫ್ತು ವಿಶ್ವಮಟ್ಟದಲ್ಲಿ ಅತಿ ಹೆಚ್ಚು ವಿದೇಶಿ ವಿನಿಮಯ ತಂದುಕೊಡುವ ರಂಗವಾಗಿ ಬೆಳೆದು ನಿಂತಿದೆ.

ರಾಜಕೀಯವಾಗಿ ಹಸುವಿನ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ, ಜನರನ್ನು ಗುಂಪು ಹಲ್ಲೆಗಳಿಗೆ ತಳ್ಳುವಂತಹ ವಾತಾವರಣ ಸೃಷ್ಟಿಯಾದರೂ, ಸರಕಾರದ ಬೊಕ್ಕಸಕ್ಕೆ ಮಾತ್ರ ಈ ಗುಲಾಬಿ ಕ್ರಾಂತಿಯ ಡಾಲರ್ ನೋಟುಗಳು ಯಾವುದೇ ತಕರಾರಿಲ್ಲದೆ ಸ್ವೀಕಾರಾರ್ಹವಾಗಿವೆ. ಅಧಿಕಾರ ರಾಜಕಾರಣಕ್ಕೆ ಧರ್ಮ ಮತ್ತು ದ್ವೇಷ ಬೇಕು, ಆದರೆ ಆರ್ಥಿಕ ಸಮತೋಲನಕ್ಕೆ ಅದೇ ರಫ್ತು ಹಣ ಬೇಕು ಎನ್ನುವ ಅದ್ಭುತ ದ್ವಂದ್ವ ನಮ್ಮ ಕಣ್ಣೆದುರೇ ಅನಾವರಣಗೊಂಡಿದೆ.

ಈ ಹಿಂದೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಮಾಂಸವನ್ನು ಬ್ರೆಝಿಲ್‌ನ ಗೋಮಾಂಸಕ್ಕೆ ಹೋಲಿಸಿದರೆ ಅಗ್ಗದ ಸರಕು ಎಂದು ಪರಿಗಣಿಸಲಾಗುತ್ತಿತ್ತು. ೨೦೧೪ರಲ್ಲಿ ೧ ಟನ್ ಎಮ್ಮೆ ಮಾಂಸಕ್ಕೆ ಕೇವಲ ೩,೨೪೦ ಡಾಲರ್ ಸಿಗುತ್ತಿತ್ತು. ಆದರೆ ಇಂದು ಭಾರತದ ಗುಣಮಟ್ಟ ಮತ್ತು ಕಟ್ಟುನಿಟ್ಟಾದ ಸಂಸ್ಕರಣಾ ವ್ಯವಸ್ಥೆಯಿಂದಾಗಿ ೧ ಟನ್ ಮಾಂಸದ ಬೆಲೆ ದಾಖಲೆಯ ೪,೩೯೨ ಡಾಲರ್‌ಗೆ ಏರಿಕೆಯಾಗಿದೆ. ವಿಶ್ವದ ನಂಬರ್ ೧ ಬೀಫ್ ರಫ್ತುದಾರ ಬ್ರೆಝಿಲ್ ಮತ್ತು ಭಾರತದ ಮಾಂಸದ ನಡುವೆ ಈ ಹಿಂದೆ ಟನ್‌ಗೆ ೨,೦೦೦ ಡಾಲರ್ ಇದ್ದ ಬೆಲೆ ವ್ಯತ್ಯಾಸ, ಇಂದು ಕೇವಲ ೫೦೦ರಿಂದ ೭೦೦ ಡಾಲರ್‌ಗೆ ಇಳಿದಿದೆ.

ಭಾರತದಿಂದ ಕೇವಲ ವಿಯೆಟ್ನಾಮ್ ಮಾತ್ರವಲ್ಲದೆ ಈಜಿಪ್ಟ್, ಮಲೇಶ್ಯ, ಸೌದಿ ಅರೇಬಿಯ, ಯುಎಇ, ಇಂಡೋನೇಶ್ಯ ಮತ್ತು ರಶ್ಯಗಳಂತಹ ದೇಶಗಳು ಸಾವಿರಾರು ಕೋಟಿ ರೂ. ಮೌಲ್ಯದ ಮಾಂಸವನ್ನು ಖರೀದಿಸುತ್ತಿವೆ. ಅಮೆರಿಕದ USDA ವರದಿಯ ಪ್ರಕಾರ, ಇಂದು ಭಾರತವು ಬ್ರೆಝಿಲ್ ಮತ್ತು ಆಸ್ಟ್ರೇಲಿಯ ನಂತರ ಜಗತ್ತಿನ ೩ನೇ ಅತಿದೊಡ್ಡ ಎಮ್ಮೆ ಮಾಂಸ ರಫ್ತುದಾರ ದೇಶವಾಗಿ ನಿಂತಿದೆ.

ಈ ರಫ್ತು ಬೂಮ್‌ನ ಅಸಲಿ ಶಕ್ತಿ ಅಡಗಿರುವುದು ಉತ್ತರ ಪ್ರದೇಶ, ಪಂಜಾಬ್ ಮತ್ತು ಹರ್ಯಾಣದ ಹಳ್ಳಿಗಳಲ್ಲಿರುವ ಸಣ್ಣ ಹೈನುಗಾರ ರೈತನ ಜೇಬಿನಲ್ಲಿ. ಒಬ್ಬ ರೈತ ೧೦ ಎಮ್ಮೆಗಳನ್ನು ಸಾಕುತ್ತಿದ್ದರೆ, ೫ ಅಥವಾ ೬ ಸಲ ಕರು ಹಾಕಿದ ನಂತರ ಅವುಗಳ ಹಾಲಿನ ಇಳುವರಿ ಸಂಪೂರ್ಣ ಕುಸಿಯುತ್ತದೆ.

ಮುದಿ ಪ್ರಾಯದ, ಹಾಲು ಕೊಡದ ಎಮ್ಮೆಯನ್ನು ರೈತ ಕಸಾಯಿಖಾನೆಗೆ ಮಾರಾಟ ಮಾಡಿದರೆ, ಆತನ ಕೈಗೆ ಸಾರಿಗೆ ಮತ್ತು ದಲ್ಲಾಳಿ ವೆಚ್ಚ ಕಳೆದು ಕನಿಷ್ಠ ೫೦,೦೦೦ ರೂ. ನಗದು ಸಿಗುತ್ತದೆ.

ಇಂದು ಹೊಸದಾಗಿ ಹಾಲು ಕೊಡುವ ಒಳ್ಳೆಯ ತಳಿಯ ಎಮ್ಮೆ ಕೊಳ್ಳಲು ೧.೨೫ರಿಂದ ೧.೫ ಲಕ್ಷ ರೂ. ಬೇಕು. ಅಂದರೆ ಹಳೆಯ ಎಮ್ಮೆ ಮಾರಿದ ಹಣದಿಂದ ಆತನಿಗೆ ಹೊಸ ಹಸು ಅಥವಾ ಎಮ್ಮೆ ಖರೀದಿಸಲು ಶೇ. ೩೫ಕ್ಕೂ ಹೆಚ್ಚು ಬಂಡವಾಳ ತಕ್ಷಣವೇ ಕೈಸೇರುತ್ತದೆ. ಇದು ಹಳ್ಳಿಯ ಆರ್ಥಿಕತೆಗೆ ಜೀವ ತುಂಬುವ ಪರಿಪೂರ್ಣ circular economy ಆಗಿದೆ.

ಇನ್ನೊಂದೆಡೆ, ಭಾರತದಲ್ಲಿ ಹಸುವಿನ ಸುತ್ತ ಹೆಣೆಯಲಾದ ಭಾವನಾತ್ಮಕ ರಾಜಕೀಯ ಕಾನೂನುಗಳು ರೈತನ ಪಾಲಿಗೆ ಹೇಗೆ ಆರ್ಥಿಕ ಕಂಟಕವಾಗಿ ಪರಿಣಮಿಸಿವೆ ಎಂಬುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ.

ಹಸುವಿನ ಹತ್ಯೆಯನ್ನು ಬಹುತೇಕ ರಾಜ್ಯಗಳಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪರಿಣಾಮವಾಗಿ, ಹಾಲು ಕೊಡುವುದನ್ನು ನಿಲ್ಲಿಸಿದ ಮುದಿ ಹಸುವಿನ ಆರ್ಥಿಕ ಮೌಲ್ಯ ಶೂನ್ಯವಾಗುತ್ತದೆ.

ತಿನ್ನಲು ಮೇವಿಲ್ಲದೆ, ಸಾಕಲು ಹಣವಿಲ್ಲದೆ ರೈತ ಕಂಗಾಲಾಗುತ್ತಾನೆ. ಅನಿವಾರ್ಯವಾಗಿ ಹಳ್ಳಿಗಳಲ್ಲಿ ಮುದಿ ಹಸುಗಳನ್ನು ಬೀದಿಗೆ ಬಿಡಲಾಗುತ್ತಿದೆ. ಉತ್ತರ ಭಾರತದಾದ್ಯಂತ ಈ ಬೀದಿ ದನಗಳು ಬೆಳೆಗಳನ್ನು ನಾಶಮಾಡುತ್ತಿವೆ, ಹೆದ್ದಾರಿಗಳಲ್ಲಿ ಅಪಘಾತಗಳಿಗೆ ಕಾರಣವಾಗುತ್ತಿವೆ.

ಸರಕಾರ ಗೋಶಾಲೆಗಳಿಗೆ ತೆರಿಗೆ ಹಾಕಿ ಕೋಟ್ಯಂತರ ರೂ. ಸುರಿದರೂ ಸಮಸ್ಯೆ ಬಗೆಹರಿದಿಲ್ಲ. ಹಸುವನ್ನು ದೇವತೆಯೆಂದು ಪೂಜಿಸಿ ರಾಜಕೀಯ ಲಾಭ ಪಡೆಯುವ ವ್ಯವಸ್ಥೆಯು, ಹಸುವನ್ನು ಸಾಕುವ ರೈತನ ಆರ್ಥಿಕ ಪರಿಸ್ಥಿತಿಯನ್ನು ಅಧೋಗತಿಗೆ ತಳ್ಳಿದೆ. ಇದೇ ಕಾರಣಕ್ಕೆ ಇಂದು ಹಳ್ಳಿಯ ರೈತರು ಹಸುಗಳಿಗಿಂತ ಎಮ್ಮೆಗಳನ್ನು ಸಾಕಲು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.

ಇದಕ್ಕೆ ಮತ್ತೊಂದು ದೊಡ್ಡ ಕಾರಣವೆಂದರೆ ಹಾಲಿನ ಮಾರುಕಟ್ಟೆ. ದೇಶದಲ್ಲಿ ಉತ್ಪಾದನೆಯಾಗುವ ಹಾಲಿನಲ್ಲಿ ಶೇ. ೪೩ರಷ್ಟು ಹಾಲು ಎಮ್ಮೆಗಳಿಂದಲೇ ಬರುತ್ತದೆ. ಎಮ್ಮೆ ಹಾಲಿನಲ್ಲಿ ಶೇ. ೬.೫ರಿಂದ ೭ರಷ್ಟು ಕೊಬ್ಬಿನಾಂಶವಿರುತ್ತದೆ. ಸಿಹಿ ತಿಂಡಿಗಳು, ಖೋವಾ, ತುಪ್ಪ, ಪನೀರ್ ಮತ್ತು ಹೋಟೆಲ್ ಚಹಾಕ್ಕೆ ಎಮ್ಮೆ ಹಾಲೇ ಅನಿವಾರ್ಯ.

ಡೇರಿಗಳು ಉತ್ತರ ಪ್ರದೇಶದಲ್ಲಿ ಎಮ್ಮೆ ಹಾಲಿಗೆ ಲೀಟರ್‌ಗೆ ೬೦ ರೂ.ವರೆಗೆ ಬೆಲೆ ನೀಡುತ್ತಿವೆ. ಹಾಲು ಮಾರಿದಾಗಲೂ ಉತ್ತಮ ಆದಾಯ, ಮುದಿಯಾದಾಗ ಮಾರಿದರೂ ೫೦,೦೦೦ ರೂಪಾಯಿ ಗ್ಯಾರಂಟಿ ನಗದು. ಹೀಗಿರುವಾಗ ರೈತ ಯಾವುದೇ ರಾಜಕೀಯ ಭಾಷಣ ಕೇಳದೆ ನೇರವಾಗಿ ಎಮ್ಮೆ ಸಾಕಣೆಯ ಲಾಭದ ಲೆಕ್ಕಾಚಾರವನ್ನೇ ಆರಿಸಿಕೊಳ್ಳುತ್ತಿದ್ದಾನೆ.

ಈ ಬೃಹತ್ ಉದ್ಯಮ ಕೇವಲ ಮಾಂಸಕ್ಕೆ ಮಾತ್ರ ಸೀಮಿತವಾಗಿಲ್ಲ. ಸಂಸ್ಕರಣಾ ಘಟಕಗಳಿಂದ ಬರುವ ಪ್ರಾಣಿಗಳ ಚರ್ಮವು ಕಾನ್ಪುರ, ಉನ್ನಾವೊ ಮತ್ತು ರಾಣಿಪೇಟೆಯ ಚರ್ಮೋದ್ಯೋಗಕ್ಕೆ ಕಚ್ಚಾವಸ್ತುವಾಗುತ್ತದೆ.

ಪ್ರಾಣಿಗಳ ಮೂಳೆಗಳು ಮತ್ತು ಅಂಗಾಂಗಗಳು ಔಷಧೀಯ ಕ್ಯಾಪ್ಸೂಲ್‌ಗಳ ಜೆಲಾಟಿನ್, ಕಾಲಜನ್ ಮತ್ತು ಶಸ್ತ್ರಚಿಕಿತ್ಸಾ ಪರಿಕರಗಳ ತಯಾರಿಕೆಗೆ ಬಳಕೆಯಾಗುತ್ತವೆ. ಉಳಿದ ತ್ಯಾಜ್ಯಗಳು ಕೋಳಿ ಆಹಾರ ಮತ್ತು ಜೈವಿಕ ಗೊಬ್ಬರವಾಗಿ ಬದಲಾಗುತ್ತವೆ.

ಮುಂಬೈನ Allanasons, ಯೂಸುಫ್ ಅಲಿಯವರ ಲುಲು ಗ್ರೂಪ್‌ನ Fair Exports ಮತ್ತು ಆಗ್ರಾದ HMA Agroದಂತಹ ಜಾಗತಿಕ ಸಂಸ್ಥೆಗಳು ಭಾರತದ ಈ ಉದ್ಯಮವನ್ನು ಮುನ್ನಡೆಸುತ್ತಿವೆ.

ಮಾಂಸ ಸಂಸ್ಕರಣಾ ಘಟಕಗಳಲ್ಲಿ ಇಂದು ಹಲವು ಸಾವಿರ ಮಂದಿ ಕಾರ್ಮಿಕರು, ಮಹಿಳಾ ವಲಸೆ ಕಾರ್ಮಿಕರು, ಆಹಾರ ತಂತ್ರಜ್ಞರು ಮತ್ತು ಪಶುವೈದ್ಯಕೀಯ ಅಧಿಕಾರಿಗಳು ಉದ್ಯೋಗ ಕಂಡುಕೊಂಡಿದ್ದಾರೆ.

ಆದರೆ ಈ ಉದ್ಯಮಕ್ಕೆ ಎದುರಾಗಿರುವ ದೊಡ್ಡ ಸವಾಲು ಎಂದರೆ ನೆಲಮಟ್ಟದ ಆಡಳಿತಾತ್ಮಕ ಗೊಂದಲಗಳು ಮತ್ತು ಅಧಿಕಾರಶಾಹಿಯ ಕಿರುಕುಳ. ಉದಾಹರಣೆಗೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರವು ಕಾನೂನುಬಾಹಿರ ಕಸಾಯಿಖಾನೆಗಳನ್ನು ಮುಚ್ಚುವುದಾಗಿ ಹೇಳಿದೆ. ಆದರೆ ಕೇಂದ್ರದ APEDA ಸಂಸ್ಥೆಯಿಂದ ಅನುಮತಿ ಪಡೆದ, ಅತ್ಯಾಧುನಿಕ ಸೌಲಭ್ಯ ಹೊಂದಿರುವ ಅಧಿಕೃತ ಘಟಕಗಳಿಗೂ ಸ್ಥಳೀಯ ಮಟ್ಟದ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ.

ಮೇಲ್ಮಟ್ಟದಲ್ಲಿ ಸರಕಾರಗಳು ಮಾಂಸ ರಫ್ತಿನಿಂದ ಬರುವ ಸಾವಿರಾರು ಕೋಟಿ ತೆರಿಗೆ ಮತ್ತು ವಿದೇಶಿ ವಿನಿಮಯವನ್ನು ಸಂಭ್ರಮಿಸುತ್ತವೆ, ಆದರೆ ಕೆಳಮಟ್ಟದಲ್ಲಿ ಕೇವಲ ಸೈದ್ಧಾಂತಿಕ ಮತ್ತು ರಾಜಕೀಯ ಹಿತಾಸಕ್ತಿಗಳಿಗಾಗಿ ಕಾನೂನುಬದ್ಧ ಉದ್ಯಮಿಗಳನ್ನು ಹೈರಾಣಾಗಿಸಲಾಗುತ್ತಿದೆ.

ರಾಜಕೀಯ ದ್ವೇಷ ಮತ್ತು ಆಡಳಿತಾತ್ಮಕ ಅಸ್ಥಿರತೆಯು ದೇಶದ ಇಂತಹ ಪ್ರಮುಖ ಆರ್ಥಿಕ ಶಕ್ತಿಯನ್ನು ದುರ್ಬಲಗೊಳಿಸಬಾರದು.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತದ ಮಾಂಸ ರಫ್ತು ಕ್ಷೇತ್ರವು ದೇಶದ ಆರ್ಥಿಕತೆಯ ಅತಿ ದೊಡ್ಡ ವಾಸ್ತವವನ್ನು ತೆರೆದಿಟ್ಟಿದೆ.

ಕಾಗದದ ಮೇಲಿನ ಸಿದ್ಧಾಂತಗಳು, ಭಾಷಣದ ಮೇಜವಾನಿಗಳು ಮತ್ತು ದ್ವೇಷದ ರಾಜಕಾರಣವು ಹಸಿದ ಹೊಟ್ಟೆಗೆ ಊಟ ಹಾಕುವುದಿಲ್ಲ.

ಭಾವನಾತ್ಮಕ ರಾಜಕೀಯದಿಂದ ಹಸುವನ್ನು ಆರ್ಥಿಕ ಹೊರೆಯನ್ನಾಗಿಸಿದ ವ್ಯವಸ್ಥೆಯಲ್ಲಿ, ಯಾವುದೇ ರಕ್ಷಣೆ ಇಲ್ಲದ ಕಪ್ಪು ಎಮ್ಮೆಯು ರೈತನ ಸಂಸಾರವನ್ನು ಹಾಗೂ ದೇಶದ ರಫ್ತು ಆರ್ಥಿಕತೆಯನ್ನು ಎತ್ತಿಹಿಡಿದಿದೆ.

ಸರಕಾರಗಳು ಇನ್ನು ಮುಂದಾದರೂ ಆಧಾರರಹಿತ ರಾಜಕೀಯ ಹಠಮಾರಿತನವನ್ನು ಬಿಟ್ಟು, ವಾಸ್ತವ ಆರ್ಥಿಕತೆಯನ್ನು ಒಪ್ಪಿಕೊಂಡು ಇಂತಹ ಯಶಸ್ವಿ ರಫ್ತು ಮಾದರಿಗಳನ್ನು ಇತರ ಕೃಷಿ ಕ್ಷೇತ್ರಗಳಿಗೂ ವಿಸ್ತರಿಸುವ ಕೆಲಸ ಮಾಡಬೇಕಿದೆ.

Tags

country's economy
share
ಹರೀಶ್ ಎಚ್.ಕೆ.
ಹರೀಶ್ ಎಚ್.ಕೆ.
Next Story
X