Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಐಎಂಎಫ್‌ನಿಂದ ವಜಾ: ಡಾ. ಕೃಷ್ಣಮೂರ್ತಿ...

ಐಎಂಎಫ್‌ನಿಂದ ವಜಾ: ಡಾ. ಕೃಷ್ಣಮೂರ್ತಿ ಸುಬ್ರಮಣಿಯನ್ ಮಾಡಿಕೊಂಡ ಯಡವಟ್ಟೇನು?

ಎನ್. ಶಿವರಾಮ್ಎನ್. ಶಿವರಾಮ್11 May 2025 10:05 AM IST
share
ಐಎಂಎಫ್‌ನಿಂದ ವಜಾ:  ಡಾ. ಕೃಷ್ಣಮೂರ್ತಿ ಸುಬ್ರಮಣಿಯನ್ ಮಾಡಿಕೊಂಡ ಯಡವಟ್ಟೇನು?

ಸುಬ್ರಮಣಿಯನ್ ಅವರನ್ನು ವಜಾಗೊಳಿಸುವುದು ಭಾರತ ಸರಕಾರದ ನಿರ್ಧಾರ ಎಂದು ಐಎಂಎಫ್ ವಕ್ತಾರರು ಹೇಳಿರುವುದೇನೋ ನಿಜ.

ಆದರೂ, ಐಎಂಎಫ್ ತನ್ನ ಗಮನಕ್ಕೆ ಬಂದಿರುವ ಅಂಶಗಳನ್ನು ಭಾರತ ಸರಕಾರಕ್ಕೆ ವರದಿ ಮಾಡಿ ಅವರ ಸೇವೆ ವಜಾಗೊಳಿಸುವ ಸಲಹೆಯನ್ನು ನೀಡಿರಬಹುದು ಎನ್ನಲಾಗುತ್ತಿದೆ.

ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯಲ್ಲಿ ಭಾರತದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಡಾ. ಕೃಷ್ಣಮೂರ್ತಿ ಸುಬ್ರಮಣಿಯನ್ ಅವರನ್ನು ಭಾರತ ಸರಕಾರ ವಜಾಗೊಳಿಸಿದೆ.

ಸುಬ್ರಮಣಿಯನ್ ಅವರ ಸೇವೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಲು ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ ಎಂದು ಎಪ್ರಿಲ್ 30ರ ಆದೇಶದಲ್ಲಿ ಹೇಳಲಾಗಿದೆ.

ಭಾರತದ 80 ವರ್ಷಗಳ ವಿಶ್ವ ಬ್ಯಾಂಕ್ ಮತ್ತು ಐಎಂಎಫ್ ಸದಸ್ಯತ್ವದ ಇತಿಹಾಸದಲ್ಲಿಯೇ ಈ ರೀತಿಯ ಕ್ರಮ ಹಿಂದೆಂದೂ ಸಂಭವಿಸಿರಲಿಲ್ಲ ಎಂದು ಪರಿಣಿತರು ಹೇಳುತ್ತಾರೆ.

ಈ ಹಠಾತ್ ಬೆಳವಣಿಗೆ ಭಾರತ ಮುಜುಗರ ಅನುಭವಿಸಿದ್ದರ ಪರಿಣಾಮವೂ ಆಗಿರಬಹುದು ಎನ್ನಲಾಗಿದೆ.

ಕೃಷ್ಣಮೂರ್ತಿ ಸುಬ್ರಮಣಿಯನ್ ಭಾರತ ಸರಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ.

ಮಾಜಿ ಆರ್‌ಬಿಐ ಗವರ್ನರ್ ಬಿಮಲ್ ಜಲನ್, ಆಗಿನ ಡಿಒಪಿಟಿ ಕಾರ್ಯದರ್ಶಿ ಸಿ. ಚಂದ್ರಮೌಳಿ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ನೇತೃತ್ವದ ಆಯ್ಕೆ ಸಮಿತಿ 2018ರಲ್ಲಿ ಮುಖ್ಯ ಆರ್ಥಿಕ ಸಲಹೆಗಾರ ಅಂದ್ರೆ ಸಿಇಎ ಹುದ್ದೆಗಾಗಿ ಸುಬ್ರಮಣಿಯನ್ ಅವರನ್ನು ಸಂದರ್ಶಿಸಿತ್ತು.

ಆದರೆ ಆ ಹುದ್ದೆಗೆ ಅವರು ಸಾಕಷ್ಟು ಅರ್ಹರಲ್ಲ ಎಂದು ಸಮಿತಿ ಗ್ರಹಿಸಿತ್ತು ಎಂಬ ಅಂಶವನ್ನು ಸಮಿತಿಯಲ್ಲಿದ್ದ ಗರ್ಗ್ ಅವರೇ ‘ದಿ ಕ್ವಿಂಟ್’ಗೆ ಬರೆದ ಲೇಖನದಲ್ಲಿ ಬಹಿರಂಗಪಡಿಸಿದ್ದಾರೆ.

ಗರ್ಗ್ ಹೇಳುವ ಪ್ರಕಾರ, ಈಗಿನ ಮುಖ್ಯ ಆರ್ಥಿಕ ಸಲಹೆಗಾರ, ವಿ. ಅನಂತ ನಾಗೇಶ್ವರನ್ ಅವರನ್ನು ಆಗ ಅತ್ಯಂತ ಸೂಕ್ತವೆಂದು ಪರಿಗಣಿಸಲಾಗಿತ್ತು.

ಸಮಿತಿ ನಾಗೇಶ್ವರನ್ ಅವರನ್ನು ಮೊದಲ ಸ್ಥಾನದಲ್ಲಿ ಇರಿಸಿತ್ತು ಮತ್ತು ಸುಬ್ರಮಣಿಯನ್ ಅವರ ಹೆಸರನ್ನು ಎರಡನೇ ಸ್ಥಾನದಲ್ಲಿ ಸೇರಿಸಲಾಗಿತ್ತು. ಕ್ಯಾಬಿನೆಟ್ ನೇಮಕಾತಿ ಸಮಿತಿ ನಾಗೇಶ್ವರನ್ ಅವರನ್ನೇ ಸಿಇಎ ಆಗಿ ನೇಮಿಸುತ್ತದೆ ಎಂದು ಸಮಿತಿ ನಂಬಿತ್ತು.

ಆದರೆ ಸುಬ್ರಮಣಿಯನ್ ಅವರನ್ನು ಸಿಇಎ ಆಗಿ ನೇಮಕ ಮಾಡಲು ಆದೇಶ ಬಂದಿತ್ತೆಂದು ಗರ್ಗ್ ಹೇಳಿದ್ದಾರೆ.

ಪ್ರಧಾನ ಮಂತ್ರಿ ಕಚೇರಿ ಮೂಲಕ ಅವರು ಈ ಸ್ಥಾನ ಪಡೆದಿದ್ದರು ಎಂಬುದನ್ನು ಮತ್ತು ಒಂದು ಸಂದರ್ಭದಲ್ಲಿ ಪ್ರಧಾನಿ ಮೋದಿಯೇ ಸುಬ್ರಮಣಿಯನ್ ಅವರನ್ನು ವೈಯಕ್ತಿಕವಾಗಿ ಪರಿಚಯಿಸಿದ್ದರೆಂಬುದನ್ನು ಗರ್ಗ್ ತಮ್ಮ ಬರಹದಲ್ಲಿ ಪ್ರಸ್ತಾಪಿಸಿದ್ದಾರೆ.

ಅಂದರೆ, ಅವರು ಪ್ರಧಾನಿ ಮೋದಿಯ ನೆಚ್ಚಿನ ವ್ಯಕ್ತಿಯಾಗಿದ್ದವರು ಎಂಬುದು ಖಚಿತವಾಗುತ್ತದೆ.

ಅವರೊಂದಿಗಿನ ಕೆಲಸದ ಅನುಭವದಲ್ಲಿ, ಅವರು ಅತ್ಯಂತ ಮಹತ್ವಾಕಾಂಕ್ಷೆಯ ಮತ್ತು ಅವಕಾಶವಾದಿ ವ್ಯಕ್ತಿ ಎಂದು ತಿಳಿಯಿತೆಂದೂ ಗರ್ಗ್ ಬರೆಯುತ್ತಾರೆ.

2021ರಲ್ಲಿ ಅವರ ಸಿಇಎ ಅವಧಿಯನ್ನು ವಿಸ್ತರಿಸಲಿಲ್ಲ ಮತ್ತು ಆ ಜಾಗಕ್ಕೆ ಮೂರು ವರ್ಷಗಳ ಹಿಂದೆ ಸಮಿತಿ ಶಿಫಾರಸು ಮಾಡಿದ್ದ ನಾಗೇಶ್ವರನ್ ಅವರನ್ನು ನೇಮಿಸಲಾಯಿತು.

ಅದಾಗಿ ಸುಮಾರು ಒಂದು ವರ್ಷದೊಳಗೆ, ಅವರು ಸರಕಾರದೊಂದಿಗಿನ ತಮ್ಮ ಸಂಬಂಧ ಸರಿಪಡಿಸಿಕೊಂಡಿದ್ದರು ಮತ್ತು ಐಎಂಎಫ್‌ನಲ್ಲಿ ಭಾರತದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡರು ಎಂದು ಗರ್ಗ್ ಬರೆದಿದ್ದಾರೆ.

ಅವರ ಪ್ರಕಾರ, ಐಎಂಎಫ್‌ನಲ್ಲಿ ತಮ್ಮ ಎರಡೂವರೆ ವರ್ಷಗಳಲ್ಲಿ ಸುಬ್ರಮಣಿಯನ್ ಲೆಕ್ಕವಿಲ್ಲದಷ್ಟು ಮಾಧ್ಯಮ ಸಂವಾದಗಳು, ಆರ್ಥಿಕ ವಿಷಯಗಳ ಚಾನೆಲ್‌ಗಳು ಮತ್ತಿತರ ವೇದಿಕೆಗಳಲ್ಲಿ ಸರಕಾರದ ಪರವಾಗಿ ಮಾತನಾಡುತ್ತಾ ಕಾಣಿಸಿಕೊಂಡಿದ್ದರು.

ಮೋದಿ ಸರಕಾರ ಎಷ್ಟು ಉತ್ತಮವಾಗಿದೆ ಮತ್ತು ಮೋದಿ ಸರಕಾರ ಭಾರತಕ್ಕಾಗಿ ಎಷ್ಟು ಉತ್ತಮ ಭವಿಷ್ಯವನ್ನು ನಿರ್ಮಿಸುತ್ತಿದೆ ಎಂಬುದರ ಕುರಿತು ಅವರು ಯಾವಾಗಲೂ ಮಾತನಾಡುತ್ತಿದ್ದರು.

ಅವರ ಪುಸ್ತಕ ‘ಇಂಡಿಯಾ@100: ಎನ್ವಿಶನಿಂಗ್ ಟುಮಾರೋಸ್ ಇಕನಾಮಿಕ್ ಪವರ್‌ಹೌಸ್’ ಕೂಡ ಮೋದಿ ಸ್ತುತಿಯನ್ನೇ ಮಾಡುತ್ತದೆ.

ಮೋದಿಯವರ ನೀತಿಗಳ ಬಗ್ಗೆ ಮತ್ತು 2047ರ ವೇಳೆಗೆ ಭಾರತ 55 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಹೇಗೆ ಓಡುತ್ತಿದೆ ಎಂಬುದರ ಬಗ್ಗೆ ಕೂಡ ಅದರಲ್ಲಿ ಹೇಳಲಾಗಿದೆ ಎಂದು ಗರ್ಗ್ ಉಲ್ಲೇಖಿಸಿದ್ದಾರೆ.

ಅದನ್ನು ಸಂಪೂರ್ಣವಾಗಿ ಮತ್ತು ವಿಮರ್ಶಾತ್ಮಕವಾಗಿ ಓದಿದರೆ, ಅದರಲ್ಲಿ ಬರೀ ಮಾತು ಬಿಟ್ಟರೆ ಮತ್ತೇನೂ ಇಲ್ಲ ಎಂಬುದು ಗೊತ್ತಾಗುತ್ತದೆ ಎಂತಲೂ ಅವರು ಬರೆದಿದ್ದಾರೆ.

ಸುಬ್ರಮಣಿಯನ್ ಆಗಾಗ ಭಾರತಕ್ಕೆ ಬರುತ್ತಿದ್ದರು.ಉನ್ನತ ಸ್ಥಾನದಲ್ಲಿರುವವರು ಮತ್ತು ಪ್ರಬಲರನ್ನು ಪುಸ್ತಕ ಪ್ರಸ್ತುತಪಡಿಸಲು ಕೇಳಲಾಗುತ್ತಿತ್ತು.

ಪುಸ್ತಕ ಬಿಡುಗಡೆ ಸಮಾರಂಭಗಳ ಮೂಲಕ ಅದನ್ನು ಪ್ರಚಾರ ಮಾಡಲು, ಭಾರತದ ಪ್ರತಿಯೊಂದು ಉದ್ಯಮ ಸಂಸ್ಥೆ ಮತ್ತು ಸಂಸ್ಥೆಯನ್ನು ಮನವೊಲಿಸಲಾಗಿತ್ತು.

ಅವರನ್ನು ಈಗ ಮೂರು ವರ್ಷಗಳ ಅವಧಿ ಮುಗಿಯುವುದಕ್ಕೆ 6 ತಿಂಗಳು ಇರುವಾಗಲೇ ವಜಾಗೊಳಿಸಲಾಗಿದೆ

ಆದರೆ, ಭಾರತ ಸರಕಾರ ವಜಾಗೊಳಿಸುವ ಆದೇಶದಲ್ಲಿ ಯಾವುದೇ ನಿರ್ದಿಷ್ಟ ಕಾರಣವನ್ನು ಉಲ್ಲೇಖಿಸಿಲ್ಲ.

ಅವರನ್ನು ವಜಾಗೊಳಿಸುವ ಮೊದಲು ಅವರ ತೀರಾ ಕೆಟ್ಟ ನಡತೆಯ ಪುರಾವೆಗಳನ್ನು ಹಾಗೂ ಅದರಿಂದಾಗಿ ದೇಶದ ಇಮೇಜ್‌ಗೆ ಆಗುವ ನಷ್ಟವನ್ನು ಮೋದಿ ನೋಡಿರಬೇಕು.

ಸುಬ್ರಮಣಿಯನ್ ಅವರನ್ನು ವಜಾಗೊಳಿಸುವುದು ಭಾರತ ಸರಕಾರದ ನಿರ್ಧಾರ ಎಂದು ಐಎಂಎಫ್ ವಕ್ತಾರರು ಹೇಳಿರುವುದೇನೋ ನಿಜ.

ಆದರೂ, ಐಎಂಎಫ್ ತನ್ನ ಗಮನಕ್ಕೆ ಬಂದಿರುವ ಅಂಶಗಳನ್ನು ಭಾರತ ಸರಕಾರಕ್ಕೆ ವರದಿ ಮಾಡಿ ಅವರ ಸೇವೆ ವಜಾಗೊಳಿಸುವ ಸಲಹೆಯನ್ನು ನೀಡಿರಬಹುದು ಎನ್ನಲಾಗುತ್ತಿದೆ.

ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ಎರಡೂ ಕಟ್ಟುನಿಟ್ಟಾದ ನೀತಿ ಸಂಹಿತೆಗಳನ್ನು ಹೊಂದಿವೆ.

ಸುಬ್ರಮಣಿಯನ್ ಪ್ರಕರಣ ಅವರನ್ನು ಹಠಾತ್ ವಜಾಗೊಳಿಸುವ ಮಟ್ಟಿಗೆ ಅಸಹನೀಯವಾದುದಾಗಿತ್ತು. ಹಾಗಾದರೆ, ಸುಬ್ರಮಣಿಯನ್ ಮಾಡಿಕೊಂಡ ಅಷ್ಟು ದೊಡ್ಡ ಯಡವಟ್ಟು ಏನು?

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ೭.೨೫ ಕೋಟಿ ರೂ.ವನ್ನು ಸುಬ್ರಮಣಿಯನ್ ಅವರ ಇಂಡಿಯಾ@೧೦೦ ಪುಸ್ತಕ ಖರೀದಿಗಾಗಿ ಹಾಕಿತ್ತು. ಈ ಖರೀದಿ ಹಗರಣ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿತ್ತು.

ಸುಬ್ರಮಣಿಯನ್ ಅವರ ಪುಸ್ತಕಗಳ ಸಾಮೂಹಿಕ ಖರೀದಿಗೆ ಆದೇಶಿಸಿದ ಜನರಲ್ ಮ್ಯಾನೇಜರ್ ಅವರನ್ನು ನಾಲ್ಕು ತಿಂಗಳ ಹಿಂದೆಯೇ ಅಮಾನತುಗೊಳಿಸಲಾಗಿತ್ತು.

ಸುಬ್ರಮಣಿಯನ್ ತಮ್ಮ ಪುಸ್ತಕದ ಪ್ರಚಾರದಲ್ಲಿ ಸಿಕ್ಕಾಪಟ್ಟೆ ತೊಡಗಿಸಿಕೊಂಡಿದ್ದರು. ಪುಸ್ತಕ ಪ್ರಕಟಣೆಗೂ ಮುನ್ನವೇ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಬೃಹತ್ ಪ್ರಕಟಣಾ ಪೂರ್ವ ಆರ್ಡರ್ ಕೊಡಿಸುವಲ್ಲಿ ಅವರು ಯಶಸ್ವಿಯಾಗಿದ್ದರು ಎಂದು ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು.

೭.೫ ಕೋಟಿ ರೂ. ವೆಚ್ಚದಲ್ಲಿ ಸುಮಾರು ೨ ಲಕ್ಷ ಪ್ರತಿಗಳ ಖರೀದಿಗಾಗಿ ಆರ್ಡರ್ ಮಾಡಲಾಗಿತ್ತು. ಇದು ಭಾರತದ ಪುಸ್ತಕ ಪ್ರಕಾಶನದ ಇತಿಹಾಸದಲ್ಲಿಯೇ ಅತಿ ದೊಡ್ಡ ಪ್ರಕಟಣಾ ಪೂರ್ವ ಆರ್ಡರ್ ಆಗಿರಬಹುದು ಎನ್ನಲಾಗಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವುದರಿಂದ, ವರದಿ ಸರಕಾರಕ್ಕೆ ಬಹಳ ಮೊದಲೇ ತಲುಪಿರುತ್ತದೆ.

ಸುಬ್ರಮಣಿಯನ್ ಅವರಿಗೂ ಇದೆಲ್ಲ ತಿಳಿದಿತ್ತು.

ಆದರೆ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ವಿಶ್ವಾಸವಿದ್ದ ಅವರು, ಅಂಥದ್ದೇನೂ ನಡೆದೇ ಇಲ್ಲ ಎನ್ನುವಂತೆ ನಿರಾಳವಾಗಿದ್ದರು. ಆದರೆ ಈ ಎಲ್ಲ ವಿಷಯ ಐಎಂಎಫ್‌ನ ನೈತಿಕ ಸಮಿತಿಯನ್ನು ತಲುಪಿರುವ ಸಾಧ್ಯತೆ ಇದೆ.

ತಮ್ಮ ಪುಸ್ತಕದ ಪ್ರಚಾರಕ್ಕಾಗಿ ಭಾರತಕ್ಕೆ ಭೇಟಿ ನೀಡುವ ವೆಚ್ಚ ಪಾವತಿಗೂ ಅವರು ಐಎಂಎಫ್‌ನ ನಿಧಿ ಬಳಸಿದ ಅಥವಾ ದುರ್ಬಳಕೆ ಮಾಡಿಕೊಂಡಿರುವ ಅನುಮಾನಗಳಿವೆ.

ಅಲ್ಲದೆ ಐಎಂಎಫ್‌ನ ಗೌಪ್ಯ ದತ್ತಾಂಶ ಅಥವಾ ವ್ಯವಸ್ಥೆಯನ್ನು ಅನಧಿಕೃತ ರೀತಿಯಲ್ಲಿ ಬಳಸಿದ ಇಲ್ಲವೆ ದುರುಪಯೋಗಪಡಿಸಿಕೊಂಡ ಆರೋಪವೂ ಅವರ ಮೇಲೆ ಇದೆ ಎಂದು ವರದಿಗಳು ಹೇಳುತ್ತಿವೆ.

ಮುಂದಿನ ದಿನಗಳಲ್ಲಿ ಸುಬ್ರಮಣಿಯನ್ ಕುರಿತ ಮತ್ತಷ್ಟು ಸಂಗತಿಗಳು ಐಎಂಎಫ್ ಕಡೆಯಿಂದಲೂ ಬಯಲಾದರೆ ಅಚ್ಚರಿಯಿಲ್ಲ.

ಸುಬ್ರಮಣಿಯನ್ ಈಗಾಗಲೇ ಭಾರತಕ್ಕೆ ಮರಳಿರಬಹುದು, ಇಲ್ಲದಿದ್ದರೆ ಅವರು ತಡಮಾಡದೇ ವಾಪಸ್ ಬರಬೇಕಾಗುತ್ತದೆ.

ವಾಪಸ್ ಬಂದು ಇಲ್ಲಿ ಅವರು ಪ್ರೊಫೆಸರ್ ಆಗಿದ್ದ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್‌ಗೆ ಮತ್ತೆ ಹೋಗಬಹುದು. ಅದು ಅವರನ್ನು ಮತ್ತೆ ಸೇರಿಸಿಕೊಳ್ಳಲಿದೆಯೇ ಅಥವಾ ಅದೂ ಅವರ ಬಗ್ಗೆ ತನಿಖೆಗೆ ಮುಂದಾಗಲಿದೆಯೇ ಎಂದು ಕಾದು ನೋಡಬೇಕು.

share
ಎನ್. ಶಿವರಾಮ್
ಎನ್. ಶಿವರಾಮ್
Next Story
X