Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಸ್ವಾತಂತ್ರ್ಯ ಸಂಗ್ರಾಮ ದೇಶದ ಇತರ...

ಸ್ವಾತಂತ್ರ್ಯ ಸಂಗ್ರಾಮ ದೇಶದ ಇತರ ಯುದ್ಧಗಳಿಗಿಂತ ಹೇಗೆ ಭಿನ್ನ?

ಪ್ರೊ. ಷಾಕಿರಾ ಖಾನಂಪ್ರೊ. ಷಾಕಿರಾ ಖಾನಂ15 Aug 2026 10:07 AM IST
share
ಸ್ವಾತಂತ್ರ್ಯ ಸಂಗ್ರಾಮ ದೇಶದ ಇತರ ಯುದ್ಧಗಳಿಗಿಂತ ಹೇಗೆ ಭಿನ್ನ?

ಭಾರತದ ಸ್ವಾತಂತ್ರ್ಯ ಸಂಗ್ರಾಮ, ಭಾರತ-ಪಾಕಿಸ್ತಾನ ನಡುವಿನ ಯುದ್ಧಗಳು ಮತ್ತು ಕಾರ್ಗಿಲ್ ಯುದ್ಧ ಇವು ಮೂರು ಮಹತ್ವದ ಐತಿಹಾಸಿಕ ಘಟನೆಗಳು. ರಾಷ್ಟ್ರದ ರಕ್ಷಣೆ ಮತ್ತು ಸ್ವಾಭಿಮಾನದ ಹಿನ್ನೆಲೆಯನ್ನು ಹೊಂದಿದ್ದರೂ ಇವುಗಳ ಉದ್ದೇಶ, ಸ್ವರೂಪ ಮತ್ತು ಸಮಾಜದ ಮೇಲೆ ಬೀರಿದ ಪರಿಣಾಮದಲ್ಲಿ ದೊಡ್ಡ ವ್ಯತ್ಯಾಸಗಳಿವೆ. ಸ್ವಾತಂತ್ರ್ಯ ಸಂಗ್ರಾಮವು ಒಂದು ವಸಾಹತುಶಾಹಿ ಶಕ್ತಿಯ ವಿರುದ್ಧ ನಡೆದ ಜನಾಂದೋಲನವಾಗಿತ್ತು. ಬ್ರಿಟಿಷರು ಸುಮಾರು 250 ವರ್ಷಗಳ ಕಾಲ ಭಾರತವನ್ನು ಆರ್ಥಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ಶೋಷಣೆ ಮಾಡಿ, ಆಡಳಿತಾತ್ಮಕವಾಗಿ ಅಧೀನಗೊಳಿಸಿದ್ದರು. ಆದ್ದರಿಂದ ಈ ಹೋರಾಟದ ಗುರಿ ಸ್ಪಷ್ಟವಾಗಿತ್ತು, ಅದು ಸಂಪೂರ್ಣ ಸ್ವರಾಜ್ಯ. ಎಲ್ಲ ಪಕ್ಷಗಳು ಒಳಗೊಂಡ ಕಾಂಗ್ರೆಸ್ ನೇತೃತ್ವದ ಚಳವಳಿ, ಗಾಂಧೀಜಿಯವರ ಸತ್ಯಾಗ್ರಹ, ನೇತಾಜಿಯವರ ಸಶಸ್ತ್ರ ಹೋರಾಟ, ಭಗತ್ ಸಿಂಗ್, ಅಶ್ಫಾಕುಲ್ಲಾ ಖಾನ್, ಮೌಲಾನ ಮುಸ್ಲಿಮ್ ವೆಲ್ಲೂರಿ ಅವರಂತಹ ಕ್ರಾಂತಿಕಾರಿಗಳ ತ್ಯಾಗ ಎಲ್ಲವೂ ಒಂದೇ ಬಿಂದುವಿನ ಕಡೆಗೆ ಹರಿಯಿತು. ಇಲ್ಲಿ ಶತ್ರು ಹೊರಗಿನವ ಮತ್ತು ಆಡಳಿತಗಾರನಾಗಿದ್ದ. ಇದಕ್ಕೆ ವ್ಯತಿರಿಕ್ತವಾಗಿ ಭಾರತ-ಪಾಕಿಸ್ತಾನ ಯುದ್ಧ ಮತ್ತು ಕಾರ್ಗಿಲ್ ಯುದ್ಧ ಎರಡು ಸಾರ್ವಭೌಮ ರಾಷ್ಟ್ರಗಳ ನಡುವಿನ ಸಂಘರ್ಷಗಳಾಗಿವೆ. 1947ರ ವಿಭಜನೆಯ ನಂತರ ಕಾಶ್ಮೀರ ವಿವಾದ, ಗಡಿ ಸಮಸ್ಯೆ ಮತ್ತು ರಾಷ್ಟ್ರೀಯ ಭದ್ರತೆಯ ಪ್ರಶ್ನೆಗಳು ಈ ಯುದ್ಧಗಳಿಗೆ ಕಾರಣವಾದವು. 1947, 1965, 1971ರ ಯುದ್ಧಗಳು ಪೂರ್ಣ ಪ್ರಮಾಣದ ಯುದ್ಧಗಳಾಗಿದ್ದರೆ, 1999ರ ಕಾರ್ಗಿಲ್ ಯುದ್ಧವು ಸೀಮಿತ ಪ್ರದೇಶದಲ್ಲಿ, ಎತ್ತರದ ಪರ್ವತಗಳಲ್ಲಿ ನಡೆದ ಯುದ್ಧವಾಗಿತ್ತು. ಇಲ್ಲಿ ಗುರಿ ಸ್ವಾತಂತ್ರ್ಯ ಪಡೆಯುವುದಲ್ಲ, ಬದಲಿಗೆ ಈಗಾಗಲೇ ಪಡೆದಿರುವ ಸ್ವಾತಂತ್ರ್ಯ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುವುದಾಗಿತ್ತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿರ್ಧಾರಗಳು ಜನಸಾಮಾನ್ಯರ ಚಳವಳಿಯಿಂದ ಬಂದರೆ, ಆ ನಂತರದ ಯುದ್ಧಗಳಲ್ಲಿ ನಿರ್ಧಾರಗಳು ಸರಕಾರ ಮತ್ತು ಸೇನೆಯ ಕಾರ್ಯತಂತ್ರದ ಮೂಲಕ ರೂಪುಗೊಂಡವು.

ಸಾಂಸ್ಕೃತಿಕವಾಗಿ ಸ್ವಾತಂತ್ರ್ಯ ಸಂಗ್ರಾಮವು ಭಾರತದ ವೈವಿಧ್ಯವನ್ನು ಒಂದುಗೂಡಿಸಿದ ಮಹಾಯಜ್ಞವಾಗಿತ್ತು. ಹಿಂದಿ, ಉರ್ದು, ಬಂಗಾಳಿ, ಮರಾಠಿ, ತಮಿಳು, ಕನ್ನಡ ಸೇರಿದಂತೆ ಎಲ್ಲ ಭಾಷೆಗಳ ಕವಿಗಳು, ಲೇಖಕರು, ಕಲಾವಿದರು ದೇಶಭಕ್ತಿ ಗೀತೆಗಳನ್ನು ರಚಿಸಿದರು. ಖಾದಿ ಧರಿಸುವುದು, ಸ್ವದೇಶಿ ಚಳವಳಿ, ಧಾರ್ಮಿಕ ಕಥೆಗಳನ್ನು ರಾಷ್ಟ್ರೀಯತೆಯ ಸಂಕೇತವಾಗಿ ಬಳಸುವುದು ಸಾಮಾನ್ಯವಾಯಿತು. ಈ ಹೋರಾಟವು ಭಾರತೀಯ ಸಂಸ್ಕೃತಿಯ ಆತ್ಮವಿಶ್ವಾಸವನ್ನು ಮರಳಿ ತಂದಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶತ್ರುವಿನ ಸಂಸ್ಕೃತಿಯನ್ನು ತಿರಸ್ಕರಿಸುವ ಪ್ರಯತ್ನವಿತ್ತು. ಆ ನಂತರದ ಯುದ್ಧಗಳಲ್ಲಿ ಎದುರಾಳಿ ರಾಷ್ಟ್ರದ ಸಂಸ್ಕೃತಿಯೊಂದಿಗೆ ನೇರ ಸಂಘರ್ಷವಿರಲಿಲ್ಲ, ಬದಲಿಗೆ ರಾಷ್ಟ್ರೀಯತೆಯ ಗಡಿಗಳನ್ನು ಗಟ್ಟಿಗೊಳಿಸುವ ಕೆಲಸ ನಡೆಯಿತು. ಸಾಮಾಜಿಕವಾಗಿ ಸ್ವಾತಂತ್ರ್ಯ ಸಂಗ್ರಾಮ ಸಮಾಜದ ಎಲ್ಲ ವರ್ಗಗಳನ್ನು ಒಳಗೊಂಡಿತ್ತು. ರೈತ, ಕಾರ್ಮಿಕ, ವಿದ್ಯಾರ್ಥಿ, ಮಹಿಳೆ, ಉದ್ಯಮಿ ಎಲ್ಲರೂ ಜೈಲಿಗೆ ಹೋಗಲು, ಲಾಠಿ ಏಟು ತಿನ್ನಲು ಸಿದ್ಧರಿದ್ದರು. ಈ ಚಳವಳಿಯು ಜಾತಿ, ಮತ, ಪ್ರಾಂತದ ಗಡಿಗಳನ್ನು ತಾತ್ಕಾಲಿಕವಾಗಿ ಮರೆಸಿ ಭಾರತೀಯ ಎಂಬ ಒಂದೇ ಗುರುತನ್ನು ಮುಂದಿಟ್ಟಿತು. ಸ್ವಾತಂತ್ರ್ಯ ಬಂದ ನಂತರ ಸಂವಿಧಾನ ರಚನೆ, ಮಹಿಳಾ ಸಬಲೀಕರಣ, ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟಗಳಿಗೆ ಈ ಏಕತೆಯೇ ಅಡಿಪಾಯವಾಯಿತು. ನಂತರದ ಯುದ್ಧಗಳ ಸಮಾಜದ ಮೇಲಿನ ಪರಿಣಾಮ ಬೇರೆಯದಾಗಿತ್ತು. ಯುದ್ಧ ಸಂದರ್ಭಗಳಲ್ಲಿ ದೇಶಾದ್ಯಂತ ದೇಶಭಕ್ತಿಯ ಅಲೆ ಹರಿದು ಯುವಕರು ಸೇನೆಗೆ ಸೇರಲು ಮುಂದೆ ಬಂದರು, ನಾಗರಿಕರು ನಿಧಿ ಸಂಗ್ರಹಿಸಿದರು. ಕಾರ್ಗಿಲ್ ಯುದ್ಧದಲ್ಲಿ ಟಿ.ವಿ. ಮತ್ತು ಸುದ್ದಿ ಮಾಧ್ಯಮಗಳ ಮೂಲಕ ಯುದ್ಧದ ಪ್ರತೀ ಕ್ಷಣವೂ ಮನೆಮನೆಗೆ ತಲುಪಿತು. ಇದರಿಂದ ಸೈನಿಕರ ಬಗ್ಗೆ ಗೌರವ ಹೆಚ್ಚಿತು. ಆದರೆ ಇಂತಹ ಯುದ್ಧವು ತಾತ್ಕಾಲಿಕ ಏಕತೆಯನ್ನು ಕೊಡುತ್ತದೆ. ಯುದ್ಧ ಮುಗಿದ ನಂತರ ಸಮಾಜ ಮತ್ತೆ ತನ್ನ ದೈನಂದಿನ ಸಮಸ್ಯೆಗಳಿಗೆ ಮರಳುತ್ತದೆ. ಆದರೆ ಸ್ವಾತಂತ್ರ್ಯ ಸಂಗ್ರಾಮವು ಸಮಾಜದ ರಚನೆಯನ್ನೇ ಬದಲಿಸಿತ್ತು. ಈ ಸಂಗ್ರಾಮವು ಉದ್ದೇಶಪೂರ್ವಕವಾಗಿ ಜಾತ್ಯತೀತ ಸ್ವರೂಪವನ್ನು ಹೊಂದಿತ್ತು. ಗಾಂಧೀಜಿ ಹಿಂದೂ-ಮುಸ್ಲಿಮ್ ಏಕತೆಗೆ ಒತ್ತು ಕೊಟ್ಟರು. ಅಲಿ ಸಹೋದರರು, ಮೌಲಾನಾ ಆಝಾದ್, ಖಾನ್ ಅಬ್ದುಲ್ ಗಪ್ಫಾರ್ ಖಾನ್‌ರಂತಹ ಮುಸ್ಲಿಮ್ ನಾಯಕರು ಈ ಚಳವಳಿಯ ಮುಂಚೂಣಿಯಲ್ಲಿದ್ದರು. ಧರ್ಮವನ್ನು ಹೋರಾಟದ ಸಾಧನವಾಗಿ ಬಳಸದೆ, ಎಲ್ಲ ಧರ್ಮಗಳ ಜನರನ್ನು ಒಗ್ಗೂಡಿಸುವ ಪ್ರಯತ್ನ ನಡೆಯಿತು. ಆದರೆ 1947ರ ವಿಭಜನೆಯು ಧಾರ್ಮಿಕ ಆಧಾರದ ಮೇಲೆ ನಡೆಯಿತು. ಅದರಿಂದ ಹುಟ್ಟಿದ ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಧರ್ಮವು ರಾಜಕೀಯದ ಜೊತೆ ಬೆರೆಯಿತು. ಪಾಕಿಸ್ತಾನ ತನ್ನನ್ನು ಇಸ್ಲಾಮಿಕ್ ರಾಷ್ಟ್ರ ಎಂದು ಗುರುತಿಸಿಕೊಂಡರೆ, ಭಾರತ ಜಾತ್ಯತೀತ ಪ್ರಜಾಪ್ರಭುತ್ವವಾಗಿ ಉಳಿಯಲು ನಿರ್ಧರಿಸಿತು. ಕಾರ್ಗಿಲ್ ಯುದ್ಧದಲ್ಲೂ ಕೆಲವರು ಇದನ್ನು ಧಾರ್ಮಿಕ ಸಂಘರ್ಷದಂತೆ ಬಿಂಬಿಸಲು ಪ್ರಯತ್ನಿಸಿದರೂ, ಭಾರತ ಸರಕಾರ ಮತ್ತು ಸೇನೆಯ ಅಧಿಕೃತ ನಿಲುವು ಯಾವಾಗಲೂ ಇದು ರಾಷ್ಟ್ರೀಯ ಭದ್ರತೆಯ ಯುದ್ಧ, ಧಾರ್ಮಿಕ ಯುದ್ಧವಲ್ಲ ಎಂಬುದಾಗಿತ್ತು. ಯುದ್ಧದಲ್ಲಿ ಹಿಂದೂ, ಮುಸ್ಲಿಮ್, ಸಿಖ್, ಕ್ರಿಶ್ಚಿಯನ್ ಎಲ್ಲ ಧರ್ಮದ ಸೈನಿಕರು ಒಟ್ಟಿಗೆ ಹೋರಾಡಿದರು.

ಒಟ್ಟಾರೆಯಾಗಿ ಸ್ವಾತಂತ್ರ್ಯ ಸಂಗ್ರಾಮವು ಒಂದು ರಾಷ್ಟ್ರವನ್ನು ನಿರ್ಮಿಸಿದ ಕ್ರಾಂತಿಯಾಗಿತ್ತು. ಅದರ ಗುರಿ ದೀರ್ಘಾವಧಿಯದ್ದು, ವಿಧಾನಗಳು ಅಹಿಂಸೆ ಮತ್ತು ಸಶಸ್ತ್ರ ಹೋರಾಟದ ಮಿಶ್ರಣವಾಗಿತ್ತು ಮತ್ತು ಪರಿಣಾಮವು ರಾಜಕೀಯ, ಸಾಮಾಜಿಕ, ಆರ್ಥಿಕ ಎಲ್ಲ ಕ್ಷೇತ್ರಗಳಲ್ಲೂ ಆಳವಾಗಿ ಇಳಿಯಿತು. ಕಾರ್ಗಿಲ್ ಮತ್ತು ಇತರ ಭಾರತ-ಪಾಕಿಸ್ತಾನ ಯುದ್ಧಗಳು ಆ ನಿರ್ಮಾಣವಾದ ರಾಷ್ಟ್ರವನ್ನು ರಕ್ಷಿಸುವ ಕಾರ್ಯಾಚರಣೆಗಳಾಗಿತ್ತು. ಇವುಗಳ ಉದ್ದೇಶ ಸೀಮಿತ, ಅವಧಿ ಕಡಿಮೆ ಮತ್ತು ಪ್ರಭಾವವು ಮುಖ್ಯವಾಗಿ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಯ ಮೇಲೆ ಇತ್ತು.

ಆದರೆ ಈಗ ಸ್ವಾತಂತ್ರ್ಯ ಸಂಗ್ರಾಮವನ್ನು ಭಾರತ-ಪಾಕಿಸ್ತಾನ, ಕಾರ್ಗಿಲ್ ವಿಜಯೋತ್ಸವಕ್ಕೆ ಹೋಲಿಸಿ ಸ್ವಾತಂತ್ರ್ಯ ಸಂಗ್ರಾಮದ ಮಹತ್ವವನ್ನು ಅಲಕ್ಷಿಸಿ ಬೇರೆ ಯುದ್ಧಗಳನ್ನು ವೈಭವೀಕರಿಸಿ ಇಂದಿನ ಪೀಳಿಗೆಗೆ ತಪ್ಪು ಮಾಹಿತಿಯನ್ನು ನೀಡುವುದು ನಾವು ಗಳಿಸಿಕೊಂಡ ಸ್ವಾತಂತ್ರ್ಯಕ್ಕೆ ಅವಮಾನ ಮಾಡಿದಂತೆ. ಸ್ವಾತಂತ್ರ್ಯ ಸಂಗ್ರಾಮ ಮತ್ತು ನಂತರದ ಯುದ್ಧಗಳ ನಡುವಿನ ಮೂಲ ವ್ಯತ್ಯಾಸ ಬಹಳ ಸ್ಪಷ್ಟ. ಆದರೆ ಇತ್ತೀಚೆಗೆ ಕೆಲವು ಚರ್ಚೆಗಳಲ್ಲಿ, ಭಾಷಣಗಳಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಕಾರ್ಗಿಲ್ ವಿಜಯ, 1971ರ ಯುದ್ಧ ಇವುಗಳನ್ನು ಮಾತ್ರ ದೊಡ್ಡದಾಗಿ ವೈಭವೀಕರಿಸಿ, ಸ್ವಾತಂತ್ರ್ಯ ಸಂಗ್ರಾಮವನ್ನು ಕೇವಲ ಇತಿಹಾಸದ ಪುಟಕ್ಕೆ ಸೀಮಿತಗೊಳಿಸುವ ಪ್ರವೃತ್ತಿ ಕಾಣುತ್ತದೆ. ಇದು ನಿಜಕ್ಕೂ ಅಪಾಯಕಾರಿ.

ನಮ್ಮ ಹಿರಿಯರ ತ್ಯಾಗವನ್ನು ಇಂದಿನ ಪೀಳಿಗೆಗೆ ಹೇಳದಿದ್ದರೆ, ಭಾರತ ಎಂದರೆ ಒಂದು ಧರ್ಮ/ಒಂದು ಭಾಷೆ ಎಂಬ ತಪ್ಪು ಕಲ್ಪನೆ ಹರಡುತ್ತದೆ. ವಿಭಜನೆಯ ನೋವನ್ನು ನೋಡಿಯೂ ನಾವು ಜಾತ್ಯತೀತವಾಗಿ ಉಳಿದಿದ್ದು ಸ್ವಾತಂತ್ರ್ಯ ಸಂಗ್ರಾಮದ ಶಕ್ತಿಯಿಂದಲೇ.

ಸ್ವಾತಂತ್ರ್ಯ ಸಂಗ್ರಾಮವು ಭಾರತಕ್ಕೆ ಜಾಗತಿಕ ನೈತಿಕ ನಾಯಕತ್ವವನ್ನು ಕೊಟ್ಟಿತು. ಅಹಿಂಸೆಯ ಮೂಲಕ ಸಾಮ್ರಾಜ್ಯವನ್ನೇ ಕೆಡವಿದ ಮೊದಲ ಉದಾಹರಣೆಯಾಗಿ ವಿಶ್ವಕ್ಕೆ ಮಾದರಿಯಾಯಿತು. ಇದರಿಂದಲೇ ದೇಶದ ನಾಯಕರ ಅಲಿಪ್ತ ಚಳವಳಿಗೆ ಬಲ ಬಂದಿತು. ನಂತರದ ಯುದ್ಧಗಳು ಭಾರತದ ಭೌಗೋಳಿಕ ಗಡಿಗಳನ್ನು ಸ್ಥಿರಗೊಳಿಸಿದವು, 1971ರಲ್ಲಿ ಬಾಂಗ್ಲಾದೇಶ ರಚನೆಯ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದವು, ಕಾರ್ಗಿಲ್‌ನಲ್ಲಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಾವು ಅಂತರ್‌ರಾಷ್ಟ್ರೀಯ ನಿಯಮಗಳನ್ನು ಗೌರವಿಸಿ ಗೆದ್ದೆವು. ಆದ್ದರಿಂದ ಸ್ವಾತಂತ್ರ್ಯ ಸಂಗ್ರಾಮವು ನಮ್ಮ ಆತ್ಮ, ನಂತರದ ಯುದ್ಧಗಳು ನಮ್ಮ ರಕ್ಷಾಕವಚ. ಎರಡನ್ನೂ ಪ್ರತ್ಯೇಕಿಸಿ ನೋಡಿದರೆ ಇತಿಹಾಸವೇ ಅಪೂರ್ಣವಾಗುತ್ತದೆ. ನಾವು ನೆನಪಿಡಬೇಕು, ಸ್ವಾತಂತ್ರ್ಯ ಗಳಿಸಿದವರನ್ನು ಮರೆತರೆ, ಅದನ್ನು ಕಾಪಾಡಿದವರ ತ್ಯಾಗಕ್ಕೂ ಅರ್ಥವಿರುವುದಿಲ್ಲ. ಭವಿಷ್ಯದ ಭಾರತವು ಬಲಶಾಲಿಯಾಗಬೇಕಾದರೆ ಅದು ತನ್ನ ಬೇರನ್ನು ಮರೆಯಬಾರದು. ಸ್ವಾತಂತ್ರ್ಯ ಸಂಗ್ರಾಮದ ಆದರ್ಶಗಳ ಮೇಲೆ ನಿಂತಾಗ ಮಾತ್ರ ನಮ್ಮ ಸೈನಿಕರ ತ್ಯಾಗಕ್ಕೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ.

Tags

80th independence day
share
ಪ್ರೊ. ಷಾಕಿರಾ ಖಾನಂ
ಪ್ರೊ. ಷಾಕಿರಾ ಖಾನಂ
Next Story
X