Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕರ್ನಾಟಕ ಸರಕಾರದ ಅಭಾಸಕರ ನಡೆಗಳೂ...

ಕರ್ನಾಟಕ ಸರಕಾರದ ಅಭಾಸಕರ ನಡೆಗಳೂ ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆಗಳೂ

ನಂದಕುಮಾರ್ ಕುಂಬ್ರಿಉಬ್ಬುನಂದಕುಮಾರ್ ಕುಂಬ್ರಿಉಬ್ಬು1 July 2026 11:37 AM IST
share
ಕರ್ನಾಟಕ ಸರಕಾರದ ಅಭಾಸಕರ ನಡೆಗಳೂ ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆಗಳೂ

ಕರ್ನಾಟಕ ಸರಕಾರ ಗ್ರಾಮಪಂಚಾಯತ್‌ಗಳಿಗೆ ಜನರಿಗೆ ವಾಸದೃಢೀಕರಣ ಪತ್ರವನ್ನು ಒದಗಿಸಲು ಅಧಿಕಾರ ನೀಡಿರುವ ಕುರಿತು ವರದಿಯಾಗಿದೆ. ಇದು ರಾಜ್ಯದಲ್ಲಿ ಬರಲಿರುವ ಎಸ್‌ಐಆರ್ ಪ್ರಕ್ರಿಯೆಗಳಿಗೆ ವಸತಿ ಹಾಗೂ ವಾಸ ಸ್ಥಳ ದಾಖಲಾತಿ ಇಲ್ಲದ ಬಡಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿದೆ ಎಂದು ಕರ್ನಾಟಕ ಸರಕಾರ ಪ್ರಚಾರ ಮಾಡಿಕೊಳ್ಳುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟ ನಿರ್ದೇಶನ ಪಂಚಾಯತ್‌ಗಳಿಗೆ ತಲುಪಿಲ್ಲ ಎಂದು ಪಂಚಾಯತ್‌ಗಳು ಹೇಳುತ್ತಿವೆ. ಆದರೆ ಹಾಗೊಂದು ವೇಳೆ ಇದ್ದರೂ ವಾಸ ದೃಢೀಕರಣ ಪತ್ರ ನೀಡಲು ವಸತಿಯಿರುವ ಭೂಮಿಗೆ ತಹಶೀಲ್ದಾರ್ ಕಚೇರಿಯ ಭೂದಾಖಲಾತಿ ಇರಬೇಕು ಎಂದು ಪಂಚಾಯತ್‌ನವರು ಹೇಳುತ್ತಾರೆ. ಅಂದರೆ ಸರಕಾರದ ಈ ಆದೇಶವು ಕೂಡ ವಾಸ್ತವದಲ್ಲಿ ಕಂದಾಯಭೂಮಿಗಳಲ್ಲಿ ಹಾಲಿ ವಸತಿ ಮಾಡಿಕೊಂಡು ವಾಸಿಸುತ್ತಿರುವ ಲಕ್ಷಾಂತರ ಜನರಿಗೆ ಉಪಯೋಗಕ್ಕೆ ಬರುವುದಿಲ್ಲ ಎಂದಾಯಿತು.

ಆದರೆ ಚುನಾವಣಾ ಆಯೋಗ ಗ್ರಾಮ ಪಂಚಾಯತ್‌ಗಳು ನೀಡುವ ಇಂತಹ ದಾಖಲೆಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿಯೇ ಹೇಳಿದೆ. ಸಕ್ಷಮ ಪ್ರಾಧಿಕಾರದ ದಾಖಲೆಗಳನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದಿದೆ. ಅಂದರೆ ತಹಶೀಲ್ದಾರರ ಕಚೇರಿಯಿಂದ ನೀಡುವ ದಾಖಲಾತಿಗಳನ್ನು ಮಾತ್ರ ಪರಿಗಣಿಸುತ್ತೇವೆ ಎಂದಿದೆ. ತಹಶೀಲ್ದಾರರ ಕಚೇರಿಗಳು ಜನರು ಈಗಾಗಲೇ ವಸತಿ ಕಟ್ಟಿಕೊಂಡು ಕೃಷಿ ಮಾಡುತ್ತಿರುವ ತುಂಡು ಭೂಮಿಗಳಿಗೂ ಕೂಡ ಯಾವುದೇ ದಾಖಲೆಗಳನ್ನು ಒದಗಿಸುತ್ತಿಲ್ಲ. ಕೈಬರೆಹದ ಅರ್ಜಿಗಳನ್ನು ತೆಗೆದುಕೊಳ್ಳುತ್ತಿದ್ದರೂ ಈ ಕಚೇರಿಗಳು ಪಾರಂ ಸಂಖ್ಯೆ 94ಸಿ ಯಡಿ ಆನ್‌ಲೈನ್ ಅರ್ಜಿ ನೀಡಬೇಕೆಂದು ಕಾರಣ ತಿಳಿಸುತ್ತಾ ಅಂತಹ ಅರ್ಜಿಗಳನ್ನು ನಿರಾಕರಿಸಿ ಹಿಂಬರಹ ಕೊಡುವುದಕ್ಕೇ ಸೀಮಿತವಾಗಿವೆ. ಆನ್‌ಲೈನ್‌ಅರ್ಜಿಗಳನ್ನು ನಿಲ್ಲಿಸಿ ಈಗಾಗಲೇ ನಾಲ್ಕೈದು ವರ್ಷಗಳು ಕಳೆದಿವೆ. ಸರಕಾರ ಈ ಬಗ್ಗೆ ಏನೂ ಮಾತಾಡುತ್ತಿಲ್ಲ. ಕೇವಲ ರಿಯಲ್ ಎಸ್ಟೇಟ್‌ಮಾಫಿಯಾಗಳಿಗೆ ಅದರಲ್ಲೂ ಬೆಂಗಳೂರು ಸುತ್ತಮುತ್ತಲಿನ ಅಕ್ರಮ ನಿವೇಶನಗಳಿಗೆ, ಅಕ್ರಮ ಕಟ್ಟಡಗಳಿಗೆ ಅನುಕೂಲ ಮಾಡಿಕೊಡುವ ವಸತಿ ನಿವೇಶನಗಳ ಸಕ್ರಮೀಕರಣಗಳನ್ನು ಸರಳೀಕರಣಗೊಳಿಸಿ ಮಾಡುವತ್ತ ಮಾತ್ರ ಗಮನ ಕೇಂದ್ರೀಕರಿಸಿದೆ. ಆದರೆ ಪ್ರಚಾರ ಮಾಡಿದ್ದು ಇಡೀ ಕರ್ನಾಟಕದ ಜನಸಾಮಾನ್ಯರ ಒಳಿತಿಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದಾಗಿ. ವಾಸ್ತವ ಏನೆಂದರೆ ಆ ಬಗ್ಗೆ ಸರಿಯಾದ ಮಾರ್ಗದರ್ಶನಗಳನ್ನೇ ಗ್ರಾಮ ಪಂಚಾಯತ್‌ಗಳಿಗೆ ಕಳಿಸಿರಲಿಲ್ಲ ಎಂಬುದು ಪಂಚಾಯತ್‌ಗಳು ನೀಡುವ ಮಾಹಿತಿ.

ಗ್ರಾಮೀಣ ಪ್ರದೇಶದ ಬಡಜನರು ಸರಕಾರಿ ಗೋಮಾಳ ಹಾಗೂ ಕಂದಾಯ ಭೂಮಿಗಳಲ್ಲಿ ಗುಡಿಸಲು ಮನೆ ಕಟ್ಟಿಕೊಂಡಿರುವ ಲಕ್ಷಾಂತರ ಜನರಿಗೆ ಅವರಿರುವ ವಸತಿಗಳನ್ನು ಸಕ್ರಮಗೊಳಿಸಿ, ವಾಸ ದೃಢೀಕರಣ ಪತ್ರ ಒದಗಿಸಿ, ಕಂದಾಯ ಕಟ್ಟಿಸಿ, ವಿದ್ಯುತ್, ನೀರು ಇತ್ಯಾದಿ ಮೂಲಭೂತ ಅವಶ್ಯಕತೆಗಳನ್ನು ಒದಗಿಸಿಕೊಡುವ ಬಗ್ಗೆ ಗಮನವನ್ನೇ ಕೊಡುತ್ತಿಲ್ಲ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇ ಖಾತೆಯಾಗಲಿ ನಮೂನೆ 9 ಇಲ್ಲವೇ 11ಎ/11ಬಿ ಅರ್ಜಿಯಾಗಲಿ ಸಲ್ಲಿಸಲು ಅವಕಾಶವೇ ಇಲ್ಲವಾಗಿದೆ. ತಹಶೀಲ್ದಾರ್ ಕಚೇರಿಯ ಭೂ ದಾಖಲಾತಿ ಇಲ್ಲದ ವಸತಿ ನಿವೇಶನಗಳಿಗೆ ಗ್ರಾಮಪಂಚಾಯತ್‌ಗಳು ಇ ಖಾತಾ ಮಾಡಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ವಸತಿ ನಿವೇಶನಗಳಿಗೆ ಪಂಚಾಯತ್ ನಿರಾಕ್ಷೇಪಣಾ ಪತ್ರವಿಲ್ಲದೇ ವಿದ್ಯುತ್ ಸೌಲಭ್ಯ ಒದಗಿಸಲಾಗದು ಎಂದು ವಿದ್ಯುತ್‌ವಿತರಣ ಇಲಾಖೆ ಕಚೇರಿ ಹೇಳುತ್ತದೆ. ಗ್ರಾಮ ಪಂಚಾಯತ್‌ಗಳು ವಿದ್ಯುತ್‌ಸಂಪರ್ಕ ಕಲ್ಪಿಸಲು ನಿರಪೇಕ್ಷಣಾ ಪತ್ರ ನೀಡಬೇಕಾದರೆ ವಸತಿ ಭೂಮಿಯ ದಾಖಲೆ ಇರಬೇಕು ಎನ್ನುತ್ತವೆ. ಇದು ಕರ್ನಾಟಕದ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಸಾಮಾನ್ಯರ ಪರಿಸ್ಥಿತಿಯಾಗಿದೆ. ಲಕ್ಷಾಂತರ ಗ್ರಾಮೀಣ ಜನರು ಸರಕಾರದ ಇಂತಹ ಅಪಕ್ವ ಹಾಗೂ ಗೊಂದಲಕಾರಿ ನಡೆಗಳಿಂದ ಅಪಾರವಾಗಿ ತೊಂದರೆಗೊಳಗಾಗಿದ್ದಾರೆ. ಸರಕಾರ ಮಾತ್ರ ನಗರ ಪ್ರದೇಶಗಳಲ್ಲಿನ ಲೇಔಟ್‌ಗಳನ್ನು ಸಕ್ರಮಗೊಳಿಸಿ ಕಂದಾಯ ಪಡೆದು ಭೂ ದಾಖಲಾತಿ ನೀಡುತ್ತಾ ರಿಯಲ್ ಎಸ್ಟೇಟ್ ಮಾಫಿಯಾಗಳ ಹಿತಾಸಕ್ತಿ ಕಾಪಾಡುವ ಬಗ್ಗೆ ಮಾತ್ರ ಆಸಕ್ತಿ ವಹಿಸುತ್ತಿದೆ.

ಕರ್ನಾಟಕದಲ್ಲಿ ಬಗರ್‌ಹುಕುಂ ಅರ್ಜಿದಾರರೇ ಸುಮಾರು ಹತ್ತು ಲಕ್ಷಕ್ಕೂ ಮೇಲಿದ್ದಾರೆ. ಈಗ ಆನ್‌ಲೈನ್ ಅರ್ಜಿ ನಿಲ್ಲಿಸಿರುವುದರಿಂದ ಅರ್ಜಿ ಹಾಕಲಾಗದವರ ಸಂಖ್ಯೆಯೂ ಬಹಳ ದೊಡ್ಡದಿದೆ. ಸುಮಾರು ಎರಡೂವರೆ ಲಕ್ಷದಷ್ಟು ಬಗರ್‌ಹುಕುಂ ಅರ್ಜಿಗಳನ್ನು ಸರಕಾರ ಅರಣ್ಯ ಭೂಮಿ ಇತ್ಯಾದಿ ತಾಂತ್ರಿಕ ಕಾರಣಗಳನ್ನು ಹೇಳಿ ತಿರಸ್ಕರಿಸಿದೆ. ಅರಣ್ಯ ಇಲಾಖೆಯು ಎಲ್ಲಾ ಖಾಲಿ ಜಾಗಗಳನ್ನು ತನ್ನ ಅಡಿಯಲ್ಲಿ ಬರುವ ಅರಣ್ಯ ಪ್ರದೇಶವೆಂದು ಕಲ್ಲುಗಳನ್ನು ನೆಡುತ್ತಾ ಸಾಗುತ್ತಿದೆ. ಅರಣ್ಯ ಇಲಾಖೆಯು ಕಂದಾಯ, ವಿದ್ಯುತ್, ಮೂಲಸೌಕರ್ಯ ಮೊದಲಾದ ಎಲ್ಲಾ ಇಲಾಖೆಗಳ ಮೇಲುಸ್ತುವಾರಿ ಇಲಾಖೆಯಂತೆ ಮಾಡಿಡಲಾಗಿದೆ.

ಇದೀಗ ಈ ಹಿಂದಿನ ಕಂದಾಯ ಭೂಮಿಗಳನ್ನು ಅರಣ್ಯಗಳನ್ನು ಗುರುತಿಸಲು ಕಂದಾಯ ಇಲಾಖೆಯೊಂದಿಗೆ ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸುತ್ತಾ ಅರಣ್ಯವೆಂದು ಗುರುತಿಸುತ್ತಾ ಕಲ್ಲುಗಳನ್ನು ನೆಡತೊಡಗಿವೆ. ಅದಕ್ಕೆ ಸರ್ವೋಚ್ಚ ನ್ಯಾಯಾಲಯದ ತೀರ್ಪೊಂದನ್ನು ಹಿಡಿದು ಸಮರ್ಥಿಸಲಾಗುತ್ತಿದೆ. ಅಲ್ಲೆಲ್ಲಾ ಲಕ್ಷಾಂತರ ಜನರು ಗುಡಿಸಲು ವಸತಿ ಮಾಡಿಕೊಂಡು ತುಂಡು ಭೂಮಿಗಳಲ್ಲಿ ಕೃಷಿ ಮಾಡಿಕೊಳ್ಳುತ್ತಿರುವವರು ಸೇರಿದ್ದಾರೆ. ದುರಂತವೆಂದರೆ ಈ ಹಿಂದೆ ಮಂಜೂರಾಗಿ ದಾಖಲಾತಿ ನೀಡಿರುವ ಕಂದಾಯ ಭೂಮಿಗಳನ್ನು ಕೂಡ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳ ಮೂಲಕವೇ ಮರುವಶ ಪಡಿಸಿಕೊಳ್ಳುವ ಕಾರ್ಯಗಳು ಸಾಗಿವೆ. ಈ ಹಿಂದೆ ಸರಕಾರದ ಇಲಾಖೆಯೇ ನೀಡಿರುವ ಆ ಭೂ ದಾಖಲೆಗಳ್ಯಾವುವೂ ಈಗ ಕೆಲಸಕ್ಕೆ ಬಾರದಂತೆ ಮಾಡಲಾಗುತ್ತಿದೆ. ಸರಕಾರಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಂಡಿಸಿ ಆ ತೀರ್ಪಿನಿಂದ ದೇಶದ ಜನಸಾಮಾನ್ಯರಿಗೆ ಆಗುತ್ತಿರುವ ಹಾಗೂ ಆಗಬಹುದಾದ ಸಂಕಷ್ಟಗಳ ಬಗ್ಗೆ ಗಮನವನ್ನೇ ನೀಡದೇ ಹೋಗಿವೆ. ಈ ಎಲ್ಲಾ ಲಕ್ಷಾಂತರ ಜನಸಾಮಾನ್ಯರು ಎಸ್‌ಐಆರ್ ಪ್ರಕ್ರಿಯೆಗಳಿಗೆ ಒದಗಿಸಲು ದಾಖಲೆಗಳಿಗಳಿಗಾಗಿ ಏನು ಮಾಡಬೇಕು? ಯಾಕೆಂದರೆ ಪಡಿತರ ಚೀಟಿ ಆಗುವುದಿಲ್ಲ. ಆಧಾರ್ ಕಾರ್ಡ್ (ಸರ್ವೋಚ್ಚ ನ್ಯಾಯಾಲಯ ಪರಿಗಣಿಸಲು ಹೇಳಿದ್ದರೂ) ನಡೆಯುವುದಿಲ್ಲ. ಅಕ್ಷರ ವ್ಯತ್ಯಾಸವಿದ್ದರೆ ಸಾಧ್ಯವಿಲ್ಲ..ಹೀಗೆಲ್ಲಾ ನಿರಾಕರಣಾ ನೆಪಗಳಿಗೆ ಜನರ ಬಳಿ ಪರಿಹಾರ ಎಲ್ಲಿರಲು ಸಾಧ್ಯ?

ನಮ್ಮ ವ್ಯವಸ್ಥೆ ತಲುಪಿರುವ ಅಧೋಗತಿ ಹೇಗಿದೆಯೆಂದರೆ ತಳಪಾಯದ ಸಮುದಾಯಗಳು, ಬಡಬಗ್ಗರು ಹಾಗೂ ಜನಸಾಮಾನ್ಯರ ವಿಚಾರದಲ್ಲಿ ಈ ರೀತಿಯಾದರೆ ಭಾರೀ ಕಾರ್ಪೋರೇಟ್‌ಗಳ ಹಿತಾಸಕ್ತಿ ಕಾಪಾಡಲು ದೊಡ್ಡ ಮೊತ್ತದ ಕಮಿಶನ್ ಹಾಗೂ ಕಳ್ಳದಂಧೆ ನಡೆಸಲು ಅನುಕೂಲ ಮಾಡಿಕೊಡಲು ಭಾರೀ ಯೋಜನೆಗಳನ್ನು ಚಾಲನೆಗೊಳಿಸಲಾಗಿದೆ. ಪಶ್ಚಿಮ ಘಟ್ಟದ ಪರಿಸರ ಹಾಗೂ ಜನಜೀವನಕ್ಕೆ ಮಾರಕವಾಗುವ ಆಗುಂಬೆ ಸುರಂಗ ಮಾರ್ಗ ಯೋಜನೆ, ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಸಂಪರ್ಕ ಯೋಜನೆ, ಸಾಗರದ ಬಳಿ ಅಣು ವಿದ್ಯುತ್ ಯೋಜನೆ ಮೊದಲಾದ ಹತ್ತಾರು ಸಾವಿರ ಕೋಟಿ ರೂ.ಗಳ ಯೋಜನೆಗಳನ್ನು ಜನವಸತಿ ಹಾಗೂ ಸಂರಕ್ಷಿತ ಅರಣ್ಯ ಪ್ರದೇಶಗಳೆಂದು ಸರಕಾರದ ಇಲಾಖೆಗಳೇ ಗುರುತಿಸಿರುವ ಪ್ರದೇಶಗಳಲ್ಲಿ ಜಾರಿ ಮಾಡಲು ಹೊರಟಿದೆ.

ಯೂನಿಯನ್ ಸರಕಾರ ಇತ್ತೀಚೆಗೆ ಪಾಸ್‌ಪೋರ್ಟ್‌ಅನ್ನು ಪೌರತ್ವದ ದಾಖಲೆಯಲ್ಲ, ಅದು ಕೇವಲ ಪ್ರವಾಸ ದಾಖಲೆಯಷ್ಟೇ ಎಂದಿದೆ. ಈ ಬಗ್ಗೆ ಪಾಸ್‌ಪೋರ್ಟ್ ಹೊಂದಿರುವ ಭಾರತದ ಮೇಲ್ವರ್ಗ ಹಾಗೂ ಮೇಲ್ಜಾತಿಗಳೆನಿಸಿಕೊಂಡವರಿಂದ ವಿರೋಧ ಬಂದ ನಂತರ ಚುನಾವಣಾ ಆಯೋಗ ಪಾಸ್‌ಪೋರ್ಟ್‌ಅನ್ನು ಒಂದು ದಾಖಲೆಯಾಗಿ ಪರಿಗಣಿಸುತ್ತೇವೆ ಎಂದು ಸ್ಪಷ್ಟೀಕರಣ ನೀಡಿದೆ. ಆದರೆ ಪಾಸ್‌ಪೋರ್ಟ್ ಭಾರತದ ಪೌರತ್ವದ ದಾಖಲೆಯಾಗಿ ಈಗಲಾದರೂ ಪರಿಗಣಿಸಲಾಗುತ್ತದೆಯೇ ಎಂಬುದಕ್ಕೆ ಯೂನಿಯನ್ ಸರಕಾರದಿಂದ ಅಧಿಕೃತ ಸ್ಪಷ್ಟೀಕರಣ ಬಂದಿಲ್ಲ. ಅಷ್ಟೇ ಅಲ್ಲ ಇದುವರೆಗೆ ಯಾವೆಲ್ಲಾ ದಾಖಲೆಗಳು ಪೌರತ್ವದ ದಾಖಲೆಗಳು ಎನ್ನುವುದನ್ನು ಯೂನಿಯನ್ ಸರಕಾರ ಸ್ಪಷ್ಟಪಡಿಸಿಲ್ಲ. ಹಾಗಿದ್ದಾಗ ಚುನಾವಣಾ ಆಯೋಗ ಯಾವ ಆಧಾರದಲ್ಲಿ ದೇಶದ ಜನರ ಪೌರತ್ವವನ್ನು ನಿರ್ಧರಿಸಿ ಮತಚೀಟಿ ಪರಿಷ್ಕರಣೆಯನ್ನು ಮಾಡಲು ಸಾಧ್ಯ? ಜನಸಾಮಾನ್ಯರು ಕೂಡ ಯಾವ ಆಧಾರದಲ್ಲಿ ತಮ್ಮನ್ನು ತಾವು ಈ ದೇಶದ ಪೌರರೆಂದು ಸಾಬೀತುಪಡಿಸಲು ಸಾಧ್ಯ? ಇವೆಲ್ಲಾ ಸೇರಿ ಗೋಜಲು, ಗೊಂದಲಗಳ ಸಂಕೀರ್ಣ ಸಾಮಾಜಿಕ ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ. ಚುನಾವಣಾ ಆಯೋಗ ಈಗ ನಡೆಸುತ್ತಿರುವ ಎಸ್‌ಐಆರ್ ಪ್ರಕ್ರಿಯೆಗಳು.

ಪಂಜಾಬ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಾಸ್‌ಪೋರ್ಟ್ ದಾಖಲೆಯನ್ನು ಪೌರತ್ವ ದಾಖಲೆಯಲ್ಲ; ಕೇವಲ ಪ್ರವಾಸ ದಾಖಲೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಈ ಸಂದರ್ಭದಲ್ಲಿ ಹೇಳಿದಂತೆ ಕಾಣಿಸಿದರೂ ಅದು ಮಾತ್ರ ವಾಸ್ತವವಲ್ಲ. ಯೂನಿಯನ್‌ಸರಕಾರ ಚುನಾವಣಾ ಆಯೋಗದ ಮೂಲಕ ಮತದಾರರನ್ನು ನಿರ್ಣಯಿಸುವ, ಚುನಾವಣೆಗಳಲ್ಲಿ ತನ್ನ ಪರವಾಗಿ ಅಣಿನೆರೆಸಿಕೊಳ್ಳುವ, ತನಗೆ ಅನುಕೂಲವಾಗುವಂತೆ ನಿಭಾಯಿಸಿಕೊಳ್ಳಲು ಎಲ್ಲಾ ನೇರ ಹಾಗೂ ಅಡ್ಡ ಕುತಂತ್ರಗಳನ್ನು ವಿಶೇಷ ತೀವ್ರತರದ (ಸಮಗ್ರ) ಮತಪಟ್ಟಿ ಪರಿಷ್ಕರಣೆ ಮೂಲಕ ಮಾಡತೊಡಗಿದೆ. ಜನರನ್ನು ಜಾತೀಯವಾಗಿ, ಲಿಂಗೀಯವಾಗಿ ಹಾಗೂ ಜನಾಂಗೀಯವಾಗಿ ದಮನಿಸಿಡಲು ಅದನ್ನು ಒಂದು ಬಲವಾದ ಸಾಂವಿಧಾನಿಕ ಉಪಕರಣವಾಗಿ ಹಲವಾರು ರೂಪಗಳಲ್ಲಿ ಬಳಸುತ್ತಾ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಆಡಳಿತ ವ್ಯವಸ್ಥೆಯನ್ನು ಬಿಗಿಗೊಳಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಬಿಹಾರ, ಅಸ್ಸಾಂ, ಪಶ್ಚಿಮಬಂಗಾಳಗಳ ಕಣ್ಣಿಗೆ ರಾಚುವಂತಹ ಉದಾಹರಣೆಗಳೇ ನಮ್ಮ ಮುಂದಿವೆ. ಅಲ್ಲೆಲ್ಲಾ ಲಕ್ಷಾಂತರ ಜನರನ್ನು ಮತ ನೀಡುವ ಪ್ರಕ್ರಿಯೆಗಳಿಂದಲೇ ಹೊರಗಿಡಲಾಗಿದೆ. ಸರ್ವೋಚ್ಚ ನ್ಯಾಯಾಲಯವೇ ಅದಕ್ಕೆ ಮೌನ ಸಮ್ಮತಿ ನೀಡಿದೆ. ಪಶ್ಚಿಮ ಬಂಗಾಲದ ಅನುಮಾನಾಸ್ಪದ ಮತದಾರರೆಂದು ಪಟ್ಟಿ ಮಾಡಿರುವ ಇಪ್ಪತ್ತೇಳು ಲಕ್ಷ ಜನರು ನ್ಯಾಯಾಂಗದ ಕಟ್ಟೆ ಹತ್ತಿದರೂ ಚುನಾವಣೆಗಳನ್ನು ನಡೆಸಿ ಅಲ್ಲಿ ಬಿಜೆಪಿ ಸರಕಾರ ರಚಿಸಿದೆ.

ಶೇ. 97ರಷ್ಟು ಮುಸ್ಲಿಮ್ ಅಲ್ಪಸಂಖ್ಯಾತರಿರುವ ಪ್ರದೇಶಗಳಲ್ಲೂ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದೆ. ಇದು ಹೇಗೆ ಸಾಧ್ಯ ಎಂಬುದು ಪ್ರಶ್ನೆಗಳಾಗಿ ದೇಶದ ಜನರೆದುರು ನಿಂತಿದೆ. ಸೋತ ಪಕ್ಷದ ಮತಗಳ ಕೊರತೆಯು ಎಸ್‌ಐಆರ್ ಪ್ರಕ್ರಿಯೆಗಳ ಮೂಲಕ ಹೊರಗಿಟ್ಟಿರುವ ಮತಗಳಿಗಿಂತ ಕಡಿಮೆಯಿರುವುದು ಅಂಕಿಅಂಶಗಳೇ ತಿಳಿಸುತ್ತಿವೆ. ಅಂತಹ ಸಂದರ್ಭ ಬಂದರೆ ಪರಿಶೀಲಿಸುವ ಭರವಸೆಯನ್ನು ಈ ಹಿಂದೆ ಕೊಟ್ಟಿದ್ದ ಸರ್ವೋಚ್ಚ ನ್ಯಾಯಾಲಯವೇ ಈಗ ಮೌನ ಪಾಲಿಸುತ್ತಿದೆಯೆಂದರೆ ನಮ್ಮ ಸಾಂವಿಧಾನಿಕ ಆಡಳಿತ ವ್ಯವಸ್ಥೆ ಹೇಗೆಲ್ಲಾ ಅಧಃಪತನದತ್ತ ಸಾಗುತ್ತಿದೆ ಎನ್ನುವುದನ್ನು ಅರ್ಥೈಸಬಹುದು. ದೇಶದ ಚುನಾವಣಾ ರಾಜಕೀಯ ಪಕ್ಷಗಳು ಕೂಡ ಇದರ ಪಾಲುದಾರರಾಗಿವೆ.

ಇಂತಹ ಸಂದಿಗ್ಧ ಸಂದರ್ಭದಲ್ಲಿ ದೇಶದ ಜನಸಾಮಾನ್ಯರು, ಪ್ರಜಾತಂತ್ರವಾದಿಗಳು, ಸಂಘಟಿತವಾಗಿ ಕಾರ್ಯೋನ್ಮುಖರಾಗಬೇಕಾದ ತುರ್ತಿದೆ. ಬೇರೆ ಪರ್ಯಾಯವಿಲ್ಲ.

Tags

Karnataka governmentSIRElection Commission
share
ನಂದಕುಮಾರ್ ಕುಂಬ್ರಿಉಬ್ಬು
ನಂದಕುಮಾರ್ ಕುಂಬ್ರಿಉಬ್ಬು
Next Story
X