Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕೂಪಗೇಡಿತನ

ಕೂಪಗೇಡಿತನ

ಯೋಗೇಶ್ ಮಾಸ್ಟರ್ಯೋಗೇಶ್ ಮಾಸ್ಟರ್5 Oct 2025 8:51 AM IST
share
ಕೂಪಗೇಡಿತನ

ಈರುಳ್ಳಿ ಮಾರುವವನೊಬ್ಬ ಬಂದ. ಈರುಳ್ಳಿ ಕೊಳ್ಳಲು ಮುಂದಾದೆ. ಆದರೆ ಆತ ಫೋನ್ ಪೇ, ಗೂಗಲ್ ಪೇ ರೀತಿಯ ಆನ್‌ಲೈನ್ ಆರ್ಥಿಕ ವ್ಯವಹಾರದ ಯಾವುದೇ ವ್ಯವಸ್ಥೆಯನ್ನು ಹೊಂದಿರಲಿಲ್ಲ. ನನ್ನ ಬಳಿ ನಗದು ಇರಲಿಲ್ಲ. ಹಾಗಾಗಿ ಈರುಳ್ಳಿ ವ್ಯಾಪಾರ ಸಾಧ್ಯವಾಗಲಿಲ್ಲ.

ನಾನೆಂದೆ, ‘‘ನೀವು ಯಾವುದಾದರೂ ಆನ್‌ಲೈನ್ ಪೇಮೆಂಟಿನ ವ್ಯವಸ್ಥೆ ಹೊಂದಿರಬೇಕು. ಈಗ ಅದೇ ಹೆಚ್ಚಿನ ಜನ ಬಳಸುವುದು.’’

ಆತ ಹೇಳಿದ, ‘‘ಇಲ್ಲಾ ಸಾರ್. ಆನ್‌ಲೈನ್ ಸರಿ ಇಲ್ಲಾಂತ ಯಾರೂ ಉಪಯೋಗಿಸೋದೇ ಇಲ್ಲ. ಎಲ್ಲಾ ಕ್ಯಾಶೇ ಬಿಸಿನೆಸ್ ಮಾಡೋದು. ಯಾರೋ ಸ್ವಲ್ಪ ಜನ ಅಲ್ಲಿ ಇಲ್ಲಿ ಇದನ್ನು ಉಪಯೋಗಿಸೋದು.’’

ನಾನು ವಾದಿಸದೇ ಇದ್ದರೂ ಆತ ಮಾತ್ರ, ಆನ್‌ಲೈನ್ ಟ್ರಾನ್ಸಾಕ್ಷನ್ ಅತ್ಯಂತ ವಿರಳ. ಹಾಗೆ ನೋಡಿದರೆ ಎಲ್ಲರೂ ಈಗ ನಿಲ್ಲಿಸಿಯೇ ಬಿಟ್ಟಿದ್ದಾರೆ. ನಗದು ವ್ಯವಹಾರವೇ ಎಲ್ಲರೂ ಮಾಡುವುದು ಎಂದು ಖಡಾಖಂಡಿತವಾಗಿ ಹೇಳಿದ. ಆತ ಅದರ ಬಗ್ಗೆ ಮಾತಾಡುವ ಉತ್ಸಾಹವನ್ನೂ ಕೂಡಾ ತೋರಲಿಲ್ಲ. ಅದರ ಬಗ್ಗೆ ತಿಳಿದುಕೊಂಡು ತಾನು ಅನುಸರಿಸುವ ಆಸಕ್ತಿಯನ್ನೂ ತೋರಲಿಲ್ಲ.

ತಾವು ನಂಬುವ, ತಾವು ಬಳಸುವ, ತಾವು ಹೇಳುವುದಷ್ಟೇ ಸತ್ಯ ಎಂದು ಉಳಿದುದನ್ನೆಲ್ಲಾ ನಿರಾಕರಿಸುವುದಕ್ಕೆ ಡಿನೈಯಲಿಸಂ ಅಥವಾ ಕೂಪಗೇಡಿತನ ಎಂದು ಕರೆಯುತ್ತಾರೆ. ಈ ಸಮಸ್ಯೆ ಬಹಳಷ್ಟು ಮಂದಿಯಲ್ಲಿ ನಾನಾ ಸ್ವರೂಪಗಳಲ್ಲಿ ಇರುತ್ತದೆ.

ಕೂಪಗೇಡಿಗಳ ಪ್ರಮುಖ ಲಕ್ಷಣಗಳೆಂದರೆ :

1. ತಮ್ಮಲ್ಲಿರುವ ಸಮಸ್ಯೆ ಅಥವಾ ಕೊರತೆಯನ್ನು ನಿರ್ಲಕ್ಷಿಸಬಹುದಾದಷ್ಟು ಸಣ್ಣದೆಂದು ಭಾವಿಸುವುದು.

2. ತಮ್ಮ ವರ್ತನೆಯನ್ನು, ನ್ಯೂನತೆ ಅಥವಾ ಕೊರತೆಯನ್ನು ಸಮರ್ಥಿಸಿಕೊಳ್ಳುವುದು.

3. ತಮ್ಮ ನ್ಯೂನತೆ, ಸಮಸ್ಯೆ, ವರ್ತನೆ, ಕೊರತೆಯೇ ಮೊದಲಾದ ಸರಿ ಮಾಡಿಕೊಳ್ಳಬೇಕಾದ ವಿಷಯದ ಬಗ್ಗೆ ಮಾತು ಮರೆಸುವುದು. ವಿಷಯ ಬಂದರೆ ವಿಷಯಾಂತರ ಮಾಡುವುದು. ಅದರ ಬಗ್ಗೆ ಯೋಚನೆ ಮಾಡಲೇ ಒಪ್ಪದಿರುವುದು.

4. ತಮ್ಮಲ್ಲಿ ಕೊರತೆ ಅಥವಾ ಸಮಸ್ಯೆಯಾಗಿರುವಂತಹ ವಿಷಯ ಬಂದರೆ ಗೊಂದಲಕ್ಕೆ ಈಡಾಗುವುದು ಮಾತ್ರವಲ್ಲದೆ, ವಾಸ್ತವವನ್ನು ಒಪ್ಪದೆ, ತಮ್ಮ ನಂಬುಗೆ ಮತ್ತು ಅಂದುಕೊಂಡಿರುವುದೇ ಸರಿ ಎನ್ನುವಂತೆ ವಾದಕ್ಕೆ ಮುಂದಾಗುವುದು, ಕೆಲವೊಮ್ಮೆ ವಾಗ್ದಾಳಿ ಮಾಡುವುದು.

ಫೇಸ್‌ಬುಕ್‌ನಲ್ಲಿ ಹಲವಾರು ಜನ ಹೀಗೆ ತಮ್ಮ ವಿಷಯವನ್ನು ಹೇಳಿರುತ್ತಾರೆ. ಅದನ್ನು ಯಾರಾದರೂ ಪ್ರಶ್ನಿಸಿದರೆ, ವಿಮರ್ಶಿಸಿದರೆ, ಖಂಡಿಸಿದರೆ, ಟೀಕಿಸಿದರೆ ವ್ಯಕ್ತಿಗತವಾಗಿ ಕೆರಳುತ್ತಾರೆ. ತಮ್ಮದ್ದನ್ನು ಸರಿ ಎನ್ನುವುದಕ್ಕೆ ಎಷ್ಟರ ಮಟ್ಟಿಗಾದರೂ ವ್ಯಕ್ತಿನಿಂದನೆಗೆ ಇಳಿಯುತ್ತಾರೆ.

ವ್ಯಕ್ತಿಯೊಬ್ಬನ ಅಹಂಕಾರವು ತಾನು ಸೋತೆನೆಂದು ಭಾವಿಸದಿರಲು ಮಾನಸಿಕವಾಗಿ ಮಾಡಿಕೊಳ್ಳುವಂತಹ ರಕ್ಷಣಾ ತಂತ್ರವೇ ಈ ಕೂಪಗೇಡಿತನ. ಇದು ಎಷ್ಟರ ಮಟ್ಟಿಗೆ ಹೋಗುತ್ತದೆ ಎಂದರೆ ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ಹಿಂದೇಟು ಹಾಕುವುದಲ್ಲ, ನಿರಾಕರಿಸಿಬಿಡುತ್ತದೆ. ಏಕೆಂದರೆ ತಾನು ನಿರಾಕರಿಸಿರುವ ಸತ್ಯವನ್ನು ಒಪ್ಪಿಕೊಳ್ಳುವುದರಿಂದ ಆ ವ್ಯಕ್ತಿಯಲ್ಲಿ ಆತಂಕ, ಅಪರಾಧ ಪ್ರಜ್ಞೆ, ನಾಚಿಕೆ ಮತ್ತು ಭಯವೇ ಉಂಟಾಗಬಹುದು. ಇವುಗಳಿಂದ ತನ್ನತನವನ್ನು ರಕ್ಷಣೆ ಮಾಡಿಕೊಳ್ಳಲು ಮನಸ್ಸು ಕೂಪಗೇಡಿತನಕ್ಕೆ ಮೊರೆ ಹೋಗುತ್ತದೆ.

ಎಷ್ಟೋ ಸಲ ಶ್ರದ್ಧಾ ನಂಬಿಕೆ ಎಂದು ಬಲವಾಗಿ ಆತುಕೊಂಡಿರುವ ವಿಷಯವು ಸತ್ಯಕ್ಕೆ ದೂರವಾದದ್ದು ಅಥವಾ ಅವೈಜ್ಞಾನಿಕವಾದದ್ದು ಎಂದು ನಿರೂಪಿತವಾಗುವಂತಹ ಸಂದರ್ಭ ಬರುತ್ತದೆ. ಆಗ ವ್ಯಕ್ತಿಯು ತಾನು ವಿಶ್ವಾಸದಿಂದ ಆತುಕೊಂಡಿರುವ ವಿಷಯವನ್ನು ಎತ್ತಿ ಹಿಡಿಯುತ್ತಾ ತನ್ನ ವಿಷಯಕ್ಕೆ ವ್ಯತಿರಿಕ್ತವಾಗಿ ಇರುವಂತಹ ವಿಷಯವು ಸತ್ಯವಾಗಿದ್ದರೂ, ವೈಜ್ಞಾನಿಕವಾಗಿ ನಿರೂಪಿತವಾಗುವಂತಿದ್ದರೂ ಅದನ್ನು ಒಪ್ಪಲು ನಿರಾಕರಿಸುತ್ತಾನೆ. ಏಕೆಂದರೆ ಅದರಿಂದ ಉಂಟಾಗುವ ಇಬ್ಬಂದಿತನದ ಒತ್ತಡದಿಂದ ತನ್ನ ಮನಸ್ಸನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ. ಈ ಕೂಪಗೇಡಿತನವು ಅದಕ್ಕೆ ಸಹಾಯ ಮಾಡುತ್ತದೆ.

ಕೂಪಗೇಡಿತನದ ಸಾಮಾನ್ಯ ಲಕ್ಷಣಗಳೆಂದರೇನೇ ಪುರಾವೆಗಿಂತ ವಿಶ್ವಾಸವೇ ಹೆಚ್ಚಿನದು ಎನ್ನುವುದು, ಭಾವನಾತ್ಮಕವಾಗಿ ವಿಶ್ವಾಸವನ್ನು ತನ್ನದು ಎಂದು ಭಾವಿಸುವುದು. ವಿಶೇಷವಾಗಿ ಸಂಸ್ಕೃತಿ, ಸಂಪ್ರದಾಯ, ಸಮುದಾಯವೇ ಮೊದಲಾದವುಗಳಿಂದ ಗುರುತಿಸಿಕೊಳ್ಳುವುದು.

ಕೂಪಗೇಡಿಗಳು ಸದಾ ಸಮರ್ಥಿಸಿಕೊಳ್ಳುವುದರಲ್ಲಿ ನಿಸ್ಸೀಮರು. ಧೂಮಪಾನಿ ಹೇಳಬಹುದು, ಸಿಗರೇಟಿನಿಂದ ಕ್ಯಾನ್ಸರ್ ಬರುತ್ತೆ ಎನ್ನುವುದು ಸುಳ್ಳು. ನಮ್ಮ ತಾತ ಯಾವಾಗಲೂ ಸಿಗರೇಟು ಸೇದುತ್ತಿದ್ದರು. 90 ವರ್ಷ ಬದುಕಿದ್ದರು.

ಕುಡುಕನೊಬ್ಬ ಹೇಳುವನು, ನಾನೇನೂ ವ್ಯಸನಿಯಲ್ಲ. ನಾನು ಯಾವಾಗ ಬೇಕಾದರೂ ನಿಲ್ಲಿಸುತ್ತೇನೆ ಎಂದೋ ಅಥವಾ ಒತ್ತಡದಲ್ಲಿದ್ದಾಗ ಅಥವಾ ಸಂತೋಷವನ್ನು ಸೆಲೆಬ್ರೇಟ್ ಮಾಡಲು ಕುಡಿಯುತ್ತೇನೆ. ಯಾವಾಗಲೂ ಕುಡಿಯಬೇಕು ಎಂದಿಲ್ಲ.

ಕೂಪಗೇಡಿತನದಿಂದ ಹೊರಬರಲು ಅವರ ಮನಸ್ಸಿನ ಸಮಸ್ಯೆ ಏನೆಂದರೆ, ನಿಜವನ್ನು ಒಪ್ಪಿಕೊಂಡರೆ ಹೊಣೆಗಾರಿಕೆಯನ್ನೂ ಹೊರಬೇಕು. ಸಿಗರೇಟು ಸೇವನೆ ಹಾನಿ ಎಂದಾದರೆ ಅದನ್ನು ಬಿಡುವ ಪ್ರಯತ್ನ ಮಾಡಬೇಕು. ಅದು ಕಷ್ಟ ಮತ್ತು ಹೊಣೆಗಾರಿಕೆ. ಅದರಿಂದೇನೂ ಸಮಸ್ಯೆ ಆಗಲ್ಲ ಎಂದುಬಿಟ್ಟರೆ ಕಷ್ಟ ಪಡಬೇಕಾಗಿ ರುವುದಿಲ್ಲ. ತನ್ನ ಅಹಂಕಾರವನ್ನು ರಕ್ಷಿಸಿಕೊಳ್ಳಬೇಕು. ವೈಚಾರಿಕವಾಗಿ ಮತ್ತು ವೈಜ್ಞಾನಿಕವಾಗಿ ಆಲೋಚಿಸಲು ಸಾಧ್ಯವಾಗುವಂತಹ ಶಿಕ್ಷಣ ದೊರಕಿದರೆ ಒಂದು ಹಂತಕ್ಕೆ ಕೂಪಗೇಡಿತನದಿಂದ ಹೊರಗೆ ಬರಬಹುದು. ಆದರೆ, ಗ್ಯಾರಂಟಿ ಇಲ್ಲ. ಏಕೆಂದರೆ ಕೂಪಗೇಡಿತನವು ತೀವ್ರವಾಗಿರುವ ಪಕ್ಷದಲ್ಲಿ ಶಿಕ್ಷಣವನ್ನು ಬರಿಯ ಅಂಕ ಮತ್ತು ಅರ್ಹತಾಪತ್ರಕ್ಕೆ ಮೀಸಲಿಟ್ಟುಕೊಂಡು ಕಲಿಕೆಯನ್ನು ತಮ್ಮೊಳಗೆ ತೆಗೆದುಕೊಳ್ಳುವುದೇ ಇಲ್ಲ.

ಕೂಪಗೇಡಿತನದ ಫಲವಾಗಿ ವ್ಯಕ್ತಿ ತನ್ನ ಬೆಳವಣಿಗೆ ಮತ್ತು ವಿಕಾಸವನ್ನು ತಾನೇ ನಿರಾಕರಿಸಿಕೊಳ್ಳುತ್ತಾನೆ. ಎಷ್ಟೋ ಸಲ ಇದು ಸಂಬಂಧಗಳನ್ನು ಹಾಳು ಮಾಡುತ್ತದೆ. ಕೂಪಗೇಡಿಗಳು ತಪ್ಪು ಮಾಹಿತಿಗಳನ್ನು ಹರಡುವರು, ಅಪಾಯಗಳನ್ನು ನಿರ್ಲಕ್ಷಿಸುವರು, ಹಾನಿಕಾರಕ ನಿರ್ಧಾರಗಳನ್ನು ತೆಗೆದುಕೊಳ್ಳುವರು, ನಿಜವಾಗಿ ಅಗತ್ಯವಿರುವುದನ್ನು ವಿರೋಧಿಸುತ್ತಾ ಸಂಪೂರ್ಣವಾಗಿ ನಾಶಕ್ಕೆ ಅಥವಾ ಪ್ರಮಾದಗಳಿಗೆ ಕಾರಣವಾಗುವರು.

ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಗಳನ್ನು ಮುಕ್ತ ಮನಸ್ಸಿನಿಂದ ಕೇಳುವುದು ಹಾಗೂ ಆ ದಿಕ್ಕಿನಲ್ಲಿ ಪ್ರಜ್ಞಾಪೂರ್ವಕವಾಗಿ ಆಲೋಚಿಸುವುದೇ ಕೂಪಗೇಡಿತನಕ್ಕೆ ಪರಿಹಾರೋಪಾಯ. ಕಹಿಯಾಗಿರುವ ಮತ್ತು ಸಂಕಟಕ್ಕೆ ಕಾರಣವಾಗುವ ಸತ್ಯಗಳನ್ನು ವಸ್ತುನಿಷ್ಠವಾಗಿ ಒಪ್ಪಿಕೊಳ್ಳುವ ನಿರ್ಧಾರವನ್ನು ಮಾಡಿ, ಒತ್ತಡರಹಿತವಾಗಿ ಅವುಗಳನ್ನು ಗಮನಿಸುವ ಮತ್ತು ಸಾಕ್ಷೀಕರಿಸುವ ರೂಢಿಯನ್ನು ಮಾಡಿಕೊಳ್ಳುವುದು ಒಳಿತು.

share
ಯೋಗೇಶ್ ಮಾಸ್ಟರ್
ಯೋಗೇಶ್ ಮಾಸ್ಟರ್
Next Story
X