Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜೀವಕ್ಕೇ ಸವಾಲೆಸೆಯುವ ಚಂದ್ರನಂಗಳ

ಜೀವಕ್ಕೇ ಸವಾಲೆಸೆಯುವ ಚಂದ್ರನಂಗಳ

ಗಿರೀಶ್ ಲಿಂಗಣ್ಣಗಿರೀಶ್ ಲಿಂಗಣ್ಣ12 April 2026 9:17 AM IST
share
ಜೀವಕ್ಕೇ ಸವಾಲೆಸೆಯುವ ಚಂದ್ರನಂಗಳ

ವಿಕಿರಣ ಮತ್ತು ಧೂಳು ಮಾತ್ರವೇ ಬಾಹ್ಯಾಕಾಶದ ಸಮಸ್ಯೆಗಳಲ್ಲ. ಬಾಹ್ಯಾಕಾಶ ಮಾನವ ದೇಹದಲ್ಲಿ ದ್ರವಗಳು ಚಲಿಸುವ ರೀತಿಯನ್ನೂ ಬದಲಿಸುತ್ತದೆ. ಭೂಮಿಯಲ್ಲಿ ಗುರುತ್ವಾಕರ್ಷಣೆ ದ್ರವಗಳನ್ನು ಕೆಳಭಾಗಕ್ಕೆ ಸೆಳೆಯುತ್ತದೆ. ಆದರೆ, ಗುರುತ್ವಾಕರ್ಷಣೆ ಇಲ್ಲದೆ ಬಾಹ್ಯಾಕಾಶದಲ್ಲಿ ದ್ರವಗಳು ತಲೆಯತ್ತ ಹರಿಯುತ್ತವೆ. ಇದು ದೃಷ್ಟಿ ಸಮಸ್ಯೆಗಳನ್ನು ತಂದೊಡ್ಡಿ, ಮೆದುಳಿನ ವಿನ್ಯಾಸವನ್ನೂ ಸಣ್ಣ ಮಟ್ಟಿಗೆ ಬದಲಿಸಬಲ್ಲದು.

ಚಂದ್ರನ ಕಡೆ ಸಾಗುವುದು ಎಂದರೆ ಜಗತ್ತಿನಲ್ಲಿ ಅತ್ಯಂತ ರೋಮಾಂಚಕ ಅನುಭವ ಎನ್ನುವಂತೆ ಭಾಸವಾಗುತ್ತದೆ. ನಾವು ಚಂದ್ರನ ಅಂಗಳದ ಚಿತ್ರಗಳನ್ನು ನೋಡಿದ್ದೇವೆ, ಚಂದ್ರಾನ್ವೇಷಣೆಯ ಕಥೆಗಳನ್ನು ಕೇಳಿದ್ದೇವೆ, ಈ ಸಾಧನೆಗಳ ಕುರಿತು ಹೆಮ್ಮೆಪಟ್ಟಿದ್ದೇವೆ. ಆದರೆ, ಮಾನವರ ದೇಹಗಳ ಮೇಲೆ ಚಂದ್ರ ಬೀರುವ ಪರಿಣಾಮ ಏನು ಎನ್ನುವುದನ್ನು ಮಾತ್ರ ಯಾರೂ ಹೇಳುವುದಿಲ್ಲ. ಚಂದ್ರ ಮೌನವಾಗಿ, ನಿಧಾನವಾಗಿ, ಆದರೆ ಅತ್ಯಂತ ಗಂಭೀರವಾಗಿ ಮಾನವರ ದೇಹದ ಮೇಲೆ ಪರಿಣಾಮ ಬೀರುತ್ತದೆ. ಈ ಪರಿಣಾಮಗಳೇನು ಎನ್ನುವುದನ್ನು ನಾವು ಈ ಲೇಖನದಲ್ಲಿ ಸರಳವಾಗಿ ಗಮನಿಸೋಣ.

ಅಮೆರಿಕನ್ ಗಗನಯಾತ್ರಿಗಳು ಕೊನೆಯ ಬಾರಿ 1972ರಲ್ಲಿ ಚಂದ್ರನ ಮೇಲೆ ನಡೆದಾಡಿದಾಗ, ಅವರು ಅಲ್ಲಿ ಕೇವಲ ಮೂರು ದಿನಗಳ ಕಾಲ ವಾಸಿಸಿದ್ದರು. ಅದು ಬಹಳ ಕಡಿಮೆ ಅವಧಿಯಾಗಿತ್ತು. ಆದರೆ, ಆ ಕೇವಲ ಮೂರು ದಿನಗಳಲ್ಲೇ ಒಂದು ವಿಚಿತ್ರ ಸಂಗತಿ ನಡೆದಿತ್ತು. ಗಗನಯಾತ್ರಿಗಳು ತಮ್ಮ ಬೂಟುಗಳು, ಕೈಗವಸುಗಳು ಮತ್ತು ಬಾಹ್ಯಾಕಾಶ ಸೂಟುಗಳಲ್ಲಿ ಚಂದ್ರನ ಧೂಳನ್ನು ತಂದಿದ್ದರು. ಚಂದ್ರನ ಮೇಲ್ಮೈಯಲ್ಲಿ ಪೌಡರ್ ರೀತಿಯಲ್ಲಿದ್ದ ಬಹಳ ನಯವಾದ ಈ ಧೂಳು ಸುಟ್ಟ ಗನ್ ಪೌಡರ್‌ನಂತಹ ವಾಸನೆ ಹೊಂದಿತ್ತು. ಇದು ಎಲ್ಲದಕ್ಕೂ ತಕ್ಷಣವೇ ಅಂಟಿಕೊಳ್ಳುತ್ತಿತ್ತು. ಗಗನಯಾತ್ರಿಗಳ ಕಣ್ಣುಗಳು ಮತ್ತು ಗಂಟಲಿಗೆ ಕಿರಿಕಿರಿ ಉಂಟುಮಾಡುತ್ತಿತ್ತು. ಕೆಲವು ಗಗನಯಾತ್ರಿಗಳಂತೂ ತಮಗೆ ಚಂದ್ರನ ಮೇಲೆ ಯಾವುದೋ ಕೆಟ್ಟ ಅಲರ್ಜಿ ಕಾಡುತ್ತಿದೆ ಎಂದು ಭಾವಿಸಿದ್ದರು. ವಿಜ್ಞಾನಿಗಳು ಇದನ್ನು ‘ಲೂನಾರ್ ಹೇ ಫಿವರ್’ ಎಂದು ಕರೆದರು. ಈಗ, ಚಂದ್ರನ ಮೇಲೆ ಹಲವು ವಾರಗಳ ಕಾಲ ಅಥವಾ ತಿಂಗಳುಗಳ ಕಾಲ ವಾಸಿಸುವುದನ್ನು ಒಮ್ಮೆ ಊಹಿಸಿಕೊಳ್ಳಿ. ಕೇವಲ ಚಂದ್ರನಂಗಳದ ಧೂಳೇ ಗಂಭೀರ ಸಮಸ್ಯೆ ತಂದೊಡ್ಡಬಲ್ಲದು.

ಈ ಸಮಸ್ಯೆಯ ಕುರಿತು ನಾಸಾಗೂ ಅರಿವಿದೆ. ಆದ್ದರಿಂದಲೇ ನಾಸಾ ಈ ಬಾರಿ ಉತ್ತಮ ಬಾಹ್ಯಾಕಾಶ ದಿರಿಸುಗಳು ಮತ್ತು ಉಪಕರಣಗಳನ್ನು ಅಭಿವೃದ್ಧಿ ಪಡಿಸಿ, ಗಗನಯಾತ್ರಿಗಳ ದೇಹಕ್ಕೆ ಚಂದ್ರನ ಧೂಳು ಸೇರಿಕೊಳ್ಳುವುದನ್ನು ಗಣನೀಯವಾಗಿ ತಗ್ಗಿಸಲು ಪ್ರಯತ್ನ ನಡೆಸುತ್ತಿದೆ. ಆದರೆ, ಧೂಳನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಿಲ್ಲ ಎಂದು ನಾಸಾ ಪ್ರಾಮಾಣಿಕವಾಗಿ ಒಪ್ಪಿಕೊಂಡಿದೆ. ಒಂದಷ್ಟು ಮಟ್ಟಿಗೆ ಚಂದ್ರನ ಧೂಳಿಗೆ ಗಗನಯಾತ್ರಿಗಳು ತೆರೆದುಕೊಳ್ಳಲೇಬೇಕಾಗುತ್ತದೆ. ಆದರೆ, ಮತ್ತೆ ಮತ್ತೆ ಈ ಚೂಪಾದ, ಅಂಟುವ ಧೂಳಿಗೆ ತೆರೆದುಕೊಂಡರೆ ಅದರಿಂದ ಕಾಲಕ್ರಮೇಣ ಶ್ವಾಸಕೋಶ, ಚರ್ಮ ಮತ್ತು ಕಣ್ಣುಗಳಿಗೆ ತೊಂದರೆ ಉಂಟಾಗಬಹುದು. ಇದು ಭವಿಷ್ಯದ ಚಂದ್ರ ಅನ್ವೇಷಣಾ ಯೋಜನೆಗಳಿಗಿರುವ ನೈಜ ವೈದ್ಯಕೀಯ ಆತಂಕ.

ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ಇನ್ನೊಂದು ದೊಡ್ಡ ವಿಚಾರವೂ ಇದೆ. ನಾವು ಭೂಮಿಯಲ್ಲಿದ್ದಾಗ, ನಮ್ಮ ಗ್ರಹ ಒಂದು ಬೃಹತ್ ಕವಚದಂತೆ ಕಾರ್ಯಾಚರಿಸುತ್ತದೆ. ಭೂಮಿ ಹೊಂದಿರುವ ಕಾಂತೀಯ ಕ್ಷೇತ್ರ ನಮ್ಮನ್ನು ಸೂರ್ಯ ಮತ್ತು ಬಾಹ್ಯಾಕಾಶದಿಂದ ಬರುವ ಅಪಾಯಕಾರಿ ವಿಕಿರಣಗಳಿಂದ ರಕ್ಷಿಸುತ್ತದೆ. ಆದರೆ, ಈ ರಕ್ಷಣೆ ಭೂಮಿಯಿಂದ ಒಂದಷ್ಟು ಎತ್ತರದ ತನಕ ಮಾತ್ರವೇ ಕಾರ್ಯಾಚರಿಸುತ್ತದೆ. ಒಂದು ಬಾರಿ ಗಗನಯಾತ್ರಿಗಳು ಈ ರಕ್ಷಣಾ ವಲಯದಿಂದ ಎತ್ತರಕ್ಕೆ, ಸಾಮಾನ್ಯವಾಗಿ ಭೂಮಿಯಿಂದ 2,000 ಕಿಲೋಮೀಟರ್ ಮೇಲೆ ಸಾಗಿದರೆ, ಈ ರಕ್ಷಣಾ ಕವಚ ತಪ್ಪಿ ಹೋಗುತ್ತದೆ. ಅವರು ಸಂಪೂರ್ಣವಾಗಿ ಅಪಾಯಕಾರಿ ಬಾಹ್ಯಾಕಾಶ ವಿಕಿರಣಗಳಿಗೆ ತೆರೆಯಲ್ಪಡುತ್ತಾರೆ.

1960 ಮತ್ತು 1970ರ ದಶಕದ ಹಳೆಯ ಅಪೋಲೋ ಯೋಜನೆಗಳ ಸಂದರ್ಭದಲ್ಲಿ, ವಿಜ್ಞಾನಿಗಳು ಯೋಜನೆಗಳನ್ನು ಕಡಿಮೆ ಅವಧಿಯದಾಗಿಸಿ ಮತ್ತು ಬಾಹ್ಯಾಕಾಶಕ್ಕೆ ತೆರಳಲು ಸರಿಯಾದ ಸಮಯವನ್ನು ಯೋಜಿಸಿ, ಸೂರ್ಯನ ಚಟುವಟಿಕೆಗಳು ಕಡಿಮೆ ಇದ್ದ ಸಮಯದಲ್ಲಿ ಜಾರಿಗೆ ತರುತ್ತಿದ್ದರು. ಇದು ಸಹಾಯವಾಗುತ್ತಿದ್ದರೂ, ತಕ್ಕ ಮಟ್ಟಿಗೆ ಮಾತ್ರವೇ ನೆರವಾಗುತ್ತಿತ್ತು. ಆ ಯೋಜನೆಗಳು ಮುಕ್ತಾಯಗೊಂಡ ಹಲವು ವರ್ಷಗಳ ಬಳಿಕ, ಅಪೋಲೋ ಗಗನಯಾತ್ರಿಗಳಲ್ಲಿ ಸಾಮಾನ್ಯ ಜನರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಣ್ಣಿನ ಸಮಸ್ಯೆಗಳು, ಅದರಲ್ಲೂ ಪೊರೆಯಂತಹ ಸಮಸ್ಯೆಗಳು ಕಾಣಿಸಿಕೊಂಡಿದ್ದವು ಎಂದು ಅಧ್ಯಯನಗಳು ಸ್ಪಷ್ಟಪಡಿಸಿದ್ದವು. ಅಂದು ಎದುರಿಸಿದ ವಿಕಿರಣಗಳು ಮೌನವಾಗಿಯೇ ಹಾನಿ ಉಂಟುಮಾಡಿದ್ದು, ಅದರ ಪರಿಣಾಮ ಹಲವು ವರ್ಷಗಳ ಬಳಿಕ ಕಾಣಿಸಿಕೊಂಡಿತ್ತು. ಇದು ಆಳ ಬಾಹ್ಯಾಕಾಶ ವಿಕಿರಣಗಳ ದುಷ್ಪರಿಣಾಮ. ಅದು ಸಾಲದ ಮೇಲೆ ಬಡ್ಡಿ ಬೆಳೆದಂತೆ, ನಮ್ಮ ಗಮನಕ್ಕೇ ಬರದೆ ನಿಧಾನವಾಗಿ ಬೆಳೆಯುತ್ತದೆ.

ಇಂದು ಭೂಮಿಯ ರಕ್ಷಣಾ ವಲಯಗಳಿಂದ ಹೊರಗೆ ಸಾಗುವ ಪ್ರತಿಯೊಬ್ಬ ಗಗನಯಾತ್ರಿಯೂ ಒಂದು ವೈಯಕ್ತಿಕ ಡಾಸಿಮೀಟರ್ ಧರಿಸಿರುತ್ತಾರೆ. ಡಾಸಿಮೀಟರ್ ಎನ್ನುವುದು ಗಗನಯಾತ್ರಿಗಳ ದೇಹ ನಿಖರವಾಗಿ ಎಷ್ಟು ಪ್ರಮಾಣದಲ್ಲಿ ವಿಕಿರಣಗಳನ್ನು ಹೀರಿಕೊಳ್ಳುತ್ತಿದೆ ಎನ್ನುವುದನ್ನು ತೋರಿಸುತ್ತದೆ. ಈ ಮೂಲಕ ವಿಜ್ಞಾನಿಗಳು ವಿಕಿರಣ ಮಾನವ ದೇಹದ ಜೀವಕೋಶಗಳು ಮತ್ತು ಡಿಎನ್‌ಎ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎನ್ನುವುದನ್ನೂ ಅರಿಯಲು ಸಾಧ್ಯವಾಗುತ್ತಿದೆ. ಹಿಂದೆ ಈ ಸಾಧ್ಯತೆಗಳು ಇರಲಿಲ್ಲ. ಇನ್ನೂ ಗಮನಾರ್ಹ ಅಂಶವೆಂದರೆ, ನಾಸಾ ಪ್ರಯೋಗಾಲಯದಲ್ಲಿ ಬೆಳೆಸಿದ ಮಾನವ ಅಂಗಾಂಶದ ಚಿಪ್‌ಗಳನ್ನು, ಅಂದರೆ ಗಗನಯಾತ್ರಿಗಳ ಕೋಶಗಳಿಂದಲೇ ಪಡೆದ ಅಂಗಾಂಶಗಳನ್ನು ಆರ್ಟೆಮಿಸ್ ಯೋಜನೆಯ ಮೂಲಕ ಚಂದ್ರನತ್ತ ರವಾನಿಸಿದೆ. ಇದನ್ನು ಒಂದು ರೀತಿ ಗಗನಯಾತ್ರಿಗಳ ದೇಹದ ಸಣ್ಣ ಆವೃತ್ತಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ನೈಜ ಬಾಹ್ಯಾಕಾಶ ಸನ್ನಿವೇಶದಲ್ಲಿ ಅದರ ಮೇಲಾಗುವ ಪರಿಣಾಮವನ್ನು ಅಧ್ಯಯನ ಮಾಡುವುದಕ್ಕೆ ಹೋಲಿಸಬಹುದು.

ಆದರೆ, ವಿಕಿರಣ ಮತ್ತು ಧೂಳು ಮಾತ್ರವೇ ಬಾಹ್ಯಾಕಾಶದ ಸಮಸ್ಯೆಗಳಲ್ಲ. ಬಾಹ್ಯಾಕಾಶ ಮಾನವ ದೇಹದಲ್ಲಿ ದ್ರವಗಳು ಚಲಿಸುವ ರೀತಿಯನ್ನೂ ಬದಲಿಸುತ್ತದೆ. ಭೂಮಿಯಲ್ಲಿ ಗುರುತ್ವಾಕರ್ಷಣೆ ದ್ರವಗಳನ್ನು ಕೆಳಭಾಗಕ್ಕೆ ಸೆಳೆಯುತ್ತದೆ. ಆದರೆ, ಗುರುತ್ವಾಕರ್ಷಣೆ ಇಲ್ಲದೆ ಬಾಹ್ಯಾಕಾಶದಲ್ಲಿ ದ್ರವಗಳು ತಲೆಯತ್ತ ಹರಿಯುತ್ತವೆ. ಇದು ದೃಷ್ಟಿ ಸಮಸ್ಯೆಗಳನ್ನು ತಂದೊಡ್ಡಿ, ಮೆದುಳಿನ ವಿನ್ಯಾಸವನ್ನೂ ಸಣ್ಣ ಮಟ್ಟಿಗೆ ಬದಲಿಸಬಲ್ಲದು. ಗುರುತ್ವಾಕರ್ಷಣೆಯ ವಿರುದ್ಧದ ನಿರಂತರ ಪ್ರಯತ್ನದ ಕೊರತೆಯಿಂದಾಗಿ ಮೂಳೆಗಳು ಮತ್ತು ಸ್ನಾಯುಗಳು ದುರ್ಬಲಗೊಳ್ಳುತ್ತವೆ. ನಿದ್ದೆಗೂ ತೊಂದರೆಯಾಗುತ್ತದೆ. ಬಾಹ್ಯಾಕಾಶದಲ್ಲಿ ದೇಹದ ರೋಗನಿರೋಧಕ ಶಕ್ತಿ ಸಮರ್ಥವಾಗಿ ಕೆಲಸ ಮಾಡುವುದಿಲ್ಲ. ಮಾನಸಿಕ ನಿಖರತೆಯೂ ಕಡಿಮೆಯಾಗುತ್ತದೆ. ಇವೆಲ್ಲವೂ ಜೊತೆಯಾಗಿ, ಏಕಕಾಲದಲ್ಲಿ ಉಂಟಾಗುತ್ತವೆ. ಇದರಿಂದಾಗಿ ಬಾಹ್ಯಾಕಾಶದಲ್ಲಿ ಆರೋಗ್ಯ ಎನ್ನುವುದು ಆಧುನಿಕ ವಿಜ್ಞಾನದಲ್ಲಿ ಸಂಕೀರ್ಣ ಸವಾಲುಗಳಲ್ಲಿ ಒಂದಾಗಿದೆ.

ಅಪೋಲೋ ಯೋಜನೆಗಳ ಸಂದರ್ಭದಲ್ಲಿ, ಇವುಗಳ ಪೈಕಿ ಬಹಳಷ್ಟು ಬದಲಾವಣೆಗಳನ್ನು ಗಗನಯಾತ್ರಿಗಳು ಭೂಮಿಗೆ ಮರಳಿದ ಬಳಿಕವೇ ಅಧ್ಯಯನ ಮಾಡಲಾಗುತ್ತಿತ್ತು. ಆದರೆ, ಅಷ್ಟರಲ್ಲಾಗಲೇ ಆಗುವ ಹಾನಿ ತಲೆದೋರಿರುತ್ತಿತ್ತು. ಆದರೆ ವಿಜ್ಞಾನಿಗಳು ಈಗ ಮಾನವ ದೇಹದಲ್ಲಿ ಏನಾಗುತ್ತಿದೆ ಎನ್ನುವುದನ್ನು ನೈಜ ಸಮಯದಲ್ಲಿ ಅಧ್ಯಯನ ಮಾಡಿ, ಏನಾದರೂ ಸಮಸ್ಯೆ ಉಂಟಾದರೆ ಮೊದಲೇ ಪರಿಹರಿಸಬಹುದು.

ಭವಿಷ್ಯದ ಚಂದ್ರಾನ್ವೇಷಣಾ ಯೋಜನೆಗಳು ಹೆಚ್ಚು ದೀರ್ಘಾವಧಿಯವಾಗಿರಲಿವೆ. ಗಗನಯಾತ್ರಿಗಳು ಚಂದ್ರನ ಮೇಲೆ ವಾರಗಳ ಕಾಲ ನೆಲೆಸಲಿದ್ದಾರೆ. ಅವರು ಕಠಿಣ ದೈಹಿಕ ಕೆಲಸಗಳನ್ನು ಮಾಡಿ, ಕಡಿಮೆ ನಿದ್ದೆ ಹೊಂದಿ, ಹೆಚ್ಚಿನ ವಿಕಿರಣಗಳನ್ನು ಎದುರಿಸಿ, ಭೂಮಿಯಿಂದ ಸಾಕಷ್ಟು ದೂರದಲ್ಲಿ ಇರಲಿದ್ದಾರೆ. ಅವರಿಗೆ ಬೇಕಾದಾಗ ತಕ್ಷಣವೇ ಮನೆಗೆ ಮರಳುವ ಆಯ್ಕೆ ಇರುವುದಿಲ್ಲ. ಇಂತಹ ಯೋಜನೆಗಳಿಗೆ ನೀಡುವ ವೈದ್ಯಕೀಯ ಕಿಟ್‌ಗಳು ಸಹ ಸ್ವಿಸ್ ಆರ್ಮಿ ಚಾಕುವಿನ ರೀತಿಯಲ್ಲಿ ಸ್ಮಾರ್ಟ್, ಹೊಂದಿಕೊಳ್ಳುವ ಮತ್ತು ಕಡಿಮೆ ಸಂಪನ್ಮೂಲದಲ್ಲೇ ಹಲವು ರೀತಿಯ ಅಗತ್ಯಗಳಿಗೆ ನೆರವಾಗುವ ರೀತಿಯಲ್ಲಿ ಇರಬೇಕು.

ಆದರೆ, ಇಲ್ಲೊಂದು ಧನಾತ್ಮಕ ಅಂಶವಿದೆ. ಬಾಹ್ಯಾಕಾಶದಲ್ಲಿ ಮಾನವರ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ನಾವು ಕಲಿಯುವ ಪ್ರತಿಯೊಂದು ಅಂಶವೂ ಭೂಮಿಯಲ್ಲೂ ಆರೋಗ್ಯ ರಕ್ಷಣೆಗೆ ನೆರವಾಗಲಿವೆ. ದುರ್ಗಮ ಪ್ರದೇಶಗಳಲ್ಲಿ, ತೀವ್ರ ವಾತಾವರಣಗಳಲ್ಲಿ ಮತ್ತು ವೈದ್ಯಕೀಯ ನೆರವು ಕ್ಷಿಪ್ರವಾಗಿ ಲಭಿಸದ ಸ್ಥಳಗಳಲ್ಲಿ ಇವು ಪೂರಕವಾಗಲಿವೆ.

ಚಂದ್ರ ಈಗ ಕೇವಲ ಒಂದು ದೂರದ ಗುರಿ ಮಾತ್ರವಲ್ಲ. ಬದಲಿಗೆ, ಅದು ನಮಗೊಂದು ತರಗತಿಯೂ ಹೌದು. ಈಗ ಮಾನವ ಜನಾಂಗ ಹಿಂದೆಂದಿಗಿಂತಲೂ ತೀವ್ರವಾದ ‘ಹೋಮ್ ವರ್ಕ್’ ಮಾಡುತ್ತಿದ್ದು, ನಮ್ಮ ಭೂಮಿಯಿಂದ ದೂರದ ಚಂದ್ರನಲ್ಲೂ ಬದುಕುಳಿಯುವ ಸಿದ್ಧತೆಗಳನ್ನು ನಡೆಸುತ್ತಿದೆ.

Tags

Moonlit NightsChallengeLife
share
ಗಿರೀಶ್ ಲಿಂಗಣ್ಣ
ಗಿರೀಶ್ ಲಿಂಗಣ್ಣ

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Next Story
X