Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ತೀವ್ರ ಬಲಪಂಥೀಯತೆ ಮತ್ತು ಮೀಸಲಾತಿ...

ತೀವ್ರ ಬಲಪಂಥೀಯತೆ ಮತ್ತು ಮೀಸಲಾತಿ ರದ್ದುಗೊಳಿಸಿ ಆಂದೋಲನ

ಬಿ. ಶ್ರೀಪಾದ ಭಟ್ಬಿ. ಶ್ರೀಪಾದ ಭಟ್31 July 2026 10:22 AM IST
share
ತೀವ್ರ ಬಲಪಂಥೀಯತೆ ಮತ್ತು ಮೀಸಲಾತಿ ರದ್ದುಗೊಳಿಸಿ ಆಂದೋಲನ

ಇಂದು ‘ಮೀಸಲಾತಿ ರದ್ದುಗೊಳಿಸಿ ಆಂದೋಲನ’ ಪ್ರಚಾರ ಮಾಡುತ್ತಿರುವ ಈ ನವ ನಾಝಿವಾದಿಗಳು ಸದ್ಯಕ್ಕೆ ‘ಒಂದು ದೇಶ, ಒಂದು ಗುರುತು, ಇಂಡಿಯನ್’ ಎಂದು ಹೇಳುತ್ತಿದ್ದಾರೆ. ಇದೊಂದು ಮುಖವಾಡವಷ್ಟೆ. ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಅವರ ‘ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವ’ ಕಥನವನ್ನು ನಾಶ ಮಾಡುತ್ತಾರೆ.

ಪ್ರಸ್ತುತ ವಿದ್ಯಮಾನ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ‘ಮೀಸಲಾತಿ ರದ್ದುಪಡಿಸಿ ಆಂದೋಲನ’ ಎನ್ನುವ ಪ್ರಚಾರ ಶುರುವಾಗಿದೆ. ಇದನ್ನು ಆರಂಭಿಸಿರುವ ಅಜೀತ್ ಭಾರ್ತಿ ಎನ್ನುವಾತ ಕಟ್ಟರ್ ಜಾತಿವಾದಿ ಮತ್ತು ದಲಿತ ವಿರೋಧಿ ಮನಸ್ಥಿತಿವುಳ್ಳ ವ್ಯಕ್ತಿ. ಈತ ತೀವ್ರ ಬಲಪಂಥೀಯವಾದಿ. ತನ್ನನ್ನು ತಾನು ಪತ್ರಕರ್ತ ಎಂದು ಕರೆದುಕೊಳ್ಳುವ ಭಾರ್ತಿ ಮೊದಲು ಆರೆಸ್ಸೆಸ್ ಸಿದ್ಧಾಂತಗಳ ಪ್ರಚಾರದ ವೆಬ್‌ಸೈಟ್ ‘OpIndia’ದಲ್ಲಿ ಹಿಂದಿ ಸಂಪಾದಕನಾಗಿ ಕೆಲಸ ಮಾಡಿದ್ದಾರೆ. ಈಗ ತನ್ನದೇ ಆದ ‘ಡೂ ಪಾಲಿಟಿಕ್ಸ್’ ಎನ್ನುವ ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆೆ. ಈ ಚಾನೆಲ್ ಮೂಲಕ ಬ್ರಾಹ್ಮಣವಾದವನ್ನು ಪ್ರಚಾರ ಮಾಡುವ ಈತ ಅದೇ ದನಿಯಲ್ಲಿ ದಲಿತರು, ಮುಸ್ಲಿಮರ ವಿರುದ್ಧವೂ ಬೆಂಕಿಯುಗುಳುತ್ತಾರೆ. ಈಗ ಈತನ ಮುಂಚೂಣಿಯಲ್ಲಿ ದಿಢೀರನೆ ಮೀಸಲಾತಿ ವಿರೋಧಿ ಪ್ರಚಾರ ಯಾಕೆ ಶುರುವಾಯಿತು? ಇದಕ್ಕೆ ಈಗ ನೀಟ್ ಹಗರಣ ವಿರುದ್ಧ ಜಂತರ್ ಮಂತರ್‌ನ ಪ್ರತಿಭಟನೆಯಿಂದ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಬೇಕಾದ ಹಿನ್ನೆಲೆ ಕಾರಣವೇ? ತನ್ನ ಕಾರ್ಯಸೂಚಿಯನ್ನು ಬೆಂಬಲಿಸುವ ಈ ಪ್ರಚಾರಕ್ಕೆ ಆರೆಸ್ಸೆಸ್ ಒಳಗಿನಿಂದಲೇ ಕುಮ್ಮಕ್ಕು ಕೊಡುತ್ತಿಲ್ಲ ಎನ್ನುವುದಕ್ಕೆ ಸಾಕ್ಷಿ ಎಲ್ಲಿದೆ?

ಸದ್ಯಕ್ಕೆ ಶಿಕ್ಷಣ ಸಚಿವರ ರಾಜೀನಾಮೆಗೆ ಮಾತ್ರ ಸೀಮಿತವಾಗಿದ್ದ ಯುವಜನತೆಯ ಹೋರಾಟ ಭವಿಷ್ಯದಲ್ಲಿ ಯಾವ ಸ್ವರೂಪ ಪಡೆಯಬಹುದು ಎನ್ನುವುದರ ಕುರಿತು ಯಾರಿಗೂ ಸ್ಪಷ್ಟತೆಯಿಲ್ಲ ಹಾಗೂ ನಿರೀಕ್ಷೆಗಳೂ ಇಲ್ಲ. ಆದರೆ ಇವರ ಹೋರಾಟದ ಬಿರುಸು, ಬಿಜೆಪಿ ನೀತಿಗಳ ವಿರೋಧಿ ಧೋರಣೆಯಿಂದ ಸಂಘ ಪರಿವಾರ ಕಂಗಾಲಾಗಿದ್ದಾರೆ ಎಂಬುದು ನಿಜ. ಸೈದ್ಧಾಂತಿಕ ವಿರೋಧಿ ವ್ಯಕ್ತಿಗಳು, ಸಂಘಟನೆಗಳ ಮೇಲೆ ಹಿಂಸಾತ್ಮಕ ಹಲ್ಲೆ, ದೌರ್ಜನ್ಯ ನಡೆಸುವ ಈ ಸಂಘಿಗಳು ಯಾವುದೇ ಸಿದ್ಧಾಂತದ ಪರ ಒಲವು ಇಲ್ಲದ ಈ ಜೆನ್ ಝಿ ವಿರುದ್ಧ ನೇರವಾಗಿ ದಾಳಿ ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ಇವರ ಪೋಷಕರಲ್ಲಿ ಬಹುತೇಕರು ಬಿಜೆಪಿ ಬೆಂಬಲಿಗರು ಎನ್ನುವುದು ಒಂದು ಕಾರಣವಿರಬಹುದು. ಆದರೆ ತಮ್ಮ ಬುಡಕ್ಕೆ ಬೆಂಕಿ ಬಿದ್ದಾಗ ಫ್ಯಾಶಿಸ್ಟರು ಸುಮ್ಮನೆ ಕೂಡುವುದಿಲ್ಲ. ಮುಂದಿನ ವಿಧ್ವಂಸಕ ಕೃತ್ಯಕ್ಕಾಗಿ ಸಿದ್ಧರಾಗುತ್ತಾರೆ. ಇದರ ಆರಂಭದ ಭಾಗವಾಗಿ ಈಗ ಮೀಸಲಾತಿ ವಿರೋಧಿ ಪ್ರಚಾರ ಶುರು ಮಾಡಿದ್ದಾರೆ. ಈ ಆನ್‌ಲೈನ್ ದಾಳಿ ಬೀದಿಗಿಳಿಯುತ್ತದೆಯೇ ಎನ್ನುವ ಪ್ರಶ್ನೆಗೆ ಅನುಮಾನ ಎಂದೇ ಹೇಳಬಹುದು.

ಹಿನ್ನೆಲೆ

ಕಳೆದ ಹದಿನೈದು ವರ್ಷಗಳಲ್ಲಿ ತೀವ್ರ ಬಲಪಂಥೀಯತೆಯ ವಿಷ ವ್ಯಾಪಕವಾಗಿ ಹರಡಿಕೊಂಡಿದೆ. ಇಂದು ಆರೆಸ್ಸೆಸ್ ಡೀಪ್ ನೇಷನ್ ಆಗಿ ಬೆಳೆಯುವುದಕ್ಕೆ ಈ ಅಜೀತ್ ಭಾರ್ತಿಯಂತಹ ತೀವ್ರ ಬಲಪಂಥೀಯರು ಮುಖ್ಯ ಕಾರಣ. ಭಾರತದಲ್ಲಿನ ಗಮನಾರ್ಹ ಸಂಖ್ಯೆಯ ಮೇಲ್ಜಾತಿ ಯುವಕರು ಮತ್ತು ಯುವತಿಯರು ‘ಟ್ರಾಡ್-ವಿಂಗ್’ ಎಂಬ ಅಪಾಯಕಾರಿ ತೀವ್ರ ಬಲಪಂಥೀಯ ಡಿಜಿಟಲ್ ಕಡೆ ಆಕರ್ಷಿತರಾಗಿದ್ದಾರೆ. ಇವರಲ್ಲಿ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರ ಮುಂದುವರಿದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಈ ಟ್ರಾಡ್‌ಗಳು ಬಿಜೆಪಿ ಒಳಗೊಂಡಂತೆ ಇತರ ಬಲಪಂಥೀಯರನ್ನು ಉದಾರವಾದಿಗಳೆಂದು (ಲಿಬರಲ್) ಟೀಕಿಸಿ ಅವರನ್ನು ‘ರೈತಾಸ್’ (raitas) ಎಂದು ಕರೆಯುತ್ತಾರೆ. ಇವರು ಉಗ್ರ ಮತಧಾರ್ಮಿಕತೆಯನ್ನು ಅನುಸರಿಸದೆ ಸಾಂಕೇತಿಕ ಸ್ವರೂಪದ ಹಿಂದೂ ರಾಷ್ಟ್ರೀಯತೆಯನ್ನು ನಂಬುತ್ತಾರೆ ಎಂದು ಟ್ರಾಡ್‌ಗಳ ಆರೋಪ. ಆರೆಸ್ಸೆಸ್ ಎನ್ನುವ ಮಾತೃಸಂಸ್ಥೆ ಅಡಿಯಲ್ಲಿ ಈ ಎರಡು ಉಪ ಬಲಪಂಥೀಯತೆ ವಾದಗಳು ಹುಟ್ಟಿಕೊಂಡಿವೆ. 2020-21ರ ರೈತರ ಪ್ರತಿಭಟನೆಯ ಒತ್ತಡಕ್ಕೆ ಮಣಿದು ನರೇಂದ್ರ ಮೋದಿ ಸರಕಾರ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂದೆಗೆದುಕೊಂಡ ನಂತರ ಮತ್ತು 2019-20 ರ ಸಿಎಎ, ಎನ್‌ಆರ್‌ಸಿ ವಿರುದ್ಧ ಹೋರಾಟದ ನಂತರ ಈ ತೀವ್ರ ಬಲಪಂಥೀಯತೆ ಬಹಿರಂಗವಾಗಿ ಸಕ್ರಿಯವಾಗಿದೆ. ಈ ಸಂದರ್ಭದಲ್ಲಿ ರೈತಾಸ್‌ಗಳು ಮೋದಿ ಅವರ ನಿರ್ಧಾರವನ್ನು ವ್ಯಾವಹಾರಿಕ ರಾಜಕೀಯ (pragmatism) ಎಂದು ಶ್ಲಾಘಿಸಿದರೆ, ಮತ್ತೊಂದೆಡೆ ಟ್ರಾಡ್‌ಗಳು ಮೋದಿಯವರ ಪ್ರತಿಕ್ರಿಯೆ ಅತಿಯಾಗಿ ಮಿದುವಾಗಿದೆ ಎಂದು ತೀವ್ರವಾಗಿ ಟೀಕಿಸಿದವು.

ಎಲ್ಲಿಯೂ ಅಧಿಕೃತವಾಗಿ ಬಳಕೆಯಾಗದ, ತೀವ್ರ ಬಲಪಂಥವನ್ನು ಪ್ರತಿಪಾದಿಸುವ ಈ ಟ್ರಾಡ್ ನುಡಿಕಟ್ಟು ಪಾಶ್ಚಾತ್ಯ ‘ಅಲ್ಟ್-ರೈಟ್’ ನಿಂದ(alt-right) ಎರವಲು ಪಡೆಯಲಾಗಿದೆ. ಅಲ್ಟ್ ರೈಟ್ ಎಂಬುದು ನವ ನಾಝಿ(neo-Nazi) ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಮೀಸಲಾತಿ, ಅಲ್ಪಸಂಖ್ಯಾತರ ಹಕ್ಕುಗಳ ಪರವಾದ ಚಿಂತನೆ ಹಾಗೂ ಉದಾರವಾದಿ ನೀತಿಗಳನ್ನು ಬಹಿರಂಗವಾಗಿ ವಿರೋಧಿಸುತ್ತದೆ. ಭಾರತದಲ್ಲಿ ಸಾಮಾನ್ಯವಾಗಿ ಮೇಲ್ಜಾತಿಯ ಹಿಂದೂಗಳು ಪಾಶ್ಚಾತ್ಯ ಅಲ್ಟ್ ರೈಟ್‌ನ ಚಿಹ್ನೆಗಳು ಮತ್ತು ಸಂಕೇತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವುಗಳಲ್ಲಿ ‘ಪೆಪೆ ದ ಫ್ರಾಗ್’ (Pepe the Frog) ಎಂಬ ಮೀಮ್ ಕೂಡ ಒಂದು.

ಸಂಶೋಧಕ ಅಲಿಶಾನ್ ಜಫಾರಿ ‘ಈ ಮೀಮ್2005 ರಲ್ಲಿ ಯಾವುದೇ ರಾಜಕೀಯ ಸಂಬಂಧವಿಲ್ಲದ ಒಂದು ಕಾರ್ಟೂನ್ ಪಾತ್ರವಾಗಿ ಹುಟ್ಟಿಕೊಂಡಿತು. 2015 ರ ವೇಳೆಗೆ ಅದು ಅಪಾರ ಜನಪ್ರಿಯತೆ ಪಡೆದು ಒಂದು ‘ಕಲ್ಟ್’ ಸಂಕೇತವಾಗಿ ಬೆಳೆಯಿತು. ಆನಂತರ ಅಮೆರಿಕದ ಬಿಳಿಯ ಶ್ರೇಷ್ಠತಾವಾದಿ (white supremacist) ಗುಂಪುಗಳು ಅದನ್ನು ತಮ್ಮ ರಾಜಕೀಯ ಸಂಕೇತವಾಗಿ ಬಳಸಿಕೊಳ್ಳಲು ಆರಂಭಿಸಿದವು. ಈ ಆನ್‌ಲೈನ್ ತಾಣಗಳು ಕಟ್ಟುನಿಟ್ಟಾದ ಸಾಂಸ್ಥಿಕ ರಚನೆಯನ್ನು ಹೊಂದಿಲ್ಲವಾದರೂ ಅವು ಒಂದು ವಿಶಿಷ್ಟ ಉಪಸಂಸ್ಕೃತಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅವು ಹೊಸದಾಗಿರುವುದರ ಜೊತೆಗೆ ದ್ವೇಷವನ್ನು ಪ್ರತಿನಿಧಿಸುವ ಪೌರಾಣಿಕ ಸಂಕೇತಗಳು ಮತ್ತು ಪ್ರತಿಮೆಗಳ ಪರಂಪರೆಯಿಂದಲೂ ಸ್ಫೂರ್ತಿ ಪಡೆದಿರುವ ವಿಶಿಷ್ಟ ದೃಶ್ಯ ಭಾಷೆಯನ್ನು (visual language) ರೂಪಿಸಿವೆ’ ಎಂದು ಬರೆಯುತ್ತಾರೆ. ಕೆಲವು ವರ್ಷಗಳ ಹಿಂದೆ ಬ್ರಾಹ್ಮಣ, ರಜಪೂತ್ ಯುವಕ/ಯುವತಿಯರು ಆರ್ಯನ್-ಬ್ರಾಹ್ಮಣ ಶ್ರೇಷ್ಠತೆಯನ್ನು ಹೇಳುವ, ದಲಿತರು, ಮುಸ್ಲಿಮರನ್ನು ಹೀಯಾಳಿಸುವ ಬುಲ್ಲಿ ಡೀಲ್ಸ್ ಮತ್ತು ಸುಲ್ಲಿ ಡೀಲ್ಸ್ ಎನ್ನುವ ಎರಡು ವಿಕೃತಿ ಆ್ಯಪ್‌ಗಳನ್ನು ಪ್ರಾರಂಭಿಸಿದ್ದರು. ನಂತರ ಇವನ್ನು ನಿಷೇಧಿಸಲಾಗಿತ್ತು.

ಇವರನ್ನು ಟ್ರಾಡ್ ಎಂದಾದರೂ ಕರೆಯಿರಿ ಅಥವಾ ಮತ್ಯಾವುದೇ ನುಡಿಕಟ್ಟು ಬಳಸಿರಿ ಇವರ ತೀವ್ರವಾದಿ ಬಲಪಂಥೀಯ ವಿಕೃತಿ ಮತ್ತಷ್ಟು ಬೆಳೆಯುತ್ತಾ ಹೋಗುತ್ತಿದೆ. ಇಂದು ಈ ತೀವ್ರ ಬಲಪಂಥೀಯರು ಹಿಂದೂ ಹೃದಯ ಸಾಮ್ರಾಟ್ ಎಂದು ವೈಭವೀಕರಿಸಲ್ಪಟ್ಟ ಆರೆಸ್ಸೆಸ್ ಸಿದ್ಧಾಂತ ಆಧರಿಸಿ ಆಡಳಿತ ನಡೆಸುತ್ತಿರುವ ಪ್ರಧಾನಿ ಮೋದಿಯವರನ್ನು ‘ಮೃದುವಾದಿ’, ‘ಮುಸ್ಲಿಮರ ತುಷ್ಟೀಕರಣ’ ಮಾಡುತ್ತಾರೆ ಎಂದು ಟೀಕಿಸುತ್ತಾರೆ. ಮಾರ್ಚ್ 2021 ರಲ್ಲಿ ವಂಡರರ್(@ಭಿಕ್ಷ್ಶು) ಎನ್ನುವ ವ್ಯಕ್ತಿ ‘‘ಮೋದಿ ಎಲ್ಲ ದೇವಾಲಯಗಳನ್ನು ಮುಕ್ತಗೊಳಿಸಿದರೂ, ಆರ್‌ಟಿಇ ಕಾಯ್ದೆಯನ್ನು ರದ್ದುಗೊಳಿಸಿದರೂ, ಧಾರ್ಮಿಕ ಪೂಜಾ ಸ್ಥಳಗಳ ಕಾಯ್ದೆಯನ್ನು(Places of Worship Act) ತೆಗೆದುಹಾಕಿದರೂ, ಪ್ರತಿಯೊಂದು ಶಾಲೆಯಲ್ಲೂ ಭಗವದ್ಗೀತೆ ಪಾಠವನ್ನು ಕಡ್ಡಾಯಗೊಳಿಸಿದರೂ, ಮುಸ್ಲಿಮರ ಪೌರತ್ವ ಮತ್ತು ಸಂತಾನೋತ್ಪತ್ತಿ ಹಕ್ಕುಗಳನ್ನು ಕಸಿದುಕೊಂಡರೂ ಸಹ ಟ್ವಿಟರ್‌ನಲ್ಲಿ ಒಂದು ಟ್ರಾಡ್ ಮಂಡಳಿ ಅವರನ್ನು ಮೌಲಾನಾ ಮೋದಿ ಎಂದು ಕರೆಯುತ್ತಾ ಇನ್ನೂ ಸಾಕಷ್ಟು ಮಾಡಿಲ್ಲ ಎಂದು ಟೀಕಿಸುತ್ತಲೇ ಇರುತ್ತದೆ’’ ಎಂದು ಟ್ವೀಟ್ ಮಾಡುತ್ತಾರೆ

ಈ ತೀವ್ರ ಬಲಪಂಥೀಯರು ಸತಿ ಪದ್ಧತಿ, ವರ್ಣಾಶ್ರಮ ವ್ಯವಸ್ಥೆ, ಜಾತಿ ಪದ್ಧತಿ, ಜಾತಿ ದೌರ್ಜನ್ಯ, ಮುನುಧರ್ಮವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಾರೆ. ಗಾಂಧಿಯನ್ನು ಹತ್ಯೆ ಮಾಡಿದ ಚಿತ್ಪಾವನ ಬ್ರಾಹ್ಮಣ ಗೋಡ್ಸೆ, ಗುಜರಾತ್ ಹತ್ಯಾಕಾಂಡದ ಅಪರಾಧಿ ಬಾಬು ಬಜರಂಗಿ, ಕ್ರಿಶ್ಚಿಯನ್ ಮಿಷನರಿ ಸ್ಟೇನ್ಸ್ ಕುಟುಂಬವನ್ನು ಜೀವಂತವಾಗಿ ದಹಿಸಿದ ದಾರಾ ಸಿಂಗ್, ಕೂಲಿ ಕಾರ್ಮಿಕರಾಗಿದ್ದ ಮೌಲಾನಾ ಅಫ್ಝಲ್‌ರನ್ನು ಕೊಲೆ ಮಾಡಿದ ಶಂಭುಲಾಲ್ ರೇಗರ್ ತರಹದವರು ಈ ತೀವ್ರ ಬಲಪಂಥಿಯರಿಗೆ ಆದರ್ಶಪ್ರಾಯರಾಗಿದ್ದಾರೆ.

ಈ ಆರೆಸ್ಸೆಸ್ ತಮ್ಮ ಸಿದ್ಧಾಂತಗಳ ಅನುಷ್ಠಾನಕ್ಕಾಗಿ ಮತ್ತು ಮೋದಿ ತಮ್ಮ ರಾಜಕೀಯ ಲಾಭಕ್ಕಾಗಿ ಬೆಳೆಸಿದ ಈ ಬಲಪಂಥೀಯರು ಇಂದು ತೀವ್ರವಾದಿಗಳಾಗಿ ಬೆಳೆದಿದ್ದಾರೆ. ಹಿಂದೊಮ್ಮೆ ಬ್ರಾಹ್ಮಣ, ಬನಿಯಾ ಸಂಘಟನೆಯಾಗಿದ್ದ ಆರೆಸ್ಸೆಸ್ ಅದರಿಂದ ಕಳಚಿಕೊಂಡು ಹಿಂದುಳಿದ ವರ್ಗ, ದಲಿತ, ಆದಿವಾಸಿ ಯುವಜನತೆಯನ್ನು ಹಿಂದುತ್ವ ರಾಜಕಾರಣದ ನೆಪದಲ್ಲಿ ಆಕರ್ಷಿಸಿ ಬಾಣಗಳಂತೆ ಬಳಸಿಕೊಳ್ಳುತ್ತಿದೆ. ಇವರಿಗೆ ಮತ್ತು ಮೋದಿಯವರಿಗೆ ಆಂತರಿಕವಾಗಿ ಮನಸ್ಸಿಲ್ಲದಿದ್ದರೂ ಅಧಿಕಾರ ರಾಜಕಾರಣಕ್ಕಾಗಿ ಮೀಸಲಾತಿಯನ್ನು ಮುಂದುವರಿಸುವುದು ಅನಿವಾರ್ಯವಾಗಿದೆ. ಆದರೆ ಇವರೇ ಬೆಳೆಸಿದ ಕಾಲಾಳುಗಳು ಇವರ ಹೊಂದಾಣಿಕೆ ರಾಜಕೀಯವನ್ನು ಧಿಕ್ಕರಿಸಿ ಇಂದು ವಂಚಿತ ಸಮುದಾಯಗಳ ವಿರುದ್ಧ ವಿಕೃತಿಯನ್ನು ಪ್ರದರ್ಶಿಸುತ್ತಿದ್ದಾರೆ. ಇದರ ಮುಂದುವರಿದ ಭಾಗವೇ ಈಗ ಬ್ರಾಹ್ಮಣವಾದಿಗಳು ಶುರು ಮಾಡಿರುವ ‘ಮೀಸಲಾತಿ ವಿರೋಧಿ ಆಂದೋಲನ’. ಈ ತೀವ್ರವಾದಿ ಬಲಪಂಥದ ಬೆಳವಣಿಗೆಯ ಶ್ರೇಯಸ್ಸು ಆರೆಸ್ಸೆಸ್ ಹಾಗೂ ಬಿಜೆಪಿಗೆ ಸಲ್ಲುತ್ತದೆ

ಈಗ ‘ಮೀಸಲಾತಿ ವಿರೋಧಿ ಆಂದೋಲನ’ ಪ್ರಚಾರ ಮಾಡುತ್ತಿರುವ ಮನುವಾದಿ ಅಜೀತ್ ಭಾರ್ತಿ ಈ ಹಿಂದೆ ಈ ಟ್ರಾಡ್‌ಗಳನ್ನು ಬೆಂಬಲಿಸಿದ್ದರು. 11 ಫೆಬ್ರವರಿ 2022ರ ‘ದ ವೈರ್’ ಸಾಮಾಜಿಕ ಮಾಧ್ಯಮದಲ್ಲಿ ‘OpIndia’ದ ಮಾಜಿ ಸಂಪಾದಕ ಅಜೀತ್ ಭಾರ್ತಿ ಅವರು ‘ಸುಲ್ಲಿ ಡೀಲ್ಸ್’ ಆ್ಯಪ್‌ನ್ನು ಪ್ರಚಾರ ಮಾಡಿದ್ದರು. ಅವರು ಹೀಗೆ ಬರೆದಿದ್ದರು, ‘‘ಯಾರೋ ಒಬ್ಬರು ಸುಲ್ಲಿ ಡೀಲ್ಸ್ ಎಂಬ ಆ್ಯಪ್‌ನ್ನು ನಿರ್ಮಿಸಿದ್ದಾರೆ. ಇದು ಓಪನ್ ಸೋರ್ಸ್ ಆಗಿದೆ. ನಿಮ್ಮ ನೆಚ್ಚಿನ ‘ಸುಲ್ಲಿ’ಯನ್ನು ಇಲ್ಲಿ ಪಡೆಯಬಹುದು ಎಂದು ಅವರು ಹೇಳಿಕೊಂಡಿದ್ದಾರೆ. ಸಮಾಜದ ಹಿತಕ್ಕಾಗಿ ಅವರು ಇದನ್ನು ಮಾಡಿದ್ದಾರೆ..’’ ಇದಾದ ಬಳಿಕ ಅವರು ಆ ಆ್ಯಪ್‌ನ ಲಿಂಕ್‌ನ್ನು ಹಂಚಿ ಕೊಂಡಿದ್ದರು. ಮತ್ತೊಂದು ಟ್ವೀಟ್‌ನಲ್ಲಿ ಅವರು ತಮ್ಮ ಉದ್ದೇಶವೆಂದು ಹೇಳಿದ್ದರು ಎಂದು ವರದಿಯಾಗಿದೆ.

ಈ ಅಜೀತ್ ಭಾರ್ತಿಯನ್ನು ಬೆಂಬಲಿಸುವ ತೀವ್ರ ಬಲಪಂಥೀಯರು ಮೀಸಲಾತಿ ವಿರೋಧಿ ಪ್ರಚಾರದ ಜೊತೆಗೆ ಸಂವಿಧಾನವನ್ನು ರದ್ದುಗೊಳಿಸಿ ಮನುಧರ್ಮವನ್ನು ಜಾರಿಗೊಳಿಸಬೇಕೆಂದು ಆಗ್ರಹಿಸುತ್ತಾರೆ, ದಲಿತರನ್ನು ಜನಾಂಗೀಯವಾಗಿ ಕೀಳುಮಟ್ಟದಲ್ಲಿ ನಿಂದಿಸುತ್ತಾರೆ. ಪಶ್ಚಿಮದ ನವ ನಾಝಿವಾದಿಗಳಂತೆ ಈ ತೀವ್ರ ಬಲಪಂಥೀಯರು ಗುಂಪು ಗುಂಪಾಗಿ ಕೆಲಸ ಮಾಡುತ್ತಾರೆ. ಮೋದಿ ನೇತೃತ್ವದ ಸರಕಾರ ತಮ್ಮದು ಎನ್ನುವ ಅಪರಿಮಿತ ವಿಶ್ವಾಸದಲ್ಲಿ ಕಾನೂನು, ನ್ಯಾಯಾಂಗಕ್ಕೆ ಅಂಜದೆ ಬಹಿರಂಗವಾಗಿ ತಮ್ಮ ವಿಕೃತಿ ಪ್ರದರ್ಶಿಸುತ್ತಾರೆ. ಅತ್ಯಾಚಾರಿಗಳನ್ನು ಹಾರ ಹಾಕಿ ಸ್ವಾಗತಿಸುವ ಬಿಜೆಪಿ ಮುಖಂಡರು ಈ ತೀವ್ರ ಬಲಪಂಥೀಯರಿಗೆ ಸ್ಫೂರ್ತಿಯಾಗಿದ್ದಾರೆ ಎಂದರೆ ಉತ್ಪ್ರೇಕ್ಷೆಯಲ್ಲ. ತಮ್ಮ ‘The Nationalism in the Digital Age: Fun as a Meta Practice of Extreme Speech’ ಎಂಬ ಸಂಶೋಧನಾ ಲೇಖನದಲ್ಲಿ, ಸಹನಾ ಉಡುಪ ಅವರು ಬಲಪಂಥೀಯರ ಸಜ್ಜುಗೊಳಿಸುವಿಕೆಯಲ್ಲಿ ‘ಮೋಜು’ ಒಂದು ಪ್ರಮುಖ ಅಂಶವಾಗಿದೆ ಎಂದು ವಾದಿಸುತ್ತಾ ‘ಇಂತಹ ಚಟುವಟಿಕೆಗಳು ಕ್ರಮೇಣ ಗುಂಪಿನ ಗುರುತಾಗುತ್ತದೆ ಮತ್ತು ಸಾಮೂಹಿಕವಾಗಿ (ಕೆಲವೊಮ್ಮೆ ಅನಾಮಧೇಯವಾಗಿ) ಆಕ್ರಮಣಶೀಲತೆಯನ್ನು ಸಂಭ್ರಮಿಸುವ ಸಮೂಹ ಸನ್ನಿ ಸಂಸ್ಕೃತಿಯಾಗಿ ಬೆಳೆಯುತ್ತವೆ’ ಎಂದು ಬರೆಯುತ್ತಾರೆ

ಇಂದು ‘ಮೀಸಲಾತಿ ರದ್ದುಗೊಳಿಸಿ ಆಂದೋಲನ’ ಪ್ರಚಾರ ಮಾಡುತ್ತಿರುವ ಈ ನವ ನಾಝಿವಾದಿಗಳು ಸದ್ಯಕ್ಕೆ ‘ಒಂದು ದೇಶ, ಒಂದು ಗುರುತು, ಇಂಡಿಯನ್’ ಎಂದು ಹೇಳುತ್ತಿದ್ದಾರೆ. ಇದೊಂದು ಮುಖವಾಡವಷ್ಟೆ. ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಅವರ ‘ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವ’ ಕಥನವನ್ನು ನಾಶ ಮಾಡುತ್ತಾರೆ. ಮೇಲ್ನೋಟಕ್ಕೆ ‘ಮೆರಿಟ್ ಮುಖ್ಯ, ಜಾತಿ ಅಲ್ಲ’ ಎಂದು ವಾದಿಸುವ ಈ ತೀವ್ರ ಬಲಪಂಥೀಯರು ಇದರ ಮುಂದುವರಿದ ಭಾಗವಾಗಿ ವಂಚಿತ ಸಮುದಾಯಗಳಿಗಾಗಿ ಬಾಬಾ ಸಾಹೇಬರು ರೂಪಿಸಿದ ‘ಪ್ರಾತಿನಿಧ್ಯ, ಸಬಲೀಕರಣ, ವಿಮೋಚನೆ’ ಆಶಯವನ್ನು ಸಹ ತಿರಸ್ಕರಿಸಿ ಮರಳಿ ಪ್ರಾಚೀನ ಭಾರತದ ಚಾತುರ್ವರ್ಣ ವ್ಯವಸ್ಥೆಯನ್ನು ಪ್ರತಿಪಾದಿಸುತ್ತಾರೆ. ಸದ್ಯಕ್ಕೆ ಇದು ಎಲ್ಲಿಯೂ ಮೂರ್ತವಾಗಿ ಗೋಚರವಾಗದಿದ್ದರೂ ಸಹ ‘ಮೀಸಲಾತಿ ವಿರೋಧಿ’ ಪ್ರಚಾರ ಇದರ ಮುನ್ನುಡಿಯಾಗಿದೆ. ಪ್ರಸ್ತುತ ಈ ಪ್ರಚಾರದ ಪರ ವಹಿಸದೆ ತಟಸ್ಥವಾಗಿರುವಂತೆ ನಟಿಸುತ್ತಿರುವ ಆರೆಸ್ಸೆಸ್‌ಗೆ ಅಂತರ್ಯದಲ್ಲಿ ಖೀರು ಕುಡಿದಷ್ಟು ಖುಷಿಯಾಗಿದೆ. ಒಂದೆಡೆ ತಾನು ‘ಮೀಸಲಾತಿ ಪರ’ ಎಂದು ತೊಟ್ಟಿಲು ತೂಗುತ್ತಾ, ಮತ್ತೊಂದೆಡೆ ತೀವ್ರ ಬಲಪಂಥೀಯರನ್ನು ಒಳಗಿಂದ ಚಿವುಟುತ್ತಾ ‘ಮೀಸಲಾತಿ ರದ್ದು’ ಎಂದು ಪ್ರಚಾರ ಶುರು ಮಾಡಿದೆ. ‘ಎಲ್ಲಿಯವರೆಗೆ ಜಾತಿ ಅಸಮಾನತೆ, ತಾರತಮ್ಯ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಇರುತ್ತದೆ’ ಎನ್ನುವ ಸಾರ್ವಕಾಲಿಕ ಸತ್ಯ ಆರೆಸ್ಸೆಸ್‌ಗೆ ಗೊತ್ತಿದ್ದೂ ಅದನ್ನು ಸುಳ್ಳು ಮಾಡಲು ಏನೆಲ್ಲಾ ಲಗಾಟಿ ಹೊಡೆದರೂ ಅದು ಸಾಧ್ಯವಿಲ್ಲ ಎಂಬುದು ಸಹ ವಾಸ್ತವ

share
ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
Next Story
X