Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ನೆಹರೂ-ನೂರೊಂದು ನೆನಪು

ನೆಹರೂ-ನೂರೊಂದು ನೆನಪು

ಕೆ.ಸಿ. ಶಂಕರ್, ಚಿಕ್ಕಮಗಳೂರುಕೆ.ಸಿ. ಶಂಕರ್, ಚಿಕ್ಕಮಗಳೂರು14 Nov 2026 12:13 PM IST
share
ನೆಹರೂ-ನೂರೊಂದು ನೆನಪು

ಮಕ್ಕಳ ನೆಹರೂ

ಅವರ ‘glimpses of world history’ ಜಗತ್ತಿನ ಮಕ್ಕಳ ಸಾಹಿತ್ಯದಲ್ಲಿ ಒಂದು ಶ್ರೇಷ್ಠ ಕೃತಿ ಎನ್ನಬಹುದು. ಗ್ರೀಕ್ ನಾಗರಿಕತೆಯಿಂದ ಸುಮಾರು 1934ರವರೆಗೂ, ಜಗತ್ತಿನ ಇತಿಹಾಸ, ತತ್ವಜ್ಞಾನ, ಸಂಸ್ಕೃತಿ ನಾಗರಿಕತೆಗಳ ವಿಕಾಸದ ವರ್ಣನೆಯನ್ನು ಸವಿಸ್ತಾರವಾಗಿ, ಸೊಗಸಾಗಿ ಮಕ್ಕಳ ಭಾಷೆಯಲ್ಲೇ ಮಕ್ಕಳಿಗೆ ಉಣಬಡಿಸಿದ್ದಾರೆ. ನೆಹರೂ ಮಕ್ಕಳ ನೆಹರೂ, ಚಾಚಾ ನೆಹರೂ ಆಗುವುದು ಈ ಗ್ರಂಥದಿಂದಲೇ ಅನಿಸುತ್ತದೆ. ಮಕ್ಕಳಿಗೆ ಪಾಠ ಮಾಡುವ, ಬರೆಯುವ ಭಾಷೆ ಹೇಗಿರಬೇಕು ಎಂದು ನೆಹರೂ ಈ ಪುಸ್ತಕದ ಮೂಲಕ ಒಬ್ಬ ಒಳ್ಳೆಯ ಮಕ್ಕಳ ಮತ್ತು ಶಿಕ್ಷಣ ತಜ್ಞರಂತೆ ಕಾಣುತ್ತಾರೆ. ಇದು ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಓದಲೇಬೇಕಾದ ಒಂದು ಶ್ರೇಷ್ಠ ಗ್ರಂಥ. ಪ್ರಪಂಚದ ಎಲ್ಲಾ ಮಕ್ಕಳಿಗೂ ನೆಹರೂರವರ ವಿಶಿಷ್ಟ ಕೊಡುಗೆ ಇದಾಗಿದೆ. CBT ಮತ್ತು NBT(1957)ಗಳು ಮಕ್ಕಳಿಗೆ ನೆಹರೂ ನೀಡಿದ ವಿಶೇಷ ಕೊಡುಗೆಗಳು. ಮಕ್ಕಳಲ್ಲಿ, ಯುವಕರಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸಿ ವೈಜ್ಞಾನಿಕ ಮತ್ತು ಸಾಮಾಜಿಕ ಪ್ರಜ್ಞೆ ಮೂಡಿಸುವುದಕ್ಕಾಗಿ ಸರಳ ಭಾಷೆಯಲ್ಲಿ ಶ್ರೇಷ್ಠ ಲೇಖಕರ ಪುಸ್ತಕಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ವಿದ್ಯಾರ್ಥಿಗಳಿಗೆ ದೊರಕಿಸುವುದಾಗಿದೆ.

ಪ್ರಧಾನಮಂತ್ರಿಯಾಗಿ ನೆಹರೂ ಪಡೆದುಕೊಂಡ ವಿಭಜಿತ, ಬ್ರಿಟಿಷ್ ಶೋಷಿತ, ವೈಜ್ಞಾನಿಕವಾಗಿ, ತಾಂತ್ರಿಕವಾಗಿ, ಶೈಕ್ಷಣಿಕವಾಗಿ ಜರ್ಜರಿತವಾದ ಭಾರತ ಹಿಂದೆಂದೂ ಕಾಣದ ಗಂಭೀರ ಸಮಸ್ಯೆ ಸವಾಲುಗಳ ಆಗರವಾಗಿತ್ತು. ಸ್ವಾತಂತ್ರ್ಯದೊಂದಿಗೇ ಜನಿತವಾದ ಕೋಮು ದಳ್ಳುರಿ-ಹಿಂಸಾಚಾರ, ರಕ್ತಪಾತ, ನಿರಾಶ್ರಿತರ ಸಮಸ್ಯೆ, ಗಡಿ ಸಮಸ್ಯೆ, ಪಾಕ್ ದಾಳಿ, ಗಾಂಧೀಜಿ ಹತ್ಯೆ, ಸಂವಿಧಾನ ರಚನಾ ಜವಾಬ್ದಾರಿ ಹೀಗೆ ಸಮಸ್ಯೆಗಳ ಸುನಾಮಿಯೇ ಪ್ರಧಾನಿ ಪಟ್ಟವನ್ನು ಆವರಿಸಿತ್ತು.

ಸ್ವಾತಂತ್ರ ಹೋರಾಟದಲ್ಲಿ ಪಾತ್ರ, ಅಪ್ರತಿಮ ವಿದ್ವತ್ಪಾಂಡಿತ್ಯ, ದೇಶ ಪ್ರೇಮ, ರಾಜನೀತಿಜ್ಞತೆ, ವಿಚಾರಗಳಲ್ಲಿ ನೆಹರೂ ಅವರ ಮೆರುಗನ್ನು ಮೀರಿಸುವವರ ಸಂಖ್ಯೆ ಆಧುನಿಕ ಭಾರತದಲ್ಲಿ ಅತೀ ವಿರಳ.

ಸ್ವಾತಂತ್ರ್ಯ ಚಳವಳಿಯಲ್ಲಿ ರೌಲಟ್ ಕಾಯ್ದೆ- ಜಲಿಯನ್ ವಾಲಾಬಾಗ್ ಹತ್ಯಾಕಾಂಡ ವಿರುದ್ಧದ ಚಳವಳಿಯಿಂದ(1919) ಹಿಡಿದು ಮೌಂಟ್ ಬ್ಯಾಟನ್ ಯೋಜನೆ, ಸಂವಿಧಾನ ರಚನೆವರೆಗೂ (1947)ಸಂಘಟನೆ, ಜನರನ್ನು ಪ್ರೇರೇಪಿಸಿ ಸ್ಫೂರ್ತಿ ತುಂಬಿ, ಹೋರಾಟದ ಅಪ್ರತಿಮ ಕ್ರಿಯಾತ್ಮಕ ಮತ್ತು ಸಂಘಟನಾತ್ಮಕ ಶಕ್ತಿಯಾಗಿದ್ದವರು ನೆಹರೂ. ಸ್ವಾತಂತ್ರ್ಯ ಚಳವಳಿಗೆ ತಾತ್ವಿಕ, ಪ್ರಜಾಸತಾತ್ಮಕ, ಜಾತ್ಯತೀತ ಮತ್ತು ಸಮಾಜವಾದದ ಚೌಕಟ್ಟನ್ನು ಕೊಟ್ಟು, ಅದನ್ನು ಜಾಗತಿಕ ಮಟ್ಟದಲ್ಲಿ ಸಾಮ್ರಾಜ್ಯಶಾಹಿ ಮತ್ತು ಶೋಷಣೆಯ ವಿರುದ್ಧದ ಹೋರಾಟದ ಭಾಗವನ್ನಾಗಿ ಮಾಡಿದ ಕೀರ್ತಿ ಜವಾಹರಲಾಲ್ ನೆಹರೂರವರಿಗೆ ಸಲ್ಲುತ್ತದೆ.

ಅವರ ಆದರ್ಶ, ತತ್ವ ಸಿದ್ಧಾಂತಗಳು, ಪ್ರಧಾನಿಯಾಗಿ ಪ್ರಾಯೋಗಿಕ ನೆಲೆಗಟ್ಟಿನಲ್ಲಿ ಪಡೆದ ಸಾಫಲ್ಯತೆಯ ಬಗ್ಗೆ ತರ್ಕ-ವಿವಾದಗಳಿವೆ. ಅವರ ಸಾಧನೆ ಮತ್ತು ಸೋಲುಗಳ ವಿಶ್ಲೇಷಣೆ ಇತಿಹಾಸಕಾರರ ಮತ್ತು ಚಿಂತಕರ ಲೆಕ್ಕ ಪರಿಶೋಧನೆಯಲ್ಲಿ ನಿರಂತರವಾಗಿ ಬಿತ್ತರವಾಗಿದೆ. ಇದರ ಕೆಲವು ಮಜಲುಗಳನ್ನು ಅವರ ಜನ್ಮದಿನ, ಮಕ್ಕಳ ದಿನಾಚರಣೆಯಂದು ಅವಲೋಕನ ಮಾಡುವುದು ಸೂಕ್ತ. ಕೆಲವು ವಿದ್ವಾಂಸರ ಪಂಥ ಅವರನ್ನು ಖಳನಾಯಕನ್ನಾಗಿ ಬಿಂಬಿಸಿದರೆ, ಕೆಲವರು ವೈಭವೀಕರಿಸಿ ಶ್ರೇಷ್ಠ ನಾಯಕನಾಗಿ ಬಿಂಬಿಸಿದ್ದಾರೆ. ಸಾಧನೆ ಮತ್ತು ಸೋಲುಗಳ ಎರಡೂ ಸರಮಾಲೆಯನ್ನು ಧರಿಸಿದೆ ನೆಹರೂರವರ ವ್ಯಕ್ತಿತ್ವ.

ಸಂವಿಧಾನದ ಪೀಠಿಕೆಯು ಭಾರತದ ಸಂವಿಧಾನದ ಆತ್ಮ. ಸಂವಿಧಾನದ ಎಲ್ಲಾ ಆದರ್ಶಗಳನ್ನು ಸೆರೆಹಿಡಿದಿರುವ ಸೂತ್ರವೇ ಈ ಪೀಠಿಕೆ. ಅಂಬೇಡ್ಕರ್ ಅವರು ಸಂವಿಧಾನದ ಪಿತಾಮಹರಾದರೆ, ಜವಾಹರಲಾಲ್ ನೆಹರೂರವರು ಸಂವಿಧಾನದ ಪೀಠಿಕೆಯ ಪಿತಾಮಹ. ಸಂವಿಧಾನ ರಚನಾ ಸಭೆಯಲ್ಲಿ ಈ ಉದ್ದೇಶ ನಿರ್ಣಯಗಳನ್ನು ಮಂಡಿಸಿದವರೇ ಜವಾರಲಾಲ್ ನೆಹರೂರವರು (ಡಿಸೆಂಬರ್ 13,1946). ನೆಹರೂರವರು ರಚಿಸಿದ ಮೊದಲನೇ ಸಚಿವ ಸಂಪುಟ ಕೇವಲ ಕಾಂಗ್ರೆಸ್ ಪಕ್ಷದ ಕ್ಯಾಬಿನೆಟ್ ಆಗದೆ, ರಾಷ್ಟ್ರೀಯ ಸರಕಾರದ ಸಚಿವ ಮಂಡಳಿಯಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಸೇರದ ಡಾ. ಬಿ.ಆರ್. ಅಂಬೇಡ್ಕರ್, ಶ್ಯಾಮ ಪ್ರಸಾದ್ ಮುಖರ್ಜಿ, ಷಣ್ಮುಗಂ ಚೆಟ್ಟಿ, ಬಲ್ದೇವ್ ಸಿಂಗ್, ಜಾನ್ ಮಥಾಯಿ, ಸಿ.ಎಚ್. ಬಾಬಾರಂತಹ ಅದ್ಭುತ ಮೇದಾವಿ ರಾಜಕೀಯ ಪಟುಗಳನ್ನು ಹೊಂದಿದ್ದು, ಇದು ನೆಹರೂರವರ ವಿಶಾಲ ದೃಷ್ಟಿ ಮತ್ತು ಪ್ರಜಾಸತಾತ್ಮಕ ಚಿಂತನೆಗೆ ಹಿಡಿದ ಕನ್ನಡಿ.

ಭಾರತದಲ್ಲಿದ್ದ 562 ಸಂಸ್ಥಾನಗಳನ್ನು ಸಂಯೋಗಿಸಿ ದೇಶದ ಸಾರ್ವಭೌಮ, ಸುಭದ್ರತೆ ಮತ್ತು ಏಕತೆಗೆ ಸದೃಢ ಬುನಾದಿಯನ್ನು ಹಾಕಿದರು. ಅದರಲ್ಲೂ ಹೈದರಾಬಾದ್, ಜುನಾಘಡ ಮತ್ತು ತಿರುವಾಂಕೂರುಗಳನ್ನು ಒಕ್ಕೂಟಕ್ಕೆ ಸೇರ್ಪಡಿಸಿದ್ದು ಗೃಹಮಂತ್ರಿ ಸರ್ದಾರ್ ಪಟೇಲ್ ಮತ್ತು ನೆಹರೂರವರ ಅಪ್ರತಿಮ ಸಾಧನೆ. ಹೈದರಾಬಾದ್ ಪಟೇಲರ ‘ಪೊಲೀಸ್ ಆಕ್ಷನ್’ ಇಲ್ಲದಿದ್ದರೆ ದಕ್ಷಿಣ ಭಾರತದಲ್ಲಿ ಇನ್ನೊಂದು ‘ಪಾಕಿಸ್ತಾನ’ವಾಗುತ್ತಿತ್ತು. ಕಾಶ್ಮೀರವನ್ನು ಸ್ವತಂತ್ರ ದೇಶವೆಂದೇ ಘೋಷಣೆ ಮಾಡಲು ಪಣ ತೊಟ್ಟಿದ್ದ ರಾಜಹರಿಸಿಂಗ್ ಪಾಕಿಸ್ತಾನದ ದಾಳಿಗೆ ಹೆದರಿ, ಭಾರತದ ಸಹಾಯವನ್ನು ಕೋರಿದಾಗ ಪಟೇಲರು ನೆಹರೂರವರ ಸಹಮತದಂತೆ, ತನ್ನ ಚಾಣಾಕ್ಷತನ ಮತ್ತು ಸಮಯ ಪ್ರಜ್ಞೆಯಿಂದ ಹರಿಸಿಂಗ್‌ನನ್ನು ದಿಲ್ಲಿಗೆ ಕರೆತಂದು ‘ಪ್ರವೇಶದ ಒಪ್ಪಂದಕ್ಕೆ’ ಸಹಿ ಹಾಕಿಸಿದ್ದು ಆದುನಿಕ ದೇಶ ನಿರ್ಮಾಣದಲ್ಲಿ ಐತಿಹಾಸಿಕ ಘಟನೆ. ಇದನ್ನು ಒಪ್ಪದ ಜಿನ್ನಾ ಕಾಶ್ಮೀರದ ಮೇಲೆ ದಾಳಿ ಮಾಡಿ (1947 ಅಕ್ಟೋಬರ್) ಈಗಿನ ಪಿಒಕೆ ಪ್ರದೇಶವನ್ನು ವಶಪಡಿಸಿಕೊಂಡಾಗ, ನಾವು ಪ್ರತಿ ದಾಳಿ ಮಾಡಿ ಅವರನ್ನು ಸದೆಬಡಿದರೂ, ಆಕ್ರಮಿತ ಪ್ರದೇಶವನ್ನು ಪಡೆಯುವ ಶಕ್ತಿ ಇದ್ದರೂ, ನೆಹರೂ ಬಿಕ್ಕಟ್ಟನ್ನು ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಒಪ್ಪಿಸಿ ಸಮಸ್ಯೆಯನ್ನು ಅಂತರ್‌ರಾಷ್ಟ್ರೀಕರಣಗೊಳಿಸಿದ್ದು ಮಹಾಪ್ರಮಾದ ಅನಿಸಿಕೊಂಡಿದೆ. ನೆಹರೂರವರ ಎಡವುವಿಕೆಯನ್ನು ಭಾರತೀಯರು ಇಂದಿಗೂ ಪ್ರಶ್ನೆ ಮಾಡುತ್ತಿದ್ದಾರೆ. ಇದು ಇಂದಿಗೂ ಭಾರತವನ್ನು ಕೊರೆಯುತ್ತಿರುವ ಮತ್ತು ಕಾಡುತ್ತಿರುವ ಶಾಶ್ವತ ಸಮಸ್ಯೆಯಾಗಿದೆ.

ಭಾರತಕ್ಕೆ ನಿಜವಾದ ಶತ್ರು, ಸವಾಲುಗಳು ಇರುವುದು ಪಾಕಿಸ್ತಾನಕ್ಕಿಂತಲೂ ಚೀನಾದಿಂದ ಎಂದು ಸರ್ದಾರ್ ಪಟೇಲರು ನೆಹರೂ ಗಮನಕ್ಕೆ ತಂದಿದ್ದರೂ, ಅದನ್ನು ಗ್ರಹಿಸುವ ಸೂಕ್ಷ್ಮತೆ ನೆಹರೂರವರಲ್ಲಿ ಇರಲಿಲ್ಲ ಎಂಬುದು ಕೆಲವರ ವಾದ. ಭೌಗೋಳಿಕ ರಾಜಕೀಯದಲ್ಲಿ ಚೀನಾವನ್ನು ಉದಾಸೀನ ಮಾಡಿದ್ದು ನೆಹರೂರವರ ರಕ್ಷಣಾ ಮತ್ತು ವಿದೇಶಾಂಗ/ರಕ್ಷಣಾ ನೀತಿಯ ಪ್ರಮಾದ ಎನಿಸುತ್ತದೆ.

ಚೀನಾ ಮತ್ತು ಭಾರತದ ಮಧ್ಯೆ ಶಾಂತಿಯುತ ಸಹಬಾಳ್ವೆ ಕಾಣಲು 1954ರಲ್ಲಿ ಸಹಿ ಹಾಕಿದ ‘ಪಂಚಶೀಲ’ ಒಪ್ಪಂದದಲ್ಲಿ, ಗಡಿ ರೇಖೆಗಳನ್ನು (LAC, Mc Mohan line), ಇತ್ಯರ್ಥ ಗೂಳಿಸಲಿದ್ದಿದ್ದು, ಮುಂದಿನ ದಿನಗಳಲ್ಲಿ ಚೀನಾ, ಗಡಿ ರೇಖೆಯಲ್ಲಿ ಗೊಂದಲವಿದ್ದ ಅಕ್ಸಾಯ್‌ಚಿನ್ ಪ್ರದೇಶದಲ್ಲಿ ರಸ್ತೆ ಮಾಡಿದ್ದನ್ನು ಭಾರತವು ‘Forward policy’ ಮೂಲಕ ಹಿಮ್ಮೆಟ್ಟಿಸಲು ಪ್ರಯತ್ನಿಸಿದಾಗ ಯುದ್ಧಕ್ಕೆ ನಾಂದಿಯಾಯಿತು (1962). ಹಾಗೆಯೇ, ಅರುಣಾಚಲ ಪ್ರದೇಶದ ಗಡಿ ವಲಯದಲ್ಲಿ ಭಾರತ-ಚೀನಾ ಗಡಿರೇಖೆ(1914) ಗೊಂದಲಮಯ ಮಕ್ ಮೊಹನ್ ರೇಖೆಯ ಬಗ್ಗೆಯೂ ನೆಹರೂ ನಿರ್ಲಕ್ಷ್ಯ ಮಾಡಿದ್ದರಿಂದ ಚೀನಾ ಒಳಪ್ರವೇಶ ಮಾಡಿ, ಯುದ್ಧಕ್ಕೆ ಮತ್ತೊಂದು ಕಾರಣವಾಯಿತು. ಪಂಚಶೀಲ ಒಪ್ಪಂದದ ಮಧ್ಯೆಯೂ, ಭಾರತ ವಿವಾದಾತ್ಮಕ ಟಿಬೆಟಿಯನ್ ಬೌದ್ಧ ಧರ್ಮಗುರು ದಲೈಲಾಮರಿಗೆ 1959ರಲ್ಲಿ ಆಶ್ರಯ ಕೊಟ್ಟಿದ್ದು, ಭಾರತ-ಚೀನಾ ಸಂಘರ್ಷಕ್ಕೆ ಇನ್ನೊಂದು ಕಾರಣವಾಯಿತು. ಈ 1962ರ ಮೊದಲನೇ ಭಾರತ-ಚೀನಾ ಯುದ್ಧದಲ್ಲಿ, ಭಾರತಕ್ಕೆ ಆದ ಸೋಲು ನೆಹರೂರವರ ನಿಷ್ಕ್ರಿಯ ರಕ್ಷಣಾ ಮತ್ತು ವಿದೇಶಾಂಗ ನೀತಿಗೆ ಪ್ರತೀಕವಾಯಿತು. ನೆಹರೂರವರು ರಕ್ಷಣಾ ಉತ್ಪಾದನೆ ಮತ್ತು ಆಧುನಿಕತೆ ಬಗ್ಗೆ ನಿರ್ಲಕ್ಷತೆಯು ಈ ವಿಫಲತೆಗೆ ಒಂದು ಕಾರಣ ಎಂದು ಟೀಕಾಕಾರರ ವಾದ.

ನೆಹರೂ ಕಟ್ಟಿಕೊಟ್ಟ ಭಾರತದ ವಿದೇಶಾಂಗ ನೀತಿಯ ಮೂಲತತ್ವ ಅಲಿಪ್ತ ನೀತಿ. ಇದರ ಮೂಲ ಉದ್ದೇಶ- ಎರಡನೇ ಪ್ರಪಂಚ ಮಹಾ ಯುದ್ಧದ ನಂತರ ಹೊರಹೊಮ್ಮಿದ ನವವಸಾಹತು/ಸಾಮ್ರಾಜ್ಯಶಾಹಿ ಅಲೆಗಳನ್ನು ನಿಗ್ರಹಿಸಿ, ಹೊಸರೂಪದ ಶೋಷಣೆಯ ಅಲೆಗಳಿಂದ, ಶೀತಲ ಸಮರ, ಸಂಘರ್ಷದ ಅಡಕತ್ತರಿಯಿಂದ ಆಗಲೇ ಮುಕ್ತಿ ಪಡೆದ ನವಜಾತ ದೇಶಗಳ ಸ್ವಾತಂತ್ರ್ಯವನ್ನು ಸಂರಕ್ಷಣೆಮಾಡಿಕೊಳ್ಳಲು, ಜಾಗತಿಕ ದಕ್ಷಿಣ ದೇಶಗಳ ಸಹಮತ ಬಾಂಧವ್ಯವನ್ನು ಬೆಸೆಯುವುದಾಗಿತ್ತು. ಈಗಲೂ ಇದು ಪ್ರಸ್ತುತವಾಗಿದೆ. ಈ ವಿಚಾರದಲ್ಲಿ ನೆಹರೂ ತತ್ವ ಚಿಂತನೆಗಳಿಗೆ ತಿಲಾಂಜಲಿ ಹೇಳುವುದು ಅಸಾಧ್ಯ ಮತ್ತು ಮಾರಕ. ಜಾಗತಿಕ ದಕ್ಷಿಣ ದೇಶಗಳಾದ (Global south) ಲ್ಯಾಟಿನ್ ಅಮೆರಿಕ, ಆಫ್ರಿಕಾ, ದಕ್ಷಿಣ ಮತ್ತು ಆಗ್ನೇಯ ಏಶ್ಯದ ರಾಷ್ಟ್ರಗಳ ಸಹಬಂಧ, ಇಂದಿನ ಜಾಗತಿಕ ಹವಾಮಾನ ರಾಜಕೀಯ ವ್ಯವಸ್ಥೆ, ಇಂಗಾಲ ಮುಕ್ತ ಹಸಿರು ಶಕ್ತಿಗಳ ಮೇಲಿನ ಪ್ರಾಬಲ್ಯ, ಡಿಜಿಟಲ್ ಆಡಳಿತ ಕೃತಕ ಬುದ್ಧಿಮತ್ತೆ ಚಾಲಿತ ಆರ್ಥಿಕ ವ್ಯವಸ್ಥೆ ಮತ್ತು ಹವಾಮಾನ ರಾಜಕೀಯದ ಹಿನ್ನೆಲೆಯಲ್ಲಿ ಅಲಿಪ್ತ ಸಿದ್ಧಾಂತಗಳು ಇಂದಿಗೂ ಮರುಜೀವ ಪಡೆದು ಪ್ರಸ್ತುತತೆಯನ್ನು ಪಡೆದುಕೊಂಡಿವೆ. ಇಂದು ಚಾಲನೆಯಲ್ಲಿರುವ ಮತ್ತು ಪ್ರಾಮುಖ್ಯತೆ ಹೊಂದಿರುವ BRICKS, SCO, G-70,G20ರಂತಹ ಸಂಘಟನೆಗಳು ನೆಹರೂ ಕನಸು ಕಂಡ ಅಲಿಪ್ತ ನೀತಿಯ ಉದ್ದೇಶಗಳನ್ನೇ ಹೊಂದಿವೆ. ಇಂದಿಗೂ ವಿದೇಶಾಂಗ ನೀತಿಯಲ್ಲಿ, ಜಾಗತಿಕ ದಕ್ಷಿಣ ದೇಶಗಳ ಬಾಂಧವ್ಯವನ್ನು, ಈ ರಾಷ್ಟ್ರಗಳ ಅಭಿವೃದ್ಧಿ ಮತ್ತು ವಿಶ್ವ ಶಾಂತಿಯ ಹಿನ್ನೆಲೆಯಲ್ಲಿ ಬೆಸೆಯುವುದು ಮೂಲ ಮಂತ್ರವಾಗಿದೆ. ಇದು ನೆಹರೂರವರ ವಿದೇಶಾಂಗ ನೀತಿಯ ಪರಂಪರೆ ಮುಂದುವರಿಸುವುದೇ ಆಗಿದೆ.

ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ ನೆಲಕಚ್ಚಿ ಬಡತನದ ಬವಣೆಯಲ್ಲಿದ್ದ ದೇಶವನ್ನು ವೇಗವಾಗಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ನೆಹರೂ ಯೋಜಿತ ಮತ್ತು ಮಿಶ್ರ ಆರ್ಥಿಕತೆ ಅಡಿಯಲ್ಲಿ ಉನ್ನತ ಮಟ್ಟದ ಸಂಶೋಧನಾ ಕೇಂದ್ರಗಳು, ಶೈಕ್ಷಣಿಕ ಸಂಸ್ಥೆಗಳು( IITʼs, IIMʼs, AIMS, BARC, ISRO etc), ವಿಶ್ವವಿದ್ಯಾನಿಲಯಗಳಿಗೆ ಪ್ರಾಧಾನ್ಯವನ್ನು ಕೊಟ್ಟು, ಬೃಹತ್ ಮತ್ತು ಭಾರೀ ಕೈಗಾರಿಕೆಗಳು,(HAL, BEL, BHEL, BEML, HMT etc) ಬಾಕ್ರಾನಂಗಲ್, ಹಿರಾಕುಡ್‌ನಂತಹ ವಿವಿಧೋದ್ದೇಶ ಯೋಜನೆಗಳನ್ನು-ಅಣೆಕಟ್ಟುಗಳನ್ನು ನಿರ್ಮಾಣ ಮಾಡಿದರು. ಇದರಿಂದ ತಳಮಟ್ಟದಿಂದ ಆರ್ಥಿಕ ವ್ಯವಸ್ಥೆಯನ್ನು, ಸ್ವಉದ್ಯೋಗ ಸೃಷ್ಟಿಯ ಮೂಲಕ ಸುಧಾರಿಸುವ ಶಕ್ತಿ ಇರುವ ಗಾಂಧೀಜಿಯವರು ಚಿಂತಿಸಿದ ಗುಡಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನಿರ್ಲಕ್ಷ್ಯವಾಯಿತು. ಆದರೆ ಅವರು ನಿರ್ಮಿಸಿದ ಸರಕಾರಿ ಸ್ವಾಮ್ಯದ ಬೃಹತ್ ಕೈಗಾರಿಕೆಗಳು ಅಧಿಕಾರಿಶಾಹಿ ದೌರ್ಬಲ್ಯ, ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರದಿಂದ ಬಜೆಟ್ ನುಂಗುವ ಬಿಳಿ ಆನೆಗಳಾಗಿ ಕ್ಷಯಿಸಿ ಅಸ್ತಿತ್ವ ಕಳೆದುಕೊಂಡರೂ, ಅವರು ಕಟ್ಟಿದ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಗಳು ಭಾರತವನ್ನು ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ಜಾಗತಿಕವಾಗಿ ಈ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಇಂದಿಗೂ ದೇಶದ ಜ್ಞಾನ ವಿಜ್ಞಾನದ ಶಕ್ತಿ ಕೇಂದ್ರಗಳಾಗಿ ಯುವಶಕ್ತಿಯ ಕನಸಿನ ಚೇತನಗಳಾಗಿದ್ದಾವೆ.

‘‘ನೆಹರೂರವರ ಶಿಕ್ಷಣ ನೀತಿ, ಉನ್ನತ ಶಿಕ್ಷಣ ಕೇಂದ್ರೀಕೃತವಾದ್ದರಿಂದ, ಮಾತೃ ಭಾಷಾ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಿರ್ಲಕ್ಷ್ಯಕ್ಕೆ ಒಳಗಾದವು. ದೀರ್ಘಕಾಲದಲ್ಲಿ ಇದು ದೇಶದ ಅಭಿವೃದ್ಧಿಗೆ ಮಾರಕವಾಯಿತು. ನೆಹರೂರವರ ಶಿಕ್ಷಣ ನೀತಿಯು ತಲೆಕೆಳಗಾದ ಪಿರಮಿಡ್ ಆಯಿತು’’ ಎನ್ನುತ್ತಾರೆ ಅಮರ್ತ್ಯ ಸೇನ್.

ಅವರ ವೈಜ್ಞಾನಿಕ, ಸಮಾಜವಾದಿ, ಜಾತ್ಯತೀತ ಚಿಂತನೆಗಳು ರಾಜ್ಯ ವ್ಯವಸ್ಥೆಯಲ್ಲಿ ಸದೃಢ, ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ರಾಷ್ಟ್ರ ನಿರ್ಮಾಣದಲ್ಲಿ ಎಂದೆಂದಿಗೂ ಸಂಜೀವಿನಿಗಳು. ದೇಶದ ಸುರಕ್ಷತೆ, ಅಭಿವೃದ್ಧಿಗೆ ಭಾರತದ ವೈವಿಧ್ಯಮಯ ಬಹುತ್ವ ಸಂಸ್ಕೃತಿಗಳ ಸಹಬಾಳ್ವೆ ಅನಿವಾರ್ಯ ಮತ್ತು ವಿಚ್ಛಿದ್ರಕಾರಿ ಫ್ಯಾಶಿಸ್ಟ್, ಕೋಮು- ಜಾತಿ ಶಕ್ತಿಗಳು ಈ ಸಹಬಾಳ್ವೆಗೆ ಭಂಗ ತರುವ ಹಿನ್ನೆಲೆಯಲ್ಲಿ ಅವುಗಳ ವಿರುದ್ಧ ಕಠಿಣ ನಿಲುವಿತ್ತು ಅವರಿಗೆ. ಪಾಶ್ಚಿಮಾತ್ಯ ಬಂಡವಾಳ ಶಾಹಿ ಮತ್ತು ರಶ್ಯದ ಕಮ್ಯುನಿಸ್ಟ್ ಎರಡರ ಅಪಾಯದ ಬಗ್ಗೆಯೂ ಅರಿವಿತ್ತು. ಹಾಗಾಗಿ ಅವರು ಮಧ್ಯಮ ಮಾರ್ಗದ ಧೋರಣೆಯನ್ನು ತಳೆದರು. ಧರ್ಮವು ಖಾಸಗಿ ಜೀವನಕ್ಕೆ ಸೀಮಿತವಾಗಿ ಮಾನವನ ಸಾಮೂಹಿಕ ವಿಕಾಸಕ್ಕೆ ಪೂರಕವಾಗಿರಬೇಕು. ಉಪನಿಷತ್, ಸಂತರು, ಬುದ್ಧ, ಮಹಾವೀರ, ಜೀಸಸ್, ಪೈಗಂಬರರ ಆದರ್ಶ, ಆಧ್ಯಾತ್ಮಿಕ ಚಿಂತನೆಗಳು ಮಾರ್ಗದರ್ಶಕವಾಗಬೇಕೇ ಹೊರತು, ಪೌರೋಹಿತ್ಯ ಧರ್ಮವಲ್ಲ. ಧರ್ಮವು ಸಾರ್ವಜನಿಕ ನೀತಿ ನಿರ್ದೇಶಕಗಳಾಗಬಾರದು ಎಂಬುದು ಅವರ ಧೋೀರಣೆಯಾಗಿತ್ತು. ಭಾಷಾವಾರು ಪ್ರಾಂತ ಮತ್ತು ಒಕ್ಕೂಟ ವ್ಯವಸ್ಥೆಯಲ್ಲಿ ಅಚಲ ನಂಬಿಕೆ ಇದ್ದ ಅವರು ಹಿಂದಿ ಹೇರಿಕೆಯನ್ನು ವಿರೋಧಿಸುತ್ತಿದ್ದರು.

ಪಂಡಿತ ನೆಹರೂ

ಜವಹರಲಾಲ್ ನೆಹರೂರವರು ರಚಿಸಿದ ‘the glimpses of world history’ (1934), ‘the discovery of India’(1944 ಮತ್ತು ‘An autobiography’(1935) ಆಧುನಿಕ ಭಾರತ ಇಂಗ್ಲಿಷ್ ಸಾಹಿತ್ಯದಲ್ಲಿ ಮೇರು ಕೃತಿಗಳು. ‘ಡಿಸ್ಕೃವರಿ’ಯಲ್ಲಿ ಅವರು ಭಾರತದ ಇತಿಹಾಸ, ತತ್ವಜ್ಞಾನ, ಸಾಂಸ್ಕೃತಿಕ ಪರಂಪರೆಗಳ ವಿಕಸನವನ್ನು ಸಿಂಧೂ ನದಿ ನಾಗರಿಕತೆಯಿಂದ ಅವರ ಕಾಲ ಘಟ್ಟದವರೆಗೂ ಚಿತ್ರಿಸಿದ್ದಾರೆ. ನಮ್ಮ ನಾಗರಿಕತೆ-ಸಂಸ್ಕೃತಿಗೆ ಎಲ್ಲಾ ಸಂಸ್ಕೃತಿಗಳನ್ನು ಅರಗಿಸಿ, ಕರಗಿಸಿ ಜಯಿಸಿಕೊಳ್ಳುವ ಶಕ್ತಿ ಇದೆ. ಭಾರತೀಯ ಸಂಸ್ಕೃತಿ ನಿಂತ ನೀರಲ್ಲ, ಸದಾ ಬೆಳೆಯುವ ವಿಕಸಿಸುವ ಶಕ್ತಿ ಅದಕ್ಕಿದೆ ಎಂದು ಬಿಂಬಿಸಿದ್ದಾರೆ. ಭಾರತದ ಹಿತಿಹಾಸವನ್ನು ಸಾಮ್ರಾಜ್ಯಶಾಹಿ ದೃಷ್ಟಿಕೋನದಿಂದ ನೋಡುವುದನ್ನು ತಿರಸ್ಕರಿಸಿದ್ದಾರೆ. ಅವರ ಆತ್ಮಚರಿತ್ರೆಯು ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಅಧ್ಯಯನ ಮಾಡಲು ಒಂದು ಪ್ರಮುಖ ಗ್ರಂಥವಾಗಿದೆ.

Tags

Nehrumemories
share
ಕೆ.ಸಿ. ಶಂಕರ್, ಚಿಕ್ಕಮಗಳೂರು
ಕೆ.ಸಿ. ಶಂಕರ್, ಚಿಕ್ಕಮಗಳೂರು
Next Story
X