Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ‘ಹುಲಿಮನೆ’ ಹೆಸರು ಉಳಿಸುವ ಹೆಗಡೆ ಕುಟುಂಬ

‘ಹುಲಿಮನೆ’ ಹೆಸರು ಉಳಿಸುವ ಹೆಗಡೆ ಕುಟುಂಬ

ಗಣೇಶ ಅಮೀನಗಡಗಣೇಶ ಅಮೀನಗಡ17 Feb 2024 9:05 AM IST
share
‘ಹುಲಿಮನೆ’ ಹೆಸರು ಉಳಿಸುವ ಹೆಗಡೆ ಕುಟುಂಬ
ದೊಡ್ಡವಾಡ ಸಿದ್ಧಯ್ಯ ಅವರು ಹುಲಿಮನೆ ಸೀತಾರಾಮ ಶಾಸ್ತ್ರಿಗಳ ಕಂಪೆನಿಯಲ್ಲಿದ್ದರು. ಶಾಸ್ತ್ರಿಗಳ ಕಂಪೆನಿ ಬಂದ್ ಆದ ಮೇಲೆ ತಮ್ಮ ಕಂಪೆನಿ ಆರಂಭಿಸಿದರು. ಶ್ರೀಧರ ಅವರನ್ನು ಶಾಸ್ತ್ರಿಗಳ ಮಗನೆಂದೇ ಪ್ರೀತಿಯಿಂದ ಕಾಣುತ್ತಿದ್ದ ಅವರು ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಲು ಅವಕಾಶ ನೀಡಿದರು. ಪ್ರತಿಭೆ ಇದ್ದರೆ ಮಾತ್ರ ರಂಗಭೂಮಿಯಲ್ಲಿರಲು ಸಾಧ್ಯವೆಂದು ಅರಿತ ಶ್ರೀಧರ ಅವರು, ನಾಯಕ, ಖಳನಾಯಕ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದರು.

ರಂಗಾಸಕ್ತರಿಗೆ ಹುಲಿಮನೆ ಸೀತಾರಾಮ ಶಾಸ್ತ್ರಿಗಳ ಹೆಸರು ಅಪರೂಪವೇನಲ್ಲ. ಉತ್ತರ ಕನ್ನಡ ಜಿಲ್ಲೆಯ ಮೊದಲ ಹಾಗೂ ಕೊನೆಯ ವೃತ್ತಿ ನಾಟಕ ಕಂಪೆನಿ ಶ್ರೀ ಜಯಕರ್ನಾಟಕ ನಾಟಕ ಸಂಘ. ಇದನ್ನು ಆರಂಭಿಸುವುದರ ಜೊತೆಗೆ ತಿರುಗಾಟ ನಡೆಸಿ, ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದವರು ಹುಲಿಮನೆ ಸೀತಾರಾಮ ಶಾಸ್ತ್ರಿಗಳು. ಕೊನೆಗೆ ಹೈದರಾಬಾದಿನ ರಜಾಕಾರರ ದಾಳಿಯಿಂದಾಗಿ ಎಲ್ಲವನ್ನೂ ಕಳೆದುಕೊಂಡ ಅವರ ಹೆಸರನ್ನು ಉಳಿಸಲು ಶ್ರಮಿಸುತ್ತಿದೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ರಂಗಸೌಗಂಧ ಎಂಬ ರಂಗ ತಂಡ.

ಸೀತಾರಾಮ ಶಾಸ್ತ್ರಿಗಳ ಸೋದರ ಗಣಪತಿ ಹೆಗಡೆ ಅವರ ಮಗನಾದ ಶ್ರೀಧರ ಹೆಗಡೆ ಅವರಿಗೆ (ಜನನ: 1940, ಮಾರ್ಚ್ 18) ಬಾಲ್ಯದಲ್ಲೇ ಶಾಸ್ತ್ರಿಗಳ ಪ್ರಭಾವವಾದ ಪರಿಣಾಮ ಶಾಲೆಗೆ ಹೋದರೂ ವಿದ್ಯೆ ಹತ್ತಲಿಲ್ಲ ಎನ್ನುವುದಕ್ಕಿಂತ ರಂಗಭೂಮಿಯತ್ತ ಆಸಕ್ತಿ ಇತ್ತು. ಹೀಗಾಗಿ 8ನೇ ತರಗತಿಗೆ ಓದು ನಿಲ್ಲಿಸಿದರು. ಮೆಟ್ರಿಕ್ (ಈಗಿನ ಎಸೆಸೆಲ್ಸಿ) ಮುಗಿಸೆಂದು ಅವರ ಗುರುಗಳು ಹಾಗೂ ಹೈಸ್ಕೂಲ್ ಮುಖ್ಯ ಶಿಕ್ಷಕರಾದ ಸಿ.ಪಿ. ಆಚಾರ್ಯ ಒತ್ತಾಯಿಸಿದರು. ಇದಕ್ಕೆ ಕಾರಣ; ಉತ್ತರ ಕನ್ನಡ ವಿಭಾಗದ ಹೈಸ್ಕೂಲ್ ಮಟ್ಟದ ನಾಟಕ ಸ್ಪರ್ಧೆಯಲ್ಲಿ 19 ಹೈಸ್ಕೂಲ್ಗಳು ಭಾಗವಹಿಸಿದ್ದವು. ಇದರಲ್ಲಿ ‘ಉಂಡಾಡಿ ಗುಂಡ’ ನಾಟಕದಲ್ಲಿ ಪುಟ್ಟಾ ಜೋಯಿಸ್ ಪಾತ್ರಕ್ಕೆ ಬಣ್ಣ ಹಚ್ಚಿದರು ಜೊತೆಗೆ ಪಾತ್ರಕ್ಕಾಗಿ ತಲೆ ಬೋಳಿಸಿಕೊಂಡರು. ಅವರಿಗೆ ವೈಯಕ್ತಿಕವಾಗಿ ಮೊದಲ ಬಹುಮಾನ ಬಂದಿತ್ತು. ಆದರೂ ಓದು ಮುಂದುವರಿಸದೆ ಸೀತಾರಾಮ ಶಾಸ್ತ್ರಿಗಳ ಕಂಪೆನಿಗೆ ಹೋದರು. ಆಗ ಮಡಿಕೇರಿಯಲ್ಲಿ ಶಾಸ್ತ್ರಿಗಳ ಕಂಪೆನಿ ಇತ್ತು. ಅಲ್ಲಿದ್ದ ಕಾಫಿ ಪ್ಲಾಂಟರ್ ಗಂಡಗುತ್ತಿ ಮಂಜುನಾಥಯ್ಯ ಅವರು ಶ್ರೀಧರ ಅವರಿಗೆ ಮೆಟ್ರಿಕ್ ಮುಗಿಸಿದರೆ ನಮ್ಮದೇ ಐಟಿಐ ಕಾಲೇಜಿದೆ. ಸ್ಟೈಫಂಡ್ ಕೊಡ್ತೀನಿ. ಒಂದೂವರೆ ವರ್ಷದ ಕೋರ್ಸ್ ನಂತರ ಆರು ತಿಂಗಳಿನ ಅಪ್ರೆಂಟಿಸ್ ಮುಗಿಸಿದರೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಗ್ಯಾರಂಟಿ ಎಂದು ಭರವಸೆ ನೀಡಿದರು. ಆದರೆ ಬಸವಣ್ಣೆಪ್ಪ ಅವರ ಗೋಕಾಕ ಶ್ರೀ ಶಾರದಾ ನಾಟಕ ಮಂಡಳಿಗೆ ಕಾರ್ಪೆಂಟರ್ ಆಗಿ ಸೇರಿಕೊಂಡರು. ಪಾತ್ರ ಮಾಡುವೆನೆಂದು ಕೇಳಿಕೊಂಡಾಗ ‘‘ಬಾಲಕನ ಪಾತ್ರ ಕೊಡಲು ದೊಡ್ಡವನಿದ್ದಿ, ದೊಡ್ಡವರ ಪಾತ್ರ ಕೊಡಲು ಸಣ್ಣವನಿದ್ದಿ’’ ಎಂದರು ಕಂಪೆನಿಯವರು.

ನಾಲ್ಕು ತಿಂಗಳ ನಂತರ ಪಾತ್ರ ಮಾಡಬೇಕೆಂಬ ತುಡಿತಕ್ಕೆ ದೊಡ್ಡವಾಡ ಸಿದ್ಧಯ್ಯ ಅವರ ‘ಸಮಾಜ ವಿಕಾಸ ನಾಟಕ ಸಂಘ’ಕ್ಕೆ ಸೇರಿದರು. ಪಾತ್ರಗಳ ಜೊತೆಗೆ ರಂಗಸಜ್ಜಿಕೆಗೂ ದುಡಿದರು. ದೊಡ್ಡವಾಡ ಸಿದ್ಧಯ್ಯ ಅವರು ಹುಲಿಮನೆ ಸೀತಾರಾಮ ಶಾಸ್ತ್ರಿಗಳ ಕಂಪೆನಿಯಲ್ಲಿದ್ದರು. ಶಾಸ್ತ್ರಿಗಳ ಕಂಪೆನಿ ಬಂದ್ ಆದ ಮೇಲೆ ತಮ್ಮ ಕಂಪೆನಿ ಆರಂಭಿಸಿದರು. ಶಾಸ್ತ್ರಿಗಳ ಮಗನೆಂದೇ ಪ್ರೀತಿಯಿಂದ ಕಾಣುತ್ತಿದ್ದ ಅವರು ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಲು ಅವಕಾಶ ನೀಡಿದರು. ಪ್ರತಿಭೆ ಇದ್ದರೆ ಮಾತ್ರ ರಂಗಭೂಮಿಯಲ್ಲಿರಲು ಸಾಧ್ಯವೆಂದು ಅರಿತ ಶ್ರೀಧರ ಅವರು, ನಾಯಕ, ಖಳನಾಯಕ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದರು. ರಾಣೇಬೆನ್ನೂರಲ್ಲಿ ಮಾಲತೇಶ ಮಾಂಡ್ರೆ ಅವರ ‘ಗಂಡನ ಮನೆ’ ನಾಟಕದ 365 ಪ್ರಯೋಗಗಳಾದಾಗ ‘ಸ್ಟೇಜ್ ಟೈಗರ್’ ಎಂಬ ಬಿರುದನ್ನು ಪ್ರೇಕ್ಷಕರು ನೀಡಿದರು. ಈ ನಾಟಕದ ಎರಡೇ ದೃಶ್ಯಗಳಲ್ಲಿ ಶ್ರೀಧರ ಅವರು ಕಾಣಿಸಿಕೊಳ್ಳುತ್ತಿದ್ದರು. ತಂಗಿಯ ಮದುವೆಯ ಸನ್ನಿವೇಶದಲ್ಲಿ. ಇನ್ನೊಂದು; ತಂಗಿಯನ್ನು ಮನೆಯಿಂದ ಹೊರಗೆ ಹಾಕುವ ದೃಶ್ಯಕ್ಕೆ ಚಪ್ಪಾಳೆ ಬೀಳುತ್ತಿದ್ದವು.

ನಂತರ ದೊಡ್ಡವಾಡ ಕಂಪೆನಿಯು 1962ರಲ್ಲಿ ಬಂದ್ ಆಗಬೇಕಾದ ಪರಿಸ್ಥಿತಿ ಬಂತು. ಏಕೆಂದರೆ ಒಳ್ಳೆಯ ಪಗಾರಕ್ಕೆ ಕಲಾವಿದರು ಬೇರೆಡೆಗೆ ಹೊರಟುಹೋದರು. ಆಗ ಸಿದ್ದಾಪುರದಲ್ಲಿ ನ್ಯಾಮತಿಯ ಸಂಗಮೇಶ್ವರ ನಾಟ್ಯ ಸಂಘವು ಮುಕ್ಕಾಮು ಮಾಡಿತ್ತು. ಯಾವುದೇ ಪಾತ್ರ ನಿಗದಿಯಿಲ್ಲ. ಆದರೆ ಕೈಕೊಡುವ ಕಲಾವಿದರ ಪಾತ್ರಗಳಿಗೆ ಬಣ್ಣ ಹಚ್ಚಬೇಕು ಎನ್ನುವುದು ಕಂಪೆನಿಯವರ ಆದೇಶ. ಅಲ್ಲಿಂದ ನ್ಯಾಮತಿ ಕಂಪೆನಿಯು ರಾಣೇಬೆನ್ನೂರಲ್ಲಿ ಬೀಡು ಬಿಟ್ಟಾಗ ಕಂಪೆನಿಯ ಮಾಲಕರಾದ ಸಂಗಪ್ಪಾ ಅವರು ಕಾಮಿಡಿ ಪಾತ್ರ ಮಾಡುತ್ತಿದ್ದರು. ‘‘ಇನ್ನೂ ಛಲೊ ಮಾಡಬಹುದಿತ್ತು’’ ಎಂದು ಶ್ರೀಧರ ಅವರು ಹೇಳಿದರು. ಮರುದಿನ ಸಂಗಪ್ಪಾ ಅವರು ‘‘ಜ್ವರ ಬಂದದ. ನೀನೇ ಪಾತ್ರ ಮಾಡು’’ ಎಂದರು. ಆಗ ಕಾಮಿಡಿ ಪಾತ್ರ ಬಣ್ಣ ಹಚ್ಚಿದವರು ಶ್ರೀಧರ. ಅಲ್ಲಿ ಒಟ್ಟು 28 ಪ್ರಯೋಗಗಳನ್ನು ಕಂಡಿತು. ಹೀಗಿದ್ದಾಗ 1964ರಲ್ಲಿ ನ್ಯಾಮತಿ ಕಂಪೆನಿ ಬಿಟ್ಟ ಅವರು ಸಿದ್ದಾಪುರದ ರೈಸ್ ಮಿಲ್ನಲ್ಲಿ ಗುಮಾಸ್ತರಾದರೂ ಸೀತಾರಾಮ ಶಾಸ್ತ್ರಿಗಳ ನಾಟಕಗಳನ್ನು ಆಗಾಗ ಆಡಿದರು.

1985ರಲ್ಲಿ ಸೀತಾರಾಮ ಶಾಸ್ತ್ರಿಗಳು ನಿಧನರಾದರು. 1986ರಲ್ಲಿ ಸೀತಾರಾಮ ಶಾಸ್ತ್ರಿ ಹುಲಿಮನೆ ಪ್ರತಿಷ್ಠಾನ ಆರಂಭಿಸಿ, ಸ್ಥಳೀಯರನ್ನು ಸೇರಿಸಿ ನಾಟಕವಾಡಿದರು. ಹೀಗೆಯೇ 2006ರಲ್ಲಿ ಶಾಸ್ತ್ರಿಗಳ ಜನ್ಮಶತಮಾನೋತವ್ಸವವನ್ನು ಆಚರಿಸಿದರು.

ಇದಕ್ಕೂ ಮೊದಲು ಬೆಂಗಳೂರಿನಲ್ಲಿದ್ದ ಅವರು ಪರುಷ, ಕಲರವ ಸಿನೆಮಾಗಳಲ್ಲಿ ನಟಿಸುವುದರ ಜೊತೆಗೆ 13 ಧಾರಾವಾಹಿಗಳಲ್ಲಿ ಅಭಿನಯಿಸಿದರು. ಆದರೆ ಅನಾರೋಗ್ಯ ಕಾರಣ ತಮ್ಮ ಊರಾದ ಸಿದ್ದಾಪುರ ತಾಲೂಕಿನ ಒಡ್ಡಿನಗದ್ದೆ ಸೇರಿದರು. ಅವರು ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತರು. 2021ರಲ್ಲಿ ‘ಅಹಂ ಸೀತಾರಾಮ ಶಾಸ್ತ್ರಿ’ ಎಂಬ ಏಕವ್ಯಕ್ತಿ ನಾಟಕ ಪ್ರದರ್ಶಿಸಿದರು.

ಸದ್ಯ ಅವರ ಮಾರ್ಗದರ್ಶನದಲ್ಲಿ ಅವರ ಪುತ್ರ ಗಣಪತಿ ಹೆಗಡೆ ಅವರು ರಂಗ ಸೌಗಂಧ ತಂಡ ಕಟ್ಟಿಕೊಂಡು ನಾಟಕಗಳನ್ನು ಆಡುತ್ತಿದ್ದಾರೆ. ಪ್ರತಿ ವರ್ಷ ರಂಗ ತರಬೇತಿ ಶಿಬಿರ, ರಂಗಭೂಮಿ ಕುರಿತು ವಿಚಾರ ಸಂಕಿರಣ, ನಾಟಕೋತ್ಸವ ಆಯೋಜಿಸುತ್ತಾರೆ.

ಹೊಸದನ್ನು ಕಂಡುಕೊಳ್ಳುವ ಹಂಬಲ ಹಾಗೂ ಹಳೆಯದನ್ನು ಉಳಿಸಿಕೊಳ್ಳುವ ಹಂಬಲದ ಗಣಪತಿ ಹೆಗಡೆ ಅವರು ‘36 ಅಲ್ಲ 63’ ಎಂಬ ಹವಿಗನ್ನಡದಲ್ಲಿ (ಹವ್ಯಕ ಕನ್ನಡ) ನಗೆನಾಟಕ ಪ್ರದರ್ಶಿಸುತ್ತಿದ್ದಾರೆ. ಅವರದೇ ನಿರ್ದೇಶನ.

ಹೀಗೆ ಸೀತಾರಾಮ ಶಾಸ್ತ್ರಿಗಳ ಹೆಸರು ಉಳಿಸುವ, ರಂಗ ಪರಂಪರೆ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಗಣಪತಿ ಹೆಗಡೆ ಕ್ರಿಯಾಶೀಲರಾಗಿದ್ದಾರೆ. ಮುಖ್ಯವಾಗಿ ಅವರು ಕೃಷಿಕರು ಜೊತೆಗೆ ರಂಗಕೃಷಿಕರು. ಅವರೊಂದಿಗೆ ಅವರ ಪತ್ನಿ, ಪುತ್ರ, ಪುತ್ರಿ ಕೂಡಾ ಬಣ್ಣ ಹಚ್ಚಿದವರೇ.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X