Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಅಸ್ಪಶ್ಯತೆ ನಮ್ಮ ಚರ್ಚಾ ವಿಷಯ...

ಅಸ್ಪಶ್ಯತೆ ನಮ್ಮ ಚರ್ಚಾ ವಿಷಯ ಆಗುವುದೆಂದು?

ಶಂಬೂಕ, ಪಂಪ್‌ವೆಲ್ಶಂಬೂಕ, ಪಂಪ್‌ವೆಲ್7 April 2025 10:09 AM IST
share
ಅಸ್ಪಶ್ಯತೆ ನಮ್ಮ ಚರ್ಚಾ ವಿಷಯ ಆಗುವುದೆಂದು?

ದೇಶದಲ್ಲಿ ಒಟ್ಟು ಶೇ. 27 ಮಂದಿ ತಾವು ಅಸ್ಪೃಶ್ಯತೆಯನ್ನು ಆಚರಿಸುತ್ತಿರುವುದಾಗಿ ನೇರ ಅಥವಾ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾರೆ ಎಂಬುದು ಪ್ರಸ್ತುತ ಮಾದರಿ ಸಮೀಕ್ಷೆಯಿಂದ ಸ್ಪಷ್ಟವಾಯಿತು. ಹೀಗೆ ತಾವು ಅಸ್ಪೃಶ್ಯತೆಯನ್ನು ಆಚರಿಸುತ್ತೇವೆಂದು ಒಪ್ಪಿಕೊಂಡವರ ಜಾತಿ ಹಿನ್ನೆಲೆ ನೋಡಿದರೆ ಅವರಲ್ಲಿ ಶೇ. 52 ಮಂದಿ ಬ್ರಾಹ್ಮಣರು ಮತ್ತು ಶೇ. 24 ಮಂದಿ ಬ್ರಾಹ್ಮಣರಲ್ಲದ ಇತರ ಮೇಲ್ಜಾತಿಯವರಾಗಿದ್ದರು. ಅಚ್ಚರಿ ಏನೆಂದರೆ ಹಿಂದುಳಿದ ವರ್ಗದವರು ಮಾತ್ರವಲ್ಲ, ಸಾಕ್ಷಾತ್ ದಲಿತರು ಕೂಡ ಈ ವಿಷಯದಲ್ಲಿ ಹೆಚ್ಚೇನೂ ಹಿಂದುಳಿದಿರಲಿಲ್ಲ.


ಶ್ರದ್ಧೆಯಿಂದ ಪೋಷಿಸದೆ ಯಾವುದೂ ಸಂಪನ್ನವಾಗಿ ಬೆಳೆಯುವುದಿಲ್ಲ.

ಇಂದು ಭಾರತೀಯ ಸಮಾಜದಲ್ಲಿ ಅಸ್ಪೃಶ್ಯತೆ ಎಂಬ ಲಜ್ಜಾಸ್ಪದ ಮಹಾವ್ಯಾಧಿಯ ಕರಿನೆರಳು ಎಲ್ಲೆಡೆಯೂ ರಾರಾಜಿಸುವಷ್ಟು ದಟ್ಟವಾಗಿ ಬೆಳೆದು ನಿಂತಿದ್ದರೆ, ಅದು ತನ್ನಿಂತಾನೇ ಸಂಭವಿಸಿರುವ ದುರಂತವಂತೂ ಅಲ್ಲ. ಅದರ ಹಿಂದೆ ಬಹಳ ಶಕ್ತಿಶಾಲಿಯಾದ, ಸಂಘಟಿತ ಶಕ್ತಿಗಳು ಖಂಡಿತ ಇವೆ. ವ್ಯವಸ್ಥೆಯ ಶ್ರೀರಕ್ಷೆ ಕೂಡ ನಿಸ್ಸಂದೇಹವಾಗಿ ಅದರ ಬೆನ್ನಿಗಿದೆ. ಅಸ್ಪಶ್ಯತೆಯನ್ನು ಇಲ್ಲವಾಗಿಸಲು ಇಲ್ಲಿ ನಡೆದಿರುವ ಸಾವಿರಾರು ಚಳವಳಿಗಳು, ಆಂದೋಲನಗಳು, ಪ್ರತಿರೋಧಗಳು, ಬಂಡಾಯಗಳು ಈ ವ್ಯಾಧಿಯ ಮುಂದೆ ಸೋತಿವೆ. ಇಲ್ಲಿನ ಸಂವಿಧಾನ, ಇಲ್ಲಿರುವ ಕಾನೂನುಗಳು, ಶಿಕ್ಷೆಗಳು, ತಿದ್ದುಪಡಿಗಳು, ವಿವಿಧ ಆಯೋಗಗಳ ಶಿಫಾರಸುಗಳೆಲ್ಲಾ ಅಸ್ಪೃಶ್ಯತೆಯ ಮುಂದೆ ಸೋತು ಮಂಡಿ ಊರಿವೆ. ಅಸ್ಪಶ್ಯತೆಯನ್ನು ಸತತವಾಗಿ ವಿರೋಧಿಸುತ್ತಾ ಬಂದಿದ್ದ ಇಲ್ಲಿಯ ಆಧುನಿಕ ಸಾಹಿತ್ಯ, ಸಿನೆಮಾ, ರಂಗಮಂಟಪ ಮತ್ತು ವಿವಿಧ ಕಲಾಪ್ರಕಾರಗಳು ತಮ್ಮ ಶ್ರಮ ನಿಷ್ಫಲವಾಗಿರುವುದನ್ನು ಕಂಡು ಹತಾಶವಾಗಿವೆ. ಅದೆಷ್ಟೋ ಮಂದಿ ಕಣ್ಣು ಮುಚ್ಚಿಕೊಂಡು, ಇಂತಹ ಸಮಸ್ಯೆ ನಮ್ಮಲ್ಲಿ ಅಸ್ತಿತ್ವದಲ್ಲೇ ಇಲ್ಲ ಎಂಬ ನಂಬಿಕೆಯಲ್ಲಿ ಆಶ್ರಯ ಪಡೆದಿದ್ದಾರೆ. ಶತಮಾನಗಳ ಹಿಂದೆ ಈ ಕರಾಳ ಶಾಪದ ಬೀಜ ಬಿತ್ತಿ, ಅದಕ್ಕೆ ನಿತ್ಯ ನೀರೆರೆದು ಅದನ್ನು ಜೋಪಾನವಾಗಿ ರಕ್ಷಿಸಿ, ಪೋಷಿಸುತ್ತಾ ಬಂದ ಮತ್ತು ಅದರ ವಿರುದ್ಧ ಧ್ವನಿ ಎತ್ತುವವರ ಧ್ವನಿಯನ್ನು ಸಮೂಹ ವಧೆ ಸಹಿತ ವಿವಿಧ ವಿಧಾನಗಳಿಂದ ಹತ್ತಿಕ್ಕುತ್ತಾ ಬಂದ ಪುರೋಹಿತ ವರ್ಗ ಮತ್ತು ಅವರನ್ನು ಹೊತ್ತು ನಡೆಯುವವರೆಲ್ಲಾ ನಮ್ಮ ಪರಮಾಪ್ತ ಧರ್ಮವು ಈಗಾಗಲೇ ಸ್ಥಾಪಿತವಾಗಿದೆ ಎಂದು ವಿಜೃಂಭಿಸುತ್ತಿದ್ದಾರೆ.

ದಿಲ್ಲಿಯ ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲಯ್ಡ್ ಇಕನಾಮಿಕ್ ರಿಸರ್ಚ್ (NCAER) ಸಂಸ್ಥೆಯು ಅಮೆರಿಕದ ಮೇರಿ ಲ್ಯಾಂಡ್ ವಿಶ್ವವಿದ್ಯಾನಿಲಯದ ಸಹಭಾಗಿತ್ವದೊಂದಿಗೆ ತಾನು ನಡೆಸಿದ ಸಮೀಕ್ಷೆಯೊಂದರ ವರದಿಯನ್ನು 2014ರಲ್ಲಿ ಬಿಡುಗಡೆಗೊಳಿಸಿತ್ತು. ದೇಶದ ವಿವಿಧೆಡೆಯ, ವಿವಿಧ ಜಾತಿ-ಧರ್ಮಗಳಿಗೆ ಸೇರಿದ 42,000 ಕುಟುಂಬಗಳನ್ನು ಒಳಗೊಂಡ ಈ ಸಮೀಕ್ಷೆಯಲ್ಲಿ ಮುಖ್ಯವಾಗಿ ನಿಮ್ಮ ಕುಟುಂಬದಲ್ಲಿ ಯಾರಾದರೂ ಅಸ್ಪೃಶ್ಯತೆಯನ್ನು ಆಚರಿಸುತ್ತಾರೆಯೇ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇಲ್ಲ ಎಂದು ಉತ್ತರಿಸಿದವರೊಡನೆ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ನಿಮ್ಮ ಅಡುಗೆ ಮನೆಯನ್ನು ಪ್ರವೇಶಿಸುವುದು ಅಥವಾ ನಿಮ್ಮ ಪಾತ್ರೆಗಳನ್ನು ಬಳಸುವುದು ನಿಮಗೆ ಸಮ್ಮತವೇ? ಎಂಬ ಉಪಪ್ರಶ್ನೆಯನ್ನು ಕೇಳಲಾಗಿತ್ತು. ಈ ಎರಡೂ ಪ್ರಶ್ನೆಗಳಿಗೆ, ಹೌದು ಅಥವಾ ಇಲ್ಲ ಎಂಬ ನೇರ ಹಾಗೂ ಸಂಕ್ಷಿಪ್ತ ಉತ್ತರಕ್ಕೆ ಮಾತ್ರ ಅವಕಾಶವಿತ್ತು. ಎರಡೂ ಪ್ರಶ್ನೆಗಳ ತಾತ್ಪರ್ಯ ಒಂದೇ ಆಗಿದ್ದರಿಂದ ಎರಡೂ ಉತ್ತರಗಳನ್ನು ಸೇರಿಸಿ, ಇಂಗಿತವನ್ನು ನಿರ್ಧರಿಸಲಾಯಿತು.

ದೇಶದಲ್ಲಿ ಒಟ್ಟು ಶೇ. 27 ಮಂದಿ ತಾವು ಅಸ್ಪೃಶ್ಯತೆಯನ್ನು ಆಚರಿಸುತ್ತಿರುವುದಾಗಿ ನೇರ ಅಥವಾ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾರೆ ಎಂಬುದು ಪ್ರಸ್ತುತ ಮಾದರಿ ಸಮೀಕ್ಷೆಯಿಂದ ಸ್ಪಷ್ಟವಾಯಿತು. ಹೀಗೆ ತಾವು ಅಸ್ಪೃಶ್ಯತೆಯನ್ನು ಆಚರಿಸುತ್ತೇವೆಂದು ಒಪ್ಪಿಕೊಂಡವರ ಜಾತಿ ಹಿನ್ನೆಲೆ ನೋಡಿದರೆ ಅವರಲ್ಲಿ ಶೇ. 52 ಮಂದಿ ಬ್ರಾಹ್ಮಣರು ಮತ್ತು ಶೇ. 24 ಮಂದಿ ಬ್ರಾಹ್ಮಣರಲ್ಲದ ಇತರ ಮೇಲ್ಜಾತಿಯವರಾಗಿದ್ದರು. ಅಚ್ಚರಿ ಏನೆಂದರೆ ಹಿಂದುಳಿದ ವರ್ಗದವರು ಮಾತ್ರವಲ್ಲ, ಸಾಕ್ಷಾತ್ ದಲಿತರು ಕೂಡ ಈ ವಿಷಯದಲ್ಲಿ ಹೆಚ್ಚೇನೂ ಹಿಂದುಳಿದಿರಲಿಲ್ಲ. ಹಿಂದುಳಿದ ವರ್ಗಗಳಿಗೆ ಸೇರಿದ ಶೇ. 33 ಮಂದಿ, ಪರಿಶಿಷ್ಟ ಜಾತಿಗಳಿಗೆ ಸೇರಿದ ಶೇ. 15 ಮಂದಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸೇರಿದ ಶೇ. 22 ಮಂದಿ ತಾವು ಅಸ್ಪೃಶ್ಯತೆಯನ್ನು ಆಚರಿಸುತ್ತೇವೆಂದು ಒಪ್ಪಿಕೊಂಡರು.

ಇನ್ನು, ಧಾರ್ಮಿಕ ಹಿನ್ನೆಲೆಯಲ್ಲಿ ನೋಡಿದರೆ ಶೇ. 35 ಜೈನರು, ಶೇ. 30 ಹಿಂದೂಗಳು, ಶೇ. 23 ಸಿಖ್ಖರು, ಶೇ. 18 ಮುಸ್ಲಿಮರು ಮತ್ತು ಶೇ. 5 ಕ್ರೈಸ್ತರು, ತಾವು ಅಸ್ಪಶ್ಯತೆಯನ್ನು ಆಚರಿಸುತ್ತಿರುವುದಾಗಿ ಒಪ್ಪಿದ್ದರು. ಪ್ರಾದೇಶಿಕ ದೃಷ್ಟಿಯಿಂದ ನೋಡಿದಾಗ, ಮಧ್ಯಪ್ರದೇಶದ ಶೇ. 53 ಮಂದಿ, ಹಿಮಾಚಲ ಪ್ರದೇಶದ ಶೇ. 50 ಮಂದಿ, ಛತ್ತೀಸ್ಗಡದ ಶೇ. 48 ಮಂದಿ, ರಾಜಸ್ಥಾನ ಮತ್ತು ಬಿಹಾರದ ಶೇ. 47 ಮಂದಿ, ಉತ್ತರ ಪ್ರದೇಶದ ಶೇ. 43 ಮತ್ತು ಉತ್ತರಾಖಂಡದ ಶೇ. 40 ಮಂದಿ ಅಸ್ಪಶ್ಯತೆಯನ್ನು ಆಚರಿಸುತ್ತಿದ್ದರು. ದೇಶದ ಇತರ ಕೆಲವು ಭಾಗಗಳಲ್ಲಿ ಪರಿಸ್ಥಿತಿ ತುಸು ಭಿನ್ನವಾಗಿತ್ತು. ಉದಾ: ಆಂಧ್ರ ಪ್ರದೇಶದಲ್ಲಿ ಶೇ. 10, ಈಶಾನ್ಯ ರಾಜ್ಯಗಳಲ್ಲಿ ಶೇ. 7, ಮಹಾರಾಷ್ಟ್ರದಲ್ಲಿ ಶೇ. 4, ಕೇರಳದಲ್ಲಿ ಶೇ. 2 ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ. 1 ಮಂದಿ ಮಾತ್ರ ತಾವು ಅಸ್ಪೃಶ್ಯತೆಯನ್ನು ಆಚರಿಸುವುದಾಗಿ ಒಪ್ಪಿಕೊಂಡಿದ್ದರು. ನಿರಕ್ಷರಿಗಳಲ್ಲಿ ಪ್ರಸ್ತುತ ಅಮಾನುಷ ಪದ್ಧತಿಯನ್ನು ಆಚರಿಸುವವರು ಶೇ. 30ರಷ್ಟಿದ್ದರೆ, ಯಾವುದಾದರೂ ಪದವಿ ಅಥವಾ ಡಿಪ್ಲೊಮಾ ಸಂಪಾದಿಸಿರುವ ವಿದ್ಯಾವಂತರಲ್ಲಿ ಅಂಥವರ ಸಂಖ್ಯೆ ಎಷ್ಟಿರಬಹುದು? ಶೂನ್ಯ? ಖಂಡಿತ ಅಲ್ಲ. ಅವರಲ್ಲೂ ಶೇ. 25 ಮಂದಿ ಅಸ್ಪೃಶ್ಯತೆ ಪಾಲಿಸುವವರಾಗಿದ್ದರು!

ಪ್ರಸ್ತುತ ಸಮೀಕ್ಷೆಯಲ್ಲಿ, ತಾವು ಅಸ್ಪೃಶ್ಯತೆಯನ್ನು ಆಚರಿಸುತ್ತಿರುವುದಾಗಿ ಒಪ್ಪಿಕೊಂಡವರ ಉತ್ತರವನ್ನು ಪ್ರಶ್ನಿಸುವುದಕ್ಕೆ ಆಸ್ಪದವಿಲ್ಲ. ಆದರೆ ನಾವು ಅಸ್ಪೃಶ್ಯತೆಯನ್ನು ಆಚರಿಸುವುದಿಲ್ಲ ಎಂದು ಹೇಳಿಕೊಂಡವರಲ್ಲಿ ಎಷ್ಟು ಮಂದಿ ಪ್ರಾಮಾಣಿಕರು ಎಂದು ಸಂಶಯಿಸುವುದಕ್ಕೆ ಖಂಡಿತ ಅವಕಾಶ ಇದೆ. ಏಕೆಂದರೆ, ನಮ್ಮ ಸಮಾಜದಲ್ಲಿ, ಮನುವಾದವನ್ನು ಮನಸಾರೆ ವೈಭವೀಕರಿಸುತ್ತ, ಕೇವಲ ತಮ್ಮ ತಾತ್ಕಾಲಿಕ ಅನುಕೂಲಕ್ಕಾಗಿ, ತಾವು ಸಮಾನತೆಯನ್ನು ನಂಬುವವರೆಂದು ನಾಟಕವಾಡುವ ಮಂದಿ ಧಾರಾಳ ಸಂಖ್ಯೆಯಲ್ಲಿದ್ದಾರೆಂಬುದು ಎಲ್ಲರಿಗೂ ಗೊತ್ತಿರುವ ಗುಟ್ಟು. ಪಶ್ಚಿಮ ಬಂಗಾಳದಲ್ಲಿ ಶೇ. 1 ಮಂದಿ ಮಾತ್ರ ಅಸ್ಪಶ್ಯತೆಯನ್ನು ಆಚರಿಸುತ್ತಾರೆಂದ ಮಾತ್ರಕ್ಕೆ ಅಲ್ಲಿಯ ಸ್ಥಿತಿ ಸಮಾಧಾನಕರ ಎನ್ನುವಂತಿಲ್ಲ. ಏಕೆಂದರೆ, ಯಾವುದಾದರೂ ಸಮಾಜದಲ್ಲಿ ಶೇ. 0.000001 ಮಂದಿ ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದರೆ ಅದು ಕೂಡಾ, ತುಂಬಾ ಕಳವಳಕಾರಿಯಾದ, ಸ್ವಲ್ಪವಾದರೂ ಮಾನವೀಯ ಸಂವೇದನೆ ಉಳ್ಳವರು ಲಜ್ಜೆಯಿಂದ ತಲೆತಗ್ಗಿಸಿಕೊಳ್ಳಬೇಕಾದ ಸಂಗತಿಯಾಗಿದೆ. ಅಸ್ಪೃಶ್ಯತೆ ಮತ್ತು ಅದರ ಎಲ್ಲ ಪ್ರಕಾರಗಳು, ದೇಶದ ಎಲ್ಲ ಭಾಗಗಳಿಂದ ಶೇ. 100 ನಿರ್ನಾಮವಾಗುವ ತನಕ, ಮಾನವೀಯ ಪ್ರಜ್ಞೆ ಜೀವಂತ ಇರುವ ಯಾವ ಭಾರತೀಯನೂ ನೆಮ್ಮದಿಯ ನಿಟ್ಟುಸಿರು ಬಿಡುವಂತಿಲ್ಲ.

ಇವೆಲ್ಲಾ 2014ರಲ್ಲಿ ಪ್ರಕಟವಾದ ವರದಿಯೊಂದನ್ನು ಆಧರಿಸಿದ ಮಾಹಿತಿಗಳಾದ್ದರಿಂದ, ದಶಕದ ಹಿಂದಿನ ಮಾಹಿತಿಗಳು ಇಂದಿನ ಸನ್ನಿವೇಶಕ್ಕೆ ಅನ್ವಯಿಸುವುದಿಲ್ಲ, ಇಂದು ಕಾಲ ಬದಲಾಗಿದೆ ಎಂದು ವಾದಿಸುವುದಕ್ಕೆ ಇಲ್ಲಿ ಖಂಡಿತ ಆಸ್ಪದವಿದೆ. ಕಳೆದೊಂದು ದಶಕದಲ್ಲಿ ಪರಿಸ್ಥಿತಿ ಸಾಕಷ್ಟು ಬದಲಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ 2014ರಿಂದೀಚೆಗೆ ಜಾತಿವ್ಯವಸ್ಥೆಯ ಕಾವಲುಭಟರು, ಮೇಲ್ಜಾತಿಯವರ ಏಳಿಗೆಯನ್ನೇ ತಮ್ಮ ಪರಮಧ್ಯೇಯವಾಗಿಸಿಕೊಂಡವರು, ಮನುಸ್ಮತಿಯ ಕಟ್ಟಾ ಅಭಿಮಾನಿಗಳು ಮತ್ತು ಅದನ್ನು ಭಾರತದ ಸಂವಿಧಾನವಾಗಿಸುತ್ತೇವೆಂದು ಪಣ ತೊಟ್ಟವರೇ ಭಾರತವನ್ನು ಆಳುತ್ತಿದ್ದಾರೆ. ಅವರು ಅಸ್ಪೃಶ್ಯತೆಯ ಇಷ್ಟು ದೊಡ್ಡ ಸಮಸ್ಯೆಯ ಬಗ್ಗೆ ಸಮಾಜದಲ್ಲಿ ಎಂದೂ ಯಾವುದೇ ಚರ್ಚೆ ನಡೆಸಿದ್ದಿಲ್ಲ. ಇತರರು ಆ ಕುರಿತು ಚರ್ಚಿಸುವುದೂ ಅವರಿಗೆ ಇಷ್ಟವಿಲ್ಲ. ಆದ್ದರಿಂದಲೇ ಅವರು ದೇಶದ ಜನರನ್ನು ಮಸೀದಿ, ಮಂದಿರ, ಜಿಹಾದ್, ತಲಾಕ್, ವಕ್ಫ್, ಕ್ರಿಕೆಟ್, ಸಿನೆಮಾ, ಕಾಮಿಡಿ ಇತ್ಯಾದಿ ಅಸಂಗತ ಚರ್ಚೆಗಳಲ್ಲೇ ಸದಾ ತಲ್ಲೀನರಾಗಿಡುತ್ತಾರೆ. ಅವರ ಬಾಲ ಬಡುಕ ಮಾಧ್ಯಮಗಳೂ ಅಷ್ಟೇ. ಇಂತಹ ಭೀಕರ ಸಮಸ್ಯೆಗಳ ಕುರಿತು ಯಾರೂ ಎಲ್ಲೂ ಧ್ವನಿ ಎತ್ತದಂತೆ ನೋಡಿಕೊಳ್ಳುವುದೇ ಅವರ ಕಾಯಕವಾಗಿದೆ. ಇಂಥವರು ನಿಯಂತ್ರಿಸುತ್ತಿರುವ ಸಮಾಜದಲ್ಲಿ ಅಸ್ಪಶ್ಯತೆಯ ಮಹಾವ್ಯಾಧಿ ಇನ್ನಷ್ಟು ಬೆಳೆದಿರುವ ಸಾಧ್ಯತೆ ಇದೆಯೇ ಹೊರತು, ಕಡಿಮೆಯಾಗಿರುವ ಸಾಧ್ಯತೆಯಂತೂ ಖಂಡಿತ ಇಲ್ಲ.

ಈ ಮಹಾ ವ್ಯಾಧಿಯ ನಿವಾರಣೆಯ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ನಮ್ಮ ಭಾರತೀಯ ಸಮಾಜವು ಈ ಕುರಿತು ವ್ಯಾಪಕ ಪ್ರಮಾಣದ ಚರ್ಚೆ, ಸಂವಾದಗಳನ್ನಾದರೂ ತಕ್ಷಣ ಆರಂಭಿಸಬೇಕು.

share
ಶಂಬೂಕ, ಪಂಪ್‌ವೆಲ್
ಶಂಬೂಕ, ಪಂಪ್‌ವೆಲ್
Next Story
X