Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರೆಟ್ರೋ ಫೋಟೊಗಳ ಟ್ರೆಂಡ್: ಎಚ್ಚರಿಕೆ...

ರೆಟ್ರೋ ಫೋಟೊಗಳ ಟ್ರೆಂಡ್: ಎಚ್ಚರಿಕೆ ಅಗತ್ಯ

ಡಾ.ಸಿದ್ದರಾಜು ವಿ.ಜಿ. ಮೈಸೂರುಡಾ.ಸಿದ್ದರಾಜು ವಿ.ಜಿ. ಮೈಸೂರು20 Sept 2026 10:20 AM IST
share
ರೆಟ್ರೋ ಫೋಟೊಗಳ ಟ್ರೆಂಡ್: ಎಚ್ಚರಿಕೆ ಅಗತ್ಯ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ 1980ರ ದಶಕದ ಉಡುಪು, ಕೇಶವಿನ್ಯಾಸ, ಹಳೆಯ ಕಾಲದ ಹಿನ್ನೆಲೆ ಹಾಗೂ ಛಾಯಾಚಿತ್ರದ ಶೈಲಿಯಲ್ಲಿ ತಮ್ಮ ಫೋಟೊಗಳನ್ನು ಪರಿವರ್ತಿಸಿಕೊಂಡು ಹಂಚಿಕೊಳ್ಳುವ ಟ್ರೆಂಡ್ ಹೆಚ್ಚಾಗಿದೆ. ಕೃತಕ ಬುದ್ಧಿಮತ್ತೆ ಆಧಾರಿತ ವಿವಿಧ ಆ್ಯಪ್‌ಗಳು ಕೆಲವೇ ಕ್ಷಣಗಳಲ್ಲಿ ಇಂದಿನ ಫೋಟೊವನ್ನು ಹಳೆಯ ಕಾಲದ ಫೋಟೊದಂತೆ ಪರಿವರ್ತಿಸಿ ಕೊಡುತ್ತಿವೆ. ವಿಶೇಷವಾಗಿ ಯುವಜನರು ಮಾತ್ರವಲ್ಲದೆ ವಿವಿಧ ವಯೋಮಾನದ ಜನ ಸಾಮಾನ್ಯರು, ಸಿನೆಮಾ ನಟ-ನಟಿಯರು ಈ ಟ್ರೆಂಡ್‌ಗೆ ಹೆಚ್ಚು ಆಕರ್ಷಿತರಾಗಿದ್ದಾರೆ.

ಒಂದು ರೀತಿಯಲ್ಲಿ ನೋಡಿದರೆ ಇದು ತಂತ್ರಜ್ಞಾನದ ಸೃಜನಾತ್ಮಕ ಬಳಕೆಯಾಗಿದೆ. ಹಳೆಯ ನೆನಪುಗಳನ್ನು ಹೊಸ ರೂಪದಲ್ಲಿ ಕಾಣುವ ಅವಕಾಶವನ್ನು ಎಐ ನೀಡುತ್ತಿದೆ. ಆದರೆ ಮತ್ತೊಂದು ಕಡೆ, ಉಚಿತವಾಗಿ ದೊರೆಯುವ ಈ ಸೇವೆಗೆ ನಾವು ಏನು ಬೆಲೆ ಪಾವತಿಸುತ್ತಿದ್ದೇವೆ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದು ಅಗತ್ಯ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದಾದರೂ ಹೊಸ ಟ್ರೆಂಡ್ ಆರಂಭವಾದಾಗ ಯಾವುದೇ ಆಲೋಚನೆ ಮಾಡದೇ ಅದನ್ನು ಅನುಸರಿಸುವ ಮನೋಭಾವ ಹೆಚ್ಚಾಗಿದೆ. ಸ್ನೇಹಿತರು ಅಥವಾ ಪರಿಚಿತರು ರೆಟ್ರೋ ಫೋಟೊಗಳನ್ನು ಹಾಕಿದ ತಕ್ಷಣ, ಅದರ ಮೂಲ ಆ್ಯಪ್ ಯಾವುದು, ಸುರಕ್ಷಿತವೇ ಅಥವಾ ಅಲ್ಲವೇ ಎಂಬುದನ್ನು ಪರಿಶೀಲಿಸದೆ ಇತರರೂ ಅದೇ ರೀತಿಯ ಫೋಟೊಗಳನ್ನು ಸೃಷ್ಟಿಸಲು ಮುಂದಾಗುತ್ತಾರೆ. ಇಲ್ಲಿ ಮುಖ್ಯವಾದ ಸಮಸ್ಯೆ ಎಲ್ಲರೂ ಮಾಡುತ್ತಿದ್ದಾರೆ, ನಾನೂ ಮಾಡುತ್ತೇನೆ ಎಂಬ ಮನೋಭಾವ. ಸಾಮಾಜಿಕ ಜಾಲತಾಣದ ಟ್ರೆಂಡ್ ಕ್ಷಣಿಕವಾಗಿರಬಹುದು; ಆದರೆ ಒಮ್ಮೆ ವೈಯಕ್ತಿಕ ದತ್ತಾಂಶ ಅಪರಿಚಿತ ಸಂಸ್ಥೆಯ/ವ್ಯಕ್ತಿಯ ಕೈಗೆ ಹೋದರೆ ಅದರ ಪರಿಣಾಮ ದೀರ್ಘಕಾಲ ಉಳಿಯಬಹುದು. ಆದ್ದರಿಂದ ಯಾವುದೇ ಎಐ ಆ್ಯಪ್ ಬಳಸುವ ಮುನ್ನ ಅದರ ವಿಶ್ವಾಸಾರ್ಹತೆ, ಗೌಪ್ಯತಾ ನೀತಿ ಮತ್ತು ದತ್ತಾಂಶ ಬಳಕೆಯ ನಿಯಮಗಳನ್ನು ಪರಿಶೀಲಿಸುವುದು ಅಗತ್ಯ. ಕ್ಷಣಿಕ ಮನರಂಜನೆಗಾಗಿ ವೈಯಕ್ತಿಕ ಗೌಪ್ಯತೆ ಮತ್ತು ಡಿಜಿಟಲ್ ಸುರಕ್ಷತೆಯನ್ನು ಅಪಾಯಕ್ಕೆ ಒಡ್ಡಬಾರದು.

ಎಐ ಆ್ಯಪ್‌ಗೆ ನಾವು ಫೋಟೊ ಅಪ್‌ಲೋಡ್ ಮಾಡಿದಾಗ, ಅದು ಕೇವಲ ಒಂದು ಚಿತ್ರವನ್ನು ಕಳುಹಿಸುವುದಷ್ಟೇ ಆಗಿರುವುದಿಲ್ಲ. ಆ ಫೋಟೊದಲ್ಲಿರುವ ಮುಖದ ಲಕ್ಷಣಗಳು, ವಯಸ್ಸಿನ ಅಂದಾಜು, ದೇಹದ ವೈಶಿಷ್ಟ್ಯಗಳು ಮತ್ತು ಇತರ ದೃಶ್ಯ ಮಾಹಿತಿಗಳು ಡಿಜಿಟಲ್ ದತ್ತಾಂಶದ ಭಾಗವಾಗಬಹುದು. ಕೆಲವು ಆ್ಯಪ್‌ಗಳು ಫೋಟೊಗಳನ್ನು ಹೇಗೆ ಸಂಗ್ರಹಿಸುತ್ತವೆ, ಎಷ್ಟು ಕಾಲ ಇಟ್ಟುಕೊಳ್ಳುತ್ತವೆ, ಯಾವ ಉದ್ದೇಶಕ್ಕೆ ಬಳಸುತ್ತವೆ ಅಥವಾ ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುತ್ತವೆಯೇ ಎಂಬುದು ಬಳಕೆದಾರರಿಗೆ ಸ್ಪಷ್ಟವಾಗಿರದೇ ಇರಬಹುದು. ಆದ್ದರಿಂದ ಯಾವುದೇ ಎಐ ಆ್ಯಪ್‌ಗೆ ಫೋಟೊ ಅಪ್‌ಲೋಡ್ ಮಾಡುವ ಮೊದಲು ಅದರ ಗೌಪ್ಯತಾ ನೀತಿ ಮತ್ತು ದತ್ತಾಂಶಗಳ ಬಳಕೆ ನೀತಿ ಪರಿಶೀಲಿಸುವುದು ಅತ್ಯಂತ ಮುಖ್ಯ.

ಇಂದಿನ ಸೈಬರ್ ಅಪರಾಧ ಜಗತ್ತಿನಲ್ಲಿ ವೈಯಕ್ತಿಕ ದತ್ತಾಂಶ ಅತ್ಯಂತ ಮೌಲ್ಯಯುತ ಸಂಪನ್ಮೂಲವಾಗಿದೆ. ವ್ಯಕ್ತಿಯ ಹೆಸರು, ಮೊಬೈಲ್ ಸಂಖ್ಯೆ, ಇ-ಮೇಲ್, ಫೋಟೊ, ಸ್ಥಳದ ಮಾಹಿತಿ ಹಾಗೂ ಇತರ ವಿವರಗಳು ಒಂದೇ ಸ್ಥಳದಲ್ಲಿ ದೊರೆತರೆ ಅವುಗಳನ್ನು ವಿವಿಧ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಫೋಟೊಗಳನ್ನು ದುರುಪಯೋಗಪಡಿಸಿಕೊಂಡು ನಕಲಿ ಪ್ರೊಫೈಲ್‌ಗಳು, ನಕಲಿ ಐಡಿಗಳ ಸೃಷ್ಟಿ, ನಕಲಿ ದಾಖಲೆಗಳು ಮತ್ತು ಚಿತ್ರ-ವೀಡಿಯೊಗಳು ಸೃಷ್ಟಿಸಬಹುದು. ವ್ಯಕ್ತಿಯ ಮುಖವನ್ನು ಕೃತಕವಾಗಿ ಮತ್ತೊಂದು ವೀಡಿಯೊದಲ್ಲಿ ಅಳವಡಿಸಿ, ಅವರು ಹೇಳದ ಮಾತನ್ನು ಹೇಳಿದಂತೆ ಅಥವಾ ಮಾಡದ ಕೆಲಸವನ್ನು ಮಾಡಿದಂತೆ ತೋರಿಸುವ ತಂತ್ರಜ್ಞಾನ ಇಂದು ಸಾಮಾನ್ಯ ಜನರಿಗೂ ಅಪಾಯವನ್ನು ಉಂಟುಮಾಡುತ್ತಿದೆ.

ರೆಟ್ರೋ ಫೋಟೊ ಸೃಷ್ಟಿಸುವ ಆ್ಯಪ್ ನೇರವಾಗಿ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡುತ್ತದೆ ಎಂದು ಹೇಳುವುದು ಸರಿಯಲ್ಲ ಎಂಬುದು ತಜ್ಞರ ಅಭಿಪ್ರಾಯ. ಆದರೆ ಅನುಮಾನಾಸ್ಪದ ಅಥವಾ ದುರುದ್ದೇಶಪೂರಿತ ಆ್ಯಪ್‌ಗಳಿಗೆ ಅನಗತ್ಯ ಅನುಮತಿಗಳನ್ನು ನೀಡುವುದು ಸೈಬರ್ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ. ಅಪರಿಚಿತ ಆ್ಯಪ್‌ಗಳು ಸಂಪರ್ಕಗಳು, ಫೋಟೊಗಳು, ಸಂಗ್ರಹಣೆ, ಕ್ಯಾಮರಾ, ಮೈಕ್ರೋಫೋನ್ ಮುಂತಾದ ಅನಗತ್ಯ ಅನುಮತಿ ಕೇಳಿದರೆ ಎಚ್ಚರಿಕೆ ವಹಿಸಬೇಕು. ಫೋಟೊ ಟ್ರೆಂಡ್‌ನ ಆಕರ್ಷಣೆಯಲ್ಲಿ ಮೊಬೈಲ್‌ಗೆ ಬರುವ ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡುವುದು ಅಥವಾ ಒಟಿಪಿ, ಪಾಸ್‌ವರ್ಡ್, ಯುಪಿಐ ಪಿನ್, ಕಾರ್ಡ್ ವಿವರಗಳಂತಹ ಹಣಕಾಸು ಮಾಹಿತಿಯನ್ನು ಹಂಚಿಕೊಳ್ಳುವುದು ಇನ್ನಷ್ಟು ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ಆದ್ದರಿಂದ ಸೈಬರ್ ಭದ್ರತಾ ವಲಯದಲ್ಲಿ ಸಾವಿರಾರು ನಕಲಿ, ಅನುಮಾನಾಸ್ಪದ ಅಥವಾ ದುರುದ್ದೇಶಪೂರಿತ ಆ್ಯಪ್‌ಗಳ ಬಗ್ಗೆ ನಿರಂತರವಾಗಿ ಎಚ್ಚರಿಕೆ ನೀಡಲಾಗುತ್ತಿದೆ. ಆದ್ದರಿಂದ ಬಳಕೆದಾರರು ಆ್ಯಪ್ ಡೌನ್‌ಲೋಡ್ ಮಾಡುವಾಗ ಅದರ ಹೆಸರು, ಡೆವಲಪರ್, ರಿವೀವ್ಸ್, ಡೌನ್‌ಲೋಡ್‌ಗಳು, ಅನುಮತಿಗಳು, ಗೌಪ್ಯತಾ ನೀತಿಗಳನ್ನು ಪರಿಶೀಲಿಸಬೇಕು. ಸಾಧ್ಯವಾದಷ್ಟು ವಿಶ್ವಾಸಾರ್ಹ ಮತ್ತು ಪರಿಚಿತ ಸಾಫ್ಟ್‌ವೇರ್ ಕಂಪೆನಿಗಳು ಬಿಡುಗಡೆ ಮಾಡಿದ ಅಧಿಕೃತ ಎಐ ಅಪ್ಲಿಕೇಶನ್‌ಗಳಿಗೆ ಆದ್ಯತೆ ನೀಡುವುದು ಸುರಕ್ಷಿತ ಕ್ರಮವಾಗಿದೆ.

1980ರ ದಶಕದ ನೆನಪುಗಳನ್ನು ಎಐ ಮೂಲಕ ಮರುಸೃಷ್ಟಿಸುವುದು ಖಂಡಿತವಾಗಿಯೂ ಮನರಂಜನೆಯ ಅನುಭವವಾಗಿರಬಹುದು. ಹಳೆಯ ಕಾಲದ ಉಡುಪು, ವಾತಾವರಣ ಮತ್ತು ಜೀವನಶೈಲಿಯನ್ನು ಹೊಸ ತಂತ್ರಜ್ಞಾನದ ಮೂಲಕ ಮತ್ತೆ ಕಾಣುವುದು ನಮ್ಮ ನೆನಪುಗಳನ್ನು ಇನ್ನಷ್ಟು ಜೀವಂತಗೊಳಿಸುತ್ತದೆ. ಆದರೆ ಈ ಕ್ಷಣಿಕ ಸಂತೋಷಕ್ಕಾಗಿ ನಮ್ಮ ಮುಖದ ಗುರುತು, ವೈಯಕ್ತಿಕ ದತ್ತಾಂಶ ಮತ್ತು ಖಾಸಗಿ ಬದುಕಿನ ಸುರಕ್ಷತೆಯನ್ನು ಅಪಾಯಕ್ಕೆ ಒಳಪಡಿಸುವುದು ಸೂಕ್ತವಲ್ಲ.

ತಂತ್ರಜ್ಞಾನವನ್ನು ತಿರಸ್ಕರಿಸುವುದಕ್ಕಿಂತ ಅದರ ಬಳಕೆಯಲ್ಲಿ ಜಾಗರೂಕತೆ ಮತ್ತು ಜವಾಬ್ದಾರಿಯನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯ.

Tags

Retro Photo Trendsocial mediatechnology
share
ಡಾ.ಸಿದ್ದರಾಜು ವಿ.ಜಿ. ಮೈಸೂರು
ಡಾ.ಸಿದ್ದರಾಜು ವಿ.ಜಿ. ಮೈಸೂರು
Next Story
X