Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪರಿಶಿಷ್ಟ ಪಂಗಡ ಸೇರ್ಪಡೆ: ಅರ್ಹತಾ...

ಪರಿಶಿಷ್ಟ ಪಂಗಡ ಸೇರ್ಪಡೆ: ಅರ್ಹತಾ ಮಾನದಂಡಗಳೇನು?

ಕೆ.ಎನ್. ಲಿಂಗಪ್ಪಕೆ.ಎನ್. ಲಿಂಗಪ್ಪ5 Oct 2025 9:04 AM IST
share
ಪರಿಶಿಷ್ಟ ಪಂಗಡ ಸೇರ್ಪಡೆ: ಅರ್ಹತಾ ಮಾನದಂಡಗಳೇನು?

ಆದಿಮ ಸ್ವರೂಪದ 44 ಜಾತಿಗಳನ್ನು ಹೊರತುಪಡಿಸಿ ಉಳಿದ ಜಾತಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿದಾಗ, ಲೋಕೂರ್ ಸಮಿತಿ ನಿರ್ದಿಷ್ಟ ಪಡಿಸಿರುವ ಮಾನದಂಡಗಳಿಗೆ ಒಳಪಟ್ಟಿದ್ದವೇ ಎಂಬುದೂ ಯಕ್ಷಪ್ರಶ್ನೆಯಾಗಿ ಉಳಿದಿದೆ. ಈ ಸಮುದಾಯಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿದಾಗ, ಆದಿವಾಸಿಗಳು ಎನಿಸಿಕೊಂಡ ಜಾತಿಗಳು ಪ್ರತಿರೋಧಿಸಲು ಹೋಗಲಿಲ್ಲ; ಅಲ್ಲದೆ ಅವಕ್ಕೆ ಅಂಥಾ ಶಕ್ತಿಯೂ ಇರದೆ ಬಲಹೀನತೆಯಿಂದ ಬಳಲುತ್ತಿದ್ದವು. ರಾಜಕೀಯದಲ್ಲಿ ಯಾವುದೇ ಸ್ಥಾನಮಾನಗಳು ಒಂದೆರಡು ಅಪವಾದಗಳನ್ನು ಹೊರತುಪಡಿಸಿ ಇಂದಿಗೂ ಅವಕ್ಕೆ ದಕ್ಕಿಲ್ಲ.

ಹಿಂದುಳಿದ ವರ್ಗದಲ್ಲಿ ಸ್ಥಾನ ಪಡೆದು ಮೀಸಲಾತಿ ಸವಲತ್ತು ಪಡೆಯುತ್ತಿರುವ ಕೆಲ ಸಮುದಾಯಗಳು ಇತ್ತೀಚೆಗೆ ಕೆಲವಾರು ವರ್ಷಗಳಿಂದ ಪರಿಶಿಷ್ಟ ಪಂಗಡದಲ್ಲಿ ಸಿಗುವ ಸ್ಥಾನಮಾನಗಳ ಮೇಲೆ ಕಣ್ಣಿಟ್ಟು, ಏನಕೇನ ಪ್ರಕಾರೇಣ ಪರಿಶಿಷ್ಟ ಪಂಗಡದೊಳಗೆ ನುಸುಳಬೇಕೆಂಬ ಮಹತ್ವಾಕಾಂಕ್ಷೆ ಅವುಗಳಲ್ಲಿ ಮೂಡಿ ಹೋಗಿದೆ. ಯಾವುದೇ ಇತರ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದರೆ ಅದು ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿ ಬರುವ ವಿಷಯ. ಹಾಗೇ ಸೇರಬೇಕೆಂಬ ತುಡಿತ ಈ ದಿನಗಳಲ್ಲಿ ತುಸು ಹೆಚ್ಚಾಗಿಯೇ ಕೇಳಿ ಬರುತ್ತಿದೆ. ಅದಕ್ಕಿರುವ ಪ್ರಬಲ ಕಾರಣ-ಹಿಂದುಳಿದ ವರ್ಗಗಳಲ್ಲೇ ಅಗ್ರಸ್ಥಾನ ಪಡೆದಿರುವ ಕುರುಬ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರಬೇಕೆಂಬ ಒತ್ತಾಸೆ ಬಂದಂದಿನಿಂದ ದಿನನಿತ್ಯ ಸುದ್ದಿ ಆಗುತ್ತಿರುವುದು ಮತ್ತು ಈ ಹಿಂದೆಯೂ ಅನೇಕ ಸಮುದಾಯಗಳು ಪರಿಶಿಷ್ಟ ಪಂಗಡಕ್ಕೆ ಸೇರಲಿಚ್ಛಿಸಿ ಸರಕಾರಕ್ಕೆ ಮನವಿ ಮಾಡಿಕೊಂಡಿರುವುದೂ ಇದೆ.

ಕೆಲವು ವರ್ಷಗಳ ಹಿಂದೆಯೇ, ಕರ್ನಾಟಕ ಸರಕಾರ ಹಾಲಕ್ಕಿ ಒಕ್ಕಲ್, ಕೋಲಿ ಮತ್ತು ಕಾಡುಗೊಲ್ಲ ಜಾತಿಗಳನ್ನು ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಮತ್ತು ಅಧ್ಯಯನದ ವರದಿಯಾಧರಿಸಿ, ಕೇಂದ್ರ ಸರಕಾರದ ಸಂಸ್ಥೆ ಆರ್.ಜಿ.ಐ. (ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ)ಗೆ ಕಳುಹಿಸಿ ಕೊಟ್ಟಿತ್ತು. ಆದರೆ, ಕೆಲವು ನ್ಯೂನತೆಗಳನ್ನು ಪಟ್ಟಿ ಮಾಡಿ ಅವುಗಳನ್ನು ಸರಿಪಡಿಸಲು ಆರ್.ಜಿ.ಐ. ಮತ್ತೆ ಕರ್ನಾಟಕ ಸರಕಾರಕ್ಕೆ ಹಿಂದಿರುಗಿಸಿತ್ತು. ಈ ನ್ಯೂನತೆಗಳನ್ನು ಸರಿಪಡಿಸುವುದರಲ್ಲೇ ಸಾಕಷ್ಟು ಕಾಲವ್ಯಯವಾಗಿತ್ತು.

ಈ ನಡುವೆ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಪ್ರಬಲವಾದ ಅಲೆ ಎದ್ದಿತು. ಪರಿಣಾಮವಾಗಿ, ಆ ಸಮುದಾಯದ ಕುಲಗುರುಗಳು ಪೀಠದ ನೆಲೆ ಕಾಗಿನೆಲೆಯಿಂದ ಬೆಂಗಳೂರಿನವರೆಗೂ ಅವರ ಸಾವಿರಾರು ಮಠದ ಭಕ್ತರೊಡನೆ ಪಾದಯಾತ್ರೆ ಹಮ್ಮಿಕೊಂಡರು. ಅಷ್ಟೇ ಅಲ್ಲದೆ ಅವರೆಲ್ಲರೂ ಸ್ವಾತಂತ್ರ್ಯ ಉದ್ಯಾನದಲ್ಲಿ ಸಭೆ ಏರ್ಪಡಿಸಿ ಸಂಖ್ಯಾಬಲ ಪ್ರದರ್ಶಿಸುವುದರ ಮೂಲಕ ಸರಕಾರಕ್ಕೆ ಆಗ್ರಹ ಪೂರಕ ಆಹವಾಲು ಸಲ್ಲಿಸಿದರು. ಕುರುಬರು ಪರಿಶಿಷ್ಟ ಪಂಗಡಕ್ಕೆ ಸೇರಬೇಕು ಎಂಬುದು ಕಾಲದಿಂದಲೂ ಇದ್ದೇ ಇತ್ತು. ಅದಕ್ಕಿದ್ದ ಕಾರಣ, ಆದಿವಾಸಿಗಳಾದ ಕಾಡುಕುರುಬ, ಜೇನುಕುರುಬ ಮತ್ತು ಬೆಟ್ಟಕುರುಬ ಜಾತಿಗಳು, ಈಗಾಗಲೇ ಪರಿಶಿಷ್ಟ ಪಂಗಡದಲ್ಲಿ ಸೇರಿ ಹೋಗಿರುವುದು. ಅದೂ ಅಲ್ಲದೆ, ಕೊಡಗು ಜಿಲ್ಲೆಗೆ ಸೀಮಿತವಾದಂತೆ, ಆ ಜಿಲ್ಲೆಯಲ್ಲಿ ನೆಲೆಸಿರುವ ಕುರುಬ ಎಂದು ಕರೆಸಿಕೊಳ್ಳುವವರು ಕೂಡಾ ಪರಿಶಿಷ್ಟ ಪಂಗಡದ ಮೀಸಲಾತಿ ಪಟ್ಟಿಯಲ್ಲಿ ಸೇರಿರುವುದು. ಈ ಎಲ್ಲಾ ಅಂಶಗಳಿಂದ ಪ್ರಾಯಶಃ ಕುರುಬರು ಪ್ರೇರೇಪಿತರಾಗಿರಬಹುದು. ಅದೇ ಸಮಯದಲ್ಲಿ ಆ ಸಮುದಾಯದ ಪ್ರಮುಖ ನಾಯಕರೊಬ್ಬರಿಗೆ ಈ ದಿಸೆಯಲ್ಲಿ ಆಸಕ್ತಿ ಇರಲಿಲ್ಲ ಎಂಬುದೂ ಜನಜನಿತವಾಗಿತ್ತು.

ಅಜಮಾಷಿ 45 ಲಕ್ಷ ಜನಸಂಖ್ಯೆ ಇದೆ ಎಂದು ಹೇಳಲಾದ ಸಮುದಾಯ ಒಂದು ಸರಕಾರದ ವತಿಯಿಂದ ತನ್ನ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಹಮ್ಮಿಕೊಂಡಿದ್ದ ಒತ್ತಡ ತಂತ್ರಕ್ಕಿಂತ ಮತ್ತೇನು ಬೇಕು.

ಸರಕಾರ ಆ ನಿಟ್ಟಿನಲ್ಲಿ ಕಾರ್ಯ ಕೈಗೊಳ್ಳಲು ಪ್ರಾರಂಭಿಕ ವಿಧಿ ವಿಧಾನಗಳನ್ನು ಅನುಸರಿಸಲು ಶುರುವಿಟ್ಟು ಕೊಂಡಿತು. ಪ್ರಯುಕ್ತ ಮೈಸೂರಿನಲ್ಲಿ ನೆಲೆ ಹೊಂದಿರುವ ಬುಡಕಟ್ಟು ಸಂಶೋಧನಾ ಸಂಸ್ಥೆ ವತಿಯಿಂದ ‘ಕುಲ ಶಾಸ್ತ್ರೀಯ ಅಧ್ಯಯನ’ ಕಾರ್ಯಕ್ಕಾಗಿ ಸರಕಾರ ಆದೇಶಿಸಿತು. ಆದೇಶವನ್ನು ಪಾಲಿಸಿದ ಬುಡಕಟ್ಟು ಸಂಶೋಧನಾ ಸಂಸ್ಥೆ, ಕಾಲ ವಿಳಂಬ ಮಾಡದೆ ಕೇವಲ ಒಂದೇ ವರ್ಷದಲ್ಲಿ ಶಾಸ್ತ್ರೀಯ ಅಧ್ಯಯನ ಕಾರ್ಯ ಪೂರೈಸಿ ಸರಕಾರಕ್ಕೆ ಸಲ್ಲಿಸಿತು. ಆಗ ಭಾಜಪ ಪಕ್ಷದ ಆಳ್ವಿಕೆಯಲ್ಲಿ ಕರ್ನಾಟಕವಿತ್ತು.

ಬಸವರಾಜ ಬೊಮ್ಮಾಯಿಯವರು ಆ ಸಮಯದಲ್ಲಿ ಮುಖ್ಯಮಂತ್ರಿ. 2023ರ ಮಾರ್ಚ್ ತಿಂಗಳ ಅಂತ್ಯದಲ್ಲಿ ಕುಲಶಾಸ್ತ್ರಿಯ ಅಧ್ಯಯನವನ್ನು ರಾಜ್ಯ ಸಚಿವ ಸಂಪುಟ ಸಭೆ ಅತ್ಯವಸರದಲ್ಲಿ ಅನುಮೋದಿಸಿತು. ಅದೇ ಸಮಯದಲ್ಲಿ ರಾಷ್ಟ್ರೀಯ ಚುನಾವಣಾ ಆಯೋಗ ಕರ್ನಾಟಕದ ವಿಧಾನಸಭೆಗೆ ಚುನಾವಣೆಗಳನ್ನು ಘೋಷಿಸಿತು. ಸರಕಾರದ ಈ ಧಾವಂತದ ಅನುಮೋದನಾ ಕ್ರಿಯೆ ಭಾಜಪ ಪಕ್ಷದ ವರಿಷ್ಠರ ಹುಕುಂ ಇಲ್ಲದೆ ಆಗಿರುವುದಿಲ್ಲ ಎಂಬ ಮಾತೂ ಕೇಳಿ ಬಂತು. ಚುನಾವಣೆ ಘೋಷಣೆಯಾಗಿದ್ದರಿಂದ, ಬಸವರಾಜ ಬೊಮ್ಮಾಯಿ ಸರಕಾರ, ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಅನುವಾಗುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಸಾಧ್ಯವಾಗಲಿಲ್ಲ.

ಚುನಾವಣೆ ನಡೆದು ಭಾಜಪ ಹೀನಾಯವಾಗಿ ಸೋಲು ಕಂಡ ಪ್ರಯುಕ್ತ, ಬಸವರಾಜ ಬೊಮ್ಮಾಯಿ ಸರಕಾರ ಅಧಿಕಾರಚ್ಯುತಿಗೊಂಡು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೇರಿತು. ಸಿದ್ದರಾಮಯ್ಯನವರು ಅಳೆದು-ಸುರಿದು ಕೆಲವಾರು ದಿನಗಳ ನಂತರ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಮೂಲಕ ಕೇಂದ್ರ ಸರಕಾರಕ್ಕೆ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಶಿಫಾರಸು ಪತ್ರವನ್ನು ಬರೆಸಿದರು. ಶಿಫಾರಸು ಪತ್ರವನ್ನು ಆರ್.ಜಿ.ಐ. ಆಮೂಲಾಗ್ರ ಪರಿಶೀಲಿಸಿ ಕೆಲವು ಪ್ರಶ್ನೆಗಳನ್ನು ಮುಂದಿಟ್ಟು ರಾಜ್ಯ ಸರಕಾರಕ್ಕೆ ಹಿಂದಿರುಗಿಸಿತು. ದೀರ್ಘಕಾಲ ಅದಕ್ಕೆ ಉತ್ತರಿಸುವ ಗೊಡವೆಗೆ ಸರಕಾರ ಹೋಗಲಿಲ್ಲ.

ಅದಿರಲಿ, ಸದ್ಯ ಪರಿಶಿಷ್ಟ ಪಂಗಡಗಳ ಗುಣಲಕ್ಷಣ ಇತ್ಯಾದಿಗಳನ್ನು ಪರಿಶೀಲಿಸೋಣ.

ವಸಾಹತು ಕಾಲಘಟ್ಟದ ಸಂದರ್ಭದಲ್ಲಿ ನಡೆದ ಕೊನೆಯ ಜನಗಣತಿ 1931ರಲ್ಲಿ. ಆ ಜನಗಣತಿಯಲ್ಲಿ ಇಂದು ಹೆಸರಿಸಿರುವ ಪರಿಶಿಷ್ಟ ಪಂಗಡವು ‘ಆದಿವಾಸಿ ಬುಡಕಟ್ಟು’ (ಪ್ರಿಮಿಟಿವ್ ಟ್ರೈಟ್ಸ್) ಎಂದಾಗಿತ್ತು. ಅದೇ 1935ರ ಭಾರತ ಸರಕಾರ ಕಾಯ್ದೆಯಲ್ಲಿ ‘ಹಿಂದುಳಿದ ಬುಡಕಟ್ಟು’ ಸಮುದಾಯಗಳ ಪಟ್ಟಿಯನ್ನು ರೂಪಿಸಿ ಅದನ್ನು ಪರಿಶಿಷ್ಟ ಪಂಗಡ ಜಾತಿಗಳ ಪಟ್ಟಿಗೆ ಸೇರಿಸಲಾಗಿತ್ತು. ಸ್ವಾತಂತ್ರ್ಯ ದೊರೆತು ಸಂವಿಧಾನ ಜಾರಿಗೊಂಡ ನಂತರ 1950ರಲ್ಲಿ ರಾಷ್ಟ್ರಪತಿಗಳಿಂದ ಪರಿಶಿಷ್ಟ ಪಂಗಡವೆಂದೇ ಆಜ್ಞೆ ಹೊರಡಿಸಲಾಯಿತು. 1950ರಲ್ಲಿ ಪಟ್ಟಿ ಮಾಡುವಾಗ ಆ ಸಮುದಾಯಗಳ ಆದಿಮ ಸಂಸ್ಕೃತಿ ಮತ್ತು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ತೀರ ಹಿಂದುಳಿದಿರುವಿಕೆಯನ್ನು ಪರಿಗಣಿಸಲಾಗಿತ್ತು. ಇವಿಷ್ಟನ್ನು ಹೊರತುಪಡಿಸಿ ಆವಾಗ ಯಾವ ಮಾನದಂಡಗಳು ಇರಲಿಲ್ಲ ಎಂಬುದು ಮುಖ್ಯ.

ಕೇಂದ್ರ ಸರಕಾರ, ಅಂದಿನ ಕಾನೂನು ಕಾರ್ಯದರ್ಶಿಯಾಗಿದ್ದ ಪಿ. ಬಿ. ಲೋಕೂರ್ ಅವರ ನೇತೃತ್ವದಲ್ಲಿ 1965ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಗಳನ್ನು ಪರಿಷ್ಕರಿಸುವ ಮತ್ತು ತರ್ಕಬದ್ಧಗೊಳಿಸವ ಬಗ್ಗೆ ಸಲಹಾ ಸಮಿತಿಯೊಂದನ್ನು ನೇಮಿಸಿತು. ಆ ಸಲಹಾ ಸಮಿತಿ ಕೊಟ್ಟ 5 ಗುಣ ಲಕ್ಷಣಗಳನ್ನು ಇಂದಿಗೂ ಅನುಸರಿಸಿಕೊಂಡು ಬರಲಾಗುತ್ತಿದೆ. ಅವು- 1. ಪ್ರಾಚೀನ ಗುಣಲಕ್ಷಣ (ಇಂಡಿಕೇಶನ್ಸ್ ಆಫ್ ಪ್ರಿಮೆಟಿವ್ ಟ್ರೈಟ್ಸ್), 2. ವಿಶಿಷ್ಟವಾದ ಸಂಸ್ಕೃತಿ, 3. ಭೌಗೋಳಿಕ ಪ್ರತ್ಯೇಕತೆ (ಜಿಯೋಗ್ರಾಫಿಕಲ್ ಐಸೋಲೇಶನ್), 4. ಪ್ರಮುಖ ಅಥವಾ ದೊಡ್ಡ ಸಮುದಾಯಗಳೊಂದಿಗೆ ಬೆರೆಯಲು ಸಂಕೋಚ/ನಾಚಿಕೆ (ಸೈನ್ಸ್ ಆಫ್ ಕಾಂಟ್ಯಾಕ್ಟ್ ವಿಥ್ ದಿ ಕಮ್ಯುನಿಟಿ ಅಟ್ ಲಾರ್ಜ್) ಮತ್ತು 5. ಸಮಾಜೋ ಆರ್ಥಿಕ ಹಿಂದುಳಿದಿರುವಿಕೆ (ಸೋಶಿಯೊ ಎಕನಾಮಿಕ್ ಬ್ಯಾಕ್ವರ್ಡ್ ನೆಸ್).

ಈ ಮೇಲಿನ ಐದು ಗುಣಲಕ್ಷಣಗಳನ್ನು ಹೊಂದಿದ್ದರೆ ಮಾತ್ರ ಯಾವುದೇ ಸಮುದಾಯವನ್ನು ಪರಿಶಿಷ್ಟ ಬುಡಕಟ್ಟು ಪಟ್ಟಿಗೆ ಸೇರಿಸಲು ಸಾಧ್ಯವಿದೆ. ಈ ಗುಣಲಕ್ಷಣಗಳನ್ನು ಗುರುತಿಸುವುದು ಹೇಗೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಅದಕ್ಕಾಗಿ ಕುಲಶಾಸ್ತ್ರೀಯ ಅಧ್ಯಯನ ಆಗಬೇಕು. ಇದರಲ್ಲಿ ತಜ್ಞರೆಂದು ಪರಿಗಣಿತವಾದ ಮಾನವ ಶಾಸ್ತ್ರಜ್ಞರು ಕುಲಶಾಸ್ತ್ರೀಯ ಅಧ್ಯಯನ ಮಾಡಬೇಕಾಗಿದೆ. ಅಂಥವರು ಈ ವಿಷಯದಲ್ಲಿ ಹೆಚ್ಚಿನ ಅಧ್ಯಯನ ಮಾಡಿರುತ್ತಾರೆ.

1950ರಲ್ಲಿ ರಾಷ್ಟ್ರಪತಿಗಳು ಹೊರಡಿಸಿದ ಆದೇಶದಲ್ಲಿ ಮೈಸೂರು ಪ್ರಾಂತದಲ್ಲಿ ಕೇವಲ ಐದು ಜಾತಿಗಳು ಮಾತ್ರ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸ್ಥಾನಗಳಿಸಿದ್ದವು. ಅವೆಂದರೆ-ಹಸಲ, ಇರುಳಿಗ, ಜೇನುಕುರುಬ, ಕಾಡುಕುರುಬ, ಮಲೇರು ಮತ್ತು ಸೋಲಿಗ. 1956ರಲ್ಲಿ ರಾಜ್ಯ ಪುನರ್ ವಿಂಗಡಣೆ ಸಂದರ್ಭದಲ್ಲಿ ಮೈಸೂರು ರಾಜ್ಯಕ್ಕೆ ಸೇರ್ಪಡೆಯಾದ ಪ್ರದೇಶಗಳನ್ನೂ ಒಳಗೊಂಡಂತೆ 44 ಆದಿಮ ಸ್ವರೂಪದ ಆದಿವಾಸಿಗಳಿದ್ದವು ಎಂದು ತಿಳಿದು ಬಂದಿದೆ. ಆನಂತರದಲ್ಲಿ ಆರು ಜಾತಿಗಳು ಬೇರೆ ಬೇರೆ ಸಂದರ್ಭದಲ್ಲಿ ಸೇರ್ಪಡೆಯಾದವು. ಪ್ರಸ್ತುತ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ 50 ಜಾತಿಗಳಿವೆ. ಮೊದಲಿಗೆ ಆದಿವಾಸಿಗಳು ಎಂದು ಗುರುತಿಸಲಾದ ಕೆಲವು ಜಾತಿಗಳು ಹೀಗಿವೆ -ಗೊಂಡ, ಗೌಡಲು, ಹಕ್ಕಿಪಿಕ್ಕಿ, ಹಸಲರು, ಇರುಳಿಗ, ಜೇನು ಕುರುಬ, ಕಾಡು ಕುರುಬ, ಬೆಟ್ಟ ಕುರುಬ, ಕಾಟು ನಾಯಕನ್, ಕೊಂಡಕಾಪು, ಕೊರಗ, ಮಲೆಕುಡಿಯ, ಪರ್ಧೀ, ಸೋಲಿಗ, ತೋಡ, ಯರವ ಇತ್ಯಾದಿಯವು. ಇವುಗಳು ಗೊತ್ತುಪಡಿಸಿರುವ ಗುಣಲಕ್ಷಣಗಳಿಗೆ ಹೊಂದಿಕೊಳ್ಳುತ್ತವೆ. ಈ ಜಾತಿಗಳು ಕಾಡು ಅಥವಾ ಕಾಡಂಚಿನ ಪ್ರದೇಶದಲ್ಲಿ ನೆಲೆಸಿವೆ. ಇಂತಹ ಜಾತಿಗಳನ್ನು ಆದಿವಾಸಿಗಳು ಅಥವಾ ಪರಿಶಿಷ್ಟ ಪಂಗಡಗಳೆಂದು ಹೇಳಲು ಯಾವುದೇ ಅಭ್ಯಂತರ ಇಲ್ಲ. ಇವುಗಳ ಜನಸಂಖ್ಯೆ ಅಂದಿಗೆ 6 ಅಥವಾ 7 ಲಕ್ಷವನ್ನು ದಾಟುವುದಿಲ್ಲ. 2007-8ರ ತನಕ ಅಂದರೆ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಆಗುವವರೆಗೆ ಕರ್ನಾಟಕದಲ್ಲಿ ಕೇವಲ ಎರಡು ವಿಧಾನಸಭಾ ಕ್ಷೇತ್ರಗಳು ಮಾತ್ರ ಪರಿಶಿಷ್ಟ ಪಂಗಡ ಜಾತಿಗಳಿಗೆ ಮೀಸಲಾಗಿತ್ತು.

ಕಾಲಾನಂತರದಲ್ಲಿ, ಬಹು ಸಂಖ್ಯೆಯ ಭಿನ್ನ ಹೆಸರಿನ ಕೆಲವು ಬಲಾಢ್ಯ ಜಾತಿಗಳ ಸೇರ್ಪಡೆಯಿಂದ ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಾಯಿತು. ಲಾಗಾಯ್ತಿನಿಂದಲೂ ಶೇಕಡ 3ರಷ್ಟೇ ಮೀಸಲಾತಿ ಇದ್ದುದನ್ನು, ಇತ್ತೀಚೆಗೆ ರಾಜ್ಯ ಸರಕಾರ ಶೇಕಡ 7ರಷ್ಟಕ್ಕೆ ಹೆಚ್ಚಿಸಿರುವುದು ಎಲ್ಲರಿಗೂ ತಿಳಿದಿದೆ.

ಆದಿಮ ಸ್ವರೂಪದ 44 ಜಾತಿಗಳನ್ನು ಹೊರತುಪಡಿಸಿ ಉಳಿದ ಜಾತಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿದಾಗ, ಲೋಕೂರ್ ಸಮಿತಿ ನಿರ್ದಿಷ್ಟ ಪಡಿಸಿರುವ ಮಾನದಂಡಗಳಿಗೆ ಒಳಪಟ್ಟಿದ್ದವೇ ಎಂಬುದೂ ಯಕ್ಷಪ್ರಶ್ನೆಯಾಗಿ ಉಳಿದಿದೆ. ಈ ಸಮುದಾಯಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿದಾಗ, ಆದಿವಾಸಿಗಳು ಎನಿಸಿಕೊಂಡ ಜಾತಿಗಳು ಪ್ರತಿರೋಧಿಸಲು ಹೋಗಲಿಲ್ಲ; ಅಲ್ಲದೆ ಅವಕ್ಕೆ ಅಂಥಾ ಶಕ್ತಿಯೂ ಇರದೆ ಬಲಹೀನತೆಯಿಂದ ಬಳಲುತ್ತಿದ್ದವು. ರಾಜಕೀಯದಲ್ಲಿ ಯಾವುದೇ ಸ್ಥಾನಮಾನಗಳು ಒಂದೆರಡು ಅಪವಾದಗಳನ್ನು ಹೊರತುಪಡಿಸಿ ಇಂದಿಗೂ ಅವಕ್ಕೆ ದಕ್ಕಿಲ್ಲ. ರಾಜಕೀಯ ಪಕ್ಷಗಳೂ ಜಾತಿಗಳ ಜನಸಂಖ್ಯೆಯನ್ನೇ ಮಾನದಂಡವನ್ನಾಗಿ ಇಟ್ಟುಕೊಂಡಿರುವಾಗ ಅಲಕ್ಷಿತ ಆದಿವಾಸಿ ಸಮುದಾಯಗಳಿಗೆ ಅವಕಾಶ ಸಿಗುವುದಾದರೂ ಹೇಗೆ?

ಸುರಳಿತವಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಕೆಲವು ಜಾತಿಗಳು ನಿರಾತಂಕವಾಗಿ ರಾಜಕೀಯ ಸ್ಥಾನಮಾನ ಮತ್ತು ಸರಕಾರದ ಸವಲತ್ತು-ಸೌಲಭ್ಯಗಳನ್ನು ಪಡೆಯುತ್ತಲೇ ಇವೆ. ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಗಳಿಗೆ 15 ವಿಧಾನಸಭಾ ಕ್ಷೇತ್ರಗಳು ಮತ್ತು ಎರಡು ಲೋಕಸಭಾ ಕ್ಷೇತ್ರಗಳನ್ನು ಮೀಸಲಿರಿಸಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಒಂದೇ ಸಮುದಾಯ ಏಕಸ್ವಾಮ್ಯತೆ ಪಡೆದುಕೊಂಡಿದೆ. ಈ ವಿಷಯವನ್ನು ಪ್ರಸ್ತಾಪ ಮಾಡಲು ಹಿನ್ನೆಲೆ ಇದೆ.

ಕೆಲವು ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲನುವಾಗುವಂತೆ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತು. ಈಗಾಗಲೇ ಹೇಳಿದಂತೆ, ಹಾಲಕ್ಕಿ ಒಕ್ಕಲ್, ಕೋಲಿ, ಗಂಗಾಮತಸ್ಥ, ಕಾಡುಗೊಲ್ಲ ಮುಂತಾದವುಗಳನ್ನು ಕೇಂದ್ರ ಸರಕಾರ ಈಗಾಗಲೇ ಎರಡು ಬಾರಿ ಶಿಫಾರಸುಗಳನ್ನು ಕೂಲಂಕಷ ಅಧ್ಯಯನ ಮಾಡಿ, ಕೆಲವು ನ್ಯೂನತೆಗಳನ್ನು ಸರಿಪಡಿಸಲು ರಾಜ್ಯ ಸರಕಾರಕ್ಕೆ ಹಿಂದಿರುಗಿಸಿದೆ. ಮುಸ್ಲಿಮ್ ಮತ್ತು ಪರಿಶಿಷ್ಟ ಜಾತಿಗಳನ್ನು ಹೊರತುಪಡಿಸಿದಂತೆ ಕರ್ನಾಟಕದ ಜನಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿರುವ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು ಎಂಬುದನ್ನು ಮೇಲೆ ಹೇಳಲಾಗಿದೆ. ಪ್ರಸ್ತುತ ಕೇಂದ್ರ ಸರಕಾರ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ಶಿಫಾರಸು ಮರಳಿ ಬಂದಿದೆ. ಅದು ಬಂದು ಎರಡು ವರ್ಷಗಳೇ ಆಗಿರ ಬಹುದು. ಇದುವರೆಗೂ ರಾಜ್ಯ ಸರಕಾರ ಉತ್ತರಿಸಿಲ್ಲವೇಕೆ? ಎಂಬ ಪ್ರಶ್ನೆ ಧುತ್ತೆಂದು ಎದುರಾಗದಿರದು. ಆದರೆ, ಯಾರೊಬ್ಬರೂ ನಿರೀಕ್ಷಿಸದ ಸಮಯದಲ್ಲಿ, ಇದೇ ತಿಂಗಳ ದಿನಾಂಕ 16ನ್ನು ಅಧಿಕಾರಿ ವಲಯದ ಮಟ್ಟದಲ್ಲಿ ಕುರುಬ ಸಮುದಾಯದ ಬಗ್ಗೆ ಚರ್ಚಿಸಿ, ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವ ಕುರಿತು ಗೊತ್ತು ಪಡಿಸಲಾಗಿತ್ತು. ಆದರೆ ಅನೂಹ್ಯ ಕಾರಣದಿಂದ ಅನಿರ್ದಿಷ್ಟ ಕಾಲಕ್ಕೆ ಮುಂದೂಡಲ್ಪಟ್ಟಿತು. ಆದರೆ, ಅಷ್ಟರಲ್ಲಿ ಕೋಲಿ, ಕಾಡುಗೊಲ್ಲ ಮತ್ತು ಹಾಲಕ್ಕಿ ಒಕ್ಕಲು ಜಾತಿಗಳು ಸಹ ಕೇಂದ್ರ ಸರಕಾರದಿಂದ ಮರಳಿ ಬಂದಿದ್ದವು. 16ರಂದು ನಡೆಯಬೇಕಿದ್ದ ಸಭೆಗೆ, ಈ ಮೂರು ಜಾತಿಗಳ ವಿಷಯವನ್ನು ಮಂಡಿಸಿರಲಿಲ್ಲ. ಏಕೋ ಏನೋ ನಂತರದಲ್ಲಿ ಒಂದು ಜ್ಞಾಪನ ಹೊರಡಿಸಿ, ಅಂದು ನಡೆಯುವ ಸಭೆಯ ಚರ್ಚೆಗೆ ಈ ವಿಷಯಗಳನ್ನು ಇಟ್ಟುಕೊಂಡರು. ಸಭೆ ನಡೆಯಲಿಲ್ಲ ಎಂಬುದು ಬೇರೆ ಮಾತು. ಮುಂದೆ ಎಂದೋ ಎಂತೋ ಗೊತ್ತಿಲ್ಲ.

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಷಯದ ಮೇಲೆ, ಅಧಿಕಾರಿ ವಲಯದಲ್ಲಿ ಚರ್ಚೆಗೆ ಇಟ್ಟುಕೊಂಡಿರುವ ವಿಷಯವನ್ನು ಕೇಳಿ, ಈಗಾಗಲೇ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಬಲಾಢ್ಯ ಜಾತಿಯ ಗುಂಪೊಂದು ಕರ್ನಾಟಕದ ವಿವಿಧ ಕಡೆಗಳಲ್ಲಿ ವಿರೋಧಿಸಲು ಶುರುವಿಟ್ಟು ಕೊಂಡಿತು. ಆದರೆ ಎರಡೂ ವಿಷಯಗಳು ಸದ್ಯ ತಣ್ಣಗಾಗಿವೆ. ಮತ್ತೆ ಆ ವಿಷಯ ಚಾಲನೆಗೆ ಬಂದಾಗ ವಿರೋಧಿಸದೆ ಸುಮ್ಮನೆ ಕುಳಿತುಕೊಳ್ಳುತ್ತಾರೆ ಎಂಬ ಮಾತನ್ನು ನಂಬಲಸಾಧ್ಯ. ಈ ನಡುವೆ ಅದೇ ಸಮುದಾಯದ ಮಾಜಿ ಮಂತ್ರಿ ಒಬ್ಬರು, ಕುರುಬ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರುವುದನ್ನು ವಿರೋಧಿಸಲಿಲ್ಲ. ‘‘ಅರ್ಹತೆ ಇದ್ದರೆ ಸೇರಲಿ ನಮಗೇನು ನಷ್ಟವಿಲ್ಲ’’ ಎಂದು ಗಳಪಿಸಿದರು. ಈ ವಿಷಯ ಮುನ್ನೆಲೆಗೆ ಎಂದು ಬರುತ್ತದೆ ಸದ್ಯಕ್ಕಂತೂ ಯಾರಿಗೂ ತಿಳಿದಿಲ್ಲ.

ಪಿ.ಬಿ. ಲೋಕೂರ್ ಸಮಿತಿ ರೂಪಿಸಿದ 5 ಮಾನದಂಡಗಳನ್ನು ಈ ರೀತಿ ವಿವರಣಾತ್ಮಕವಾಗಿ ಬರೆಯಬಹುದು. ಆದಿಮ ಸಂಸ್ಕೃತಿಯ ಜನ ಅಥವಾ ಆದಿವಾಸಿಗಳು ಅವರದೇ ಆದ ವಿಶಿಷ್ಟ ಭಾಷೆ ಹೊಂದಿರುತ್ತಾರೆ. ಸಾಮಾಜಿಕ ವ್ಯವಸ್ಥೆ, ಸಂಸ್ಕೃತಿ, ಪ್ರಜಾತಿ, ಜಾತಿಗೆ ಸಂಬಂಧಿಸಿದ ಕಥೆ ಮುಂತಾದವುಗಳನ್ನು ಬಲ್ಲವರಾಗಿರುತ್ತಾರೆ. ಎಲ್ಲಕ್ಕೂ ಮಿಗಿಲಾಗಿ ಈ ಸಮುದಾಯದವರು ಒಂದು ಗೊತ್ತಾದ ಪ್ರದೇಶದಲ್ಲಿ ವಾಸ ಮಾಡುತ್ತಾರೆ. ಹಾಗೆಯೇ ಯಾವುದೋ ಜನ್ಮದ ಸಂತಾನವೆಂದು ತಮ್ಮನ್ನು ತಾವೇ ಬಿಂಬಿಸಿಕೊಳ್ಳುತ್ತಾರೆ. ಅವರ ಜೀವನದಲ್ಲಿ ಏಕರೂಪತೆ ಕಂಡು ಬರುತ್ತದೆ. ಅವರ ಇತಿಹಾಸವು ಅನೇಕ ಕಥೆಗಳಿಂದ ಕೂಡಿರುತ್ತದೆ ಮತ್ತು ಇತರರಿಂದ ಪ್ರತ್ಯೇಕಿಸಲ್ಪಟ್ಟಿರುತ್ತದೆ.

ಈ ಮೇಲಿನ ಗುಣಾಂಶಗಳು, ಪರಿಶಿಷ್ಟ ಪಂಗಡಕ್ಕೆ ಸೇರ ಬಯಸುವ ಯಾವುದೇ ಜಾತಿ - ಸಮುದಾಯಕ್ಕೆ ಹೊಂದಿಕೆಯಾಗುವಂತಿದ್ದರೆ, ಅರ್ಹತೆಯ ಆಧಾರದ ಮೇಲೆ ಪಂಗಡಕ್ಕೆ ಸೇರಬಹುದು. ಈಗಾಗಲೇ ಒಳಗಿರುವವರು ಎಷ್ಟೇ ವಿರೋಧಿಸಿದರೂ, ಅಂಥವರು ಹೊರಗಿರಲು ಸಾಧ್ಯವಿಲ್ಲ. ಅವರು ಕುರುಬ, ಹಾಲಕ್ಕಿ ಒಕ್ಕಲ್, ಕೋಲಿ, ಕಾಡುಗೊಲ್ಲ ಇತ್ಯಾದಿಯವರಿರಬಹುದು.

ಇನ್ನು ಪರಿಶಿಷ್ಟ ಪಂಗಡಕ್ಕೆ ಸೇರುವ ವಿಧಾನವೆಂದರೆ -ಸೇರಲಿರುವ ಅಂತಹ ಸಮುದಾಯಗಳು, ಮೇಲೆ ಪ್ರಸ್ತಾಪಿಸಿರುವ ಮಾನದಂಡಗಳನ್ನು ಹೊಂದಿದ್ದಲ್ಲಿ ಯಾವುದೇ ರಾಜ್ಯ ಸರಕಾರವು ಕೇಂದ್ರ ಸರಕಾರದ ಅಂಗ ಸಂಸ್ಥೆಯಾದ ಆರ್.ಜಿ.ಐ.ಗೆ ಶಿಫಾರಸು ಮಾಡಬಹುದು. ಅಂತಹ ಶಿಫಾರಸನ್ನು ಆರ್.ಜಿ.ಐ. ಕೂಲಂಕಷ ಅಧ್ಯಯನ ಮಾಡಿ, ಎಲ್ಲ ಅಂಶಗಳು ಸರಿ ಇದ್ದಲ್ಲಿ ರಾಷ್ಟ್ರೀಯ ಬುಡಕಟ್ಟು ಆಯೋಗಕ್ಕೆ ಕಳುಹಿಸುವುದು. ಆಯೋಗವು ಕೂಡ ಪರಿಶೀಲನೆಗೊಳಪಡಿಸಿ, ಸರಕಾರದ ಕಾರ್ಯದರ್ಶಿಗೆ ಕಳುಹಿಸಿದ ನಂತರ, ಕೇಂದ್ರ ಮಂತ್ರಿ ಮಂಡಲದಲ್ಲಿ ಅನುಮೋದನೆಗೊಳಪಟ್ಟು, ಉಭಯ ಸಂಸತ್ ಸದನಗಳಲ್ಲಿ ಅಂಗೀಕರಿಸಲ್ಪಟ್ಟ ನಂತರ ರಾಷ್ಟ್ರಪತಿಗಳ ಮುದ್ರೆ ಬಿದ್ದು, ರಾಷ್ಟ್ರಪತಿಗಳಿಂದಲೇ ಆದೇಶ ಹೊರಡುವುದು. ಆದೇಶ ಹೊರಬಿದ್ದ ನಂತರದಲ್ಲಿ ಪ್ರಕ್ರಮ ಮುಕ್ತಾಯವಾದಂತೆಯೇ.

ಯಾವುದೇ ಜಾತಿಯು ಪರಿಶಿಷ್ಟ ಪಂಗಡಕ್ಕೆ ಸೇರಬೇಕೆಂದು ಕ್ರಮಕ್ಕೆ ಮುಂದಾದರೆ, ಸೇರಲು ಇರುವ ಮಾನದಂಡಗಳೊಡನೆ ಯಾವೊಬ್ಬ ನಾಗರಿಕನೂ ಜಾತಿಯನ್ನು ಹೋಲಿಸಿ ನೋಡಿ ತೀರ್ಮಾನಿಸಲು ಸಾಧ್ಯವಿದೆ.

share
ಕೆ.ಎನ್. ಲಿಂಗಪ್ಪ
ಕೆ.ಎನ್. ಲಿಂಗಪ್ಪ
Next Story
X