Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಹಿರಿಯ ಕಾರ್ಮಿಕ ನಾಯಕ ಎಚ್.ವಿ....

ಹಿರಿಯ ಕಾರ್ಮಿಕ ನಾಯಕ ಎಚ್.ವಿ. ಅನಂತಸುಬ್ಬ ರಾವ್

ವಿ. ಕುಕ್ಯಾನ್, ಮಂಗಳೂರುವಿ. ಕುಕ್ಯಾನ್, ಮಂಗಳೂರು20 July 2026 10:36 AM IST
share
ಹಿರಿಯ ಕಾರ್ಮಿಕ ನಾಯಕ ಎಚ್.ವಿ. ಅನಂತಸುಬ್ಬ ರಾವ್

ಎಚ್.ವಿ. ಅನಂತಸುಬ್ಬ ರಾವ್‌ರವರು 1942 ಜುಲೈ 20ರಂದು ಎಚ್.ಎಸ್. ವೆಂಕಟರಾಮಯ್ಯ ಹಾಗೂ ನರಸಮ್ಮ ದಂಪತಿಗೆ ಹಿರಿಯ ಮಗನಾಗಿ ಹಾಸನ ಜಿಲ್ಲೆಯ ಹಿರಿಸಾವೆಯಲ್ಲಿ ಅರಕಗೂಡಲ್ಲಿ ಜನಿಸಿದರು. ತಾತ ಅರಕಲಗೂಡಲ್ಲಿ ಶ್ಯಾನುಭೋಗರಾಗಿದ್ದರು. ತಂದೆ ಅಧ್ಯಾಪಕರಾಗಿದ್ದರು.

ಅವರು ಪ್ರಾಥಮಿಕ ಶಿಕ್ಷಣವನ್ನು ಹಿರಿಸಾವೆಯಲ್ಲಿ, ಪಿಯುಸಿ ಶಿಕ್ಷಣವನ್ನು ಕೋಣನೂರಲ್ಲಿ ಹಾಗೂ ಪದವಿಯನ್ನು ಹಾಸನದ ಪ್ರಥಮ ದರ್ಜೆ ಕಾಲೇಜಲ್ಲಿ ಪೂರೈಸಿದರು.

ಅನಂತಸುಬ್ಬ ರಾಯರು 1962ರಲ್ಲಿ ಜೀವ ವಿಮಾ ನಿಗಮದ ಬೆಂಗಳೂರು ಶಾಖೆಯಲ್ಲಿ ಗುಮಾಸ್ತರಾಗಿ ಸೇರಿಕೊಂಡರು. ಆಗಿಂದಲೇ ಅವರು ವಿಮಾ ನೌಕರರ ಕಾರ್ಮಿಕ ಸಂಘದ ಚಟುವಟಿಕೆಗಳಲ್ಲಿ ತೀವ್ರ ಆಸಕ್ತಿ ತೋರಿಸಿದರು. 1964ರಿಂದಲೇ ವಿಮಾ ನೌಕರರ ಸಂಘಟನೆಯಲ್ಲಿ ಸಿಪಿಐ ನಾಯಕರಾದ ಸಿ.ವಿ. ಜಯತೀರ್ಥರವರ ಸಂಪರ್ಕದಿಂದ ಮಾರ್ಕ್ಸ್‌ವಾದಿ ಚಿಂತನೆಗೆ ಆಕರ್ಷಿತರಾಗಿ ಆಗಿಂದಲೇ ದೇಶದ ಪ್ರಖ್ಯಾತ ಕಮ್ಯುನಿಸ್ಟ್ ನಾಯಕರಾದ ಎಸ್.ಎ. ಡಾಂಗೆ, ರಾಜೇಶ್ವರ್ ರಾವ್, ಇಂದ್ರಜಿತ್ ಗುಪ್ತ, ಗುರುದಾಸ್ ದಾಸ್ ಗುಪ್ತ, ಎಸ್.ವಿ. ಘಾಟೆ, ಎ.ಬಿ. ಬರ್ಧನ್, ರಾಜ್ಯದ ನಾಯಕರಾದ ಎಂ.ಎಸ್. ಕೃಷ್ಣನ್, ಎಂ.ಸಿ. ನರಸಿಂಹನ್,

ಬಿ.ವಿ. ಕಕ್ಕಿಲ್ಲಾಯ, ಸಿಂಪ್ಸನ್ ಸೋನ್ಸ್,

ಎ. ಶಾಂತಾರಾಮ ಪೈ ಮೊದಲಾದವರ ಸಂಪರ್ಕಕ್ಕೆ ಬಂದರು. 1967ರಲ್ಲಿ ಅವರು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಸದಸ್ಯರಾದರು. ಸಿಪಿಐ ಕರ್ನಾಟಕ ರಾಜ್ಯ ಕಾರ್ಯಕಾರಿ ಸಮಿತಿಯ ಖಜಾಂಜಿಯಾಗಿ ಅನೇಕ ವರ್ಷಗಳ ಕಾಲ ಕಾರ್ಯನಿರ್ವಹಿದ್ದಾರೆ. ಅವರು ಪಕ್ಷದ ರಾಷ್ಟ್ರೀಯ ಮಂಡಳಿಯ ಸದಸ್ಯರೂ ಆಗಿದ್ದರು.

ಎಲ್‌ಐಸಿ ಕಾರ್ಮಿಕ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. 1971ರಲ್ಲಿ ವಿಮಾ ನಿಗಮದ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾದರು ಮತ್ತು ಆಲ್ ಇಂಡಿಯಾ ಇನ್ಸೂರೆನ್ಸ್ ಎಂಪ್ಲಾಯೀಸ್ ಅಸೋಸಿಯೇಶನ್ AIIEA) ಕಾರ್ಯಕಾರಿ ಸಮಿತಿ ಸದಸ್ಯರಾದರು.

ಆ ಹೊತ್ತಿಗೆ ಅವರು ವಿದ್ಯಾರ್ಥಿ ಹಾಗೂ ಯುವಜನ ಸಂಘಟನೆಗಳ ಬಗ್ಗೆ ಆಸಕ್ತಿ ವಹಿಸಿ ಅದರಲ್ಲಿ ಸಕ್ರಿಯವಾಗಿ ದುಡಿದರು. ಅದರೊಂದಿಗೆ ಜನಸಮೂಹದ ಚಟುವಟಿಕೆಗಳ ಬಗ್ಗೆ ಅಭ್ಯಸಿಸಿದರು. ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ) ಕಾರ್ಮಿಕರ ಪರವಾಗಿ ದುಡಿಯುತಿದ್ದುದನ್ನು ಗಮನಿಸಿದ ಇವರು ಅಲ್ಲಿಯೂ ತನ್ನನ್ನು ತೊಡಗಿಸಿಕೊಂಡರು. ಮುಂದೆ ಎಐಟಿಯುಸಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ಜೀವನ ಪರ್ಯಂತ ದುಡಿದರು. ಅವರು ಎಐಟಿಯುಸಿಯ ಕೇಂದ್ರ ಸಮಿತಿ ಉಪಾಧ್ಯಕ್ಷರಾಗಿ ಹಲವು ವರ್ಷ ಕಾರ್ಯ ನಿರ್ವಹಿಸಿದ್ದರು.

1976ರಲ್ಲಿ ಎಐಟಿಯುಸಿ ವತಿಯಿಂದ ಅವರನ್ನು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ (KSRTC) ಕಾರ್ಮಿಕ ಹಾಗೂ ನೌಕರರ ಯೂನಿಯನ್‌ನ ಕೆಲಸಕ್ಕಾಗಿ ನಿಯೋಜಿಸಲಾಯಿತು. ಅದರೊಂದಿಗೆ ಅವರು ಈ ಯೂನಿಯನ್‌ನ ಉಪಾಧ್ಯಕ್ಷರಾಗಿ ಚುನಾಯಿತರಾದರು. ಅಲ್ಲಿನ ನೌಕರರ ಉತ್ತಮ ಕೆಲಸದ ಪರಿಸ್ಥಿತಿ ಹಾಗೂ ಜೀವನಮಟ್ಟ ಸುದಾರಣೆಗಾಗಿ ಅನೇಕ ಹೋರಾಟಗಳಿಗೆ ನೇತೃತ್ವ ವಹಿಸಿದರು. ಕಾರ್ಮಿಕ ಸಂಘಟನೆಗಳ ಪ್ರಜಾಪ್ರಭುತ್ವೀಕರಣಕ್ಕಾಗಿ ಅವರು ದುಡಿದರು. ರಹಸ್ಯ ಮತದಾನದ ಮೂಲಕ ಸಂಘಗಳ ಗುರುತಿಸುವಿಕೆಗಾಗಿ (recognition) ಇವರು ಹೋರಾಡಿದರು. ಮುಂದೆ 1990ರಲ್ಲಿ ಕೆಎಸ್ಸಾರ್ಟಿಸಿ ಯೂನಿಯನ್‌ನ ಕಾರ್ಯದರ್ಶಿಯಾಗಿ ಅವರು ಚುನಾಯಿತರಾದರು. ಇವರ ನೇತೃತ್ವದಲ್ಲಿ 1989ರ ಜುಲೈ 17ರಂದು ಮತ್ತು 1995ರ ಡಿಸೆಂಬರ್ 26ರಂದು ನಡೆದ ದ್ವಿಪಕ್ಷೀಯ ಒಪ್ಪಂದಗಳು ಸಾರಿಗೆ ಕಾರ್ಮಿಕರಿಗೆ ಗರಿಷ್ಠ ಸೌಲಭ್ಯಗಳನ್ನು ಒದಗಿಸಿಕೊಟ್ಟವು. ಇದು ಸಾರಿಗೆ ಇತಿಹಾಸದಲ್ಲಿ ದೊಡ್ಡ ಮೈಲುಗಲ್ಲಾಗಿದೆ. ಕೆಎಸ್ಸಾರ್ಟಿಸಿ ಯೂನಿಯನ್ ಅಂದರೆ ಅನಂತಸುಬ್ಬ ರಾವ್, ಅನಂತಸುಬ್ಬ ರಾವ್ ಎಂದರೆ ಕೆಎಸ್ಸಾರ್ಟಿಸಿ ಯೂನಿಯನ್ ಎಂಬಂತೆ ಅವರು ಪ್ರಸಿದ್ಧಿ ಪಡೆದರು. 2021ರ ವರೆಗೆ ಪ್ರಧಾನ ಕಾರ್ಯದರ್ಶಿಯಾಗಿ ದುಡಿದ ಇವರು ನಂತರದಲ್ಲಿ ಅದರ ಅಧ್ಯಕ್ಷರಾಗಿ ದುಡಿದರು.

1970ರಲ್ಲಿ ಅವರು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ(ಎಐಟಿಯುಸಿ) ಸದಸ್ಯರಾದರು. 1983ರಲ್ಲಿ ಎಐಟಿಯುಸಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಕೆಎಸ್ಸಾರ್ಟಿಸಿ ಯೂನಿಯನ್‌ನ ಜವಾಬ್ದಾರಿ ಜೊತೆಗೆ ಅವರು ಇತರ ಕಾರ್ಮಿಕ ಸಂಘಟನೆಗಳಿಗೂ ದುಡಿದಿದ್ದಾರೆ. ಅವರು ಎಲ್‌ಐಸಿ ನೌಕರರ ಸಂಘ ಬೆಂಗಳೂರು ಇದರ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

ಇತರ ಸಂಘಟನೆಗಳಾದ ಮೈಕೋ ನೌಕರರ ಸಂಘ, ಐಟಿಸಿ ಕಾರ್ಮಿಕರ ಸಂಘ, ಬಿಇಎಲ್ ನೌಕರರ ಸಂಘ, ಹರಿಹರದ ಗ್ರಾಸ್ಲಿನ್ ನೌಕರರ ಸಂಘ, ಕೆಎಸ್‌ಎಮ್‌ಬಿ ಕಾರ್ಮಿಕರ ಸಂಘ, ತುಮಕೂರಿನ ವಿಪ್ರೋ ನೌಕರರ ಸಂಘ, ಪಿಜೆ ಮಾರ್ಗೋ ನೌಕರರ ಸಂಘ, ಎಸ್‌ಟಿಐ ಗ್ರಾನೈಟ್ ನೌಕರರ ಸಂಘ, ಫಿಟ್‌ವೆಲ್ ಕಾರ್ಮಿಕರ ಸಂಘ, ವಿಬಿ ಬೇಕರಿ ಕಾರ್ಮಿಕರ ಸಂಘ ಮುಂತಾದ ಸಂಘಟನೆಗಳಲ್ಲಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು.

ಅಂಗನವಾಡಿ ಶಿಕ್ಷಕರ ಮತ್ತು ಸಹಾಯಕರ ಸಂಘದ ಪರವಾಗಿ ಇವರು ಕರ್ನಾಟಕ ನ್ಯಾಯಮಂಡಳಿಯಲ್ಲಿ(ಏಂಖಿ) ವಾದಿಸಿದುದರ ಫಲವಾಗಿ ಕೆಎಟಿ ಅಂಗನವಾಡಿ ನೌಕರರನ್ನು ಸರಕಾರಿ ನೌಕರರು ಎಂದು ತೀರ್ಪು ನೀಡಿತು. ಆದರೆ ಸರಕಾರ ಇದನ್ನು ಇನ್ನೂ ಪರಿಗಣಿಸಿಲ್ಲ. ಇವರು ಪ್ರಾದೇಶಿಕ ಭವಿಷ್ಯನಿಧಿ ಸಮಿತಿ ಮತ್ತು ಗುತ್ತಿಗೆ ಕಾರ್ಮಿಕರ ಸಲಹಾ ಮಂಡಳಿಗೆ ಸರಕಾರಿ ನೇಮಿತ ತ್ರಿಪಕ್ಷೀಯ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಷನ್ ಇದರ ಅಧ್ಯಕ್ಷರಾಗಿದ್ದಾಗ, ಬೀಡಿ ಸಂಸ್ಥೆಗಳ ಮಾಲಕರು ಸರಕಾರ ನಿಗದಿಗೊಳಿಸಿದ ತುಟ್ಟಿಭತ್ತೆ ನೀಡದಿದ್ದಾಗ ಸುಪ್ರೀಂ ಕೋರ್ಟ್ ವರೆಗೆ ಮೊಕದ್ದಮೆಯನ್ನು ಕೊಂಡುಹೋಗಿ ಜಯ ಗಳಿಸುವಲ್ಲಿ ಅವರು ಸಫಲರಾದರು. ಇದರಿಂದ ಬೀಡಿ ಕಾರ್ಮಿಕರಿಗೆ ಬಾಕಿಮೊತ್ತ ಸಿಕ್ಕಿತು.

ಅನಂತಸುಬ್ಬರಾಯರು ಸರಳ, ಸಜ್ಜನಿಕೆಯ ಬದುಕು ನಡೆಸಿದರು. ನಂಬಿದ ಸಿದ್ಧಾಂತಕ್ಕೆ ಎಂದಿಗೂ ಬದ್ಧರಾಗಿದ್ದರು. ಕಾರ್ಮಿಕರ ಹೋರಾಟಗಳಲ್ಲಿ ಎಂದೂ ರಾಜಿ ಮಾಡಿ.ಕೆ.ೂಳ್ಳದ ವ್ಯಕ್ತಿತ್ವ ಹೊಂದಿದ್ದರು.

ಇಂತಹ ಮೇರು ವ್ಯಕ್ತಿತ್ವ ತನ್ನ 84ನೇ ವಯಸ್ಸಿನಲ್ಲಿ 28-01-2026ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಸಾರಿಗೆ ನೌಕರರ ವೇತನ ಹಿಂಬಾಕಿ ಬೇಡಿ.ಕೆ. ಈಡೇರಿಕೆ ಸಲುವಾಗಿ 29-01-2026ರಂದು ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಕರೆ ನೀಡಲಾಗಿತ್ತು. ಇದರ ಬಗ್ಗೆ 28ರಂದು ಕಾರ್ಮಿಕ ನಾಯಕರೊಡನೆ ಚರ್ಚಿಸುತ್ತಿರುವಾಗಲೇ ಸಾವು ಅವರನ್ನು ಕಾಡಿತು.

ಅವರ ಮೆದುಳು ಮತ್ತು ಕಣ್ಣನ್ನು ದಾನ ಮಾಡಲಾಯಿತು. ಅವರ ಪಾರ್ಥಿವ ಶರೀರವನ್ನು ನಿಮ್ಹಾನ್ಸ್ ವೈದ್ಯಕೀಯ ಸಂಸ್ಥೆಗೆ ನೀಡಲಾಯಿತು. ಸದಾ ಹಸನ್ಮುಖಿ ಚಿಂತನೆ, ಚರ್ಚೆಯಲ್ಲಿ ಭಾಗವಹಿಸುವಾಗ ಅತೀ ಗಂಭೀರ ಸ್ವಭಾವದವರಾಗಿದ್ದರು. ಅವರು ಪ್ರಾಮಾಣಿಕತೆ ಮತ್ತು ಕಾರ್ಯದಕ್ಷತೆಯಿಂದ ಇತರ ಎಲ್ಲಾ ರಾಜಕೀಯ ಪಕ್ಷದವರ ಮನಗೆದ್ದಿದ್ದರು ಹಾಗೂ ಎಲ್ಲಾ ಪಕ್ಷಗಳ ನಾಯಕರು ಅವರನ್ನು ಗೌರವಿಸುತ್ತಿದ್ದರು.

Tags

H.V. Ananthasubba Rao
share
ವಿ. ಕುಕ್ಯಾನ್, ಮಂಗಳೂರು
ವಿ. ಕುಕ್ಯಾನ್, ಮಂಗಳೂರು
Next Story
X