Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ನೈಸರ್ಗಿಕ ಸಂಪನ್ಮೂಲಗಳಿರುವ ಭಾರತದಲ್ಲೂ...

ನೈಸರ್ಗಿಕ ಸಂಪನ್ಮೂಲಗಳಿರುವ ಭಾರತದಲ್ಲೂ ಭೀಕರ ಬರಗಾಲ: ಕಾರಣ ಮತ್ತು ಪರಿಹಾರಗಳು

ವಾರ್ತಾಭಾರತಿವಾರ್ತಾಭಾರತಿ1 July 2026 10:09 AM IST
share
ನೈಸರ್ಗಿಕ ಸಂಪನ್ಮೂಲಗಳಿರುವ ಭಾರತದಲ್ಲೂ ಭೀಕರ ಬರಗಾಲ: ಕಾರಣ ಮತ್ತು ಪರಿಹಾರಗಳು

ಭಾರತವು ಕೃಷಿ ಪ್ರಧಾನವಾದ ದೇಶವಾಗಿರುವುದರಿಂದ ಶೇ. 90ರಷ್ಟು ಜನತೆ ಪರೋಕ್ಷ ಮತ್ತು ಅಪರೋಕ್ಷವಾಗಿ ಕೃಷಿಯನ್ನು ಅವಲಂಭಿಸಿದೆ. ಒಂದೊಮ್ಮೆ ನೆರೆಹಾವಳಿ, ಭೂಕಂಪ, ಸುನಾಮಿ, ಚಂಡಮಾರುತ, ಭೂಕುಸಿತ, ಅತಿವೃಷ್ಟಿ, ಶೀತಗಾಳಿ, ಉಷ್ಣಗಾಳಿ, ಬಿರುಗಾಳಿ ಹಾಗೂ ಬರಗಾಲದಂತಹ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಕೃಷಿಕ್ಷೇತ್ರವು ಮೊದಲು ಹಾನಿಗೊಳಗಾಗುತ್ತದೆ. ಈ ಅವಘಡಗಳು ಹೇಳಿ ಬರುವುದಿಲ್ಲವಾದರೂ, ಮುಂದುವರಿದ ತಂತ್ರಜ್ಞಾನಗಳು ಇವುಗಳ ಕುರಿತು ಹಲವು ಮುನ್ಸೂಚನೆಗಳನ್ನು ನೀಡುತ್ತವೆ. ಪೂರ್ವಸಿದ್ಧತೆಯಾಗದಿದ್ದಲ್ಲಿ ನರಕಯಾತನೆಯಾಗುತ್ತದೆ. ಮೊನ್ನೆ ವೆನೆಝುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪದ ಕುರಿತು ಅಂಡ್ರಾಯ್ಡ್ ಮೊಬೈಲ್‌ಗೆ ಸೂಚನೆ ಬಂದಿತ್ತಾದರೂ ಪಾಲಿಸಿರಲಿಲ್ಲ. ಕೃಷಿಕ್ಷೇತ್ರ ತೃಪ್ತಿಕರವಾಗಿದ್ದಾಗ ಇದಕ್ಕೆ ಸಂಬಂಧಿಸಿದ ಸಾರಿಗೆ, ಸಂವಹನ, ಉದ್ದಿಮೆ, ಬ್ಯಾಂಕಿಂಗ್, ವ್ಯಾಪಾರ, ವಹಿವಾಟಗಳು ನಿರೀಕ್ಷೆ ಮೀರಿ ಮುನ್ನಡೆಯುತ್ತವೆ. ಆದರೆ ಬರಗಾಲದಂತಹ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಕೃಷಿಕ್ಷೇತ್ರವು ಹಾನಿಯಾಗಿ ಎಲ್ಲ ರಂಗಗಳು ಹಿನ್ನಡೆಯಾಗುತ್ತವೆ. ಬರಗಾಲದಲ್ಲಾಗುವ ಈ ಹಾನಿಯನ್ನು ಸರಿಮಾಡಲು ಮಾಡಲು ಕನಿಷ್ಠ 2-3 ವರ್ಷಗಳಾದರೂ ಬೇಕಾಗುತ್ತವೆ.

ಇಂದು ಬರಗಾಲವೆಂಬುದು 3-4 ವರ್ಷಗಳಿಗೊಮ್ಮೆ ನಿಸರ್ಗದಲ್ಲಿ ನಡೆಯುವ ನಿಶ್ಚಿತವಾದ ಪ್ರಕ್ರಿಯೆಂತಾಗಿದೆ. ಬರಗಾಲವು ಶತಶತಮಾನಗಳ ಕಾಲದಿಂದಲೂ ನಡೆಯುತ್ತ ಬಂದಿರುವ ಪ್ರಕೃತಿಯ ವಿದ್ಯಮಾನವಾಗಿದ್ದರೂ ಕಳೆದ ಶತಮಾನದಲ್ಲಿ ಮೂರ್ನಾಲ್ಕು ಸಲ ತಲೆದೋರಿತ್ತು. ಸಜ್ಜಿಬರ ಮತ್ತು ಢೋಗಿಬರ ಎಂಬವು ಕಳೆದ ಶತಮಾನದಲ್ಲಿನ ಭೀಕರ ಬರಗಾಲಗಳಾಗಿದ್ದವು. ಪ್ರಸ್ತುತ ಬರಗಾಲವು ಮೂರ್ನಾಲ್ಕು ವರ್ಷಗಳಿಗೊಮ್ಮೆ ಬರುತ್ತಿದೆ. ಕಾರಣ, ಅತಿಯಾಸೆಗಾಗಿ ಹೆಚ್ಚುತ್ತಿರುವ ನಿಸರ್ಗ ವಿರೋಧಿ ಚಟುವಟಿಕೆಗಳಾಗಿವೆ. ಇವುಗಳಲ್ಲಿ ಅವೈಜ್ಞಾನಿಕವಾದ ನಗರೀಕರಣ ಮತ್ತು ಅನವಶ್ಯಕವಾಗಿ ಗಿಡ-ಮರಗಳನ್ನು ಕಡಿಯುವುದು ಪ್ರಮುಖವಾಗಿದೆ. ನಿರೀಕ್ಷೆಯಂತೆ ಮಳೆಯಾಗಬೇಕಾದರೆ ಕಾಡು, ಪರ್ವತ, ಗುಡ್ಡ, ಗಿಡ-ಮರಗಳು ನೈಸರ್ಗಿಕವಾಗಿ ನಿರಂತರ ಬೆಳೆಯುತ್ತಿರಬೇಕು. ಆದರೆ ಇಂದು ಭಾರತ ಸೇರಿದಂತೆ ವಿಶ್ವದ ಬಹುತೇಕ ಭಾಗಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಪರ್ಯಾಯ ವ್ಯವಸ್ಥೆಯಿಲ್ಲದೆ ನಿಸರ್ಗದ ಚಿತ್ರಣವನ್ನು ಬದಲಾಯಿಸಲಾಗುತ್ತಿದೆ. ಇದರಿಂದ ಬರಗಾಲಗಳು ಮೇಲಿಂದ ಮೇಲೆ ತಲೆದೋರುತ್ತಿರುವುದು ಸುಳ್ಳೇನಲ್ಲ. ತಂತ್ರಜ್ಞಾನ ಮುಂದುವರಿದಂತೆ ನಾಡು ಅಭಿವೃದ್ಧಿಯಾಗಬೇಕು, ಆದರೆ ಪ್ರಕೃತಿಯನ್ನು ನಾಶಗೊಳಿಸಿ ಅಭಿವೃದ್ಧಿಯಾದರೆ ಅದೊಂದು ಕ್ಷಣಿಕ ಸುಖವಾಗುತ್ತದೆ.

ಚೀನಾ, ಕ್ಯಾಲಿಫೋರ್ನಿಯಾ ಮತ್ತು ನೆರೆಯ ಶ್ರೀಲಂಕಾಗಳಲ್ಲಿ ಸಮೃದ್ಧ ಕಾಡುಗಳಿರುವ ಪರಿಣಾಮ ಮಳೆ ಬೀಳುವ ದಿನಗಳು ಮುಂಚಿತವಾಗಿಯೇ ತಿಳಿಯುತ್ತವೆ. ಋತುಮಾನಗಳು ಬದಲಾದಂತೆ ಪ್ರತಿದಿನ ವಾತಾವರಣದಲ್ಲಿ ಬದಲಾಗುವ ಆರ್ದ್ರತೆ, ಗಾಳಿ ಮತ್ತು ತಾಪಮಾನಗಳು ಮಳೆ ಬೀಳುವ ದಿನಾಂಕವನ್ನು ಗುರುತಿಸುವಲ್ಲಿ ಸಹಕಾರಿಯಾಗುತ್ತವೆ. ಇದರಿಂದಾಗಿ ಅಲ್ಲಿನ ಕೃಷಿಯು ಲಾಭದಲ್ಲಿದೆ. ಈ ದೇಶಗಳಲ್ಲಿ ಗಿಡ-ಮರಗಳನ್ನು ಕಡಿದರೆ ಮಾನವಹತ್ಯೆಗೆ ಸಮನಾದ ಕಠಿಣ ಶಿಕ್ಷೆಯನ್ನು ವಿಧಿಸುವುದರಿಂದ ಗಿಡ-ಮರಗಳನ್ನು ಕಡಿಯುವುದು ಒತ್ತಟ್ಟಿಗಿರಲಿ ಅವುಗಳನ್ನು ಯಾರೂ ಮುಟ್ಟುವುದಿಲ್ಲ. ಆದರೆ ಭಾರತದಲ್ಲಿ ಸಲೀಸಾಗಿ ಗಿಡ-ಮರಗಳನ್ನು ಕಡಿಯುತ್ತಿರುವುದು ದುರಂತವಾಗಿದೆ. ಸಮಶೀತೋಷ್ಣ ವಲಯದಲ್ಲಿರುವ ಭಾರತವು ಮೊದಲು ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿತ್ತು. ಕಳೆದ ಶತಮಾನದ ಅಂತ್ಯದಿಂದ ಅರಣ್ಯ ಮತ್ತು ಪರಿಸರ ನಾಶದಂತಹ ಚಟುವಟಿಕೆಗಳು ನಿರಂತರವಾಗಿವೆ.

ಬರಗಾಲಕ್ಕೆ ಅರಣ್ಯ ಮತ್ತು ಪರಿಸರ ನಾಶವು ಒಂದಡೆಯಾದರೆ, ಮಳೆನೀರನ್ನು ಸಂರಕ್ಷಿಸದಿರುವುದು ಮತ್ತೊಂದು ಪ್ರಮುಖ ಕಾರಣವಾಗಿದೆ. ಇದರಿಂದಾಗಿಯೇ ಭಾರತದಲ್ಲಿಂದು ಅಂತರ್ಜಲಮಟ್ಟ ಕುಸಿಯುತ್ತಿದೆ. ಮುಂದುವರಿದ ದೇಶಗಳು ಒಂದು ತೊಟ್ಟು ಮಳೆನೀರನ್ನೂ ಹಾನಿಗೊಳಿಸದೆ ಸಂರಕ್ಷಿಸುತ್ತಿರುವುದರಿಂದ ಅಲ್ಲಿರುವ ಜೀವಸಂಕುಲದ ಬದುಕು ಆರೋಗ್ಯಕರವಾಗಿವೆ. ಮಳೆನೀರು ನೈಸರ್ಗಿಕವಾಗಿ ಪ್ರಾಪ್ತವಾಗಿರುವ ರೋಗನಿರೋಧಕ ಶಕ್ತಿಯ ಪರಿಶುದ್ಧ ನೀರಾಗಿದೆ. ಮಳೆನೀರು ಫ್ಲೋರೈಡ್ ಮತ್ತು ಕ್ಲೋರಿನ್‌ರಹಿತವಾಗಿರುವುದರಿಂದ ಅದರಲ್ಲಿರುವ ಖನಿಜಾಂಶಗಳು ಹಾಗೂ ಲವಣಾಂಶಗಳು ಮಣ್ಣು ಮತ್ತು ಮನುಕುಲದ ಆರೋಗ್ಯಕ್ಕೆ ಸಹಕಾರಿಯಾಗಿವೆ.

ಭಾರತದಲ್ಲಿನ ಮಳೆಯು ಅನಿಶ್ಚಿತವಾಗಿದೆ. ಆದ್ದರಿಂದ ಬಿದ್ದ ಮಳೆನೀರನ್ನು ಹಿಡಿದಿಟ್ಟುಕೊಂಡು ವರ್ಷಾನುಗಟ್ಟಲೆ ಬಳಸುವಂತಾಗಬೇಕು. ಅದಕ್ಕಾಗಿ ಮಳೆನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡಬೇಕಾಗುತ್ತದೆ. ಇದರಿಂದ ಭೂಮಿಯೊಳಗೆ ಶುದ್ಧವಾದ ನೀರಿನ ಅಣೆಕಟ್ಟನ್ನು ನಿರ್ಮಿಸಿದಂತಾಗುತ್ತದೆ. ಇದಕ್ಕಾಗಿ ಅಲ್ಲಲ್ಲಿ ವೈಜ್ಞಾನಿಕವಾದ ಇಂಗುಗುಂಡಿ ಮತ್ತು ಚೆಕ್‌ಡ್ಯಾಮ್‌ಗಳನ್ನು ನಿರ್ಮಿಸಬೇಕು. ಇದರೊಂದಿಗೆ ಪರಿಸರಪ್ರಜ್ಞೆಯಿಂದ ಗಿಡ-ಮರಗಳನ್ನು ಬೆಳೆಸುವ ಪರಿಜ್ಞಾನವು ಬೆಳೆಯಬೇಕು. ಹಿಂದಿನ ಕಾಲದಲ್ಲಿ ಕಾಲ್ನಡಿಗೆಯ ಸಂಚಾರವಿದ್ದುದರಿಂದ ಮಾರ್ಗಮಧ್ಯದಲ್ಲಿ ವಿಶ್ರಾಂತಿಗಾಗಿ ಗಿಡ-ಮರಗಳನ್ನು ಬೆಳೆಸಲಾಗುತ್ತಿತ್ತು. ಇದರಿಂದಾಗಿ ಅಂದು ವಾತಾವರಣದಲ್ಲಿ ಮತ್ತಷ್ಟು ಶುದ್ಧವಾದ ಆಮ್ಲಜನಕದ ಪ್ರಮಾಣವು ಹೆಚ್ಚಾಗುತ್ತಿತ್ತು. ಆದರೆ ಇಂದು ವಾಹನ ಸಂಚಾರವೇ ಹೆಚ್ಚು ಇರುವುದರಿಂದ ಮಾರ್ಗಮಧ್ಯದಲ್ಲಿ ವಿಶ್ರಾಂತಿಯ ಅವಶ್ಯಕತೆಯಿಲ್ಲವಾದ್ದರಿಂದ ರಸ್ತೆಬದಿಯಲ್ಲಿರುವ ಮರಗಳ ಮಾರಣಹೋಮ ನಿರಂತರವಾಗಿದೆ. ವಾಹನಗಳಿಂದ ಹೊರಸೂಸುವ ಕಾರ್ಬನ್ ಪ್ರಮಾಣ ಹೆಚ್ಚಾಗಿರುವುದರಿಂದ ವಾತಾವರಣವು ಮತ್ತಷ್ಟು ಬಿಸಿಯಾಗುತ್ತಿದೆ. ಆದ್ದರಿಂದ ಬರಗಾಲದ ನಿರ್ಮೂಲನಕ್ಕಿರುವ ಮಾರ್ಗಗಳೆಂದರೆ, ಗಿಡ-ಮರಗಳ ಬೆಳೆಸುವಿಕೆ ಹಾಗೂ ಮಳೆನೀರಿನ ಸಂಗ್ರಹವಾಗಿದೆ. ಆದರೆ ಭಾರತದಲ್ಲಿ ಇವುಗಳನ್ನು ನಿರ್ಲಕ್ಷಿಸಲಾಗುತ್ತಿರುವುದು ದುರಂತ.

ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಕಡ್ಡಾಯ ಮಳೆನೀರು ಸಂರಕ್ಷಣೆ ಮತ್ತು ಗಿಡ-ಮರಗಳನ್ನು ಬೆಳೆಸುವ ನೀತಿಯ ಮೂಲಕ ಸಮೃದ್ಧ ನಾಡು ಕಟ್ಟುವಲ್ಲಿ ಕ್ರಮ ಕೈಗೊಳ್ಳಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X