Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಸಮಾಜವಾದಿ, ರೈತ, ಕನ್ನಡ ಚಳವಳಿಗಳ ಭೀಷ್ಮ...

ಸಮಾಜವಾದಿ, ರೈತ, ಕನ್ನಡ ಚಳವಳಿಗಳ ಭೀಷ್ಮ : ಶಾಂತವೇರಿ ಗೋಪಾಲ ಗೌಡ

ಎಸ್. ಮೂರ್ತಿಎಸ್. ಮೂರ್ತಿ9 Jun 2025 9:59 AM IST
share
ಸಮಾಜವಾದಿ, ರೈತ, ಕನ್ನಡ ಚಳವಳಿಗಳ ಭೀಷ್ಮ : ಶಾಂತವೇರಿ ಗೋಪಾಲ ಗೌಡ

ರಾಜ್ಯದ ಮಲೆನಾಡು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕಿನ, ಅರಗ ಅಂಚೆಯ ಕುಗ್ರಾಮದಲ್ಲಿ, ಮಣ್ಣಿನ ಗೋಡೆ ಮತ್ತು ಒಣಹುಲ್ಲಿನ ಮೇಲ್ಛಾವಣಿಯ ಗುಡಿಸಲಿನ ಮನೆಯಲ್ಲಿ ವಾಸವಿದ್ದ ಕೊಲ್ಲೂರಯ್ಯಗೌಡ ಮತ್ತು ಶೇಸಮ್ಮ ದಂಪತಿಯ ಮೂರು ಮಕ್ಕಳ ಪೈಕಿ, ಕೊನೆಯವರಾಗಿ ದಿನಾಂಕ 14-3-1923ರಂದು ಗೋಪಾಲಗೌಡರು ಜನಿಸಿದರು. ಇವರು ನಿಧನ ಹೊಂದಿ ಇಂದಿಗೆ 53 ವರ್ಷಗಳು ಕಳೆದಿವೆ.

ಶಾಂತವೇರಿ ಗೋಪಾಲಗೌಡರು ಮಹಾತ್ಮಾ ಗಾಂಧೀಜಿಯವರ ಆದರ್ಶ, ಅಹಿಂಸೆ, ಹೋರಾಟಗಳಿಗೆ ಓಗೊಟ್ಟು, ಭಾರತೀಯ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕಕ್ಕೆ(1946) ಸೇರ್ಪಡೆ ಯಾದವರು. ತರಗತಿಗಳು ನಡೆಯುತ್ತಿದ್ದ ವೇಳೆಯಲ್ಲಿಯೇ, ಶಾಲಾ-ಕಾಲೇಜುಗಳಿಗೆ ಗೋಪಾಲ ಗೌಡರು ನುಗ್ಗಿ, ವಿದ್ಯಾರ್ಥಿಗಳನ್ನು ಕಾಂಗ್ರೆಸ್ ಸಂಘಟಿಸುತ್ತಿರುವ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ಹುರಿದುಂಬಿಸಿದರು. ತೀರ್ಥಹಳ್ಳಿಯ ಸರಕಾರಿ ಶಾಲೆಯ ನರಸಿಂಹ ಶಾಸ್ತ್ರಿ ಮೇಷ್ಟ್ರು , ‘ಓದಿನ ಕಡೆ ಮಾತ್ರ ಗಮನ ಹರಿಸಿ, ಹೋರಾಟ ಮಾಡಬೇಡಿ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ಕೊಡುತ್ತಿದ್ದರು. ‘ಸ್ವರಾಜ್ಯ ಮೇಲಿನಿಂದ ಧುಮುಕುತ್ತದೆಯೇ? ನಾವು ಹೋರಾಟ ಮಾಡಿ, ಸ್ವಾತಂತ್ರ್ಯ ಪಡೆಯ ಬೇಕು’ ಎಂದು ಗೋಪಾಲ ಗೌಡರು ಮೇಷ್ಟ್ರಿಗೆ ಖಾರವಾಗಿ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳನ್ನು ಬೀದಿಗಳಿಗೆ ಕರೆ ತಂದರು. ವಿದ್ಯಾರ್ಥಿ ಸಮೂಹಗಳ ಮಧ್ಯೆ ಮಹಾತ್ಮಾ ಗಾಂಧೀಜಿಯವರ ಆದೇಶದಂತೆ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂದು ಘೋಷಣೆ ಹಾಕುತ್ತಿದ್ದರು. ಗೋಪಾಲ ಗೌಡರು ಒಮ್ಮೆ ತೀರ್ಥಹಳ್ಳಿಯ ಬೀದಿಗಳಲ್ಲಿದ್ದ ಅಂಚೆ ಡಬ್ಬಗಳನ್ನು ಕಿತ್ತು ಎಸೆದರು, ಟೆಲಿಗ್ರಾಫ್ ತಂತಿಗಳನ್ನು ಕತ್ತರಿಸಿದರು. ಪೊಲೀಸರು ಬಂಧನ ಮಾಡಲು ಬಂದಾಗ ತಪ್ಪಿಸಿಕೊಂಡು, ಮಾರುವೇಷದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಳನ್ನು ಮುಂದುವರಿಸಿದರು.1946ರಲ್ಲಿ ಕರ್ನಾಟಕದಲ್ಲಿ ‘ಅಖಿಲ ಕರ್ನಾಟಕ ವಿದ್ಯಾರ್ಥಿ ಕಾಂಗ್ರೆಸ್‌ನ ಸಮ್ಮೇಳನ’ವನ್ನು ಗೋಪಾಲ ಗೌಡರು ಏರ್ಪಡಿಸಿ, ಮಹಾತ್ಮಾ ಗಾಂಧೀಜಿ ಮತ್ತು ಸ್ವಾತಂತ್ರ್ಯ ಚಳವಳಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

ಹೀಗೆ ಸ್ವಾತಂತ್ರ್ಯ ಚಳವಳಿ ಮುಂದೆ ಸಾಗುತ್ತಿದ್ದಾಗಲೇ, ಬ್ರಿಟಿಷರು ಗೌಡರನ್ನು ಬಂಧಿಸಿ ಶಿವಮೊಗ್ಗ ಜೈಲಿಗೆ ಹಾಕಿದರು. ಆ ಜೈಲ್ ವಾಸ ಸಮಯದಲ್ಲಿ ಸಿದ್ದಯ್ಯ, ಕುಮಾರನ್, ಕೆ.ಸಿ. ರೆಡ್ಡಿ , ಬಾಸಮ್... ಇತ್ಯಾದಿ ನಾಯಕರುಗಳ ಪರಿಚಯವಾಯಿತು. ಗೋಪಾಲ ಗೌಡರು ಜೈಲಿನಲ್ಲಿಯೇ ಜವಾಹರ ಲಾಲ್ ನೆಹರೂ ಅವರ ಆisಛಿoveಡಿಥಿ oಜಿ Iಟಿಜiಚಿ, ಮಾರ್ಕ್ಸ್‌ವಾದ, ಗಾಂಧಿವಾದ, ಟ್ರಾಟಸ್ಕಿ ಅವರ ಪುಸ್ತಕ, ಬರಹಗಳನ್ನು ಅಧ್ಯಯನ ಮಾಡಿದರು. ಜೈಲು ಒಳಗಡೆ ಆದ ಪರಿಚಯಗಳು ಮತ್ತು ಅಧ್ಯಯನಗಳು ಗೋಪಾಲಗೌಡರ ಮುಂದಿನ ರಾಜಕೀಯ ಪ್ರವೇಶಕ್ಕೆ ಜ್ಞಾನದ ದೀಕ್ಷೆಯಾಯಿತು.

ಸಮಾಜವಾದ ಜೊತೆಯಲ್ಲಿ ರಾಜ್ಯದಲ್ಲಿ ರೈತ ಚಳವಳಿಗಳ ಉಗಮ

ಸಮಾಜವಾದಿ ಚಳವಳಿಗಳ ಜೊತೆಯಲ್ಲಿಯೇ, ರೈತರ ಬವಣೆ; ರೈತರ ಬೆಳೆಗಳಿಗೆ ಒಳ್ಳೆ ಬೆಲೆ ಸಿಗದಿರುವ ಬಗ್ಗೆ ; ಅನ್ಯಾಯಗಳ ಬಗ್ಗೆ ರೈತರನ್ನು ಎಚ್ಚರಿಸಿ, ಸಂಘಟಿಸಲು 1948ರ ಅವಧಿಯಲ್ಲಿ ಗೋಪಾಲ ಗೌಡರು ತೀರ್ಥಹಳ್ಳಿಯಲ್ಲಿ ‘ಹಿಂದೂ ಕಿಸಾನ್ ಪಂಚಾಯತ್’ ಹೆಸರಿನಲ್ಲಿ ರೈತರ ದೊಡ್ಡ ಸಮ್ಮೇಳನವನ್ನು ಏರ್ಪಡಿಸಿದರು. ಮುಂದೆ ಶಿವಮೊಗ್ಗ ಜಿಲ್ಲೆಯಲ್ಲಿ ರೈತ ಸಂಘ ಸ್ಥಾಪನೆಗೆ ಕಾರಣಕರ್ತರಲ್ಲೊಬ್ಬರಾದರು. ಆಗ ಸ್ಥಾಪನೆಯಾದ ರೈತ ಸಂಘ ಈಗ ಕವಲು ಒಡೆದಿದೆ.

ಕಾಗೋಡು ಚಳವಳಿ

ಶಿವಮೊಗ್ಗ ಮಲೆನಾಡು ಭಾಗಗಳಲ್ಲಿ, ನೂರಾರು ಎಕರೆ ಭೂ ಒಡೆತನದ ಮಾಲಕರು, ತಮ್ಮ ಜಮೀನುಗಳನ್ನು ಉಳುಮೆ ಮಾಡಲು ಶಕ್ತಿ ಇಲ್ಲದೆ, ಸ್ಥಳೀಯ ಕೃಷಿ ಕಾರ್ಮಿಕರಿಗೆ ಗೇಣಿಗೆ ನೀಡಿದ್ದರು. ಈ ಗೇಣಿದಾರರು, ನಿಗದಿಯಾಗಿದ್ದ ಸರಕಾರಿ ಅಳತೆ ಕೊಳಗ ಬದಲಿಗೆ ಹೆಚ್ಚು ಪ್ರಮಾಣದ ಕೊಳಗದ ಅಳತೆಯಲ್ಲಿ ಬೆಳೆಯನ್ನು ನೀಡಬೇಕೆಂದು ಭೂ ಮಾಲಕರುಗಳು ಧಮಕಿ ಹಾಕಲು ಪ್ರಾರಂಭಿಸಿದರು. ಇದು ಅನ್ಯಾಯವೆಂದು ಸದರಿ ಗೇಣಿದಾರರು ಜಗಳಕ್ಕೆ ಇಳಿದ್ರು ನಂತರ ಗಣಪತಿಯಪ್ಪ ನೇತೃತ್ವದಲ್ಲಿ ಪ್ರತಿಭಟನೆಗೆ ಇಳಿದರು. ಗೇಣಿದಾರರಿಗೆ, ನೀಡುತ್ತಿದ್ದ ಕಿರುಕುಳ, ಹಿಂಸೆ, ಶೋಷಣೆಗಳನ್ನು ಗಮನಿಸಿದ ಗೋಪಾಲ ಗೌಡರು ಗೇಣಿದಾರರ ಪರ ದಿನಾಂಕ 19-4-1951ರಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಾಗೋಡಿನಲ್ಲಿ ಭೂಮಾಲಕರ ವಿರುದ್ಧ ರೈತರ ಕೃಷಿ ಕಾರ್ಮಿಕರ ಚಳವಳಿಯನ್ನು ಪ್ರಾರಂಭಿಸಿದರು. ಈ ಚಳವಳಿ ವ್ಯಾಪಕಗೊಂಡು ಕಾಗೋಡು ಚಳವಳಿಯಾಗಿ ರೂಪಾಂತರವಾಯಿತು. ಗೌಡರು ಚಳವಳಿ ಉದ್ದಕ್ಕೂ ಭೂ ಮಾಲಕರ ದರ್ಪ, ದೌರ್ಜನ್ಯಗಳನ್ನು ಖಂಡಿಸಿ ಗೇಣಿದಾರರನ್ನು ಸಂಘಟಿಸಿ, ಉಳುವವನೇ ಒಡೆಯ ಆಗಬೇಕು ಎಂದು ಘೋಷಣೆ ಕೂಗಿದರು. ಗೇಣಿ ಮಾಡುತ್ತಿದ್ದ ರೈತರಿಗೆ ನ್ಯಾಯ ಕೊಡಿಸಿದರು. ಈ ಗೇಣಿದಾರರ ಹೋರಾಟಗಳೇ ಮುಂದೆ 1975ರ ಅವಧಿಯಲ್ಲಿ ದೇವರಾಜ ಅರಸು ಮುಖ್ಯಮಂತ್ರಿ ಆದಾಗ ಜಾರಿಯಾದ ಭೂ ಸುಧಾರಣೆ ಕಾಯ್ದೆಗಳಿಗೆ ಬುನಾದಿಯಾಯಿತು.

1952ರಲ್ಲಿ ಮೊದಲ ವಿಧಾನಸಭೆಗೆ ಪ್ರವೇಶ

ದೇಶ ಮತ್ತು ರಾಜ್ಯದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ 1952ರಲ್ಲಿ ಘೋಷಣೆ ಆಯಿತು. ರೈತರು, ಹರಿಜನರು, ಕನ್ನಡಿಗರು, ಗೇಣಿದಾರರು ಗೋಪಾಲಗೌಡರನ್ನು ವಿಧಾನಸಭೆಗೆ ಸಮಾಜವಾದಿ ಪಕ್ಷದಿಂದ ಸ್ಪರ್ಧೆ ಮಾಡಲು ಒತ್ತಾಯಿಸಿದರು. ಹಣ ಇಲ್ಲದ ಬಗ್ಗೆ ಗೋಪಾಲ ಗೌಡರು ತಿಳಿಸಿದರು. ಆಗ ಜನರೇ ಹಣ ಸಂಗ್ರಹ ಮಾಡಿ, ಚುನಾವಣೆಯ ಠೇವಣಿ ನೀಡಿದರು. ಹಳ್ಳಿ ಸುತ್ತಲೂ ಚುನಾವಣೆಗಾಗಿ ಸ್ನೇಹಿತರು, ಸ್ನೇಹಿತರೊಬ್ಬರ ಬಳಿ ಇದ್ದ ಕಾರು ಕೊಡಿಸಿದರು. ಸಾರ್ವಜನಿಕ ವೇದಿಕೆ, ಮೈಕ್ ಇತ್ಯಾದಿ ಏರ್ಪಾಡುಗಳನ್ನು ಜನರೇ ಅವರ ವೆಚ್ಚದಲ್ಲಿಯೇ ಮಾಡಿದರು. ಕ್ಷೇತ್ರದಲ್ಲಿ ಚುನಾವಣೆ ಕಾವು ಬಿರುಸುಗೊಂಡಿತು. ಪ್ರಚಾರ ಸಾಗಿದಂತೆಲ್ಲಾ ಗೋಪಾಲ ಗೌಡರ ಆರ್ಥಿಕ ಸ್ಥಿತಿ ಕ್ಷೀಣಿಸಿತು. ಪರಿಸ್ಥಿತಿ ಹೇಗಿತ್ತು ಎನ್ನುವುದಕ್ಕೆ ಒಂದು ಉದಾಹರಣೆ ಎಂದರೆ - ಸಾಗರ ಪಟ್ಟಣದಲ್ಲಿ ಪ್ರಚಾರಕ್ಕಾಗಿ ಸಂಚರಿಸುವಾಗ ಕಾರಿನಲ್ಲಿ ಪೆಟ್ರೋಲ್ ಖಾಲಿ ಆಯ್ತು. ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಪೆಟ್ರೋಲ್ ಹಾಕಿಸಲು ಗೋಪಾಲ ಗೌಡರು ಕಾರು ನಿಲ್ಲಿಸಿದ್ದರು. ಅವರ ಜೇಬಲ್ಲಿ ಹಣವಿಲ್ಲ. ಕಾರಿನಲ್ಲಿದ್ದ ಶಿಷ್ಯರ ಜೇಬಿನಲ್ಲಿಯೂ ಹಣ ಇರಲಿಲ್ಲ. ಅದೃಷ್ಟಕ್ಕೆ ಆ ವೇಳೆಯಲ್ಲಿಯೇ ಎದುರಾಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬದ್ರಿ ನಾರಾಯಣ್ ಅವರು ಕಾರಿಗೆ ಪೆಟ್ರೋಲ್ ಹಾಕಿಸಲು ಆ ಬಂಕಿಗೆ ಬಂದರು. ಇದನ್ನು ಗಮನಿಸಿದ ಗೋಪಾಲ ಗೌಡರು ನನ್ನ ಕಾರಿಗೂ ಪೆಟ್ರೋಲ್ ಹಾಕ್ಸಿರೀ ಎಂದು ಬದ್ರಿ ನಾರಾಯಣ್ ಅವರಿಗೆ ಹೇಳಿದರು. ಬದ್ರಿನಾರಾಯಣ್ ನಗುತ್ತಾ... ಪೆಟ್ರೋಲ್ ಹಾಕಿಸಿ, ಬಂಕ್ ಹುಡುಗರಿಗೆ ಹಣ ನೀಡಿ, ಜೊತೆಗೆ ಗೋಪಾಲ ಗೌಡರಿಗೆ ಶುಭ ಕೋರಿ ಹೋದರು.

1952ರಲ್ಲಿ ಮೊದಲ ಮೈಸೂರು ವಿಧಾನಸಭೆಗೆ ಪ್ರವೇಶಿಸಿ ಪ್ರಮಾಣವಚನ ಮಾಡಿ, ತುರ್ತಾಗಿ ವಾಪಸ್ ಸಾಗರಕ್ಕೆ ಬಂದರು. ಚುನಾವಣೆಯ ಖರ್ಚು ವೆಚ್ಚಗಳ ಜವಾಬ್ದಾರಿ ನಿರ್ವಹಣೆ ಮಾಡಿದ್ದ ಸಾಗರದ ಬಿ.ಎಸ್. ಚಂದ್ರಶೇಖರ್ ಅವರನ್ನು ಭೇಟಿಯಾಗಿ ಚುನಾವಣೆಗೆ ಎಷ್ಟು ಖರ್ಚಾಯಿತು? ಎಂದು ಕೇಳಿದರು. ಅದಕ್ಕೆ ಚಂದ್ರಶೇಖರ್‌ರೂ. 5,000 ಎಂದರು. ತಕ್ಷಣವೇ ಅವರು ಸ್ಥಳೀಯ ಸೊಸೈಟಿ ಒಂದಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಸಾಲದ ಅರ್ಜಿ ಪಡೆದು, ಭರ್ತಿ ಮಾಡಿ ನೀಡಿ ರೂ. 2,000 ಪಡೆದು ಸಾಲ ಪಾವತಿಸಿದರು. ಮುಂದಿನ ದಿನಗಳಲ್ಲಿ ಸರಕಾರದಿಂದ ಪಡೆದ ವೇತನಗಳಿಂದ ರೂ. 3,000 ಕೂಡ ಚಂದ್ರಶೇಖರ್ ಗೆ ಪಾವತಿಸಿ ಸಾಲ ಮುಕ್ತರಾದರು.

ಶಾಸನ ಸಭೆಯಲ್ಲಿ ಗೌಡರು

ಮುಂದೆ 1957ರಲ್ಲಿ ಮೈಸೂರು ವಿಧಾನಸಭೆಗೆ 2ನೇ ಸಾರ್ವತ್ರಿಕ ಚುನಾವಣೆ ಬಂದಿತು. ಆ ಚುನಾವಣೆಯಲ್ಲಿ ಎದುರಾಳಿ ಕಾಂಗ್ರೆಸ್ ಪಕ್ಷದ ಬದ್ರಿ ನಾರಾಯಣ್ ವಿರುದ್ಧ ಗೋಪಾಲ ಗೌಡರು ಸೋತರು. ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ ಆದರೆ ಜನಪರ ಹೋರಾಟಗಳಲ್ಲಿ ಗೌಡ್ರು ತೊಡಗಿದರು. ಜನರೇ ಗೋಪಾಲ ಗೌಡರನ್ನು ರಾಜ್ಯದ ಉದ್ದಗಲಕ್ಕೂ ಸಭೆ, ಸಮಾರಂಭಗಳಿಗೆ, ಪ್ರತಿಭಟನೆಗಳಿಗೆ ಅವರ ವೆಚ್ಚದಲ್ಲಿಯೇ ಕರೆದೊಯ್ಯುತ್ತಿದ್ದರು. ಸೋಲಿನ ದಿನಗಳಲ್ಲಿ ಅವರು ಹೇಳಿದ್ದ ಒಂದು ಮಾತು- ‘ಗೆದ್ದರೆ ನಾನು ಕ್ಷೇತ್ರದ ಪ್ರತಿನಿಧಿ. ಸೋತಾಗ ನಾನು ನಾಡಿನ ಪ್ರತಿನಿಧಿ.’ ಚುನಾವಣೆಯಲ್ಲಿ ಸೋತಿದ್ದರೂ, ಸಮಾಜವಾದಿ ಮತ್ತು ರೈತ ಚಳವಳಿಗಳನ್ನು ಮುಂದುವರಿಸಿದರು.

ಗೋಪಾಲಗೌಡರು ಸೋತಿದ್ದ ಅವಧಿಯಲ್ಲಿ,(1957) ಶಿವಮೊಗ್ಗ ಜಿಲ್ಲೆಯ ಮತ್ತೊಬ್ಬ ರಾಜಕಾರಣಿ ಶ್ರೀ ಕಡಿದಾಳ್ ಮಂಜಪ್ಪ ಮತ್ತೊಂದು ಕ್ಷೇತ್ರದಲ್ಲಿ ಗೆದ್ದು ಮಂತ್ರಿಯಾಗಿದ್ದರು. ಅವರು ಆಪ್ತರ ಮೂಲಕ ಗೌಡರ ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಪಡೆದು, ತೀರ್ಥಹಳ್ಳಿಯ ನಾವೆ ಕೆಳಗೆ ಇರುವ 6 ಎಕರೆ ಸರಕಾರಿ ಜಮೀನು ಕೊಡಿಸುತ್ತೇನೆ, ಅರ್ಜಿ ಹಾಕಿಕೊಳ್ಳಲು ತಿಳಿಸಿ ಎಂದು ಆಪ್ತರಿಗೆ ಹೇಳಿ ಕಳಿಸಿದರು. ಆದರೆ ಗೋಪಾಲಗೌಡರು ‘‘ನನಗೆ ಭೂಮಿ ಉಳುಮೆ ಮಾಡಲು ಶಕ್ತಿ ಕಡಿಮೆ. ಆ ಕಾರಣ ನನ್ನ ಬದಲು, ಉಳುಮೆ ಮಾಡಲು ಶಕ್ತಿ ಇದ್ದು, ಭೂಮಿ ಇಲ್ಲದ ಆರು ಜನರಿಗೆ ಒಂದೊಂದು ಎಕರೆ ನೀಡಿ’’ ಎಂದು ಹೇಳಿ ವಾಪಸ್ ಕಳಿಸಿದರು. ‘‘ಉಳುವವನೇ ಭೂಮಿಯ ಒಡೆಯ ಆಗಬೇಕು. ನಾನು ಉಳುಮೆ ಮಾಡುವುದಿಲ್ಲ ಆ ಕಾರಣಕ್ಕಾಗಿ, ನಾನು ಭೂಮಿ ಪಡೆಯುವುದು ಅಪರಾಧ’’ವೆಂದು ಹೇಳಿ ಗೌಡರು ಭೂಮಿಯನ್ನು ಪಡೆಯಲು ನಿರಾಕರಿಸಿದರು.

1962ರಲ್ಲಿ ಮೈಸೂರು ವಿಧಾನಸಭೆಗೆ ನಡೆದ 3ನೇ ಸಾರ್ವತ್ರಿಕ ಚುನಾವಣೆಯಲ್ಲಿ, 1967ರಲ್ಲಿ ಮೈಸೂರು ವಿಧಾನಸಭೆಗೆ ನಡೆದ 4ನೇ ಸಾರ್ವತ್ರಿಕ ಚುನಾವಣೆಯಲ್ಲಿ ಜಯಶೀಲರಾಗಿ, ಒಟ್ಟು ಮೂರು ಬಾರಿ ಶಾಸಕರಾಗಿ ರಾಜ್ಯದ ಜನತೆಯ ಸೇವೆಯನ್ನು ಗೋಪಾಲ ಗೌಡರು ಸಲ್ಲಿಸಿದರು. ಇವರು ಶಾಸನಸಭೆಯಲ್ಲಿ ಮಾಡುತ್ತಿದ್ದ ಭಾಷಣಗಳ ಅಂಶಗಳನ್ನು ಆದರಿಸಿ ಮುಂದೆ ಶ್ರೀಮತಿ ಇಂದಿರಾಗಾಂಧಿ ಅವರು ರಾಷ್ಟ್ರವ್ಯಾಪಿ 20 ಠಿoiಟಿಣ ಠಿಡಿogಡಿಚಿm ಮತ್ತು ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದರು. ರಾಷ್ಟ್ರವ್ಯಾಪಿ ಮಹಾರಾಜರುಗಳ ಅರಸೊತ್ತಿಗೆ ರದ್ದಾಗಿದ್ದರೂ, ಅವರ ಹೆಸರುಗಳಲ್ಲಿ ಮೈಸೂರು ದಸರಾ ನಡೆಯುವುದನ್ನು, ಸರಕಾರಿ ಹಣ ವ್ಯಯ ಮಾಡುವುದನ್ನು ವಿರೋಧಿಸಿ, ಒಮ್ಮೆ ಕಪ್ಪು ಪಟ್ಟಿ ಪ್ರದರ್ಶನವನ್ನು ಗೋಪಾಲಗೌಡರು ಮೈಸೂರಿನಲ್ಲಿ ಮಾಡಿದ್ದರು. ರಾಜ್ಯಕ್ಕೆ ಮೈಸೂರು ಬದಲಿಗೆ ಕರ್ನಾಟಕ ಎಂದು ನಾಮಕರಣ ಮಾಡಬೇಕೆಂದು ಶಾಸನಸಭೆಯಲ್ಲಿ ಒತ್ತಾಯಿಸುತ್ತಿದ್ದರು. ಇವರ ಒತ್ತಾಯದಂತೆ ಮುಂದೆ, ದೇವರಾಜ ಅರಸು ರಾಜ್ಯಕ್ಕೆ ಕರ್ನಾಟಕ ರಾಜ್ಯ ವೆಂದು ನಾಮಕರಣ ಮಾಡಿದರು.

ಈ ಚಳವಳಿಗಳು, ರಾಜಕಾರಣ, ಬದುಕು ಮಧ್ಯೆ, ದಿನಾಂಕ 2-3-1964ರಂದು ಹುಬ್ಬಳ್ಳಿಯ ವಕೀಲರಾದ ಆಐ. ಪಾಟೀಲ್ ಮಗಳು ಸೋನಕ್ಕ ಅವರನ್ನು ಗೋಪಾಲಗೌಡರು ವಿವಾಹವಾದರು.

ಹೆಸರಾಂತ ರಾಜಕಾರಣಿ ಆಗಿದ್ದರೂ, ರಾಜ್ಯದಲ್ಲಿ ಮತ್ತು ಬೆಂಗಳೂರಿನಲ್ಲಿ ಎಲ್ಲಿಯೂ ಗೋಪಾಲಗೌಡರಿಗೆ ಸ್ವಂತ ಮನೆ, ಜಮೀನು, ಓಡಾಡಲು ಸ್ವಂತ ಕಾರು ಇರಲಿಲ್ಲ. ಒಮ್ಮೆ ಸಚಿವ ಸಂಪುಟದ ವಿರುದ್ಧ ದೂರು ನೀಡುವ ಸಲುವಾಗಿ ರಾಜ್ಯಪಾಲರ ಭೇಟಿಗೆ ಅನುಮತಿ ಕೇಳಿದ್ದರು. ಅನುಮತಿ ನೀಡಿದ ರಾಜ್ಯಪಾಲ ಧರ್ಮವೀರ ಗೋಪಾಲಗೌಡರನ್ನು ರಿಸೀವ್ ಮಾಡಲು ರಾಜಭವನದ ದ್ವಾರದಲ್ಲಿ ಕಾಯುತ್ತಿದ್ದರು. ಗೋಪಾಲಗೌಡರು ನಡೆದುಕೊಂಡು ಬಂದರು. ಇದನ್ನು ಗಮನಿಸಿದ್ದ ರಾಜ್ಯಪಾಲರು ದೂರು ಸ್ವೀಕಾರದ ನಂತರ ಒಂದು ಕಾರನ್ನು ತೆಗೆದುಕೊಳ್ಳಿ ಅಥವಾ ನಾನೇ ಕೊಡಿಸುತ್ತೇನೆ ಎಂದು ನುಡಿದರು. ಡ್ರೈವರ್ ಗೆ ಸಂಬಳ ನೀಡಲು ಮತ್ತು ಕಾರಿಗೆ ಪೆಟ್ರೋಲ್ ಹಾಕಿಸಲು ನನ್ನ ಬಳಿ ಹಣ ಇಲ್ಲ . ಶಾಸಕನಾದ ನನ್ನ ಸಂಬಳ ಕೇವಲ ರೂ. 350 ಎಂದರು. ಆ ಕಾರಣಕ್ಕೆ ನನಗೆ ಕಾರು ಬೇಡ ಎಂದು ತಿರಸ್ಕರಿಸಿದರು. ಮದುವೆಯಾದ ಮೊದಲ ಮೂರು ವರ್ಷಗಳವರೆಗೆ ಬೆಂಗಳೂರಿನ ಶಾಸಕರ ಭವನದಲ್ಲಿ ಪತಿ-ಪತ್ನಿಯರಿಬ್ಬರೂ ವಾಸವಿದ್ದರು. ಇವರ ಕಷ್ಟದ ಮಾಹಿತಿ ತಿಳಿದು, 1952ರಲ್ಲಿ ಮುಖ್ಯಮಂತ್ರಿ ಆಗಿದ್ದ ಕೆಂಗಲ್ ಹನುಮಂತಯ್ಯನವರು ಶಾಸಕರ ಕೋಟಾದಲ್ಲಿ ನಿವೇಶನ ಒಂದನ್ನು ಮಂಜೂರು ಮಾಡಿದ್ದರು. ಅದಕ್ಕೆ ಬೇಕಾದ ಹಣ ಇಲ್ಲದ ಕಾರಣ ನಿರಾಕರಿಸಿದ್ದರು. ಮುಂದುವರಿದು ನಿಜಲಿಂಗಪ್ಪನವರು ಒಮ್ಮೆ ಏಊಃ ಮನೆ ಮಂಜೂರು ಮಾಡಿದಾಗ ಆಗ ಕೂಡ ಹಣ ಇಲ್ಲದೆ ಗೋಪಾಲ ಗೌಡರು ನಿರಾಕರಿಸಿದ್ದರು. ಮುಂದೆ ಮುಖ್ಯಮಂತ್ರಿ ಆಗಿದ್ದ ವೀರೇಂದ್ರ ಪಾಟೀಲರು ಬೆಂಗಳೂರಿನಲ್ಲಿ ನಿವೇಶನ ಒಂದನ್ನು ಮಂಜೂರು ಮಾಡಿದರು. ಈ ನಿವೇಶನಕ್ಕೆ ಕಟ್ಟಲು ಹಣವಿಲ್ಲದೆ ಅದನ್ನೂ ವಾಪಸ್ ಪಡೆಯಲು ಗೌಡರು ಸರಕಾರಕ್ಕೆ ತಿಳಿಸಿದರು. ಈ ಮಾಹಿತಿ ತಿಳಿದ ಸೋನಕ್ಕ, ಮುಖ್ಯಮಂತ್ರಿ ಅವರನ್ನು ಕಂಡು, ವಿನಂತಿಸಿ, ಕಂತು ರೂಪದಲ್ಲಿ ಹಣ ಪಾವತಿಗೆ ಅವಕಾಶ ಪಡೆದು, ಶಿಕ್ಷಕಿ ವೃತ್ತಿಯಿಂದ ಬರುತ್ತಿದ್ದ ವೇತನದಲ್ಲಿ ಮಕ್ಕಳನ್ನು ಓದಿಸಿ, ಸಾಕಿಕೊಂಡು, ಈ ನಿವೇಶನದ ಕಂತುಗಳನ್ನು ಕಟ್ಟಿ ಬೆಂಗಳೂರಿನಲ್ಲಿ ನಿವೇಶನವನ್ನು ಉಳಿಸಿಕೊಂಡರು.

1970ರ ಪ್ರಾರಂಭದಲ್ಲಿ ಹಿರಿಯ ಸಮಾಜವಾದಿ ರಾಮ್ ಮನೋಹರ್ ಲೋಹಿಯಾ ಮೃತರಾದರು. ಈ ಸಾವನ್ನು ಅರಗಿಸಿಕೊಳ್ಳಲು ಗೋಪಾಲ ಗೌಡರಿಗೆ ಕಷ್ಟವಾಯಿತು. ಈ ಅಗಲಿಕೆಯ ದಿನಗಳಲ್ಲಿ ಗೋಪಾಲ ಗೌಡರು ಕೂಡ ಅನಾರೋಗ್ಯಕ್ಕೆ ಒಳಗಾದರು. ಚಿಕಿತ್ಸೆ ಪಡೆಯಲು ಹಣದ ಕೊರತೆ ಎದುರಾಯಿತು. ಸಹಾಯಕ್ಕಾಗಿ ಯಾರಿಗೂ ಕೈಚಾಚಲಿಲ್ಲ. ಕಾಯಿಲೆ ಉಲ್ಬಣಗೊಳ್ಳುತ್ತಾ ಸಾಗಿತು. ಆಗಲೂ ಯಾರಲ್ಲಿಯೂ ಕೇಳಲಿಲ್ಲ. 9-6-1972ರಲ್ಲಿ ಅವರು ಕೊನೆ ಉಸಿರು ಎಳೆದರು.

share
ಎಸ್. ಮೂರ್ತಿ
ಎಸ್. ಮೂರ್ತಿ

ರಾಜ್ಯ ಮುಖ್ಯ ಸಂಚಾಲಕರು, ಅಹಿಂದ ಚಳವಳಿ

Next Story
X