Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಬೀದಿ ಬದಿಯ ವ್ಯಾಪಾರಿಗಳ ಸಂರಕ್ಷಣೆ ಮತ್ತು...

ಬೀದಿ ಬದಿಯ ವ್ಯಾಪಾರಿಗಳ ಸಂರಕ್ಷಣೆ ಮತ್ತು ಪುನರ್ವಸತಿ ಸರಕಾರದ ಆದ್ಯತೆಯಾಗಲಿ

ದಾಸನೂರು ಕೂಸಣ್ಣದಾಸನೂರು ಕೂಸಣ್ಣ2 July 2026 10:24 AM IST
share
ಬೀದಿ ಬದಿಯ ವ್ಯಾಪಾರಿಗಳ ಸಂರಕ್ಷಣೆ ಮತ್ತು ಪುನರ್ವಸತಿ ಸರಕಾರದ ಆದ್ಯತೆಯಾಗಲಿ

ಬೀದಿಬದಿಯ ವ್ಯಾಪಾರ ವಿಶ್ವಾದ್ಯಂತ ನಡೆಯುತ್ತಿದೆ. ಅನುಭೋಗಿಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬೇಕಾದ ವಸ್ತುಗಳ ಖರೀದಿಗೆ ಮುಂದಾಗುತ್ತಾರೆ. ಇಲ್ಲಿ ವ್ಯಾಪಾರ ಮಾಡುವವರ ಸಾಂಸ್ಥಿಕ ಸಮಸ್ಯೆಗಳು ಹತ್ತಾರಿರುತ್ತವೆ. ಅವರೆಲ್ಲರೂ ಅನೌಪಚಾರಿಕ ಆರ್ಥಿಕತೆಯ (Informal Economy)ಪ್ರಮುಖ ಭಾಗೀದಾರರಾಗಿದ್ದರೂ ಅವರ ಒಡಲಲ್ಲಿ ಹತ್ತಾರು ಸಮಸ್ಯೆಗಳಿರುತ್ತವೆ. ಅದರಲ್ಲಿ ಅತಿಮುಖ್ಯವಾದವು: ದೈನಂದಿನ ಕಿರುಕುಳ, ಏಕಾಏಕಿ ಸ್ಥಳಾಂತರ ಮಾಡುವುದು, ಸಂಚಾರಿ ಪೊಲೀಸರ ದಾಳಿ, ಮೂಲಭೂತ ಸೌಕರ್ಯಗಳ ಕೊರತೆಗಳಿವೆ (ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸಂಪರ್ಕವಿಲ್ಲದಿರುವಿಕೆ, ರೌಡಿಗಳ ದಾಳಿ). ಆದರೂ ಜೀವನೋಪಾಯದ ಅನಿವಾರ್ಯತೆಗಳಿಂದ ಸಹಿಸಿಕೊಂಡು ವ್ಯಾಪಾರ ಮುಂದುವರಿಸುತ್ತಾರೆ. ಆರ್ಥಿಕ ಸಮಸ್ಯೆಗಳ ಅನಿಶ್ಚಿತತೆಯ ನಡುವೆ ವ್ಯಾಪಾರ ಮಾಡುವವರೆಲ್ಲರೂ ಅಸಂಘಟಿತ ದುಡಿಮೆಗಾರರಾಗಿದ್ದಾರೆ. ಮೀಟರ್ ಬಡ್ಡಿ ದಂಧೆಗೆ ಮೊದಲ ಬಲಿಪಶುಗಳು ಈ ಬೀದಿಬದಿಯ ವ್ಯಾಪಾರಿಗಳೆಂದರೆ ತಪ್ಪಾಗದು. ಇವರೆಲ್ಲರ ಕಷ್ಟಕಾರ್ಪಣ್ಯಗಳಿಗೆ ಒಂದು ಕಾನೂನಿನ ಚೌಕಟ್ಟಿನಡಿ ನೈತಿಕ ಮತ್ತು ಆಡಳಿತಾತ್ಮಕ ಬೆಂಬಲ ನೀಡಿದವರು ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು. ಮಾಹಿತಿ ಹಕ್ಕು ಕಾಯ್ದೆ, ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಮತ್ತು ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆಗಳ ಜೊತೆಗೆ ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ಕಾಯ್ದೆ-2014 ಕೂಡಾ ಜಾರಿಯಾಯಿತು. ಇದು ಅಷ್ಟೊಂದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಲಿಲ್ಲ. ಅಸಂಘಟಿತ ಕಾಯಕ ಜೀವಿಗಳ ಮತ್ತು ಅವರ ಅನೌಪಚಾರಿಕ ಆರ್ಥಿಕತೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಈ ಕಾಯ್ದೆ ಮಹತ್ವವನ್ನು ಹೊಂದಿದೆ.

ಕರ್ನಾಟಕ ರಾಜ್ಯದಲ್ಲಿರುವ 316 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಮುಖ ನಗರ ಪಾಲಿಕೆಗಳಲ್ಲಿರುವ ಬೀದಿ ಬದಿಯ ವ್ಯಾಪಾರಿಗಳ ಸಮಸ್ಯೆ ಒಂದಾದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿರುವವರ ಸಮಸ್ಯೆಗಳು ಅಷ್ಟೇ ಜಟಿಲವಾದವು ಮತ್ತು ಸಂಕೀರ್ಣವಾದವು. ಕೆ.ಆರ್. ಮಾರುಕಟ್ಟೆ ಅತ್ಯಂತ ಹಳೆದಾದ ಮತ್ತು ಜನ ಆಕರ್ಷಕ ವ್ಯಾಪಾರ ಸ್ಥಳವಾಗಿದೆ. ಬೆಂಗಳೂರು ನಗರ ಭೌಗೋಳಿಕವಾಗಿ ಮತ್ತು ಜನ ಸಂಖ್ಯೆ ಬೆಳವಣಿಗೆಯಲ್ಲಿ ಹಿಗ್ಗುತ್ತಿದೆ. ಗ್ರಾಮೀಣ ಕೃಷಿ ಜನರ ಕೈಗೆಟುಕದಿದ್ದಾಗ ನಗರ ಪ್ರದೇಶಗಳತ್ತ ವಲಸೆ ಹೊಗುತ್ತಾರೆ. 1969ರಲ್ಲಿ ಅಭಿವೃದ್ಧಿ ಅರ್ಥಶಾಸ್ತ್ರಜ್ಞ ಮೈಕೆಲ್ ಪಿ. ಥೋಡಾರೊ ತನ್ನ ಕಾರ್ಮಿಕ ವಲಸೆ ಸಿದ್ಧಾಂತದಲ್ಲಿ ತಳ್ಳು (Push) ಮತ್ತು ಎಳೆತ (Pull) ಪ್ರಭಾವಿಸುವ ಅಂಶಗಳನ್ನು ವಿಶ್ಲೇಷಿಸಿದ್ದಾರೆ. ಇವರ ಪ್ರಕಾರವೇ ನೋಡಿದಾಗ ‘ಕುಶಲರಹಿತ ಶ್ರಮಿಕರು’ (Unskilled Labourers) ನಗರ ಪ್ರದೇಶಗಳಿಗೆ ಅತಿ ಹೆಚ್ಚಾಗಿ ವಲಸೆ ಬಂದಾಗ ಅವರು ಸಾಮಾನ್ಯವಾಗಿ ಹೋಟೆಲ್, ಮನೆಗೆಲಸ, ಕಾವಲುಗಾರಿಕೆ, ತಳ್ಳುಗಾಡಿ, ಮೂಟೆ ಸಾಗಿಸುವುದು, ತರಕಾರಿ ಮತ್ತು ಹಣ್ಣಿನ ವ್ಯಾಪಾರ ಇತ್ಯಾದಿ ವೃತ್ತಿಗಳಡಿ ಅವಲಂಬಿತರಾಗುತ್ತಾರೆ. ಸಂಘಟಿತ ವಲಯದಲ್ಲಿ ತೊಡಗಿಸಿಕೊಳ್ಳುವ ಶ್ರಮಿಕರ ಸಾಮರ್ಥ್ಯಕ್ಕಿಂತ (ಸರಾಸರಿ ಶೇ.10-12) ಅಸಂಘಟಿತ ವಲಯದಲ್ಲಿ ಅತ್ಯಧಿಕವಾಗಿದೆ. ದೇಶದ ಒಟ್ಟು ಜಿಡಿಪಿಗೆ ಇವರ ಆದಾಯ ಶೇ. 45-50ರಷ್ಟು ಸಂದಾಯವಾಗುತ್ತಿದೆ. ಇದು ಅಧಿಕ ಶ್ರಮಿಕರನ್ನು ಒಳಗೊಳ್ಳುವ ಮತ್ತು ಉದ್ಯೋಗ ಜೀವನಾಧಾರಗಳನ್ನು ಒದಗಿಸುವ ವಲಯವಾಗಿದೆ. ನಗರ ಪ್ರದೇಶಗಳಲ್ಲಿ ಅಸಂಘಟಿತ ವಲಯ ಅಧಿಕ ಶ್ರಮಿಕರಿಗೆ ಉದ್ಯೋಗವನ್ನು ನೀಡುತ್ತಿದೆ. ಅದರಲ್ಲಿ ಬೀದಿಬದಿಯ ವ್ಯಾಪಾರಿಗಳೂ ಸೇರಿದ್ದಾರೆ (ಹಣ್ಣು-ತರಕಾರಿ, ಸಿದ್ಧ ಉಡುಪು, ತಿಂಡಿ-ತಿನಿಸು, ಆಟಿಕೆ ಮತ್ತು ಗೃಹೋಪಯೋಗಿ ವಸ್ತುಗಳು ಇತ್ಯಾದಿ ಮಾರಾಟಗಾರರು)

ಕೆ.ಅರ್. ಮಾರುಕಟ್ಟೆಯನ್ನು ಒಂದು ಉದಾಹರಣೆಯಾಗಿ ಅಧ್ಯಯನ ಮಾಡಿದಾಗ ಅವರ ಅನೇಕ ಬಗೆಯ ಬದುಕಿನ ಚಿತ್ರಣಗಳು ಎದುರಾಗುತ್ತವೆ. ಇಂದು ವಯೋವೃದ್ಧರಾಗಿರುವ ಅನೇಕ ಹಣ್ಣು-ತರಕಾರಿ ಮಾರಾಟಗಾರರು ಇಲ್ಲೇ ಹುಟ್ಟಿ ಯೌವನ ದಾಟಿದವರಾಗಿದ್ದಾರೆ. ಅಂತಹ ಜನರ ಬದುಕು ಇಂದು ಅಯೋಮಯವಾಗಿದೆ. ಸದಾ ಜನಸಂದಣಿಯಿಂದ ಗಿಜಗುಡುತ್ತಿದ್ದ ಈ ಪ್ರದೇಶದಲ್ಲಿ ಒಂದು ಬಗೆಯ ಸ್ಮಶಾನ ಮೌನ ಆವರಿಸಿದೆ. ಸರಕಾರ ಕೈಗೊಂಡಿರುವ ಅಭಿವೃದ್ಧಿಗಳ ಬಗ್ಗೆ ಯಾರಿಗೂ ಆಕ್ಷೇಪಣೆಗಳಿಲ್ಲ. ಉದಾಹರಣೆಗೆ ಮಾರುಕಟ್ಟೆಯ ಪ್ರಾಂಗಣದೊಳಗೆ ಸೀಮಿತ ಅಂಗಡಿ ಸನ್ನದ್ದುದಾರರಿಗೆ ಮಾತ್ರ ಮಾರಾಟಕ್ಕೆ ಅವಕಾಶವಿದೆ. ಇನ್ನುಳಿದವರು ಬೀದಿಬದಿಯಲ್ಲಿ ಮಾರಾಟ ಮಾಡಿ ಬದುಕುವವರಾಗಿದ್ದಾರೆ. ಯಾವುದೇ ಪರ್ಯಾಯ ಕ್ರಮಗಳಿಲ್ಲದೆ ಒಕ್ಕಲೆಬ್ಬಿಸಿರುವುದು ತೀವ್ರವಾದ ಪ್ರತಿಭಟನೆಗಳಿಗೆ ಕಾರಣವಾಗಿದೆ. ಬಹಳ ವರ್ಷಗಳಿಂದ ವಾಹನ ನಿಲುಗಡೆ ತಾಣ ಗಬ್ಬುನಾರುತ್ತಿತ್ತು ಈಗ ಆಧುನಿಕ ಸ್ಪರ್ಶದೊಂದಿಗೆ ಕಂಗೊಳಿಸುತ್ತಿದೆ. ಇದಕ್ಕಾಗಿ ಜಿಬಿಎ ಅನ್ನು ಶ್ಲಾಘಿಸಬೇಕಿದೆ. ಆದರೆ, ದುಬಾರಿ ದರದ ಕಾರಣ ಮತ್ತು ಖರೀದಿದಾರರ ವಿರಳತೆಯಿಂದ ಅಲ್ಲಿಯೂ ವಾಹನ ನಿಲುಗಡೆ ಕಡಿಮೆಯಾಗಿದೆ.

ಸದರಿ ಮಾರುಕಟ್ಟೆಯ ಸುತ್ತಮುತ್ತಿನ ಬೀದಿಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿರುವ ಕಾರಣದಿಂದ ಕಡಿಮೆ ದರದಲ್ಲಿ ಖರೀದಿಸುತ್ತಿದ್ದ ಗ್ರಾಹಕರ ಸಂಖ್ಯೆ ಸಂಪೂರ್ಣವಾಗಿ ಕ್ಷೀಣಿಸಿದೆ. ನೇರವಾಗಿ ಸಗಟು ಪೂರೈಕೆದಾರರ ಮೇಲೆ ಪರಿಣಾಮ ಬೀರಿದೆ. ಸರಪಣಿ ಸ್ವರೂಪದ ವ್ಯಾಪಾರ ವೈವಾಟಿನ ಭಾಗೀದಾರರ ಮೇಲೂ ದುಷ್ಪರಿಣಾಮವಾಗಿದೆ. ಜನನಿಬಿಡ ಪ್ರದೇಶಗಳಲ್ಲಿ ಬೀದಿಬದಿಯ ವ್ಯಾಪಾರಕ್ಕೆ ಎಲ್ಲೆಂದರಲ್ಲಿ ಅವಕಾಶ ನೀಡಿದರೆ ಪಾದಚಾರಿ ಮಾರ್ಗಗಳ ಅತಿಕ್ರಮಣದಿಂದ ಸಂಚಾರಕ್ಕೆ ಅಡ್ಡಿಯೆಂಬ ವಾದ ಸರ್ವವಿಧಿತವಾಗಿದೆ. ಆದರೆ ರಾಷ್ಟ್ರೀಯ ಬೀದಿಬದಿಯ ವ್ಯಾಪಾರ ಕಾಯ್ದೆ-2014ರಲ್ಲಿ ಇವರ ಸಬಲೀಕರಣ ಮತ್ತು ಸುರಕ್ಷತೆ ಒದಗಿಸಲು ಅನೇಕ ಪರ್ಯಾಯ ಮಾರ್ಗೋಪಾಯಗಳನ್ನು ಸೂಚಿಸಿದೆ. ಈ ವಿಚಾರದಲ್ಲಿ ಜನಾಂಗೀಯ ಅಥವಾ ಭಾಷಿಕ ದ್ವೇಷದ ಮುಖೇನ ಯಾವುದೇ ಉಪಕ್ರಮಗಳನ್ನು ಅನುಷ್ಠಾನ ಮಾಡಬಾರದು. ಬಹುತೇಕ ಬೀದಿಬದಿಯ ವ್ಯಾಪಾರಿಗಳು ಅಹಿಂದ ಸಮುದಾಯದ ಬಡವರಾಗಿದ್ದಾರೆ. ಇಲ್ಲಿ ವ್ಯಾಪಾರ ಮಾಡಿ ಊಟ, ಬಟ್ಟೆ ಮತ್ತು ಮಕ್ಕಳ ವಿದ್ಯಾಭ್ಯಾಸವನ್ನು ನಿರ್ವಹಿಸುವವರೇ ಹೆಚ್ಚು. ಜೊತೆಗೆ ಕೊಳಗೇರಿಗಳ ನಿವಾಸಿಗಳಾಗಿದ್ದಾರೆ. ಅದೆಷ್ಟೋ ಇಂತಹ ವ್ಯಾಪಾರಿಗಳು ಸೂಕ್ತ ಆರೋಗ್ಯ ಪಾಲನೆಗಳಿಲ್ಲದೆ ಸತ್ತಿದ್ದಾರೆ. ಅಕಾಲಿಕವಾಗಿ ಬರುವ ಕಾಯಿಲೆ, ಮಕ್ಕಳ ವ್ಯಾಸಂಗ ಮತ್ತು ಇತರ ಸಾಂಪ್ರದಾಯಿಕ ಕಾರ್ಯಗಳ ನಿರ್ವಹಣೆಗೆ ಮೀಟರ್‌ಬಡ್ಡಿಗೆ ಬಲಿಯಾದವರೇ ಜಾಸ್ತಿ. ಪೊಲೀಸರ ಕಿರುಕುಳ, ಹಫ್ತಾ ವಸೂಲಿ, ಪುಡಿ ರೌಡಿಗಳ ಕಾಟ ಮತ್ತು ಸ್ವಹಿತಾಶಕ್ತಿ ಗುಂಪುಗಳ ನಡುವಿನ ಕಾದಾಟವೂ ಸಾಮಾನ್ಯವಾಗಿರುತ್ತವೆ. ಅವರಲ್ಲಿ ಬದುಕಬೇಕೆಂಬ ಅದಮ್ಯ ಆಶಯಗಳಿಂದಾಗಿ ಇವುಗಳೆಲ್ಲವನ್ನೂ ಸಹಿಸಿಕೊಳ್ಳುವುದು ರೂಢಿಗತವಾಗಿದೆ.

ಅನೇಕ ವ್ಯಾಪಾರಿಗಳು ಕಿಸ್ಕೊ ಮಾದರಿಯ ಪರ್ಯಾಯ ವ್ಯವಸ್ಥೆಗಾಗಿ ಕಾಯುತ್ತಿದ್ದಾರೆ. ಸ್ಥಳೀಯ ಸಂಸ್ಥೆ ಜಿಬಿಎ ವಿಧಿಸುವ ಕರ ಪಾವತಿ ಮತ್ತು ಸ್ವಚ್ಛತಾ ಉಪಕ್ರಮಗಳನ್ನು ಅನುಸರಿಸಲು ಬದ್ಧರಾಗಿದ್ದೇವೆನ್ನುವುದು ನೊಂದವರ ಅಳಲಾಗಿದೆ. ಒಟ್ಟಾರೆ, ಜಿಬಿಎ ನಿರ್ಧಾರದ ಮೇಲೆ ಅವರ ಭವಿಷ್ಯವಿದೆ.

Tags

Street Vendorsgovernment priority
share
ದಾಸನೂರು ಕೂಸಣ್ಣ
ದಾಸನೂರು ಕೂಸಣ್ಣ
Next Story
X