Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಅರುಂಧತಿಯಾರ್ ಎಂಬ ಮಾದಿಗ ಸಮುದಾಯದ...

ಅರುಂಧತಿಯಾರ್ ಎಂಬ ಮಾದಿಗ ಸಮುದಾಯದ ಅಸ್ಮಿತೆ

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್12 Nov 2026 12:08 PM IST
share
ಅರುಂಧತಿಯಾರ್ ಎಂಬ ಮಾದಿಗ ಸಮುದಾಯದ ಅಸ್ಮಿತೆ

ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ತಮಿಳುನಾಡಿನ ಗಡಿ ಜಿಲ್ಲೆಗಳು, ಬೆಂಗಳೂರು ನಗರ ಮತ್ತು ಇತರ ಕೈಗಾರಿಕಾ ಪ್ರದೇಶಗಳಲ್ಲಿ ಅರುಂಧತಿಯಾರ್ ಸಮುದಾಯದ ಜನ ತಮ್ಮ ಸಾಂಪ್ರದಾಯಿಕ ಕಸುಬಾದ ಚರ್ಮದ ಕಾಯಕದೊಂದಿಗೆ ಪೌರಕಾರ್ಮಿಕ ವೃತ್ತಿ, ಸತ್ತ ಪ್ರಾಣಿಗಳ ವಿಲೇವಾರಿ ಮಾಡುವುದು ಮತ್ತು ಬಹುತೇಕ ಕೃಷಿಕೂಲಿಕಾರರಾಗಿಯೂ ಇದ್ದಾರೆ. ಈ ಕೆಳಸ್ತರದ ವೃತ್ತಿಗಳ ಕಾರಣಕ್ಕೇ ಇವರು ತೀವ್ರವಾಗಿ ಸಾಮಾಜಿಕ ತಾರತಮ್ಯಕ್ಕೆ ಒಳಗಾಗಿದ್ದಾರೆ.

ಅರುಂಧತಿ, ಅರುಂಜ್ಯೋತಿ ಮತ್ತು ಅತ್ಯಂತ ಭಕ್ತಿಭಾವದಿಂದ ಅರುಂಜೋತಮ್ಮ ಎಂದು ಕರೆಯಲಾಗುವ ಸಮುದಾಯವೊಂದರ ಸಾಂಸ್ಕೃತಿಕ ನಾಯಕಿಯ ಜಾನಪದ ಕತೆಯನ್ನು ಬಹುತೇಕ ಮಂದಿ ಕೇಳಿರುತ್ತೀರಿ. ಮಾದಿಗ ಸಮುದಾಯದ ಅಸ್ಮಿತೆ ಎಂದು ಕರೆಯಲಾಗುವ ಅರುಂಧತಿಯ ಹೆಸರನ್ನೇ ಇಟ್ಟುಕೊಂಡ ಸಮುದಾಯ ಒಂದಿದೆ! ಅದರ ಹೆಸರೇ ಅರುಂಧತಿಯಾರ್ ಮಾದಿಗ ಸಮುದಾಯದ ಒಂದು ವರ್ಗವು ತನ್ನನ್ನು ವಸಿಷ್ಠ ಮಹರ್ಷಿಯ ಪತ್ನಿ ಎಂದು ಹೇಳಲಾಗುವ ‘ಅರುಂಧತಿ’ ಹಾಗೂ ‘ಮಾತಂಗ’ ಮಹರ್ಷಿಯೊಂದಿಗೆ ಗುರುತಿಸಿಕೊಳ್ಳುತ್ತದೆ. ಅರುಂಧತಿಯ ಹೆಸರಿನಿಂದಲೇ ತಮಿಳುನಾಡಿನಲ್ಲಿ ಇವರನ್ನು ‘ಅರುಂಧತಿಯಾರ್’ ಎಂದು ಕರೆಯಲಾಗುತ್ತದೆ.

ಪುರಾಣಗಳ ಪ್ರಕಾರ, ಈ ಸಮುದಾಯದವರು ಆದಿಜಾಂಬವಂತನ ವಂಶಸ್ಥರು ಎಂಬ ನಂಬಿಕೆಯಿದೆ. ಇವರನ್ನು ಆದಿಜಾಂಬವರು, ಮಾತಂಗರು ಎಂದೂ ಕರೆಯಲಾಗುತ್ತದೆ. ಅರುಂಧತಿ ಎಂಬ ಮಾದಿಗರ ಹೆಣ್ಣುಮಗಳು ನಕ್ಷತ್ರಮಂಡಲದ ಒಂದು ಮುಖ್ಯ ನಕ್ಷತ್ರವಾಗಿಯೂ ನಮ್ಮ ಜನಸಾಮಾನ್ಯರಲ್ಲಿ ಖ್ಯಾತಳಾಗಿರುವುದೂ ಗಮನಾರ್ಹ.

ಅರುಂಧತಿಯಾರ್ ಸಮುದಾಯದ ಸಾಂಪ್ರದಾಯಿಕ ಕಸುಬು ಚರ್ಮ ಹದ ಮಾಡುವುದು, ಪಾದರಕ್ಷೆ ತಯಾರಿಕೆ ಮಿಕ್ಕಂತೆ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ.

ಅರುಂಧತಿಯಾರ್ ದಕ್ಷಿಣ ಭಾರತದ ಪ್ರಮುಖ ದಲಿತ ಸಮುದಾಯಗಳಲ್ಲಿ ಐತಿಹಾಸಿಕವಾಗಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಶೋಷಣೆಗೆ ಒಳಗಾದ ಒಂದು ಅಸ್ಪಶ್ಯ ಸಮುದಾಯ. ಈ ಸಮುದಾಯದ ಮೂಲ ತಮಿಳುನಾಡು. ಇವರ ಸಾಂಸ್ಕೃತಿಕ ಕಥನಗಳು ತಮಿಳುನಾಡಿನ ಕಂಚಿ ಅಥವಾ ಕಾಂಚೀಪುರಂಗೆ ತಳಕುಹಾಕಿಕೊಳ್ಳುತ್ತವೆ. ಇವರ ಪೂರ್ವಿಕರು ತಮ್ಮ ಕುಲಕಥನವಾದ ‘ಗಂಗ ಭಾರತ’ವನ್ನು ಕಂಚಿಯ ಬೃಹತ್ ಕೊಳದ ಅಡಿಯಲ್ಲಿರುವ ಕಲ್ಲುಗಳ ಮೇಲೆ ಕೊರೆದಿದ್ದಾರೆ ಎಂದು ಆಭಿಮಾನದಿಂದ ಹೇಳಿಕೊಳ್ಳುತ್ತಾರೆ.

ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ತಮಿಳುನಾಡಿನ ಗಡಿ ಜಿಲ್ಲೆಗಳು, ಬೆಂಗಳೂರು ನಗರ ಮತ್ತು ಇತರ ಕೈಗಾರಿಕಾ ಪ್ರದೇಶಗಳಲ್ಲಿ ಅರುಂಧತಿಯಾರ್ ಸಮುದಾಯದ ಜನ ತಮ್ಮ ಸಾಂಪ್ರದಾಯಿಕ ಕಸುಬಾದ ಚರ್ಮದ ಕಾಯಕದೊಂದಿಗೆ ಪೌರಕಾರ್ಮಿಕ ವೃತ್ತಿ, ಸತ್ತ ಪ್ರಾಣಿಗಳ ವಿಲೇವಾರಿ ಮಾಡುವುದು ಮತ್ತು ಬಹುತೇಕ ಕೃಷಿಕೂಲಿಕಾರರಾಗಿಯೂ ಇದ್ದಾರೆ. ಈ ಕೆಳಸ್ತರದ ವೃತ್ತಿಗಳ ಕಾರಣಕ್ಕೇ ಇವರು ತೀವ್ರವಾಗಿ ಸಾಮಾಜಿಕ ತಾರತಮ್ಯಕ್ಕೆ ಒಳಗಾಗಿದ್ದಾರೆ.

ಅರುಂಧತಿಯಾರ್ ಸಮುದಾಯದ ಸಾಮಾಜಿಕ ಇತಿಹಾಸವನ್ನು ಕೇವಲ ಜಾತಿಯ ದೃಷ್ಟಿಯಿಂದ ನೋಡದೆ, ಅವರ ಶ್ರಮ, ವೃತ್ತಿ, ಸಾಂಸ್ಕೃತಿಕ ಪರಂಪರೆ, ಅಸ್ಪಶ್ಯತೆಯ ವಿರುದ್ಧದ ಅವರ ನಿರಂತರ ಹೋರಾಟ ಮತ್ತು ಸಾಮಾಜಿಕ ನ್ಯಾಯದ ಹಕ್ಕುಗಳ ಹಿನ್ನೆಲೆಯಲ್ಲಿ ನೋಡಬೇಕಿದೆ. ಅರುಂಧತಿಯಾರ್ ಎಂಬುದು ಸಮುದಾಯದ ಪ್ರಮುಖ ಗುರುತಿನ ಹೆಸರು. ತಮಿಳುನಾಡಿನಲ್ಲಿ ಈ ಹೆಸರಿನೊಂದಿಗೆ ಕೆಲವು ಇತರ ಸಮುದಾಯಗಳನ್ನೂ ಆಡಳಿತಾತ್ಮಕವಾಗಿ ಒಟ್ಟುಗೂಡಿಸಲಾಗಿದೆ.

ಈ ಗುಂಪಿನಲ್ಲಿ ಸಾಮಾನ್ಯವಾಗಿ ಉಲ್ಲೇಖವಾಗುವ ಹೆಸರುಗಳು:

ಅರುಂಧತಿಯಾರ್, ಚಕ್ಕಿಲಿಯಾರ್, ಮಾದಿಗ, ಮದಾರಿ, ಪಗಡೈ, ತೋಟಿ ಮುಂತಾಗಿ ಕರೆಯುತ್ತಾರೆ. ಆದರೆ ಈ ಹೆಸರುಗಳೆಲ್ಲವೂ ಒಂದೇ ಸಾಮಾಜಿಕ ಅಥವಾ ಐತಿಹಾಸಿಕ ಅರ್ಥ ಹೊಂದಿವೆ ಎನ್ನುವಂತಿಲ್ಲ. ಇವರ ಪ್ರಾದೇಶಿಕ ಗುರುತು, ಉಪಜಾತಿ ಮತ್ತು ಸರಕಾರಿ ವರ್ಗೀಕರಣಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ.

ಅರುಂಧತಿಯಾರ್ ಸಮುದಾಯದ ಇತಿಹಾಸವು ಕೇವಲ ತಮಿಳುನಾಡಿಗೆ ಸೀಮಿತವಾಗಿಲ್ಲ. ಬದಲಿಗೆ ಇಡೀ ದಕ್ಷಿಣ ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಲಭ್ಯ ಐತಿಹಾಸಿಕ ದಾಖಲೆಗಳು ಮತ್ತು ಕೆಲ ಸಂಶೋಧನೆಗಳ ಆಧಾರದಲ್ಲಿ ಹೇಳುವುದಾದರೆ ಅರುಂಧತಿಯಾರ್ ಸಮುದಾಯದ ಕೆಲವು ಗುಂಪುಗಳು ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮುಂತಾದ ಕೆಲವು ಭಾಷಿಕ ಪ್ರದೇಶಗಳೊಂದಿಗೆ ಕರ್ನಾಟಕದೊಂದಿಗೂ ಐತಿಹಾಸಿಕ ಸಂಬಂಧ ಹೊಂದಿವೆ.

ಅರುಂಧತಿ-ವಸಿಷ್ಠರ ಕಥನಗಳೊಂದಿಗೆ, ಮಾತಂಗ ಮುನಿಯ ಕಥನಗಳು ಮತ್ತು ಗಂಗಭಾರತದ ಕಥನಗಳಿಂದಾಗಿ ಈ ಸಮುದಾಯ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದೆ. ಆದರೆ ಸಾಮಾಜಿಕವಾಗಿ ಅಷ್ಟೇ ನಿಕೃಷ್ಟವಾಗಿರುವುದು ದುರಂತ. ಬಹುತೇಕ ಭೂರಹಿತ ಸಮುದಾಯವಾಗಿರುವ ಅರುಂಧತಿಯಾರ್ ಸಮುದಾಯ ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕವಾಗಿಯೂ ಕೂಡ ಅತ್ಯಂತ ಹಿಂದುಳಿದ ಸಮುದಾಯವಾಗಿದೆ.

ತಮಿಳುನಾಡಿನಲ್ಲಿ ಈ ಸಮುದಾಯಕ್ಕೆ ಶೇ.3ರಷ್ಟು ಆದ್ಯತಾ ಮೀಸಲಾತಿ ಕಲ್ಪಿಸಲಾಗಿದೆ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಕ್ರಮಸಂಖ್ಯೆ 9ರಲ್ಲಿ ಈ ಸಮುದಾಯ ಇದೆ. ಕರ್ನಾಟಕದ ಒಳ ಮೀಸಲಾತಿ ಪ್ರಸ್ತಾವದಲ್ಲಿ ಅರುಂಧತಿಯಾರ್ ಸಮುದಾಯವೂ ಎಡಸಮುದಾಯಗಳ ಗುಂಪಿನಲ್ಲಿದೆ. ಕರ್ನಾಟಕದಲ್ಲಿ ಅರುಂಧತಿಯಾರ್ ಸಮುದಾಯ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ ಮತ್ತು ಸ್ವಲ್ಪ ಪ್ರಮಾಣದಲ್ಲಿ ದಾವಣಗೆರೆ, ಬಳ್ಳಾರಿಗಳಲ್ಲೂ ಇದೆ. ಈ ಸಮುದಾಯದ ಅಧಿಕೃತ ಜನಗಣತಿಯನ್ನು 2011ರ ಗಣತಿಯಲ್ಲಿ ದಾಖಲಿಸಿಲ್ಲ. ಸಾಂಸ್ಕೃತಿಕವಾಗಿ ಅತ್ಯಂತ ವೈಭವಯುತವಾಗಿರುವ ಸಮುದಾಯವೊಂದು ಇಂದು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿರುವುದು ನಿಜಕ್ಕೂ ದುರಂತ.

(ಅಂಕಣಕಾರರು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು, ಹಿರಿಯ ವಕೀಲರು, ಚಿಂತಕರು)

Tags

ಸಿ.ಎಸ್‌. ದ್ವಾರಕಾನಾಥ್
share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X