Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕೋತಿಗಳನ್ನು ತಿನ್ನುತ್ತಿದ್ದ...

ಕೋತಿಗಳನ್ನು ತಿನ್ನುತ್ತಿದ್ದ ‘ಕಾತ್ಕರಿ’ಗಳು

ಡಾ. ಸಿ.ಎಸ್. ದ್ವಾರಕಾನಾಥ್ಡಾ. ಸಿ.ಎಸ್. ದ್ವಾರಕಾನಾಥ್30 Sept 2026 1:06 PM IST
share
ಕೋತಿಗಳನ್ನು ತಿನ್ನುತ್ತಿದ್ದ ‘ಕಾತ್ಕರಿ’ಗಳು

ಈ ವಿಳಾಸವಿಲ್ಲದ ಬುಡಕಟ್ಟು ಜನ ಈಗಲೂ ಊಟಕ್ಕೆ ಏನೂ ಸಿಗದೇ ಇದ್ದಾಗ ಕಾಡಲ್ಲಿ ಹೋಗಿ ಸಿಕ್ಕಿದ್ದನ್ನು ಬೇಟೆಯಾಡಿಕೊಂಡು ಬರುತ್ತಾರೆ. ಯಾವುದೇ ಅರಣ್ಯ ಕಾನೂನುಗಳು ಇವರ ಹಸಿವನ್ನು ನೀಗಿಸಲು ಸಾಧ್ಯವಿಲ್ಲ. ಈ ಸಮುದಾಯದ ಪುಟಾಣಿ ಮಕ್ಕಳೂ ಅಪೌಷ್ಟಿಕತೆಯಿಂದ ನರಳುತ್ತಿವೆ. ಇವರಿಗೆ ಒಂದು ಅಂಗನವಾಡಿಯಾಗಲೀ, ಶಾಲೆಯಾಗಲೀ ಇಲ್ಲ. ಈ ನಿಕೃಷ್ಟ ಸಮುದಾಯಗಳ ಕಡೆ ಯಾರಿಗೂ ಕಾಳಜಿ ಇಲ್ಲ. ಸರಕಾರಕ್ಕಂತೂ ಇವರ ಇರುವಿಕೆಯ ಅರಿವೇ ಇಲ್ಲ!!

‘ಕಾತ್ಕರಿ’ ಸಮುದಾಯದವರನ್ನು ನಾವು ಸುಲಭವಾಗಿ ಕೋತಿ ತಿನ್ನುವವರು ಎಂದು ಹಣೆಪಟ್ಟಿ ಕಟ್ಟಿಬಿಡುತ್ತೇವೆ, ಆದರೆ ಅವರು ಕೋತಿಗಳನ್ನು ಯಾಕೆ ತಿನ್ನುತ್ತಿದ್ದರು ಮತ್ತು ತಿನ್ನುತ್ತಾರೆ? ಎನ್ನಲಿಕ್ಕೆ ಅದರ ಹಿಂದೆ ಅವರ ಹಸಿವಿನ ಒಂದು ಇತಿಹಾಸವೇ ಇದೆ. ಹಿಂದೆ ಇವರು ಕೋಳಿ, ಕುರಿಯ ರೀತಿಯಲ್ಲಿ ಅತ್ಯಂತ ಸಹಜ ಆಹಾರವೆಂಬಂತೆ ಕೋತಿ ತಿನ್ನುತ್ತಿದ್ದದ್ದು ನಿಜ. ಇದರೊಂದಿಗೆ ಇಲಿ, ಕೆಂಪು ಮಣ್ಣಿನ ಏಡಿಯನ್ನೂ ಕೂಡ ತಿನ್ನುತ್ತಿದ್ದರು.

ಇದು ಇವರ ಆಹಾರ ಸಂಸ್ಕೃತಿ ಅಲ್ಲ, ಹಸಿವಿನ ಅನಿವಾರ್ಯ ಪರಿಸ್ಥಿತಿ ಎನ್ನುವುದನ್ನು ನಮ್ಮ ‘ಸಭ್ಯ’ ಸಮಾಜ ಅರ್ಥಮಾಡಿಕೊಳ್ಳಬೇಕು.

ಮೂಲತಃ ಕಾತ್ಕರಿ ಸಮುದಾಯದವರು ಅರಣ್ಯವಾಸಿಗಳು, ಬ್ರಿಟಿಷರ ಕಾಲದಲ್ಲಿ ಅವರು ತಲೆಮಾರುಗಳಿಂದಲೂ ಜೀವಿಸುತ್ತಿದ್ದ ಕಾಡನ್ನು ಬ್ರಿಟಿಷರು ಕಸಿದುಕೊಂಡರು, ಬೇಟೆಯ ವೃತ್ತಿ ಹೋಯಿತು, ಭೂಮಿ ಇಲ್ಲ, ಕೈಗೆ ಕೆಲಸ ಇಲ್ಲದ ಕಾಲದಲ್ಲಿ ಕಾಡಿನಲ್ಲಿ ಸುಲಭವಾಗಿ ಸಿಗುವುದೆಲ್ಲ ಮಂಗ, ಇಲಿ, ಮುಂಗುಸಿಗಳಂತಹ ಪ್ರಾಣಿಗಳಷ್ಟೇ ಅಲ್ಲವೇ? ಆದ್ದರಿಂದ ಕಾತ್ಕರಿಗಳು ಇವನ್ನೇ ತಿಂದು ಜೀವಿಸತೊಡಗಿದರು.

ಕಾತ್ಕರಿಗಳನ್ನು ಕಾಥೋಡಿ ಅಂತಲೂ ಕರೆಯುತ್ತಾರೆ. ಮಹಾರಾಷ್ಟ್ರ,ದ ರಾಯಗಡ, ಪುಣೆ, ರತ್ನಗಿರಿ, ಥಾಣೆ ಜಿಲ್ಲೆಗಳಲ್ಲಿ ಕಾತ್ಕರಿಗಳನ್ನು ‘ಅತ್ಯಂತ ಹಿಂದುಳಿದ ಬುಡಕಟ್ಟು’ ಅಂದರೆ ನಮ್ಮ ಕೊರಗರು ಮತ್ತು ಜೇನುಕುರುಬರಂತೆ PVTG (Particularly Vulnerable Tribal Group) ಎಂದು ಪರಿಗಣಿಸಲಾಗಿದೆ.

ಕರ್ನಾಟಕದ ಬೆಳಗಾವಿ, ಉತ್ತರ ಕನ್ನಡದ ಗಡಿ ಭಾಗದಲ್ಲಿ ಕೆಲವು ಕುಟುಂಬಗಳು ವಲಸೆ ಬಂದು ನೆಲೆಸಿವೆ. ಬೆಳಗಾವಿಯ ಖಾನಾಪುರ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾತ್ಕರಿ ಸಮುದಾಯದ ಸುಮಾರು 25ರಿಂದ 30 ಕುಟುಂಬಗಳಿವೆ. ಇವರಿಗೆ ಕೇಂದ್ರ ಸರಕಾರ 2014ರಲ್ಲಿಯೇ ಎರಡು ಎಕರೆ ಜಾಗ ಮಂಜೂರು ಮಾಡಿ ಅದನ್ನು ‘ಬೆಗ್ಗರ್ಸ್ ಕಾಲನಿ’ ಎಂದು ಕರೆದಿತ್ತು.

ನಮ್ಮ ಹರಿಣಿಶಿಕಾರಿ, ಪಾರ್ದಿ, ಹಕ್ಕಿಪಿಕ್ಕಿಗಳಂತೆಯೇ ಕಾತ್ಕರಿಗಳು ಕೂಡ ಕಾಡಿನಿಂದ ಬಲವಂತವಾಗಿ ಹೊರದಬ್ಬಿಸಿಕೊಂಡವರು. ಇವರ ಒಡಲ ಹಸಿವಿಗೆ ಬೇರೆ ದಾರಿಯಿಲ್ಲದೆ ಮಂಗಗಳನ್ನು ಬೇಟೆಯಾಡಿ ತಿನ್ನುವುದನ್ನು ಕಾಲಾಂತರದಲ್ಲಿ ರೂಢಿಸಿಕೊಂಡರು.

ಬೆಳಗಾವಿ ಜಿಲ್ಲೆಯ ಖಾನಾಪುರ ಅರಣ್ಯಕ್ಕೆ ಅಂಟಿಕೊಂಡಿರುವ ಚನ್ನಿವಾಡಿ, ಕುಟಿನಗರ, ಗುಂಜಿ, ಬಾಳಗುಂದ, ಮುಂದವಾಡ, ಗೋದಳಿ, ನಾಗರಗಾಳಿ, ಬಾಚೊಳ್ಳಿ ಮತ್ತಿತರ ಕಡೆ ಕಾತ್ಕರಿ ಸಮುದಾಯದವರು ಗುಡಿಸಲುಗಳನ್ನು ಹಾಕಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಈ ಭಾಗಗಳಲ್ಲಿ ಅಂದಾಜು 500ರಿಂದ 600 ಜನಸಂಖ್ಯೆ ಇರಬಹುದು. ಬಾಚೊಳ್ಳಿ ಗ್ರಾಮದ ಹೊರವಲಯದಲ್ಲಿ ಸುಮಾರು 50 ಮಂದಿ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಇವರ ವೃತ್ತಿ ಈಗ ಭಿಕ್ಷಾಟನೆ. ಇವರು ‘ಕಾತೋಡಿ’ ಭಾಷೆ ಮಾತ್ರ ಮಾತನಾಡಬಲ್ಲರು. ಭಿಕ್ಷೆ ಬೇಡಲು ಎಷ್ಟು ಬೇಕೋ ಅಷ್ಟು ಮಾತ್ರ ಕನ್ನಡ ಕಲಿತಿದ್ದಾರೆ.

ಕಾತ್ಕರಿ ಭಾಷೆ - ಮರಾಠಿ ಮಿಶ್ರಿತ ಬುಡಕಟ್ಟು ಭಾಷೆ. ಕಾತು (ಖೈರ್) ಮರದಿಂದ ಕಥ್ಥಾ (ಪಾನ್ಗೆ ಹಾಕುವ) ಮಾಡುವುದಕ್ಕೆ ಕಾತ್ಕರಿ ಎಂದು ಹೆಸರು. ಮಹಾರಾಷ್ಟ್ರ ಸರಕಾರದ 2018ರ ವರದಿ ಪ್ರಕಾರ ಶೇ. 70 ಕಾತ್ಕರಿ ಕುಟುಂಬಗಳು ಇಂದಿಗೂ ಭೂ ರಹಿತರು, ಶೇ. 60 ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಶಿಕ್ಷಣವಂತೂ ಇಲ್ಲವೇ ಇಲ್ಲ.

ಈ ಸಮುದಾಯದಲ್ಲಿ ಈಗ ಕೋತಿ ತಿನ್ನುವುದು ಬಹಳ ಕಡಿಮೆ ಆಗಿದೆ. ಕಾರಣ ಅರಣ್ಯ ಕಾನೂನು ಅಡ್ಡಿಯಾಗಿದೆ. ಕೋತಿ ಅಥವಾ ಮಂಗಗಳ ರಕ್ಷಣೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬರುತ್ತದೆ, ಈ ಕಾರಣಕ್ಕೆ ಮಂಗದ ಮೃತದೇಹ ಅಥವಾ ಮಾಂಸ ಕಂಡುಬಂದರೆ ಆಪಾದಿತರಿಗೆ 3 ವರ್ಷ ಜೈಲು! ಅರಣ್ಯ ಇಲಾಖೆ ಈ ವಿಷಯದಲ್ಲಿ ಸಾಕಷ್ಟು ಕಟ್ಟುನಿಟ್ಟು ಮಾಡಿದೆ. ಆದರೂ ನಗ್ನ ಸತ್ಯವೇನೆಂದರೆ ರಾಯಗಡದ ಕೆಲವು ಒಳಗಿನ ಕಾಡಿನ ವಾಡಿಗಳಲ್ಲಿ ಇಂದಿಗೂ ಬರಗಾಲದಲ್ಲಿ ಮಂಗ ಬೇಟೆ ನಡೆಯುತ್ತದೆ ಎಂದು 2023ರಲ್ಲಿ The Hindu ಪತ್ರಿಕೆ ವರದಿ ಮಾಡಿತ್ತು, ಈ ಬಗ್ಗೆ ಪೊಲೀಸ್ ಕೇಸ್ ಕೂಡ ಆಗಿತ್ತು.

ಸದಾ ಕಾಡಲ್ಲೇ ಅಲೆಯುತ್ತಾ ಕಾಡಿನ ಮತ್ತು ಅರಣ್ಯದ ಮೃಗಗಳ ಬಗ್ಗೆ ಅಪಾರ ಕಾಳಜಿ ಇರುವ ಮತ್ತು ಕಾಡಿನ ಪ್ರಾಣಿಗಳ ಚಿತ್ರೀಕರಣ ಮಾಡುವ ಗೆಳೆಯರಾದ ಕೃಪಾಕರ-ಸೇನಾನಿ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿಕೊಂಡು ಹೋದಾಗ, ವೀರಪ್ಪನ್ ಇವರಿಬ್ಬರಿಗೂ ಮಂಗದ ಮಾಂಸ ತಿನ್ನಿಸಿದ ಕುರಿತು ಬರೆದುಕೊಂಡಿದ್ದಾರೆ. ಇಲ್ಲಿ ಇವರಿಗೆ ಹಸಿವಿನ ಮತ್ತು ಪರಿಸ್ಥಿತಿಯ ಅನಿವಾರ್ಯತೆಯಿಂದಾಗಿ ಒಮ್ಮೆ ಮಂಗಗಳ ಮಾಂಸ ತಿಂದರೆ, ಸದಾ ಕಾಡಲ್ಲೇ ಬದುಕಿ ನಿರಂತರ ಹಸಿವಿನಿಂದ ನರಳುವ ಕಾತ್ಕರಿಗಳು ಮಂಗಗಳ ಮಾಂಸ ತಿನ್ನುವುದು ಅನಿವಾರ್ಯ.

ಕರ್ನಾಟಕದಲ್ಲೂ ಕಾತ್ಕರಿಗಳಿಗೆ ಅರಣ್ಯ ಪ್ರವೇಶ ನಿಷೇಧಿಸಿದ ಮೇಲೆ ಮಂಗಗಳ ಬೇಟೆ ಕಷ್ಟವಾಗಿದೆ. ಕರ್ನಾಟಕದಲ್ಲಿ ನೆಲೆಸಿರುವ ಬಹುಪಾಲು ಕಾತ್ಕರಿ ಜನರ ಮೇಲೆ ಹಿಂದೆ ಎಂದೋ ಮಂಗ ಬೇಟೆಯಾಡಿದ ಪ್ರಕರಣಗಳಿವೆ. ಆದರೆ ತಪ್ಪಿತಸ್ಥರ ವಿರುದ್ಧ ಕಾನೂನು ನೋಟಿಸ್ ಕೊಡುವುದಕ್ಕೆ ಯತ್ನಿಸಿದರೆ, ಅಧಿಕಾರಿಗಳ ಬಳಿ ಇವರ ವಿಳಾಸವೇ ಇಲ್ಲ! ಈ ವಿಳಾಸವಿಲ್ಲದ ಬುಡಕಟ್ಟು ಜನ ಈಗಲೂ ಊಟಕ್ಕೆ ಏನೂ ಸಿಗದೇ ಇದ್ದಾಗ ಕಾಡಲ್ಲಿ ಹೋಗಿ ಸಿಕ್ಕಿದ್ದನ್ನು ಬೇಟೆಯಾಡಿಕೊಂಡು ಬರುತ್ತಾರೆ. ಯಾವುದೇ ಅರಣ್ಯ ಕಾನೂನುಗಳು ಇವರ ಹಸಿವನ್ನು ನೀಗಿಸಲು ಸಾಧ್ಯವಿಲ್ಲ. ಈ ಸಮುದಾಯದ ಪುಟಾಣಿ ಮಕ್ಕಳೂ ಅಪೌಷ್ಟಿಕತೆಯಿಂದ ನರಳುತ್ತಿವೆ. ಇವರಿಗೆ ಒಂದು ಅಂಗನವಾಡಿಯಾಗಲೀ, ಶಾಲೆಯಾಗಲೀ ಇಲ್ಲ. ಈ ನಿಕೃಷ್ಟ ಸಮುದಾಯಗಳ ಕಡೆ ಯಾರಿಗೂ ಕಾಳಜಿ ಇಲ್ಲ. ಸರಕಾರಕ್ಕಂತೂ ಇವರ ಇರುವಿಕೆಯ ಅರಿವೇ ಇಲ್ಲ!!

(ಅಂಕಣಕಾರರು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು, ಹಿರಿಯ ವಕೀಲರು, ಚಿಂತಕರು)

Tags

monkeys
share
ಡಾ. ಸಿ.ಎಸ್. ದ್ವಾರಕಾನಾಥ್
ಡಾ. ಸಿ.ಎಸ್. ದ್ವಾರಕಾನಾಥ್
Next Story
X