Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪೂನಾ ಒಪ್ಪಂದ ಮತ್ತು ಇಂದಿನ ಭಾರತ

ಪೂನಾ ಒಪ್ಪಂದ ಮತ್ತು ಇಂದಿನ ಭಾರತ

ದಲಿತರ ಸ್ವತಂತ್ರ ರಾಜಕೀಯ ನಿರ್ಧಾರಶಕ್ತಿಯ ಸವಾಲುಗಳು

ಪ್ರಸನ್ನಕುಮಾರ್ ಕೆರಗೋಡುಪ್ರಸನ್ನಕುಮಾರ್ ಕೆರಗೋಡು21 Sept 2026 10:14 AM IST
share
ಪೂನಾ ಒಪ್ಪಂದ ಮತ್ತು ಇಂದಿನ ಭಾರತ

1932ರ ಸೆಪ್ಟಂಬರ್ 24 ಪುಣೆಯ ಯರವಾಡ ಜೈಲಿನಲ್ಲಿ ದೇಶದ ರಾಜಕೀಯ ಭವಿಷ್ಯವನ್ನು ಬದಲಿಸುವ ಮಾತುಕತೆ ನಡೆಯುತ್ತಿತ್ತು. ಒಂದು ಕಡೆ ಆಮರಣಾಂತ ಉಪವಾಸ ಕುಳಿತ ಮಹಾತ್ಮಾ ಗಾಂಧೀಜಿ, ಮತ್ತೊಂದು ಕಡೆ ತನ್ನ ಜನಗಳ ರಾಜಕೀಯ ಭವಿಷ್ಯದ ಭಾರಹೊತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಮುಖಾಮುಖಿಯಾಗಿದ್ದರು. ಅಲ್ಲಿನ ಚರ್ಚೆ ಮತ್ತು ಪ್ರಶ್ನೆ ಕೇವಲ ಕೆಲವು ಚುನಾವಣಾ ಕ್ಷೇತ್ರದ ಸ್ಥಾನಗಳದ್ದಾಗಿರಲಿಲ್ಲ. ಶತಮಾನಗಳ ಕಾಲ ಸಾಮಾಜಿಕ ಮತ್ತು ರಾಜಕೀಯವಾಗಿ ಹೊರಗಿಡಲ್ಪಟ್ಟಿದ್ದ ಜನರು ತಮ್ಮ ರಾಜಕೀಯ ಪ್ರತಿನಿಧಿಗಳನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಹೊಂದಬೇಕೇ ಎಂಬುದು ಮೂಲ ಪ್ರಶ್ನೆಯಾಗಿತ್ತು. ಅಂದು ಅಂಬೇಡ್ಕರ್ ಪ್ರತ್ಯೇಕ ಮತಕ್ಷೇತ್ರವನ್ನು ಬಯಸಿದ್ದರು. ಗಾಂಧೀಜಿ ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಕೊನೆಗೆ ನಡೆದ ಪೂನಾ ಒಪ್ಪಂದವು ಪ್ರತ್ಯೇಕ ಮತಕ್ಷೇತ್ರದ ಬದಲು ಜಂಟಿ ಮತಕ್ಷೇತ್ರಗಳಲ್ಲಿ ದಲಿತರಿಗೆ ಮೀಸಲು ಸ್ಥಾನಗಳನ್ನು ಒದಗಿಸುವ ವ್ಯವಸ್ಥೆಯನ್ನು ತಂದಿತು. ಈ ವರ್ಷದ ಸೆಪ್ಟಂಬರ್ 24ಕ್ಕೆ ಆ ಒಪ್ಪಂದಕ್ಕೆ 94 ವರ್ಷಗಳು ತುಂಬಿ 95ಕ್ಕೆ ಬೀಳಲಿದೆ.

ಬ್ರಿಟಿಷ್ ಪ್ರಧಾನಮಂತ್ರಿ ರಾಮ್ಸೆ ಮ್ಯಾಕ್‌ಡೊನಾಲ್ಡ್ ಪ್ರಕಟಿಸಿದ Communal Award ದಲಿತರಿಗೆ ಪ್ರತ್ಯೇಕ ಮತಕ್ಷೇತ್ರದ ಅವಕಾಶ ನೀಡಿತ್ತು. ದಲಿತರು ತಮ್ಮ ಪ್ರತಿನಿಧಿಗಳನ್ನು ತಾವೇ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಇದು ಸಮರ್ಪಕವಾದ ತೀರ್ಮಾನವಾಗಿತ್ತು. ಜಂಟಿ ಮತಕ್ಷೇತ್ರಗಳಲ್ಲಿ ದೊಡ್ಡ ಸಂಖ್ಯೆಯವರಾಗಿರುವ ಜಾತಿ ಹಿಂದೂ ಮತದಾರರು ದಲಿತ ಅಭ್ಯರ್ಥಿಯ ಆಯ್ಕೆಯನ್ನು ನಿರ್ಧರಿಸುವ ಸಾಧ್ಯತೆಯ ಬಗ್ಗೆ ಅಂಬೇಡ್ಕರ್ ಅವರಿಗೆ ಗಂಭೀರ ಆತಂಕವಿತ್ತು. ಅವರ ಭಯವೇನೆಂದರೆ, ದಲಿತರ ಪರವಾಗಿ ಗಟ್ಟಿಯಾಗಿ ಮಾತನಾಡುವ ಅಭ್ಯರ್ಥಿಗಿಂತ ಬಹುಸಂಖ್ಯಾತರಿಗೆ ಒಪ್ಪಿಗೆಯಾಗುವ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಾಗಬಹುದು ಎಂಬುದು. ಇಂದಿನ ರಾಜಕೀಯವನ್ನು ನೋಡಿದಾಗಲೂ ಈ ಪ್ರಶ್ನೆಯ ಪ್ರಸ್ತುತತೆ ಅರ್ಥವಾಗುವಂತಹದ್ದೇ.

ಆದರೆ 94 ವರ್ಷಗಳ ನಂತರವೂ ಅಂಬೇಡ್ಕರ್ ಮುಂದಿಟ್ಟ ಮೂಲ ಪ್ರಶ್ನೆಗಳಿಗೆ ಉತ್ತರ ದೊರಕಿದೆಯೆ? ಇಲ್ಲಿ ಎರಡು ಪ್ರಶ್ನೆಗಳನ್ನು ನೋಡಬೇಕಾಗುತ್ತದೆ. ದಲಿತರಿಗೆ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಸ್ಥಾನ ಸಿಕ್ಕಿದೆಯೇ ಎಂಬುದು ಒಂದು ಪ್ರಶ್ನೆಯಾದರೆ ಆ ಸ್ಥಾನಕ್ಕೆ ಆಯ್ಕೆಯಾಗಿ ಹೋಗುವ ವ್ಯಕ್ತಿ ಯಾರ ಮುಂದೆ ರಾಜಕೀಯವಾಗಿ ಜವಾಬ್ದಾರನಾಗಿರುತ್ತಾನೆ ಎಂಬುದು ಇನ್ನೊಂದು ಪ್ರಶ್ನೆಯಾಗಿದೆ. ಇದೇ ಪೂನಾ ಒಪ್ಪಂದದಿಂದ ಇಂದಿನ ದಲಿತ ರಾಜಕಾರಣದವರೆಗೆ ಸಾಗುವ ಅತ್ಯಂತ ಮುಖ್ಯವಾದ ಕೊಂಡಿ.

ಪೂನಾ ಒಪ್ಪಂದದ ನಂತರ ಜಂಟಿ ಮತಕ್ಷೇತ್ರ ಮತ್ತು ಮೀಸಲು ಸ್ಥಾನಗಳ ವ್ಯವಸ್ಥೆ ಜಾರಿಗೆ ಬಂತು. ಆದರೆ ಮೂಲ ಒಪ್ಪಂದದಲ್ಲೇ ದಲಿತ ಮತದಾರರಿಗೆ ಒಂದು ರೀತಿಯ ಮುನ್ನಡೆಯ ಹಕ್ಕು ನೀಡಲಾಗಿತ್ತು. ಮೊದಲು ದಲಿತ ಮತದಾರರು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಾಥಮಿಕ ಚುನಾವಣೆ ನಡೆಯಬೇಕಿತ್ತು; ನಂತರ ಜಂಟಿ ಮತಕ್ಷೇತ್ರದಲ್ಲಿ ಅಂತಿಮ ಚುನಾವಣೆ ನಡೆಯುತ್ತಿತ್ತು. ಅಂದರೆ, ದಲಿತ ಸಮುದಾಯದೊಳಗಿನ ಅಭ್ಯರ್ಥಿ ಆಯ್ಕೆಗೆ ಒಂದು ಸ್ವತಂತ್ರ ಹಂತ ಇತ್ತು. ಇಂದಿನ ವ್ಯವಸ್ಥೆಯಲ್ಲಿ ಅಂತಹ ಪ್ರಾಥಮಿಕ ಆಯ್ಕೆ ವ್ಯವಸ್ಥೆ ಇಲ್ಲ. ಇಂದು ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರದಲ್ಲಿ ಅಭ್ಯರ್ಥಿ ದಲಿತ ಸಮುದಾಯದವರಾಗಿರಬೇಕು; ಆದರೆ ಅವರನ್ನು ಆಯ್ಕೆ ಮಾಡುವ ಚುನಾವಣೆಯಲ್ಲಿ ಆ ಕ್ಷೇತ್ರದ ಎಲ್ಲ ಮತದಾರರೂ ಭಾಗವಹಿಸುತ್ತಾರೆ. ಈ ವ್ಯತ್ಯಾಸವೇ ಅಂಬೇಡ್ಕರ್ ಅವರ ಹಳೆಯ ಆತಂಕವನ್ನು ಇಂದಿನ ರಾಜಕೀಯದಲ್ಲಿ ಮತ್ತೆ ಚರ್ಚೆಗೆ ತರುತ್ತದೆ.

ಭಾರತದ ಸಂವಿಧಾನ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ದಲಿತರಿಗೆ ಮೀಸಲು ಸ್ಥಾನಗಳ ಮೂಲಕ ರಾಜಕೀಯ ಪ್ರಾತಿನಿಧ್ಯವನ್ನು ಖಾತ್ರಿಪಡಿಸಿದೆ. ಆದರೆ ಮೀಸಲು ಸ್ಥಾನವಿರುವುದೇ ಸ್ವತಂತ್ರ ದಲಿತ ರಾಜಕಾರಣ ಎಂದರ್ಥವಲ್ಲ. ಅಭ್ಯರ್ಥಿಯ ಆಯ್ಕೆ, ಪಕ್ಷದ ಟಿಕೆಟ್, ಚುನಾವಣಾ ವೆಚ್ಚ, ಪಕ್ಷದ ಸಂಘಟನೆ, ಜಾತಿ ಸಮೀಕರಣ ಮತ್ತು ಪಕ್ಷದ ನಾಯಕತ್ವದ ನಿರ್ಧಾರಗಳು ದಲಿತ ಪ್ರತಿನಿಧಿಯ ರಾಜಕೀಯ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತವೆ.

ಇಂದಿನ ದಲಿತ ರಾಜಕಾರಣವನ್ನು ಅರ್ಥಮಾಡಿಕೊಳ್ಳಲು ಬಿಎಸ್‌ಪಿಯ ಬೆಳವಣಿಗೆ ಮತ್ತು ಅದರ ಕುಸಿತ ಮುಖ್ಯ. ಕಾನ್ಶೀರಾಮ್ ಕಟ್ಟಿದ ಸಂಘಟನೆ ಮತ್ತು ಮಾಯಾವತಿಯವರ ನೇತೃತ್ವದಲ್ಲಿ ಬಿಎಸ್‌ಪಿ ದಲಿತ ಮತವನ್ನು ಸ್ವತಂತ್ರ ರಾಜಕೀಯ ಶಕ್ತಿಯನ್ನಾಗಿ ರೂಪಿಸಿತು. 2007ರಲ್ಲಿ ಉತ್ತರ ಪ್ರದೇಶದಲ್ಲಿ 206 ಸ್ಥಾನಗಳನ್ನು ಗೆದ್ದು ಬಹುಮತದ ಸರಕಾರ ರಚಿಸಿದ್ದು ಇದರ ಪ್ರಮುಖ ಘಟ್ಟ. ಆದರೆ ನಂತರ ಬಿಎಸ್‌ಪಿಯ ಬಲ ಕುಗ್ಗಿತು. 2012ರಲ್ಲಿ 80, 2017ರಲ್ಲಿ 19 ಮತ್ತು 2022ರಲ್ಲಿ ಕೇವಲ ಒಂದು ವಿಧಾನಸಭಾ ಸ್ಥಾನಕ್ಕೆ ಇಳಿಯಿತು. 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ದೇಶಾದ್ಯಂತ ಯಾವುದೇ ಸ್ಥಾನ ಸಿಗಲಿಲ್ಲ.

ಇದರಿಂದ ಸ್ವತಂತ್ರ ದಲಿತ ರಾಜಕಾರಣದ ರೂಪ ಬದಲಾಗುತ್ತಿರುವುದು ಗೋಚರಿಸುತ್ತದೆ. ದಲಿತ ಮತ ಒಂದೇ ಪಕ್ಷದೊಂದಿಗೆ ಶಾಶ್ವತವಾಗಿ ಉಳಿಯದೆ, ಶಿಕ್ಷಣ, ಉದ್ಯೋಗ, ಮೀಸಲು, ಸಂವಿಧಾನ, ಸಾಮಾಜಿಕ ನ್ಯಾಯ ಮತ್ತು ಸ್ಥಳೀಯ ರಾಜಕೀಯದಂತಹ ಹಲವು ಪ್ರಶ್ನೆಗಳ ಆಧಾರದ ಮೇಲೆ ವಿಭಜನೆಯಾಗುತ್ತಿದೆ. 2024ರಲ್ಲಿ 84 ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 30 ಮತ್ತು ಕಾಂಗ್ರೆಸ್ 19 ಸ್ಥಾನಗಳನ್ನು ಗೆದ್ದವು. ಉತ್ತರ ಪ್ರದೇಶದ 17 ಎಸ್‌ಸಿ ಕ್ಷೇತ್ರಗಳಲ್ಲಿ ಬಿಜೆಪಿ 8, ಸಮಾಜವಾದಿ ಪಕ್ಷ 7, ಕಾಂಗ್ರೆಸ್ 1 ಮತ್ತು ಚಂದ್ರಶೇಖರ್ ಆಝಾದ್ ಅವರ ಪಕ್ಷ 1 ಸ್ಥಾನ ಗೆದ್ದಿತು. ಹೀಗಾಗಿ ಇಂದಿನ ಪ್ರಶ್ನೆ ಕೇವಲ ‘ದಲಿತರಿಗೆ ಎಷ್ಟು ಸ್ಥಾನಗಳಿವೆ?’ ಎಂಬುದಲ್ಲ; ‘ಆ ಸ್ಥಾನಗಳ ಮೂಲಕ ದಲಿತರು ತಮ್ಮ ರಾಜಕೀಯ ಧ್ವನಿಯನ್ನು ಎಷ್ಟು ಸ್ವತಂತ್ರವಾಗಿ ವ್ಯಕ್ತಪಡಿಸಬಲ್ಲರು?’ ಎಂಬುದಾಗಿದೆ.

ಇಲ್ಲಿ ನಗಿನಾ ಕ್ಷೇತ್ರದ ಫಲಿತಾಂಶ ವಿಶೇಷ ಗಮನ ಸೆಳೆಯುತ್ತದೆ. ಮೀಸಲು ಕ್ಷೇತ್ರವಾದ ನಗಿನಾದಲ್ಲಿ ಚಂದ್ರಶೇಖರ್ ಆಝಾದ್ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದರು. ಅವರ ಗೆಲುವು ದಲಿತ ರಾಜಕಾರಣದಲ್ಲಿ ಮತ್ತೊಂದು ಸಾಧ್ಯತೆಯನ್ನು ತೋರಿಸಿತು. ದೊಡ್ಡ ರಾಷ್ಟ್ರೀಯ ಮೈತ್ರಿಗಳ ನೆರಳಿಲ್ಲದೆ, ಸ್ವಂತ ಸಂಘಟನೆ ಮತ್ತು ಸ್ವಂತ ರಾಜಕೀಯ ಗುರುತಿನೊಂದಿಗೆ ಒಬ್ಬ ದಲಿತ ಯುವ ನಾಯಕ ಚುನಾವಣೆಯಲ್ಲಿ ಗೆಲ್ಲಬಹುದು. ಅವರ ಗೆಲುವು ಬಿಎಸ್‌ಪಿಯ ಕುಸಿತದ ಮಧ್ಯೆ ಹೊಸ ನಾಯಕತ್ವಕ್ಕೆ ಅವಕಾಶವಿದೆ ಎಂಬ ಚರ್ಚೆಗೂ ಕಾರಣವಾಯಿತು.

ಇಂದಿನ ದಲಿತ ರಾಜಕಾರಣದ ಇನ್ನೊಂದು ಮುಖ್ಯ ಬದಲಾವಣೆ ಎಂದರೆ ದಲಿತ ಮತದ ಏಕೀಕರಣ ಕಡಿಮೆಯಾಗುತ್ತಿರುವುದು. ಉತ್ತರ ಪ್ರದೇಶದಲ್ಲಿ ಜಾಟವ್ ಮತ್ತು ಜಾಟವ್ ಅಲ್ಲದ ದಲಿತ ಸಮುದಾಯಗಳ ರಾಜಕೀಯ ಆಯ್ಕೆಗಳಲ್ಲಿ ವ್ಯತ್ಯಾಸ ಕಾಣುತ್ತಿದೆ. 2024ರ ಚುನಾವಣೆಯ ನಂತರದ ವಿಶ್ಲೇಷಣೆಗಳು ವಿವಿಧ ದಲಿತ ಉಪಜಾತಿಗಳ ರಾಜಕೀಯ ನಿಲುವು ಒಂದೇ ರೀತಿಯಾಗಿಲ್ಲ ಎಂಬುದನ್ನು ತೋರಿಸಿವೆ. ಅದೇ ರೀತಿ ಲೋಕಸಭೆಯ 84 ಎಸ್‌ಸಿ ಸದಸ್ಯರ ಹಿನ್ನೆಲೆಯನ್ನು ನೋಡಿದಾಗ, ಕೆಲವು ರಾಜ್ಯಗಳಲ್ಲಿ ರಾಜಕೀಯ ಮತ್ತು ಆರ್ಥಿಕವಾಗಿ ಪ್ರಭಾವಶಾಲಿ ದಲಿತ ಉಪಜಾತಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆತಿರುವುದನ್ನೂ ವಿಶ್ಲೇಷಣೆಗಳು ತಿಳಿಸಿವೆ.

ಇದರಿಂದ ಮೀಸಲು ಸ್ಥಾನ ದಲಿತ ಸಮುದಾಯದ ಎಲ್ಲ ವರ್ಗಗಳ ಧ್ವನಿಯನ್ನು ಸಮಾನವಾಗಿ ಪ್ರತಿನಿಧಿಸುತ್ತಿದೆಯೇ? ಎಂಬ ಮತ್ತೊಂದು ಪ್ರಶ್ನೆ ಮೂಡುತ್ತದೆ.

ಇದೇ ಕಾರಣಕ್ಕೆ ಪ್ರಾತಿನಿಧ್ಯ ಮತ್ತು ಅಧಿಕಾರದ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. ಸಂಸತ್ತಿನಲ್ಲಿ ದಲಿತ ಸಂಸದರು ಇದ್ದಾರೆ. ವಿಧಾನಸಭೆಗಳಲ್ಲಿ ದಲಿತ ಶಾಸಕರಿದ್ದಾರೆ. ಪಂಚಾಯತ್‌ಗಳಲ್ಲಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲು ಸ್ಥಾನಗಳಿವೆ. ಆದರೆ ಅವರು ತಮ್ಮ ಪಕ್ಷದ ನೀತಿ, ಪಕ್ಷದ ವಿಪ್, ಚುನಾವಣಾ ಟಿಕೆಟ್, ಮುಂದಿನ ಚುನಾವಣೆಯ ಭವಿಷ್ಯ ಮತ್ತು ನಾಯಕತ್ವದ ನಿರ್ಧಾರಗಳ ನಡುವೆ ಎಷ್ಟು ಸ್ವತಂತ್ರವಾಗಿ ಮಾತನಾಡಬಲ್ಲರು? ಈ ಪ್ರಶ್ನೆಗೆ ಉತ್ತರ ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿಯೊಂದು ಪಕ್ಷದಲ್ಲೂ ಒಂದೇ ಆಗಿರುವುದಿಲ್ಲ.

ಇಂತಹ ಸನ್ನಿವೇಶಗಳಲ್ಲಿ ಅಂಬೇಡ್ಕರ್ ಅವರ ಆತಂಕ ಪ್ರಸ್ತುತವಾಗುತ್ತದೆ. ಜಂಟಿ ಮತಕ್ಷೇತ್ರದಲ್ಲಿ ದಲಿತ ಅಭ್ಯರ್ಥಿ ಕೇವಲ ದಲಿತ ಮತದಾರರ ಬೆಂಬಲದಿಂದ ಗೆಲ್ಲುವುದಿಲ್ಲ; ಬಹುಸಂಖ್ಯಾತ ಮತದಾರರ ಬೆಂಬಲವೂ ಬೇಕಾಗುತ್ತದೆ. ಆದ್ದರಿಂದ, ಪಕ್ಷದ ಆಯ್ಕೆ ಮತ್ತು ಎಲ್ಲಾ ಮತದಾರರ ಒಪ್ಪಿಗೆಯ ನಡುವೆ ದಲಿತ ಅಭ್ಯರ್ಥಿ ತನ್ನ ರಾಜಕೀಯ ಸ್ಥಾನವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಪೂನಾ ಒಪ್ಪಂದದ ಕುರಿತ ಇತ್ತೀಚಿನ ಶೈಕ್ಷಣಿಕ ಅಧ್ಯಯನಗಳೂ ಈ ವ್ಯವಸ್ಥೆಯನ್ನು ‘ದಲಿತ ಪ್ರತಿನಿಧಿಯಿರುವುದು’ ಮತ್ತು ‘ದಲಿತರ ಪರವಾಗಿ ಸ್ವತಂತ್ರವಾಗಿ ರಾಜಕೀಯವಾಗಿ ಕಾರ್ಯನಿರ್ವಹಿಸುವುದು’ ಎಂಬ ಎರಡು ಬೇರೆ ಪ್ರಶ್ನೆಗಳಾಗಿ ನೋಡುತ್ತವೆ.

ಹೀಗಾಗಿ ಇಂದಿನ ಪ್ರಶ್ನೆಯನ್ನು ‘ಮೀಸಲು ಕ್ಷೇತ್ರ ಬೇಕೇ ಬೇಡವೇ?’ ಎಂಬ ಮಟ್ಟಕ್ಕೆ ಇಳಿಸುವ ಬದಲು ಇನ್ನಷ್ಟು ಆಳ ಪ್ರಶ್ನೆಯನ್ನು ಹಾಕಿಕೊಳ್ಳಬೇಕಿದೆ. ಮೀಸಲು ಕ್ಷೇತ್ರಗಳು ದಲಿತರಿಗೆ ರಾಜಕೀಯ ಪ್ರವೇಶವೇನೋ ನೀಡಿವೆ; ಆದರೆ ಅವು ಎಷ್ಟರಮಟ್ಟಿಗಿನ ರಾಜಕೀಯ ಸ್ವಾಯತ್ತತೆಯನ್ನು ನೀಡಿವೆ?

ಇಂದಿನ ಭಾರತದಲ್ಲಿ ದೊಡ್ಡ ರಾಷ್ಟ್ರೀಯ ಪಕ್ಷಗಳು ದಲಿತ ಮತದಾರರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರ ಪ್ರಸ್ತುತತೆ, ಸಂವಿಧಾನ, ಮೀಸಲು, ಸಾಮಾಜಿಕ ನ್ಯಾಯ, ದಲಿತ ಕಲ್ಯಾಣ ಇವೆಲ್ಲವೂ ಚುನಾವಣಾ ರಾಜಕಾರಣದ ಪ್ರಮುಖ ವಿಷಯಗಳಾಗಿವೆ. 2024ರ ನಂತರದ ರಾಜಕೀಯ ಚರ್ಚೆಗಳಲ್ಲೂ ಅಂಬೇಡ್ಕರ್ ಮತ್ತು ಸಂವಿಧಾನದ ಪರಂಪರೆಯನ್ನು ವಿವಿಧ ಪಕ್ಷಗಳು ತಮ್ಮ ರಾಜಕೀಯ ಭಾಷೆಯಲ್ಲಿ ಬಳಸುತ್ತಿರುವುದು ಸ್ಪಷ್ಟವಾಗಿದೆ. ಅದೇ ಸಮಯದಲ್ಲಿ ಸ್ವತಂತ್ರ ಅಂಬೇಡ್ಕರೈಟ್ ಪಕ್ಷಗಳ ಚುನಾವಣಾ ಶಕ್ತಿ ಕುಗ್ಗಿರುವುದು ಒಂದು ಗಮನಾರ್ಹ ವೈರುಧ್ಯವಾಗಿದೆ.

ಇದರ ಅರ್ಥ ದಲಿತ ರಾಜಕಾರಣ ಮುಗಿದಿದೆ ಎಂದಲ್ಲ. ಬದಲಾಗಿ ಅದರ ರೂಪ ಬದಲಾಗುತ್ತಿದೆ. ಒಂದು ಕಾಲದಲ್ಲಿ ನಮ್ಮದೇ ಎಂಬುದು ಮುಖ್ಯವಾಗಿದ್ದರೆ, ಈಗ ಕೆಲವು ಕಡೆ ‘ನಮ್ಮ ಪ್ರಶ್ನೆಗಳನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ?’ ಎಂಬ ಪ್ರಶ್ನೆ ಮತದಾರರಿಗೆ ಮುಖ್ಯವಾಗುತ್ತಿದೆ. ಕೆಲವರು ಸ್ವತಂತ್ರ ದಲಿತ ಪಕ್ಷಗಳೊಂದಿಗೆ, ಕೆಲವರು ರಾಷ್ಟ್ರೀಯ ಪಕ್ಷಗಳೊಂದಿಗೆ ಮತ್ತು ಇನ್ನೂ ಕೆಲವರು ಪ್ರಾದೇಶಿಕ ಪಕ್ಷಗಳೊಂದಿಗೆ ಸಾಗಬಹುದು. ಇದು ದಲಿತ ರಾಜಕಾರಣದ ದೌರ್ಬಲ್ಯ ಮಾತ್ರವಷ್ಟೇ ಅಲ್ಲ; ಅದರೊಳಗಿನ ರಾಜಕೀಯ ವೈವಿಧ್ಯವನ್ನೂ ಕೂಡ ತೋರಿಸುತ್ತದೆ.

ಆದರೆ ಇದರ ಅಪಾಯವನ್ನೂ ಮನಗಾಣಬೇಕಿದೆ. ದಲಿತ ಮತಗಳು ವಿವಿಧ ಪಕ್ಷಗಳಲ್ಲಿ ಹಂಚಿಕೊಂಡಾಗ, ದಲಿತರ ರಾಜಕೀಯ ಬೇಡಿಕೆಗಳು ಸಾಮಾನ್ಯ ಚುನಾವಣಾ ಲೆಕ್ಕಾಚಾರದಲ್ಲಿ ಕರಗಿಹೋಗುವ ಸಾಧ್ಯತೆ ಇದೆ. ಒಂದು ಪಕ್ಷ ದಲಿತರ ಮತವನ್ನು ಪಡೆಯಲು ಅಂಬೇಡ್ಕರ್ ಅವರ ಚಿತ್ರ ಬಳಸಬಹುದು; ಮತ್ತೊಂದು ಪಕ್ಷ ಸಂವಿಧಾನದ ಹೆಸರನ್ನು ಬಳಸಬಹುದು; ಇನ್ನೊಂದು ಪಕ್ಷ ಮೀಸಲಾತಿಯ ಪ್ರಶ್ನೆಯನ್ನು ಮುಂದಿಡಬಹುದು. ಆದರೆ ಚುನಾವಣೆಯ ನಂತರ ಶಿಕ್ಷಣ, ಭೂಮಿ, ಉದ್ಯೋಗ, ಜಾತಿ ಹಿಂಸೆ, ಸಾಮಾಜಿಕ ಭದ್ರತೆ, ಸರಕಾರಿ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ಮತ್ತು ನ್ಯಾಯದಂತಹ ಮೂಲ ಪ್ರಶ್ನೆಗಳಿಗೆ ಯಾವ ಮಟ್ಟಿಗೆ ನಿರಂತರ ರಾಜಕೀಯ ಒತ್ತಡ ನಿರ್ಮಾಣವಾಗುತ್ತದೆ ಎಂಬುದೇ ಮುಖ್ಯ.

ಆದ್ದರಿಂದ ಅಂಬೇಡ್ಕರ್ ಅವರನ್ನು ಕೇವಲ ಪ್ರತಿಮೆಯಾಗಿ ಅಥವಾ ಚುನಾವಣಾ ಸಂಕೇತವಾಗಿ ಬಳಸುವುದಕ್ಕಿಂತ, ಅವರ ಮೂಲ ಪ್ರಶ್ನೆಯನ್ನು ಮತ್ತೆ ಓದಬೇಕಾಗಿದೆ. ‘ದಲಿತರಿಗೆ ಸೂಕ್ತ ಸ್ಥಾನಗಳು ಸಿಕ್ಕಿವೆಯೇ?’ ಎಂಬುದಕ್ಕಿಂತ ‘ದಲಿತರು ತಮ್ಮ ರಾಜಕೀಯ ಭವಿಷ್ಯವನ್ನು ನಿರ್ಧರಿಸುವಷ್ಟು ಸಂಘಟಿತ ಶಕ್ತಿಯನ್ನು ಪಡೆದಿದ್ದಾರೆಯೇ?’ ಎಂಬ ಪ್ರಶ್ನೆ ಮುಖ್ಯ.

ಪೂನಾ ಒಪ್ಪಂದವು ದಲಿತರಿಗೆ ಮೀಸಲು ರಾಜಕೀಯ ಪ್ರಾತಿನಿಧ್ಯದ ದಾರಿ ತೆರೆಯಿತು. ಸಂವಿಧಾನ ಅದಕ್ಕೆ ಕಾನೂನುಬದ್ಧ ಭದ್ರತೆ ನೀಡಿತು. ಕಾನ್ಶೀರಾಮ್ ಮತ್ತು ಬಿಎಸ್‌ಪಿ ದಲಿತ ಮತವನ್ನು ಸ್ವತಂತ್ರ ರಾಜಕೀಯ ಶಕ್ತಿಯನ್ನಾಗಿ ರೂಪಿಸುವ ಪ್ರಯತ್ನ ಮಾಡಿದರು. ಮಾಯಾವತಿಯವರ ಕಾಲದಲ್ಲಿ ಆ ಶಕ್ತಿ ಸರಕಾರ ರಚಿಸುವ ಮಟ್ಟಕ್ಕೆ ಏರಿತು. ಇತ್ತೀಚಿನ ವರ್ಷಗಳಲ್ಲಿ ಆ ರಾಜಕೀಯ ಶಕ್ತಿಯ ಒಂದು ಭಾಗ ವಿವಿಧ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳತ್ತ ಹರಿದಿದೆ. ನಗಿನಾದಲ್ಲಿ ಚಂದ್ರಶೇಖರ್ ಆಝಾದ್ ಅವರ ಗೆಲುವಿನಂತಹ ಘಟನೆಗಳು ಸ್ವತಂತ್ರ ದಲಿತ ನಾಯಕತ್ವಕ್ಕೆ ಇನ್ನೂ ಜಾಗವಿದೆ ಎಂಬುದನ್ನು ತೋರಿಸುತ್ತವೆ. ಆದರೆ ಅದನ್ನು ದೊಡ್ಡ ರಾಜಕೀಯ ಪರ್ಯಾಯವಾಗಿ ರೂಪಿಸುವುದು ಇನ್ನೂ ಬೇರೆಯದೆ ಪ್ರಶ್ನೆ.

ಕೊನೆಗೆ, ಮೀಸಲು ಕ್ಷೇತ್ರಗಳು ದಲಿತರಿಗೆ ಸಂಸತ್ತಿನ ಬಾಗಿಲು ತೆರೆದಿವೆ. ಆದರೆ ಆ ಬಾಗಿಲಿನೊಳಗೆ ಪ್ರವೇಶಿಸಿದ ನಂತರ ತಮ್ಮದೇ ಧ್ವನಿಯಲ್ಲಿ ಮಾತನಾಡುವಷ್ಟು ರಾಜಕೀಯ ಸ್ವಾತಂತ್ರ್ಯವನ್ನು ನಾವು ನಿರ್ಮಿಸಿದ್ದೇವೆಯೇ? ಪೂನಾ ಒಪ್ಪಂದದ 94 ವರ್ಷಗಳ ನಂತರ ಭಾರತ ಎದುರಿಸುತ್ತಿರುವ ಪ್ರಶ್ನೆ ಬಹುಶಃ ಇದೇ. ಅಂಬೇಡ್ಕರ್ ಅವರ ರಾಜಕೀಯ ಚಿಂತನೆಯ ಅರ್ಥ ಕೇವಲ ದಲಿತರಿಗೆ ಕೆಲವು ಸ್ಥಾನಗಳನ್ನು ಮೀಸಲಿಡುವುದಲ್ಲ. ಸಾಮಾಜಿಕವಾಗಿ ಹೊರಗಿಡಲ್ಪಟ್ಟ ಜನರು ತಮ್ಮ ಹಕ್ಕುಗಳ ಬಗ್ಗೆ ತಾವೇ ಮಾತನಾಡುವ, ತಮ್ಮ ನಾಯಕತ್ವವನ್ನು ತಾವೇ ರೂಪಿಸುವ, ತಮ್ಮ ರಾಜಕೀಯ ಬೇಡಿಕೆಗಳನ್ನು ತಾವೇ ನಿರ್ಧರಿಸುವ ಶಕ್ತಿಯನ್ನು ಪಡೆಯಬೇಕು ಎಂಬುದು ಅದರ ಆಳವಾದ ಆಶಯ. ಆದ್ದರಿಂದ ಪ್ರತ್ಯೇಕ ಮತಕ್ಷೇತ್ರದಿಂದ ಮೀಸಲು ಕ್ಷೇತ್ರಕ್ಕೆ, ಮೀಸಲು ಕ್ಷೇತ್ರದಿಂದ ಪ್ರಾತಿನಿಧ್ಯಕ್ಕೆ, ಪ್ರಾತಿನಿಧ್ಯದಿಂದ ಅಧಿಕಾರಕ್ಕೆ, ಅಧಿಕಾರದಿಂದ ರಾಜಕೀಯ ಸ್ವಾಯತ್ತತೆಗೆ ಸಾಗುವ ಪಯಣ ಇನ್ನೂ ಮುಗಿದಿಲ್ಲ.

ಪೂನಾ ಒಪ್ಪಂದದ ಶತಮಾನ ಸಮೀಪಿಸುತ್ತಿರುವ ಭಾರತದಲ್ಲಿ ದಲಿತ ರಾಜಕಾರಣದ ಮುಂದಿನ ಅಧ್ಯಾಯ ಬಹುಶಃ ‘ಯಾವ ಪಕ್ಷ ಗೆಲ್ಲುತ್ತದೆ?’ ಎಂಬ ಪ್ರಶ್ನೆಯಿಂದ ನಿರ್ಧಾರವಾಗುವುದಿಲ್ಲ. ‘ದಲಿತರು ತಮ್ಮ ರಾಜಕೀಯ ಧ್ವನಿಯನ್ನು ಎಷ್ಟು ಸ್ವತಂತ್ರವಾಗಿ ರೂಪಿಸಿಕೊಳ್ಳಬಲ್ಲರು?’ ಎಂಬ ಪ್ರಶ್ನೆಯೇ ಅದರ ಆಳವನ್ನು ನಿರ್ಧರಿಸಲಿದೆ.

Tags

The Poona PactIndia
share
ಪ್ರಸನ್ನಕುಮಾರ್ ಕೆರಗೋಡು
ಪ್ರಸನ್ನಕುಮಾರ್ ಕೆರಗೋಡು
Next Story
X