Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ‘‘ಈ ಹೋರಾಟ ನಿಲ್ಲುವುದಿಲ್ಲ’’ ನೇಹಾ ಬೋರಾ

‘‘ಈ ಹೋರಾಟ ನಿಲ್ಲುವುದಿಲ್ಲ’’ ನೇಹಾ ಬೋರಾ

ಸಂದರ್ಶನ: ರಶ್ಮಿ ಕೋಟಿಸಂದರ್ಶನ: ರಶ್ಮಿ ಕೋಟಿ11 Aug 2026 10:46 AM IST
share
‘‘ಈ ಹೋರಾಟ ನಿಲ್ಲುವುದಿಲ್ಲ’’ ನೇಹಾ ಬೋರಾ

ದಿಲ್ಲಿಯ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಚಳವಳಿಯ ಪ್ರಮುಖ ಮುಖಗಳಲ್ಲಿ ಒಬ್ಬರಾಗಿರುವ ನೇಹಾ ಬೋರಾ, ಯುವಜನರ ಧ್ವನಿಯಾಗಿ ಗುರುತಿಸಿಕೊಂಡಿದ್ದಾರೆ. ವಿದ್ಯಾರ್ಥಿ ಚಳವಳಿ, ಅದರ ಯಶಸ್ಸು, ಸವಾಲುಗಳು, ಭವಿಷ್ಯದ ಹೋರಾಟ ಹಾಗೂ ಸಮಕಾಲೀನ ರಾಜಕೀಯ ಬೆಳವಣಿಗೆಗಳ ಕುರಿತು ನೇಹಾ ಬೋರಾ ಅವರು ವಿಶೇಷ ಸಂದರ್ಶನ ನೀಡಿದ್ದಾರೆ

► ಪ್ರಶ್ನೆ: ಅನಿರ್ದಿಷ್ಟಾವಧಿಗೆ ಉಪವಾಸ ಸತ್ಯಾಗ್ರಹ ನಡೆಸುವ ಧೈರ್ಯ ನಿಮಗೆ ಎಲ್ಲಿಂದ ಬಂತು?

ನೇಹಾ: ಅದು ಧೈರ್ಯಕ್ಕಿಂತ ನಮ್ಮ ನಂಬಿಕೆ ಮತ್ತು ಸಂಕಲ್ಪವಾಗಿತ್ತು. ವಿದ್ಯಾರ್ಥಿ ಹೋರಾಟವಾಗಿದ್ದರಿಂದ ನಾವು ಸಹ ಉಪವಾಸಕ್ಕೆ ಕೂತಿದ್ದೆವು. ಆರಂಭದಲ್ಲಿ ಅದರ ಕಷ್ಟ ಎಷ್ಟು ಎಂಬ ಅರಿವು ನಮಗಿರಲಿಲ್ಲ. ಹಿಂದೆ ಉಪವಾಸ ನಡೆಸಿದವರು, ವೈದ್ಯರು ಮತ್ತು ಸಹಚರರು ನಿರಂತರವಾಗಿ ಧೈರ್ಯ ತುಂಬುತ್ತಿದ್ದರು. ಅವರ ಪ್ರೋತ್ಸಾಹ, ಹಾಸ್ಯಭಾವ ಮತ್ತು ನಮ್ಮ ಹೋರಾಟದ ಮೇಲಿನ ನಂಬಿಕೆಯೇ ನಮ್ಮನ್ನು ಕೊನೆಯವರೆಗೂ ಮುನ್ನಡೆಸಿತು.

► ದಿಲ್ಲಿ ಪೊಲೀಸರು ಸೋನಂ ವಾಂಗ್ಚುಕ್ ಅವರನ್ನು ಬಲವಂತವಾಗಿ ಆಸ್ಪತೆಗೆ ಕರೆದೊಯ್ದ ದೃಶ್ಯವನ್ನು ನೋಡಿದಾಗ, ಸರಕಾರ ಈ ಹೋರಾಟವನ್ನು ಹತ್ತಿಕ್ಕಲು ನಿರ್ಧರಿಸಿದೆ ಎಂದು ನಿಮಗೆ ಅನಿಸಿತೇ?

ನೇಹಾ: ಖಂಡಿತ ಅನಿಸಿತು. ಬೆಳಗಿನ ಜಾವ ಎಲ್ಲರೂ ನಿದ್ರೆಯಲ್ಲಿದ್ದಾಗ ಪೊಲೀಸರು ಹಠಾತ್ ದಾಳಿ ನಡೆಸಿದರು. ಮೊದಲು ಸಿವಿಲ್ ಉಡುಪಿನಲ್ಲಿದ್ದವರು, ಬಳಿಕ ಸಮವಸ್ತ್ರಧಾರಿ ಪೊಲೀಸರು ಬಂದರು. ಕೆಲವೇ ಕ್ಷಣಗಳಲ್ಲಿ ಸೋನಂ ವಾಂಗ್ಚುಕ್ ಅವರನ್ನು ಹೊದಿಕೆಯಲ್ಲಿ ಸುತ್ತಿ ಕರೆದೊಯ್ದರು. ನಂತರ ಪೊಲೀಸರು ನಮ್ಮ ಶಿಬಿರಕ್ಕೂ ನುಗ್ಗಲು ಪ್ರಯತ್ನಿಸಿದರು. ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿ ನಮ್ಮನ್ನು ರಕ್ಷಿಸಿದರು. ಆ ದಿನದಿಂದ ಪೊಲೀಸರು ನಮ್ಮ ಪ್ರತಿಭಟನೆಯನ್ನು ಎದುರಿಸುವ ವಿಧಾನವೇ ಬದಲಾಗಿದೆ ಎಂಬುದು ಸ್ಪಷ್ಟವಾಯಿತು. ಕೊನೆಯ ದಿನಗಳಲ್ಲಿ ಬಂಧನದ ಭಯದಿಂದ ನಾವು ಶಿಬಿರವನ್ನು ಬಿಟ್ಟು ಹೊರಗೆ ಹೋಗುತ್ತಲೇ ಇರಲಿಲ್ಲ, ಸ್ನಾನಕ್ಕೂ ಹೋಗದೆ, ಅದೇ ಬಟ್ಟೆಗಳಲ್ಲಿ ಹಲವು ದಿನ ಉಳಿಯಬೇಕಾಯಿತು.

► ನಿಮ್ಮ ಪ್ರತಿಭಟನೆ ಇಷ್ಟೊಂದು ದೊಡ್ಡ ಪರಿಣಾಮ ಬೀರುತ್ತದೆ ಎಂದು ನೀವು ಊಹಿಸಿದ್ದೀರಾ?

ನೇಹಾ: ಖಂಡಿತಾ ಇಲ್ಲ. ನಾವು ಹಾಸ್ಯವಾಗಿ ಅದರ ಬಗ್ಗೆ ಮಾತನಾಡುತ್ತಿದ್ದೆವು. ಈ ಹೋರಾಟ ದೊಡ್ಡ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ನಮಗಿತ್ತು. ಆದರೆ ಅದು ದೇಶದಾದ್ಯಂತ ಜನರಿಗೆ ಆಶಾಕಿರಣವಾಗುತ್ತದೆ, ಹೊಸ ಶಕ್ತಿ ತುಂಬುತ್ತದೆ ಎಂದು ಊಹಿಸಿರಲಿಲ್ಲ. ನಿರಾಶೆಯ ವಾತಾವರಣವನ್ನು ಮುರಿದು, ಯುವಜನರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದ ಹೋರಾಟವಾಗಿ ಇದು ಬೆಳೆಯಿತು.

► ಈ ಹೋರಾಟದ ವಿರುದ್ಧ ಕೇಳಿಬಂದ ದೊಡ್ಡ ಆರೋಪಗಳಲ್ಲಿ ಒಂದು, ಇದಕ್ಕೆ ವಿದೇಶಿ ಹಣಕಾಸು ಅಥವಾ ವಿದೇಶಿ ಪ್ರಭಾವವಿದೆ ಎನ್ನುವುದಾಗಿತ್ತಲ್ಲಾ?

ನೇಹಾ: ಜಂತರ್ ಮಂತರ್‌ಗೆ ಬಂದವರು ವಾಸ್ತವವನ್ನು ನೋಡಿದರು. ನಾವು ಹಾಸಿಗೆಯ ಮೇಲಲ್ಲ, ಮರದ ಹಲಗೆಯ ಮೇಲೆ ಮಲಗಿದ್ದೆವು. ಜನರಿಂದ ಬಂದದ್ದು ನೀರಿನ ಬಾಟಲಿಗಳು ಮತ್ತು ಸಾಮಾನ್ಯ ಸಹಾಯ ಮಾತ್ರ. ದೇಶದ ವಿವಿಧ ಭಾಗಗಳಿಂದ ಸ್ವಯಂಪ್ರೇರಣೆಯಿಂದ ಬಂದ ಸಾಮಾನ್ಯ ಜನರು ಅಲ್ಲಿದ್ದರು. ಕರ್ನಾಟಕ, ಬಿಹಾರ, ಮಣಿಪುರ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಿಂದ ಜನರು ಸೇರಿದ್ದರು. ಹೀಗಾಗಿ ಇದು ವಿದೇಶಿ ಹಣದಿಂದ ನಡೆದ ಹೋರಾಟವಲ್ಲ, ಜನರ ಬೆಂಬಲದಿಂದ ನಡೆದ ಜನಾಂದೋಲನ ಎಂಬುದು ಎಲ್ಲರಿಗೂ ಸ್ಪಷ್ಟವಾಯಿತು.

► ಪ್ರಧಾನಮಂತ್ರಿಯ ವಿರುದ್ಧ ಪ್ರತಿಭಟನಾಕಾರರು ಕೂಗಿದ ಘೋಷಣೆಗಳೇ ಈ ರೀತಿಯ ಆನ್‌ಲೈನ್ ದಾಳಿ ಮತ್ತು ಬೆದರಿಕೆಗಳಿಗೆ ಕಾರಣ ಎಂದು ನೀವು ಭಾವಿಸುತ್ತೀರಾ?

ನೇಹಾ: ಖಂಡಿತ. ಆದರೆ ಪ್ರತಿಭಟನಾಕಾರರನ್ನು ಗುರಿಯಾಗಿಸಿ ನಡೆಸುವ ಈ ರೀತಿಯ ದ್ವೇಷ ಅಭಿಯಾನ ಹೊಸದೇನಲ್ಲ. ಅತ್ಯಂತ ಸೌಜನ್ಯದಿಂದ ಪ್ರತಿಭಟಿಸಿದವರ ಮೇಲೂ ಹಿಂದೆ ಇದೇ ರೀತಿಯ ಟ್ರೋಲಿಂಗ್, ಬೆದರಿಕೆ ಮತ್ತು ಮಾನಹಾನಿ ನಡೆದಿವೆ. ಪ್ರತಿಭಟನಾಕಾರರ ಭಾಷೆಯನ್ನು ಅಸಭ್ಯ ಎಂದು ಟೀಕಿಸುವವರೇ, ತಮ್ಮ ಪಕ್ಷದ ಸಂಸದರು, ಶಾಸಕರು ಮತ್ತು ಸಚಿವರು ಸಾರ್ವಜನಿಕ ವೇದಿಕೆಗಳಲ್ಲಿ ಬಳಸುವ ಅವಹೇಳನಕಾರಿ ಭಾಷೆಯನ್ನು ಕಡೆಗಣಿಸುತ್ತಾರೆ. ಮಹಿಳಾ ರಾಜಕಾರಣಿಗಳ ವಿರುದ್ಧ ಅವಹೇಳನಕಾರಿ ಪದಗಳು, ಮಹಿಳೆಯರನ್ನು ಕೀಳಾಗಿ ಕಾಣುವ ಮಾತುಗಳು, ಜಾತಿ ಆಧಾರಿತ ಮತ್ತು ಮೇಲ್ವರ್ಗದ ಅಹಂಕಾರವನ್ನು ಪ್ರತಿಬಿಂಬಿಸುವ ಭಾಷೆ ಇವೆಲ್ಲವನ್ನೂ ಅವರ ನಾಯಕರು ಪದೇಪದೇ ಬಳಸಿದ್ದಾರೆ. ಸಾಮಾನ್ಯ ನಾಗರಿಕರು, ಮಹಿಳಾ ಹೋರಾಟಗಾರರು ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರ ವಿರುದ್ಧವೂ ಇದೇ ರೀತಿಯ ಭಾಷೆ ಬಳಕೆಯಾಗಿದೆ. ಹೀಗಾಗಿ, ಪ್ರತಿಭಟನಾಕಾರರ ಭಾಷೆಯ ಬಗ್ಗೆ ಮಾತ್ರ ಪ್ರಶ್ನೆ ಎತ್ತುವುದು ಆಯ್ದ ನೈತಿಕತೆಯಂತೆ ಕಾಣುತ್ತದೆ.

ಇತ್ತೀಚೆಗೆ ಪ್ರಧಾನ ಮಂತ್ರಿಯವರು ಜೆನ್ ಝಿ ಜೊತೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ. ನಿಮ್ಮ ಅನಿಸಿಕೆಯಲ್ಲಿ, ಜೆನ್ ಝಿ ಅವರ ಸ್ನೇಹದ ಮನವಿಯನ್ನು ಒಪ್ಪಿಕೊಂಡಿದೆಯೇ?

ನೇಹಾ: ಜೆನ್ ಝಿ ಆ ಸ್ನೇಹದ ಮನವಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ. ಹಲವರು ಅವರನ್ನು ಸಂಪೂರ್ಣವಾಗಿ ‘ಬ್ಲಾಕ್’ ಮಾಡಿದ್ದಾರೆ ಎಂದೇ ಹೇಳಬಹುದು. ಅವರಿಂದ ನಾವು ಉತ್ತಮ ಆಡಳಿತವನ್ನು ನಿರೀಕ್ಷಿಸುತ್ತೇವೆಯೇ ಹೊರತು, ದೇಶವನ್ನು ಧರ್ಮದ ಹೆಸರಿನಲ್ಲಿ ವಿಭಜಿಸುವುದಾಗಲಿ, ಅಥವಾ ದೇಶದ ನಿಜವಾದ ಮತ್ತು ಪ್ರಮುಖ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವುದಾಗಲಿ ಅಲ್ಲ.

ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಅನೇಕ ಮಹಿಳೆಯರು ಡಾಕ್ಸಿಂಗ್, ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳಂತಹ ಆನ್‌ಲೈನ್ ಕಿರುಕುಳವನ್ನು ಎದುರಿಸಿದ್ದಾರೆ. 15 ವರ್ಷದ ಬಾಲಕಿಯೂ ಗುರಿಯಾಗಿದ್ದಾಳೆ. ಧ್ವನಿ ಎತ್ತಿದರೆ ಇಷ್ಟು ದೊಡ್ಡ ವೈಯಕ್ತಿಕ ಬೆಲೆ ತೆರಬೇಕಾಗುತ್ತದೆ ಎಂದು ನೀವು ಎಂದಾದರೂ ಊಹಿಸಿದ್ದೀರಾ?

ನೇಹಾ: ಇಂತಹ ಆನ್‌ಲೈನ್ ದ್ವೇಷ ಹೊಸದೇನಲ್ಲ. ನನ್ನ ಮೇಲೂ, ಪತ್ರಕರ್ತರ ಮೇಲೂ, ಹೋರಾಟಗಾರರ ಮೇಲೂ ವರ್ಷಗಳಿಂದ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ. ಈ ಬಾರಿ 15-17 ವರ್ಷದ ವಿದ್ಯಾರ್ಥಿನಿಯರನ್ನೂ ಗುರಿಯಾಗಿಸಲಾಗಿದೆ. ಆದರೆ ಇದರಿಂದ ಯುವತಿಯರು ಹೆದರಿಲ್ಲ, ಇನ್ನಷ್ಟು ಧೈರ್ಯವಾಗಿ ಧ್ವನಿ ಎತ್ತುತ್ತಿದ್ದಾರೆ. ಪ್ರಧಾನಿ ವಿರುದ್ಧ ಘೋಷಣೆ ಕೂಗಿದ್ದರಿಂದಲೇ ಈ ದಾಳಿ ನಡೆದಿದೆ. ಆದರೆ ಪ್ರತಿಭಟನಾಕಾರರ ಭಾಷೆಯನ್ನು ಪ್ರಶ್ನಿಸುವವರೇ ತಮ್ಮ ನಾಯಕರು ಮಹಿಳಾ ವಿರೋಧಿ, ಜಾತಿವಾದಿ ಮತ್ತು ಅವಹೇಳನಕಾರಿ ಭಾಷೆ ಬಳಸಿದಾಗ ಮೌನವಾಗಿದ್ದಾರೆ.

ಈ ಹೋರಾಟ ಮುಗಿದ ಅಧ್ಯಾಯ ಎಂದು ನೀವು ಭಾವಿಸುತ್ತೀರಾ?

ನೇಹಾ: ಇಲ್ಲ, ಈ ಹೋರಾಟ ಇನ್ನೂ ಮುಂದುವರಿಯುತ್ತಿದೆ. ಜುಲೈ 20ರಂದು ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿ ಚಾರ್ಜ್, ಎಕೆ 47 ಹಾಗೂ ಪೆಲೆಟ್ ಗನ್ ಬಳಕೆ ಮಾಡಿರುವುದಕ್ಕೆ ನೈತಿಕ ಹೊಣೆ ಹೊತ್ತು ಗೃಹಮಂತ್ರಿಯ ರಾಜೀನಾಮೆ ಮತ್ತು ಪೊಲೀಸ್ ಆಯುಕ್ತರ ವಜಾ ಆಗಬೇಕು. ಜುಲೈ 25ರ ಸಂಧಾನ ಸಭೆಯಲ್ಲಿ ಸರಕಾರ ನಮಗೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳದೆ ಪ್ರತಿಭಟನಾಕಾರರ ವಿರುದ್ಧ ಹೊಸ ಎಫ್‌ಐಆರ್‌ಗಳು ದಾಖಲಾಗುತ್ತಿವೆ, ಮಹಿಳೆಯರನ್ನು ಬೆದರಿಸಿ ಕ್ಷಮೆ ಕೇಳಿಸುವ ಘಟನೆಗಳು ನಡೆಯುತ್ತಿವೆ. ಇವೆಲ್ಲವೂ ನಮ್ಮ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಇನ್ನೂ ಜೈಲಿನಲ್ಲಿದ್ದಾರೆ. ಜುಲೈ 20ರಂದು ನಡೆದ ಹಿಂಸಾಚಾರಕ್ಕೆ ಜವಾಬ್ದಾರಿ ನಿಗದಿಯಾಗಿ, ತಪ್ಪಿತಸ್ಥರು ಹೊಣೆ ಹೊತ್ತು ರಾಜೀನಾಮೆ ನೀಡುವವರೆಗೆ ಈ ಹೋರಾಟ ನಿಲ್ಲುವುದಿಲ್ಲ.

Tags

Neha Bora
share
ಸಂದರ್ಶನ: ರಶ್ಮಿ ಕೋಟಿ
ಸಂದರ್ಶನ: ರಶ್ಮಿ ಕೋಟಿ
Next Story
X