Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಹಲವು ಇತಿಹಾಸ ಸೃಷ್ಟಿಸಿದ ಅಮೆರಿಕ...

ಹಲವು ಇತಿಹಾಸ ಸೃಷ್ಟಿಸಿದ ಅಮೆರಿಕ ಮಧ್ಯಂತರ ಚುನಾವಣೆ

ಟ್ರಂಪ್ ಪಕ್ಷಕ್ಕೆ ಎರಡೂ ಸದನಗಳಲ್ಲಿ ಹೀನಾಯ ಸೋಲು

ಕೆ.ಆರ್. ಶ್ರೀನಾಥ್, ಅಟ್ಲಾಂಟಕೆ.ಆರ್. ಶ್ರೀನಾಥ್, ಅಟ್ಲಾಂಟ5 Nov 2026 10:00 AM IST
share
ಹಲವು ಇತಿಹಾಸ ಸೃಷ್ಟಿಸಿದ ಅಮೆರಿಕ ಮಧ್ಯಂತರ ಚುನಾವಣೆ

ನವೆಂಬರ್ 3,2026ರ ಮಧ್ಯಂತರ ಚುನಾವಣೆಯಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್‌ನ ಆಡಳಿತಾರೂಢ ರಿಪಬ್ಲಿಕನ್ ಪಕ್ಷವು ಹೀನಾಯ ಸೋಲು ಕಂಡಿದೆ. ಸಂಸತ್ತಿನ ಎರಡೂ ಸದನಗಳಲ್ಲಿ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್) ವಿರೋಧ ಪಕ್ಷವಾದ ಡೆಮಾಕ್ರಟಿಕ್ ಪಕ್ಷವು ಸ್ಪಷ್ಟ ಬಹುಮತದತ್ತ ಸಾಗಿದೆ. ಇನ್ನೂ ಎರಡು ವರ್ಷ ಆಡಳಿತಾವಧಿ ಬಾಕಿ ಇರುವ ಅಧ್ಯಕ್ಷ ಟ್ರಂಪ್ ಇನ್ನು ಮುಂದೆ ‘ಲೇಮ್ ಡಕ್ ಪ್ರೆಸಿಡೆಂಟ್’(ಅಕ್ಷರಶಃ ಅನುವಾದ ‘ಕುಂಟ ಬಾತುಕೋಳಿ’)ಆಗಿ ಕಳೆಯಬೇಕಾದ ಸ್ಥಿತಿ ಎದುರಿಸಬೇಕಾಗಿದೆ. ಅಂದರೆ, ಇನ್ನು ಮುಂದೆ ಟ್ರಂಪ್ ಏಕರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಂಸತ್ತಿನಲ್ಲಿ ವಿರೋಧ ಪಕ್ಷದ ಬಹುಮತವು ಅಡ್ಡಿಬರಲಿದೆ. ಅದೇ ರೀತಿ ಎರಡೂ ಸದನಗಳು ಟ್ರಂಪ್ ಮತ್ತು ಅವರ ಸಹಚರರ ಭ್ರಷ್ಟಾಚಾರ ಹಾಗೂ ಅಕ್ರಮಗಳನ್ನು ತನಿಖೆ ನಡೆಸುವ ಸಾಧ್ಯತೆ ಹೆಚ್ಚಾಗಿದೆ.

ಮತ ಎಣಿಕೆ ಮುಗಿಯುತ್ತಿದ್ದು, ಎಲ್ಲ ಸುದ್ದಿ ಮಾಧ್ಯಮಗಳ ಪ್ರಕಾರ ಡೆಮಾಕ್ರಟಿಕ್ ಪಕ್ಷವು ಸಂಸತ್ತಿನ ಎರಡೂ ಸದನಗಳಲ್ಲಿ ಬಹುಮತ ಪಡೆದಿದೆ. ಒಟ್ಟು 100 ಸೀಟುಗಳ ಸಂಖ್ಯಾಬಲವಿರುವ ಸೆನೆಟ್‌ನಲ್ಲಿ ಬಹುಮತ ಪಡೆಯಲು ಡೆಮಾಕ್ರಟಿಕ್ ಪಕ್ಷವು ರಿಪಬ್ಲಿಕನ್ ಪಕ್ಷದ 4 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕಿತ್ತು. ಆದರೆ, ಇದೀಗ ಬರುತ್ತಿರುವ ಮತ ಎಣಿಕೆಯ ಪ್ರಕಾರ 54ಸೀಟು ಗೆದ್ದಿದೆ. ಈ ಮೂಲಕ ಜನವರಿ 2027ರಲ್ಲಿ ಚಕ್ ಶೂಮರ್ ಅವರು ಸೆನೆಟ್‌ನಲ್ಲಿ ಸದನದ ನಾಯಕರಾಗಲಿದ್ದಾರೆ.

ಅದೇ ರೀತಿ ಒಟ್ಟು 435 ಸೀಟುಗಳ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ 218 ಸೀಟುಗಳ ಸರಳ ಬಹುಮತ ಪಡೆಯಲು ಡೆಮಾಕ್ರಟಿಕ್ ಪಕ್ಷವು ರಿಪಬ್ಲಿಕನ್ ಹಿಡಿತದಿಂದ ಕೇವಲ 3 ಸೀಟುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕಿತ್ತು. ಆದರೆ, ಟ್ರಂಪ್ ವಿರುದ್ಧದ ಆಕ್ರೋಶದ ಅಲೆ ಸುನಾಮಿ ರೀತಿಯಲ್ಲಿ ಅಪ್ಪಳಿಸಿ ಡೆಮಾಕ್ರಟಿಕ್ ಪಕ್ಷವು 228 ಸೀಟು ಪಡೆದಿದೆ.

ಈ ಬಹುಮತದಿಂದ ಜನವರಿ 2027ರಲ್ಲಿ ವಿರೋಧ ಪಕ್ಷದ ಹಕೀಮ್ ಜೆಫ್ರಿಸ್ ಅವರು ‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’ ಸದನದ ನೂತನ ಸ್ಪೀಕರ್ ಆಗಿ ಅಧಿಕಾರಗ್ರಹಣ ಮಾಡಲಿದ್ದಾರೆ. ಹಕೀಮ್ ಜೆಫ್ರಿಸ್ ಅವರು ಅಮೆರಿಕದ 250 ವರ್ಷಗಳ ಇತಿಹಾಸದಲ್ಲಿ ಪ್ರಥಮ ಆಫ್ರಿಕನ್ ಅಮೆರಿಕನ್ ಸ್ಪೀಕರ್ ಆಗಿ ಇತಿಹಾಸ ಸೃಷ್ಟಿಸಲಿದ್ದಾರೆ.

ಟ್ರಂಪ್ ನೀತಿಗಳಿಂದ ಬೆಲೆ ಹೆಚ್ಚಳ, ವ್ಯಾಪಕ ಭ್ರಷ್ಟಾಚಾರ, ಸುಂಕದ(ಖಿಚಿಡಿiಜಿಜಿ) ದುರ್ಬಳಕೆ, ಅಪ್ರಚೋದಿತ ಇರಾನ್ ಯುದ್ಧದಲ್ಲಿ ವ್ಯರ್ಥವಾಗಿ ವ್ಯಯಿಸುತ್ತಿರುವ ಹಣ ಹಾಗೂ ಅದರ ಪರಿಣಾಮದಿಂದ ಪೆಟ್ರೋಲ್/ಡೀಸೆಲ್ ಬೆಲೆಯಲ್ಲಿ ಏರಿಕೆ, ವಲಸಿಗರ ಮೇಲೆ ಕ್ರೂರ ಕ್ರಮಗಳು, ಎಪ್‌ಸ್ಟೀನ್ ಫೈಲ್ಸ್ ಪೂರ್ಣ ಬಿಡುಗಡೆ ಮಾಡದಿರುವುದು, ಎಐ ಡೇಟಾ ಸೆಂಟರ್ ನಿರ್ಮಾಣಗಳಿಂದ ಪರಿಸರ ಹಾನಿ, ವಿರೋಧಿಗಳ ವಿರುದ್ಧ ದ್ವೇಷ/ಅವಹೇಳನಗಳು, ಮಿತ್ರ ರಾಷ್ಟ್ರಗಳೊಂದಿಗೆ ಅನವಶ್ಯಕವಾದ ತಿಕ್ಕಾಟ, ರಶ್ಯ ಮತ್ತು ಚೀನಾ ದೇಶದ ಅಧ್ಯಕ್ಷರೊಂದಿಗೆ ಮೃದು ನಿಲವು, ಅಮೆರಿಕದ ಯುದ್ಧನೀತಿ ಮೇಲೆ ಇಸ್ರೇಲ್‌ನ ನೆತನ್ಯಾಹು ಹಿಡಿತ, ಇವು ಈ ಮಧ್ಯಂತರ ಚುನಾವಣೆಯಲ್ಲಿ ಪ್ರಜೆಗಳ ಆಕ್ರೋಶಕ್ಕೆ ಕಾರಣಗಳಾಗಿವೆ. ಅಮೆರಿಕದ ಮಧ್ಯಭಾಗದಲ್ಲಿರುವ ರಾಜ್ಯಗಳು (ಅಯೋವಾ, ಕೆಂಟಕಿ, ನೆಬ್ರಾಸ್ಕ, ಕ್ಯಾನ್ಸಸ್) ರಿಪಬ್ಲಿಕನ್ ಪಕ್ಷದ ಭದ್ರಕೋಟೆಗಳಾಗಿದ್ದವು. ಈ ರಾಜ್ಯಗಳಲ್ಲಿ ಹೆಚ್ಚು ಪ್ರಜೆಗಳು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಡೀಸೆಲ್ ಬೆಲೆ ಹೆಚ್ಚಳವು ರೈತರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿದೆ. ಗ್ರಾಮೀಣ ಭಾಗದ ಪ್ರಜೆಗಳು ಟ್ರಂಪ್ ಪಕ್ಷದ ವಿರುದ್ಧ ಮತ ಚಲಾಯಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಟ್ರಂಪ್ ಬೆಂಬಲಿಸಿದ್ದ ಹಿಸ್ಪ್ಯಾನಿಕ್(ಸ್ಪ್ಯಾನಿಷ್ ಭಾಷೆ ಮಾತನಾಡುವ ದಕ್ಷಿಣ ಅಮೆರಿಕ ಖಂಡದ ದೇಶಗಳ ಮೂಲದ) ಪ್ರಜೆಗಳು ವಲಸಿಗರ ಮೇಲೆ ಜರುಗುತ್ತಿರುವ ಕ್ರೂರ ಕ್ರಮದ ವಿರುದ್ಧ ಮತ ನೀಡಿದ್ದಾರೆ. ಪಕ್ಷದ ನಿಷ್ಠಾವಂತ ಉತ್ತಮ ಅಭ್ಯರ್ಥಿಗಳ ಬದಲಿಗೆ ಟ್ರಂಪ್ ತನ್ನ ದುರ್ಬಲ ಹಿಂಬಾಲಕರನ್ನು ಹೆಚ್ಚಿನ ಸೀಟುಗಳಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳನ್ನಾಗಿ ನಿಲ್ಲಿಸಿದ್ದು ಸಹ ಪಕ್ಷದ ಸೋಲಿಗೆ ಕಾರಣವಾಗಿದೆ. ಹಾಗೆಯೇ ಮತದಾರರು ರಿಪಬ್ಲಿಕನ್ ಪಕ್ಷದ ಪರವಾಗಿ ಇಲಾನ್ ಮಸ್ಕ್ ಹಾಗೂ ಇತರ ಕಾರ್ಪೊರೇಟ್ ಹಣದ ಹೊಳೆಯ ವಿರುದ್ಧವೂ ಮತ ನೀಡಿದ್ದಾರೆ. ಹಣದ ಮೂಲಕ ಚುನಾವಣೆಗಳನ್ನು ಕೊಂಡುಕೊಳ್ಳಬಹುದು ಎಂದು ತಿಳಿದಿದ್ದ ಈ ಹಣವಂತರಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ.

ಈ ಮಧ್ಯಂತರ ಚುನಾವಣೆಯು ಹಲವು ಪ್ರಥಮಗಳನ್ನು ಮತ್ತು ಇತಿಹಾಸವನ್ನು ಸೃಷ್ಟಿಸಿದೆ, ಮಿಶಿಗನ್ ರಾಜ್ಯದ ಸೆನೆಟರ್ ಆಗಿ ಡೆಮಾಕ್ರಟಿಕ್ ಪಕ್ಷದ ಡಾ. ಅಬ್ದುಲ್ ಅಲ್-ಸಯ್ಯದ್‌ಆಯ್ಕೆಯಾಗಲಿದ್ದಾರೆ. ಇವರು ಅಮೆರಿಕದ ಇತಿಹಾಸದಲ್ಲಿಯೇ ಮೊದಲ ಇಸ್ಲಾಮ್ ಧರ್ಮದ ಸೆನೆಟರ್ ಆಗಲಿದ್ದಾರೆ. ಇವರ ವಿರುದ್ಧ ಟ್ರಂಪ್ ಧರ್ಮ ದ್ವೇಷದ ಪ್ರಚಾರ ಮತ್ತು ಪ್ರಚೋದನೆಯ ಅವಹೇಳನಕಾರಿ ಮಾತುಗಳನ್ನಾಡಿದ್ದರು. ಆದರೆ, ಮತದಾರರು ಧರ್ಮಕ್ಕಿಂತ ಆರೋಗ್ಯ ವಿಮೆ, ಶಿಕ್ಷಣ, ಬೆಲೆ ಏರಿಕೆ ಪ್ರಮುಖ ವಿಷಯಗಳೆಂದು ತಿಳಿಸಿದ್ದಾರೆ. ಕನ್ನಡಿಗರಿಗೆ ಹೆಮ್ಮೆಯ ವಿಷಯವೆಂದರೆ ಡಾ. ಅಬ್ದುಲ್ ಅಲ್-ಸಯ್ಯದ್ ಕರ್ನಾಟಕದ ಅಳಿಯ. ಅವರ ಪತ್ನಿ ಡಾ. ಸಾರಾ ಜುಕಾಕು ಅವರ ತಂದೆ-ತಾಯಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದ ಬಂದು ಅಮೆರಿಕದಲ್ಲಿ ನೆಲೆಸಿದ್ದಾರೆ.

ಡಾ. ಮಾರ್ಟಿನ್ ಲೂಥರ್ ಕಿಂಗ್ ಜು. ಅವರ ಕರ್ಮಭೂಮಿಯಾದ ದಕ್ಷಿಣದ ಜಾರ್ಜಿಯಾ ರಾಜ್ಯದ ಗವರ್ನರ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಕೀಶ ಲ್ಯಾನ್ಸ್ ಬಾಟಮ್ಸ್ ಆಯ್ಕೆ ಆಗಿದ್ದಾರೆ. 250 ವರ್ಷಗಳ ಅಮೆರಿಕ ಇತಿಹಾಸದಲ್ಲಿ ಯಾವುದೇ ರಾಜ್ಯದ ಪ್ರಥಮ ಆಫ್ರಿಕನ್ ಅಮೆರಿಕನ್ ಮಹಿಳಾ ಗವರ್ನರ್ ಆಗಿ ಕೀಶ ಲ್ಯಾನ್ಸ್ ಬಾಟಮ್ಸ್ ಚುನಾಯಿತರಾಗಿದ್ದಾರೆ. ಈ ಹಿಂದೆ ಇವರು ಅಟ್ಲಾಂಟ ನಗರದ ಮೇಯರ್ ಆಗಿ ಕೆಲಸ ಮಾಡಿದ್ದಾರೆ. 23 ವರ್ಷಗಳ ನಂತರ ಜಾರ್ಜಿಯಾ ರಾಜ್ಯದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯೊಬ್ಬರು ಮತ್ತೆ ಗವರ್ನರ್ ಆಗಿ ಚುನಾಯಿತರಾಗಿದ್ದಾರೆ. ಜಾರ್ಜಿಯಾ ರಾಜ್ಯದ ಸೆನೆಟ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜಾನ್ ಒಸ್ಸೋಫ್ ಅದ್ಭುತ ಬಹುಮತದಿಂದ ಚುನಾಯಿತರಾಗಿದ್ದಾರೆ. ಸೆನೆಟರ್ ಜಾನ್ ಒಸ್ಸೋಫ್ 2028ರಲ್ಲಿ ನಡೆಯುವ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಗಳಿವೆ.

ಫ್ಲೋರಿಡಾ ರಾಜ್ಯದ 22ನೇ ಡಿಸ್ಟ್ರಿಕ್ಟ್‌ನಿಂದ ಹೌಸ್ ಆಫ್ ರೆಪ್ರೆಸಂಟೇಟಿವ್‌ಗೆ ಗುಜರಾತಿ ಮೂಲದ ಶಿಕ್ಷಕಿ ಪಿಯ ದಾಂಡಿಯಾ ಡೆಮಾಕ್ರಟಿಕ್ ಪಕ್ಷದಿಂದ ಚುನಾಯಿತರಾಗಿದ್ದಾರೆ. ರಿಪಬ್ಲಿಕನ್ ಭದ್ರಕೋಟೆಯಾದ ಕ್ಯಾನ್ಸಸ್ ರಾಜ್ಯದ ಸೆನೆಟ್ ಚುನಾವಣೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ 94 ವರ್ಷದ ನಂತರ ಮೊದಲ ಬಾರಿಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಡಮ್ ಹ್ಯಾಮಿಲ್ಟನ್ ಚುನಾಯಿತರಾಗಿದ್ದಾರೆ. ಮೇಯ್ನ್ ರಾಜ್ಯದ ಸೆನೆಟ್ ಚುನಾವಣೆಯಲ್ಲಿ ಬಹು ವರ್ಷಗಳ ಸೆನೆಟರ್ ಆಗಿದ್ದ ರಿಪಬ್ಲಿಕನ್ ಪಕ್ಷದ ಸೂಸನ್ ಕಾಲಿನ್ಸ್ ಈ ಸುನಾಮಿಯಲ್ಲಿ ಸೋಲುಂಡಿದ್ದಾರೆ. ಮತ್ತೊಂದು ಆಶ್ಚರ್ಯಕರ ಫಲಿತಾಂಶ ಟೆಕ್ಸಾಸ್ ರಾಜ್ಯದ ಸೆನೆಟ್ ಮತ್ತು ಗವರ್ನರ್ ಚುನಾವಣೆಯಲ್ಲಿ ಬಂದಿದೆ. 1988ರ ನಂತರ ಇದೇ ಮೊದಲ ಬಾರಿಗೆ ಸೆನೆಟರ್ ಆಗಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೇಮ್ಸ್ ಟ್ಯಲರಿಕೋ ಚುನಾಯಿತರಾಗಿದ್ದಾರೆ. ಅದೇ ರೀತಿ 36 ವರ್ಷಗಳ ನಂತರ ಟೆಕ್ಸಾಸ್ ರಾಜ್ಯದ ಗವರ್ನರ್ ಆಗಿ ಡೆಮಾಕ್ರಟಿಕ್ ಪಕ್ಷದ ಜಿನ ಹಿನೊಹೊಸ ಆಯ್ಕೆಯಾಗಿದ್ದಾರೆ. ಇವರು ಇತಿಹಾಸದಲ್ಲಿಯೇ ಪ್ರಥಮ ಮಹಿಳಾ ಹಿಸ್ಪಾನಿಕ್(ಸ್ಪ್ಯಾನಿಷ್ ಮಾತನಾಡುವ)ಗವರ್ನರ್. ರಿಪಬ್ಲಿಕನ್ ಪಕ್ಷದ ಭದ್ರಕೋಟೆಗಳಾದ ಸೌತ್ ಕರೋಲಿನಾ ಮತ್ತು ನಾರ್ತ್ ಕರೋಲಿನಾ ರಾಜ್ಯಗಳಲ್ಲಿ ಈ ಬಾರಿ ಡೆಮಾಕ್ರಟಿಕ್ ಪಕ್ಷವು ವಿಜಯ ಸಾಧಿಸಿದೆ.

ಹೀಗೆ ಹಲವಾರು ಡೆಮಾಕ್ರಟಿಕ್ ಅಭ್ಯರ್ಥಿಗಳು ಟ್ರಂಪ್ ವಿರೋಧದ ಅಲೆಯಲ್ಲಿ ವಿಜಯ ಸಾಧಿಸಿದ್ದಾರೆ. ವಿಶ್ವದಾದ್ಯಂತ ಕಳೆದ 7-8 ತಿಂಗಳುಗಳಲ್ಲಿ ನಡೆದ ಚುನಾವಣೆಗಳನ್ನು ನೋಡಿದರೆ ಯುವ ಜನಾಂಗದ ಪ್ರಭಾವ ಹೆಚ್ಚು ಪರಿಣಾಮ ಬೀರಿದೆ. ಬಲಪಂಥೀಯ ಪಕ್ಷಗಳು ಸೋಲು ಕಾಣುತ್ತಿದ್ದು ಪ್ರಜಾಪ್ರಭುತ್ವದ ಪರವಿರುವ ಸಮಾಜವಾದಿ ಹಿನ್ನೆಲೆಯುಳ್ಳ ಪಕ್ಷಗಳು ಚುನಾವಣೆಗಳಲ್ಲಿ ಗೆಲ್ಲುತ್ತಿವೆ. ಅಮೆರಿಕದ ಸಂಸತ್ ತರುವ ಕಾಯ್ದೆಗಳನ್ನು ವೀಟೊ ಮಾಡುವ ಅಧಿಕಾರ ಟ್ರಂಪ್‌ಗೆ ಇರುತ್ತದೆ. ಇದು ಇನ್ನುಳಿದಿರುವ ಎರಡು ವರ್ಷಗಳ ಟ್ರಂಪ್ ಆಡಳಿತಾವಧಿಯಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಡಲಿದೆ.

Tags

US Midterm ElectionsUS ElectionsAmerican PoliticsHistoric Election Results
share
ಕೆ.ಆರ್. ಶ್ರೀನಾಥ್, ಅಟ್ಲಾಂಟ
ಕೆ.ಆರ್. ಶ್ರೀನಾಥ್, ಅಟ್ಲಾಂಟ
Next Story
X