Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಈ 79 ವರ್ಷಗಳಲ್ಲಿ ದೇಶದ ಶಿಕ್ಷಣ...

ಈ 79 ವರ್ಷಗಳಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸಾಧಿಸಿದ್ದೇನು?

ನಂದಕುಮಾರ್ ಕುಂಬ್ರಿ ಉಬ್ಬುನಂದಕುಮಾರ್ ಕುಂಬ್ರಿ ಉಬ್ಬು15 Aug 2026 10:03 AM IST
share
ಈ 79 ವರ್ಷಗಳಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸಾಧಿಸಿದ್ದೇನು?

ಆಳುತ್ತಾ ಬಂದ ಸರಕಾರಗಳು ಶಿಕ್ಷಣದ ಹಕ್ಕನ್ನು ಪ್ರತಿಯೊಬ್ಬ ಪ್ರಜೆಯ ಸಾಂವಿಧಾನಿಕವಾದ ಮೂಲಭೂತ ಹಕ್ಕು ಎನ್ನುವುದನ್ನು ಮರೆಮಾಚುತ್ತಾ, ದುಡ್ಡಿದ್ದವರು ಮಾತ್ರ ಶಿಕ್ಷಣ ಪಡೆಯಬಹುದು ಎಂಬ ನೀತಿ ಹಾಗೂ ಧೋರಣೆಗಳೊಂದಿಗೆ ಕಾರ್ಯ ನಿರ್ವಹಿಸತೊಡಗಿ ಕೆಲವು ದಶಕಗಳಾಗಿವೆ. ನಿರ್ದಿಷ್ಟವಾಗಿ ಜಾಗತೀಕರಣದ ಆರಂಭದಿಂದ ಎನ್ನಬಹುದು. ನಮ್ಮ ಆಗಿನ ಯೂನಿಯನ್ ಸರಕಾರ ನಮ್ಮ ಶಿಕ್ಷಣರಂಗವನ್ನು ಜಾಗತಿಕ ಕಾರ್ಪೊರೇಟುಗಳಿಗೆ ಲೂಟಿಯ ಉದ್ಯಮವಾಗಿ ಮಾರ್ಪಡಿಸಲು ಮುಕ್ತವಾಗಿ ಒಪ್ಪಿಸುವ ಒಪ್ಪಂದಗಳಿಗೆ ಸಹಿ ಮಾಡಿತ್ತು. ಅದರ ನಂತರ ಇಡೀ ಶಿಕ್ಷಣರಂಗದ ಖಾಸಗೀಕರಣ ಬಿರುಸು ಪಡೆಯಿತು.

ಬ್ರಿಟಿಷರು ಇಂಡಿಯಾದ ನೇರ ಆಡಳಿತದಿಂದ ಹೊರಹೋಗಿ ಇದೀಗ ಎಂಭತ್ತು ವರುಷಗಳು ಆಗುತ್ತಿವೆ. ಅದನ್ನು ಈಗ ಇದೇ ಆಗಸ್ಟ್ ಹದಿನೈದರಂದು ಎಂಭತ್ತನೇ ಸ್ವಾತಂತ್ರ್ಯ ದಿನವೆಂದು ಆಚರಿಸಲಾಗುತ್ತಿದೆ.

ಅಂದು ಬ್ರಿಟಿಷರು ತಮ್ಮ ವಸಾಹತುಶಾಹಿ ಲೂಟಿಯ ಅನುಕೂಲಕ್ಕೆ ಪರಿಚಯಿಸಿದ ಶಾಲಾ ವ್ಯವಸ್ಥೆ ಇತ್ತು. ಇಂಡಿಯಾದ ಶಿಕ್ಷಣದ ಪ್ರಮಾಣ ಆಗ ಒಂದು ಅಂದಾಜಿನ ಪ್ರಕಾರ ಶೇ. 12ರಿಂದ 14ರಷ್ಟಿತ್ತು. ಅಂದರೆ ಶೇ. 85ಕ್ಕಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಶಿಕ್ಷಣ ವ್ಯವಸ್ಥೆಯಿಂದಲೇ ಹೊರಗಿಡಲಾಗಿತ್ತು. ಮೇಲ್ವರ್ಗ ಹಾಗೂ ಮೇಲ್ಜಾತಿಯೆಂದುಕೊಂಡಿರುವ ಹಿನ್ನೆಲೆಯಿರುವವರಿಗೆ ಮಾತ್ರ ಶಿಕ್ಷಣ ವ್ಯವಸ್ಥೆ ಎಂದಾಗಿತ್ತು. ಅದರಲ್ಲೂ ಅಂದು ಒಟ್ಟು ಮಹಿಳೆಯರಲ್ಲಿ ಶೇ. 6ರಿಂದ 8ರಷ್ಟು ಮಾತ್ರ ಶಿಕ್ಷಣ ಹೊಂದಿದ್ದರು. ಬ್ರಿಟಿಷ್ ವಸಾಹತುಶಾಹಿಯ ಹಿತಾಸಕ್ತಿಗನುಗುಣವಾಗಿ ಶಿಕ್ಷಣ ವ್ಯವಸ್ಥೆಯಿತ್ತು. ಆಗ ಇಡೀ ದೇಶಕ್ಕೆ ಕೇವಲ 17 ವಿಶ್ವ ವಿದ್ಯಾನಿಲಯಗಳಿದ್ದವು. ಇಡೀ ದೇಶದಲ್ಲಿ ಶಿಕ್ಷಣ ಹೊಂದುತ್ತಿದ್ದ ಸುಮಾರು 2.38 ಲಕ್ಷ ವಿದ್ಯಾರ್ಥಿ ಸಮೂಹಕ್ಕೆ ಕೇವಲ 638 ಕಾಲೇಜುಗಳಿದ್ದವು. ದೇಶದಾದ್ಯಂತ ಬಡತನ ಅಜ್ಞಾನಗಳು ತಾಂಡವವಾಡುತ್ತಿದ್ದವು. ಅದರಲ್ಲೂ ಸಮಾಜದ ತಳಪಾಯದ ಸಮುದಾಯಗಳಾದ ದಲಿತರು, ಆದಿವಾಸಿಗಳು, ಅಲೆಮಾರಿ ಇನ್ನಿತರ ದಮನಿತರು, ಹಿಂದುಳಿದವರು, ಬಡವರು, ಶಿಕ್ಷಣದ ಬಳಿ ಸುಳಿಯುವಂತೆಯೇ ಇರಲಿಲ್ಲ. ಹೆಣ್ಣುಮಕ್ಕಳ ಕತೆಯಂತೂ ಶಿಕ್ಷಣದ ಕನಸು ಕೂಡ ಕಾಣಲಾಗದಂತಹ ಸ್ಥಿತಿ.

ಬ್ರಿಟಿಷ್ ವಸಾಹತುಶಾಹಿ ಮುಗಿದು ಎಷ್ಟೋ ಕಾಲ ಸರಿದು ಈಗ ಶಿಕ್ಷಣದ ಪ್ರಮಾಣ ಒಟ್ಟಾರೆಯಾಗಿ ಹೆಚ್ಚಿದ್ದರೂ ಏಕೋಪಾಧ್ಯಾಯ ಶಾಲೆಗಳು, ಕಟ್ಟಡವೇ ಇಲ್ಲದ ಶಾಲೆಗಳು, ಮೂಲಭೂತ ಸೌಕರ್ಯಗಳೇ ಇಲ್ಲದ ಶಾಲೆಗಳು ಗಂಭೀರ ಪ್ರಮಾಣದಲ್ಲಿವೆ. ಬಿಹಾರದಂತಹ ಕಡೆಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚಿನ ಶಾಲೆಗಳಿಗೆ ಕಟ್ಟಡಗಳೇ ಇಲ್ಲ. ಉತ್ತರಪ್ರದೇಶ, ಮಧ್ಯ ಪ್ರದೇಶ, ಜಾರ್ಖಂಡ್, ಒಡಿಶಾ, ಗುಜರಾತ್, ಛತ್ತೀಸ್‌ಗಡ ಮೊದಲಾದ ರಾಜ್ಯಗಳ ಕತೆಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ದಕ್ಷಿಣದ ರಾಜ್ಯಗಳು ಶಿಕ್ಷಣದ ವಿಚಾರದಲ್ಲಿ ಹೋಲಿಕೆಯಲ್ಲಿ ಸ್ವಲ್ಪ ಮುಂದಿವೆ. ಕೇರಳ, ಗೋವಾದಂತಹ ರಾಜ್ಯಗಳು ಶೇ. 95ಕ್ಕಿಂತಲೂ ಹೆಚ್ಚು ಶಿಕ್ಷಣ ಮಟ್ಟ ಹೊಂದಿವೆ. ಹಾಗಿದ್ದರೂ ಸರಕಾರಗಳು ಮಾಡುತ್ತಾ ಬಂದಿರುವ ಶಿಕ್ಷಣ ವ್ಯವಸ್ಥೆಯ ಖಾಸಗೀಕರಣ ಹಾಗೂ ಬಡತನದ ಕಾರಣಗಳಿಂದಾಗಿ ಪ್ರಾಥಮಿಕ ಇಲ್ಲವೇ ಪ್ರೌಢ ಶಿಕ್ಷಣದ ಹಂತಗಳಲ್ಲಿಯೇ ಶಿಕ್ಷಣ ಮೊಟಕುಗೊಳಿಸುವವರ ಸಂಖ್ಯೆ ಇಡೀ ದೇಶದಲ್ಲಿ ಅಪಾಯಕಾರಿ ಮಟ್ಟದಲ್ಲಿದೆ.

ಕರ್ನಾಟಕದಂತಹ ರಾಜ್ಯಗಳಲ್ಲಿ ಹೋಲಿಕೆಯಲ್ಲಿ ಈಗಿನ ಸರಕಾರಿ ಶಾಲೆಗಳು ಮೊದಲಿಗಿಂತ ಸುಸಜ್ಜಿತವಾಗಿವೆ. ತರಬೇತಿ ಪಡೆದ ಶಿಕ್ಷಕರೂ ಇದ್ದಾರೆ. ಆದರೂ ತಂದೆತಾಯಿಗಳು ಹಾಗೂ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸದೆ ಹೆಚ್ಚಿನ ತರಬೇತಿ ಪಡೆಯದ, ಪರಿಣತಿಯೂ ಇಲ್ಲದ ಶಿಕ್ಷಕ ವೃಂದವಿರುವ ಖಾಸಗಿ ಶಾಲೆಗಳಿಗೆ ಸೇರಿಸುವ ಉತ್ಸುಕತೆ ತೋರಿಸುತ್ತಿದ್ದಾರೆ. ಇದಕ್ಕೆ ಸರಕಾರಗಳು ಅನುಸರಿಸುತ್ತಾ ಬಂದಿರುವ ನೀತಿಗಳು ಪ್ರಧಾನ ಕಾರಣಗಳಾಗಿವೆ. ಶಿಕ್ಷಣದ ಕಾರ್ಪೊರೇಟೀಕರಣಕ್ಕೆ ಟೊಂಕ ಕಟ್ಟಿ ನಿಲ್ಲುತ್ತಾ ಬರುತ್ತಿರುವ ಸರಕಾರಗಳು ಶಾಲೆಗಳಿಗೆ ಮೂಲಭೂತ ಸೌಲಭ್ಯಗಳು, ಶಿಕ್ಷಕರು, ದೂರದಿಂದ ಬರುವ ವಿದ್ಯಾರ್ಥಿಗಳಿಗೆ ವಾಹನ ಸೌಕರ್ಯಗಳನ್ನು ಒದಗಿಸಲು ತಯಾರಾಗುತ್ತಿಲ್ಲ. ಪಠ್ಯಸಾಮಗ್ರಿ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಸರಿಯಾಗಿ ಪೂರೈಕೆ ಮಾಡುತ್ತಲೂ ಇಲ್ಲ. ಆಂಗ್ಲ ಮಾಧ್ಯಮ ಶಾಲೆ, ಪಬ್ಲಿಕ್ ಶಾಲೆ, ಕ್ಲಸ್ಟರ್ ಶಾಲೆ, ಶಾಲೆಗಳ ವಿಲೀನೀಕರಣ ಮೊದಲಾದ ಅಗ್ಗದ ಗಿಮಿಕ್‌ಗಳನ್ನು ನಡೆಸುತ್ತಾ ಸಾಗುತ್ತಿವೆ.

ಜನರು ಕೂಡ ಸರಕಾರಿ ಶಾಲೆಗಳನ್ನು ಉಳಿಸುತ್ತಾ ಅಭಿವೃದ್ದಿಪಡಿಸುವತ್ತ ತಮ್ಮ ಸಂಘಟಿತ ಪ್ರಯತ್ನ ಮಾಡಲು ನಿರಾಸಕ್ತರಾಗುತ್ತಿದ್ದಾರೆ. ಇದಕ್ಕೆ ಆಂಗ್ಲ ಭಾಷಾ ಮಾಧ್ಯಮದಲ್ಲಿ ತಮ್ಮ ಮಕ್ಕಳು ಓದಬೇಕು ಎಂಬ ಅವೈಜ್ಞಾನಿಕವಾದ ಹುಸಿ ಪ್ರತಿಷ್ಠೆ ಮತ್ತು ಸ್ವಯಂ ಅಪಾಯಕಾರಿ ವ್ಯಾಮೋಹ ಒಂದು ಕಾರಣವಾದರೆ ಸರಕಾರಗಳು ಬಾಲವಾಡಿಗಳಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಭಾರೀ ಕಾರ್ಪೊರೇಟುಗಳಿಗೆ ಒಪ್ಪಿಸಲು ಎಲ್ಲಾ ಕಸರತ್ತುಗಳನ್ನು ನಡೆಸುತ್ತಾ ಬರುತ್ತಿರುವುದು ಮತ್ತೊಂದು ಪ್ರಧಾನ ಕಾರಣವಾಗಿದೆ.

ಆಳುತ್ತಾ ಬಂದ ಸರಕಾರಗಳು ಶಿಕ್ಷಣದ ಹಕ್ಕನ್ನು ಪ್ರತಿಯೊಬ್ಬ ಪ್ರಜೆಯ ಸಾಂವಿಧಾನಿಕವಾದ ಮೂಲಭೂತ ಹಕ್ಕು ಎನ್ನುವುದನ್ನು ಮರೆಮಾಚುತ್ತಾ, ದುಡ್ಡಿದ್ದವರು ಮಾತ್ರ ಶಿಕ್ಷಣ ಪಡೆಯಬಹುದು ಎಂಬ ನೀತಿ ಹಾಗೂ ಧೋರಣೆಗಳೊಂದಿಗೆ ಕಾರ್ಯ ನಿರ್ವಹಿಸತೊಡಗಿ ಕೆಲವು ದಶಕಗಳಾಗಿವೆ. ನಿರ್ದಿಷ್ಟವಾಗಿ ಜಾಗತೀಕರಣದ ಆರಂಭದಿಂದ ಎನ್ನಬಹುದು. ನಮ್ಮ ಆಗಿನ ಯೂನಿಯನ್ ಸರಕಾರ ನಮ್ಮ ಶಿಕ್ಷಣರಂಗವನ್ನು ಜಾಗತಿಕ ಕಾರ್ಪೊರೇಟುಗಳಿಗೆ ಲೂಟಿಯ ಉದ್ಯಮವಾಗಿ ಮಾರ್ಪಡಿಸಲು ಮುಕ್ತವಾಗಿ ಒಪ್ಪಿಸುವ ಒಪ್ಪಂದಗಳಿಗೆ ಸಹಿ ಮಾಡಿತ್ತು. ಅದರ ನಂತರ ಇಡೀ ಶಿಕ್ಷಣರಂಗದ ಖಾಸಗೀಕರಣ ಬಿರುಸು ಪಡೆಯಿತು.

ಈಗ ಈ ಕ್ಷೇತ್ರದಲ್ಲಿ ಒಂದಷ್ಟು ಸಣ್ಣಪುಟ್ಟ ಸಂಸ್ಥೆಗಳು, ಮಠಮಾನ್ಯಗಳು, ರಾಜಕಾರಣಿಗಳು ಲಾಭಗಳನ್ನು ದೋಚುತ್ತಿದ್ದರೂ ಮುಂದಿನ ದಿನಗಳಲ್ಲಿ ಇವುಗಳನ್ನೂ ಕೂಡ ಜಾಗತಿಕ ಮಟ್ಟದ ಭಾರೀ ಕಾರ್ಪೋರೇಟುಗಳು ಕೈವಶ ಮಾಡಿಕೊಳ್ಳಲಿವೆ. ಈಗಾಗಲೇ ಬೃಹತ್ ಕಾರ್ಪೊರೇಟುಗಳ ಸುಮಾರು 50ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳಿವೆ. ಸಾವಿರಾರು ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿವೆ. ಅದರಲ್ಲಿ ಜಾತಿವಾದಿ, ಕೋಮುವಾದಿ ಬ್ರಾಹ್ಮಣಶಾಹಿಗಳಿಗೆ, ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಸಾವಿರಾರು ಶಿಕ್ಷಣ ಸಂಸ್ಥೆಗಳೂ ಸೇರಿವೆ. ಇವುಗಳು ವೃತ್ತಿ ಪರಿಣತಿ ಪಡೆದವರನ್ನು ಶಿಕ್ಷಕರನ್ನಾಗಿ ನೇಮಕಾತಿ ಮಾಡಿಕೊಳ್ಳುವುದು ಕಡಿಮೆ. ಕಡಿಮೆ ಸಂಬಳದಲ್ಲಿ ಕೆಲಸ ಮಾಡಲೊಪ್ಪುವ ನಿರುದ್ಯೋಗಿಗಳನ್ನು ತಮ್ಮ ಸಂಸ್ಥೆಗಳಲ್ಲಿ ದುಡಿಸುತ್ತಿದ್ದಾರೆ. ಅವರಿಗೆ ಉದ್ಯೋಗ ಖಾತರಿಯೂ ಇಲ್ಲ. ಸಂಬಳ ಸೌಲಭ್ಯಗಳೂ ಬಹಳ ಕಡಿಮೆ ಇರುತ್ತದೆ. ಅಂತಹ ಶಿಕ್ಷಕರಿಂದ ಗುಣ ಮಟ್ಟದ ಶಿಕ್ಷಣ ನಿರೀಕ್ಷಿಸುವುದು ಸಾಧ್ಯವೇ ಇಲ್ಲ. ಕೇವಲ ಇಂಗ್ಲಿಷ್ ಮಾತು, ಉರು ಹೊಡೆಸಿ, ಹೋಮ್ ವರ್ಕ್ ಹೆಸರಿನಲ್ಲಿ ಮನೆಯಲ್ಲಿ ಇರುವವರಿಗೆ ಹೆಚ್ಚುವರಿ ಕೆಲಸ ಕೊಡುವ ಕಾರ್ಯ ಮಾತ್ರ ನಿರಂತರವಾಗಿ ನಡೆಯುತ್ತಾ ಬರುತ್ತಿವೆ. ರ್ಯಾಂಕ್, ನೂರಕ್ಕೆ ನೂರು ಅಂಕ ಗಳಿಸುವುದೇ ಶಿಕ್ಷಣದ ಒಟ್ಟಾರೆ ಧ್ಯೇಯ, ಅದನ್ನು ಸಾಧಿಸುವವರೇ ಬುದ್ಧಿವಂತರು ಎಂಬಂತೆ ಮಕ್ಕಳ ಮನಸ್ಸಿನಲ್ಲಿ ಮೂಡಿಸಿ ವಿಪರೀತ ಭಯ, ಕೀಳರಿಮೆ, ಮೇಲರಿಮೆ ಹಾಗೂ ಒತ್ತಡಗಳಿಗೆ ಒಳಪಡಿಸಲಾಗುತ್ತಿದೆ. ಜೊತೆಗೆ ತಂದೆತಾಯಿಗಳು ಪೋಷಕರ ಮೇಲೂ ಇದಕ್ಕಾಗಿಯೇ ಒತ್ತಡಗಳನ್ನು ಹೇರಲಾಗುತ್ತದೆ.

ಬಾಲವಾಡಿ, ಎಲ್‌ಕೆಜಿ, ಯುಕೆಜಿಗಳಿಗೂ ಲಕ್ಷಾಂತರ ರೂ.ಗಳನ್ನು ಮೊದಲೇ ನೀಡಿ ಮಕ್ಕಳಿಗೆ ಸೀಟು ಪಡೆಯುವ ಪರಿಸ್ಥಿತಿಗೆ ಜನಸಾಮಾನ್ಯರನ್ನು ಸಿಲುಕಿಸಲಾಗಿದೆ. ಇದರಿಂದಾಗಿ ಕೆಳಮಧ್ಯಮವರ್ಗ ಮತ್ತು ಬಡವರ್ಗ ತತ್ತರಿಸುವಂತಾಗುತ್ತಿದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಇದರ ಪರಿಣಾಮ ಕುಟುಂಬಗಳನ್ನು ಅಪಾಯಕಾರಿ ಒತ್ತಡಗಳಲ್ಲಿ ಸಿಲುಕಿಸುವಂತಾಗಿದೆ.

ಆದರೂ ಬಹಳಷ್ಟು ಜನರು ಇದರ ಅಪಾಯಗಳೇನು ಎನ್ನುವುದನ್ನು ಅರಿಯಲು ಆಸಕ್ತಿ ತೋರದಂತಾಗಿದ್ದಾರೆ. ಖಾಸಗಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತವೆ ಎಂಬ ಹುಸಿ ಭ್ರಮೆಗಳಲ್ಲೇ ಮುಳುಗುತ್ತಾ ತಮ್ಮ ಮಕ್ಕಳನ್ನು ಸ್ವಯಂ ಅಪಾಯಕಾರಿ ಪರಿಸ್ಥಿತಿಗಳಿಗೆ ತಾವಾಗಿಯೇ ದೂಡುತ್ತಿದ್ದಾರೆ. ಇವೆಲ್ಲದರಿಂದಾಗಿ ಈಗ ಶಾಲೆಗಳಿಂದ ಹೊರಬರುತ್ತಿರುವ ಬಹಳಷ್ಟು ಮಕ್ಕಳಲ್ಲಿ ಗ್ರಹಣ ಶಕ್ತಿ, ಕಾರ್ಯಕಾರಣ ಚಿಂತನಾಶಕ್ತಿ ಬೆಳೆಯದಂತಹ ಪರಿಸ್ಥಿತಿಯಿದೆ. ಸಮಾಜದ ಎಲ್ಲಾ ಹಿನ್ನೆಲೆಯ ಮಕ್ಕಳು ಒಂದೇ ಕಡೆ ಸೇರಲಾಗದಂತಹ ಶ್ರೇಣೀಕೃತ ವಾತಾವರಣ ನಿರ್ಮಾಣ ಮಾಡುತ್ತಿರುವುದರಿಂದಾಗಿ ಮಕ್ಕಳಲ್ಲಿ ಸಮಾಜ ಮತ್ತು ಜನರ ಬಗ್ಗೆ ಆರೋಗ್ಯಕರವಾದ ತಿಳಿವಳಿಕೆಗಳು ಬೆಳೆಯಲಾರದಂತಾಗುತ್ತಿವೆ. ಈ ಸಂಬಂಧದ ಮುಖ್ಯ ಕಲಿಕೆಗಳು ಸಿಗಲಾರದಂತಾಗುತ್ತಿವೆ. ಜೊತೆಗೆ ಸರಿಯಾದ ಮನುಷ್ಯಸಂಬಂಧಗಳನ್ನು ಅರಿಯುವ, ಬೆಳೆಸಿಕೊಳ್ಳುವ ಅವಕಾಶಗಳಿಂದಲೂ ವಂಚಿತರನ್ನಾಗಿ ಮಾಡಲಾಗುತ್ತಿದೆ.

ಇಡೀ ಶಿಕ್ಷಣರಂಗದ ಕಾರ್ಪೊರೇಟೀಕರಣದಿಂದಾಗಿ ಸಮಾಜದ ಬಹುಸಂಖ್ಯಾತರಾಗಿರುವ ತಳಪಾಯದ ಸಮುದಾಯಗಳಾದ ದಲಿತರು, ಆದಿವಾಸಿಗಳು, ಹಿಂದುಳಿದವರು, ಬಡವರು, ಮಹಿಳೆಯರು, ವಿಶೇಶ ಚೇತನರು, ಇನ್ನಿತರ ಬಡವರು ಶಿಕ್ಷಣ ವ್ಯವಸ್ಥೆಯಿಂದಲೇ ಹೊರಬೀಳಬೇಕಾದ ಸಂದರ್ಭವನ್ನು ಉಂಟು ಮಾಡಲಾಗುತ್ತಿದೆ. ಈಗಾಗಲೇ ಶಿಕ್ಷಣವನ್ನು ಅರ್ದದಲ್ಲೇ ಮೊಟಕುಗೊಳಿಸುವ ಪ್ರಮಾಣ ತೀವ್ರಗತಿಯಲ್ಲಿ ಏರುತ್ತಲೇ ಬರುತ್ತಿದೆ. ಬಡತನ ತೀವ್ರವಿರುವ ಮುಸ್ಲಿಮರಂತಹ ಸಮುದಾಯಗಳಿಗೆ ಇದು ಮತ್ತೂ ಹೆಚ್ಚು ಬಾಧಿಸುತ್ತದೆ.

ಇವೆಲ್ಲವೂ ಹಿಂದಿನ ಯೂನಿಯನ್ ಸರಕಾರಗಳ ಹೊಸ ಶಿಕ್ಷಣ ನೀತಿ, ಅದರ ಮುಂದುವರಿಕೆಯಾದ ಈಗಿನ ಯೂನಿಯನ್ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿಗಳನ್ನು ಜಾರಿ ಮಾಡುತ್ತಾ ಬರುತ್ತಿರುವ ಪರಿಣಾಮವಾಗಿಯೇ ನಡೆಯುತ್ತಿವೆ. ಈ ವಿಚಾರವನ್ನು ಸರಿಯಾಗಿ ಗ್ರಹಿಸಬೇಕಿದೆ.

ಈಗ ಉತ್ತರ ಭಾರತದ ಜಾರ್ಖಂಡ್, ಬಿಹಾರ, ಗುಜರಾತ್ ಮೊದಲಾದ ರಾಜ್ಯಗಳಲ್ಲಿ ಶಾಲಾ ಮಕ್ಕಳು ಶಾಲೆಗಳಿಂದ ಬೀದಿಗಿಳಿದು ತಮ್ಮ ಶಿಕ್ಷಣದ ಹಕ್ಕಿಗಾಗಿ ಪ್ರತಿಭಟನೆಗಳನ್ನು ಮಾಡ ತೊಡಗಿದ್ದಾರೆ. ಕಳೆದ ತಿಂಗಳು ನಡೆದ ದಿಲ್ಲಿಯ ಜಂತರ್ ಮಂತರ್‌ನ ವಿದ್ಯಾರ್ಥಿ ಯುವಜನರ ಹೋರಾಟದಲ್ಲಿಯೂ ಈ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ. ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ, ಇದನ್ನು ಸಂವಿಧಾನದಲ್ಲಿಯೇ ಅಡಕವಾಗಿಸಿರುವ ವಿಚಾರ ಎನ್ನುವುದನ್ನು ಗಟ್ಟಿ ಧ್ವನಿಗಳಲ್ಲಿ ವಿದ್ಯಾರ್ಥಿಯುವಜನ ಸಮೂಹ ಪ್ರತಿಪಾದಿಸಿತ್ತು.

ಪ್ರಾಥಮಿಕ ಶಿಕ್ಷಣದಿಂದಲೇ ಸರಕಾರಿ ವ್ಯವಸ್ಥೆಯನ್ನು ಕಾರ್ಪೊರೇಟುಗಳಿಗೆ ಒಪ್ಪಿಸುವುದೆಂದರೆ ದೇಶದ ಅಡಿಪಾಯದ ಸಮುದಾಯಗಳನ್ನು, ಬಡವರನ್ನು, ಹಿಂದುಳಿದ, ಅಲ್ಪಸಂಖ್ಯಾತರನ್ನು ದೇಶದ ಎಲ್ಲಾ ಅವಕಾಶಗಳಿಂದ ಹೊರಗಿಡುವುದು ಎಂದೇ ಅರ್ಥ. ಶಿಕ್ಷಣ, ವಿದ್ಯಾರ್ಥಿವೇತನ, ವಿದ್ಯಾರ್ಥಿ/ನಿ ನಿಲಯಗಳು, ವಸತಿಶಾಲೆ, ಉನ್ನತ ಶಿಕ್ಷಣ, ಮೀಸಲಾತಿ, ಕೊನೆಗೆ ಸಾರ್ವಜನಿಕ ಹಾಗೂ ಖಾಸಗಿ ಸೇರಿದಂತೆ ಎಲ್ಲಾ ಉದ್ಯೋಗಾವಕಾಶಗಳಿಂದಲೂ ಹೊರಗಿಡುವುದೆಂದೇ ಅರ್ಥಮಾಡಿಕೊಳ್ಳಬೇಕು. ಒಟ್ಟಾರೆ ಪರಿಣಾಮ ಇಂತಹ ಸಾಮಾಜಿಕ ಕ್ರೌರ್ಯಗಳಿಗೆ ದಾರಿ ಮಾಡುತ್ತದೆ. ಕೇವಲ ಹಣವಿದ್ದವರು ಮಾತ್ರ ವಿದ್ಯಾಭ್ಯಾಸ ಮಾಡಬಹುದು, ಅವಕಾಶ ಗಳಿಸಬಹುದು ಎಂಬ ಪರಿಸ್ಥಿತಿಗೆ ಬಂದು ನಿಲ್ಲುತ್ತದೆ.

ಕಳೆದ ಹತ್ತು ವರುಷಗಳ ಅವಧಿಯಲ್ಲಿ 94,000 ಶಾಲೆಗಳನ್ನು ದೇಶಾದ್ಯಂತ ಮುಚ್ಚಲಾಗಿದೆ ಎಂದು ಯೂನಿಯನ್ ಸರಕಾರ ಅಧಿಕೃತವಾಗಿಯೇ ಪ್ರಕಟಿಸಿದೆ. ಅಂದರೆ ಪ್ರಾಥಮಿಕ ಶಿಕ್ಷಣ ಯಾವ ಮಟ್ಟದ ಅಪಾಯದಲ್ಲಿ ಸಾಗುತ್ತಿದೆ ಎನ್ನುವುದಕ್ಕೆ ಇದು ಕೈಗನ್ನಡಿಯಾಗಿ ನಿಲ್ಲುತ್ತದೆ. ಈ ಪರಿಯಲ್ಲಿ ಸಾರ್ವಜನಿಕ ಶಿಕ್ಷಣ ಪತನಗೊಳಿಸುತ್ತಾ ಹೋದರೆ ಜನರು ಹಾಗೂ ದೇಶದ ಪರಿಸ್ಥಿತಿ ಏನಾಗಬಹುದು?

ಒಂದು ಸರಕಾರಿ ಶಾಲೆ ಮುಚ್ಚುವುದು ಎಂದರೆ ಆ ಶಾಲೆಯ ಸುತ್ತಮುತ್ತಲಿನ ಹಳ್ಳಿಗಳ ಜನರ ಬದುಕನ್ನು ನೇರವಾಗಿ ನಕಾರಾತ್ಮಕವಾಗಿ ಪ್ರಭಾವಿಸುತ್ತದೆ. ಆ ಹಳ್ಳಿಗಳ ಕೃಷಿ ಇನ್ನಿತರ ಚಟುವಟಿಕೆಗಳ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಳ್ಳಿಗಳಿಂದ ಶಾಲೆಗೆ ಹೋಗುವ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಹಳ್ಳಿ ಬದುಕಿನ ಕೊಂಡಿ ತಪ್ಪಿಹೋಗಿ ನಗರ ಬದುಕಿನ ಮೋಹಕ ಉರುಳು ಸುತ್ತಿಕೊಳ್ಳತೊಡಗುತ್ತದೆ. ಇಂತಹ ನೇರ ಹಾಗೂ ಹಿಂಬಾಗಿಲಿನಿಂದ ಆಗುವ ಅಡ್ಡಪರಿಣಾಮಗಳು ಹಲವಿವೆ.

ಈಗಲೇ ಒಂದಷ್ಟು ಶಿಕ್ಷಣ ಪಡೆದವರು ಕೃಷಿಚಟುವಟಿಕೆಗಳಲ್ಲಿ ತೊಡಗುವುದಕ್ಕಿಂತಲೂ ಪೇಟೆ ಇಲ್ಲವೇ ನಗರ ಪ್ರದೇಶಗಳಿಗೆ ವಲಸೆ ಹೋಗಿ ಮೂರುಕಾಸು ಆರುಕಾಸಿಗೆ ಯಾವುದೋ ಒಂದು ಕೆಲಸ ಮಾಡುತ್ತಾ, ಒಣಪ್ರತಿಷ್ಠೆ ಪ್ರದರ್ಶಿಸುತ್ತಾ ಹೈರಾಣಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದು ಗ್ರಾಮೀಣ ಬದುಕು ಮತ್ತು ಹಳ್ಳಿಗಳನ್ನು ತೀವ್ರವಾಗಿ ಬಾಧಿಸತೊಡಗಿದೆ. ಶಾಲೆಗಳ ಮುಚ್ಚುವಿಕೆ ಇದನ್ನು ಮತ್ತಷ್ಟು ಹೆಚ್ಚಿಸಬಹುದು.

ಈ ಅನಾಹುತಗಳಿಗೆ ನಮ್ಮ ದೇಶದ ಶಿಕ್ಷಣ ರಂಗವೂ ಸೇರಿದಂತೆ ಎಲ್ಲಾ ರಂಗಗಳನ್ನೂ ಅಂತರ್‌ರಾಷ್ಟ್ರೀಯ ಭಾರೀ ಕಾರ್ಪೋರೇಟು ಹಿತಾಸಕ್ತಿಗಳಿಗೆ ಯಾವುದೇ ಅಡೆತಡೆಗಳಿಲ್ಲದೇ ಮುಕ್ತಗೊಳಿಸುತ್ತಾ ಬಂದಿರುವ ಆಳುವ ವರ್ಗ ಮತ್ತು ಅವರ ಸರಕಾರಗಳು ಪ್ರಧಾನ ಕಾರಣವಾಗಿವೆ.

ಈಗ ಪ್ರಶ್ನೆಪತ್ರಿಕೆ ಸೋರಿಕೆಯ ಅವಾಂತರಗಳು, ಎಸ್‌ಐಆರ್, ಕೃಷಿ ಕಾಯ್ದೆ, ಅರಣ್ಯ ಕಾಯ್ದೆ ತಿದ್ದುಪಡಿ, ಭೂ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಮೊದಲಾದ ಜನಸಾಮಾನ್ಯರ ಮೇಲಿನ ಎಲ್ಲಾ ಫ್ಯಾಶಿಸ್ಟ್ ದಾಳಿಗಳು ಹಾಗೂ ಅವಾಂತರಗಳಿಗೆ ಆಳುವ ಸರಕಾರಗಳ ಇಂತಹ ಭಾರೀ ಕಾರ್ಪೊರೇಟ್ ಹಾಗೂ ಆಸ್ತಿವಂತಪರ ನೀತಿಗಳ ಹೇರಿಕೆಗಳೇ ಪ್ರಧಾನ ಕಾರಣಗಳಾಗಿವೆ.

ಇವೆಲ್ಲಾ ಸೇರಿ ಎಂಭತ್ತು ವರುಷಗಳ ಹಿಂದಿನ ಬ್ರಿಟಿಷ್ ವಸಾಹತು ಕಾಲದ ವ್ಯವಸ್ಥೆಗಿಂತಲೂ ಕೆಟ್ಟ ದುರಂತಕಾರಿ ಪರಿಸ್ಥಿತಿಗೆ ಬಹುಸಂಖ್ಯಾತ ಜನಸಾಮಾನ್ಯರನ್ನು ತಳ್ಳುವಂತಾಗುತ್ತದೆ.

ಇವೆಲ್ಲವುಗಳ ಬಗ್ಗೆ ಗಂಭೀರವಾಗಿ ಗ್ರಹಿಸುತ್ತಾ ಸಂವಿಧಾನದಲ್ಲಿ ಅಡಕವಾಗಿರುವ ಶಿಕ್ಷಣ ಪಡೆಯುವ ಮೂಲಭೂತ ಹಕ್ಕು ವೈಜ್ಞಾನಿಕವಾಗಿ ಜಾರಿಯಾಗುವಂತೆ ಜನಸಾಮಾನ್ಯರು ಒಗ್ಗೂಡಿ ನೋಡಿಕೊಳ್ಳಬೇಕಿದೆ. ಈಗ ನಾಡಿನ ಯುವಸಮೂಹ ಹಾಗೂ ಜನಸಾಮಾನ್ಯರೇ ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಪರಿಹಾರದ ಮಾರ್ಗಗಳತ್ತ ಸಾಮೂಹಿಕವಾಗಿ ಸಾಗಬೇಕಿದೆ. ಉತ್ತರ ಭಾರತದ ಯುವಸಮೂಹ ಈಗ ಬೀದಿಗೆ ಇಳಿದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಾಗೂ ಪ್ರತಿರೋಧಗಳಲ್ಲಿ ತೊಡಗಿರುವುದನ್ನು ನಾವು ಈ ನಿಟ್ಟಿನಲ್ಲಿ ಗ್ರಹಿಸಬೇಕಿದೆ.

share
ನಂದಕುಮಾರ್ ಕುಂಬ್ರಿ ಉಬ್ಬು
ನಂದಕುಮಾರ್ ಕುಂಬ್ರಿ ಉಬ್ಬು
Next Story
X