Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಸ್ತೆ ಮತ್ತು ರೈಲು ಅಪಘಾತಗಳಲ್ಲಿ...

ರಸ್ತೆ ಮತ್ತು ರೈಲು ಅಪಘಾತಗಳಲ್ಲಿ ಸಂಭವಿಸುವ ಸಾವಿಗೆ ಯಾರು ಹೊಣೆ?

ಹರೀಶ್ ಎಚ್.ಕೆ.ಹರೀಶ್ ಎಚ್.ಕೆ.5 Oct 2025 8:55 AM IST
share
ರಸ್ತೆ ಮತ್ತು ರೈಲು ಅಪಘಾತಗಳಲ್ಲಿ ಸಂಭವಿಸುವ ಸಾವಿಗೆ ಯಾರು ಹೊಣೆ?

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿ ಪ್ರಕಾರ, ರೈಲು ಅಪಘಾತಗಳಲ್ಲಿ 2023ರ ಒಂದೇ ವರ್ಷದಲ್ಲಿ 21,803 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ ಅದೇ ವರ್ಷ ರಸ್ತೆ ಅಪಘಾತಗಳಲ್ಲಿ ಸುಮಾರು 1.75 ಲಕ್ಷ ಜನರು ಸಾವನ್ನಪ್ಪಿದ್ದಾರೆ.

2024 ಮತ್ತು 25ರಲ್ಲಿ ಕೇವಲ 31 ರೈಲು ಅಪಘಾತಗಳು ಸಂಭವಿಸಿವೆ ಎನ್ನಲಾಗುತ್ತಿದೆ. ಆದರೆ ರೈಲುಗಳಿಂದ ಬಿದ್ದು, ಹಳಿ ದಾಟುವಾಗ ಢಿಕ್ಕಿ ಹೊಡೆದು, ಕ್ರಾಸಿಂಗ್‌ಗಳನ್ನು ದಾಟುವಾಗ ಢಿಕ್ಕಿ ಹೊಡೆದು ಅಥವಾ ಇತರ ಕಾರಣಗಳಿಂದ ಸಾವನ್ನಪ್ಪಿದವರ ಸಂಖ್ಯೆ 15,000ಕ್ಕಿಂತ ಹೆಚ್ಚು.

ಇದಕ್ಕೇನು ಕಾರಣ ಎಂದು ರೈಲ್ವೆ ಸಚಿವರು ಹೇಳುತ್ತಾರೆಯೆ? ತಮ್ಮ ವೈಫಲ್ಯದ ಬಗ್ಗೆ ಅವರು ಒಪ್ಪಿಕೊಳ್ಳುತ್ತಾರೆಯೆ?

ಅಪಘಾತಗಳು ಕಡಿಮೆಯಾಗಿವೆ, ರೈಲ್ವೆಯಲ್ಲಿ ಸುರಕ್ಷತೆಗೆ ಗಮನ ಹರಿಸಲಾಗಿದೆ ಎಂದೆಲ್ಲ ಎರಡು ತಿಂಗಳ ಹಿಂದೆ ರೈಲ್ವೆ ಸಚಿವರು ಲೋಕಸಭೆಯಲ್ಲಿ ಹೇಳುತ್ತಿದ್ದರು. ಆದರೆ, ಈಗ ಎನ್‌ಸಿಆರ್‌ಬಿ ಡೇಟಾ ಬೇರೆಯದೇ ಸತ್ಯವನ್ನು ಹೇಳುತ್ತಿದೆ. ಸರಕಾರವೇಕೆ ಸತ್ಯವನ್ನು ಮರೆಮಾಚುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಸರಕಾರದ ಏಕೈಕ ಉದ್ದೇಶ ಸುಳ್ಳನ್ನು ಹರಡುವುದು ಮತ್ತು ಸತ್ಯದಿಂದ ತಪ್ಪಿಸಿಕೊಳ್ಳುವುದೇ?

2023ರಲ್ಲಿ ರೈಲು ಅಪಘಾತಗಳಲ್ಲಿ ಪ್ರತಿದಿನ 60 ಜನರು ಸಾವನ್ನಪ್ಪಿದರೂ ವರದಿಯಾಗಿದ್ದೇ ಇಲ್ಲ.

ಇದೇ ವೇಳೆ, ರೈಲುಗಳಿಂದ ಬಿದ್ದು, ಅಥವಾ ಢಿಕ್ಕಿ ಹೊಡೆದು ಸಾವನ್ನಪ್ಪುವವರ ಸಂಖ್ಯೆಯೂ ಗೊತ್ತಾಗುವುದಿಲ್ಲ. ಈ ದೇಶದಲ್ಲಿ, ಪ್ರತೀ ವರ್ಷ 15,878 ಜನರು ರೈಲುಗಳಿಂದ ಬಿದ್ದು ಮತ್ತು ಢಿಕ್ಕಿ ಹೊಡೆದು ಸಾಯುತ್ತಾರೆ. ಅಂದರೆ ಪ್ರತಿದಿನ 43 ಜನರು ರೈಲುಗಳಿಂದ ಬಿದ್ದು ಅಥವಾ ಢಿಕ್ಕಿ ಹೊಡೆದು ಸಾಯುತ್ತಾರೆ.

2023ರಲ್ಲಿ ರೈಲ್ವೆ ಕ್ರಾಸಿಂಗ್‌ಗಳಲ್ಲಿ 2,242 ಜನರು ಸಾವನ್ನಪ್ಪಿದರು. ಆದರೆ ಮಾನವರಹಿತ ಕ್ರಾಸಿಂಗ್‌ಗಳಲ್ಲಿ ಒಂದೇ ಒಂದು ಸಾವು ಸಂಭವಿಸಿಲ್ಲ.

ಪ್ರತಿದಿನ 6 ಜನರು ರೈಲುಗಳನ್ನು ದಾಟುವಾಗ ಸಾಯುತ್ತಾರೆ. ಉತ್ತರ ಪ್ರದೇಶವೊಂದರಲ್ಲೇ 1,025 ಜನರು ರೈಲ್ವೆ ಕ್ರಾಸಿಂಗ್‌ಗಳಲ್ಲಿ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶ, ಪ.ಬಂಗಾಳ, ಮಧ್ಯಪ್ರದೇಶ, ಕೇರಳ ಮತ್ತು ಜಾರ್ಖಂಡ್‌ಗಳಲ್ಲಿ ಲೆವೆಲ್ ಕ್ರಾಸಿಂಗ್‌ಗಳಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ.

ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಲ್ಲಿ ಅತಿ ಹೆಚ್ಚು ರೈಲು ಅಪಘಾತಗಳು ಸಂಭವಿಸಿವೆ. ಹೆಚ್ಚಿನ ಅಪಘಾತಗಳು ಸಂಜೆ 6 ರಿಂದ ರಾತ್ರಿ 9 ರ ಹೊತ್ತಲ್ಲಿ ಸಂಭವಿಸುತ್ತವೆ. ಕೇವಲ 56 ಪ್ರಕರಣಗಳಲ್ಲಿ ಚಾಲಕರ ತಪ್ಪಿದೆ.

43 ಪ್ರಕರಣಗಳಲ್ಲಿ, ಹಳಿ ದೋಷಗಳು ಅಥವಾ ಸೇತುವೆ ಅಥವಾ ಸುರಂಗದ ಕುಸಿತದಿಂದಾಗಿ ಜನರು ಸಾವನ್ನಪ್ಪಿದ್ದಾರೆ.

‘ಕ್ಯಾರವಾನ್’ ವರದಿಯ ಪ್ರಕಾರ, 2012ರಿಂದ 2017ರ ಅವಧಿಯಲ್ಲಿ 768 ಹಳಿ ನಿರ್ವಹಣಾಕಾರರು ಕರ್ತವ್ಯದಲ್ಲಿರುವಾಗ ಸಾವನ್ನಪ್ಪಿದ್ದಾರೆ.

2016 ರಿಂದ 2021ರ ಅವಧಿಯಲ್ಲಿ 451 ಹಳಿ ನಿರ್ವಹಣಾಕಾರರು ಸಾವನ್ನಪ್ಪಿದ್ದಾರೆ. ಕರ್ತವ್ಯದಲ್ಲಿರುವಾಗ ರೈಲುಗಳು ಢಿಕ್ಕಿ ಹೊಡೆದು ವಾರ್ಷಿಕವಾಗಿ 90ಕ್ಕೂ ಹೆಚ್ಚು ಕಾರ್ಮಿಕರು ಸಾಯುತ್ತಾರೆ. ಕಳೆದ 20 ವರ್ಷಗಳಲ್ಲಿ ಹಳಿ ನಿರ್ವಹಣಾಕಾರರ ಸಂಖ್ಯೆಯನ್ನು 14 ಲಕ್ಷದಿಂದ 12 ಲಕ್ಷಕ್ಕೆ ಇಳಿಸಲಾಗಿದೆ.

ರೈಲ್ವೆ ಒಕ್ಕೂಟದ ಹೇಳಿಕೆ ಪ್ರಕಾರ, ಗುತ್ತಿಗೆ ಕಾರ್ಮಿಕರು ಮತ್ತು ಹಳಿಗಳ ಹೊರಗೆ ಸಂಭವಿಸುವ ಸಾವುಗಳನ್ನು ದಾಖಲಿಸದ ಕಾರಣ ನಿಜವಾದ ಸಂಖ್ಯೆ ಇನ್ನೂ ಹೆಚ್ಚಿರಬಹುದು.

ವರದಿ ಹೇಳುವಂತೆ, ಅವರು ವಿಶ್ರಾಂತಿ ಅಥವಾ ರಜೆ ಇಲ್ಲದೆ 12ರಿಂದ 20 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಅವರು ತೀವ್ರ ಶಾಖದಲ್ಲಿ ಇಂಜಿನ್‌ಗಳನ್ನು ನಿರ್ವಹಿಸಬೇಕಾಗುತ್ತದೆ.

ಪ್ರಧಾನಿ ಮತ್ತು ರೈಲ್ವೆ ಸಚಿವರು ಇಂಜಿನ್ ಕ್ಯಾಬಿನ್‌ನಲ್ಲಿ ಕುಳಿತಿರುವ ಹಲವಾರು ವೀಡಿಯೊಗಳಿವೆ. ಹಾಗಿದ್ದೂ, ಲೋಕೋ ಪೈಲಟ್‌ಗಳ ಸ್ಥಿತಿ ಸುಧಾರಿಸಿಲ್ಲ. ಲೋಕೋ ಪೈಲಟ್‌ಗಳಲ್ಲಿ ನಾಲ್ಕನೇ ಒಂದು ಭಾಗ ಖಾಲಿಯಾಗಿದ್ದರೂ, ಸರಕಾರ ಆ ಹುದ್ದೆಗಳನ್ನು ಭರ್ತಿ ಮಾಡಿಲ್ಲ.

ಈ ವರ್ಷದ ಫೆಬ್ರವರಿಯಲ್ಲಿ, ಲೋಕೋ ಪೈಲಟ್‌ಗಳ ಒಕ್ಕೂಟವಾದ ಆಲ್ ಇಂಡಿಯಾ ಲೋಕೋ ರನ್ನಿಂಗ್ ಸ್ಟಾಫ್ ಅಸೋಸಿಯೇಷನ್ 36 ಗಂಟೆಗಳ ಉಪವಾಸ ಮುಷ್ಕರ ನಡೆಸಿತು. ಅವರು ತಮ್ಮ ಪಾಳಿಗಳನ್ನು 11 ಗಂಟೆಗಳಿಂದ 8 ಗಂಟೆಗಳಿಗೆ ಇಳಿಸಬೇಕೆಂದು ಒತ್ತಾಯಿಸುತ್ತಾರೆ. ದಣಿದಿದ್ದರೆ ಅಪಘಾತಗಳ ಅಪಾಯವೂ ಹೆಚ್ಚಿರುತ್ತದೆ.

ಇನ್ನು, ರಸ್ತೆಗಳನ್ನು ವೇಗವಾಗಿ ನಿರ್ಮಿಸಲಾಗುತ್ತಿದೆ. ಪ್ರತಿದಿನ ಎಷ್ಟು ಕಿಲೋಮೀಟರ್ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಹೇಳುವವರು, ಅದೇ ರಸ್ತೆಗಳಲ್ಲಿ ಪ್ರತಿದಿನವೂ ಸುಮಾರು ಎರಡೂವರೆ ಲಕ್ಷ ರಸ್ತೆ ಅಪಘಾತಗಳಲ್ಲಿ ಸಾಯುತ್ತಾರೆ ಎಂಬುದನ್ನು ಹೇಳುವುದಿಲ್ಲ.

ಪ್ರಧಾನಿ ಮೋದಿಯವರ ಫೋಟೊ ಇರುವ ಪೋಸ್ಟರ್ ಒಂದು 2023-24 ರಲ್ಲಿ 12,349 ಕಿ.ಮೀ.ಹೆದ್ದಾರಿಗಳನ್ನು ನಿರ್ಮಿಸಲಾಯಿತು ಎಂದು ಹೇಳುತ್ತದೆ. ‘ಸಮೃದ್ಧಿಯ ಹಾದಿಗಳು’ ಎಂದು ಬರೆಯಲಾಗಿದೆ.

ಆದರೆ ಪ್ರತೀ ವರ್ಷ 1,73,000 ಜನರು ಇದೇ ರಸ್ತೆಗಳಲ್ಲಿ ಸಾಯುತ್ತಿದ್ದಾರೆ. ಅದರ ಬಗ್ಗೆ ಮಾತ್ರ ಯಾವುದೇ ಪ್ರಚಾರದ ಪೋಸ್ಟರ್ ಹೇಳುವುದಿಲ್ಲ.

ಕಳೆದ 10 ವರ್ಷಗಳಲ್ಲಿ ಈ ಸಂಖ್ಯೆ ಏಕೆ ಕಡಿಮೆಯಾಗಿಲ್ಲ ಎಂಬುದು ಕಾಡುವ ಪ್ರಶ್ನೆ. ಆಗಾಗ ಪ್ರಧಾನಿ ಸಾವಿರಾರು ಕೋಟಿ ಮೌಲ್ಯದ ಹೆದ್ದಾರಿಗಳನ್ನು ಉದ್ಘಾಟಿಸುತ್ತಾರೆ. ಬಿಜೆಪಿ ಪೋಸ್ಟರ್‌ಗಳು ಮತ್ತು ಪ್ರಚಾರ ವೀಡಿಯೊಗಳನ್ನು ಪೋಸ್ಟ್ ಮಾಡುತ್ತದೆ. ಮೋದಿ ಸರಕಾರದ ಇಮೇಜ್ ಅನ್ನು ನಿರ್ಮಿಸುವಲ್ಲಿ ಹೆದ್ದಾರಿಗಳು ಪ್ರಮುಖ ಪಾತ್ರ ವಹಿಸುತ್ತವೆ.

ರಸ್ತೆ ನಿರ್ಮಾಣ ಪ್ರಾಧಿಕಾರ ಟೋಲ್‌ಗಳ ಹೆಸರಿನಲ್ಲಿ ಜನರಿಂದ ಹಣ ಸುಲಿಗೆ ಮಾಡುತ್ತಿದೆ. ಆದರೆ, ಸರಕಾರ ಮಾತ್ರ ‘ಸಮೃದ್ಧಿಯ ಹಾದಿ’ ಎಂದು ಬೊಗಳೆ ಬಿಡುತ್ತದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಏನು ಮಾಡಿವೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಅದನ್ನು ಮರೆಮಾಚುತ್ತ, ದಿನಕ್ಕೆ 37 ಕಿ. ಮೀ. ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಕ್ರೆಡಿಟ್ ತೆಗೆದುಕೊಳ್ಳಲಾಗುತ್ತದೆ. ಆಡಂಬರದ ಸಂಖ್ಯೆಗಳಲ್ಲಿ ಮೈಮರೆತವರು ಜನರ ಜೀವದ ಬಗ್ಗೆ ಕಾಳಜಿ ತೋರುತ್ತಿಲ್ಲ.

ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದವರಲ್ಲಿ,ದ್ವಿಚಕ್ರ ವಾಹನ ಚಾಲಕರು ಮತ್ತು ಸವಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

2023ರಲ್ಲಿ 79,000ಕ್ಕೂ ಹೆಚ್ಚು ದ್ವಿಚಕ್ರ ವಾಹನ ಸವಾರರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಅವರು ಕಡಿಮೆ ಆದಾಯ ಹೊಂದಿರುವ ಸಾಮಾನ್ಯ ಜನರು.

ಒಂದು ವರ್ಷದಲ್ಲಿ 27,500ಕ್ಕೂ ಹೆಚ್ಚು ಪಾದಚಾರಿಗಳು ಸಾವನ್ನಪ್ಪಿದ್ದಾರೆ. 2023ರ ಒಂದೇ ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ 60,000ಕ್ಕೂ ಹೆಚ್ಚು ಜನರು, ರಾಜ್ಯ ಹೆದ್ದಾರಿಗಳಲ್ಲಿ 40,000ಕ್ಕೂ ಹೆಚ್ಚು ಜನರು ಮತ್ತು ಇತರ ರಸ್ತೆಗಳಲ್ಲಿ 72,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದರಿಂದಾಗಿ, ಗ್ರಾಮೀಣ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸಾಯುತ್ತಿರುವ ಸಾಧ್ಯತೆಯಿದೆ.

2023ರಲ್ಲಿ ಸರಿಸುಮಾರು 1,13,948 ಜನರು ಸಾವನ್ನಪ್ಪಿದರು.ಅಹಮದಾಬಾದ್‌ನ ನಗರ ಪ್ರದೇಶಗಳಲ್ಲಿ 2023ರಲ್ಲಿ 400 ಜನರು ಸಾವನ್ನಪ್ಪಿದರು.

2023ರಲ್ಲಿ ಗ್ರಾಮೀಣ ವಸತಿ ಪ್ರದೇಶಗಳಲ್ಲಿ ರಸ್ತೆ ಅಪಘಾತಗಳಲ್ಲಿ 32,609 ಜನರು ಸಾವನ್ನಪ್ಪಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳು ಕಿರಿದಾಗಿವೆ. ಎರಡೂ ಕಡೆಯಿಂದ ವಾಹನಗಳು ಚಲಿಸುತ್ತವೆ. ವೇಗ ನಿಯಂತ್ರಣದ ನಿರ್ವಹಣೆ ಆಗುತ್ತಿಲ್ಲ.ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳ ಸುಧಾರಣೆಯೂ ನಡೆಯುತ್ತಿಲ್ಲ.

ಪ್ರಮುಖ ನಗರಗಳಲ್ಲೇ ಅಮಾಯಕರು ರಸ್ತೆ ಗುಂಡಿಗಳಿಗೆ ಬಿದ್ದು ಅಮಾನುಷವಾಗಿ ಛಿದ್ರವಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಸ್ತೆ ಗುಂಡಿಗಳಿಂದಾಗಿ ಪ್ರಾಣ ಕಳೆದುಕೊಳ್ಳುವವರ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಯೇ ಇಲ್ಲ.

ಘಟನೆ ನಡೆದಾಗ ಆ ಊರಿನಲ್ಲಿ ಒಂದೆರಡು ಪ್ರತಿಭಟನೆ ನಡೆದು ಅದು ಅಲ್ಲಿಗೇ ಮುಗಿದು ಹೋಗುತ್ತದೆ.

ಒಬ್ಬ ದುಡಿಯುವ ವ್ಯಕ್ತಿ ಹೀಗೆ ರಸ್ತೆ ಗುಂಡಿಗಳಿಂದಾಗಿ ಪ್ರಾಣ ಬಿಡುವಾಗ ಆತನ ಅಥವಾ ಆಕೆಯ ಇಡೀ ಕುಟುಂಬವೇ ಬೀದಿ ಪಾಲಾಗುತ್ತದೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವವರು ಯಾರೂ ಇಲ್ಲ

ನಿತಿನ್ ಗಡ್ಕರಿ 2014ರಿಂದ ಸಾರಿಗೆ ಸಚಿವರಾಗಿದ್ದಾರೆ. ಅವರ ಯಶಸ್ಸನ್ನು ಹೊಗಳಲಾಗುತ್ತದೆ. ಆದರೆ ಅವರೇ ರಸ್ತೆಗಳ ಕಳಪೆ ಸ್ಥಿತಿಯ ಬಗ್ಗೆ ಮಾತನಾಡುತ್ತಾರೆ. ರಸ್ತೆಗಳಿಗಾಗಿ ಸಿದ್ಧಪಡಿಸಲಾದ ಯೋಜನಾ ವರದಿಗಳು ತುಂಬಾ ಕಳಪೆಯಾಗಿದ್ದು, ಪ್ರತಿ ಸ್ಥಳದಲ್ಲಿ 150 ಜನರು ಸಾಯುತ್ತಾರೆ ಎಂದು ಅವರು ಹೇಳಿದ್ದಾರೆ. ಸುಧಾರಣೆಯ ಅಗತ್ಯವಿರುವ 40,000 ಸ್ಥಳಗಳನ್ನು ಅವರು ಗುರುತಿಸಿದ್ದಾರೆ.ಅಂದರೆ, ಅವರಿಗೆ ಎಲ್ಲದರ ಬಗ್ಗೆ ತಿಳಿದಿದ್ದರೂ, ಅಪಘಾತಗಳನ್ನು ತಡೆಯಲಾಗಿಲ್ಲ.

ಒಂದೆಡೆ, ರಸ್ತೆಗಳನ್ನು ವೇಗವಾಗಿ ನಿರ್ಮಿಸಲಾಗುತ್ತಿದೆ ಎಂದು ಸರಕಾರ ಹೇಳಿಕೊಳ್ಳುತ್ತದೆ. ಮತ್ತೊಂದೆಡೆ, ಅದೇ ಸರಕಾರದ ಮಂತ್ರಿ ರಸ್ತೆ ಯೋಜನಾ ವರದಿಗಳು ದೋಷಪೂರಿತವಾಗಿವೆ ಎಂದು ಹೇಳುತ್ತಾರೆ.

ಇಷ್ಟಿದ್ದೂ ಇದರ ಬಗ್ಗೆ ಹೊಣೆ ಹೊರುವ ಯಾರೂ ಇಲ್ಲ. ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದವರಲ್ಲಿ ಶೇ. 66ರಷ್ಟು ಜನರು 18 ರಿಂದ 36 ವರ್ಷದೊಳಗಿನ ಯುವಕರು ಎಂದು ನಿತಿನ್ ಗಡ್ಕರಿ ಹೇಳಿದ್ದರ ಬಗ್ಗೆಯೂ ವರದಿಯಿದೆ.

ಸಾರ್ವಜನಿಕರ ನಡವಳಿಕೆ ಬದಲಾಗುವವರೆಗೆ ಅಪಘಾತಗಳನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ. ಆದರೆ ರಸ್ತೆಗಳೇ ಮಾರಕವಾಗುತ್ತಿರುವ ಬಗ್ಗೆ ಯಾರೂ ಮಾತಾಡುತ್ತಿಲ್ಲ.

ಈ ವರ್ಷದ ಮಾರ್ಚ್‌ನಲ್ಲಿ, ಗಡ್ಕರಿ ಅವರು ‘‘ಗಲಭೆಗಳು ಮತ್ತು ಸಾಂಕ್ರಾಮಿಕ ರೋಗಗಳಿಗಿಂತ ಹೆಚ್ಚಿನ ಜನರು ರಸ್ತೆ ಅಪಘಾತಗಳಲ್ಲಿ ಸಾಯುತ್ತಾರೆ ಎಂಬುದು ಆಘಾತಕಾರಿ ಸತ್ಯ’’ ಎಂದು ಹೇಳಿದರು.

ಎಲ್ಲವನ್ನೂ ಜನರ ತಲೆಯ ಮೇಲೆ ಹೊರಿಸುವುದು ತುಂಬಾ ಸುಲಭ. ಆದರೆ, ಸರಕಾರಗಳ ಮನಸ್ಥಿತಿಯಲ್ಲಿ ಏನಾದರೂ ಬದಲಾಗಿದೆಯೆ? ಅವಕ್ಕೆ ಜನರ ಬಗ್ಗೆ, ಜನರ ಜೀವಗಳ ಬಗ್ಗೆ ಕಾಳಜಿ ಇದೆಯೆ?

ಈ ಪ್ರಶ್ನೆ ಉತ್ತರವಿಲ್ಲದೆ ಉಳಿಯುತ್ತದೆ.

share
ಹರೀಶ್ ಎಚ್.ಕೆ.
ಹರೀಶ್ ಎಚ್.ಕೆ.
Next Story
X