Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಶಬ್ದ ಕಾಡ್ಗಿಚ್ಚಿನಿಂದ ಬೆಂದ...

ಶಬ್ದ ಕಾಡ್ಗಿಚ್ಚಿನಿಂದ ಬೆಂದ ವನ್ಯಜೀವಿಗಳು

ಕೆ.ಸಿ. ಶಂಕರ್, ಚಿಕ್ಕಮಗಳೂರುಕೆ.ಸಿ. ಶಂಕರ್, ಚಿಕ್ಕಮಗಳೂರು22 Oct 2026 10:59 AM IST
share
ಶಬ್ದ ಕಾಡ್ಗಿಚ್ಚಿನಿಂದ ಬೆಂದ ವನ್ಯಜೀವಿಗಳು

ಗ್ರಾಮೀಣ, ಅರಣ್ಯ ಮತ್ತು ಘಟ್ಟ ಪ್ರದೇಶಾಧಾರಿತ ಪ್ರವಾಸೋದ್ಯಮವು ಪರಿಸರಕ್ಕೆ ವಿನಾಶಕಾರಿಯಾಗಿ, ವನ್ಯಜೀವಿಗಳ ಬದುಕನ್ನೇ ಕಂಗಾಲು ಮಾಡಿದೆ.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೋಂಸ್ಟೇ ಸಂಸ್ಕೃತಿ ಇತ್ತೀಚಿನ ವಿದ್ಯಮಾನ. ನಗರ ಪ್ರದೇಶದಲ್ಲಿ ಕಾರ್ಪೊರೇಟ್/ಐಟಿ-ಬಿಟಿ ಹೊಸ ಶೈಲಿಯ ಉದ್ಯೋಗ ಸೃಷ್ಟಿ ಆಯಿತು. ಉತ್ತಮ ಸಂಬಳವನ್ನು ಕೊಟ್ಟು ಹೆಚ್ಚು ದುಡಿಸಿಕೊಳ್ಳುವ ಕ್ಷೇತ್ರಗಳು ಹೊರಹೊಮ್ಮಿದವು ಆನಂತರ ವೀಕೆಂಡ್ ರಜೆಯ ಪರಂಪರೆ ಆರಂಭವಾಯಿತು. ಈ ಅಗತ್ಯವನ್ನು ಪೂರೈಸುವಲ್ಲಿ ಪಟ್ಟಣದಿಂದ ದೂರವಿರುವ ಪರಿಸರ ಸೌಂದರ್ಯದಲ್ಲಿ ನೆರೆಗೊಂಡಿರುವ ಮಲೆನಾಡಿನಂತಹ ಗ್ರಾಮೀಣ ಪ್ರದೇಶದಲ್ಲಿ ಹೋಂ ಸ್ಟೇ ಉದ್ಯಮ ಉದಯವಾಯಿತು. ಸಣ್ಣ ಪ್ರಮಾಣದಲ್ಲಿ ಬಂದಂತಹ ಅತಿಥಿಗಳಿಗೆ ಮನೆಯಲ್ಲೇ ಪ್ರೀತಿಯಿಂದ ಆತಿಥ್ಯವನ್ನು ಕೋರುವ ಹೊಸ ಸಂಸ್ಕೃತಿ ಉದಯವಾಯಿತು. ಕ್ರಮೇಣ ಹೋಂ ಸ್ಟೇ ಸಂಸ್ಕೃತಿಯು ಹೆಸರಿಗೆ ಮಾತ್ರ ಸೀಮಿತವಾಗಿ, ವಾಣಿಜ್ಯೀಕರಣಗೊಂಡು ಎಲ್ಲಾ ಆಧುನಿಕ ಐಷಾರಾಮವನ್ನು ಪೂರೈಸುವ ಫೈವ್ ಸ್ಟಾರ್ ಆತಿಥ್ಯ ಉದ್ಯಮವಾಗಿ ರೂಪಾಂತರಗೊಂಡಿದ್ದು ವಿಪರ್ಯಾಸ ಮತ್ತು ವಿಕೃತ. ಮಲೆನಾಡಿನ ಸುಂದರ ವನ, ಗುಡ್ಡ ಬೆಟ್ಟಗಳ ತಾಣ ತಪ್ಪಲುಗಳಲ್ಲಿ ಹೊರಗಿನ ಬಂಡವಾಳಶಾಹಿ ಉದ್ಯಮಿಗಳ ನಿಯಂತ್ರಿತ ರೆಸಾರ್ಟುಗಳು ತಲೆಯೆತ್ತಿದವು. ಇದರಿಂದ ಅಲ್ಲಿನ ಪರಿಸರ ಮತ್ತು ಸ್ಥಳೀಯ ಸಂಸ್ಕೃತಿಯ ಮೇಲೆ ಪರಿಣಾಮ ಬೀರಿ, ಮಲೆನಾಡಿನ ಚಿತ್ರಣವೇ ಬದಲಾಯಿತು.

ಈ ಹೋಂ ಸ್ಟೇ/ರೆಸಾರ್ಟ್‌ಗಳಲ್ಲಿ ರಾತ್ರಿವೇಳೆಯಲ್ಲಿ ಕ್ಯಾಂಪ್ ಫೈರ್‌ನೊಂದಿಗೆ ಅಬ್ಬರದ ಸಂಗೀತದ ಡಿ.ಜೆ.ಗಳನ್ನು ಹಾಕಿ ಅತಿಥಿಗಳಿಗೆ ಡ್ಯಾನ್ಸ್ ಮಾಡಿ ರಂಜಿಸುವ ಸೌಲಭ್ಯಗಳನ್ನು ಮಾಡಿಕೊಡಲಾಗುತ್ತದೆ ಅಲ್ಲಿ ಮದುವೆ/ಬರ್ತಡೇಗಳ ಆಚರಣೆಯಲ್ಲಿ ವಿಪರೀತ ಶಬ್ದ ಇರುವ ಡಿ.ಜೆ. ಮೊಳಗಿಸಿ, ಪಟಾಕಿ ಸ್ಫೋಟಿಸುವುದು ಸರ್ವೇಸಾಮಾನ್ಯವಾಗಿದೆ.

ಪ್ರಾಣಿ ಮತ್ತು ಪಕ್ಷಿಗಳು ಅತ್ಯಂತ ಕಡಿಮೆ ಡೆಸಿಬಲ್ ಶಬ್ದಗಳನ್ನು ಕೇಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಅದರಲ್ಲೂ ವಿಶೇಷವಾಗಿ ರಾತ್ರಿ ಚಲಿಸುವ ಪ್ರಾಣಿಗಳು ಮನುಷ್ಯ ಕೇಳಿಕೊಳ್ಳುವ ಸಾಮರ್ಥ್ಯ ಆಧಾರ ರೇಖೆ (ಬೇಸ್ ಲೈನ್) ೦ ಎಂದು ಪರಿಗಣಿಸಿದರೆ, ಕಾಡು ಪ್ರಾಣಿಗಳು ಕೇಳಿಸಿಕೊಳ್ಳುವ ಬೇಸ್ ಲೈನ್ ಎಲ್ಲಾ ಮೈನಸ್(-) ಮಟ್ಟದಲ್ಲಿ, ಅಂದರೆ -೧೦, -೨೦ ಹಂತದಲ್ಲಿರುತ್ತದೆ. ಅಂದರೆ ಅತ್ಯಂತ ಸೂಕ್ಷ್ಮ ಕಡಿಮೆ ಆವರ್ತನ ಶಬ್ದಗಳನ್ನು ಆಲಿಸುವ ಸಾಮರ್ಥ್ಯ ಅವುಗಳಿಗೆ ಇರುತ್ತದೆ. ಶಬ್ದದ ತೀವ್ರತೆ ಅಥವಾ ಮಾಲಿನ್ಯದಿಂದ ಅವುಗಳಲ್ಲಿ ಕ್ಷೋಭೆ, ಮಾನಸಿಕ ಒತ್ತಡ, ವಂಶಾಭಿವೃದ್ಧಿ ಶಕ್ತಿಗಳು ಕ್ಷೀಣಿಸುತ್ತವೆ. ಶಬ್ದ ಮಾಲಿನ್ಯದಿಂದ ವಿಚಲಿತವಾದ ಆ ಪ್ರಾಣಿಗಳು ತಮ್ಮ ಶತ್ರುಗಳಿಂದ ರಕ್ಷಣೆ ಮಾಡಿಕೊಳ್ಳಲು ಆಗುವುದಿಲ್ಲ. ಇದು ಅವುಗಳ ಆಹಾರ ಅನ್ವೇಷಣೆಗೂ ಭಂಗ ತರುತ್ತದೆ. ಪ್ರಾಣಿಗಳು ತಮ್ಮ ಪ್ರಭೇದದ ಇತರ ಜೀವಿಗಳೊಂದಿಗೆ ಸೂಕ್ಷ್ಮ ಶಬ್ದ ಸಂವಹನದ ಮೂಲಕವೇ ಸಂಪರ್ಕ ಮಾಡುವುದು. ಇದು ಗಂಡು ಹೆಣ್ಣು ಪ್ರಾಣಿಗಳು ಆಕರ್ಷಣೆಗೊಂಡು ಸಂಯೋಗಕ್ಕೆ ಮೂಲ ಸಾಧನ. ಆದರೆ ಶಬ್ದ ಮಾಲಿನ್ಯ ಇದಕ್ಕೆ ಕಂಟಕವಾಗುತ್ತದೆ ಮತ್ತು ಅವುಗಳ ಸಂತಾನೋತ್ಪತ್ತಿ ಸಂಪೂರ್ಣವಾಗಿ ಕ್ಷೀಣಿಸುತ್ತದೆ. ವಿಶೇಷವಾಗಿ ಶಬ್ದ ಮಾಲಿನ್ಯ ಜೇನು ಹುಳಗಳ, ದುಂಬಿಗಳ ಬೆಳವಣಿಗೆ ಚಕ್ರವನ್ನು ಭಂಗಪಡಿಸುತ್ತದೆ. ಶಬ್ದ ಮಾಲಿನ್ಯವು ಅವುಗಳಿಗೆ ತುಂಬಾ ಶಾಕ್ ನೀಡಿ ಸ್ತಬ್ಧ ಮಾಡಿಸುತ್ತವೆ. ಇದರಿಂದ ಅವುಗಳ ಸಂತತಿ ಕ್ಷೀಣಿಸಿ, ಪರಾಗ ಸ್ಪರ್ಶದ ಕೊಂಡಿ ಕುಸಿದು ಬೆಳೆಗಳ ಉತ್ಪಾದನೆ ಕ್ಷೀಣಿಸುತ್ತದೆ. ಕಿವಿ ತಮಟೆ ಒಡೆಯುವಂತಹ ಈ ಭೀಕರ ಶಬ್ದದಿಂದ ಭಯಭೀತವಾಗಿ ಬೆಚ್ಚಿಬಿದ್ದ ಆನೆ, ಕಾಟಿಯಂತಹ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತವೆ. ಸುತ್ತಮುತ್ತಲಿನ ರೈತರ ತೋಟಗದ್ದೆಗಳಿಗೆ ಲಗ್ಗೆ ಇಟ್ಟು ಅವುಗಳನ್ನು ಹಾಳು ಮಾಡುತ್ತವೆ. ಮಾನವ ಮತ್ತು ಪ್ರಾಣಿಗಳ ಸಂಘರ್ಷಕ್ಕೆ ಈ ಪ್ರವಾಸೋದ್ಯಮ ಜನಿತ ಶಬ್ದ ಮಾಲಿನ್ಯವೂ ಒಂದು ಬಹುಮುಖ್ಯ ಕಾರಣವಾಗಿದೆ.

ಈ ಹೋಂಸ್ಟೇ, ರೆಸಾರ್ಟ್‌ಗಳಲ್ಲಿ ಅಬ್ಬರಿಸುವ ಡಿ.ಜೆ. ಡ್ಯಾನ್ಸ್, ಪಟಾಕಿಗಳಿಂದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ರೈತಾಪಿ ಜನರ ನಿದ್ರೆಗೂ ಭಂಗವಾಗುತ್ತಿದೆ.

ಇದರ ಬಗ್ಗೆ ಪ್ರವಾಸೋದ್ಯಮ, ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪರಿಸರ ಪ್ರಜ್ಞೆ ಇರುವ ಸಾರ್ವಜನಿಕರು ಮತ್ತು ಪರಿಸರವಾದಿಗಳು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ, ಸರಕಾರಕ್ಕೆ ಈ ವಿಷಯದಲ್ಲಿ ಕಿವಿ ಹಿಂಡಬೇಕು. ಈ ಶಬ್ದ ಮಾಲಿನ್ಯವು ಪ್ರಾಣಿಗಳ ಮೇಲೆ ಮಾನವನು ಎಸಗುವ ವಿಕೃತ ಕ್ರೌರ್ಯ.

ಪ್ರಾಣಿಗಳ ಮೇಲಿನ ಈ ವಿಕೃತ ಅನಾಚಾರವನ್ನು ತಡೆಯಲು ಪ್ರವಾಸೋದ್ಯಮ, ಅರಣ್ಯ ಮತ್ತು ಪೊಲೀಸ್ ಇಲಾಖೆಗಳು ರಾತ್ರಿ ಗಸ್ತು ತಿರುಗಬೇಕು. ಅಂತಹ ಡಿ.ಜೆ.ಗಳನ್ನು ಜಪ್ತಿ ಮಾಡಿ, ಈ ರೆಸಾರ್ಟ್, ಹೋಂ ಸ್ಟೇಗಳ ಲೈಸೆನ್ಸ್ ರದ್ದು ಮಾಡಬೇಕು. ಪ್ರಾಣಿಗಳ ವಿರುದ್ಧ ಕ್ರೌರ್ಯದ ಆಧಾರ ಮೇಲೆ ಕೇಸ್ ದಾಖಲಿಸಬೇಕು.

ಸರಕಾರಿ ಬಸ್‌ಗಳ ಮೇಲೆ ಬರೆದಿರುವ ‘ಪ್ರಾಣಿಗಳ ಮೇಲೆ ದಯವಿರಲಿ’ ಎಂಬ ಘೋಷಣೆ ಕೇವಲ ಬರವಣಿಗೆಗೆ ಸೀಮಿತವಾಗದಿರಲಿ.

share
ಕೆ.ಸಿ. ಶಂಕರ್, ಚಿಕ್ಕಮಗಳೂರು
ಕೆ.ಸಿ. ಶಂಕರ್, ಚಿಕ್ಕಮಗಳೂರು
Next Story
X