Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನಾವು ಸಮಾನತೆಗಾಗಿ ಶ್ರಮಿಸುತ್ತಿದ್ದೇವೆಯೇ...

ನಾವು ಸಮಾನತೆಗಾಗಿ ಶ್ರಮಿಸುತ್ತಿದ್ದೇವೆಯೇ ಅಥವಾ ವಿಭಜನೆಗಳನ್ನು ಹೊಸ ರೀತಿಯಲ್ಲಿ ಬಲಪಡಿಸುತ್ತಿದ್ದೇವೆಯೇ?

ಕೆ.ಎನ್. ಲಿಂಗಪ್ಪಕೆ.ಎನ್. ಲಿಂಗಪ್ಪ15 Jun 2025 10:06 AM IST
share
ನಾವು ಸಮಾನತೆಗಾಗಿ ಶ್ರಮಿಸುತ್ತಿದ್ದೇವೆಯೇ ಅಥವಾ ವಿಭಜನೆಗಳನ್ನು ಹೊಸ ರೀತಿಯಲ್ಲಿ ಬಲಪಡಿಸುತ್ತಿದ್ದೇವೆಯೇ?
ಹೆಚ್ಚು ಸಮಾನತಾವಾದಿ ಸಮಾಜದತ್ತ ಸಾಗುವ ಬದಲು, ಜಾತಿ ಆಧಾರಿತ ಪ್ರಯೋಜನಗಳಿಗಾಗಿ ಧ್ರುವೀಕರಣ ಮತ್ತು ಸ್ಪರ್ಧೆಯ ಹೆಚ್ಚಳವನ್ನು ನಾವು ನೋಡುತ್ತಿದ್ದೇವೆ. ಇದು ಒಂದು ಮೂಲಭೂತ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ: ನಾವು ಒಂದು ರಾಷ್ಟ್ರೀಯವಾಗಿ ನಿಜ ಸ್ಥಿತಿಯಲ್ಲಿ ಸಮಾನತೆಗಾಗಿ ಶ್ರಮಿಸುತ್ತಿದ್ದೇವೆಯೇ ಅಥವಾ ನಾವು ವಿಭಜನೆಗಳನ್ನು ಹೊಸ ರೀತಿಯಲ್ಲಿ ಬಲಪಡಿಸುತ್ತಿದ್ದೇವೆಯೇ?

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಅಡಿಪಾಯದ ಮೇಲೆ ನಿರ್ಮಿಸಲ್ಪಟ್ಟಿದೆ. ಆದರೂ, ಸ್ವಾತಂತ್ರ್ಯಾನಂತರವೂ, ಜಾತಿಯು ಆಳವಾಗಿ ಬೇರೂರಿರುವುದು ಸಾಮಾಜಿಕ ವಾಸ್ತವವಾಗಿದೆ. ಐತಿಹಾಸಿಕವಾಗಿ ಪ್ರತಿಕೂಲ ಪರಿಸ್ಥಿತಿಯಲ್ಲಿರುವ ಸಮುದಾಯಗಳನ್ನು ಮೇಲಕ್ಕೆತ್ತಲು ಆದ್ಯತಾ ಉಪಚಾರ ತತ್ವದ ಅಡಿಯಲ್ಲಿ ಮೂಲತಃ ಪರಿಚಯಿಸಲಾದ ಮೀಸಲಾತಿ ವ್ಯವಸ್ಥೆಯು ಈಗ ಭಾರತೀಯ ಸಮಾಜ ಮತ್ತು ರಾಜಕೀಯ ಶಾಶ್ವತ ಮತ್ತು ಆಗಾಗ ವಿವಾದಾತ್ಮಕ ವೈಶಿಷ್ಟ್ಯವಾಗಿದೆ.

ಹೆಚ್ಚು ಸಮಾನತಾವಾದಿ ಸಮಾಜದತ್ತ ಸಾಗುವ ಬದಲು, ಜಾತಿ ಆಧಾರಿತ ಪ್ರಯೋಜನಗಳಿಗಾಗಿ ಧ್ರುವೀಕರಣ ಮತ್ತು ಸ್ಪರ್ಧೆಯ ಹೆಚ್ಚಳವನ್ನು ನಾವು ನೋಡುತ್ತಿದ್ದೇವೆ. ಇದು ಒಂದು ಮೂಲಭೂತ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ: ನಾವು ಒಂದು ರಾಷ್ಟ್ರೀಯವಾಗಿ ನಿಜ ಸ್ಥಿತಿಯಲ್ಲಿ ಸಮಾನತೆಗಾಗಿ ಶ್ರಮಿಸುತ್ತಿದ್ದೇವೆಯೇ ಅಥವಾ ನಾವು ವಿಭಜನೆಗಳನ್ನು ಹೊಸ ರೀತಿಯಲ್ಲಿ ಬಲಪಡಿಸುತ್ತಿದ್ದೇವೆಯೇ?

ಜಾತಿರಹಿತ ಸಮಾಜದ ಕನಸು

ಭಾರತದ ಸಂಸ್ಥಾಪಕರ ಮೂಲ ದೃಷ್ಟಿಕೋನವೆಂದರೆ, ಎಲ್ಲಾ ನಾಗರಿಕರು ಸಮಾನ ಅವಕಾಶಗಳನ್ನು ಅನುಭವಿಸುವ ಜಾತಿರಹಿತ, ವರ್ಗ ರಹಿತ ಸಮಾಜವನ್ನು ಅಂತಿಮವಾಗಿ ಸೃಷ್ಟಿಸುವುದಾಗಿತ್ತು. ಮೀಸಲಾತಿ ಎಂದರೆ ಐತಿಹಾಸಿಕವಾಗಿ ಅಂಚಿನಲ್ಲಿರುವ ಸಮೂಹಗಳು ಸವಲತ್ತು ಪಡೆದವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲು ಅನುವು ಮಾಡಿಕೊಡುವ ಒಂದು ದೋಷಪರಿಹಾರಕ ಕಾರ್ಯವಿಧಾನ.

ಆದರೂ, ದಶಕಗಳ ನಂತರ ಮೀಸಲಾತಿ ವ್ಯವಸ್ಥೆಯಲ್ಲಿರುವ ಜಾತಿಗಳನ್ನು ಹಂತ ಹಂತವಾಗಿ ಹೊರಹಾಕುವ ಬದಲು ಅದು ವಿಸ್ತಾರಗೊಳ್ಳುತ್ತಿದೆ. ಸಾಮಾಜಿಕ ನ್ಯಾಯದ ಅಗತ್ಯಗಳಿಗಿಂತ ಹೆಚ್ಚಾಗಿ ರಾಜಕೀಯ ಒತ್ತಡ ಮತ್ತು ಮತ ಬ್ಯಾಂಕ್ ರಾಜಕೀಯದಿಂದಾಗಿ ಹೊಸ ಜಾತಿಗಳನ್ನು ನಿರಂತರವಾಗಿ ಮೀಸಲಾತಿ ಪಟ್ಟಿಯೊಳಗೆ ತರಲಾಗುತ್ತಿದೆ.

ಮೀಸಲಾತಿಯ ಬಳಕೆ ತಪ್ಪಿಸಲು ಇರುವ ಏಕೈಕ ಮಾರ್ಗವೆಂದರೆ ನಿಜವಾದ ಸಮಾನತೆಯನ್ನು ಸಾಧಿಸುವುದು- ಕಾನೂನಿನಲ್ಲಿ ಮಾತ್ರವಲ್ಲ, ದೈನಂದಿನ ಜೀವನ, ಶಿಕ್ಷಣ, ಉದ್ಯೋಗಗಳು ಮತ್ತು ಅವಕಾಶಗಳ ಪ್ರವೇಶಗಳಲ್ಲಿಯೂ ಕೂಡ ಸಾಧಿಸುವುದಗತ್ಯ.

ಯಾರಿಗೆ ಯಾವ ಪಾತ್ರವಿದೆ?

1. ಐತಿಹಾಸಿಕವಾಗಿ ಸವಲತ್ತು ಪಡೆದ ಜಾತಿಯು, ದೊರಕಿರುವ ಅನುಕೂಲವನ್ನು ಒಪ್ಪಿಕೊಳ್ಳಬೇಕು ಮತ್ತು ವ್ಯವಸ್ಥಿತ ಅಸಮಾನತೆಯನ್ನು ಹೋಗಲಾಡಿಸುವತ್ತ ಕೆಲಸ ಮಾಡಬೇಕು.

ಇವುಗಳ ಜೊತೆಗೆ,

ಸಾಮಾನ್ಯ ಪ್ರವೇಶವನ್ನು ಉತ್ತೇಜಿಸುವುದು: ಹಿಂದುಳಿದ ಸಮುದಾಯಗಳಿಗೆ ವಿದ್ಯಾರ್ಥಿ ವೇತನಗಳಲ್ಲದೆ, ಅವರಿಗೆ ಮಾರ್ಗದರ್ಶನ ಮತ್ತು ತರಬೇತಿ ಉಪಕ್ರಮಗಳನ್ನು ಬೆಂಬಲಿಸಬೇಕು.

ಸಾಮಾಜಿಕ ತಾರತಮ್ಯವನ್ನು ತಿರಸ್ಕರಿಸುವುದು:

ಜಾತಿ ಆಧಾರಿತ ಸಾಮಾಜಿಕ ಪದ್ಧತಿಗಳನ್ನು ಬಹಿಷ್ಕರಿಸುವುದು ಮತ್ತು ಅಂತರ್ಜಾತಿ ವಿವಾಹಗಳು ಮತ್ತು ಎಲ್ಲರನ್ನೂ ಒಳಗೊಂಡ ಸಾಂಸ್ಕೃತಿಕ ಸ್ಥಳಗಳಿಗೆ ಪ್ರವೇಶವನ್ನು ಪ್ರೋತ್ಸಾಹಿಸುವುದು.

ಸ್ಥಳಾವಕಾಶ ಸೃಷ್ಟಿ: ನಾಯಕತ್ವದ ಸ್ಥಾನಗಳಲ್ಲಿ-ವ್ಯಾಪಾರ, ರಾಜಕೀಯ ಶಿಕ್ಷಣ-ಕಡಿಮೆ ಪ್ರಾತಿನಿಧ್ಯದ ಹಿನ್ನೆಲೆಯಿಂದ ಬಂದವರಿಗೆ ಪೂರ್ವಭಾವಿಯಾಗಿ ಅವಕಾಶಗಳನ್ನು ಸೃಷ್ಟಿಸುವುದು.

ಅಸ್ಮಿತೆಯನ್ನು ಪುನರ್ರೂಪಿಸುವುದು: ಜಾತಿಯನ್ನು ಹೆಮ್ಮೆ ಅಥವಾ ಶ್ರೇಷ್ಠತೆಯ ಮೂಲವಾಗಿ ನೋಡುವುದನ್ನು ನಿಲ್ಲಿಸುವುದು ಮತ್ತು ಸಾಮಾನ್ಯ ಭಾರತೀಯ ಅಸ್ಮಿತೆಯನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸುವುದು.}

2. ಸರಕಾರ ಮೀಸಲಾತಿ ರಾಜಕೀಯವನ್ನು ಮೀರಬೇಕು

ರಾಜ್ಯವು ಮೀಸಲಾತಿಯನ್ನು ರಾಜಕೀಯ ಆಧಾರ ಸ್ತಂಭವಾಗಿ ಬಳಸುವುದನ್ನು ನಿಲ್ಲಿಸಬೇಕು ಮತ್ತು ಬದಲಾಗಿ ದೀರ್ಘಕಾಲೀನ ಪರಿಹಾರಗಳನ್ನು ದೊರಕಿಸಬೇಕು. ಉದಾ: ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡಿ ಎಲ್ಲರಿಗೂ, ವಿಶೇಷವಾಗಿ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಗುಣಮಟ್ಟದ ಸೇವೆಗಳನ್ನು ಖಾತ್ರಿಪಡಿಸಿಕೊಳ್ಳಬೇಕು.

ಅಗತ್ಯ ನೆಲೆಯ ಬೆಂಬಲಕ್ಕೆ ಪರಿವರ್ತನೆ, ಅಂತಿಮವಾಗಿ ಸಕಾರಾತ್ಮಕ ಕ್ರಮಕ್ಕಾಗಿ ಜಾತಿ ನೆಲೆಯಿಂದ ಸಾಮಾಜಿಕ, ಆರ್ಥಿಕ ಮಾನದಂಡಗಳಿಗೆ ಬದಲಾವಣೆ ಹೊಂದುವುದು.

ಸಾಮಾಜಿಕ ಸುಧಾರಣಾ ಅಭಿಯಾನಗಳು: ತಳಮಟ್ಟದಲ್ಲಿ ಜಾತಿ ಆಧಾರಿತ ಪೂರ್ವಾಗ್ರಹಗಳನ್ನು ಹೋಗಲಾಡಿಸುವ ದೊಡ್ಡ ಪ್ರಮಾಣದ ಜಾಗೃತಿ ಅಭಿಯಾನಗಳನ್ನು ಪ್ರಾರಂಭಿಸುವುದು.

ದತ್ತಾಂಶ ಆಧಾರಿತ ನೀತಿ: ನಿಜವಾದ ಹಿಂದುಳಿದಿರುವಿಕೆಯನ್ನು ಗುರುತಿಸಲು ಮತ್ತು ನೀತಿಯನ್ನು ಹೆಚ್ಚು ಸಾಕ್ಷಾಧಾರಿತವಾಗಿಸಲು ನಿಯಮಿತ ಸಾಮಾಜಿಕ-ಆರ್ಥಿಕ ಸಮೀಕ್ಷೆಗಳನ್ನು ಆಯೋಗ ಮಾಡುವುದು.

3. ಅಂಚಿನಲ್ಲಿರುವ ಸಮುದಾಯಗಳು: ಜವಾಬ್ದಾರಿಯೊಂದಿಗೆ ಹಕ್ಕುಗಳು

ವಿಮೋಚನೆಯಾಗಿ ಶಿಕ್ಷಣವು: ಮೀಸಲು ಸ್ಥಾನಗಳನ್ನು ಮಾತ್ರವಲ್ಲದೆ ಶ್ರೇಷ್ಠ ಮತ್ತು ಗುಣಮಟ್ಟದ ಶಿಕ್ಷಣಕ್ಕಾಗಿ ಶ್ರಮಿಸಬೇಕು.

ದೃಷ್ಟಿಕೋನದೊಡನೆ ರಾಜಕೀಯ ಪ್ರಾತಿನಿಧ್ಯ: ಅಂಚಿನಲ್ಲಿರುವ ಗುಂಪುಗಳ ನಾಯಕರು ಕೇವಲ ಅಸ್ಮಿತೆ ರಾಜಕೀಯಕ್ಕಾಗಿ ಅಲ್ಲದೆ ವಿಶಾಲ ಸಾಮಾಜಿಕ ಉನ್ನತಿಗಾಗಿ ಕೆಲಸ ಮಾಡಬೇಕು.

ಹಿಂದುಳಿದ ವರ್ಗಗಳೊಳಗೆ ಏಕತೆ: ಆಂತರಿಕ ವಿಭಜನೆಗಳನ್ನು ತಪ್ಪಿಸಿ (ಉದಾಹರಣೆಗೆ- ಒಬಿಸಿ v/s ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಥವಾ ಒಬಿಸಿಗಳೊಳಗೆ) ಮತ್ತು ಘನತೆ ಮತ್ತು ಸಮಾನತೆಯ ಕಡೆಗೆ ಸಾಮೂಹಿಕವಾಗಿ ಕೆಲಸ ಮಾಡಬೇಕು.

4. ಭಾರತದ ಬೆಳೆಯುತ್ತಿರುವ ಮಧ್ಯಮ ವರ್ಗ ಮತ್ತು ನಾಗರಿಕ ಸಮಾಜ ಗುಂಪುಗಳ ಸಾಮಾಜಿಕ ಸಾಮರ್ಥ್ಯ ಮತ್ತು ಸಮಾನತಾ ಕೇಂದ್ರಿತ ಸುಧಾರಣಾ ಧ್ವನಿಯ ಪ್ರತಿಪಾದಕರಾಗಬೇಕು. ತಾತ್ಸಾರ ಅಥವಾ ಸಿನಿಕತನದಿಂದ ಕೂಡಿರುವ ಈ ಗುಂಪು ಈ ಕೆಳಗಿನವುಗಳನ್ನು ಆಗಾಗ ಪಾಲಿಸಬೇಕು.

* ಮಾಧ್ಯಮ ಮತ್ತು ಸಂವಾದಗಳಲ್ಲಿ ಸಮಾನತೆಯ ಮೌಲ್ಯಗಳನ್ನು ಉತ್ತೇಜಿಸಬೇಕು.

* ಜಾತಿ ಸಮನ್ವಯ ಮತ್ತು ಶೈಕ್ಷಣಿಕ ಸಮಾನತೆಯ ಮೇಲೆ ಕೆಲಸ ಮಾಡುವ ಸರಕಾರೇತರ ಸಂಸ್ಥೆಗಳನ್ನು ಬೆಂಬಲಿಸಬೇಕು.

* ಮತಗಳಿಗಾಗಿ ಜಾತಿಯನ್ನು ಬಳಸಿಕೊಳ್ಳುವ ರಾಜಕೀಯ ಪಕ್ಷಗಳು ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲು ಒತ್ತಾಯಿಸಬೇಕು.

ನಿಜವಾದ ಸಮಾನತೆಗಾಗಿ ಯಾರೂ ಏಕೆ ಹೋರಾಡುತ್ತಿಲ್ಲ?

ಇಂದಿನ ಭಾರತದ ದುರಂತವೆಂದರೆ, ಎಲ್ಲರೂ, ಎಲ್ಲರಿಗೂ ದೊಡ್ಡ ಹೂರಣಗಡಬು ನೀಡುವ ಬದಲು, ಹೂರಣಗಡುಬಿನ ದೊಡ್ಡ ಭಾಗಕ್ಕಾಗಿ ಹೋರಾಡುತ್ತಿದ್ದಾರೆ. ರಾಜಕೀಯ ಪಕ್ಷಗಳು ಅಲ್ಪಾವಧಿಯ ಲಾಭಕ್ಕಾಗಿ ಜಾತಿ ಅಸ್ಮಿತೆಗಳನ್ನು ಬಳಸಿಕೊಳ್ಳುತ್ತಿವೆ. ಹಿಂದುಳಿದ ಸ್ಥಾನಮಾನವನ್ನು ಪಡೆಯಲು ಸಮುದಾಯಗಳು ಪರಸ್ಪರ ವಿರುದ್ಧವಾಗಿ ಹೋರಾಡುತ್ತಿವೆ. ಮೀಸಲಾತಿಯ ಸುತ್ತಲಿನ ಚರ್ಚೆಗಳು ಮೂಲ ಉದ್ದೇಶವಾದ ಸಮಾನತೆಯ ಬದಲು ನಾವು v/s ಅವರು ಎಂಬ ವಿಷಯದ ಮೇಲೆ ಆಗುತ್ತಿವೆ.

ನಿಜವಾದ ಸಮಾನ ಸಮಾಜಕ್ಕಾಗಿ ಒತ್ತಾಯಿಸಲು ಯಾರಿಗೂ ಪ್ರೋತ್ಸಾಹವಿಲ್ಲ- ರಾಜಕಾರಣಿಗಳು ಜಾತಿ ಪ್ರತಿಬಂಧಕಗಳಿಂದ ಪ್ರಯೋಜನ ಪಡೆಯುತ್ತಾರೆ, ಮೇಲ್ಜಾತಿಯವರು ಸವಲತ್ತುಗಳನ್ನು ಕಳೆದುಕೊಳ್ಳುವ ಭಯದಲ್ಲಿರುತ್ತಾರೆ ಮತ್ತು ಹಿಂದುಳಿದ ಜಾತಿಗಳು ಸಮಾನತೆ, ಅವು ಅವಲಂಬಿತವಾಗಿರುವ ರಕ್ಷಣೆಗಳನ್ನು ಕಸಿದುಕೊಳ್ಳಬಹುದು ಎಂದು ಚಿಂತಿಸುತ್ತವೆ.

ಆದರೆ ಈ ಹೋರಾಟದಲ್ಲಿ ನಾವು ಅಂತಿಮ ಗುರಿಯನ್ನು ಕಳೆದುಕೊಳ್ಳುತ್ತಿದ್ದೇವೆ. ರಾಷ್ಟ್ರದಲ್ಲಿ ಅವಕಾಶ ಪಡೆಯಲು ಯಾರಿಗೂ ಜಾತಿ ಪ್ರಮಾಣದ ಅಗತ್ಯವಿಲ್ಲ, ಏಕೆಂದರೆ ಅವಕಾಶ ಈಗಾಗಲೇ ಎಲ್ಲರಿಗೂ ಲಭ್ಯವಿದೆ.

ಮೀಸಲಾತಿ ಅಪ್ರಸ್ತುತವಾದಾಗ ಭಾರತವನ್ನು ಊಹಿಸಿಕೊಳ್ಳಿ

* ಪ್ರತೀ ಮಗುವು, ಹುಟ್ಟನ್ನು ಗಣನೆಗೆ ತೆಗೆದುಕೊಳ್ಳದೆ, ಆರ್ಥಿಕವಾಗಿ ಸದೃಢವಾದ ಒಂದು ಉತ್ತಮ ಶಾಲೆಯಲ್ಲಿ ಓದುತ್ತದೆ.

* ಕಾಲೇಜು ಸೀಟುಗಳು ಸಂಪೂರ್ಣವಾಗಿ ಅರ್ಹತೆಯ ಮೇಲೆ ಮಾತ್ರ ನೀಡಲಾಗತ್ತದೆ, ಆದರದು ಸಂಪತ್ತಿನ ಮೇಲಲ್ಲ.

* ಕೌಶಲ್ಯ ಮತ್ತು ಪ್ರತಿಭೆಯ ಆಧಾರದ ಮೇಲೆ ಎಲ್ಲರಿಗೂ ಉದ್ಯೋಗಗಳು, ನಿಶ್ಚಿತವಾಗಿ, ಕಲಿಕೆಯ ಅಭ್ಯಾಸದ ಒಳಗೊಳ್ಳುವಿಕೆಯ ಮೂಲಕ ಸುಲಭ ಲಭ್ಯವಾಗುತ್ತವೆ.

* ವ್ಯಕ್ತಿಯ ಉಪನಾಮವು ಇನ್ನು ಮುಂದೆ ಅವರ ಸಾಮಾಜಿಕ ಸ್ಥಾನವನ್ನು ಸೂಚಿಸುವುದಿಲ್ಲ.

*ರಾಜಕಾರಣಿಗಳು ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ರಕ್ಷಣೆ ಬಗ್ಗೆ ಮಾತನಾಡುತ್ತಾರೆಯೇ ಹೊರತು ಜಾತಿ ಸಂಯೋಜನೆ ಬಗ್ಗೆ ಅಲ್ಲ.

- ಈ ದೃಷ್ಟಿಕೋನವು ಆದರ್ಶಪ್ರಾಯವಲ್ಲ. ಇದು ಸಾಧಿಸಬಹುದಾದದ್ದು- ಆದರೆ ಪ್ರಯತ್ನಗಳನ್ನು ಒಟ್ಟುಗೂಡಿಸಿ ಮತ್ತು ಅಸ್ಮಿತೆ ರಾಜಕೀಯವನ್ನು ಮೀರಿ ನಡೆಯುವ ಧೈರ್ಯದಿಂದ ಮಾತ್ರ ಇದು ಶಕ್ಯವಾಗುತ್ತದೆ.

ನಿರ್ಣಯ: ಜಾತಿಯಿಂದ ಸ್ವಾತಂತ್ರ್ಯ ಪಡೆಯುವುದು ಅತ್ಯಂತ ಮಹತ್ವದ್ದು

* ಭಾರತದ ಅತಿ ದೊಡ್ಡ ಸವಾಲು ಮತ್ತು ಅದರ ಅತಿ ದೊಡ್ಡ ಅವಕಾಶ, ಜಾತಿಯ ಸಂಕೋಲೆಯಿಂದ ಮುಕ್ತಗೊಳಿಸಿಕೊಳ್ಳುವುದು.

* ಸಮಾಜ, ಸರಕಾರ ಮತ್ತು ಪ್ರತಿಯೊಬ್ಬ ನಾಗರಿಕರು ಹಾಗೂ ಎಲ್ಲಾ ಭಾರತೀಯರು ಕಾನೂನಿನಲ್ಲಿ ಮಾತ್ರವಲ್ಲ; ವಾಸ್ತವದಲ್ಲಿ ಜೀವಿಸಲು ಸಮಾನರು ಎಂಬ ಕಲ್ಪನೆಗೆ ಬದ್ಧರಾದಾಗ ಮಾತ್ರ ಇದು ಸುಲಭ ಸಾಧ್ಯ.

* ಅಲ್ಲಿಯವರೆಗೆ, ಮೀಸಲಾತಿ ಕೇವಲ ನೀತಿಯಾಗಿ ಉಳಿಯುವುದಿಲ್ಲ, ಬದಲಾಗಿ ನಮ್ಮ ವೈಫಲ್ಯದ ಪ್ರತಿಬಿಂಬವಾಗಿ ಉಳಿಯುತ್ತದೆ.

(ವಿವಿಧ ಮೂಲಗಳಿಂದ)


share
ಕೆ.ಎನ್. ಲಿಂಗಪ್ಪ
ಕೆ.ಎನ್. ಲಿಂಗಪ್ಪ
Next Story
X