ಒಲಿದ ಸ್ವರಗಳು
-

ನೆತ್ತರ ಮಳೆ
ಇಟ್ಟಿಗೆ, ಕಲ್ಲುಗಳು ನಿರಪರಾಧಿಗಳು
ರಾಮನ ಹೆಸರು ಎಲ್ಲಿ ಕೆತ್ತಿದರೇನು?
ರಾಮ ಅಕ್ರಮಣಕಾರಿಯಾಗಲಾರ.
ಲೋಕದಲ್ಲಿ ಎಂದಾದರೂ ಅಲ್ಲಾಹನೂ
ಹಿಂದುಗಳ ಮನೆ ಸುಟ್ಟಿರುವನೇ?.
ಜಗತ್ತಿನಲ್ಲಿ ರಾಮ ಎಂದಾದರೂ
ಮುಸ್ಲಿಮರ ಗುಡಿಸಲಿಗೆ ಬೆಂಕಿ ಇಟ್ಟಿರುವನೇ?
ಅವರೆಂದಿಗೂ ದ್ವೇಷದ ಮಾತನಾಡಿರುವುದಿಲ್ಲ.
ಇವರೇಕೆ ಕಾದ ಹಂಚಿನ ನೀರ ಹನಿಗಳು?
ಅವರ ಕರಕಲಾದ ಅಂಗಡಿಯಿಂದ
ದಟ್ಟ ಹೊಗೆ ಈಗಲೂ ಬರುತ್ತಿದೆ ನೋಡು
ಹುಡುಕಿ ಹೊರಗೆಳೆದು ಕೊಚ್ಚಿ ಹಾಕಿದ
ಅವರ ರುಂಡಗಳು ವಿಲವಿಲ ಒದ್ದಾಡಿ
ರಕ್ತದ ಮಡುವಿನಲಿ ಬಿದ್ದಿವೆ ನೋಡು.
ದಂಡೆಗೆ ತೇಲಿ ಬರುತ್ತಿರುವ
ಮನುಜರ ರುಂಡವಿಲ್ಲದ ದೇಹಗಳು.
ದೇಹವಿಲ್ಲದ ಬರೀ ರುಂಡಗಳು
ಭಯ ಹುಟ್ಟಿಸುತ್ತಿವೆ.
ಮಸೀದಿ ಉರುಳಿದ ಸಮಯ
ನೆತ್ತರ ಕಣ್ಣೀರು ಹರಿಯುತ್ತಿವೆ.
ಗಲಭೆ ಪೀಡಿತ ಅವರು ಭಯಂಕರ
ರಕ್ತ ಪಿಪಾಸುಗಳಾಗಿದ್ದರು.
ಬೀಭತ್ಸ ರುದ್ರ ನರ್ತನವಿತ್ತು.
ಸಾವಿನ ತಲ್ಲಣದ ಕ್ಷಣಗಳಲ್ಲಿ
ಕಣ್ಣು ಗಾಜಿನ ಗೋಲಿಯಾಗಿತ್ತು.
ನಡೆದ ಎಲ್ಲದಕ್ಕೂ ಸಾಕ್ಷಿಯಾಗಿತ್ತು.
ಗದ್ದುಗೆಯಲ್ಲಿ ಕುಳಿತ ಅವರು
ಕೋಮುವಾದೀ ಕೊಳ್ಳಿ ದೆವ್ವಗಳು
ಲೆಕ್ಕ ಹಾಕುತ್ತಿದ್ದರು,ಈ ಸಲ
ಭಾರೀ ನೆತ್ತರ ಮಳೆ ಸುರಿದಿದೆ,
ಉತ್ತಮ ಪಸಲು ಬರಬಹುದು.
*****************************
ನಿಮಗೆ ಶೋಭಿಸದು
ಮನುಷ್ಯರ ಮನುಷ್ಯರ ನಡುವೆ
ಜಾತಿಯ ವಿಷ ಬೀಜ
ಬಿತ್ತಿದವರು ನೀವು
ಜಾತ್ಯತೀತತೆಯ ಮಾತು
ನಿಮಗೆ ಶೋಭಿಸದು ಬಿಡಿ.
ಸಮಾನತೆಯ ಮಾತು ಬೇಡನಿಮಗೆ ಇಷ್ಟವಾಗುವುದಿಲ್ಲ
ಹಿಟ್ಲರನ ಸಂತತಿ ಅಧಿಕಾರಿಶಾಹಿಗೆ
ಪ್ರಜಾಪರತೆಯ ಮಾತು ಬಿಡಿ
ಅದು ನಿಮಗೆ ಶೋಭಿಸದು.
ಗುಡಿಸಲ ಬಡವರವರು ನಾವು
ತಳ್ಳು ಬಂಡಿಯ ವ್ಯಾಪಾರಿಗಳು
ಗಲಭೆಗಳಾದಾಗ ನಾವು ಮೊದಲ ಬಲಿಗಳು
ಸೌಹಾರ್ದದ ಮಾತು ಬಿಡಿ
ಅದು ನಿಮಗೆ ಶೋಭಿಸದು.
ನಿಮ್ಮ ಸಬ್ ಕಾ ವಿಕಾಸ್‌ನಲ್ಲಿ
ಮನ್ ಕಿ ಬಾತ್ ಹೇಳುತ್ತೀರಿ.
ನಿಮ್ಮ ಸ್ಮಾರ್ಟ್ ಸಿಟಿಯಲ್ಲಿ
ನಮಗೆಲ್ಲಿದೆ ಜಾಗ?
ಬರೀ ಭರವಸೆಗಳು ಬಿಡಿ
ಅದು ನಿಮಗೆ ಶೋಭಿಸದು.
ಗಾಂಧೀ ಕೈಗೆ ಕಸಬರಿಕೆ ಕೊಟ್ಟಿದ್ದೀರಿ
ಅವನ ಕನ್ನಡಕ ಭಾರತ ಸ್ವಚ್ಛಗೊಳಿಸಲು
ನಿಮ್ಮ ಹತ್ತು ಲಕ್ಷದ ಹೊನ್ನಿನ ಸೂಟಿದೆಯಲ್ಲನನ್ನ ಹರಕು ಸೀರೆಯ ಮಾತು ಬಿಡಿ
ಅದು ನಿಮಗೆ ಶೋಭಿಸದು .
ದೇಶ ಬಲಿ ಕೇಳಿದಾಗಲೆಲ್ಲ
ನನ್ನ ಕತ್ತನ್ನೇ ಮೊದಲು ಕೊಟ್ಟೆ
ಓಟಿನ ಬೇಟದಲಿ ನೀವು
ಸೌಹಾರ್ದದ ಬದುಕಿಗೆ ಬೆಂಕಿಯಿಟ್ಟವರು
ದೇಶಭಕ್ತಿಯ ಮಾತು ಬಿಡಿ
ಅದು ನಿಮಗೆ ಶೋಭಿಸದು .
*****************************
ಆಲದ ಆತ್ಮಬಲ
ಎಂತಹ ಆತ್ಮಬಲ ಆ ಆಲದ ಮರದ್ದು
ಕಲ್ಲು ಬಂಡೆಗಳಲ್ಲಿ ನೂಲಿನೆಳೆಯ ಬೇರು ತುರುಕಿ
ಬಂಡೆ ಸೀಳಿ ಹೊರ ಬರುವ ಅದರ ಆತ್ಮಬಲಕ್ಕೇನೆನ್ನಲಿ?
ಬಿಸಿಲಿಗೆ ಬಾಡುತ್ತಾ, ಚಳಿಗೆ ಉದುರುತ್ತಾ,
ಮತ್ತೆ ಚಿಗುರುವ ಆತ್ಮಶಕ್ತಿಗೇನೆನ್ನಲಿ ?
ಕೊರಡು ಕೊನರುವುದು ಬರಡು ಹಯನಹುದು
ಗರಗಸದಿ ಕೊರೆದ ಮರ ತುಂಡು ತುಂಡಾಗಿ
ನೆಲಕ್ಕೆ ಬಿದ್ದರೂ ಚಿಗುರುವ ಛಲದ ಪರಿ
ದಾರದೆಳೆಯ ಬೇರಿಗೆ ಬಂಡೆ ಸೀಳುವ ಕಸುವು
ಸಾವಿನಂಚಿನಿಂದ ಹೊರಬರುವ ಅಂತ:ಶಕ್ತಿ.
ಭೂಡ್ಡೆಗೆ ಬಂಡೆಯಾಸರೆಯಾಗುವ ಬಂಧುತ್ವ
ಧಾರಣಶಕ್ತಿಗೇನೆನ್ನಲಿ?
ಗಚ್ಚು, ಗಾರೆ, ಗಟ್ಟಿ ಅಡಿಪಾಯಗಳ ಸೀಳಿ
ಹೊರಬರುವ ಬೇರಿನ ಧ್ಯಾನಸ್ಥ್ ಮನಸ್ಸು
ಏಕಾಗ್ರ ನೆಲೆಯಲ್ಲಿ ಒಂದುಗೂಡಿದ ಶಕ್ತಿ ,
ಅಸಾಧ್ಯವನು ಸಾಧ್ಯವಾಗಿಸುವ ಛಲ.
ನೀರು - ಬೆಂಕಿಯ ತಾಣ,
ಬಂಡೆ- ಆಲದ ಜೀವಕೋಶ
ಅನುದಿದ ಬಡಿದಾಟ
ಬದುಕು ಕಲಿಸಿತ್ತು ಹೋರಾಟ.
*****************************
ಅರ್ಥವಿಲ್ಲದ ಯುದ್ಧಗಳು
ಯುದ್ಧಗಳು ಬೂದಿ ಸೃಷ್ಟಿಸುತ್ತವೆ ಅನ್ನವನ್ನಲ್ಲ
ಯುದ್ಧಗಳಿಗೆ ಸಾಯಿಸುವ ಶಕ್ತಿಯಿದೆ ಜೀವ ಸೃಷ್ಟಿಸುವುದಿಲ್ಲ.
ಭಾರತ ಪಾಕಿಸ್ತಾನ ಒಡೆದ ಕನ್ನಡಿ
ಶಾಂತಿ ಬಯಸುವ ಮಗುವೇ
ನಿನಗೇನು ಗೊತ್ತು ಆಳುವವರ ಮರ್ಮ
ಇದು ರಾಜಕೀಯ ಆಟ.
ಕಾರ್ಗಿಲ್ ದೇಶಭಕ್ತಿಯ ಕದನದಂಗಳದಿಂದ
ನಿನ್ನಪ್ಪನ ಶವಪೆಟ್ಟಿಗೆ ಬರುತ್ತದೆ ಮೆಹರ್?
ಸೈನಿಕರ ಶವ ಪೆಟ್ಟಿಗೆಗಳಲ್ಲಿರುವುದು
ಬಡ ತಾಯಿಯ ಮಕ್ಕಳ ಶವಗಳಲ್ಲವೇ ಮಗು?
ಆ ಶವ ಪೆಟ್ಟಿಗೆಯಲ್ಲಿ ಇನ್ನೇನಿರಲು ಸಾಧ್ಯ ಹೇಳು?
ಎರಡು ದೇಶಗಳ ನೆಮ್ಮದಿಗೆ ಕೊಳ್ಳಿಯಿಟ್ಟ ರಾಜಕಾರಣಿಗಳ
ಶವಗಳಿರುವುದಿಲ್ಲ ಗುರ್‌ಮೆಹರ್ ಕೌರ್?
ಅಲ್ಲಿರುವುು ದೇಶಪ್ರೇಮದ ಚಾದರ ಹೊದ್ದ
ಬಡ ತಾಯಿಯ ಮಕ್ಕಳ ಶವಗಳು.
ತಂದೆ, ಮಗ, ಪತಿ, ಸೋದರರ ಕಳೆದುಕೊಂಡ
ಹೆಣ್ಣೊಡಲ ಸಂಕಟಗಳ
ಈ ರಾಜಕಾರಣಿಗಳೆತ್ತ ಬಲ್ಲರು?
ಅವರುಗಳ ಮನೆಮಗನ ಶವಪೆಟ್ಟಿಗೆ ಬರಲೇ ಇಲ್ಲ
ಕಳೆದುಕೊಂಡವರ ನೋವು ಇವರೆತ್ತ ಬಲ್ಲರು ಮಗು?
ಯುದ್ಧಗಳ ವಿರುದ್ಧ ಶಾಂತಿ ಜಪಿಸುವ ಮಗುವೆ
ಬಾಲ್ಯದಲ್ಲೇ ತಂದೆಯ ಕಳಕೊಂಡ ಅನಾಥೆಯೇ
ಯುದ್ಧವಾಗದಿರಲೆಂದು ಪ್ರಾರ್ಥಿಸುವೆಯಾ ಕಂದ?
ನಿನ್ನ ಹೊಟ್ಟೆಯ ಸಂಕಟ ಇವರೆತ್ತ ಬಲ್ಲರು ಹೇಳು?
ವಿಶ್ವಶಾಂತಿಯ ಭಾವುಟ ಕೈಯಲ್ಲಿ ಹಿಡಿದು
ಛಿದ್ರವಾದ ನೆಲದ ತುಂಡುಗಳ ಜೋಡಿಸಲು
ವಿಂಗಡಿಸುವ ಗಡಿಗಳ ಕಿತ್ತು ಹಾಕಲು
ಯುದ್ಧವಿಲ್ಲದ ನಾಡ ಕಟ್ಟಲು ಹೊರಟ ಮಗಳೇ
ಇಂದಲ್ಲ ನಾಳೆ ಗಡಿಗಳ ನಿರರ್ಥಕತೆ
ಲೋಕಕ್ಕೆ ತಿಳಿಯುತ್ತದೆ.
ಆಗ ಬಂದೂಕಿನಲ್ಲಿ ಗುಬ್ಬಿಗೂಡು ಕಟ್ಟುತ್ತವೆ
ಹುಸಿ ದೇಶಪ್ರೇವುದ ಮಾತುಗಳನ್ನುದುರಿಸುವವರ
ಮನೆಗೂ ಅವರ ಮಗನ ಶವಪಟ್ಟಿಗೆ ಬರಲೇಬೇಕೇ?
‘‘ನನ್ನ ತಂದೆಯನ್ನು ಪಾಕಿಸ್ತಾನ ಕೊಂದಿಲ್ಲ
ತಂದೆಯ ಕೊಂದಿದ್ದು ಯುದ್ಧಗಳು‘‘ ಎನ್ನುತ್ತಿ ಮಗಳೇ
ಗಡಿಗಳ ಎರಡೂ ಬದಿಯ ಜನರು ಸತ್ತಿದ್ದಾರೆ
ಎರಡು ವರ್ಷದ ಹಸುಗೂಸಾದ ನಿನ್ನನ್ನಗಲಿ
ಯುದ್ಧದಾಹಕ್ಕೆ ಬಲಿಯಾದವ ನಿನ್ನಪ್ಪ ಮಗಳೇ.
ಪ್ರತಿದಿನ ಅಪ್ಪನ ಸಾವಿನ ನೆಪು ಕಾಡುತ್ತಿದೆಯೇ
ಎರಡು ದೇಶಗಳ ಜನ ಬಯಸುತ್ತಾರೆ
ಶಾಂತಿ ಮಂತ್ರವನ್ನೇ ಹೊರತು ಯುದ್ಧಗಳಲ್ಲ
ನಿನ್ನ ಮಾನವೀಯ ಕಳಕಳಿಗೆ ದೇಶದ್ರೋಹವೆನ್ನುವ
ಇವರು ಹಿಟ್ಲರನ ಸಂತತಿಯವರು.
(1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮನಾದ ಕ್ಯಾಪ್ಟನ್ ಮನ್‌ದೀಪ್ ಸಿಂಹ್‌ರ ಮಗಳು ಗುರ್‌ಮೆಹರ್ ಕೌರ್ 20 ವರ್ಷದ ತರುಣಿ. ದಿಲ್ಲಿ ವಿವಿ ಲೇಡಿ ಶ್ರೀರಾಂ ಕಾಲೇಜಿನ ವಿದ್ಯಾರ್ಥಿನಿ)
*****************************
ಗೌರಿಯರು
ತಲೆಗೆ ಗುಂಡಿಟ್ಟರೇನು
ಮಿದುಳು ಮಾತಾಡುತ್ತದೆ
ಒಬ್ಬ ಗೌರಿ
ಜಗವೆಲ್ಲ ಗೌರಿಯಾದ ಸೋಜಿಗ!
ಅನ್ಯಾಯಕೆ ಕೊನೆ ಎಂದು?
ನ್ಯಾಯ ಕಟಕಟೆಯ ಮುಂದೆ
‘.....ಬೇಟಿ ಬಚಾವೋ’ ದನಿ
ಗುಂಡುಗಳ ಚೆಂಡುಗಳಾಗಿ ಆಡಲು
ಪುಸ್ತಕದ ಬೇಟಿಯರ ರಣ ದಂಡು
ಬಿಗಿದ ಮುಷ್ಟಿಗಳ ಎತ್ತಿ.
ನವ ಹಿಟ್ಲರನ ಮಾತಿನ ಮಾರ್ಕೆಟ್ಟಿನಲಿ
ಜೀವ ಬಲು ಅಗ್ಗ!
ಮಗಳು ಓದಿ ವಿಚಾರವಾದಿಯಾದರೆ
‘ಬೇಟಿಕೋ ಗೋಲಿಸೆ ಉಢಾದೋ’
ವಿಚಾರಗಳ ಎದುರಿಸಲಾಗದ
ಹೇಡಿ ಹಿಟ್ಲರನ ಸಂತತಿ
ಸಾವು ಸಂಭ್ರಮಿಸುವ ನವೋದ್ಯಮ.
ಢಂ.ಢಂ ಫ್ರೀಡಂ ಇದು ಹಿಟ್ಲರನ ವಾಕ್ಯ
ಗೌರಿಯನು ಕೊಂದವರು ನಮಗೆ ಗೊತ್ತಿಲ್ಲ
ಈ ಾವನ್ನು ಸಂಭ್ರಮಿಸುತ್ತಿರುವವರು
ಯಾರೆಂದು ಲೋಕಕ್ಕೇ ತಿಳಿದಿದೆ
ಅವಳ ಸಾವಿನ ಪ್ರಾಯೋಜಕರು
ಪಾತಾಳದಲ್ಲಿಯೇ ಅಡಗಿರಲಿ ಹುಡುಕಿ ತರುತ್ತಾರೆ
ಅನ್ಯಾಯಕೆ ಅಂತ್ಯ ಹಾಡುತ್ತಾರೆ
ನ್ಯಾಯ ಪಡೆದೇ ತೀರುವ ದೀಕ್ಷೆ ತೊಟ್ಟಿದ್ದಾರೆ.
ಸಾಗರದಂತೆ ಹರಿದು ಬರುತ್ತಿದ್ದಾರೆ
ಅಸಂಖ್ಯೆ ಗೌರಿಯರ ದಂಡು ಧಾಂಗುಡಿಯಿಟ್ಟು
ಅಹಿಂಸೆಯನು ಹಿಂಸೆ ಕೊಲ್ಲುತ್ತಿದೆ
ಕತ್ತಲಲಿ ಅವಿತು
ಅಹಿಂಸೆಯ ಗೌರಿಯ ವಾರಸುದಾರರು
ಬೆಳಕ ಮುಖವಿಲ್ಲದವರ ಹುಡುಕಿ
ದೀವಟಿಗೆಗಳ ಹಿಡಿದು ಸಂಪು ಹೂಡಿದ್ದಾರೆ
ಬುಲೆಟ್ಟು ಬಂದೂಕಿನ ಲೆಕ್ಕ ಕೇಳುತ್ತ
ಒಕ್ಕೊರಲಿನಲಿ ಹೇಳುತ್ತಿದ್ದಾರೆ: ನಾವು ಗೌರಿಯರು.
*****************************
ಜೋಪಾನ ಜೋಗುಳ
ಜೀವ ಹೊಸಕುವ ಗುಂಡುಗಳು ನಿಷ್ಕ್ರಿಯವಾಗಲಿ
ದಫನ ಆಗಿಯೇ ಬಿಡಲಿ ದ್ವೇಷದ ವಿಷ ಬೀಜ
ತರವಲ್ಲ ಹೂದೋಟದಲಿ ಗುಂಡಿನ ಸದ್ದು
ಬುಲೆಟ್ಟಿನ ಘಾಟು ವಾಸನೆ ನಮಗೆ ಹಿಡಿಸದು
ಸಾಲು ಸಾಲು ಸಾವುಗಳು ಶೋಭೆಯಲ ್ಲ ನಿಮಗೆ.
ಗುಬ್ಬಿಗಳ ಮೇಲೆ ಸಾವಿನ ಶಸ್ತ್ರಗಳ ಪ್ರಹಾರ ತರವಲ್ಲ.
ಬಾಂಬು ಬಂದೂಕುಗಳಿಗೆ ತುಕ್ಕು ಹಿಡಿಯಲಿ
ಗಲ್ಲಿ ಮೊಹಲ್ಲಾ, ಎಲ್ಲೆಡೆಗೂ ಶಾಂತಿ ನೆಲೆಸಲಿ
ಸತತ ಸುರಿಯಲಿ ಪ್ರೀತಿಯ ಸೋನೆ ಮಳೆ
ದ್ವೇಷದ ಉರಿ ಬೆಂಕಿಯನು ನಂದಿಸಲಿ
ಮನುಜ ಪ್ರೀತಿಯ ಬಳ್ಳಿ ಹಬ್ಬಿ ಹರಡಲಿ.
ತೆಗೆದುಬಿಡಿ ಹುಸಿ ರಾಷ್ಟ್ರಪ್ರೇಮದ ಮುಖವಾಡ
ಲೇಖಕರೆಂದೂ ಗನ್ನು ಹಿಡಿಯಲಿಲ್ಲ ಕೈಯಲಿ
ಯಾವ ಕೊಲೆಯನೂ ಮಾಡಲಿಲ್ಲ
ಕಳಚಿಟ್ಟು ಬನ್ನಿ ಮುಖವಾಡಗಳ
ಅವಳು ಅಮ್ಮನ ಪ್ರೀತಿಯ ಸಾವು ಜಯಿಸಿದ ಮಗಳು,
ಸೆಕ್ಯುಲರ್ ಸ್ತ್ರೀವಾದಿ ಧ್ವನಿ ,ನೋಂದ ಜನಗಳ ಕೊರಳು.
ಅವಳು ಶೋಷಿತರ ಸಂಗಾತಿ ಸಾಂತ್ವನದ ಅಭಿವ್ಯಕ್ತಿ
ನಮ್ಮಳಗಿನ ಸಾಕ್ಷಿ ಪ್ರಜ್ಞೆಯ ಪ್ರತಿಫಲನ
ಹಸಿ ಗಾಯ ಮಾಯಲು ಮುಲಾಮು ಹಚ್ಚಬೇಕಿದೆ
ಕೊಚ್ಚಿ ಹೋಗಲಿ ಈ ಬಲಿಪೀಠಗಳು
ಸಾವಿಲ್ಲದ ಸಾವಿರಾರು ಗೌರಿಯರು ಹುಟ್ಟಿ.
ಅಳುವ ಕಂದನ ರಮಿಸಲು ತೊಟ್ಟಿಲು ತೂಗಿ
ತಟ್ಟಿ ಮಲಗಿಸಲು ಕಂದನ
ಕಾಪಿಡುವ ಎದೆಯ ಜೋಗುಳ ಹಾಡಿ
ಬರುವ ನಾಳೆಗಳು ಜೋಪಾನ
ಅವಳೆದೆಗೆ ನಾಟಿದ ಮೂರು ಗುಂಡುಗಳು
ಕುಡಿಗಳಾಗಿ ಎದೆಹಾಲು ಕುಡಿದು
ಸಾವಿಲ್ಲದ ಕೇಡಿಲ್ಲದ ಲೋಕಕ್ಕಾಗಿ
ಹಾರೈಸಿ ಹಾದಿಯಲಿ ಕಾದು ನಿಂತು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.