Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನೇಪಾಳ: ನಮ್ಮ ಭುಜದ ಮೇಲೆ ನಾವೇ ಮಾಡಿಕೊಂಡ...

ನೇಪಾಳ: ನಮ್ಮ ಭುಜದ ಮೇಲೆ ನಾವೇ ಮಾಡಿಕೊಂಡ ಗಾಯ

ಭಾರತವು ಚೀನಾವನ್ನು ತನ್ನ ಪ್ರತಿಸ್ಪರ್ಧಿ, ಶತ್ರುವೆಂದು ಭಾವಿಸಬಾರದು’ ಎಂಬ ಹೇಳಿಕೆಯನ್ನು ಇತ್ತೀಚೆಗೆ ಭಾರತದ ಹಿರಿಯ ಸೇನಾಧಿಕಾರಿಯೊಬ್ಬರು ನೀಡಿದರು. ಕೆಲವು ರಾಜಕಾರಣಿಗಳ ವಾಚಾಳಿತನದ ದೆಸೆಯಿಂದಾಗಿ ಭಾರತ-ಚೀನಾ ನಡುವಿನ ಸಂಬಂಧ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನಾಡಿದ್ದರು. ಭಾರತವು ಚೀನಾದ ಜೊತೆಗೆ ಸಂಬಂಧವನ್ನು ಉತ್ತಮವಾಗಿಟ್ಟುಕೊಳ್ಳುವುದು ಎಲ್ಲ ದೃಷ್ಟಿಯಿಂದಲೂ ಅತ್ಯಗತ್ಯವಾಗಿದೆ ಮತ್ತು ವಿದೇಶಾಂಗ ಇಲಾಖೆಯೂ ಚೀನಾ ವಿಷಯದಲ್ಲಿ ಸದಾ ಜಾಗರೂಕವಾದ ಹೆಜ್ಜೆಗಳನ್ನು ಇಡುತ್ತಾ ಬಂದಿದೆ. ಚೀನಾದಿಂದ ಹಲವು ಬಾರಿ ಅತಿಕ್ರಮಗಳು ನಡೆದರೂ ಭಾರತ ತಾಳ್ಮೆಯಿಂದಲೇ ಅವನ್ನು ಎದುರಿಸಿದೆ. ಇದೇ ಸಂದರ್ಭದ

ವಾರ್ತಾಭಾರತಿವಾರ್ತಾಭಾರತಿ1 Dec 2015 3:04 PM IST
share
ನೇಪಾಳ: ನಮ್ಮ ಭುಜದ ಮೇಲೆ ನಾವೇ ಮಾಡಿಕೊಂಡ ಗಾಯ

‘‘ಭಾರತವು ಚೀನಾವನ್ನು ತನ್ನ ಪ್ರತಿಸ್ಪರ್ಧಿ, ಶತ್ರುವೆಂದು ಭಾವಿಸಬಾರದು’ ಎಂಬ ಹೇಳಿಕೆಯನ್ನು ಇತ್ತೀಚೆಗೆ ಭಾರತದ ಹಿರಿಯ ಸೇನಾಧಿಕಾರಿಯೊಬ್ಬರು ನೀಡಿದರು. ಕೆಲವು ರಾಜಕಾರಣಿಗಳ ವಾಚಾಳಿತನದ ದೆಸೆಯಿಂದಾಗಿ ಭಾರತ-ಚೀನಾ ನಡುವಿನ ಸಂಬಂಧ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನಾಡಿದ್ದರು. ಭಾರತವು ಚೀನಾದ ಜೊತೆಗೆ ಸಂಬಂಧವನ್ನು ಉತ್ತಮವಾಗಿಟ್ಟುಕೊಳ್ಳುವುದು ಎಲ್ಲ ದೃಷ್ಟಿಯಿಂದಲೂ ಅತ್ಯಗತ್ಯವಾಗಿದೆ ಮತ್ತು ವಿದೇಶಾಂಗ ಇಲಾಖೆಯೂ ಚೀನಾ ವಿಷಯದಲ್ಲಿ ಸದಾ ಜಾಗರೂಕವಾದ ಹೆಜ್ಜೆಗಳನ್ನು ಇಡುತ್ತಾ ಬಂದಿದೆ. ಚೀನಾದಿಂದ ಹಲವು ಬಾರಿ ಅತಿಕ್ರಮಗಳು ನಡೆದರೂ ಭಾರತ ತಾಳ್ಮೆಯಿಂದಲೇ ಅವನ್ನು ಎದುರಿಸಿದೆ. ಇದೇ ಸಂದರ್ಭದಲ್ಲಿ ಭಾರತ ಚೀನಾದ ಜೊತೆಗೆ ಪ್ರದರ್ಶಿಸುವ ಪ್ರಬುದ್ಧತೆಯನ್ನು ನೆರೆಯ ಉಳಿದ ಪುಟ್ಟ ರಾಷ್ಟ್ರಗಳ ಜೊತೆಗೆ ಪಾಲಿಸುತ್ತಿಲ್ಲವೇನೋ ಎಂಬ ಅನುಮಾನ ಕಾಡುತ್ತಿದೆ. ಪಾಕಿಸ್ತಾನದ ಜೊತೆಗೆ ವ್ಯವಹರಿಸುವಾಗ ನಮ್ಮ ರಾಜಕಾರಣಿಗಳು ಹೆಚ್ಚು ವಾಚಾಳಿಗಳಾಗಿರುತ್ತಾರೆ ಮತ್ತು ನೇರವಾಗಿ ಯುದ್ಧದ ಮಾತುಗಳನ್ನೇ ಆಡಲು ಶುರು ಮಾಡುತ್ತಾರೆ. ಭಾರತ ಚೀನಾದ ಜೊತೆಗೆ ಯಾವತ್ತೂ ಹೀಗೆ ವ್ಯವಹರಿಸಿಲ್ಲ. ಇತ್ತ ಶ್ರೀಲಂಕಾಕ್ಕೂ ಭಾರತದ ಕುರಿತಂತೆ ಅಸಮಾಧಾನವಿದೆ. ತನ್ನ ಆಂತರಿಕ ವಿಷಯಗಳಲ್ಲಿ ಭಾರತ ಮೂಗು ತೂರಿಸುತ್ತಿರುವುದು ಅದರ ಸಿಟ್ಟಿಗೆ ಕಾರಣ. ಇದೀಗ ನೇಪಾಳದ ವಿಷಯದಲ್ಲೂ ಇದು ಮುಂದುವರಿದಿದೆ. ನೂತನ ಸರಕಾರ ಅಧಿಕಾರಕ್ಕೆ ಬಂದ ಬಳಿಕ ನೇಪಾಳ-ಭಾರತದ ಸಂಬಂಧ ತೀವ್ರವಾಗಿ ಹದಗೆಟ್ಟಿದೆ. ನೇಪಾಳದ ರಾಜಕೀಯದಲ್ಲಿ ನೇರವಾಗಿ ಹಸ್ತಕ್ಷೇಪ ನಡೆಸಲು ಯತ್ನಿಸುತ್ತಿರುವುದು, ಅಲ್ಲಿನ ಜಾತ್ಯತೀತ ಪ್ರಜಾಸತ್ತೆಯನ್ನು ದುರ್ಬಲಗೊಳಿಸಲು ಹವಣಿಸುತ್ತಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ನೇಪಾಳದ ಜೊತೆಗೆ ಭಾರತ ದೊಡ್ಡಣ್ಣನ ವರ್ತನೆಯನ್ನು ಪ್ರದರ್ಶಿಸುತ್ತಿದೆ ಎನ್ನುವುದು ಆ ಪುಟ್ಟ ದೇಶದ ಆರೋಪವಾಗಿದೆ.

 ಭಾರತ-ನೇಪಾಳದ ಸಂಬಂಧ ಇಂದು ನಿನ್ನೆಯದಲ್ಲ. ಅದರಲ್ಲಿ ಒಳ್ಳೆಯದೂ ಇದೆ. ಕೆಟ್ಟದೂ ಇದೆ. ಭಾರತದ ಸಂಘಪರಿವಾರದ ಜನರು ನೇಪಾಳವನ್ನು ‘ವಿಶ್ವದ ಏಕೈಕ ಹಿಂದೂರಾಷ್ಟ್ರ’ ಎಂದು ಹೇಳಿಕೊಳ್ಳುತ್ತಿದ್ದರು. ಮಾತ್ರವಲ್ಲ, ಭಾರತದ ಪುರೋಹಿತ ಶಾಹಿ ವ್ಯವಸ್ಥೆ ನೇಪಾಳದ ಸಾಮಾಜಿಕ ಜೀವನದ ಮೇಲೂ ತನ್ನದೇ ಆದ ದುಷ್ಪರಿಣಾಮಗಳನ್ನು ಬೀರಿತ್ತು. ಅಲ್ಲಿನ ದೊರೆಗಳು ಮತ್ತು ಇಲ್ಲಿನ ವೈದಿಕರ ನಡುವಿನ ಸಂಬಂಧದ ಪರಿಣಾಮವಾಗಿ ನೇಪಾಳ ಬಹಳಷ್ಟು ಅನುಭವಿಸಿದೆ. ನೇಪಾಳ ಪ್ರಜಾಸತ್ತಾತ್ಮಕವಾಗದಂತೆ ಭಾರತ ತನ್ನದೇ ಆದ ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತ ಬಂದಿದೆ ಎನ್ನುವ ಆರೋಪಗಳೂ ಇವೆ. ಅಲ್ಲಿನ ದೊರೆಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತ ಅದನ್ನು ಹಿಂದೂರಾಷ್ಟ್ರವಾಗಿ ಉಳಿಸಲು ಇಲ್ಲಿನ ಬಲಪಂಥೀಯ ರಾಜಕೀಯ ಶಕ್ತಿಗಳು ಕೆಲಸ ಮಾಡಿರುವುದರ ಬಗ್ಗೆಯೂ ಆರೋಪಗಳಿವೆ. ಮುಂಬೈಯಲ್ಲಿನ ವೇಶ್ಯಾವಾಟಿಕೆಯಲ್ಲಿ ನೇಪಾಳದ ಅಸಹಾಯಕ ಹೆಣ್ಣುಮಕ್ಕಳ ಸಂಖ್ಯೆ ಬಹು ದೊಡ್ಡದಿದೆ. ಉಭಯ ದೇಶಗಳ ನಡುವೆ ಹರಿಯುವ ನದಿಗಳೂ ಸಂಬಂಧಗಳಿಗೆ ಹುಳಿ ಹಿಂಡಲು ಕಾರಣವಾಗಿವೆ. ಭಾರತದ ಉದ್ಯಮಿಗಳು ನೇಪಾಳವನ್ನು ಲೂಟಿ ಹೊಡೆಯುತ್ತಿದ್ದಾರೆ ಎನ್ನುವ ಅಸಮಾಧಾನವನ್ನೂ ಅಲ್ಲಿನ ಯುವಜನತೆ ಹೊಂದಿದ್ದಾರೆ. ಎಲ್ಲಕ್ಕಿಂತ ಅಪಾಯಕಾರಿ ಅಂಶವೆಂದರೆ ಭಾರತದ ಬಲಪಂಥೀಯ ಉಗ್ರವಾದ ನೇಪಾಳದ ನಂಟನ್ನು ಹೊಂದಿದೆ. ಭಾರತದಲ್ಲಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಂಡವರು ನೇಪಾಳವನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ದೂರೂ ಇದೆ. ಇತ್ತೀಚೆಗೆ ನೇಪಾಳದಲ್ಲಿ ಭೂಕಂಪವಾದಾಗ ಇಡೀ ನೇಪಾಳವನ್ನು ತಾನು ರಕ್ಷಿಸುತ್ತಿದ್ದೇನೆ ಎನ್ನುವ ಭಾರತದ ದುರಹಂಕಾರವನ್ನು ಅಲ್ಲಿನ ಜನರು ಬಹಿರಂಗವಾಗಿ ಖಂಡಿಸಿದರು. ‘ನಿಮ್ಮ ನೆರವು ಬೇಕಾಗಿಲ್ಲ, ಇಲ್ಲಿಂದ ತೊಲಗಿ’ ಎಂಬಂತಹ ಘೋಷಣೆಗಳನ್ನು ನೇಪಾಳ ಕೂಗಬೇಕಾಯಿತು. ಪ್ರಧಾನಿ ನರೇಂದ್ರ ಮೋದಿಯವರ ಅತಿ ರಂಜಕ ಮಾತುಗಳು ಕೂಡ ನೇಪಾಳದ ಜನರನ್ನು ಸಿಟ್ಟಿಗೆಬ್ಬಿಸಿದ್ದವು. ಇವೆಲ್ಲದರ ಬೆನ್ನಿಗೆ, ನೇಪಾಳದ ಸಂವಿಧಾನ ತನ್ನ ಮೂಗಿನ ನೇರಕ್ಕಿರಬೇಕು ಎನ್ನುವ ಮೋದಿ ಸರಕಾರದ ಹಂಬಲಿಕೆ ಉಭಯ ದೇಶಗಳ ನಡುವಿನ ಸಂಬಂಧ ತೀರಾ ಹಳಸುವುದಕ್ಕೆ ಕಾರಣವಾಯಿತು. ನೇಪಾಳ ಇತ್ತೀಚೆಗೆ ಜಾತ್ಯತೀತ ಸಂವಿಧಾನವನ್ನು ಒಪ್ಪಿಕೊಂಡಿತು. ಆದರೆ ನೇಪಾಳವನ್ನು ನೆಚ್ಚಿಕೊಂಡಿರುವ ಭಾರತದ ವೈದಿಕ ಶಕ್ತಿಗಳಿಗೆ ಇದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಭಾರತ ಜಾತ್ಯತೀತವಾಗಿರುವುದೇ ಇಲ್ಲಿನ ರಾಜಕಾರಣಿಗಳಿಗೆ ಇಷ್ಟವಿಲ್ಲ. ಹೀಗಿರುವಾಗ ಹಿಂದೂ ರಾಷ್ಟ್ರವೆಂದು ಕರೆಸಿಕೊಂಡಿರುವ ನೇಪಾಳದ ಜನರು ಜಾತ್ಯತೀತ ಸಂವಿಧಾನವನ್ನು ಅಪ್ಪಿಕೊಳ್ಳುವುದು ಸಹಜವಾಗಿಯೇ ಕೇಸರಿ ರಾಜಕಾರಣಿಗಳಿಗೆ ಸಿಟ್ಟು ತರಿಸಿದೆ. ಆರೆಸ್ಸೆಸ್ ಸಹಿತ ಸಂಘಪರಿವಾರ ಸಂಘಟನೆಗಳು ನೇಪಾಳದ ಮೇಲೆ ಒತ್ತಡ ಹೇರುವುದಕ್ಕೆ ಕಾರಣವಾಗಿವೆ. ನೆರೆಯ ದೇಶ ಜಾತ್ಯತೀತ ಪ್ರಜಾಸತ್ತಾತ್ಮಕ ದೇಶವಾಗಿ ಪರಿವರ್ತನೆಗೊಂಡಿರುವುದು ಭಾರತಕ್ಕೆ ಸಂತೋಷ ತರಬೇಕಾಗಿತ್ತು. ಇಂದು ಭಾರತ ದೇಶ ಪಾಕಿಸ್ತಾನ ಜಾತ್ಯತೀತವಾಗಿರಬೇಕು ಎಂದು ಬಯಸುತ್ತಿದೆ. ಪಾಕಿಸ್ತಾನ ಜಾತ್ಯತೀತವಾದಷ್ಟೂ ಉಭಯ ದೇಶಗಳ ನಡುವಿನ ಸಂಬಂಧ ಉತ್ತಮವಾಗುತ್ತ ಹೋಗುತ್ತದೆ. ಆದರೆ ಇದೇ ಸಂದರ್ಭದಲ್ಲಿ ನೇಪಾಳ ಜಾತ್ಯತೀತ ರಾಷ್ಟ್ರವಾಗಬಾರದು ಎಂದು ಬಯಸುತ್ತದೆ. ಭಾರತದ ಈ ದಂದ್ವ ವಿದೇಶಾಂಗ ನೀತಿಯೇ ಉಭಯ ದೇಶಗಳ ನಡುವೆ ವಿಷಮತೆಯನ್ನು ಬಿತ್ತುವುದಕ್ಕೆ ಕಾರಣವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X