ಝುಕರ್‌ಬರ್ಗ್ ದತ್ತಿಯ ಸುತ್ತ ಸಂಶಯದ ಹುತ್ತ
ವಾಸ್ತವವಾಗಿ ಅವರ ಲೋಕೋಪಕಾರದ ವಾಹಕ ಚಾನ್ ಝುಕರ್‌ಬರ್ಗ್ ಅವರ ಎಲ್‌ಎಲ್‌ಸಿ ಪ್ರತಿಷ್ಠಾನ. ಇದು ಝುಕರ್‌ಬರ್ಗ್ ಕುಟುಂಬವೇ ನಿರ್ವಹಿಸುತ್ತಿರುವ ಪ್ರತಿಷ್ಠಾನವಾಗಿದ್ದು, ಈ ಪ್ರತಿಷ್ಠಾನದ ಮೂಲಕವೇ ನಿರೀಕ್ಷಿತ ಭವಿಷ್ಯಕ್ಕಾಗಿ ಝುಕರ್‌ಬರ್ಗ್ ೇಸ್‌ಬುಕ್ ನಿಯಂತ್ರಿಸುತ್ತಿದ್ದಾರೆ.
ೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ಹಾಗೂ ಪತ್ನಿ ಪ್ರಿಸಿಲ್ಲಾ ಚಾನ್ ತಮ್ಮ 45 ಶತಕೋಟಿ ಡಾಲರ್ ಸಂಪತ್ತಿನ ಪೈಕಿ ಶೇಕಡ 99ನ್ನು ದತ್ತಿ ನೀಡುವ ವಾಗ್ದಾನ ಮಾಡಿದ್ದನ್ನು ನೀವೆಲ್ಲ ಕೇಳಿರಬಹುದು. ವಿಶ್ವದ ಅತಿದೊಡ್ಡ ಸೇವಾಕಾರ್ಯಕ್ಕೆ ಮುಂದಿನ 45 ವರ್ಷಗಳ ಅವಗೆ ಸಾಕಷ್ಟು ಹಣ ನೀಡಲು ಮುಂದಾಗಿದ್ದಾರೆ. ಆದರೆ ವಾಸ್ತವವಾಗಿ ಅವರು ತಮಗೇ ದಾನ ಮಾಡಿಕೊಳ್ಳುತ್ತಿದ್ದಾರೆ. ಅದು ಹೇಗೆ ಎನ್ನುವುದನ್ನು ಇಲ್ಲಿ ನೋಡಿ:
ವಾಸ್ತವವಾಗಿ ಅವರ ಲೋಕೋಪಕಾರದ ವಾಹಕ ಚಾನ್ ಝುಕರ್‌ಬರ್ಗ್ ಅವರ ಎಲ್‌ಎಲ್‌ಸಿ ಪ್ರತಿಷ್ಠಾನ. ಇದು ಝುಕರ್‌ಬರ್ಗ್ ಕುಟುಂಬವೇ ನಿರ್ವಹಿಸುತ್ತಿರುವ ಪ್ರತಿಷ್ಠಾನವಾಗಿದ್ದು, ಈ ಪ್ರತಿಷ್ಠಾನದ ಮೂಲಕವೇ ನಿರೀಕ್ಷಿತ ಭವಿಷ್ಯಕ್ಕಾಗಿ ಝುಕರ್‌ಬರ್ಗ್ ೇಸ್‌ಬುಕ್ ನಿಯಂತ್ರಿಸುತ್ತಿದ್ದಾರೆ.
ಇದರ ಅರ್ಥ ಇಷ್ಟೇ. ಮಾರ್ಕ್ ಝುಕರ್‌ಬರ್ಗ್ ಅವರು ತಮ್ಮ ೇಸ್‌ಬುಕ್ ಸಂಗ್ರಹದ ಒಡೆತನವನ್ನು ಬಂಡವಾಳ ಲಾಭ ತೆರಿಗೆ ಇಲ್ಲದೇ ವರ್ಗಾಯಿಸುತ್ತಿದ್ದಾರೆ. ಅವರ ೌಂಡೇಷನ್ ಅವರಿಗಿಂತ ಹೆಚ್ಚು ಕಾಲ ಬಾಳಿ, ಅವರ ಮಕ್ಕಳು, ಮೊಮ್ಮಕ್ಕಳು,ಮರಿಮಕ್ಕಳು ಅದನ್ನು ಮುನ್ನಡೆಸುವುದು ಹಾಗೂ ಅದರ ಮೇಲೆ ಯಾವ ಆಸ್ತಿ ತೆರಿಗೆಯೂ ಬೀಳಬಾರದು ಎನ್ನುವುದು ಬಹುಶಃ ಅವರ ದೂರಾಲೋಚನೆ.
ೇಸ್‌ಬುಕ್ ಸಾರ್ವಜನಿಕ ಸಂಪರ್ಕಾಕಾರಿ, ಹೊಸ ಸಂಸ್ಥೆಯನ್ನು ಎಲ್‌ಎಲ್‌ಸಿ (ನಿಯಮಿತ ಹೊಣೆಗಾರಿಕೆ ಕಂಪೆನಿ) ಆಗಿ ರೂಪಿಸಲಾಗಿದೆಯೇ ವಿನಃ ಚಾರಿಟೇಬಲ್ ಟ್ರಸ್ಟ್ ಆಗಿ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಸಾಮಾನ್ಯವಾಗಿ ಚಾರಿಟೇಬಲ್ ಟ್ರಸ್ಟ್‌ಗಳು ತಮ್ಮ ಹಣವನ್ನು ಸೇವಾ ಕಾರ್ಯಕ್ಕಾಗಿ ಬಳಸಬೇಕು. ಆದರೆ ಚಾನ್ ಝುಕರ್‌ಬರ್ಗ್ ಅವರ ಹೊಸ ಎಲ್‌ಎಲ್‌ಸಿ, ತಾನು ಇಷ್ಟಪಟ್ಟ ಉದ್ದೇಶಕ್ಕೆ ಈ ಸಂಪತ್ತು ವಿನಿಯೋಗಿಸಲು ಅವಕಾಶವಿದೆ. ಅಂದರೆ ಖಾಸಗಿ, ಲಾಭದ ಉದ್ದೇಶದ ಹೂಡಿಕೆ ಸೇರಿದಂತೆ ಯಾವ ಉದ್ದೇಶಕ್ಕೆ ಬೇಕಾದರೂ ಸಂಪತ್ತನ್ನು ವಿನಿಯೋಗಿಸಬಹುದು.
ಸೇವೆ ಕೂಡಾ ಈ ಎಲ್‌ಎಲ್‌ಸಿಯ ಒಂದು ಉದ್ದೇಶವಾಗಿರಬಹುದು. ಆದರೆ ಅದೊಂದೇ ಉದ್ದೇಶ ಅಲ್ಲ ಎನ್ನುವುದು ಸ್ಪಷ್ಟ. ೇಸ್‌ಬುಕ್ ಎಸ್‌ಇಸಿ ೈಲಿಂಗ್ ಅನ್ವಯ ಈ ಸಂಪತ್ತು ಸಮಾಜಸೇವೆ, ಸಾರ್ವಜನಿಕ ಅಭಿಯಾನ ಹಾಗೂ ಸಾರ್ವಜನಿಕ ಹಿತದ ಇತರ ಕಾರ್ಯಗಳಿಗೆ ವಿನಿಯೋಗವಾಗಲಿದೆ. ಎಲ್‌ಎಲ್‌ಸಿಯ ಒಂದು ಅಂಥ ಚಟುವಟಿಕೆ ಬಂಡವಾಳ ಹೂಡಿಕೆ. ೇಸ್‌ಬುಕ್ ನಿನ್ನೆ ಬಿಡುಗಡೆ ಮಾಡಿರುವ ಹೇಳಿಕೆಯ ಮುಖ್ಯಾಂಶ ಹೀಗಿದೆ:
‘‘ಚಾನ್ ಝುಕರ್‌ಬರ್ಗ್ ಅವರ ಹೊಸ ಉಪಕ್ರಮ ಸ್ವಯಂಸೇವಾ ಸಂಸ್ಥೆಗಳಿಗೆ ನೆರವು ನೀಡುವುದು, ಖಾಸಗಿ ಹೂಡಿಕೆ ಮತ್ತು ನೀತಿ ಸಂವಾದಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತನ್ನ ಗುರಿಯನ್ನು ಸಾಕಾರಗೊಳಿಸುವ ಪ್ರಯತ್ನ ಮಾಡಲಿದೆ. ಅಗತ್ಯವಿರುವ ಕ್ಷೇತ್ರಗಳಲ್ಲಿ ಧನಾತ್ಮಕ ಪರಿಣಾಮ ಬೀರುವುದು ನಮ್ಮ ಉದ್ದೇಶ. ಕಂಪೆನಿಗಳಲ್ಲಿ ಮಾಡಿದ ಹೂಡಿಕೆಯಿಂದ ಬಂದ ಲಾಭವನ್ನು ಗುರಿಸಾಧನೆ ನಿಟ್ಟಿನಲ್ಲಿ ಮತ್ತಷ್ಟು ಕೆಲಸಗಳಿಗೆ ನೆರವು ನೀಡಲಾಗುವುದು.’’
ಅವರ ವಾಗ್ದಾನದ ಬಗ್ಗೆ ಇನ್ನೊಂದು ವಿಷಯ ತಿಳಿದುಕೊಳ್ಳಬೇಕು:
ೇಸ್‌ಬುಕ್ ಸಂಸ್ಥಾಪಕ ತಮ್ಮಲ್ಲಿರುವ ೇಸ್‌ಬುಕ್ ಷೇರುಗಳ ಶೇಕಡ 99ನ್ನು ಒಂದೇ ಬಾರಿ ನೀಡುವುದಿಲ್ಲ. ತಮ್ಮ ಜೀವಿತಾವಯಲ್ಲಿ ಹಂತಹಂತವಾಗಿ ನೀಡುತ್ತಾರೆ. ಇದನ್ನು ‘ಬೀಸ್ಟ್ ಪೀಸ್’ನಲ್ಲಿ ಮೈಕೆಲ್ ಮಯೆಲ್ಲೊ ಗುರುತಿಸಿದ್ದಾರೆ.
ಮಾರ್ಕ್ ಅವರು ತಮ್ಮ ೌಂಡೇಷನ್‌ಗೆ ನೀಡುವ ಕೊಡುಗೆಯ ನ್ಯಾಯಬದ್ಧ ಮೌಲ್ಯವನ್ನು ತಮ್ಮ ಆ ವರ್ಷದ ತೆರಿಗೆ ಅನ್ವಯಿಸುವ ಆದಾಯದಿಂದ ಕಳೆಯುತ್ತಾರೆ. ಮಾರ್ಕ್ ಅವರಂಥ ದಾನಿಗಳಿಗೆ ಇಂಥ ಕೊಡುಗೆಯಿಂದ ಆಗುವ ಲಾಭದ ಅರಿವು ಇದೆ. ಅವರ ಕೊಡುಗೆಯ ಮೂರನೆ ಒಂದರಷ್ಟು ತೆರಿಗೆ ವಿನಾಯಿತಿ ಅವರಿಗೆ ಸಿಗುತ್ತದೆ. ಉದಾಹರಣೆಗೆ ಅವರು ನೂರು ಕೋಟಿ ಡಾಲರ್ ಸಂಪತ್ತನ್ನು ೌಂಡೇಷನ್‌ಗೆ ವರ್ಗಾಯಿಸಲು ಬಯಸಿದರೆ, 333 ದಶಲಕ್ಷ ಡಾಲರ್ ತೆರಿಗೆ ಲಾಭಕ್ಕೆ ಅರ್ಹರಾಗುತ್ತಾರೆ.
ಹಾಲಿ ಇರುವ ಸ್ವಯಂಸೇವಾ ಸಂಸ್ಥೆಗಳಿಗೆ ಕೊಡುವ ಬದಲಾಗಿ, ಇತರ ವ್ಯಾಪಾರಿಗಳು ಇತ್ತೀಚಿನ ದಿನಗಳಲ್ಲಿ ಏನು ಮಾಡಿದ್ದಾರೋ ಮಾರ್ಕ್ ಕೂಡಾ ಅದನ್ನೇ ಮಾಡಿದ್ದಾರೆ. ಅವರ ಅದೃಷ್ಟವನ್ನು ಅವರದ್ದೇ ಸಂಸ್ಥೆಯತ್ತ ಹೆಚ್ಚು ಇಳಿಬಿಡುವುದು ತೊಂದರೆಗೆ ಕಾರಣವಾಗಬಹುದು.
ಅಲೆಗ್ಸಾಂಡರ್ ಸಿ.ಕ್ಾಮನ್, ಹಫಿಂಗ್‌ಟನ್ ಪೋಸ್ಟ್‌ನಲ್ಲಿ ಹೇಗೆ ಎಂಬುದನ್ನು ವಿವರಿಸಿದ್ದಾರೆ.
‘‘ನಿಯಂತ್ರಣದ ಆಕಾಂಕ್ಷೆಯಿಂದಾಗಿ ಸೇವಾ ಚಟುವಟಿಕೆಗಳಿಗೆ ತೆಗೆದಿರಿಸಿದ ದೊಡ್ಡ ಮೊತ್ತ ಹಾಗೆಯೇ ಉಳಿದಿದೆ. ಕಳೆದ ವರ್ಷವೇ 358 ಶತಕೋಟಿ ಡಾಲರ್ ನಿ ಬಳಕೆಯಾಗದೆ ಉಳಿದಿದೆ. ಇನ್ನೊಂದೆಡೆ 15 ಲಕ್ಷ ನೋಂದಾಯಿತ ಸ್ವಯಂಸೇವಾ ಸಂಸ್ಥೆಗಳಿವೆ. ಪ್ರತಿ ಸಲವೂ ಒಂದು ಕಂಪೆನಿ ಅಥವಾ ಶ್ರೀಮಂತ ವ್ಯಕ್ತಿ ಬದಲಾವಣೆ ಬೇಕೆಂದಾಗೆಲ್ಲ ಸ್ವಯಂಸೇವಾ ಸಂಸ್ಥೆಯನ್ನು ಹುಟ್ಟುಹಾಕುವುದರಿಂದ ಲಭ್ಯವಿರುವ ಸಂಪನ್ಮೂಲ ಕಡಿಮೆಯಾಗುವುದಲ್ಲದೇ ಯಾವ ಸಾಧನೆಯೂ ಆಗುವುದಿಲ್ಲ’’
‘‘ನೀವು ಲಾಭ ಗಳಿಕೆ ದಂಧೆಯಲ್ಲಿ ಯಶಸ್ವಿಯಾದ ಮಾತ್ರಕ್ಕೆ, ಲಾಭರಹಿತ ಉದ್ದೇಶದ ಸಂಸ್ಥೆಗಳ ಮಂದಿ ಮೂರ್ಖರಲ್ಲ. ನೀವು ಹೇಗೆ ಸೇವೆ ಮಾಡಬೇಕು ಎನ್ನುವುದನ್ನು ತೋರಿಸುವುದೂ ಬೇಕಿಲ್ಲ’’ ಎಂದು ‘ಸೋಷಿಯಲ್ ಗುಡ್ ಡಾಟಾ ಸರ್ವೀಸಸ್’ನ ಆಡಳಿತ ನಿರ್ದೇಶಕ ಕೆನ್ ಬರ್ಗರ್ ಕಳೆದ ಅಕ್ಟೋಬರ್‌ನಲ್ಲಿ ‘ಹಫಿಂಗ್ಟನ್ ಪೋಸ್ಟ್’ ಜತೆ ಮಾತನಾಡುತ್ತಾ ಅಭಿಪ್ರಾಯಪಟ್ಟಿದ್ದರು. ಹಿಂದೆ ಅವರು ಇಂಥ ಸೇವಾ ಸಂಸ್ಥೆ ನಡೆಸುತ್ತಿದ್ದರು. ಇಂದು ಅತ್ಯಂತ ಸಂಕೀರ್ಣ ಹಾಗೂ ನಾಜೂಕಾದ ಸ್ವಯಂಸೇವಾ ವಲಯವನ್ನು ಕಾಣುತ್ತಿದ್ದೇವೆ. ಇತರರ ಜತೆ ಕೈಜೋಡಿಸುವುದು ಉತ್ತಮ ಮಾರ್ಗ.
ಕೊನೆಯ ಭಾಗ ಎಲ್ಲಕ್ಕಿಂತ ಪ್ರಮುಖ.
ಒಟ್ಟು ಸಾರಾಂಶವೆಂದರೆ ಝುಕರ್‌ಬರ್ಗ್ ಹಣ ಯಾವ ಸೇವಾ ಉದ್ದೇಶಕ್ಕೂ ಹೋಗುವುದಿಲ್ಲ. ಅವರದ್ದೇ ಎಲ್‌ಎಲ್‌ಸಿಗೆ ವರ್ಗಾವಣೆಯಾಗುತ್ತದೆ. ಅವರ ವೈಯಕ್ತಿಕ ಆಸ್ತಿಯನ್ನು ೌಂಡೇಷನ್‌ಗೆ ವರ್ಗಾಯಿಸುವ ಮೂಲಕ ಇದು ಅವರಿಗೆ ತೆರಿಗೆ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ತಮಗೆ ತೋಚಿದ್ದನ್ನು ಮಾಡಲು ಝುಕರ್‌ಬರ್ಗ್ ಅವರಿಗೆ ತೆರಿಗೆ ಲಾಭ ಬೇಕಾಗಿಲ್ಲ. ಅವರು ತಮಗೆ ಬೇಕೆನಿಸಿದ್ದನ್ನು ಮಾಡಲು ಮುಕ್ತರು.
ಆದರೆ ಅವರು ತೆರಿಗೆ ಲಾಭ ಪಡೆಯುತ್ತಾರೆ ಹಾಗೂ ಆಸ್ತಿಯನ್ನು ಯೋಜನಾಬದ್ಧವಾಗಿ ಮಾಡಿದ್ದಕ್ಕೂ ಲಾಭ ಪಡೆಯುತ್ತಾರೆ. ತಮ್ಮ ಷೇರನ್ನು ಬಿಟ್ಟುಕೊಟ್ಟ ಬಳಿಕವೂ ಕಂಪೆನಿಯ ಮೇಲೆ ಅಕಾರ ಹೊಂದಿರುತ್ತಾರೆ.
ಮೈಕೆಲ್ ಮಿಯೆಲ್ಲೊ ‘ಬೀಸ್ಟ್ ಪೀಸ್‌ನಲ್ಲಿ ಹೇಳಿದಂತೆ, ತಮ್ಮ ೌಂಡೇಷನ್‌ಗೆ ನೆರವು ನೀಡಲು ಝುಕರ್‌ಬರ್ಗ್ ಅವರಂಥ ಮಂದಿಗೆ ನಾವು ಹಣ ನೀಡುವುದಾದರೆ, ಶ್ರೀಮಂತರಿಗೆ ನೆರವು ನೀಡುತ್ತಿದ್ದೇವೆ ಎಂದೇ ಅರ್ಥ. ಜತೆಗೆ ಅವರ ಸೇವಾಕಾರ್ಯಕ್ಕಾಗಿ ಅವರನ್ನು ಹಾಡಿಹೊಗಳುತ್ತೇವೆ.
ಇದಕ್ಕೆ ಪೂರಕವಾಗಿ ಅನಿಲ್ ಡ್ಯಾಷ್ ತಮ್ಮ ‘ಮೀಡಿಯಮ್ ಪೀಸ್’ನಲ್ಲಿ ಹೇಳುವಂತೆ, ಮಾರ್ಕ್ ಅವರ ಹಿಂದಿನ ಹಾಗೂ ಭವಿಷ್ಯದ ಲೋಕೋಪಕಾರಿ ನಿರ್ಧಾರವನ್ನು ವಿಮರ್ಶಿಸಿ, 45 ಶತಕೋಟಿ ಡಾಲರ್ ಒಳ್ಳೆಯ ಉದ್ದೇಶಕ್ಕೆ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಏಕೆಂದರೆ ಈ ದೋಷಯುಕ್ತ ಹಂಚಿಕೆ ಉದ್ದೇಶ ಅದನ್ನು ವ್ಯರ್ಥಗೊಳಿಸುವುದು.
ಉಹರಣೆಗೆ ಝುಕರ್‌ಬರ್ಗ್ ನ್ಯೂಯಾರ್ಕ್ ಶಾಲೆಗೆ 10 ಕೋಟಿ ಡಾಲರ್ ದೇಣಿಗೆ ನೀಡಿದ್ದರಿಂದ ಯಾವ ಪರಿಣಾಮವೂ ಆಗಿಲ್ಲ. ವಾಸ್ತವವಾಗಿ ಇದನ್ನು ನೀಡಿದ್ದು ಸಿರಿಲ್ ಸ್ಯಾಂಡ್‌ಬರ್ಗ್ ಅವರ ಮೂಲಕ ‘ದ ಸೋಷಿಯಲ್ ನೆಟ್‌ವರ್ಕ್’ ಚಿತ್ರ ಬಿಡುಗಡೆಯ ಸುತ್ತ ಹಬ್ಬಿದ್ದ ಋಣಾತ್ಮಕ ಪ್ರಚಾರದ ಪರಿಣಾಮ ಸರಿದೂಗಿಸಲು. ಹಿಂದಿನ ನಿದರ್ಶನಗಳ ಹಿನ್ನೆಲೆಯಲ್ಲಿ ತಮ್ಮ ಮಗಳು ಹುಟ್ಟಿದ ಸಂದರ್ಭವನ್ನು ನೆಪವಾಗಿಟ್ಟುಕೊಂಡು ಮಾಡಿದ ಈ ಘೋಷಣೆ ಕೂಡಾ ಅಂಥದ್ದೇ ನಡೆ ಎಂಬ ಶಂಕೆ ಸಹಜವಾಗಿಯೇ ಮೂಡುತ್ತದೆ. ಮಾರ್ಕ್ ಅವರು ಪತ್ನಿ ಚಾನ್ ಜತೆಗೂಡಿ ಈ ಘೋಷಣೆ ಮಾಡಿದ್ದಾರೆ.