ವಿಜಯ್ ಹಝಾರೆ ಟ್ರೋಫಿ:ರೈಲ್ವೇಸ್ ವಿರುದ್ಧ ಹಳಿ ತಪ್ಪಿದ ಕರ್ನಾಟಕ
ಸಾಹಸದ ಹೊರತಾಗಿಯೂ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 205 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಜಾರ್ಖಂಡ್‌ನ ಪರ ಎಸ್.ನದೀಮ್(3-28) ಹಾಗೂ ರಾಹುಲ್ ಶುಕ್ಲಾ(2-30) ಐದು ವಿಕೆಟ್‌ಗಳನ್ನು ಹಂಚಿಕೊಂಡರು.
ವಿನಯಕುಮಾರ್ ಪ್ರಯತ್ನ ವ್ಯರ್ಥ
ಬೆಂಗಳೂರು, ಡಿ.10: ನಾಯಕ ವಿನಯಕುಮಾರ್ ಆಲ್‌ರೌಂಡ್ ಪ್ರದರ್ಶನದ ಹೊರತಾಗಿಯೂ ಗುರುವಾರ ಇಲ್ಲಿ ಆರಂಭವಾದ ವಿಜಯ್ ಹಝಾರೆ ಟ್ರೋಫಿಯ ತನ್ನ ಮೊದಲ ಪಂದ್ಯದಲ್ಲಿ ಚಾಂಪಿಯನ್ ಕರ್ನಾಟಕ ತಂಡ ರೈಲ್ವೇಸ್ ವಿರುದ್ಧ ಸೋಲುಂಡಿದೆ.
ಇಲ್ಲಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಗೆಲುವಿಗೆ 229 ರನ್ ಗುರಿ ಪಡೆದಿದ್ದ ರೈಲ್ವೇಸ್ ತಂಡ ಕೊನೆಯ ಎಸೆತದಲ್ಲಿ 1 ವಿಕೆಟ್ ಬಾಕಿ ಇರುವಾಗಲೇ 232 ರನ್ ಗಳಿಸಿ ರೋಚಕ ಗೆಲುವು ದಾಖಲಿಸಿತು. 50ನೆ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದ ಅಕ್ಷತ್ ಪಾಂಡೆ(19ರನ್, 19 ಎಸೆತ) ರೈಲ್ವೇಸ್‌ಗೆ ರೋಚಕ ಗೆಲುವು ತಂದುಕೊಟ್ಟರು.
ಈ ಸೋಲಿನೊಂದಿಗೆ ಪ್ರಸ್ತುತ ದೇಶಿ ಋತುವಿನಲ್ಲಿ ಕರ್ನಾಟಕದ ಕಳಪೆ ಪ್ರದರ್ಶನ ಮುಂದುವರಿದಿದೆ. ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದ್ದ ಕರ್ನಾಟಕ ಮತ್ತೊಂದು ಸೋಲು ಕಂಡಿದೆ. ಆಲ್‌ರೌಂಡ್ ಆಟವಾಡಿದ ನಾಯಕ ಕರಣ್ ಶರ್ಮ(51 ರನ್, 2-55), ಅಸದ್ ಪಠಾಣ್(50) ಹಾಗೂ ವಿಕೆಟ್‌ಕೀಪರ್-ದಾಂಡಿಗ ಮಹೇಶ್ ರಾವತ್(50) ರೈಲ್ವೇಸ್ ಗೆಲುವಿನಲ್ಲಿ ಪ್ರಮುಖ ಕಾಣಿಕೆ ನೀಡಿದರು.
ಕರ್ನಾಟಕದ ನಾಯಕ ವಿನಯಕುಮಾರ್(4-45) ನಾಲ್ಕು ವಿಕೆಟ್ ಕಬಳಿಸಿದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಕರ್ನಾಟಕ 228: ಇದಕ್ಕೆ ಮೊದಲು ಟಾಸ್ ಜಯಿಸಿದ ರೈಲ್ವೇಸ್ ತಂಡ ಕರ್ನಾಟಕವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆರಂಭಿಕ ದಾಂಡಿಗರಾದ ಮಾಯಾಂಕ್ ಅಗರವಾಲ್(44) ಹಾಗೂ ಕೆಎಲ್ ರಾಹುಲ್(27) ಮೊದಲ ವಿಕೆಟ್‌ಗೆ 60 ರನ್ ಸೇರಿಸಿ ಉತ್ತಮ ಆರಂಭ ನೀಡಿದರೂ ಕರ್ನಾಟಕ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 228 ರನ್ ಗಳಿಸಲಷ್ಟೇ ಶಕ್ತವಾಯಿತು.
ಔಟಾಗದೆ 50 ರನ್(48ಎಸೆತ, 4 ಬೌಂಡರಿ, 2 ಸಿಕ್ಸರ್) ಗಳಿಸಿದ ವಿನಯಕುಮಾರ್ ಏಕಾಂಗಿ ಹೋರಾಟ ನೀಡಿ ತಂಡದ ಸ್ಕೋರನ್ನು 228 ರನ್‌ಗೆ ತಲುಪಿಸಿದರು. ಕರುಣ್ ನಾಯರ್(20), ಸಿಎಂ ಗೌತಮ್(21), ಮಿಥುನ್(28) ಹಾಗೂ ಸ್ಟುವರ್ಟ್ ಬಿನ್ನಿ(18) ಎರಡಂಕೆಯ ಸ್ಕೋರ್ ದಾಖಲಿಸಿದರು.
ತಲಾ 3 ವಿಕೆಟ್‌ಗಳನ್ನು ಕಬಳಿಸಿರುವ ಅಕ್ಷತ್ ಪಾಂಡೆ(3-45)ಹಾಗೂ ಆಶೀಷ್ ಯಾದವ್(3-25), ನಾಯಕ ಕರಣ್ ಶರ್ಮ(2-55) ಕರ್ನಾಟಕವನ್ನು ಕನಿಷ್ಠ ಮೊತ್ತಕ್ಕೆ ನಿಯಂತ್ರಿಸಲು ಯಶಸ್ವಿಯಾದರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 50 ಓವರ್‌ಗಳಲ್ಲಿ 228/9
(ವಿನಯಕುಮಾರ್ ಔಟಾಗದೆ 50, ಮಾಯಾಂಕ್ ಅಗರವಾಲ್ 44, ಅಕ್ಷತ್ ಪಾಂಡೆ 3-45, ಆಶೀಶ್ ಯಾದವ್ 3-25, ಕರಣ್ ಶರ್ಮ 2-55)
ರೈಲ್ವೇಸ್ 50 ಓವರ್‌ಗಳಲ್ಲಿ 232/9
(ಕರಣ್ ಶರ್ಮ 51,ಮಹೇಶ್ ರಾವತ್ 50, ಅಸದ್ ಪಠಾಣ್ 50, ವಿನಯಕುಮಾರ್ 4-45, ಎ.ಜೋಶಿ 2-31)
ಜಾರ್ಖಂಡ್‌ಗೆ ರೋಚಕ ಜಯ, ಧೋನಿ ವಿಫಲ
ಆಲೂರು(ಹಾಸನ), ಡಿ.10: ಭಾರತದ ವೇಗದ ಬೌಲರ್ ವರುಣ್ ಆ್ಯರೊನ್ ನಾಯಕತ್ವದ ಜಾರ್ಖಂಡ್ ತಂಡ ಜಮ್ಮು ಕಾಶ್ಮೀರ ವಿರುದ್ಧ ಗುರುವಾರ ಇಲ್ಲಿ ನಡೆದ ವಿಜಯ್ ಹಝಾರೆ ಟ್ರೋಫಿ ಪಂದ್ಯದಲ್ಲಿ 5 ರನ್‌ಗಳ ರೋಚಕ ಗೆಲುವು ಸಾಧಿಸಿತು.
ಇಲ್ಲಿನ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ಜಾರ್ಖಂಡ್ ತಂಡ 50 ಓವರ್‌ಗಳಲ್ಲಿ 210 ರನ್‌ಗೆ ಆಲೌಟಾಯಿತು. 8 ವರ್ಷಗಳ ಬಳಿಕ ದೇಶಿಯ ಕ್ರಿಕೆಟ್‌ಗೆ ವಾಪಸಾದ ವಿಕೆಟ್‌ಕೀಪರ್-ದಾಂಡಿಗ ಮಹೇಂದ್ರ ಸಿಂಗ್ ಧೋನಿ ಕೇವಲ 9 ರನ್ ಗಳಿಸಿ ಎಡಗೈ ಸ್ಪಿನ್ನರ್ ವಾಸಿಮ್ ರಾಝಾಗೆ ವಿಕೆಟ್ ಒಪ್ಪಿಸಿದರು.
ಆರಂಭಿಕ ದಾಂಡಿಗ ಇಶಾಂತ್ ಜಗ್ಗಿ(54) ಹಾಗೂ ಕೌಶಲ್ ಸಿಂಗ್(53) ಜಾರ್ಖಂಡ್‌ಗೆ ಆಸರೆಯಾದರು. ಗೆಲ್ಲಲು 211 ರನ್ ಗುರಿ ಪಡೆದಿದ್ದ ಜಮ್ಮು-ಕಾಶ್ಮೀರ ತಂಡ ಆರಂಭಿಕ ದಾಂಡಿಗ ಶುಭಂ ಖಜುರಿಯಾ(60) ಹಾಗೂ ಪರ್ವೇಝ್ ರಸೂಲ್(63) ಸಾಹಸದ ಹೊರತಾಗಿಯೂ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 205 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಜಾರ್ಖಂಡ್‌ನ ಪರ ಎಸ್.ನದೀಮ್(3-28) ಹಾಗೂ ರಾಹುಲ್ ಶುಕ್ಲಾ(2-30) ಐದು ವಿಕೆಟ್‌ಗಳನ್ನು ಹಂಚಿಕೊಂಡರು.
ಇತರ ಪಂದ್ಯಗಳ ಫಲಿತಾಂಶ
ದಿಲ್ಲಿ: ತ್ರಿಪುರಾ ವಿರುದ್ಧ ಆಂಧ್ರಕ್ಕೆ 58 ರನ್ ಜಯ
ಹೈದರಾಬಾದ್: ಅಸ್ಸಾಂ ವಿರುದ್ಧ ತಮಿಳುನಾಡಿಗೆ 6 ವಿಕೆಟ್ ಜಯ







