ಸೌದಿ ಸರಕಾರದಿಂದ 2.5 ಲಕ್ಷ ಉಮ್ರಾ ವೀಸಾ
ಪ್ರಸಕ್ತ ವರ್ಷದ ಮಕ್ಕಾ ಯಾತ್ರೆ ಕಳೆದ ತಿಂಗಳು ಆರಂಭವಾದಾಗಿನಿಂದ ಇದುವರೆಗೆ 2.5 ಲಕ್ಷ ಮಂದಿಗೆ ಉಮ್ರಾ ವೀಸಾ ವಿತರಿಸಲಾಗಿದೆ ಎಂದು ಹಜ್ ಸಚಿವ ಬಂದಾರ್ ಹಜ್ಜಾರ್ ಪ್ರಕಟಿಸಿದ್ದಾರೆ.

ಜಿದ್ದಾ: ಪ್ರಸಕ್ತ ವರ್ಷದ ಮಕ್ಕಾ ಯಾತ್ರೆ ಕಳೆದ ತಿಂಗಳು ಆರಂಭವಾದಾಗಿನಿಂದ ಇದುವರೆಗೆ 2.5 ಲಕ್ಷ ಮಂದಿಗೆ ಉಮ್ರಾ ವೀಸಾ ವಿತರಿಸಲಾಗಿದೆ ಎಂದು ಹಜ್ ಸಚಿವ ಬಂದಾರ್ ಹಜ್ಜಾರ್ ಪ್ರಕಟಿಸಿದ್ದಾರೆ.
ಕಳೆದ ವರ್ಷ ಒಟ್ಟು 60 ಲಕ್ಷ ಹಜ್ ವೀಸಾ ವಿತರಿಸಲಾಗಿತ್ತು. ಇದು ಸಾಧ್ಯವಾದದ್ದು ತ್ವರಿತವಾಗಿ ವೀಸಾ ವಿತರಿಸುವ ವ್ಯವಸ್ಥೆಯಿಂದಾಗಿ. ಒಂದು ಗಂಟೆಯಲ್ಲೇ ವೀಸಾ ಪ್ರಕ್ರಿಯೆ ಪೂರ್ಣಗೊಳಿಸಿ ವೀಸಾ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಹಜ್ ಸಚಿವಾಲಯದ ಮುಂದೆ ಹೊಸ ಹಜ್ ಹಾಗೂ ಉಮ್ರಾ ತರಬೇತಿ ಕೇಂದ್ರವನ್ನು ತೆರೆದು, ಎಲ್ಲ ಧಾರ್ಮಿಕ ಯಾತ್ರಿಗಳಿಗೆ ಗುಣಮಟ್ಟದ ಸೇವೆಯನ್ನು ಈ ಬಾರಿಯೂ ನೀಡಲು ಸರಕಾರ ಬದ್ಧವಾಗಿದೆ ಎಂದರು.
ಹಜ್ ಸಚಿವಾಲಯ, ಎಲ್ಲ ರಾಜ್ಯಗಳ ರಾಜಭಾರ ಕಚೇರಿಗಳು ಹಾಗೂ ಕಾನ್ಸುಲೇಟ್‌ಗಳು ಹಜ್ ಹಾಗೂ ಉಮ್ರಾ ವೀಸಾಕ್ಕಾಗಿ ಯಾವ ಹಣವನ್ನೂ ಸಂಗ್ರಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಇದು ಉಚಿತವಾಗಿದ್ದು, ನಮ್ಮ ಅರೆಬಿಕ್ ಹಾಗೂ ಇಂಗ್ಲಿಷ್ ವೆಬ್‌ಸೈಟ್‌ಗಳಲ್ಲಿ ಇದನ್ನು ಪ್ರಚುರಪಡಿಸಿದ್ದೇವೆ. ಅಕಾರಿಗಳು ಈ ಸೇವೆಗೆ ಹಣ ಬಯಸಿದರೆ ತಕ್ಷಣ ವರದಿ ಮಾಡಬೇಕು ಎಂದು ಹಜ್ಜಾರ್ ಕೋರಿದರು.
ಎಲ್ಲ ಯಾತ್ರಿಗಳನ್ನು ಹಾರ್ದಿಕವಾಗಿ ಸ್ವಾಗತಿಸಲು ಪ್ರಯತ್ನ ನಡೆದಿದೆ. ಎಲ್ಲ ಉಮ್ರಾ ಯಾತ್ರಿಗಳಿಗೆ ಸುಖಕರ ಪ್ರವಾಸಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಯಾತ್ರೆಯ ಆರಂಭದಿಂದ ಅಂತ್ಯದವರೆಗೆ ಅವರ ಸೇವೆಗೆ ಎಲ್ಲ ಅನುಕೂಲತೆಗಳನ್ನು ಸಚಿವಾಲಯ ಕಲ್ಪಿಸಲಿದೆ. ಸಮುದ್ರ ಮೂಲಕ, ವಿಮಾನ ಮೂಲಕ ಆಗಮಿಸುವ ಯಾತ್ರಿಗಳಿಗೆ ಮಕ್ಕಾ ಹಾಗೂ ಮದೀನದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅವರು ವಾಪಸ್ಸು ತೆರಳುವವರೆಗೂ ಈ ಸೌಕರ್ಯ ಇರುತ್ತದೆ ಎಂದು ವಿವರಿಸಿದರು.
ದೇಶದಲ್ಲಿ 44 ಅಂಗೀಕೃತ ಕಂಪೆನಿಗಳು ಸೌದಿ ಅರೇಬಿಯಾದಲ್ಲಿ ಉಮ್ರಾ ಹಾಗೂ ಹಜ್ ಸೇವೆ ನೀಡುತ್ತಿವೆ. ಸಚಿವಾಲಯದಡಿ 180 ದೇಶಗಳ 3,000 ಏಜೆಂಟರು ಕಾರ್ಯನಿರ್ವಹಿಸುತ್ತಿದ್ದು, ವಿದೇಶಿ ಸಚಿವಾಲಯದ ಜತೆ ಎಲೆಕ್ಟ್ರಾನಿಕ್ ಸಮನ್ವಯ ಸಾಸಿದೆ ಎಂದರು.







