Indian Fans Throw Bottles in Ground ಕ್ರೀಡಾಂಗಣಕ್ಕೆ ಪ್ರೇಕ್ಷಕರಿಂದ ಬಾಟ್ಲಿ ಎಸೆತ
ಕ್ರೀಡಾಂಗಣಕ್ಕೆ ಪ್ರೇಕ್ಷಕರಿಂದ ಬಾಟ್ಲಿ ಎಸೆತ
ಕಟಕ್, ಅ.5: ದಕ್ಷಿಣ ಆಫ್ರಿಕ ವಿರುದ್ಧದ ಟ್ವೆಂಟಿ-20 ಸರಣಿಯ 2ನೆ ಪಂದ್ಯದಲ್ಲಿ ಭಾರತ ಸರಣಿ ಸೋಲಿನ ಹಾದಿಯಲ್ಲಿದ್ದಾಗ ಸಿಟ್ಟಿಗೆದ್ದ ಪ್ರೇಕ್ಷಕರು ಕ್ರೀಡಾಂಗಣಕ್ಕೆ ನೀರಿನ ಪ್ಲಾಸ್ಟಿಕ್ ಬಾಟ್ಲಿ ಗಳನ್ನು ಎಸೆದು ದಕ್ಷಿಣ ಆಫ್ರಿಕದ ಬ್ಯಾಟಿಂಗ್‌ಗೆ ಅಡ್ಡಿಪಡಿಸಿದರು.ದಕ್ಷಿಣ ಆಫ್ರಿಕ 13 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 64 ರನ್ ಗಳಿಸಿದ್ದಾಗ ಪ್ರೇಕ್ಷಕರು ಆಟಕ್ಕೆ ಅಡ್ಡಿ ಪಡಿಸಿದ ಕಾರಣದಿಂದಾಗಿ 27 ನಿಮಿಷಗಳ ಕಾಲ ಆಟ ಸ್ಥಗಿತಗೊಂಡಿತು. ಈ ಹಂತದಲ್ಲಿ ಆಟಗಾರರು ಕ್ರೀಡಾಂಗಣ ಮಧ್ಯದಲ್ಲಿ ಒಟ್ಟು ಸೇರಿದರು. ರಕ್ಷಣಾ ಸಿಬ್ಬಂದಿಗಳು ಬೌಂಡರಿ ಲೈನ್‌ನ ಬಳಿ ಕ್ರೀಡಾಂಗಣದ ಸುತ್ತಲೂ ನಿಂತು ಆಟಗಾರರಿಗೆ ರಕ್ಷಣೆ ನೀಡಿದರು.
ಪ್ರೇಕ್ಷಕರ ವರ್ತನೆಗೆ ಸಾಮಾಜಿಕ ತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿವಿಎಸ್ ಲಕ್ಷಣ್ , ಯುವರಾಜ್ ಸಿಂಗ್ , ಕೈಫ್ , ಗ್ರೇಮ್ ಸ್ಮಿತ್ ಸೇರಿದಂತೆ ಅನೇಕರು ಟ್ವಿಟ್ಟರ್ ನಲ್ಲಿ ಖಂಡನೆ ವ್ಯಕ್ತಪಡಿಸಿದ್ದಾರೆ.
Next Story





