Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕರಾವಳಿ ಕಾಂಗ್ರೆಸ್: ಮಗ ಸತ್ತರೂ...

ಕರಾವಳಿ ಕಾಂಗ್ರೆಸ್: ಮಗ ಸತ್ತರೂ ಪರವಾಗಿಲ್ಲ...

ಜಯಪ್ರಕಾಶ್ ಹೆಗ್ಡೆ ಹೊಸಬರಿರಬಹುದು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಹಳಬರೇ? ಅವರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಚಿಗುರೊಡೆದಿರುವಾಗ ಹೆಗ್ಡೆ ‘ಹೊಸಬರು’ ಎಂಬ ಕಾರಣ ಕೊಟ್ಟು ಟಿಕೆಟ್ ತಪ್ಪಿಸಿರುವುದು ಆಸ್ಕರ್ ಅವರ ಸಮಯಸಾಧಕ ರಾಜಕಾರಣಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಇದೊಂದು ರೀತಿಯಲ್ಲಿ ಮಗ ಸತ್ತರೂ ಪರವಾಗಿಲ್ಲ, ಸೊಸೆ ಮುಂಡೆಯಾಗಬೇಕು ಎಂಬ ಅತ್ತೆಯ ಮನಃಸ್ಥಿತಿಯಂತಿದೆ.

ವಾರ್ತಾಭಾರತಿವಾರ್ತಾಭಾರತಿ16 Dec 2015 12:41 PM IST
share
ಕರಾವಳಿ ಕಾಂಗ್ರೆಸ್: ಮಗ ಸತ್ತರೂ ಪರವಾಗಿಲ್ಲ...

ಕಾ ಂಗ್ರೆಸ್‌ನ್ನು ನಾಶ ಮಾಡಲು ಆಸ್ಕರ್ ಫೆರ್ನಾಂಡಿಸರಿಗೆ ವಿರೋಧಿಗಳು ಗುಟ್ಟಾಗಿ ಸುಪಾರಿ ಕೊಟ್ಟಿದ್ದಾರೆಯೇ? ಕರಾವಳಿಯಲ್ಲಿ ಇಂತಹದೊಂದು ಪ್ರಶ್ನೆ ಕಳೆದ ಒಂದು ವಾರದಿಂದ ಚರ್ಚೆಯಲ್ಲಿದೆ. ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನೊಳಗೆ ಎದ್ದಿರುವ ಬಂಡಾಯ ಸಹಜವಾದುದಲ್ಲ. ಸಹಜವಾಗಿ ನಡೆಯಬಹುದಾಗಿದ್ದ ಚುನಾವಣೆಯಲ್ಲಿ ಬಂಡಾಯದ ಬೆಂಕಿಯನ್ನು ಕೃತಕವಾಗಿ ಸೃಷ್ಟಿಸಲಾಗಿದ್ದು, ಅದಕ್ಕೆ ಕಾಂಗ್ರೆಸ್ ವರಿಷ್ಠರು ಈವರೆಗೆ ಸಕಾರಣವೊಂದನ್ನು ನೀಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಅಭ್ಯರ್ಥಿಯ ಆಯ್ಕೆಯ ಸಂದರ್ಭದಲ್ಲಿ ಕಾಂಗ್ರೆಸ್‌ನ ವರಿಷ್ಠರು ‘‘ನಾವು ಆರಿಸಿದ ವ್ಯಕ್ತಿಗೆ ಮತನೀಡುವುದು ನಿಮ್ಮ ಕರ್ತವ್ಯ. ಅದನ್ನು ಪ್ರಶ್ನಿಸುವ, ಅದಕ್ಕೆ ಪ್ರತಿಯಾಡುವ ಯಾವ ಹಕ್ಕೂ ನಿಮಗಿಲ್ಲ’’ ಎಂಬ ಸರ್ವಾಧಿಕಾರಿ ಮನಃಸ್ಥಿತಿಯನ್ನು ಪ್ರದರ್ಶಿಸಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಜಯಪ್ರಕಾಶ್ ಹೆಗ್ಡೆಯವರನ್ನು ಯಾಕೆ ಕೈ ಬಿಡಲಾಗಿದೆ ಎನ್ನುವ ಪ್ರಶ್ನೆ ಪಕ್ಕಕ್ಕಿರಲಿ, ಪ್ರತಾಪಚಂದ್ರ ಶೆಟ್ಟಿಯವರನ್ನು ಯಾಕೆ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂಬ ಮತದಾರರ ಪ್ರಶ್ನೆಗೂ ಉತ್ತರ ನೀಡಲಾಗದೆ ಕರಾವಳಿಯ ನಾಯಕರು ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಸಿದ್ದರಾಮಯ್ಯನವರ ನಾಯಕತ್ವದ ಬಲದಿಂದಾಗಿ ಮತ್ತು ಬಿಜೆಪಿಯವರ ವೈಫಲ್ಯದಿಂದಾಗಿ ಕರಾವಳಿಯಲ್ಲಿ ಚಿಗುರಿದ ಕಾಂಗ್ರೆಸ್‌ನ್ನು ಮತ್ತೆ ಕೊಡಲಿ ಹಿಡಿದು ಕತ್ತರಿಸಿ ಹಾಕುವುದಕ್ಕೆ ವರಿಷ್ಠರೇ ಮುಂಚೂಣಿಯಲ್ಲಿ ನಿಂತಿರುವುದನ್ನು ಬಿಜೆಪಿಯಂತಹ ಪ್ರತಿಪಕ್ಷಗಳೇ ಬೆಕ್ಕಸಬೆರಗಾಗಿ ನೋಡುತ್ತಿವೆ. ಈ ಆಯ್ಕೆಯಲ್ಲಿ ಆಸ್ಕರ್‌ರ ಪಾತ್ರ ತೀವ್ರ ಟೀಕೆಗೆ ಒಳಗಾಗಿರುವುದು ಮಾತ್ರವಲ್ಲ, ಇಡೀ ಕಾಂಗ್ರೆಸ್‌ನ ಸ್ಥಳೀಯ ನಾಯಕರನ್ನು ಅವರು ಜೀತದಾಳುಗಳ ಮಟ್ಟಕ್ಕಿಳಿಸಿದ್ದಾರೆ ಎನ್ನುವ ವ್ಯಾಪಕ ಆಕ್ರೋಶ ಕರಾವಳಿಯಲ್ಲಿ ಭುಗಿಲೆದ್ದಿದೆ. ವಿಧಾನ ಪರಿಷತ್‌ನ್ನು ನಾವು ಮೇಲ್ಮನೆ ಎಂದು ಕರೆಯುತ್ತೇವೆ. ಕೆಳಮನೆಯ ಸದಸ್ಯರಿಗೆ ಮಾರ್ಗದರ್ಶನ ನೀಡುವ ಹಿರಿಯರು, ಗಣ್ಯರು ಆಸೀನರಾಗುವ ಸದನವದು. ಅದಕ್ಕೆ ಅದರದೇ ಆದ ಹಿರಿಮೆಯಿದೆ. ಅಲ್ಲಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಆಯಾ ಪಕ್ಷದ ನಾಯಕರಿಗೆ ಭಾರೀ ಹೊಣೆಗಾರಿಕೆಯಿರುತ್ತವೆ. ಯೋಗ್ಯ ಅಭ್ಯರ್ಥಿಗಳನ್ನು ಗುರುತಿಸದೇ ಇದ್ದರೆ ಅಯೋಗ್ಯರು ಪಕ್ಷದ ಸ್ಥಾನಬಲವನ್ನು ಪಡೆದು ಸುಲಭವಾಗಿ ಮೇಲ್ಮನೆಗೆ ಆಯ್ಕೆಯಾಗಿ ಬಿಡುತ್ತಾರೆ. ದಕ್ಷಿಣ ಕನ್ನಡದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಇಲ್ಲಿ ಪ್ರತಾಪಚಂದ್ರ ಶೆಟ್ಟಿಯವರನ್ನು ಪ್ರತಿ ಬಾರಿ ಯಾಕೆ ಆರಿಸಿಕಳುಹಿಸಲಾಗುತ್ತಿದೆ ಎನ್ನುವುದು ಸ್ವತಃ ಕಾಂಗ್ರೆಸ್‌ನ ಕಾರ್ಯಕರ್ತರಿಗೇ ಗೊತ್ತಿಲ್ಲ. ಅವರ ಒಂದೇ ಒಂದು ಅರ್ಹತೆಯೆಂದರೆ ಅವರು ‘ಆಸ್ಕರ್‌ಗೆ ಆಪ್ತರು’. ಹಾಗೆ ನೋಡಿದರೆ ಈ ಬಾರಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಸ್ವತಃ ಪ್ರತಾಪಚಂದ್ರ ಶೆಟ್ಟರಿಗೇ ಆಸಕ್ತಿಯಿದ್ದಿರಲಿಲ್ಲ. ಆದರೂ ಅವರು ವರಿಷ್ಠರ ಒತ್ತಡದ ಮೇರೆಗೆ ಚುನಾವಣೆಗೆ ಸ್ಪರ್ಧಿಸುವಂತಾಯಿತು. ಹಾಗಾದರೆ ಬಲವಂತವಾಗಿ ಪ್ರತಾಪಚಂದ್ರರನ್ನೇ ಅಭ್ಯರ್ಥಿಯಾಗಿ ನಿಲ್ಲಿಸುವುದಾಗಿದ್ದರೆ ಅವರೊಬ್ಬ ಮುತ್ಸದ್ದಿ ರಾಜಕಾರಣಿಯಾಗಿರಬೇಕು ಅಥವಾ ಅರ್ಹ ಅಭ್ಯರ್ಥಿಗಳಿಗೆ ಕಾಂಗ್ರೆಸ್‌ನಲ್ಲಿ ಕೊರತೆಯಿರಬೇಕು. ಒಂದೇ ಒಂದು ಕಾರಣಕ್ಕಾಗಿ ಈ ಬಾರಿ ಮತ್ತೆ ಪ್ರತಾಪಚಂದ್ರ ಶೆಟ್ಟಿಯವರನ್ನು ಕಾಂಗ್ರೆಸ್ ಚುನಾವಣೆಗೆ ಸ್ಪರ್ಧಿಸಲು ಬಲವಂತ ಮಾಡಿದೆ. ಶೆಟ್ಟಿಯವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರೆ, ಜಯಪ್ರಕಾಶ್ ಹೆಗ್ಡೆಯವರಿಗೆ ಟಿಕೆಟ್ ನೀಡುವುದು ಅನಿವಾರ್ಯವಾಗುತ್ತಿತ್ತು.
 ಉಡುಪಿಯಲ್ಲಿ ಕಾಂಗ್ರೆಸ್ ಮತ್ತೆ ಜೀವ ಪಡೆದದ್ದೇ ಜಯಪ್ರಕಾಶ್ ಹೆಗ್ಡೆಯವರ ಪ್ರವೇಶವಾದ ಬಳಿಕ. ಅವರ ಕಾರ್ಯಚಟುವಟಿಕೆ, ರಾಜಕೀಯ ಮುತ್ಸದ್ದಿತನ, ಜನಾನುರಾಗಿ ವ್ಯಕ್ತಿತ್ವದಿಂದಾಗಿ ಕಾಂಗ್ರೆಸ್‌ನಿಂದ ದೂರ ಸರಿದವರೆಲ್ಲ ಮತ್ತೆ ಹತ್ತಿರವಾದರು. ಸದಾನಂದ ಗೌಡರಂತಹ ಹಿರಿಯ ಬಿಜೆಪಿ ಮುಖಂಡರು ಕೂಡ ಹೆಗ್ಡೆ ವಿರುದ್ಧ ಸ್ಪರ್ಧಿಸಲು ಹಿಂಜರಿಯುವಂತಹ ವಾತಾವರಣ ಉಡುಪಿಯಲ್ಲಿ ನಿರ್ಮಾಣವಾಯಿತು. ಇಂತಹ ಸಂದರ್ಭದಲ್ಲಿ ಈ ನಾಯಕನ ವರ್ಚಸ್ಸನ್ನು ಸಂಪೂರ್ಣ ಬಳಸಿಕೊಂಡು ಕಾಂಗ್ರೆಸ್‌ನ್ನು ಮತ್ತೆ ಕಟ್ಟಿ ನಿಲ್ಲಿಸುವುದು ಆಸ್ಕರ್, ಮೊಯ್ಲಿಯಂತಹ ಹಿರಿಯ ನಾಯಕರ ಕರ್ತವ್ಯವಾಗಿತ್ತು. ತಮ್ಮನ್ನು ಉಳಿಸಿ, ಬೆಳೆಸಿ, ಸ್ಥಾನಮಾನ, ಗೌರವವನ್ನು ನೀಡಿದ ಕಾಂಗ್ರೆಸ್‌ಗೆ ಈ ಮೂಲಕ ಈ ನಾಯಕರು ಕೃತಜ್ಞತೆಯನ್ನು ಸಲ್ಲಿಸಿದಂತಾಗುತ್ತಿತ್ತು. ವಿಪರ್ಯಾಸವೆಂದರೆ ಇವರು ಜಯಪ್ರಕಾಶ್ ಹೆಗ್ಡೆಯನ್ನೇ ಕಾಂಗ್ರೆಸ್‌ನಿಂದ ಹೊರಹಾಕಲು ಕಾರಣವಾಗಿರುವುದು. ಜಯಪ್ರಕಾಶ್ ಹೆಗ್ಡೆಗೆ ಟಿಕೆಟ್ ನೀಡದೇ ಇರಲು ಆಸ್ಕರ್ ನೀಡಿರುವ ಮೊದಲ ಕಾರಣ ‘‘ಜಯಪ್ರಕಾಶ್ ಹೆಗ್ಡೆ ಹೊಸಬರು. ಪಕ್ಷದ ಹಿರಿಯರಿಗೆ ಆದ್ಯತೆ’’ ಎನ್ನುವುದಾಗಿದೆ. ಯಾವುದೇ ಆಯ್ಕೆ ಕಾಂಗ್ರೆಸ್‌ಗೂ, ಕ್ಷೇತ್ರಕ್ಕೂ ಲಾಭ ತರುವಂಥಹದ್ದಾಗಬೇಕು. ಪ್ರತಾಪಚಂದ್ರ ಶೆಟ್ಟರು ಹಿರಿಯರಾಗಿರಬಹುದು. ಆದರೆ ಜನಸಾಮಾನ್ಯರ ಜೊತೆಗೆ ಅವರು ಸಂಪರ್ಕ ಕಡಿದುಕೊಂಡು ದಶಕಗಳೇ ಆಗಿವೆ. ಆಸ್ಕರ್ ಹೊರತು ಪಡಿಸಿದರೆ, ಕಾಂಗ್ರೆಸ್‌ನ ಯುವ ಕಾರ್ಯಕರ್ತರಿಗೆ ಪ್ರತಾಪ್‌ರ ಪರಿಚಯವೂ ಇಲ್ಲ. ಒಂದೆಡೆ ಕಾಂಗ್ರೆಸ್‌ಗೂ ಪ್ರಯೋಜನವಿಲ್ಲ, ಮಗದೊಂದೆಡೆ ಕ್ಷೇತ್ರಕ್ಕೂ ಪ್ರಯೋಜನವಿಲ್ಲ. ಸ್ವತಃ ಪ್ರತಾಪಚಂದ್ರ ಅವರಿಗೂ ಈ ಸ್ಥಾನ ಬೇಕಾಗಿಲ್ಲ. ಹಾಗಾದರೆ ಇದರ ಫಲಾನುಭವಿ ಯಾರು? ಕ್ಷೇತ್ರದ ಜನರು ಆಡಿಕೊಳ್ಳುವಂತೆ ಆಸ್ಕರ್‌ರಂತಹ ಕೆಲವು ಹಿರಿಯರು ಮಾತ್ರ. ಅವರಿಗೆ ಪ್ರತಾಪ್ ಆಯ್ಕೆಯಾಗುವುದಕ್ಕಿಂತ ಹೆಗ್ಡೆ ಆಯ್ಕೆಯಾಗದೆ ಇರುವುದು, ಉಡುಪಿಯಲ್ಲಿ ಕಾಂಗ್ರೆಸ್ ನಾಯಕರಾಗಿ ಬೆಳೆಯದೇ ಇರುವುದು ಬೇಕಾಗಿದೆ. ಉಡುಪಿ ಸೇರಿದಂತೆ ಕರಾವಳಿಯ ನಿಯಂತ್ರಣ ಎಲ್ಲಿ ನಮ್ಮ ಕೈಯಿಂದ ತಪ್ಪಿ ಹೋಗುವುದೋ ಎಂಬ ಭಯದಲ್ಲಿ ಹೆಗ್ಡೆಯವರಿಗೆ ಟಿಕೆಟ್ ಸಿಗದಂತೆ ಹಿರಿಯರು ನೋಡಿಕೊಂಡಿದ್ದಾರೆ. ಜಯಪ್ರಕಾಶ್ ಹೆಗ್ಡೆ ಹೊಸಬರಿರಬಹುದು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಹಳಬರೇ? ಅವರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಚಿಗುರೊಡೆದಿರುವಾಗ ಹೆಗ್ಡೆ ‘ಹೊಸಬರು’ ಎಂಬ ಕಾರಣ ಕೊಟ್ಟು ಟಿಕೆಟ್ ತಪ್ಪಿಸಿರುವುದು ಆಸ್ಕರ್ ಅವರ ಸಮಯಸಾಧಕ ರಾಜಕಾರಣಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಇದೊಂದು ರೀತಿಯಲ್ಲಿ ಮಗ ಸತ್ತರೂ ಪರವಾಗಿಲ್ಲ, ಸೊಸೆ ಮುಂಡೆಯಾಗಬೇಕು ಎಂಬ ಅತ್ತೆಯ ಮನಃಸ್ಥಿತಿಯಂತಿದೆ.
  



ಆಸ್ಕರ್ ಅವರ ಇಂತಹ ಸಮಯಸಾಧಕ ರಾಜಕಾರಣದಿಂದ ಕರಾವಳಿಯ ಕಾಂಗ್ರೆಸ್ ಕಳೆದುಕೊಂಡದ್ದು ಅಪಾರ. ಈ ಹಿಂದೆ ಪದ್ಮಪ್ರಿಯಾ ನಿಗೂಢ ಸಾವು ಪ್ರಕರಣದಲ್ಲಿ ರಘುಪತಿ ಭಟ್‌ರನ್ನು ಬಚಾವ್ ಮಾಡಿದ್ದೇ ಆಸ್ಕರ್ ಎನ್ನುವುದನ್ನು ಕರಾವಳಿ ಆಡಿಕೊಳ್ಳುತ್ತಿದೆ. ಆ ಮೂಲಕ ಅವರು ಬಿಜೆಪಿಯ ಪ್ರತಿಷ್ಠೆಯನ್ನು ರಕ್ಷಿಸಿದ್ದರು. ಇಂತಹ ದುರ್ಬಲ, ದ್ವಂದ್ವ ರಾಜಕೀಯದಿಂದಲೇ ಕರಾವಳಿಯಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಕಾಂಗ್ರೆಸ್ ನಾಶದೆಡೆಗೆ ನಡೆದಿತ್ತು. ಇದೀಗ ಹೊಸತಲೆಗಳ ಪ್ರವೇಶದಿಂದ ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ತನ್ನ ಬೇರನ್ನು ಗಟ್ಟಿಗೊಳಿಸಬಹುದು ಎನ್ನುವಷ್ಟರಲ್ಲಿ ಹಿರಿಯರೆಂದು ಕರೆಸಿಕೊಂಡವರೇ ಆ ಬೇರಿಗೆ ಕೊಡಲಿ ಹಾಕುತ್ತಿರುವುದು ಕಾಂಗ್ರೆಸ್‌ನ ದುರಂತವಲ್ಲದೇ ಇನ್ನೇನು ಅಲ್ಲ. 
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X