ಹಿಂದಿಯಲ್ಲಿ ಬರಲಿದ್ದಾರೆ‘ಆದಮಿಂಡೆ ಮಗನ್ ಅಬು’
1960ರ ದಶಕದಲ್ಲಿ ಸರಕು ಸಾಗಿಸುವ ಮೋಟರ್ ಇಲ್ಲದ ಪುಟ್ಟ ಹಡಗುಗಳ ಮೂಲಕ ಜೀವ ಪಣಕ್ಕಿಟ್ಟುಗಲ್‌ಗೆ ಹೋದವರ ಸಾಹಸದ ಕುರಿತ ಚಿತ್ರವದು. ಆಗ ಗಲ್ ಈಗಿನಂತಿರಲಿಲ್ಲ. ಹೋಗಲು ಈ ಪುಟ್ಟ ಹಡಗುಗಳೇ ಗತಿ. ಅದರಲ್ಲೂ ಇಲ್ಲಿಂದ ಹೊರಟರೆ ದುಬೈ ಕಡಲ ಕಿನಾರೆಗಿಂತ ಬಹಳ ಮೊದಲೇ ಖೊರ್ಖಾನ್ ಎಂಬಲ್ಲಿ ಒಂದು ಬೃಹತ್ ಬಂಡೆಗಲ್ಲು ಕಾಣುತ್ತದೆ. ಅಲ್ಲಿಂದ ಮುಂದೆ ಹಡಗು ಹೋಗುವುದಿಲ್ಲ. ಅಲ್ಲಿ ನೀರಿಗೆ ಹಾರಿ ಈಜಿಕೊಂಡು ಹೋಗಿ ದಡ (ದುಬೈ) ಸೇರಬೇಕು. ಈ ಪ್ರಯಾಣದಲ್ಲಿ ಹಡಗಿನಲ್ಲೇ ಎಷ್ಟೋ ಮಂದಿ ಹಸಿವಿನಿಂದ

ವಾ.ಭಾ: ನೀವು ವಿಮಾನ ಯಾನ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದವರು. ಅದನ್ನೆಲ್ಲಾ ಬಿಟ್ಟು ಕೈಯಲ್ಲಿದ್ದ ದುಡ್ಡು ಹಾಕಿ ಸಿನೆಮಾ ನಿರ್ದೇಶಿಸಲು ಹೊರಟಾಗ ನಿಮ್ಮನ್ನು ಕುಟುಂಬದವರು ತಡೆಯಲಿಲ್ಲವೇ ?
ಸಲೀಂ: ಇಲ್ಲ ನನಗೆ ನನ್ನ ಕುಟುಂಬದವರಿಂದ ಯಾವುದೇ ಅಡೆ ತಡೆ ಇರಲಿಲ್ಲ. ಆದರೆ ನಮ್ಮ ಕುಟುಂಬಕ್ಕೆ ಯಾವುದೇ ಸಿನೆಮಾ ಹಿನ್ನೆಲೆ ಇರಲಿಲ್ಲ. ನಮ್ಮಲ್ಲಿ ಹೆಚ್ಚಿನವರು ಕ್ರೀಡಾಪಟುಗಳು. ನನ್ನ ಸೋದರನೊಬ್ಬ ರಾಷ್ಟ್ರೀಯ ವಾಲಿಬಾಲ್ ತಂಡದಲ್ಲಿದ್ದ. ನಾನು ರಾಜ್ಯ ಮಟ್ಟದ ಜೂನಿಯರ್ ತಂಡಕ್ಕೆ ಆಯ್ಕೆಯಾಗಿದ್ದೆ. ಆದರೆ ಕ್ರಮೇಣ ರಂಗಭೂಮಿ, ಮಿಮಿಕ್ರಿ ಮುಂತಾದವುಗಳಲ್ಲಿ ಸಕ್ರಿಯವಾಗಿ, ವೃತ್ತಿಪರವಾಗಿ ತೊಡಗಿಸಿಕೊಂಡೆ. ನನ್ನ ಒಬ್ಬ ಅಕ್ಕನಿಗೆ ಕರ್ನಾಟಕದ ಯಲ್ಲಾಪುರಕ್ಕೆ ಮದುವೆಯಾಗಿದ್ದು. ಹಾಗಾಗಿ 8ನೆ ತರಗತಿಯ ಬಳಿಕ ನನ್ನ ಎಲ್ಲ ವಾರ್ಷಿಕ ರಜೆಗಳನ್ನು ನಾನು ಯಲ್ಲಾಪುರದಲ್ಲೇ ಕಳೆದಿದ್ದು. ಕೇರಳದಿಂದ ಮಂಗಳೂರಿಗೆ ಬಂದು ಯಲ್ಲಾಪುರಕ್ಕೆ ಹೋಗುತ್ತಿದ್ದುದು ನನಗೆ ಈಗಲೂ ನೆನಪಿದೆ. ಅದರಿಂದಾಗಿ ನಾನು ಕನ್ನಡವನ್ನು ಅಲ್ಪಸ್ವಲ್ಪ ಅರ್ಥ ಮಾಡಿಕೊಳ್ಳುತ್ತೇನೆ.
ವಾಭಾ: ಮೊದಲ ಚಿತ್ರಕ್ಕೇ ಯಾರೂ ಊಹಿಸದಷ್ಟು ಪ್ರಶಸ್ತಿಗಳನ್ನು, ಖ್ಯಾತಿಯನ್ನು ಪಡೆದವರು ನೀವು. ಆದರೆ ಚಿತ್ರ ನಿರ್ದೇಶಕರಾಗಲು ಸಾಕಷ್ಟು ಕಠಿಣ ದಾರಿಯನ್ನೂ ಸವೆಸಿದ್ದೀರಿ. ಎಎಂಎನ ಭಾರೀ ಯಶಸ್ಸು ನೋಡಿ ನಿಮಗೆ ಏನನ್ನಿಸಿತು ?ಸಲೀಂ: ಎಎಂಎ ನನಗೆ ಮಾತ್ರವಲ್ಲ, ಮಲಯಾಳಂ ಚಿತ್ರರಂಗಕ್ಕೆ 15-20 ವರ್ಷಗಳ ಬಳಿಕ ಬಹುದೊಡ್ಡ ಹೆಸರು ತಂದುಕೊಟ್ಟ ಚಿತ್ರ. ‘ಪಿರವಿ’ ಬಳಿಕ 114 ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ, ಶ್ರೇಷ್ಠ ನಟ, ಶ್ರೇಷ್ಠ ಚಿತ್ರ ಸಹಿತ ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳನ್ನು, ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಮಲಯಾಳಂ ಚಿತ್ರ ಅದು. ಅರೆಬಿಕ್, ಟರ್ಕಿಶ್, ಮಲಯಾ ಹಾಗೂ ಪರ್ಶಿಯನ್ ಭಾಷೆಗಳಿಗೆ ಡಬ್ ಆದ ಏಕೈಕ ಮಲಯಾಳಂ ಚಿತ್ರ ಎಎಂಎ. ಇಸ್ತಾಂಬುಲ್‌ನಲ್ಲಿ ಥಿಯೇಟರ್‌ಗಳಲ್ಲೂ ಆ ಚಿತ್ರ ಪ್ರದರ್ಶನಗೊಂಡಿದೆ. ಆದರೆ ನನಗೆ ಅದರ ಕತೆಯಿಂದಾಗಿ ಮನಸ್ಸಿಗೆ ಅತ್ಯಂತ ಹತ್ತಿರವಾದ ಚಿತ್ರ ಅದು. ವಾಭಾ : ನೀವು ನಿರ್ದೇಶನಕ್ಕೆ ಸಂಬಂಸಿ ಯಾವುದಾದರೂ ತರಬೇತಿ ಪಡೆದಿದ್ದಿರಾ ?ಸಲೀಂ: ಇಲ್ಲ. ನಾನು ಯಾವುದೇ ಔಪಚಾರಿಕ ತರಬೇತಿ ಪಡೆದಿಲ್ಲ. ಆದರೆ ರಂಗಭೂಮಿಯ ಹಿನ್ನೆಲೆ ನನಗಿತ್ತು. ಅದರಲ್ಲೇ ಸ್ನಾತಕೋತ್ತರ ಪದವಿಗೆ ಸೇರಿದೆನಾದರೂ ಧಾರವಾಹಿಗಳಿಗೆ ಬರೆಯಲು ಪ್ರಾರಂಭಿಸಿದ್ದರಿಂದ ಅದನ್ನೂ ಅರ್ಧದಲ್ಲೇ ಬಿಡ ಬೇಕಾಯಿತು. ಸಾಲ್ಯ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿತ್ತು. ನಾನು ಈಸ್ಟ್ ವೆಸ್ಟ್ ಏರ್‌ಲೈನ್ಸ್‌ನಲ್ಲಿ ಉದ್ಯೋಗದಲ್ಲಿದ್ದಾಗ ಭೇಟಿಯಾದ ಉಮ್ರಾ ಯಾತ್ರಿಕರೊಬ್ಬರ ಅನುಭವ ಕೇಳಿ ಎಎಂಎ ಚಿತ್ರ ಮಾಡುವ ಮನಸ್ಸಾಯಿತು. ಅಲ್ಲಿಂದ ನಿರ್ದೇಶಕನಾಗುವತ್ತ ನನ್ನ ಪ್ರಯಾಣ ಪ್ರಾರಂಭವಾಯಿತು.
ವಾಭಾ : ಹಲವು ಸಾಮಾಜಿಕ ಸಂದೇಶಗಳನ್ನು ಒಂದೇ ಚಿತ್ರದ ಮೂಲಕ ನೀಡಿದ ಶ್ರೇಯಸ್ಸು ನಿಮ್ಮದು. ಆದರೆ ಅದೇ ಚಿತ್ರವನ್ನು ಹಿಂದಿಯಲ್ಲಿ ಮಾಡಿದ್ದರೆ ಇನ್ನಷ್ಟು ಹೆಚ್ಚು ಜನರನ್ನು ತಲುಪಬಹುದಿತ್ತು ಎಂದು ನಿಮಗೆ ಅನಿಸಿದೆಯೇ ?
ಸಲೀಂ : ಈಗ ನನ್ನ ಮುಂದಿರುವ ಯೋಜನೆ ಎಎಂಎನ ಹಿಂದಿ ರಿಮೇಕ್ ಮಾಡುವುದು. 2016ರಲ್ಲಿ ಅದರ ಚಿತ್ರೀಕರಣ ಪ್ರಾರಂಭವಾಗಲಿದೆ. ಇನ್ನೂ ಮಾತುಕತೆಯ ಹಂತದಲ್ಲಿದ್ದು, ಹಿಂದಿಯ ಖ್ಯಾತ ನಟರಿರುವ ಬಿಗ್ ಬಜೆಟ್ ಚಿತ್ರ ಅದಾಗಲಿದೆ. ಆದರೆ ಅದನ್ನು ಕಮರ್ಶಿಯಲ್ ಉದ್ದೇಶಕ್ಕಾಗಿ ಮಾಡುತ್ತಿಲ್ಲ. ನೀವು ಹೇಳಿದಂತೆ ಇಂತಹ ಕತೆ ಹಾಗೂ ಸಂದೇಶವನ್ನು ಹಿಂದಿ ಭಾಷೆಯ ಮೂಲಕ ದೊಡ್ಡ ವಲಯಕ್ಕೆ ತಲುಪಿಸುವುದು ನನ್ನ ಉದ್ದೇಶ.
ವಾಭಾ : ನಿಮ್ಮ ಚಿತ್ರ ಆಸ್ಕರ್‌ಗೆ ಭಾರತದಿಂದ ಆಯ್ಕೆಯಾದರೂ ಅಂತಿಮ ಸುತ್ತಿಗೆ ನಾಮಕರಣವಾಗಲಿಲ್ಲ. ಆಸ್ಕರ್ ಸಿಕ್ಕಿದರೇ ಭಾರತೀಯ ಸಿನೆಮಾ ಶ್ರೇಷ್ಠವಾಗುತ್ತವೆಯೇ ಅಥವಾ ತಮ್ಮ ಪಾಡಿಗೆ ಭಾರತೀಯರನ್ನೇ ದೃಷ್ಟಿಯಲ್ಲಿಟ್ಟುಕೊಂಡು ನಾವು ಸಿನೆಮಾ ಮಾಡಿದರೆ ಸಾಕೆ ?
ಸಲೀಂ : ಎಎಂಎ ಭಾರತದಲ್ಲಿ ಆಸ್ಕರ್‌ಗೆ ಆಯ್ಕೆಯಾಗಿದ್ದೇ ಸೆಪ್ಟಂಬರ್ ತಿಂಗಳಲ್ಲಿ. ಅದರ ನಂತರ ಚಿತ್ರದ ಪ್ರಚಾರಕ್ಕೆ ನಮಗೆ ಸಿಕ್ಕಿದ್ದು ಕೇವಲ ಎರಡು ತಿಂಗಳು. ಮತ್ತು ನಾವು ಅಲ್ಲಿ ಪ್ರಚಾರಕ್ಕಾಗಿ ಇಟ್ಟ ಬಜೆಟ್ ಕೇವಲ 50ಲಕ್ಷ ರೂಪಾಯಿ. ಅದು ಏನೇನು ಸಾಲದು. ಇನ್ನು ಭಾರತೀಯ ಚಿತ್ರಗಳು ಹಿಂದೆ ಬೀಳುವುದು ಅವುಗಳ ತಾಂತ್ರಿಕ ಗುಣಮಟ್ಟದ ಕೊರತೆಯಿಂದ. ಈಗ ನಿಧಾನವಾಗಿ ಈ ಎರಡೂ ವಿಭಾಗಗಳಲ್ಲಿ ನಾವು ಸಾಕಷ್ಟು ಬೆಳೆದಿದ್ದೇವೆ. ನನ್ನ ಪ್ರಕಾರ ಬಹಳ ಬೇಗ ಭಾರತೀಯ ಸಿನೆಮಾಗಳಿಗೂ ಆಸ್ಕರ್ ಪ್ರಶಸ್ತಿ ಸಿಗುತ್ತವೆ.
ವಾಭಾ: ಮಲಯಾಳಂನಲ್ಲಿ ಕತೆ ಕೇಂದ್ರಿತ, ಸಮಾಜಕ್ಕೆ ಏನಾದರೊಂದು ಸಂದೇಶ ನೀಡುವ ಚಿತ್ರಗಳು ಬೇರೆ ಭಾಷೆಗೆ ಹೋಲಿಸಿದರೆ ಹೆಚ್ಚು ಬರುತ್ತವೆ. ಆದರೆ ಒಟ್ಟಾರೆಯಾಗಿ ಭಾರತೀಯ ಚಿತ್ರರಂಗ ಅದರಲ್ಲೂ ಬಾಲಿವುಡ್ ಇಂದು ಬಹುತೇಕ ಸ್ಟಾರ್ ಕೇಂದ್ರಿತವಾಗಿಬಿಟ್ಟಿದೆ. ಹೀಗಾಗಲು ನಿಮ್ಮ ಪ್ರಕಾರ ಏನು ಕಾರಣ ?
ಸಲೀಂ: ನೋಡಿ, ಸಿನೆಮಾ ಎಂಬುದು ಅದರ ನಿರ್ದೇಶಕರ ಕಲ್ಪನೆಯ ಕೂಸು. ಅದು ಆ ನಿರ್ದೇಶಕನ ಕನಸು, ಆತನ ಅಭಿರುಚಿಗೆ ಹಿಡಿದ ಕನ್ನಡಿ. ಎಎಂಎ ಸಂಪೂರ್ಣವಾಗಿ ನನ್ನ ಚಿತ್ರ. ನನಗೆ ಹೇಳಲೇಬೇಕೆಂದು ಕಂಡ ಕತೆ ಅದು.ನನ್ನ ನಂತರವೂ ನನ್ನನ್ನು ನನ್ನ ಸಿನೆಮಾಕ್ಕಾಗಿ ಜನರು ನೆನಪಿಡಬೇಕು ಎಂಬುದು ನನಗಿದ್ದ ಉದ್ದೇಶ. ಕೆಲವು ನಿರ್ದೇಶಕರಿಗೆ ಮಾರುಕಟ್ಟೆಗೆ ಬೇಕಾದಂತೆ ಸಿನೆಮಾ ಮಾಡುವ, ನಿರ್ಮಾಪಕರಿಗೆ ಬೇಕಾದ ಸಿನೆಮಾ ಮಾಡುವ ಉದ್ದೇಶವಿರುತ್ತದೆ. ಆಗ ಇಂತಹ ಕತೆಯಿಲ್ಲದ ಸಿನೆಮಾಗಳು ಬರುತ್ತವೆ. ಆದರೆ ಅದಕ್ಕಾಗಿ ಪ್ರೇಕ್ಷಕರನ್ನು ದೂರುವುದನ್ನು ನಾನು ಒಪ್ಪುವುದಿಲ್ಲ. ಪ್ರೇಕ್ಷಕರು ಕೇವಲ ಮಸಾಲ ಚಿತ್ರಗಳನ್ನೇ ವೀಕ್ಷಿಸುತ್ತಾರೆ ಎಂದು ನಾವು ಮೊದಲೇ ನಿರ್ಧರಿಸಿ ಚಿತ್ರ ಮಾಡುವುದು ಸರಿಯಲ್ಲ. ಉತ್ತಮ ಕತೆ, ಚಿತ್ರಕತೆಯಿದ್ದರೆ ಆ ಸಿನೆಮಾಗೆ ಮಸಾಲೆಯ ಅನಿವಾರ್ಯತೆ ಇಲ್ಲ ಎಂಬುದನ್ನು ಎಎಂಎ ಸಾಬೀತು ಮಾಡಿದೆ.
ವಾಭಾ: ಬಾಲಿವುಡ್‌ನ ಹೆಚ್ಚಿನ ಸೂಪರ್ ಹಿಟ್ ಚಿತ್ರಗಳಲ್ಲಿ ಅತ್ಯಂತ ತೆಳುವಾದ ಕಥಾಹಂದರವಿರುತ್ತದೆ. ಅಲ್ಲೇನಿದ್ದರೂ ಸ್ಟಾರ್‌ಗಳ ಹೆಸರಲ್ಲೇ ಸಿನೆಮಾ ನಡೆಯುತ್ತದೆ. ಸಿನೆಮಾ ಹಿಟ್ ಆಗಲು ಇದೊಂದೇ ದಾರಿಯೇ ?
ಸಲೀಂ: ಹಾಗೆ ಇಲ್ಲ. ಅದನ್ನು ನಾವೇ ಮಾಡಿಕೊಂಡಿದ್ದೇವೆ. ಈಗ ಸೂಪರ್‌ಹಿಟ್ ಆಗಿ ಓಡುತ್ತಿರುವ ನನ್ನ ಮೂರನೆ ಚಿತ್ರ ಪತ್ತೆ ಮಾರಿ ಸಂಪೂರ್ಣವಾಗಿ ಕತೆ ಕೇಂದ್ರಿತ ಚಿತ್ರ. 1960ರ ದಶಕದಲ್ಲಿ ಸರಕು ಸಾಗಿಸುವ ಮೋಟರ್ ಇಲ್ಲದ ಪುಟ್ಟ ಹಡಗುಗಳ ಮೂಲಕ ಜೀವ ಪಣಕ್ಕಿಟ್ಟುಗಲ್‌ಗೆ ಹೋದವರ ಸಾಹಸದ ಕುರಿತ ಚಿತ್ರವದು. ಆಗ ಗಲ್ ಈಗಿನಂತಿರಲಿಲ್ಲ. ಹೋಗಲು ಈ ಪುಟ್ಟ ಹಡಗುಗಳೇ ಗತಿ. ಅದರಲ್ಲೂ ಇಲ್ಲಿಂದ ಹೊರಟರೆ ದುಬೈ ಕಡಲ ಕಿನಾರೆಗಿಂತ ಬಹಳ ಮೊದಲೇ ಖೊರ್ಖಾನ್ ಎಂಬಲ್ಲಿ ಒಂದು ಬೃಹತ್ ಬಂಡೆಗಲ್ಲು ಕಾಣುತ್ತದೆ. ಅಲ್ಲಿಂದ ಮುಂದೆ ಹಡಗು ಹೋಗುವುದಿಲ್ಲ. ಅಲ್ಲಿ ನೀರಿಗೆ ಹಾರಿ ಈಜಿಕೊಂಡು ಹೋಗಿ ದಡ (ದುಬೈ) ಸೇರಬೇಕು. ಈ ಪ್ರಯಾಣದಲ್ಲಿ ಹಡಗಿನಲ್ಲೇ ಎಷ್ಟೋ ಮಂದಿ ಹಸಿವಿನಿಂದ, ಅನಾರೋಗ್ಯದಿಂದಾಗಿ ಸಾಯುತ್ತಾರೆ. ಅಂತಹವರ ಮೃತದೇಹವನ್ನು ಮರದ ಹಲಗೆ ಹಾಗೂ ಕಲ್ಲಿನ ತುಂಡು ಕಟ್ಟಿ ಕಡಲಿಗೆ ಹಾಕುತ್ತಾರೆ. ಇನ್ನು ಕೆಲವರು ಈಜಿ ದಡ ಸೇರುವ ದಾರಿಯಲ್ಲಿ ಸಾಯುತ್ತಾರೆ. ಹೀಗೆ ಯಾವುದೇ ಉದ್ಯೋಗದ ಖಾತರಿಯೂ ಇಲ್ಲದೆ, ಕನಿಷ್ಠ ಜೀವ ಉಳಿಯುವ ಗ್ಯಾರಂಟಿಯೂ ಇಲ್ಲದೆ ನೀವು ಯಾಕೆ ಹೋಗುತ್ತೀದ್ದಿರಿ ಎಂದು ಈ ರೀತಿ ಹೋದ ಸುಮಾರು 30 ಮಂದಿಯನ್ನು ನಾನು ಸಂದರ್ಶನ ಮಾಡಿ ಪ್ರಶ್ನಿಸಿದ್ದೆ. ಎಲ್ಲರದ್ದೂ ಒಂದೇ ಉತ್ತರ - ಇಲ್ಲಿನ ಬಡತನ, ಮನೆ ನಡೆಸುವ ಅನಿವಾರ್ಯತೆ. ಅದು ಸಿನೆಮಾ ಮಾಡಲೇಬೇಕಾದ ಕತೆ ಎಂದು ನಾನು ನಿರ್ಧರಿಸಿದೆ. ಯಾರೂ ಹಣ ಹಾಕಲು ಮುಂದೆ ಬರಲಿಲ್ಲ. ಈ ಹಿಂದಿನ ಎರಡು ಚಿತ್ರಗಳಂತೆ ಇದಕ್ಕೂ ನಾನೇ ನಿರ್ಮಾಪಕನಾದೆ. ಈಗ ಅದು ಮಲಯಾಳಂನ ಅತ್ಯಂತ ಯಶಸ್ವೀ ಚಿತ್ರವಾಗಿ ಶತದಿನದತ್ತ ಮುನ್ನುಗ್ಗುತ್ತಿದೆ. ಅಮೆರಿಕಾ, ಇಂಗ್ಲೆಂಡ್, ಕೆನಡಾ, ಐರ್ಲೆಂಡ್‌ಗಳ ಹಾಲಿವುಡ್ ಬಾಕ್ಸಾಫೀಸ್‌ನಲ್ಲಿ ಈ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮಮ್ಮುಟ್ಟಿಯವರ ಸಾರ್ವಕಾಲಿಕ ಹಿಟ್ ಚಿತ್ರಗಳಲ್ಲಿ ಅದು ಒಂದಾಗುವುದು ಖಚಿತ. ಇದನ್ನೆಲ್ಲಾ ಯಾಕೆ ಹೇಳಿದೆ ಎಂದರೆ, ನಾವು ಒಳ್ಳೆಯ ಕತೆ ಇಟ್ಟುಕೊಂಡು ಸಿನೆಮಾ ಮಾಡಿದರೆ ಜನ ಖಂಡಿತ ನೋಡಿ ಅದನ್ನು ಗೆಲ್ಲಿಸುತ್ತಾರೆ. ನಾವು ಕೆಟ್ಟ ಚಿತ್ರ ಮಾಡಿ ಜನರ ಮೇಲೆ ಆರೋಪ ಹಾಕಬಾರದು.
ವಾಭಾ: ನೀವು ಹಿಟ್ ಚಿತ್ರಗಳನ್ನು ನೀಡಿದ ಯಶಸ್ವೀ ನಿರ್ದೇಶಕ. ಈಗ ನಿರ್ಮಾಪಕರು ಬಂದು ಹೇಳಿದರೆ ಮಸಾಲೆ ಚಿತ್ರಗಳನ್ನು ಮಾಡುತ್ತೀರಾ ?
ಸಲೀಂ: ಖಂಡಿತ ಇಲ್ಲ. ನನಗೆ ಹಾಗೆ ಚಿತ್ರ ನಿರ್ದೇಶಿಸಲೇ ಬೇಕೆಂಬ ಅನಿವಾರ್ಯತೆ ಇಲ್ಲ. ನನಗೊಂದು ಕತೆಯನ್ನು ಹೇಳಲೇಬೇಕೆನಿಸಿದರೆ ಮಾತ್ರ ನಾನು ಚಿತ್ರ ಮಾಡುತ್ತೇನೆ. ಅದಕ್ಕೆ ನಿರ್ಮಾಪಕರು ಸಿಕ್ಕಿದರೆ ಸಂತೋಷ. ಇಲ್ಲದಿದ್ದರೆ ನಾನೇ ನಿರ್ಮಾಪಕನಾಗುತ್ತೇನೆ. ನನಗಾಗಿ ನಾನು ಚಿತ್ರ ಮಾಡುತ್ತೇನೆಯೇ ಹೊರತು ನಿರ್ಮಾಪಕರಿಗಾಗಿ ಅಲ್ಲ. ನನ್ನ ಪ್ರಕಾರ ಸಿನೆಮಾ ಹಿಟ್ ಆಗಲು ಇಷ್ಟು ಹಾಡು, ಇಷ್ಟು ೈಟು, ಒಂದು ಟ್ವಿಸ್ಟು ಇತ್ಯಾದಿ ಗಳಿರಬೇಕೆಂಬ ಸಿದ್ಧ ಾರ್ಮುಲ ಎಂಬುದು ಇಲ್ಲವೇ ಇಲ್ಲ. ಚಿತ್ರದ ಕತೆ, ನಿರೂಪಣೆ ಚೆನ್ನಾಗಿದ್ದರೆ ಅದು ಗೆದ್ದೇ ಗೆಲ್ಲುತ್ತದೆ. ಎಎಂಎ ಬಂದಾಗ ಸಾಮಾನ್ಯವಾಗಿ ಸಿನೆಮಾ ನೋಡಲು ಹಿಂಜರಿಯುವ ಮುಸ್ಲಿಮರೂ ದೊಡ್ಡ ಸಂಖ್ಯೆಯಲ್ಲಿ ಅದನ್ನು ನೋಡಿದರು. ಕೇರಳದ ಕೆಲವು ಮಸೀದಿಯ ಜುಮಾ ಖುತ್ಬಾ (ಶುಕ್ರವಾರದ ಪ್ರವಚನ) ಗಳಲ್ಲಿ ಹಜ್‌ಗೆ ಹೋಗುವವರು ಈ ಸಿನೆಮಾ ನೋಡಿರಿ ಎಂದು ವೌಲ್ವಿಗಳು ಹೇಳಿದರು. ಧಾರ್ಮಿಕ ವಿದ್ವಾಂಸರೊಬ್ಬರು ‘ನಮ್ಮ ಹತ್ತಿಪ್ಪತ್ತು ಪ್ರವಚನಗಳಿಗಿಂತ ಪರಿಣಾಮಕಾರಿಯಾಗಿ ನಿಮ್ಮ ಸಿನೆಮಾ ಹಜ್‌ನ ಹಿಂದಿರುವ ಜೀವನ ವೌಲ್ಯಗಳನ್ನು ತಿಳಿಸಿಕೊಟ್ಟಿದೆ’ ಎಂದು ನನ್ನೊಂದಿಗೆ ಹೇಳಿದ್ದರು. ಹಜ್ ಕಮಿಟಿಗಳು ಹಜ್ ಯಾತ್ರೆಗೆ ಹೋಗುವವರಿಗೆ ಆ ಸಿನೆಮಾವನ್ನು ತೋರಿಸುತ್ತಿದ್ದವು. ಇದು ಕತೆ ಕೇಂದ್ರಿತ ಚಿತ್ರಗಳ ಹೆಗ್ಗಳಿಕೆ. ಅದನ್ನು ಬಿಟ್ಟುಕೊಡಲು ನಾನು ತಯಾರಿಲ್ಲ. ಈ ರಂಗಕ್ಕೆ ಬರುವ ಹೊಸಬರಿಗೂ ನಾನು ಇದನ್ನೇ ಹೇಳುತ್ತೇನೆ.







