ರೋಬೋಟ್ ೨ ಗೆ ಕಿಲಾಡಿ ಅಕ್ಷಯ್ ವಿಲನ್ !
ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷಿತ ರೋಬೋಟ್ ೨ ಚಿತ್ರ ಸದ್ದಿಲ್ಲದೇ ಶೂಟಿಂಗ್ ಪ್ರಾರಂಭಿಸಿದೆ. ಚಿತ್ರದ ನಿರ್ಮಾಣ ಮಾಡುತ್ತಿರುವ ಲೈಕ ಪ್ರೊಡಕ್ಷನ್ಸ್ ಅದ್ದೊರಿಯಾಗಿ ಶೂಟಿಂಗ್ ಗೆ ಚಾಲನೆ ನೀಡಲು ಯೋಜನೆ ಹಾಕಿತ್ತು . ಆದರೆ ಚೆನ್ನೈ ಮಳೆಗೆ ನಲುಗಿ ಹೋಗಿರುವುದರಿಂದ ಸರಳವಾಗಿ ಶೂಟಿಂಗ್ ಗೆ ಚಾಲನೆ ನೀಡಲಾಗಿದೆ.

ಈ ಬಾರಿಯ ವಿಶೇಷವೆಂದರೆ ರಜನಿ ಎದುರು ವಿಲನ್ ಆಗಿ ಬರುತ್ತಿರುವವರು ಬಾಲಿವುಡ್ ನ ಸೂಪರ್ ಸ್ಟಾರ್ , ಕಿಲಾಡಿ ನಂಬರ್ ಒನ್ ಅಕ್ಷಯ್ ಕುಮಾರ್ ! ಹೌದು . ಅಕ್ಷಯ್ ಕುಮಾರ್ ಅವರೇ ಟ್ವಿಟ್ಟರ್ ನಲ್ಲಿ ಈ ಸುದ್ದಿಯನ್ನು ಖಚಿತ ಪಡಿಸಿದ್ದಾರೆ .
ಮೊದಲು ಈ ಪಾತ್ರಕ್ಕೆ ಹಾಲಿವುಡ್ ನ ಅರ್ನಾಲ್ಡ್ ಶ್ವಾಸ್ನೇಗರ್ ಬರಲಿದ್ದಾರೆ ಎಂಬ ವದಂತಿಯಿತ್ತು . ಅವರೂ ನಿರ್ದೇಶಕ ಶಂಕರ್ ಅವರ ಐ ಚಿತ್ರದ ಆಡಿಯೋ ಬಿಡುಗಡೆಗೆ ಅತಿಥಿಯಾಗಿ ಬಂದಾಗ ನನಗ ಶಂಕರ್ ಜೊತೆ ಕೆಲಸ ಮಾಡುವ ಹಂಬಲ ಇದೆ ಎಂದು ಹೇಳಿದ್ದರು.
ಆದರೆ ಇದೀಗ ಬಾಲಿವುಡ್ ನ ಅರ್ನಾಲ್ಡ್ , ಅಕ್ಷಯ್ ವಿಲನ್ ಆಗಿ ಬರಲಿದ್ದಾರೆ. ಇದು ರಜನಿ ಹಾಗು ಅಕ್ಷಯ್ ಅಭಿಮಾನಿಗಳಿಗೆ ಅತ್ಯಂತ ಸಂತಸದ ಸುದ್ದಿ . ಇನ್ನು ಚಿತ್ರದ ನಾಯಕಿ ಅಮಿ ಜಾಕ್ಸನ್ ಕೂಡ ರೋಬೋಟ್ ಆಗಿ ವೀಕ್ಷಕರ ಮನಸೂರೆಗೊಳ್ಳ ಲಿದ್ದಾರೆ. ಎ ಆರ್ ರಹ್ಮಾನ್ ಸಂಗೀತ ನೀಡಲಿದ್ದು ಮೇಕಪ್ ಸಹಿತ ವಿವಿಧ ತಾಂತ್ರಿಕ ವಿಭಾಗಗಳಿಗೆ ಅಂತಾರಾಷ್ಟ್ರೀಯ ತಜ್ಞರು ಶಂಕರ್ ಜೊತೆ ಕೈ ಜೋಡಿಸಲಿದ್ದಾರೆ .
Ending the year on a high note! Super excited to be a part of Robot 2 with the one & only @superstarrajini sir! pic.twitter.com/mC7AINo3JR
— Akshay Kumar (@akshaykumar) December 16, 2015 